DKD ವೇದಿಕೆ ಮೇಲೆ ಶಿವಣ್ಣನ ದೊಡ್ಡಗುಣವನ್ನು ಧ್ರುವ ಸರ್ಜಾ ಹೊಗಳುತ್ತಿದ್ರೆ, ಇತ್ತ ದರ್ಶನ್ ಫ್ಯಾನ್ಸ್ ಗರಂ ಗರಂ!
ಜೀ ಕನ್ನಡದ ಡಾನ್ಸ್ ಕರ್ನಾಟಕ ಡಾನ್ಸ್ ಶೋನಲ್ಲಿ ಧ್ರುವ ಸರ್ಜಾ ಆಗಮಿಸಿದ್ದಾರೆ. ಶಿವಣ್ಣನ ಬಗ್ಗೆ ಮಾತನಾಡಿದ ಧ್ರುವ, ಮಾರ್ಟಿನ್ ರಿಲೀಸ್‌ಗೆ ಶಿವರಾಜ್‌ಕುಮಾರ್ ಅವರು ಮಾಡಿದ ಸಹಾಯ ಎಂಥದ್ದು ಎಂಬುದನ್ನು ಹೇಳಿಕೊಂಡಿದ್ದಾರೆ.
Dhruva Sarja On Shiva Rajkumar: ವಿಶ್ವದಾದ್ಯಂತ ಅಕ್ಟೋಬರ್ 11ರಂದು ಧ್ರುವ ಸರ್ಜಾ ನಾಯಕನಾಗಿ ನಟಿಸಿರುವ ಮಾರ್ಟಿನ್ ಸಿನಿಮಾ ಬಿಡುಗಡೆ ಆಗಲಿದೆ. ಈ ನಿಮಿತ್ತ ಸಿನಿಮಾ ಪ್ರಚಾರ ಕಣಕ್ಕೆ ಇಳಿದಿದೆ ಈ ಸಿನಿಮಾತಂಡ. ಇದೀಗ ಸರಣಿ ಕಾರ್ಯಕ್ರಮಗಳ ನಡುವೆಯೇ ಡಾನ್ಸ್ ಕರ್ನಾಟಕ ಡಾನ್ಸ್ ಶೋಗೆ ಆಗಮಿಸಿದ್ದಾರೆ ನಟ ಧ್ರುವ ಸರ್ಜಾ. ಒಳ್ಳೆಯ ಡಾನ್ಸರ್ ಎನಿಸಿಕೊಂಡಿರುವ ಧ್ರುವ, ಡಿಕೆಡಿ ವೇದಿಕೆಗೆ ಬರುತ್ತಿದ್ದಂತೆ, ಪೊಗರು ಚಿತ್ರದ ಹಾಡಿಗೆ ಭರ್ಜರಿ ಸ್ಟೆಪ್ಸ್ ಹಾಕಿ ನೆರೆದಿದ್ದ ಎಲ್ಲರ ಗಮನ ಸೆಳೆದಿದ್ದಾರೆ. ಸ್ಪರ್ಧಿಗಳು ಥ್ರಿಲ್ ಆದರೆ, ಜಡ್ಜಸ್‌ಗಳು ಮೂಕವಿಸ್ಮಿತರಾಗಿದ್ದಾರೆ. ಶಿವಣ್ಣ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದು, ಅವರ ದೊಡ್ಗುಣವನ್ನು ವಿವರಿಸಿದ್ದಾರೆ.
ಈ ಸಲದ ಡಾನ್ಸ್ ಕರ್ನಾಟಕ ಡಾನ್ಸ್ ವೇದಿಕೆಗೆ ಬಂದ ಧ್ರುವ ಸರ್ಜಾ, ಮಾರ್ಟಿನ್ ಸಿನಿಮಾ ಬಿಡುಗಡೆಗೆ ಮುಖ್ಯ ಕಾರಣವೇ ಶಿವಣ್ಣ ಎಂದು ಹೇಳಿದ್ದಾರೆ. ಅದಕ್ಕೂ ಮೊದಲು ಧ್ರುವ ಎಂಟ್ರಿಯಾಗುತ್ತಿದ್ದಂತೆ, ಶಿವಣ್ಣ ಸಹ ಯುವ ನಟನ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. "ತುಂಬ ಹಾರ್ಡ್‌ವರ್ಕರ್, ಆಕ್ಷನ್ ಚೆನ್ನಾಗಿ ಮಾಡ್ತಾರೆ. ಡಾನ್ಸ್ ಚೆನ್ನಾಗಿ ಮಾಡ್ತಾನೆ. ನಮಗೇನು ಖುಷಿ ಅಂದರೆ, ಯಂಗ್‌ಸ್ಟರ್ ಗ್ರೂಪ್‌ನಲ್ಲಿ ಅಪ್ಪು, ಧ್ರುವ ಒನ್ ಆಫ್ ದಿ ಬೆಸ್ಟ್ ಡಾನ್ಸರ್ಸ್" ಎಂದು ಶಿವಣ್ಣ ಧ್ರುವ ಬಗ್ಗೆ ಮಾತನಾಡಿದ್ದಾರೆ.
ಶಿವಣ್ಣನ ಬಗ್ಗೆ ಧ್ರುವ ಹೇಳಿದ್ದೇನು?
ಬಳಿಕ ಶಿವಣ್ಣ ಮತ್ತು ದೊಡ್ಮನೆಯ ಬಗ್ಗೆ ಧ್ರುವ ಮನಬಿಚ್ಚಿ ಮಾತನಾಡಿದ್ದಾರೆ. "ಭೈರತಿ ರಣಗಲ್ ಸಿನಿಮಾ ಅಕ್ಟೋಬರ್ 4ಕ್ಕೆ ರಿಲೀಸ್ ಅಂತ ಘೋಷಣೆ ಆಯ್ತು. ನಾನು ಏನ್ ಮಾಡೋದಯ್ಯ ಅಂತ ತಲೆ ಮೇಲೆ ಕೈಹೊತ್ತು ಕುಳಿತೆ. ಮತ್ತೆ ಚಿತ್ರಮಂದಿರಗಳ ಸಮಸ್ಯೆ ಆಗುತ್ತೆ ಅಂತ ಅನ್ಕೊಂಡು, ನೇರವಾಗಿ ಅಣ್ಣನಿಗೆ (ಶಿವರಾಜ್‌ಕುಮಾರ್) ಫೋನ್ ಮಾಡಿದೆ. ಹೇಳಮ್ಮ.. ಅಂದ್ರು. ಅಣ್ಣ ಭೈರತಿ ರಣಗಲ್ ಸಿನಿಮಾ ರಿಲೀಸ್ ಮಾಡ್ತಿದೀರಾ? ರಿಲೀಸ್ ಮಾಡಿದ್ರೆ ನಮಗೆ ಚಿತ್ರಮಂದಿರಗಳ ಪ್ರಾಬ್ಲಂ ಆಗುತ್ತೆ ಅಂದೆ. ಸರಿ ನಾನು ಸಂಜೆ ಫೋನ್ ಮಾಡ್ತೀನಿ ಅಂತ ಇಟ್ರು"
ಸರಿಯಾಗಿ ಸಂಜೆ 5 ಗಂಟೆಗೆ ಫೋನ್ ಬಂತು. ನೀವು ನನ್ನ ಕುಟುಂಬ ಇದ್ದಂತೆ, ಒಂದು ತಿಂಗಳು ಮುಂದಕ್ಕೆ ಹೋಗ್ತಿನಿ. ಮಾರ್ಟಿನ್ ಸಿನಿಮಾ ಚೆನ್ನಾಗಾಗಲಿ ಅಂದ್ರು. ಇದರಿಂದ ನಾನು ಏನು ಕಲಿತೀನಿ ಅಂದ್ರೆ, ನಾವುಗಳು ಇಂಡಸ್ಟ್ರಿನಾ ಮುಂದಕ್ಕೆ ತಗೊಂಡು ಹೋಗ್ತಿವಿ ಅಂತ ಮುಂದಕ್ಕೆ ತಗೊಂಡು ಹೋಗಿ, ಮೇಲಕ್ಕೆ ತಗೊಂಡು ಇಟ್ಟು ಬಿಟ್ಟಿದ್ದಾರೆ. ಇನ್ನು ನಾವು ಅದನ್ನು ಹತ್ತಿಕೊಂಡು ಹೋದರೆ ಸಾಕು" ಎಂದು ಹೇಳುತ್ತಲೇ ಶಿವಣ್ಣನ ಬಳಿ ತೆರಳಿ ಅವರ ಕಾಲು ಮುಟ್ಟಿ ಆಶೀರ್ವಾದ ಪಡೆದಿದ್ದಾರೆ.
ಧ್ರುವ ವಿರುದ್ಧ ದರ್ಶನ್ ಫ್ಯಾನ್ಸ್ ಗರಂ
ಸೋಷಿಯಲ್ ಮೀಡಿಯಾದಲ್ಲಿ ಸ್ಟಾರ್ ವಾರ್ ನಡೆಯುತ್ತಲೇ ಇದೆ. ಅದರಲ್ಲೂ ಇತ್ತೀಚಿನ ಕೆಲ ತಿಂಗಳಿಂದ ನಟ ದರ್ಶನ್ ಮತ್ತು ಧ್ರುವ ಸರ್ಜಾ ಫ್ಯಾನ್ಸ್ ವಾರ ಚೂರು ಅತಿಯಾಗುತ್ತಿದೆ. ನಟ ಧ್ರುವ ಸರ್ಜಾ ಸಹ ಪರೋಕ್ಷವಾಗಿ ದರ್ಶನ್ ಮತ್ತವರ ಫ್ಯಾನ್ಸ್‌ಗೆ ಮಾತಿನಲ್ಲಿಯೇ ಉತ್ತರ ಕೊಡುತ್ತಲೇ ಬಂದಿದ್ದಾರೆ. ಇದೀಗ ಡಿಕೆಡಿ ವೇದಿಕೆ ಮೇಲೆ ಶಿವಣ್ಣನ ಜತೆ ಕಾಣಿಸಿಕೊಂಡಿದ್ದೇ ತಡ, ದರ್ಶನ್ ಫ್ಯಾನ್ಸ್ ಕೊಂಚ ಗರಂ ಆಗಿದ್ದಾರೆ. ಬಗೆಬಗೆ ಕಾಮೆಂಟ್ ಪೋಸ್ಟ್ ಮಾಡುತ್ತಿದ್ದಾರೆ.
- ಬಕೆಟ್ ರಾಜ ನೀನು ಡಿ ಬಾಸ್ ಅಣ್ಣಾವ್ರ ಜೊತೆ ಇದ್ದು ಇವಾಗ ಶಿವಣ್ಣನ ಹೊಗಳತಾ. ಇದಾನೆ ಬಕೆಟ್ ರಾಜ ನೀನು
- ಮೂವಿ ರಿಲೀಸ್ ಟೈಮ್ ಬಂದ್ರೆ ಈ ತರ ಬಕೆಟ್ ಹಿಡಿಯೋದು ಜಿಂಗ್ ಜಕ್ಕ ಮಾಡೋದು ಅಣ್ಣಾಗೆ ಹೊಸದು ಏನು ಇಲ್ಲ , ಒಳ್ಳೆ ಮೂವಿ ಮಾಡುದ್ರೆ ಜನ ಬರ್ತಾರೆ ಜಾತ್ರೆ ಮಾಡುದ್ರೆ ಜಾತ್ರೆ ನಲ್ಲಿ ಹೋಗಿ ಈ ತರ ಜಾತ್ರೆ ಡ್ಯಾನ್ಸ್ ಮಾಡಬೇಕು
- ಬಕೆಟ್ ಹಿಡಿಯೋದು ಅಂದರೆ ಹೇಗಿನಾ.. ಹೀಗೆ ನೂರಾರು ಕಾಮೆಂಟ್ ಮೂಲಕವೇ ಧ್ರುವ ಸರ್ಜಾ ಅವರನ್ನು ಮತ್ತು ಅವರ ಅಭಿಮಾನಿಗಳ ಕಾಲೆಳೆದಿದ್ದಾರೆ ದರ್ಶನ್ ಫ್ಯಾನ್ಸ್.