ಅಣ್ಣಯ್ಯ ಧಾರಾವಾಹಿ: ಮುತ್ತಿನ ಮತ್ತೇ ಗಮತ್ತು, ಪಾರ್ವತಿ ಮುದ್ದಾದ ಕೆನ್ನೆಗೆ ಬಿತ್ತು, ಶಿವು ಮಾವನ ಪ್ರೀತಿಯ ಸಿಹಿ ಮುತ್ತು
ಕನ್ನಡ ಸುದ್ದಿ  /  ಮನರಂಜನೆ  /  ಅಣ್ಣಯ್ಯ ಧಾರಾವಾಹಿ: ಮುತ್ತಿನ ಮತ್ತೇ ಗಮತ್ತು, ಪಾರ್ವತಿ ಮುದ್ದಾದ ಕೆನ್ನೆಗೆ ಬಿತ್ತು, ಶಿವು ಮಾವನ ಪ್ರೀತಿಯ ಸಿಹಿ ಮುತ್ತು

ಅಣ್ಣಯ್ಯ ಧಾರಾವಾಹಿ: ಮುತ್ತಿನ ಮತ್ತೇ ಗಮತ್ತು, ಪಾರ್ವತಿ ಮುದ್ದಾದ ಕೆನ್ನೆಗೆ ಬಿತ್ತು, ಶಿವು ಮಾವನ ಪ್ರೀತಿಯ ಸಿಹಿ ಮುತ್ತು

Annayya Serial: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಧಾರಾವಾಹಿ 176ನೇ ಎಪಿಸೋಡ್‌ನಲ್ಲಿ ದೇವಸ್ಥಾನದಲ್ಲಿ ಶಿವು-ಪಾರ್ವತಿ ಪಾದ ತೊಳೆಯುವಂತೆ ಮಾಡಿದ ಚಿಕ್ಕ ಹೆಂಡತಿ ಸುಶೀಲಾ ಮೇಲೆ ವೀರಭದ್ರ ಸಿಟ್ಟಾಗುತ್ತಾನೆ. ಇತ್ತ ಶಿವು ತನ್ನ ಪ್ರೀತಿಯ ಹೆಂಡತಿ ಪಾರುಗೆ ಮುತ್ತು ಕೊಡುತ್ತಾನೆ.

ಅಣ್ಣಯ್ಯ ಧಾರಾವಾಹಿ
ಅಣ್ಣಯ್ಯ ಧಾರಾವಾಹಿ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಧಾರಾವಾಹಿ ಸೋಮವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 176ನೇ ಎಪಿಸೋಡ್‌ ಕಥೆ ಹೀಗಿದೆ. ಊರಿನ ದಣಿಗಳು ದಂಪತಿ ಸಹಿತ ಬೇರೆ ದಂಪತಿ ಪಾದ ತೊಳೆದರೆ ಅವರಿಗೆ ಶ್ರೇಯಸ್ಸು ಎಂದು ಹೇಳಿದ್ದರಿಂದ ವೀರಭದ್ರ ಒಲ್ಲದ ಮನಸ್ಸಿನಿಂದ ಸುಶೀಲಾ ಜೊತೆ ಶಿವು-ಪಾರ್ವತಿ ಪಾದ ತೊಳೆಯುತ್ತಾನೆ. ಅಪ್ಪ, ಅಮ್ಮ ತನ್ನ ಪಾದ ಮುಟ್ಟಿದ್ದಕ್ಕೆ ಬೇಸರಗೊಳ್ಳುವ ಪಾರ್ವತಿ ಅವರಿಗೆ ನಮಸ್ಕರಿಸಿ ಕ್ಷಮೆ ಕೇಳುತ್ತಾಳೆ. ಅಪ್ಪನ ಕಿವಿ ಬಳಿ ಬಂದು, ಅರ್ಚಕರು ಹೇಳಿದ ಆ ರಾಕ್ಷಸ ನೀನು, ನಾನು ದೇವಿ ರೂಪದಲ್ಲಿ ಬಂದು ನಿನ್ನ ಅಹಂಕಾರವನ್ನು ಸಂಹರಿಸುವ ಪರಿಸ್ಥಿತಿ ತಂದುಕೊಳ್ಳಬೇಡ ಎನ್ನುತ್ತಾಳೆ.

ಹೆಂಡತಿ ಸುಶೀಲಾ ಮೇಲೆ ಸಿಟ್ಟು ತೋರಿದ ವೀರಭದ್ರ

ವೀರಭದ್ರ ಕೋಪದಿಂದಲೇ ಮನೆಗೆ ಬರುತ್ತಾನೆ. ಊರಿನ ದಣಿಯಾದ ನಾನು ಆ ಶಿವು-ಪಾರ್ವತಿ ಪಾದ ತೊಳೆದು ಚಿಕ್ಕವನಾಗಿಬಿಟ್ಟೆ, ಆ ಸುಶೀಲಾಳಿಂದ ನನಗೆ ಇಂದು ಅವಮಾನವಾಯ್ತು ಅವಳು ಇಂದು ಮನೆಗೆ ಬರಲಿ ಎಂದು ಸಿಡಿಮಿಡಿಕೊಳ್ಳುತ್ತಾನೆ. ಸುಶೀಲಾ ಮನೆಗೆ ಬರುತ್ತಿದ್ದಂತೆ ಅವಳನ್ನು ಹೊಡೆಯಲು ಪ್ರಯತ್ನಿಸುತ್ತಾನೆ. ಆಗ ಪರಶು ಅಪ್ಪನನ್ನು ತಡೆಯುತ್ತಾನೆ. ಬಿಡು ಅವಳನ್ನು ಸಾಯಿಸಿಬಿಡುತ್ತೇನೆ ಎಂದು ವೀರಭದ್ರ ಅರಚಾಡುತ್ತಾನೆ. ಸುಶೀಲಾ ಕೂಡಾ ಕೋಪಗೊಂಡು ಸಾಯಿಸಿ ಎಂದು ಮುಂದೆ ಬರುತ್ತಾಳೆ. ಆಗ ವೀರಭದ್ರ ಕೋವಿ ತಂದು ಸುಶೀಲಾಗೆ ಗುರಿ ಇಡುತ್ತಾನೆ. ಮತ್ತೆ ಪರಶು ಅಡ್ಡ ಬಂದು ಅಪ್ಪಯ್ಯ ಸ್ವಲ್ಪ ಶಾಂತವಾಗು ಎಂದು ಸಮಾಧಾನ ಮಾಡುತ್ತಾನೆ, ಚಿಕ್ಕಮ್ಮನನ್ನು ಒಳಗೆ ಕಳಿಸುತ್ತಾನೆ. ಎಲ್ಲರೂ ನನಗೆ ಅವಮಾನ ಮಾಡುತ್ತಿದ್ದಾರೆ. ಆದಷ್ಟು ಬೇಗ ಆ ಶಿವು-ಪಾರ್ವತಿಗೆ ದೊಡ್ಡ ಏಟು ಕೊಡುತ್ತೇನೆ ಎಂದು ಗುಡುಗುತ್ತಾನೆ.

ಇತ್ತ ಪಾರ್ವತಿ ತನ್ನ ಹೇರ್‌ ಕ್ಲಿಪ್‌ ಅಟ್ಟದ ಮೇಲೆ ಬಿದ್ದಿದ್ದರಿಂದ ಅದನ್ನು ಹುಡುಕಿಕೊಡುವಂತೆ ಶಿವುನನ್ನು ಕರೆಯುತ್ತಾಳೆ. ನೀನು ನನ್ನನ್ನು ಎತ್ತಿಕೋ ನಾನು ಕ್ಲಿಪ್‌ ತೆಗೆದುಕೊಳ್ಳುತ್ತೇನೆ ಎಂದು ಶಿವುಗೆ ಹೇಳುತ್ತಾಳೆ. ಶಿವು ನಾಚಿಕೆಯಿಂದಲೇ ಪಾರುವನ್ನು ಎತ್ತಿಕೊಳ್ಳುತ್ತಾನೆ. ಆದರೆ ಆಯ ತಪ್ಪಿ ಇಬ್ಬರೂ ಕೆಳಗೆ ಬೀಳುತ್ತಾರೆ. ಇಬ್ಬರೂ ಒಬ್ಬರನೊಬ್ಬರು ನೋಡುತ್ತಲೇ ಕಳೆದುಹೋಗುತ್ತಾರೆ. ನಾನು ಒಂದು ಹೆಣ್ಣಾಗಿ ನಾಚಿಕೆ ಬಿಟ್ಟು ಮುತ್ತು ಕೇಳುತ್ತಿದ್ದೇನೆ, ಆದರೆ ನೀನು ಗಂಡಾಗಿ ನನಗೆ ಮುತ್ತು ಕೊಡದೆ ನಾಚಿಕೊಂಡು ಸತಾಯಿಸುತ್ತಿದ್ದೀಯ ಎಂದು ಪಾರ್ವತಿ ಹೇಳುತ್ತಾಳೆ. ನನಗೆ ಸ್ವಲ್ಪ ಭಯ, ಅದನ್ನು ಹೋಗಲಾಡಿಸಿ ನನಗೆ ಧೈರ್ಯ ತುಂಬಬೇಕಿರುವವರು ನೀವೇ ಅಲ್ವಾ ಮ್ಯಾಮ್‌ ಎಂದು ಶಿವು ಹೇಳುತ್ತಾನೆ. ರಾತ್ರಿ ಪಾರುಗೆ ಬಿಕ್ಕಳಿಕೆ ಬಂದು ನಿದ್ರೆಯಿಂದ ಎಚ್ಚರವಾಗುತ್ತದೆ, ಮಗುವಂತೆ ಮಲಗಿರುವ ಮಾವನನ್ನು ನೋಡಿ ತನ್ನಷ್ಟಕ್ಕೆ ತಾನೇ ಮಾತನಾಡಿಕೊಳ್ಳುತ್ತಾಳೆ.

ಭಯ ಬಿಟ್ಟು ಹೆಂಡ್ರುಗೆ ಮುತ್ತು ಕೊಟ್ಟ ಶಿವು

ಬಿಕ್ಕಳಿಗೆ ಹೆಚ್ಚಾಗಿದ್ದರಿಂದ ನೀರು ತೆಗೆದುಕೊಳ್ಳಲು ಎಳುತ್ತಾಳೆ. ಮತ್ತೆ ಆಯ ತಪ್ಪಿ ಶಿವು ಮೇಲೆ ಬೀಳುತ್ತಾಳೆ. ಪಾರುವನ್ನು ಹತ್ತಿರದಿಂದ ನೋಡಿದ ಶಿವು ಮತ್ತೆ ಅರಚಿಕೊಳ್ಳುತ್ತಾನೆ. ರತ್ನ ಹಾಗೂ ರಾಣಿ ಗಾಬರಿಯಿಂದ ಅವರ ರೂಮ್‌ ಬಳಿ ಬರುತ್ತಾರೆ. ಏನಿಲ್ಲ ಒಂದು ಜಿರಳೆ ನೋಡಿ ಭಯಪಟ್ಟೆ ಎನ್ನುತ್ತಾನೆ. ಸರಿ ಅಣ್ಣ ಆ ಜಿರಳೆಗೆ ಮೀಸೆ ಇಲ್ಲ ಜಡೆ ಇದೆ ಅಂಥ ನಮಗೆ ಅರ್ಥ ಆಯ್ತು ಎಂದು ಹೇಳಿ ನಗುತ್ತಾ ಅಲ್ಲಿಂದ ಹೋಗುತ್ತಾರೆ. ಪಾರು ಹಾಗೂ ಶಿವು ನಾಚಿಕೊಳ್ಳುತ್ತಾರೆ. ರಾತ್ರಿ ನಿದ್ರೆಯಿಂದ ಎಚ್ಚಗೊಳ್ಳುವ ಶಿವು, ಪಾಪ ನನ್ನ ಹೆಂಡ್ರು ಪ್ರೀತಿಯಿಂದ ಮುತ್ತು ಕೇಳುತ್ತಿದ್ದಾಳೆ. ನಾನು ಏಕೆ ಇಷ್ಟು ನಾಚಿಕೊಳ್ಳುತ್ತಿದ್ದೇನೆ ಮುತ್ತು ಕೊಟ್ಟೇ ಬಿಡೋಣ, ಇನ್ನು ಸತಾಯಿಸೋದು ಬೇಡ ಎಂದು ಅವಳನ್ನು ನಿದ್ರೆಯಿಂದ ಎಬ್ಬಿಸುತ್ತಾನೆ, ನೀನು ಕೇಳಿದ್ದನ್ನು ಕೊಡುತ್ತೇನೆ ಎಂದು ಪಾರು ಕೆನ್ನೆಗೆ ಮುತ್ತು ಕೊಡುತ್ತಾನೆ. ಶಿವು ಮಾವನ ಸಿಹಿಮುತ್ತಿಗೆ ಪಾರು ನಾಚಿ ನೀರಾಗುತ್ತಾಳೆ.

ಅಣ್ಣಯ್ಯ ಧಾರಾವಾಹಿ

ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೂ ರಾತ್ರಿ 7.30ಕ್ಕೆ ಅಣ್ಯಯ್ಯ ಧಾರಾವಾಹಿ ಪ್ರಸಾರವಾಗುತ್ತಿದೆ. ಅಣ್ಣ ತಂಗಿಯರ ಬಾಂಧವ್ಯದ ಕಥೆ ಇರುವ ಧಾರಾವಾಹಿಗೆ ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಕರಿದ್ದಾರೆ. ತನ್ನ ತಂಗಿಯರಿಗಾಗಿ ಇಡೀ ಜೀವನವನ್ನೇ ಮುಡುಪಾಗಿಟ್ಟ ಮಾರಿಗುಡಿ ಶಿವು, ತಾನು ಇಷ್ಟ ಪಟ್ಟ ಪಾರುವನ್ನು ಮದುವೆಯಾಗಿದ್ಧಾನೆ, ಪಾರು ಕೂಡಾ ಅವನನ್ನು ಪ್ರೀತಿಸಲು ಆರಂಭಿಸಿದ್ದಾಳೆ. ಆದರೆ ಅವರಿಬ್ಬರನ್ನೂ ದೂರ ಮಾಡಲು ಪಾರು ತಂದೆ ವೀರಭದ್ರ ಕಾಯುತ್ತಿದ್ದಾನೆ.

ಅಣ್ಣಯ್ಯ ಧಾರಾವಾಹಿ ಪಾತ್ರವರ್ಗ

ಮಾರಿಗುಡಿ ಶಿವು - ವಿಕಾಸ್‌ ಉತ್ತಯ್ಯ

ಪಾರ್ವತಿ - ನಿಶಾ ರವಿಕೃಷ್ಣನ್‌

ವೀರಭದ್ರ - ನಾಗೇಂದ್ರ ಶಾ

ಸೌಭಾಗ್ಯ - ಮಧುಮತಿ

ಸುಶೀಲ - ಶ್ವೇತಾ

ರತ್ನ - ನಾಗಶ್ರೀ ಬೇಗಾರ್‌

ರಾಧಾ - ರಾಘವಿ

ರಶ್ಮಿ - ಪ್ರತೀಕ್ಷಾ ಶ್ರೀನಾಥ್‌

ರಮ್ಯಾ - ಅಂಕಿತಾ ಗೌಡ

ನಾಗೇಗೌಡ - ಸಂದೀಪ್ ನೀನಾಸಂ

ಪರಶು - ಚಿರಂಜೀವಿ

ಜಿಮ್‌ ಸೀನ - ಸುಷ್ಮಿತ್ ಜೈನ್

ಅಣ್ಣಯ್ಯ ಧಾರಾವಾಹಿಯ ಎಲ್ಲಾ ಎಪಿಸೋಡ್‌ಗಳ ಕಥೆ ಇಲ್ಲಿ ಲಭ್ಯವಿದೆ.

Manjunath B Kotagunasi

TwittereMail
ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.
Whats_app_banner