ಅಣ್ಣಯ್ಯ: ಪ್ರಾಣವನ್ನೇ ಒತ್ತೆಯಾಗಿಟ್ಟು ಹೆಂಡತಿಗೆ ಲೈಸನ್ಸ್‌ ದಕ್ಕಿಸಿಕೊಟ್ಟ ಶಿವಣ್ಣ; ಮಾವನೇ ನನ್ನ ಪಾಲಿನ ದೇವರು ಎಂದ ಪಾರ್ವತಿ
ಕನ್ನಡ ಸುದ್ದಿ  /  ಮನರಂಜನೆ  /  ಅಣ್ಣಯ್ಯ: ಪ್ರಾಣವನ್ನೇ ಒತ್ತೆಯಾಗಿಟ್ಟು ಹೆಂಡತಿಗೆ ಲೈಸನ್ಸ್‌ ದಕ್ಕಿಸಿಕೊಟ್ಟ ಶಿವಣ್ಣ; ಮಾವನೇ ನನ್ನ ಪಾಲಿನ ದೇವರು ಎಂದ ಪಾರ್ವತಿ

ಅಣ್ಣಯ್ಯ: ಪ್ರಾಣವನ್ನೇ ಒತ್ತೆಯಾಗಿಟ್ಟು ಹೆಂಡತಿಗೆ ಲೈಸನ್ಸ್‌ ದಕ್ಕಿಸಿಕೊಟ್ಟ ಶಿವಣ್ಣ; ಮಾವನೇ ನನ್ನ ಪಾಲಿನ ದೇವರು ಎಂದ ಪಾರ್ವತಿ

ಜೀ ಕನ್ನಡದ ಅಣ್ಣಯ್ಯ ಧಾರಾವಾಹಿ 208ನೇ ಎಪಿಸೋಡ್‌ನಲ್ಲಿ ತನ್ನ ಪ್ರಾಣವನ್ನೇ ಒತ್ತೆಯಾಗಿಟ್ಟು ಪಾರ್ವತಿಗೆ ಶಿವು ಹೊಸ ಮೆಡಿಕಲ್‌ ಲೈಸನ್ಸ್‌ ದೊರೆಯವಂತೆ ಮಾಡುತ್ತಾನೆ. (ಬರಹ: ರಕ್ಷಿತಾ)

ಅಣ್ಣಯ್ಯ: ಪ್ರಾಣವನ್ನೇ ಒತ್ತೆಯಾಗಿಟ್ಟು ಹೆಂಡತಿಗೆ ಲೈಸನ್ಸ್‌ ದಕ್ಕಿಸಿಕೊಟ್ಟ ಶಿವಣ್ಣ; ಮಾವನೇ ನನ್ನ ಪಾಲಿನ ದೇವರು ಎಂದ ಪಾರ್ವತಿ
ಅಣ್ಣಯ್ಯ: ಪ್ರಾಣವನ್ನೇ ಒತ್ತೆಯಾಗಿಟ್ಟು ಹೆಂಡತಿಗೆ ಲೈಸನ್ಸ್‌ ದಕ್ಕಿಸಿಕೊಟ್ಟ ಶಿವಣ್ಣ; ಮಾವನೇ ನನ್ನ ಪಾಲಿನ ದೇವರು ಎಂದ ಪಾರ್ವತಿ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಧಾರಾವಾಹಿ ಬುಧವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 208ನೇ ಎಪಿಸೋಡ್‌ ಕಥೆ ಹೀಗಿದೆ. ಘಟಿಕೋತ್ಸವದಲ್ಲಿ ಎಲ್ಲರೂ ಪದವಿ ಸ್ವೀಕರಿಸುತ್ತಾರೆ. ಗೆಳತಿಯರನ್ನು ಭೇಟಿಯಾಗಲು ಅಲ್ಲಿಗೆ ಬಂದಿದ್ದ ಪಾರು ಮನೆಗೆ ಹೊರಡಲು ಮುಂದಾಗುತ್ತಾಳೆ. ಅಷ್ಟರಲ್ಲಿ ಆಕೆಯನ್ನು ವೇದಿಕೆ ಮೇಲೆ ಕರೆದು ಸನ್ಮಾನ ಮಾಡಲಾಗುತ್ತದೆ. ಆಕೆಯ ಸಾಧನೆಯನ್ನು ಎಲ್ಲರೂ ಕೊಂಡಾಡುತ್ತಾರೆ. ನಿಮಗೆ ಇನ್ನೂ ಒಂದು ಗಿಫ್ಟ್‌ ಇದೆ ಎಂದು ಪಾರ್ವತಿ ಪ್ರೊಫೆಸರ್‌ ಹೇಳುತ್ತಾರೆ.

ಉಪಕುಲಪತಿಗಳನ್ನು ಭೇಟಿಯಾಗಿ ಲೈಸನ್ಸ್‌ಗೆ ಮನವಿ ಮಾಡಿದ ಶಿವು

ನಿಮಗೆ ನಾವು ಮೆಡಿಕಲ್‌ ಲೈಸನ್ಸ್‌ ನೀಡುತ್ತಿದ್ದೇವೆ ಎಂದು ಪ್ರೊಫೆಸರ್‌ ಹೇಳಿದಾಗ ಪಾರ್ವತಿ ಆಶ್ಚರ್ಯ ವ್ಯಕ್ತಪಡಿಸುತ್ತಾಳೆ. ಮೆಡಿಕಲ್‌ ಲೈಸನ್ಸ್‌ ಪೋಸ್ಟ್‌ ಮೂಲಕ ಬಂದಿದ್ದರೂ ಅದು ನನ್ನ ಕೈಗೆ ಸಿಗದೆ ಮಿಸ್‌ ಆಗಿದೆ, ಈಗ ಮತ್ತೆ ನೀವು ಲೈಸನ್ಸ್‌ ಬಗ್ಗೆ ಹೇಳುತ್ತಿದ್ದೀರ ನನಗೆ ಅರ್ಥವಾಗುತ್ತಿಲ್ಲ ಸರ್‌ ಎಂದು ಪಾರ್ವತಿ ಹೇಳುತ್ತಾಳೆ. ಹೌದು ಹಾಗೆ ಎಲ್ಲರಿಗೂ ಲೈಸನ್ಸ್‌ ಮತ್ತೆ ದೊರೆಯುವುದಿಲ್ಲ, ಆದರೆ ನಿಮಗೆ ಸಿಗುತ್ತಿದೆ, ಈ ವಿಚಾರದ ಬಗ್ಗೆ ಉಪಕುಲಪತಿಗಳು ಹೇಳುತ್ತಾರೆ ಎನ್ನುತ್ತಾರೆ. ಅವರ ಮಾತು ಮುಂದುವರೆಸುವ ಉಪಕುಲಪತಿಗಳು ಯಾರಿಗೇ ಆಗಲಿ ಲೈಸನ್ಸ್‌ ಒಮ್ಮೆ ಕಳೆದುಕೊಂಡರೆ ಮತ್ತೆ ಸಿಗುವುದಿಲ್ಲ. ಆದರೆ ಆ ವ್ಯಕ್ತಿಯ ಪರಿಶ್ರಮದಿಂದ ನಿಮಗೆ ಮತ್ತೆ ಲೈಸನ್ಸ್‌ ದೊರೆಯುತ್ತಿದೆ ಎಂದು ಹೇಳಿ ಕೆಲವು ದಿನಗಳ ಹಿಂದೆ ನಡೆದ ಘಟನೆಯನ್ನು ನೆನಪಿಸಿಕೊಳ್ಳುತ್ತಾರೆ.

ಅಂಗಡಿ ಕೆಲಸಕ್ಕೆ ಹೋಗುತ್ತೇನೆ ಎಂದು ಹೇಳಿ ಶಿವು ಹಾಗೂ ಗೊರಕೆ ಪಾರ್ವತಿ ಮೆಡಿಕಲ್‌ ಓದಿದ ಕಾಲೇಜಿಗೆ ಬರುತ್ತಾರೆ. ಅಲ್ಲಿ ಸೆಕ್ಯೂರಿಟಿ ಬಳಿ ಲೈಸನ್ಸ್‌ ಬಳಿ ವಿಚಾರಿಸಿದಾಗ ಉಪಕುಲಪತಿಗಳ ಬಳಿ ಮಾತನಾಡುವಂತೆ ಹೇಳುತ್ತಾನೆ. ಅಷ್ಟರಲ್ಲಿ ಉಪಕುಲಪತಿಗಳು ಕಾಲೇಜಿಗೆ ಬರುತ್ತಾರೆ. ಶಿವು ಅವರ ಬಳಿ ಹೋಗಿ ಪಾರುಗೆ ಲೈಸನ್ಸ್‌ ಬೇಕಿತ್ತು ಎನ್ನುತ್ತಾನೆ. ಆದರೆ ಅವನ ವರ್ತನೆ ಕಂಡು ಅವರು ಸಿಟ್ಟಾಗಿ ಬೈದು ಅಲ್ಲಿಂದ ಹೊರಡುತ್ತಾರೆ. ಅಷ್ಟರಲ್ಲಿ ಇಬ್ಬರು ಮೆಡಿಕಲ್‌ ವಿದ್ಯಾರ್ಥಿಗಳು ಮಾತನಾಡುತ್ತಿರುವ ವಿಚಾರದ ಬಗ್ಗೆ ಶಿವು ಕೇಳಿಸಿಕೊಳ್ಳುತ್ತಾನೆ. ತಾವು ಕಂಡುಹಿಡಿದ ಔಷಧವನ್ನು ಮನುಷ್ಯನ ಮೇಲೆ ಪ್ರಯೋಗ ಮಾಡಬೇಕು. ಆದರೆ ಒಪ್ಪಿಕೊಂಡಿದ್ದ ವ್ಯಕ್ತಿ ಈ ದಿನ ಬಂದಿಲ್ಲ ಎನ್ನುತ್ತಾರೆ.

ಶಿವು ಕೈಯಿಂದ ಲೈಸನ್ಸ್‌ ಪಡೆದು ಖುಷಿಯಾದ ಪಾರ್ವತಿ

ಇದೇ ಸರಿಯಾದ ಸಮಯ ಎಂದು ಶಿವು ನನ್ನ ಮೇಲೆ ಪ್ರಯೋಗ ಮಾಡಿ ಎನ್ನುತ್ತಾನೆ. ಆ ಇಬ್ಬರು ವಿದ್ಯಾರ್ಥಿಗಳು ಉಪಕುಲಪತಿಗಳ ಬಳಿ ಶಿವುನನ್ನು ಕರೆದೊಯ್ಯುತ್ತಾರೆ. ನಾನು ನಿಮ್ಮ ಪರೀಕ್ಷೆಗೆ ಸಿದ್ಧನಾಗಿದ್ದೇನೆ, ನೀವು ನನ್ನನ್ನು ಹೇಗೆ ಬೇಕಾದರೂ ಬಳಸಿಕೊಳ್ಳಿ, ಆದರೆ ಅದರ ಬದಲಿಗೆ ನನಗೊಂದು ಸಹಾಯ ಆಗಬೇಕು. ನನಗೆ ದುಡ್ಡು ಕಾಸು ಏನೂ ಬೇಡ. ನನ್ನ ಹೆಂಡತಿಗೆ ಮೆಡಿಕಲ್‌ ಲೈಸನ್ಸ್‌ ಕೊಡಿ ಎಂದು ಮನವಿ ಮಾಡುತ್ತಾನೆ. ಶಿವು ಪ್ರೀತಿ ಕಂಡು ಉಪಕುಲಪತಿಗಳು ಖುಷಿಯಾಗುತ್ತಾರೆ. ಖಂಡಿತ ನಿನ್ನ ಮನವಿಯಂತೆ ಲೈಸನ್ಸ್‌ ಕೊಡುತ್ತೇವೆ ಎಂದು ಭರವಸೆ ನೀಡುತ್ತಾರೆ.

ಈ ಎಲ್ಲಾ ವಿಚಾರ ಕೇಳಿ ಪಾರ್ವತಿ ಭಾವುಕಳಾಗುತ್ತಾಳೆ. ಗಂಡನ ಬಗ್ಗೆ ಹೆಮ್ಮೆ ವ್ಯಕ್ತಪಡಿಸುತ್ತಾಳೆ. ಎಷ್ಟೋ ಹೆಣ್ಣು ಮಕ್ಕಳು ಓದಿ ವಿದ್ಯಾವಂತರಾದರೂ ಮದುವೆ, ಗಂಡ, ಮನೆ, ಮಕ್ಕಳು ಎಂಬ ಕಾರಣಕ್ಕೆ ಅವರು ಜೀವನದಲ್ಲಿ ಇನ್ನಷ್ಟು ಸಾಧಿಸಲು ಅವಕಾಶ ಆಗುವುದಿಲ್ಲ. ಆದರೆ ಪಾರ್ವತಿ ವಿಚಾರದಲ್ಲಿ ಆ ರೀತಿ ಅಲ್ಲ, ಅವರ ಸಂಗಾತಿ ಬಹಳ ಪ್ರೋತ್ಸಾಹ ನೀಡುತ್ತಿದ್ದಾರೆ. ಹೆಂಡತಿ ಡಾಕ್ಟರ್‌ ಅಗಿ ಜನಸೇವೆ ಮಾಡಬೇಕೆಂದು ಆಸೆ ಪಟ್ಟಿದ್ದಾರೆ. ಅಂತವರ ಜೊತೆ ಫೋಟೋ ತೆಗೆಸಿಕೊಂಡಿದ್ದು ನನ್ನ ಪುಣ್ಯ ಎನ್ನುತ್ತಾರೆ. ಆಗ ವೇದಿಕೆ ಮೇಲಿನ ಪರದೆಯಲ್ಲಿ ಶಿವು ಹಾಗೂ ಉಪಕುಲಪತಿಗಳ ಫೋಟೋ ಪ್ರದರ್ಶಿಸಲಾಗುತ್ತದೆ. ಶಿವು ಕೈಯಲ್ಲೇ ಪಾರ್ವತಿ ಲೈಸನ್ಸ್‌ ಪಡೆಯಲು ಆಸೆ ಪಡುತ್ತಾಳೆ. ಸೆಕ್ಯೂರಿಟಿ ಶಿವು ಬಳಿ ಬಂದು ಕ್ಷಮೆ ಕೇಳಿ ಅವನನ್ನು ಒಳಗೆ ಬಿಡುತ್ತಾರೆ. ವೇದಿಕೆ ಮೇಲೆ ಉಪಕುಲಪತಿಗಳು ಶಿವುಗೆ ಲೈಸನ್ಸ್‌ ಕೊಡುತ್ತಾರೆ. ಶಿವು ಅದನ್ನು ಪಾರ್ವತಿಗೆ ಕೊಡುತ್ತಾನೆ. ಪಾರ್ವತಿ ಎಲ್ಲರಿಗೂ ಧನ್ಯವಾದ ಹೇಳುತ್ತಾಳೆ.

ಅಣ್ಣಯ್ಯ ಧಾರಾವಾಹಿ ಪಾತ್ರವರ್ಗ

ಮಾರಿಗುಡಿ ಶಿವು - ವಿಕಾಸ್‌ ಉತ್ತಯ್ಯ

ಪಾರ್ವತಿ - ನಿಶಾ ರವಿಕೃಷ್ಣನ್‌

ವೀರಭದ್ರ - ನಾಗೇಂದ್ರ ಶಾ

ಸೌಭಾಗ್ಯ - ಮಧುಮತಿ

ಸುಶೀಲ - ಶ್ವೇತಾ

ರತ್ನ - ನಾಗಶ್ರೀ ಬೇಗಾರ್‌

ರಾಧಾ - ರಾಘವಿ

ರಶ್ಮಿ - ಪ್ರತೀಕ್ಷಾ ಶ್ರೀನಾಥ್‌

ರಮ್ಯಾ - ಅಂಕಿತಾ ಗೌಡ

ನಾಗೇಗೌಡ - ಸಂದೀಪ್ ನೀನಾಸಂ

ಪರಶು - ಚಿರಂಜೀವಿ

ಜಿಮ್‌ ಸೀನ - ಸುಷ್ಮಿತ್ ಜೈನ್

HT Kannada Desk