ಅಣ್ಣಯ್ಯ: ಲೈಸನ್ಸ್‌ ಬಂದ ಖುಷಿಗೆ ಶಿವು ಬಳಿ ಸಿಹಿ ಕೇಳಿದ ಅಂಚೆಯಣ್ಣ; ತಾನು ಮಾಡಿದ ತಪ್ಪನ್ನು ಛತ್ರಿ ತಲೆಗೆ ಕಟ್ಟಿ ಬಚಾವ್‌ ಆದ ವೀರಭದ್ರ
ಕನ್ನಡ ಸುದ್ದಿ  /  ಮನರಂಜನೆ  /  ಅಣ್ಣಯ್ಯ: ಲೈಸನ್ಸ್‌ ಬಂದ ಖುಷಿಗೆ ಶಿವು ಬಳಿ ಸಿಹಿ ಕೇಳಿದ ಅಂಚೆಯಣ್ಣ; ತಾನು ಮಾಡಿದ ತಪ್ಪನ್ನು ಛತ್ರಿ ತಲೆಗೆ ಕಟ್ಟಿ ಬಚಾವ್‌ ಆದ ವೀರಭದ್ರ

ಅಣ್ಣಯ್ಯ: ಲೈಸನ್ಸ್‌ ಬಂದ ಖುಷಿಗೆ ಶಿವು ಬಳಿ ಸಿಹಿ ಕೇಳಿದ ಅಂಚೆಯಣ್ಣ; ತಾನು ಮಾಡಿದ ತಪ್ಪನ್ನು ಛತ್ರಿ ತಲೆಗೆ ಕಟ್ಟಿ ಬಚಾವ್‌ ಆದ ವೀರಭದ್ರ

ಜೀ ಕನ್ನಡದ ಅಣ್ಣಯ್ಯ ಧಾರಾವಾಹಿ 201ನೇ ಎಪಿಸೋಡ್‌ನಲ್ಲಿ ಮೆಡಿಕಲ್‌ ಲೈಸನ್ಸನ್ನು ವೀರಭದ್ರನ ಮನೆಗೆ ಕೊಟ್ಟುಬಂದಿದ್ದಾಗಿ ಶಿವು ಬಳಿ ಅಂಚೆಯಣ್ಣ ಹೇಳುತ್ತಾನೆ. (ಬರಹ: ರಕ್ಷಿತಾ)

ಅಣ್ಣಯ್ಯ: ಲೈಸನ್ಸ್‌ ಬಂದ ಖುಷಿಗೆ ಶಿವು ಬಳಿ ಸಿಹಿ ಕೇಳಿದ ಅಂಚೆಯಣ್ಣ; ತಾನು ಮಾಡಿದ ತಪ್ಪನ್ನು ಛತ್ರಿ ತಲೆಗೆ ಕಟ್ಟಿ ಬಚಾವ್‌ ಆದ ವೀರಭದ್ರ
ಅಣ್ಣಯ್ಯ: ಲೈಸನ್ಸ್‌ ಬಂದ ಖುಷಿಗೆ ಶಿವು ಬಳಿ ಸಿಹಿ ಕೇಳಿದ ಅಂಚೆಯಣ್ಣ; ತಾನು ಮಾಡಿದ ತಪ್ಪನ್ನು ಛತ್ರಿ ತಲೆಗೆ ಕಟ್ಟಿ ಬಚಾವ್‌ ಆದ ವೀರಭದ್ರ (Zee Kannada)

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಧಾರಾವಾಹಿ ಸೋಮವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 201ನೇ ಎಪಿಸೋಡ್‌ ಕಥೆ ಹೀಗಿದೆ. ತಾನು ಬದಲಾಗಿದ್ದೇನೆ ಎಂದು ನಂಬಿಸಲು ದೇವಿ ಸೇವೆ ಮಾಡುವವರ ಬಳಿ ಪರಶು ಚಾಟಿಯಿಂದ ಹೊಡೆಸಿಕೊಳ್ಳುತ್ತಾನೆ. ಅದನ್ನು ನೋಡುವ ರತ್ನ ಆಶ್ಚರ್ಯಗೊಳ್ಳುತ್ತಾಳೆ. ಗೋಡಂಬಿ ಬಳಿ ಎಲ್ಲವನ್ನೂ ಹೇಳುತ್ತಾಳೆ. ಪರಶು ಹೆಸರು ಕೇಳುತ್ತಿದ್ದಂತೆ ಗೋಡಂಬಿ ಕಣ್ಣು ಬಿಡುತ್ತಾನೆ. ಆದರೆ ಪಾರ್ವತಿ ಬಳಿ ತಾನು ಪರಶು ವಿಚಾರ ಮಾತನಾಡುತ್ತಿದ್ದೆ ಎಂಬ ಸತ್ಯವನ್ನು ಮುಚ್ಚಿಡುತ್ತಾಳೆ. ಅಂತೂ ರತ್ನ ತನ್ನ ಬಗ್ಗೆಯೇ ಯೋಚಿಸಲು ಶುರು ಮಾಡಿದ್ದಾಳೆ ಎಂದು ತಿಳಿದ ಪರಶು ಖುಷಿಯಾಗುತ್ತಾನೆ.

ಶಿವು ಪ್ರಶ್ನೆಗಳಿಗೆ ಉತ್ತರಿಸಲಾಗದೆ ನಡುಗಿದ ವೀರಭದ್ರ

ಶಿವು ಅಂಗಡಿ ಬಳಿ ಇರುವಾಗ ಪೋಸ್ಟ್‌ ಮ್ಯಾನ್‌ ಅವನ ಬಳಿ ಬಂದು ಸಿಹಿ ಕೇಳುತ್ತಾನೆ. ಆತ ಏಕೆ ಸಿಹಿ ಕೇಳುತ್ತಿದ್ದಾನೆ ಎಂದು ಅರ್ಥವಾಗದ ಶಿವು ಏನು ವಿಷಯ ಎಂದು ಕೇಳುತ್ತಾನೆ. ಇದೇನು ಶಿವು ಈ ರೀತಿ ಹೇಳುತ್ತಿದ್ದೀಯ, ನಿನ್ನ ಪತ್ನಿಗೆ ಮೆಡಿಕಲ್‌ ಲೈಸನ್ಸ್‌ ಸಿಕ್ಕಿರುವ ಖುಷಿ ವಿಚಾರಕ್ಕೆ ಸಿಹಿ ಕೇಳುತ್ತಿದ್ದೇನೆ ಎನ್ನುತ್ತಾನೆ. ಆ ಮಾತು ಕೇಳಿ ಶಿವು ಗೊಂದಲಕ್ಕೆ ಒಳಗಾಗುತ್ತಾನೆ. ಲೈಸನ್ಸ್‌ ಯಾರಿಗೆ ಕೊಟ್ಟಿದ್ದೀಯ ಎಂದು ಕೇಳುತ್ತಾನೆ. ನಾನೇ ನಿಮ್ಮ ಮಾವನ ಮನೆಗೆ ಕೊಟ್ಟು ಬಂದಿದ್ದೇನೆ, ಏಕೆ ಅವರು ನಿನಗೆ ಹೇಳಲಿಲ್ಲವೇ ಎಂದು ಕೇಳುತ್ತಾನೆ. ಸರಿ ನಾನು ಅಲ್ಲಿಗೆ ಹೋಗಿ ವಿಚಾರಿಸುತ್ತೇನೆ ಎಂದು ಅಂಗಡಿ ನೋಡಿಕೊಳ್ಳುವಂತೆ ಗೊರಕೆಗೆ ಹೇಳಿ ಶಿವು ಮತ್ತೊಮ್ಮೆ ವೀರಭದ್ರನನ್ನು ಕಾಣಲು ಹೊರಡುತ್ತಾನೆ. ಶಿವು ಮತ್ತೆ ಮನೆ ಕಡೆ ಬರುತ್ತಿರುವ ವಿಚಾರವನ್ನು ವೀರಭದ್ರನಿಗೆ ಛತ್ರಿ ಹೇಳುತ್ತಾನೆ. ಪಾರ್ವತಿ ಮೆಡಿಕಲ್‌ ಲೈಸನ್ಸ್‌ ಕೇಳಲು ಬಂದೆ ಎಂದು ಶಿವು ಹೇಳುತ್ತಾನೆ. ನಿನಗೆ ಮರೆವು ಶುರುವಾಗಿದೆಯಾ? ಇಲ್ಲಿಗೆ ಯಾವ ಲೈಸನ್ಸ್‌ ಕೂಡಾ ಬರಲಿಲ್ಲ ಎಂದು ಆಗಲೇ ಹೇಳಿದ್ದೆ, ಆದರೂ ಮತ್ತೆ ಕೇಳುತ್ತಿದ್ದೀಯಲ್ಲ ಎಂದು ವೀರಭದ್ರ ಹೇಳುತ್ತಾನೆ. ಶಿವು ಕೂಡಲೇ ಪೋಸ್ಟ್‌ಮ್ಯಾನ್‌ಗೆ ಕರೆ ಮಾಡಿ ಲೌಡ್‌ ಸ್ಪೀಕರ್‌ ಆನ್‌ ಮಾಡುತ್ತಾನೆ. ಯಜಮಾನ್ರೇ ನಿಮ್ಮ ಬಳಿ ಫೋನ್‌ನಲ್ಲಿ ಮಾತನಾಡುವಷ್ಟು ನಾನು ದೊಡ್ಡವನಲ್ಲ ಆದರೆ ನಿಮ್ಮ ಮನೆಗೆ ಬಂದು ಲೈಸನ್ಸ್‌ ಕೊಟ್ಟಿದ್ದೀನಲ್ಲ ಎಂದು ಪೋಸ್ಟ್‌ಮ್ಯಾನ್‌ ಹೇಳುತ್ತಾನೆ, ನೀನು ಯಾರ ಬಳಿ ಕೊಟ್ಟೆ ಎಂದು ಶಿವು ಕೇಳುತ್ತಾನೆ, ಛತ್ರಿ ಅಣ್ಣನ ಕೈಗೆ ಕೊಟ್ಟೆ ಎಂದು ಪೋಸ್ಟ್‌ಮ್ಯಾನ್‌ ಹೇಳುತ್ತಾನೆ.

ಲೈಸನ್ಸ್‌ ಹರಿದಿರುವ ವಿಚಾರ ತಿಳಿದರೆ ಇನ್ನು ನಮಗೆ ಉಳಿಗಾಲವಿಲ್ಲ ಎಂದು ತಿಳಿದು ವೀರಭದ್ರ, ನಾಟಕ ಶುರು ಮಾಡುತ್ತಾನೆ. ನನ್ನ ಮಗಳು ಡಾಕ್ಟರ್‌ ಆಗಲಿ ಎಂಬ ಕಾರಣಕ್ಕೆ ಅವಳನ್ನು ಮೆಡಿಕಲ್‌ ಓದಿಸಿದೆ, ಆದರೆ ನಿನ್ನ ದಡ್ಡತನದಿಂದ ನನ್ನ ಮಗಳ ಭವಿಷ್ಯವನ್ನೇ ಹಾಳು ಮಾಡಿದೆ ಎಂದು ಛತ್ರಿಗೆ ಹೊಡೆಯುವಂತೆ ನಾಟಕ ಮಾಡುತ್ತಾನೆ. ಅದನ್ನು ಹರಿದದ್ದು ನೀನೇ ಎಂದು ಹೇಳು ಅಂತ ಛತ್ರಿ ಕಿವಿಯಲ್ಲಿ ಪಿಸುಗುಟ್ಟುತ್ತಾನೆ. ನನಗೆ ಅದು ಪಾರ್ವತಿ ಮೆಡಿಕಲ್‌ ಲೈಸನ್ಸ್‌ ಎಂದು ಗೊತ್ತಿರಲಿಲ್ಲ. ಯಾವುದೋ ಪತ್ರ ಎಂದು ತಿಳಿದು ಅದನ್ನು ಹರಿದುಬಿಟ್ಟೆ ಎಂದು ಛತ್ರಿ ಹೇಳುತ್ತಾನೆ. ಅದನ್ನು ಕೇಳಿ ಶಿವು ಬೇಸರಗೊಳ್ಳುತ್ತಾನೆ. ನಿನ್ನನ್ನು ನಾನು ಬಿಡುವುದಿಲ್ಲ ಎಂದು ವೀರಭದ್ರ ಬಂದೂಕು ತಂದು ಛತ್ರಿ ಕಡೆ ಹಿಡಿಯುತ್ತಾನೆ. ಶಿವು, ವೀರಭದ್ರನನ್ನು ತಡೆಯುತ್ತಾನೆ, ಹೋಗಲಿ ಬಿಡಿ ಮಾವ ಎಂದು ಬೇಸರದಿಂದಲೇ ಅಲ್ಲಿಂದ ಹೊರಡುತ್ತಾನೆ.

ಮನು ಫೋಟೋವನ್ನು ಪೇಪರ್‌ನಲ್ಲಿ ಹಾಕಿಸಿದ ಇಂದ್ರಿ

ಮತ್ತೊಂದೆಡೆ ಇಂದ್ರಿ, ನಾಗೇಗೌಡ ಹಾಗೂ ಸೋಮೇಗೌಡ ಮೂವರೂ ಸೇರಿಕೊಂಡು ಮನುಗೆ ಟೀಚರ್‌ ಮೂಲಕ ಇಂಗ್ಲೀಷ್‌ ಕಲಿಸುವ ಪ್ರಯತ್ನದಲ್ಲಿದ್ದಾರೆ. ಬೇಕಂತಲೇ ಪೇಪರ್‌ನಲ್ಲಿ ಮನು ಲಂಡನ್‌ ಯೂನಿವರ್ಸಿಟಿಯಲ್ಲಿ ಡಾಕ್ಟರೇಟ್‌ ಪದವಿ ಪಡೆದಿದ್ದಾನೆ ಎಂದು ಸುಳ್ಳು ಜಾಹೀರಾತು ಹಾಕಿಸಿ ಆ ಪೇಪರನ್ನು ಶಿವು ಮನೆಗೆ ಹಾಕಿಸುತ್ತಾರೆ. ಮನೆ ಕ್ಲೀನ್‌ ಮಾಡುವಾಗ ರಾಣಿ ಆ ಪೇಪರ್‌ ನೋಡುತ್ತಾಳೆ. ನಮ್ಮ ಮನೆಗೆ ಪೇಪರ್‌ ಬೇಡವೆಂದರೂ ಹಾಕುತ್ತಾರೆ ಎಂದು ಗೊಣಗುತ್ತಾ ಅದನ್ನು ಕೈಗೆತ್ತಿಕೊಳ್ಳುತ್ತಾಳೆ. ಅಲ್ಲಿ ಮನು ಫೋಟೋ ನೋಡಿ ಆಶ್ಚರ್ಯಗೊಂಡು ಎಲ್ಲರನ್ನೂ ಕರೆಯುತ್ತಾಳೆ. ಮನು ನಿಜವಾಗಿಯೂ ವಿದೇಶದಲ್ಲಿ ಓದಿದ್ದಾನೆ ಎಂದು ಎಲ್ಲರೂ ನಂಬುತ್ತಾರೆ. ನಮಗೆ ಇವರು ಯಾರೆಂದು ಗೊತ್ತಾಗಲಿಲ್ಲ ಎಂದು ರಾಣಿ ಬಳಿ ತಮಾಷೆ ಮಾಡುತ್ತಾರೆ. ಒಮ್ಮೆ ನಾವೆಲ್ಲಾ ಮಾಸ್ತಿಕೊಪ್ಪಲು ಜಾತ್ರೆಗೆ ಹೋಗಿದ್ದಾಗ ಇವರು ಅಲ್ಲಿಗೆ ಬಂದಿದ್ದರು, ಇವರ ಹೆಸರು ಮನು, ಜೊತೆಗೆ ಅವರಮ್ಮ ಕೂಡಾ ಬಂದಿದ್ದರು, ಕುರ್ತಾ ಪೈಜಾಮ್‌ ಧರಿಸಿದ್ದರು ಎಂದು ರಾಣಿ ಹೇಳುತ್ತಾಳೆ. ಮನು ವಿಚಾರವಾಗಿ ರಾಣಿ ಆಸಕ್ತಿ ತೋರುತ್ತಿರುವುದಕ್ಕೆ ರತ್ನ, ರಮ್ಯ ಹಾಗೂ ಪಾರ್ವತಿ ಮೂವರೂ ಅವಳ ಕಾಲೆಳೆಯುತ್ತಾರೆ. ರಾಣಿ ನಾಚುತ್ತಾ ಒಳಗೆ ಹೋಗುತ್ತಾಳೆ.

ವೀರಭದ್ರ ಅಂದುಕೊಂಡಂತೆ ಪಾರ್ವತಿ ಕ್ಲಿನಿಕ್‌ ಇಡದಂತೆ ಆಗುವುದಾ? ಲೈಸನ್ಸ್‌ ವಿಚಾರ ತಿಳಿದು ಪಾರ್ವತಿ ಹೇಗೆ ಪ್ರತಿಕ್ರಿಯಿಸುತ್ತಾಳೆ? ಮನು ಮೇಲೆ ರಾಣಿಗೆ ಪ್ರೀತಿ ಉಂಟಾಗುವುದಾ? ಮುಂದಿನ ಸಂಚಿಕೆಗಳಲ್ಲಿ ತಿಳಿಯಲಿದೆ.

ಅಣ್ಣಯ್ಯ ಧಾರಾವಾಹಿ ಪಾತ್ರವರ್ಗ

ಮಾರಿಗುಡಿ ಶಿವು - ವಿಕಾಸ್‌ ಉತ್ತಯ್ಯ

ಪಾರ್ವತಿ - ನಿಶಾ ರವಿಕೃಷ್ಣನ್‌

ವೀರಭದ್ರ - ನಾಗೇಂದ್ರ ಶಾ

ಸೌಭಾಗ್ಯ - ಮಧುಮತಿ

ಸುಶೀಲ - ಶ್ವೇತಾ

ರತ್ನ - ನಾಗಶ್ರೀ ಬೇಗಾರ್‌

ರಾಧಾ - ರಾಘವಿ

ರಶ್ಮಿ - ಪ್ರತೀಕ್ಷಾ ಶ್ರೀನಾಥ್‌

ರಮ್ಯಾ - ಅಂಕಿತಾ ಗೌಡ

ನಾಗೇಗೌಡ - ಸಂದೀಪ್ ನೀನಾಸಂ

ಪರಶು - ಚಿರಂಜೀವಿ

ಜಿಮ್‌ ಸೀನ - ಸುಷ್ಮಿತ್ ಜೈನ್

ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.