ಅಣ್ಣಯ್ಯ: ಪಿಂಕಿ ಮುಂದೆ ಸೊಸೆ ರಶ್ಮಿಯನ್ನು ಹೊಗಳಿ ಅವಳೇ ಈ ಮನೆಗೆ ಮುಖ್ಯ ಎಂದ ಮಾದಪ್ಪ; ಘಟಿಕೋತ್ಸವದಲ್ಲಿ ಪಾರ್ವತಿಗೆ ಅದ್ಧೂರಿ ಸನ್ಮಾನ
ಕನ್ನಡ ಸುದ್ದಿ  /  ಮನರಂಜನೆ  /  ಅಣ್ಣಯ್ಯ: ಪಿಂಕಿ ಮುಂದೆ ಸೊಸೆ ರಶ್ಮಿಯನ್ನು ಹೊಗಳಿ ಅವಳೇ ಈ ಮನೆಗೆ ಮುಖ್ಯ ಎಂದ ಮಾದಪ್ಪ; ಘಟಿಕೋತ್ಸವದಲ್ಲಿ ಪಾರ್ವತಿಗೆ ಅದ್ಧೂರಿ ಸನ್ಮಾನ

ಅಣ್ಣಯ್ಯ: ಪಿಂಕಿ ಮುಂದೆ ಸೊಸೆ ರಶ್ಮಿಯನ್ನು ಹೊಗಳಿ ಅವಳೇ ಈ ಮನೆಗೆ ಮುಖ್ಯ ಎಂದ ಮಾದಪ್ಪ; ಘಟಿಕೋತ್ಸವದಲ್ಲಿ ಪಾರ್ವತಿಗೆ ಅದ್ಧೂರಿ ಸನ್ಮಾನ

ಜೀ ಕನ್ನಡದ ಅಣ್ಣಯ್ಯ ಧಾರಾವಾಹಿ 207ನೇ ಎಪಿಸೋಡ್‌ನಲ್ಲಿ ಪಿಂಕಿ ಎದುರು ಮಾದಪ್ಪ ಸೊಸೆ ರಶ್ಮಿಯನ್ನು ಹೊಗಳುತ್ತಾನೆ, ಘಟಿಕೋತ್ಸವದಲ್ಲಿ ಪಾರ್ವತಿಗೆ ಸನ್ಮಾನ ಮಾಡಲಾಗುತ್ತದೆ. (ಬರಹ: ರಕ್ಷಿತಾ)

ಅಣ್ಣಯ್ಯ: ಪಿಂಕಿ ಮುಂದೆ ಸೊಸೆ ರಶ್ಮಿಯನ್ನು ಹೊಗಳಿ ಅವಳೇ ಈ ಮನೆಗೆ ಮುಖ್ಯ ಎಂದ ಮಾದಪ್ಪ; ಘಟಿಕೋತ್ಸವದಲ್ಲಿ ಪಾರ್ವತಿಗೆ ಅದ್ದೂರಿ ಸನ್ಮಾನ
ಅಣ್ಣಯ್ಯ: ಪಿಂಕಿ ಮುಂದೆ ಸೊಸೆ ರಶ್ಮಿಯನ್ನು ಹೊಗಳಿ ಅವಳೇ ಈ ಮನೆಗೆ ಮುಖ್ಯ ಎಂದ ಮಾದಪ್ಪ; ಘಟಿಕೋತ್ಸವದಲ್ಲಿ ಪಾರ್ವತಿಗೆ ಅದ್ದೂರಿ ಸನ್ಮಾನ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಧಾರಾವಾಹಿ ಮಂಗಳವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 207ನೇ ಎಪಿಸೋಡ್‌ ಕಥೆ ಹೀಗಿದೆ. ಘಟಿಕೋತ್ಸವಕ್ಕೆ ಪಾವರ್ತಿ ಜೊತೆ ಬಂದ ಶಿವುಗೆ ಅವಳ ಸಹಪಾಠಿಯೊಬ್ಬ ಕೂಲಿ ಎಂದು ಕರೆದು ಅವಮಾನ ಮಾಡುತ್ತಾನೆ. ಸಿಟ್ಟು ತಾಳಲಾರದೆ ಪಾರ್ವತಿ ಅವನಿಗೆ ಬಾಟಲ್‌ನಿಂದ ಹೊಡೆಯುತ್ತಾಳೆ. ಮತ್ತೊಂದೆಡೆ ಮಾದಪ್ಪಣ್ಣ ತನ್ನ ಸೊಸೆ ರಶ್ಮಿಗೆ ತಾನೇ ಕೈಯಾರೆ ಅಡುಗೆ ಮಾಡಿ ಬಡಿಸಲು ಮುಂದಾಗುತ್ತಾನೆ. ಮಾವ ಸೊಸೆ ಇಬ್ಬರೂ ಅಡುಗೆ ಮಾಡುವುದನ್ನು ಕಂಡು ಲೀಲಾ ಸಿಟ್ಟಾಗುತ್ತಾಳೆ.

ಎಲ್ಲರಿಗಿಂತ ಮೊದಲು ರಶ್ಮಿಗೆ ಊಟ ಬಡಿಸುವಂತೆ ತಾಕೀತು ಮಾಡಿದ ಮಾದಪ್ಪ

ಅಡುಗೆ ಮನೆಯಲ್ಲಿ ಸುವಾಸನೆ ಬರುವುದನ್ನು ಗಮನಿಸಿದ ಜಿಮ್‌ ಸೀನ ಅಡುಗೆ ಏನೆಂದು ನೋಡಲು ಅಲ್ಲಿಗೆ ಬರುತ್ತಾನೆ. ರಶ್ಮಿ ಹಾಗೂ ತನ್ನ ಅಪ್ಪ ಇಬ್ಬರೂ ಸೇರಿ ಅಡುಗೆ ಮಾಡುತ್ತಿರುವುದನ್ನು ನೋಡಿ ಆಶ್ಚರ್ಯಗೊಳ್ಳುತ್ತಾನೆ. ಈ ದಿನ ಏನು ವಿಶೇಷ ಎಂದು ಸೀನ ಕೇಳುತ್ತಾನೆ. ಏನಿಲ್ಲ ನನ್ನ ಸೊಸೆ ರಶ್ಮಿಗಾಗಿ ಟೊಮೆಟೊ ಬಾತ್‌ ಹಾಗೂ ಪಾಯಸ ಮಾಡುತ್ತಿದ್ದೇನೆ ಎನ್ನುತ್ತಾನೆ. ಗಂಡ, ಸೊಸೆ ಜೊತೆ ಈಗ ಮಗನೂ ಸೇರಿದ್ದನ್ನು ಕಂಡು ಲೀಲಾ ಒಳಗೆ ಯಾರು ಏನು ಮಾಡುತ್ತಿದ್ದಾರೆ ನೋಡಿಕೊಂಡು ಬಾ ಎಂದು ಮಗಳನ್ನು ಕಳಿಸುತ್ತಾಳೆ. ಭಾನು ಪದೇ ಪದೆ ಅಡುಗೆ ಮನೆಗೆ ಬಂದು ಹೋಗುತ್ತಿರುವುದನ್ನು ಕಂಡು ಮಾದಪ್ಪಣ್ಣನಿಗೆ ಲೀಲಾ ತಳಮಳ ಅರ್ಥವಾಗುತ್ತದೆ. ನಿನಗೆ ಬುದ್ಧಿ ಕಲಿಸಲೆಂದೇ ನಾನು ಹೀಗೆ ಮಾಡುತ್ತಿರುವುದು ಎಂದು ಮನಸ್ಸಿನಲ್ಲಿ ಖುಷಿ ಪಡುತ್ತಾನೆ.

ಅಡುಗೆ ರೆಡಿ ಆಗುತ್ತದೆ, ಎಲ್ಲರೂ ಡೈನಿಂಗ್‌ ಟೇಬಲ್‌ ಬಳಿ ಸೇರುತ್ತಾರೆ. ಲೀಲಾಳನ್ನೂ ಊಟಕ್ಕೆ ಕೂರುವಂತೆ ಮಾದಪ್ಪಣ್ಣ ಹೇಳುತ್ತಾನೆ, ಇಲ್ಲ ನನಗೆ ಹಸಿವಿಲ್ಲ ನಾನೇ ಎಲ್ಲರಿಗೂ ಊಟಕ್ಕೆ ಬಡಿಸುತ್ತೇನೆ ಎಂದು ಲೀಲಾ ಹೇಳುತ್ತಾಳೆ. ಅಷ್ಟರಲ್ಲಿ ಪಿಂಕಿ ಅಲ್ಲಿಗೆ ಬರುತ್ತಾಳೆ. ಅವಳನ್ನು ನೋಡಿ ಸೀನ ಶಾಕ್‌ ಆಗುತ್ತಾನೆ. ನೀವೂ ಊಟಕ್ಕೆ ಕುಳಿತುಕೊಳ್ಳಿ ಎಂದು ರಶ್ಮಿ ಹೇಳುತ್ತಾಳೆ. ಪಿಂಕಿಗೆ ಲೀಲಾ ಸಿಹಿ ಬಡಿಸಲು ಮುಂದಾಗುತ್ತಾಳೆ. ಮೊದಲು ನನ್ನ ಸೊಸೆಗೆ ಬಡಿಸು, ನಂತರ ಉಳಿದವರಿಗೆ ಎಂದು ಮಾದಪ್ಪ ಕಡ್ಡಿ ತುಂಡಾದಂತೆ ಹೇಳುತ್ತಾನೆ. ಆ ಮಾತು ಕೇಳಿ ರಶ್ಮಿಗೆ ಖುಷಿ ಆದರೆ ಪಿಂಕಿ ಸಿಟ್ಟಾಗುತ್ತಾಳೆ. ನಮ್ಮ ಮನೆಯಲ್ಲಿ ನನ್ನ ಸೊಸೆ ನನಗೆ ಮುಖ್ಯ. ನಂತರ ಉಳಿದವರು, ದೇವರಿಗೆ ಮೊದಲು ನೈವೇದ್ಯ ಆಗಬೇಕು ನಂತರ ಉಳಿದವರಿಗೆ ಎನ್ನುತ್ತಾನೆ. ಮಾವನ ಪ್ರೀತಿ ಕಂಡು ರಶ್ಮಿ ಭಾವುಕಳಾಗುತ್ತಾಳೆ.

ಸನ್ಮಾನದ ಜೊತೆಗೆ ಪಾರ್ವತಿಗೆ ಕಾದಿದೆ ಮತ್ತೊಂದು ಉಡುಗೊರೆ

ಇತ್ತ ಕಾಲೇಜಿನಲ್ಲಿ ಘಟಿಕೋತ್ಸವ ಸಮಾರಂಭ ಆರಂಭವಾಗುತ್ತದೆ. ಎಲ್ಲರೂ ಒಬ್ಬೊಬ್ಬರಾಗೇ ಪದವಿ ಸ್ವೀಕರಿಸುತ್ತಾರೆ. ನಾನು ನಿಮ್ಮನ್ನೆಲ್ಲಾ ಭೇಟಿ ಆಗಲು ಬಂದೆ, ನನ್ನ ಬಳಿ ಲೈಸನ್ಸ್‌ ಇಲ್ಲದೆ ಈ ಸರ್ಟಿಫಿಕೇಟ್‌ ಪಡೆದುಕೊಂಡು ನಾನು ಏನು ಮಾಡಲು ಹೊರಡುತ್ತೇನೆ ಎಂದು ಫ್ರೆಂಡ್ಸ್‌ಗೆ ಹೇಳಿ ಪಾರ್ವತಿ ಅಲ್ಲಿಂದ ಹೊರಡಲು ಮುಂದಾಗುತ್ತಾಳೆ. ಅಷ್ಟರಲ್ಲಿ ವೇದಿಕೆಯಲ್ಲಿ ಪಾರ್ವತಿ ಹೆಸರನ್ನು ಅನೌನ್ಸ್‌ ಮಾಡಲಾಗುತ್ತದೆ. ಪಾರ್ವತಿಯನ್ನು ವೇದಿಕೆ ಮೇಲೆ ಕರೆದು ಆಕೆಗೆ ಗೌನ್‌ ನೀಡಲಾಗುತ್ತದೆ. ಆಕೆಯ ಕೆಲಸವನ್ನು ವಿಡಿಯೋ ಮೂಲಕ ವೇದಿಕೆ ಮೇಲಿದ್ದ ದೊಡ್ಡ ಪರದೆಯ ಮೇಲೆ ಪ್ರಸಾರ ಮಾಡಲಾಗುತ್ತದೆ. ಪಾರ್ವತಿಗೆ ಸನ್ಮಾನ ಮಾಡುತ್ತಿರುವುದಾಗಿ ನಿರೂಪಕಿ ಹೇಳುತ್ತಾರೆ. ಅದನ್ನು ಕೇಳಿ ಪಾರ್ವತಿ ಖುಷಿಯಾಗುತ್ತಾಳೆ.

ಸನ್ಮಾನ ಮಾಡುತ್ತಿರುವುದಕ್ಕೆ ಪಾರ್ವತಿ ಖುಷಿಯಾಗುತ್ತಾಳೆ. ಆದರೆ ಅಲ್ಲೆಲ್ಲೂ ಶಿವು ಕಾಣದಿರುವುದನ್ನು ನೋಡಿ ಅವನನ್ನೇ ಹುಡುಕುತ್ತಾಳೆ. ಪಾರ್ವತಿ ಸಹಪಾಠಿಗೆ ಚಿಕಿತ್ಸೆ ಕೊಡಿಸಿ ಕಾರ್ಯಕ್ರಮ ನಡೆಯುತ್ತಿದ್ದ ಹಾಲ್‌ಗೆ ಹೋಗಬೇಕು ಎನ್ನುವಷ್ಟರಲ್ಲಿ ಶಿವಣ್ಣನನ್ನು ಸೆಕ್ಯೂರಿಟಿ ತಡೆಯುತ್ತಾನೆ. ಇಲ್ಲಿರುವವರೆಲ್ಲಾ ದೊಡ್ಡ ಮನುಷ್ಯರು ನೀನು ಒಳಗೆ ಹೋಗಿ ಏನು ಮಾಡುತ್ತೀಯ ಎಂದು ಕೇಳುತ್ತಾನೆ, ನನ್ನ ಪತ್ನಿ ಒಳಗೆ ಇದ್ದಾಳೆ ಎಂದು ಶಿವು ಹೇಳಿದರೂ ಅವನನ್ನು ಒಳಗೆ ಹೋಗಲು ಬಿಡುವುದಿಲ್ಲ. ಇತ್ತ ವೇದಿಕೆಯಲ್ಲಿ ಪಾರ್ವತಿಗೆ ಮತ್ತೊಂದು ಆಶ್ಚರ್ಯ ಕಾದಿರುತ್ತದೆ. ನಿಮಗೆ ಹೊಸ ಲೈಸನ್ಸ್‌ ನೀಡುತ್ತಿರುವುದಾಗಿ ಪ್ರೊಫೆಸರ್‌ ಹೇಳುತ್ತಾರೆ. ಆ ಮಾತು ಕೇಳಿ ಪಾರು ಆಶ್ಚರ್ಯಗೊಳ್ಳುತ್ತಾಳೆ.

ಪಾರ್ವತಿಗೆ ಹೊಸ ಲೈಸನ್ಸ್‌ ಸಿಗಲು ಕಾರಣ ಯಾರು? ವಿಚಾರ ತಿಳಿದರೆ ವೀರಭದ್ರ ಹೇಗೆ ಪ್ರತಿಕ್ರಿಯಿಸುತ್ತಾನೆ? ಮಾದಪ್ಪಣ್ಣ ರಶ್ಮಿಗೆ ಪ್ರಾಮುಖ್ಯತೆ ಕೊಡುವುದನ್ನು ಕಂಡ ಪಿಂಕಿ ಮುಂದೇನು ಮಾಡುತ್ತಾಳೆ? ಮುಂಬರುವ ಸಂಚಿಕೆಗಳಲ್ಲಿ ತಿಳಿಯಲಿದೆ.

ಅಣ್ಣಯ್ಯ ಧಾರಾವಾಹಿ ಪಾತ್ರವರ್ಗ

ಮಾರಿಗುಡಿ ಶಿವು - ವಿಕಾಸ್‌ ಉತ್ತಯ್ಯ

ಪಾರ್ವತಿ - ನಿಶಾ ರವಿಕೃಷ್ಣನ್‌

ವೀರಭದ್ರ - ನಾಗೇಂದ್ರ ಶಾ

ಸೌಭಾಗ್ಯ - ಮಧುಮತಿ

ಸುಶೀಲ - ಶ್ವೇತಾ

ರತ್ನ - ನಾಗಶ್ರೀ ಬೇಗಾರ್‌

ರಾಧಾ - ರಾಘವಿ

ರಶ್ಮಿ - ಪ್ರತೀಕ್ಷಾ ಶ್ರೀನಾಥ್‌

ರಮ್ಯಾ - ಅಂಕಿತಾ ಗೌಡ

ನಾಗೇಗೌಡ - ಸಂದೀಪ್ ನೀನಾಸಂ

ಪರಶು - ಚಿರಂಜೀವಿ

ಜಿಮ್‌ ಸೀನ - ಸುಷ್ಮಿತ್ ಜೈನ್

ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.