ನಾನು ಹೇಳಿದ್ದೇ ಒಂದು, ಇಲ್ಲಿ ಆಗ್ತಿರೋದೇ ಇನ್ನೊಂದು! ಮಾಜಿ ಪ್ರಿಯಕರ ವರುಣ್‌ ಆರಾಧ್ಯ ಬಗ್ಗೆ ಸ್ಪಷ್ಟನೆ ನೀಡಿದ ವರ್ಷಾ ಕಾವೇರಿ
ಕನ್ನಡ ಸುದ್ದಿ  /  ಮನರಂಜನೆ  /  ನಾನು ಹೇಳಿದ್ದೇ ಒಂದು, ಇಲ್ಲಿ ಆಗ್ತಿರೋದೇ ಇನ್ನೊಂದು! ಮಾಜಿ ಪ್ರಿಯಕರ ವರುಣ್‌ ಆರಾಧ್ಯ ಬಗ್ಗೆ ಸ್ಪಷ್ಟನೆ ನೀಡಿದ ವರ್ಷಾ ಕಾವೇರಿ

ನಾನು ಹೇಳಿದ್ದೇ ಒಂದು, ಇಲ್ಲಿ ಆಗ್ತಿರೋದೇ ಇನ್ನೊಂದು! ಮಾಜಿ ಪ್ರಿಯಕರ ವರುಣ್‌ ಆರಾಧ್ಯ ಬಗ್ಗೆ ಸ್ಪಷ್ಟನೆ ನೀಡಿದ ವರ್ಷಾ ಕಾವೇರಿ

ಮಾಜಿ ಪ್ರೇಮಿಗಳಾದ ವರುಣ್‌ ಆರಾಧ್ಯ ಮತ್ತು ವರ್ಷಾ ಕಾವೇರಿ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಖಾಸಗಿ ಫೋಟೋ ಇಟ್ಟುಕೊಂಡು ಬೆದರಿಸುತ್ತಿದ್ದಾನೆ ಎಂಬ ದೂರಿನ ಬಳಿಕ ಇದೀಗ ವರ್ಷಾ ಉಲ್ಟಾ ಹೊಡೆದಿದ್ದಾರೆ. ಈ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ.

ಮಾಜಿ ಪ್ರಿಯಕರ ವರುಣ್‌ ಆರಾಧ್ಯ ಬಗ್ಗೆ ಸ್ಪಷ್ಟನೆ ನೀಡಿದ ವರ್ಷಾ ಕಾವೇರಿ
ಮಾಜಿ ಪ್ರಿಯಕರ ವರುಣ್‌ ಆರಾಧ್ಯ ಬಗ್ಗೆ ಸ್ಪಷ್ಟನೆ ನೀಡಿದ ವರ್ಷಾ ಕಾವೇರಿ (Instagram\ Varsha Kaveri)

Varsha Kaveri on Varun Aradya: ಸೋಷಿಯಲ್‌ ಮೀಡಿಯಾದಲ್ಲಿ ರೀಲ್ಸ್‌ ಮೂಲಕವೇ ಫೇಮಸ್‌ ಆಗಿ, ಲಕ್ಷಾಂತರ ಫಾಲೋವರ್ಸ್‌ ಸಂಪಾದಿಸಿ ಇದೀಗ ಬಣ್ಣದ ಕ್ಷೇತ್ರಕ್ಕೂ ಕಾಲಿರಿಸಿದ್ದರು ವರುಣ್‌ ಆರಾಧ್ಯ. ಕಲರ್ಸ್‌ ಕನ್ನಡದ ಬೃಂದಾವನ ಸೀರಿಯಲ್‌ ಮೂಲಕ ಕಿರುತೆರೆಗೆ ಕಾಲಿಟ್ಟಿದ್ದ ನಟ ವರುಣ್‌ ವಿರುದ್ಧ ಇದೀಗ ಗಂಭೀರ ಆರೋಪವೊಂದು ಕೇಳಿಬಂದಿದೆ. ಮಾಜಿ ಪ್ರೇಯಸಿ ವರ್ಷಾ ಕಾವೇರಿ ಅವರಿಗೆ ಬ್ಲಾಕ್‌ ಮೇಲ್‌ ಮಾಡುತ್ತಿದ್ದಾರೆ ಎಂದು ವರದಿಯಾಗಿತ್ತು. ಇದೀಗ ಈ ವಿಚಾರದ ಬಗ್ಗೆ ವರ್ಷಾ ಕಾವೇರಿ ಸ್ಪಷ್ಟನೆ ನೀಡಿದ್ದಾರೆ.‌

ವರುಣ್‌ ಆರಾಧ್ಯ ವಿರುದ್ಧ ಬೆಂಗಳೂರಿನ ಬಸವೇಶ್ವರ ಸೆನ್ ಪೊಲೀಸ್ ಠಾಣೆಯಲ್ಲಿ ವರ್ಷಾ ಕಾವೇರಿ ದೂರು ದಾಖಲಿಸಿದ್ದಾರೆ ಎಂದು ವರದಿಯಾಗಿತ್ತು. ಖಾಸಗಿ ಫೋಟೋ ಮತ್ತು ವಿಡಿಯೋಗಳನ್ನಿಟ್ಟುಕೊಂಡು ಬ್ಲಾಕ್‌ ಮೇಲ್‌ ಮಾಡೋದಾಗಿ ಹೆದರಿಸಿದ್ದಾರೆ ಎಂದು ವರುಣ್‌ ಆರಾಧ್ಯ ವಿರುದ್ಧ ವರ್ಷಾ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದರು. ಖಾಸಗಿ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹರಿ ಬಿಡೋದಾಗಿ ವರುಣ್‌ ಬೆದರಿಸಿದ್ದಾರೆ ಎಂದು ದೂರಿನಲ್ಲಿತ್ತು.

ವರ್ಷಾ ಕಾವೇರಿ ಜತೆಗೆ ವರುಣ್ ಆರಾಧ್ಯ ಕೆಲ ವರ್ಷ ಪ್ರೀತಿಯಲ್ಲಿದ್ದರು. ಅದಾದ ಬಳಿಕ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿತ್ತು. ಹೀಗಿರುವಾಗಲೇ ವರುಣ್‌ ಆರಾಧ್ಯ, ಇನ್ನೊಬ್ಬ ಯುವತಿಯ ಜತೆಗೆ ಅಫೇರ್‌ ಹೊಂದಿದ್ದರು ಎಂದೂ ದೂರಿನಲ್ಲಿತ್ತು. ಅದನ್ನು ಪ್ರಶ್ನೆ ಮಾಡಿದ್ದಕ್ಕೆ, ನಿಶ್ಚಿತಾರ್ಥವಾದ ವರ್ಷಾ ಕಾವೇರಿಯ ಕೆಲ ಖಾಸಗಿ ಫೋಟೋಗಳನ್ನಿಟ್ಟುಕೊಂಡು ವರುಣ್‌ ಹೆದರಿಸಿದ್ದ. ಇಲ್ಲಿದಿದ್ದರೆ ಆ ಫೋಟೋಗಳನ್ನು ಜಾಲತಾಣದಲ್ಲಿ ಪೋಸ್ಟ್‌ ಮಾಡುವುದಾಗಿ ಬೆದರಿಸಿದ್ದ. ಬೇರೆ ಯಾರನ್ನಾದರೂ ಮದುವೆ ಆದರೆ, ಅವರನ್ನು ಸಾಯಿಸಿ, ನಿನ್ನನ್ನು ಸಾಯಿಸುವೆ ಎಂದಿದ್ದ. ಇದೀಗ ಈ ಬಗ್ಗೆ ವರ್ಷಾ ಕಾವೇರಿ ಸ್ಪಷ್ಟನೆ ನೀಡಿದ್ದಾರೆ.

ವರ್ಷಾ ಪೋಸ್ಟ್‌ನಲ್ಲಿ ಏನಿದೆ?

ಈ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಂಡಿರುವ ವರ್ಷಾ ಕಾವೇರಿ, ಸಾಮಾಜಿಕ ಜಾಲತಾಣದಲ್ಲಿ ನೀವು ನೋಡುತ್ತಿರುವುದು ಸುಳ್ಳು ಸುದ್ದಿಯಾಗಿದೆ. ಇದು ಇನ್‌ಸ್ಟಾಗ್ರಾಂ ಫ್ರೊಫೈಲ್‌ ಮತ್ತು ಇತರ ಸಾಮಾಜಿಕ ಮಾಧಯಮ ಫ್ಲಾಟ್‌ಫಾರ್ಮ್‌ಗಳಿಂದ ಎಲ್ಲ ರೀಲ್‌ಗಳನ್ನು ತೆಗೆದುಹಾಕುವುದರ ಕುರಿತು. ನಕಲಿ ಸುದ್ದಿಗಳನ್ನು ಹರಡುವುದನ್ನು ನಿಲ್ಲಿಸಿ" ಎಂದು ಪೋಸ್ಟ್‌ ಹಂಚಿಕೊಂಡಿದ್ದಾರೆ ವರ್ಷಾ ಕಾವೇರಿ.

ಮುಂದುವರಿದು ಇನ್ನೊಂದು ಸ್ಟೋರಿ ಹಾಕಿದ ವರ್ಷಾ, "ಹರಿದಾಡುತ್ತಿರುವ ನ್ಯೂಸ್ ನೋಡಿಕೊಂಡು ಯಾರೆಲ್ಲ ಕಾಮೆಂಟ್ ಮಾಡುತ್ತಿದ್ದೀರಿ, ದಯವಿಟ್ಟು ಮುಂದಿನ ಮೂರು ದಿನ ಕಾಯಿರಿ. ಕ್ಲಾರಿಟಿ ಕೊಡಲು ನಾನು ನಿಮ್ಮ ಮುಂದೆ ಬರುತ್ತೀನಿ" ಎಂದಿದ್ದಾರೆ.

Whats_app_banner