ಅಣ್ಣಯ್ಯ: ಪರಶು ಹೆಸರು ಕೇಳುತ್ತಿದ್ದಂತೆ ಕಣ್ಣುಬಿಟ್ಟ ಗೋಡಂಬಿ; ಅತ್ತಿಗೆ ಬಳಿ ವಿಚಾರ ಮುಚ್ಚಿಟ್ಟು ಪರಶುನತ್ತ ಆಕರ್ಷಿತಳಾಗ್ತಿದ್ದಾಳಾ ರತ್ನ?
ಕನ್ನಡ ಸುದ್ದಿ  /  ಮನರಂಜನೆ  /  ಅಣ್ಣಯ್ಯ: ಪರಶು ಹೆಸರು ಕೇಳುತ್ತಿದ್ದಂತೆ ಕಣ್ಣುಬಿಟ್ಟ ಗೋಡಂಬಿ; ಅತ್ತಿಗೆ ಬಳಿ ವಿಚಾರ ಮುಚ್ಚಿಟ್ಟು ಪರಶುನತ್ತ ಆಕರ್ಷಿತಳಾಗ್ತಿದ್ದಾಳಾ ರತ್ನ?

ಅಣ್ಣಯ್ಯ: ಪರಶು ಹೆಸರು ಕೇಳುತ್ತಿದ್ದಂತೆ ಕಣ್ಣುಬಿಟ್ಟ ಗೋಡಂಬಿ; ಅತ್ತಿಗೆ ಬಳಿ ವಿಚಾರ ಮುಚ್ಚಿಟ್ಟು ಪರಶುನತ್ತ ಆಕರ್ಷಿತಳಾಗ್ತಿದ್ದಾಳಾ ರತ್ನ?

ಜೀ ಕನ್ನಡದ ಅಣ್ಣಯ್ಯ ಧಾರಾವಾಹಿ 200ನೇ ಎಪಿಸೋಡ್‌ನಲ್ಲಿ ಪರಶು ಹೆಸರು ಹೇಳುತ್ತಿದ್ದಂತೆ ಗೋಡಂಬಿ ಕಣ್ಣು ಬಿಡುತ್ತಾನೆ.ಆದರೆ ರತ್ನ ಅವನ ವಿಚಾರವನ್ನು ಅತ್ತಿಗೆ ಬಳಿ ಹೇಳದೆ ಮುಚ್ಚಿಡುತ್ತಾಳೆ.(ಬರಹ: ರಕ್ಷಿತಾ)

ಅಣ್ಣಯ್ಯ: ಪರಶು ಹೆಸರು ಕೇಳುತ್ತಿದ್ದಂತೆ ಕಣ್ಣುಬಿಟ್ಟ ಗೋಡಂಬಿ; ಅತ್ತಿಗೆ ಬಳಿ ವಿಚಾರ ಮುಚ್ಚಿಟ್ಟು ಪರಶುನತ್ತ ಆಕರ್ಷಿತಳಾಗ್ತಿದ್ದಾಳಾ ರತ್ನ?
ಅಣ್ಣಯ್ಯ: ಪರಶು ಹೆಸರು ಕೇಳುತ್ತಿದ್ದಂತೆ ಕಣ್ಣುಬಿಟ್ಟ ಗೋಡಂಬಿ; ಅತ್ತಿಗೆ ಬಳಿ ವಿಚಾರ ಮುಚ್ಚಿಟ್ಟು ಪರಶುನತ್ತ ಆಕರ್ಷಿತಳಾಗ್ತಿದ್ದಾಳಾ ರತ್ನ?

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಧಾರಾವಾಹಿ ಶುಕ್ರವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 200ನೇ ಎಪಿಸೋಡ್‌ ಕಥೆ ಹೀಗಿದೆ. ಮಾವನ ಮನೆಯಲ್ಲಿ ಪಾರ್ವತಿ ಮೆಡಿಕಲ್‌ ಲೈಸನ್ಸ್‌ ದೊರೆಯದೆ ಶಿವು ನಿರಾಶನಾಗಿ ಮನೆಗೆ ವಾಪಸ್‌ ಆಗುತ್ತಾನೆ. ಇತ್ತ ರತ್ನ ಸ್ಕೂಲ್‌ಗೆ ಹೋಗುವಾಗ ಮಾಕಾಳವ್ವನ ಸೇವೆ ಮಾಡುವವರು ಪರಶುಗೆ ಚಾಟಿಯಿಂದ ಹೊಡೆಯುತ್ತಾರೆ. ತನ್ನ ಪಾಪಗಳಿಗೆ ಪ್ರಾಯಶ್ಚಿತ್ತವಾಗಿ ಆತ ಹರಕೆ ಕಟ್ಟಿಕೊಂಡಿದ್ದ ಅದಕ್ಕಾಗಿ ಅವನಿಗೆ ಹೊಡೆದಿದ್ದಾಗಿ ದೇವಿ ಸೇವೆ ಮಾಡುವವರು ಹೇಳುತ್ತಾರೆ. ಆ ಮಾತು ಕೇಳಿ ರತ್ನಗೆ ಆಶ್ಚರ್ಯವಾಗುತ್ತದೆ.

ರಾಣಿ ಬಳಿ ತಾಯಿಯ ಬಗ್ಗೆ ಮಾಹಿತಿ ಕೇಳಿದ ಪಾರ್ವತಿ

ಪಾರ್ವತಿ ತರಕಾರಿ ಕತ್ತರಿಸುತ್ತಾ ಆ ದಿನ ಶಿವು ಮೈ ಮೇಲೆ ದೇವಿ ಬಂದು ಹೇಳಿದ ಮಾತುಗಳನ್ನೇ ನೆನಪಿಸಿಕೊಳ್ಳುತ್ತಾಳೆ. ರಶ್ಮಿ ಮದುವೆಗೆ ಅತ್ತೆ ಬಂದಿದ್ದು ನಿಜಾನಾ? ಹಾಗಾದರೆ ಅವರು ತಮ್ಮ ಮಕ್ಕಳ ಕಣ್ಣಿಗೆ ಏಕೆ ಕಾಣಿಸಿಕೊಳ್ಳಲಿಲ್ಲ. ಆ ದೇವಿ ಹೇಳಿದ ರಹಸ್ಯ ಏನು ನನಗೆ ಒಂದೂ ಅರ್ಥವಾಗುತ್ತಿಲ್ಲ ಎಂದು ತನ್ನಷ್ಟಕ್ಕೆ ತಾನೇ ಮಾತನಾಡಿಕೊಂಡು ಯೋಚಿಸುತ್ತಾಳೆ. ಅಷ್ಟರಲ್ಲಿ ರಾಣಿ ಬಂದು ಗಾಬರಿಯಿಂದ ಅವಳನ್ನು ಎಚ್ಚರಿಸುತ್ತಾಳೆ. ಅತ್ತಿಗೆ ಏನೋ ಯೋಚನೆ ಮಾಡಿಕೊಂಡು ಬೆರಳು ಕತ್ತರಿಸಿಕೊಂಡೀರಾ ಜೋಕೆ ಎನ್ನುತ್ತಾಳೆ. ಏನೋ ಯೋಚನೆಯಲ್ಲಿ ಮುಳುಗಿದ್ದೆ ಗೊತ್ತಾಗಲಿಲ್ಲ ಎಂದು ಪಾರು ಹೇಳುತ್ತಾಳೆ. ಅಷ್ಟು ಆಳವಾಗಿ ಏನು ಯೋಚನೆ ಮಾಡುತ್ತಿದ್ದೀರಿ ಎಂದು ಕೇಳುತ್ತಾಳೆ. ನಿನಗೆ ನಿನ್ನ ತಾಯಿ ನೆನಪಿದ್ದಾರಾ ಎಂದು ಪಾರು ಕೇಳುತ್ತಾಳೆ. ಚಿಕ್ಕಂದಿನಲ್ಲಿ ನೋಡಿದ ನೆನಪು, ನನಗೆ ಅಷ್ಟು ನೆನಪಾಗುತ್ತಿಲ್ಲ ಅತ್ತಿಗೆ ಎಂದು ರಾಣಿ ಉತ್ತರಿಸುತ್ತಾಳೆ.

ಇತ್ತ ರತ್ನ ಅಂದು ನಡೆದ ಘಟನೆಯನ್ನು ಗೋಡಂಬಿ ಬಳಿ ಹೇಳಿಕೊಳ್ಳುತ್ತಾಳೆ. ನಮಗೆಲ್ಲಾ ತೊಂದರೆ ಕೊಟ್ಟು ಇವತ್ತು ಪ್ರಾಯಶ್ಚಿತ್ತ ಮಾಡಿಕೊಳ್ಳಲು ಹೊರಟಿದ್ದಾನೆ. ಅವನನ್ನು ನಂಬುವುದೋ ಬೇಡವೋ ನನಗೆ ಗೊತ್ತಾಗುತ್ತಿಲ್ಲ. ಅವನಂಥ ಕೆಟ್ಟ ಹುಳುವನ್ನು ನಾನು ಇದುವರೆಗೂ ನೋಡಿಲ್ಲ, ಈಗ ಒಳ್ಳೆಯವನಾಗುತ್ತೇನೆ ಎನ್ನುತ್ತಿದ್ದಾನೆ. ನನಗಂತೂ ಒಂದೂ ಅರ್ಥವಾಗುತ್ತಿಲ್ಲ ಅಂದ ಹಾಗೆ ನಾನು ಯಾರ ಬಗ್ಗೆ ಮಾತನಾಡುತ್ತಿದ್ದೇನೆ ಎಂದು ನಿನಗೆ ಕುತೂಹಲ ಇರಬಹುದು, ಮತ್ತಾರೂ ಅಲ್ಲ ಪರಶು ಎಂದು ರತ್ನ ಹೇಳುತ್ತಿದ್ದಂತೆ ಗೋಡಂಬಿ ಕಣ್ಣು ತೆಗೆದು, ಭಯದಿಂದ ಪ್ರತಿಕ್ರಿಯಿಸುತ್ತಾನೆ. ಕೂಡಲೇ ರತ್ನ ಅತ್ತಿಗೆಯನ್ನು ಕರೆಯುತ್ತಾಳೆ.

ತನಗೇ ಗೊತ್ತಾಗದಂತೆ ಪರಶು ಯೋಚನೆಯಲ್ಲಿ ಮುಳುಗಿದ ರತ್ನ

ರತ್ನ ಕರೆಯುತ್ತಿದ್ದಂತೆ ತರಕಾರಿ ಕತ್ತರಿಸುತ್ತಿದ್ದ ಪಾರ್ವತಿ ಓಡಿ ಬರುತ್ತಾಳೆ. ಯಾವಾಗಿನಿಂದ ಗೋಡಂಬಿ ಅಣ್ಣ ಈ ರೀತಿ ಪ್ರತಿಕ್ರಿಯಿಸುತ್ತಿದ್ದಾನೆ ಎಂದು ಪಾರು ಕೇಳುತ್ತಾಳೆ. ಈಗ ಅವನೊಂದಿಗೆ ಮಾತನಾಡುತ್ತಿದ್ದೆ ಆಗ ಎಚ್ಚರವಾದರು ಎಂದು ರತ್ನ ಹೇಳುತ್ತಾಳೆ. ಯಾವ ವಿಷಯದ ಬಗ್ಗೆ ಎಂದು ಪಾರು ಮತ್ತೆ ಪ್ರಶ್ನಿಸುತ್ತಾಳೆ. ಆದರೆ ರತ್ನ ತಾನು ಪರಶು ಬಗ್ಗೆ ಮಾತನಾಡುತ್ತಿದ್ದೆ ಎಂಬ ಸತ್ಯವನ್ನು ಮುಚ್ಚಿಡುತ್ತಾಳೆ. ಇವತ್ತು ಸ್ಕೂಲ್‌ನಲ್ಲಿ ಒಂದು ಹುಡುಗ ಜೋಕ್‌ ಹೇಳಿದ, ಅದನ್ನು ಗೋಡಂಬಿ ಅಣ್ಣನ ಬಳಿ ಹೇಳುತ್ತಿದ್ದೆ ಎಂದು ಸುಳ್ಳು ಹೇಳುತ್ತಾಳೆ. ಗೋಡಂಬಿ ಅಣ್ಣನ ಮುಂದೆ ನಾವೆಲ್ಲಾ ನಗುತ್ತಾ ಖುಷಿಯಾಗಿದ್ದರೆ ಅವನು ಬೇಗ ಗುಣಮುಖನಾಗುತ್ತಾನೆ ಎಂದು ಪಾರ್ವತಿ ಅವನಿಗೆ ಊಟ ತರಲು ಹೋಗುತ್ತಾಳೆ.

ಮತ್ತೊಂದೆಡೆ, ಪರಶು ಚಾವಟಿ ಏಟಿನಿಂದ ಆದ ಗಾಯಕ್ಕೆ ಛತ್ರಿ ಬಳಿ ಶಾಖ ಕೊಡಿಸಿಕೊಳ್ಳುತ್ತಾನೆ. ನೀವು ಬಹಳ ಚೆನ್ನಾಗಿ ನಾಟಕ ಮಾಡುತ್ತೀರಿ ಎಂದು ಛತ್ರಿ ಹೇಳುತ್ತಾನೆ. ಇಷ್ಟು ದಿನ ರತ್ನಳ ಮನಸ್ಸನಲ್ಲಿ ನಾನು ಇರಲಿಲ್ಲ, ಆದರೆ ಈಗ ನಿಧಾನವಾಗಿ ಅವಳ ಮನಸ್ಸು ಹೊಕ್ಕಿದ್ದೇನೆ, ಇನ್ನು ಕೆಲವು ದಿನಗಳು ನಾನು ಅಂದುಕೊಂಡಂತೆ ಎಲ್ಲಾ ನಡೆಯುತ್ತದೆ ಎನ್ನುತ್ತಾನೆ. ಅಷ್ಟರಲ್ಲಿ ಸುಶೀಲಾ ಬಾಗಿಲ ಬಳಿ ಬರುತ್ತಿರುವುದನ್ನು ನೋಡಿ ಇಬ್ಬರೂ ನಾಟಕ ಶುರು ಮಾಡುತ್ತಾರೆ. ನಾನು ಇಷ್ಟು ದಿನ ಎಲ್ಲರಿಗೂ ತೊಂದರೆ ಕೊಡುತ್ತಾ ಬದುಕುತ್ತಿದ್ದೆ, ಆದರೆ ಈಗ ನಾನು ಬದಲಾಗಿದ್ದೇನೆ. ಆದರೆ ಈ ವಿಚಾರ ಯಾರಿಗೂ ಗೊತ್ತಾಗುವುದು ಬೇಡ, ಹೇಳಿದರೂ ಯಾರೂ ನಂಬುವುದಿಲ್ಲ. ನನ್ನ ತಪ್ಪಿಗೆ ನಾನು ಪ್ರಾಯಶ್ಚಿತ್ತ ಮಾಡಿಕೊಳ್ಳಲು ಇಷ್ಟಪಡುತ್ತೇನೆ ಎಂದು ಪರಶು ಹೇಳುತ್ತಾನೆ. ಯಾರು ನಂಬುತ್ತಾರೋ ಇಲ್ಲವೋ ಆ ಮಾಕಾಳವ್ವ ನಿಜಕ್ಕೂ ನಿಮ್ಮನ್ನು ನಂಬುತ್ತಾಳೆ ಎಂದು ಛತ್ರಿ ಕೂಡಾ ಪರಶು ನಾಟಕಕ್ಕೆ ಜೊತೆಯಾಗುತ್ತಾನೆ. ಅವನ ಮಾತುಗಳನ್ನು ಕೇಳಿಸಿಕೊಂಡ ಸುಶೀಲಾ, ಇವನು ನಿಜಕ್ಕೂ ಬದಲಾಗಿದ್ದಾನಾ? ನನಗೆ ನಂಬಲಾಗುತ್ತಿಲ್ಲ, ಅಕ್ಕ ಮನೆಗೆ ಬರುತ್ತಿದ್ದಂತೆ ಈ ವಿಚಾರವಾಗಿ ಮಾತನಾಡಬೇಕು ಎಂದುಕೊಳ್ಳುತ್ತಾಳೆ.

ಪರಶು ಅಂದುಕೊಂಡಂತೆ ಅವನತ್ತ ರತ್ನ ಆಕರ್ಷಿತಳಾಗುತ್ತಿದ್ದಾಳಾ? ಅತ್ತೆ ವಿಚಾರವನ್ನು ಪಾರ್ವತಿ ಯಾರ ಬಳಿ ಕೇಳಿ ತಿಳಿದುಕೊಳ್ಳುತ್ತಾಳೆ? ಅಣ್ಣಯ್ಯ ಧಾರಾವಾಹಿಯ ಮುಂದಿನ ಸಂಚಿಕೆಗಳಲ್ಲಿ ತಿಳಿಯಲಿದೆ.

ಅಣ್ಣಯ್ಯ ಧಾರಾವಾಹಿ ಪಾತ್ರವರ್ಗ

ಮಾರಿಗುಡಿ ಶಿವು - ವಿಕಾಸ್‌ ಉತ್ತಯ್ಯ

ಪಾರ್ವತಿ - ನಿಶಾ ರವಿಕೃಷ್ಣನ್‌

ವೀರಭದ್ರ - ನಾಗೇಂದ್ರ ಶಾ

ಸೌಭಾಗ್ಯ - ಮಧುಮತಿ

ಸುಶೀಲ - ಶ್ವೇತಾ

ರತ್ನ - ನಾಗಶ್ರೀ ಬೇಗಾರ್‌

ರಾಧಾ - ರಾಘವಿ

ರಶ್ಮಿ - ಪ್ರತೀಕ್ಷಾ ಶ್ರೀನಾಥ್‌

ರಮ್ಯಾ - ಅಂಕಿತಾ ಗೌಡ

ನಾಗೇಗೌಡ - ಸಂದೀಪ್ ನೀನಾಸಂ

ಪರಶು - ಚಿರಂಜೀವಿ

ಜಿಮ್‌ ಸೀನ - ಸುಷ್ಮಿತ್ ಜೈನ್

ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in