ಸುಬ್ಬು-ಶ್ರಾವಣಿ ಪ್ರಶ್ನೆಗಳಿಗೆ ಸಾಲಿಗ್ರಾಮದಲ್ಲಿ ಸಿಗುತ್ತಾ ಉತ್ತರ? ಮನೆಬಿಟ್ಟು ಹೋಗುವ ನಿರ್ಧಾರ ಮಾಡಿದ ವರ-ವರದ; ಶ್ರಾವಣಿ ಸುಬ್ರಹ್ಮಣ್ಯ
Shravani Subramanya Kannada Serial Today Episode August 6th: ʼಶ್ರಾವಣಿ ಸುಬ್ರಹ್ಮಣ್ಯʼ ಧಾರಾವಾಹಿಯ ಸೋಮವಾರದ ಎಪಿಸೋಡ್‌ನಲ್ಲಿ ಕೊನೆಗೂ ಅಪ್ಪನೆದುರು ಪ್ರತ್ಯಕ್ಷಳಾದ್ಲು ಶ್ರಾವಣಿ. ಮನೆ ಬಿಟ್ಟು ಓಡಿ ಹೋಗಿ ಬದುಕು ಕಟ್ಟಿಕೊಳ್ಳುವ ನಿರ್ಧಾರ ಮಾಡಿದ ವರದ-ವರಲಕ್ಷ್ಮೀ. ಸುಬ್ಬುವನ್ನು ಮನೆಯಿಂದ ಹೊರ ಕಳಿಸುವ ಪ್ರಯತ್ನದಲ್ಲಿ ಶ್ರಾವಣಿ.
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ನಿನ್ನೆಯ (ಆಗಸ್ಟ್ 6ರ) ಸಂಚಿಕೆಯಲ್ಲಿ ರೆಸಾರ್ಟ್‌ನಲ್ಲಿ ಬಂಧಿಯಾಗಿರುವ ಸುಬ್ಬು-ಶ್ರಾವಣಿ ರೌಡಿಗಳ ಭಯದಲ್ಲೇ ಕಾಲ ಕಳೆಯುತ್ತಿರುತ್ತಾರೆ. ಊಟ ಮಾಡಿದ ಮೇಲೆ ಇನ್ನೇನು ಹೊರಡಬೇಕು ಎಂದುಕೊಂಡರೂ ಓನರ್ ಬಿಡುವುದಿಲ್ಲ. ಇದೇ ಟೆನ್‌ಷನ್ ಕೂತಿರುವಾಗ ರೆಸಾರ್ಟ್ ಹೊರಗಡೆಯಿಂದ ʼಅಣ್ಣ ಬೈಕ್ ಇಲ್ಲೇ ಇದೆʼ ಎಂಬ ಕೂಗು ಕೇಳಿಸುತ್ತದೆ. ಶ್ರಾವಣಿ-ಸುಬ್ರಹ್ಮಣ್ಯ ರೆಸಾರ್ಟ್‌ನಲ್ಲೇ ಇರುವುದು ಪಕ್ಕಾ ಮಾಡಿಕೊಂಡ ರೌಡಿಗಳು ಬಾಗಿಲ ಮುಂದೆ ಬಂದು ನಿಲ್ಲುತ್ತಾರೆ. ಅವರು ಇನ್ನೇನು ಒಳಗಡೆ ಬರಬೇಕು ಎನ್ನುವಾಗ ಓನರ್ ಕೋವಿ ಹಿಡಿದು ಅವರ ಮುಂದೆ ನಿಲ್ಲುತ್ತಾರೆ. ಮಾತ್ರವಲ್ಲ ಒಳಗಡೆ ಬಾರದಂತೆ ತಡೆಯುತ್ತಾರೆ. ಅವರಿಬ್ಬರ ಸುದ್ದಿಗೆ ಹೋದರೆ ನಾನು ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎನ್ನುವ ರೆಸಾರ್ಟ್ ಓನರ್ ಗುಂಡು ಹಾರಿಸಿ ರೌಡಿಗಳನ್ನು ಬೆದರಿಸುತ್ತಾರೆ, ಅಲ್ಲದೇ ಅವರು ಅಲ್ಲಿಂದ ಓಡಿ ಹೋಗುವಂತೆ ಮಾಡುತ್ತಾರೆ.
ಓನರ್ ತಮ್ಮ ಪರ ಇರುವುದು ನೋಡಿ ಖುಷಿಯಾಗುತ್ತಾರೆ ಶ್ರಾವಣಿ-ಸುಬ್ರಹ್ಮಣ್ಯ. ಅವರನ್ನು ಹೊರಗೆ ಕರೆಯುವ ಓನರ್ ನೀವಿಬ್ಬರು ಗಂಡ-ಹೆಂಡತಿ ಅಲ್ಲ ಎನ್ನುವುದು ನನಗೆ ಗೊತ್ತಿತ್ತು, ಅಲ್ಲದೇ ನೀವು ಪ್ರೇಮಿಗಳು ಅಂತಾನೂ ನನಗೆ ಗೊತ್ತು. ನಿಮ್ಮಿಬ್ಬರ ಜೋಡಿ ತುಂಬಾ ಚೆನ್ನಾಗಿದೆ. ನೀವು ಯಾವುದೇ ಕಾರಣಕ್ಕೂ ಒಬ್ಬರನ್ನ ಒಬ್ಬರು ಬಿಟ್ಟು ಕೊಡಬೇಡಿ. ಇಬ್ಬರೂ ಆದಷ್ಟೂ ಬೇಗ ಮದುವೆಯಾಗಿ. ನಿಮಗೆ ಯಾವುದೇ ತೊಂದರೆ ಎದುರಾದರೂ ನನ್ನ ಬಳಿಗೆ ಬನ್ನಿ ಎಂದು ಶುಭ ಹಾರೈಸಿ ಕಳುಹಿಸುತ್ತಾರೆ, ಮಾತ್ರವಲ್ಲ ಸುಬ್ಬು ಗಾಡಿಗೆ ಫುಲ್ ಟ್ಯಾಂಕ್ ಪೆಟ್ರೋಲ್ ಕೂಡ ಹಾಕಿಸಿ ಕಳುಹಿಸಿಕೊಡುತ್ತಾರೆ.
ರೂಮ್ ಬಾಗಿಲ ಬಳಿ ವೀರೇಂದ್ರ, ಗಾಬರಿಯಲ್ಲಿ ಪಿಂಕಿ
ಮಗಳನ್ನು ಹುಡುಕುತ್ತಾ ರೂಮ್ ಬಾಗಿಲ ಬಳಿಗೆ ಬರುವ ವೀರೇಂದ್ರ ಹೊರಗಿನಿಂದ ಕರೆಯುತ್ತಾರೆ. ಆಗ ಗಾಬರಿಗೊಳ್ಳುವ ಪಿಂಕಿ ಅಕ್ಕ ರೆಕಾರ್ಡ್ ಮಾಡಿ ಕೊಟ್ಟಿದ್ದೆನ್ನೆಲ್ಲಾ ಪ್ಲೇ ಮಾಡುತ್ತಾಳೆ. ಅಷ್ಟೊತ್ತಿಗೆ ಬಾಗಿಲು ಮುಂದೆ ಸುರೇಂದ್ರ-ವಂದನಾ ಕೂಡ ಬಂದು ನಿಲ್ಲುತ್ತಾರೆ. ಶ್ರಾವಣಿ ಬಾಗಿಲು ತೆಗೆಯದಿದ್ದಾಗ ಪಿಂಕಿ ಬಳಿ ಬಾಗಿಲು ತೆಗೆಯುವಂತೆ ಹೇಳುತ್ತಾರೆ ದೊಡ್ಡಪ್ಪ. ಗಾಬರಿಯಲ್ಲೇ ಬಾಗಿಲು ತೆಗೆಯುವ ಪಿಂಕಿ ಬಳಿ ಶ್ರಾವಣಿ ಎಲ್ಲಿ ಕೇಳಿದಾಗ ಅವಳು ತಡಬಡಾಯಿಸುತ್ತಾಳೆ. ಅಷ್ಟೊತ್ತಿಗೆ ಸರಿಯಾಗಿ ಮನೆ ತಲುಪಿ ರೂಮ್ ಒಳಗೆ ಬಂದಿರುವ ಶ್ರಾವಣಿ ಹೊರ ಬರುತ್ತಾಳೆ. ಇದರಿಂದ ಪಿಂಕಿ ನಿಟ್ಟುಸಿರು ಬಿಡುತ್ತಾಳೆ. ಚಿಕ್ಕಮ್ಮ ಶ್ರಾವಣಿ ಬಳಿ ಬೆಳಿಗ್ಗೆಯಿಂದ ಯಾಕೆ ಹೊರಗಡೆ ಬಂದಿಲ್ಲ ಎಂದು ಕೇಳಿದಾಗ ನಾನು ಪಿಂಕಿ ಆಟ ಆಡ್ತಾ ಇದ್ವಿ, ಈಗಲೂ ಕಣ್ಣಮುಚ್ಚಾಲೆ ಆಡ್ತಾ ಇದ್ವಿʼ ಎಂದು ಸುಳ್ಳು ಹೇಳಿ ತಾನು ಮನೆಯಲ್ಲೇ ಇದ್ದೆ ಎಂಬುದನ್ನು ಮನೆಯವರಿಗೆ ನಂಬಿಸುತ್ತಾಳೆ. ಮಗಳನ್ನು ಕೋಣೆಯೊಳಗೆ ನೋಡಿದ ವೀರೇಂದ್ರ ಅಲ್ಲಿಂದ ಹೊರಟು ಹೋಗುತ್ತಾರೆ. ಮಾತ್ರವಲ್ಲ ವಿಜಯಾಂಬಿಕಾಗೆ ವಾರ್ನಿಂಗ್ ಮಾಡುತ್ತಾರೆ. ಮಗ ಹೇಳಿದ್ದನ್ನೆಲ್ಲಾ ಕೇಳಿಕೊಂಡು ಸುಮ್ಮನೆ ಇಲ್ಲಸಲ್ಲದ್ದನ್ನೆಲ್ಲಾ ಹೇಳಬೇಡ ಎಂದು ಗಂಭೀರವಾಗಿ ಹೇಳಿ ಹೋಗುತ್ತಾರೆ.
ಮನೆ ಬಿಟ್ಟು ಹೋಗಲು ಯೋಚಿಸುವ ವರಲಕ್ಷ್ಮೀ
ತನ್ನ ಪ್ರೀತಿಗೆ ಮನೆಯವರ ಸರ್ಪೋಟ್ ಸಿಗುವುದಿಲ್ಲ ಎಂದು ಅರಿತ ವರಲಕ್ಷ್ಮೀ ವರದನಿಗೆ ಕಾಲ್ ಮಾಡುತ್ತಾಳೆ. ಅಲ್ಲದೇ ʼನಮ್ಮ ಪ್ರೀತಿಯನ್ನು ನಾವೇ ಉಳಿಸಿಕೊಳ್ಳಬೇಕು ವರದ. ನನಗೆ ಯಾರೂ ನಮ್ಮ ಪ್ರೀತಿಗೆ ಸರ್ಪೋಟ್ ಮಾಡ್ತಾರೆ ಅಂತ ಅನ್ನಿಸ್ತಾ ಇಲ್ಲ, ನಾವು ಮನೆ ಬಿಟ್ಟು ಓಡಿ ಹೋಗೋಣʼ ಎಂದು ದೃಢನಿರ್ಧಾರದಲ್ಲಿ ಹೇಳುತ್ತಾಳೆ. ಇತ್ತ ಮೊದಲು ಮನೆಯ ಬಿಟ್ಟು ಹೋಗೋದು ಬೇಡ ಎನ್ನುತ್ತಿದ್ದ ವರಲಕ್ಷ್ಮೀ ಈಗ ಮನೆಬಿಟ್ಟು ಹೋಗುವ ವಿಚಾರ ಮಾತನಾಡುತ್ತಿರುವುದು ಕೇಳಿಸಿಕೊಂಡ ವರದ ಶಾಕ್ ಆಗುತ್ತಾನೆ. ಆದರೆ ಈ ವಿಚಾರದಲ್ಲಿ ವರದನಿಗೂ ಗೊಂದಲವಿರುತ್ತದೆ. ಈ ಬಗ್ಗೆ ಯೋಚಿಸುವಂತೆ ಹೇಳಿ ಪೋನ್ ಇಡುತ್ತಾಳೆ ವರಲಕ್ಷ್ಮೀ.
ಸುಬ್ಬು-ಶ್ರಾವಣಿ ಪ್ರಶ್ನೆಗೆ ಸಾಲಿಗ್ರಾಮದಲ್ಲಿ ಉತ್ತರ ಸಿಗುತ್ತಾ
ರೂಮ್‌ನಲ್ಲಿ ಯೋಚಿಸುತ್ತಾ ಕೂರುವ ಸುಬ್ಬು-ಶ್ರಾವಣಿ ಸಾಲಿಗ್ರಾಮ ಎಂದರೆ ಒಬ್ಬೊಬ್ಬರು ಒಂದೊಂದು ರೀತಿ ಯಾಕಾಡುತ್ತಾರೆ ಎಂದು ಯೋಚಿಸುತ್ತಾರೆ. ವೀರೇಂದ್ರ ಸಾಲಿಗ್ರಾಮ ಎಂದರೆ ಸಂತೋಷ ಪಡುತ್ತಾರೆ, ಪದ್ಮನಾಭ ಸಿಟ್ಟಾಗುತ್ತಾರೆ, ವಿಜಯಾಂಬಿಕ ಗಾಬರಿಯಾಗುತ್ತಾರೆ, ಫಾರ್ಮ್‌ಹೌಸ್‌ನಲ್ಲಿದ್ದ ವ್ಯಕ್ತಿ ಖುಷಿಪಡುತ್ತಾರೆ. ಇದೆಲ್ಲಾ ಯಾಕೆ, ಸಾಲಿಗ್ರಾಮದಲ್ಲಿ ಏನಿದೆ ಎಂದು ತಿಳಿಯದೇ ಗೊಂದಲಕ್ಕೆ ಒಳಗಾಗುತ್ತಾರೆ. ಆಗ ಸುಬ್ಬು ಶ್ರಾವಣಿಗೆ ʼಮೇಡಂ, ಇದಕ್ಕೆಲ್ಲಾ ನಾವು ಸಾಲಿಗ್ರಾಮಕ್ಕೆ ಹೋಗುವುದೇ ಪರಿಹಾರ. ಆದಷ್ಟು ಬೇಗ ಸಾಲಿಗ್ರಾಮಕ್ಕೆ ಹೋಗುತ್ತೇವಲ್ಲ. ಅಲ್ಲಿಯವರೆಗೂ ಈ ಮಾತುಗಳು ಯಾವುದೇ ಬೇಡʼ ಎಂದು ಹೇಳಿ ಸುಮ್ಮನಾಗಿಸುತ್ತಾನೆ.
ಆದರೆ ಈಗ ಸುಬ್ಬು ಶ್ರಾವಣಿ ಮುಂದೆ ಹೊಸ ಸವಾಲೊಂದು ಎದುರಾಗುತ್ತದೆ. ಅದೇನೆಂದರೆ ಸುಬ್ಬು ಮನೆಯಿಂದ ಹೊರ ಹೋಗುವುದು ಹೇಗೆ ಎಂಬುದು. ಇತ್ತ ವಿಜಯಾಂಬಿಕಾ ಫಾರ್ಮ್‌ಹೌಸ್‌ಗೆ ಬಂದಿದ್ದ ಜೋಡಿ ಯಾರು ಎಂಬುದು ತಿಳಿಯದೇ ಗೊಂದಲಕ್ಕೆ ಒಳಗಾಗುತ್ತಾಳೆ. ಆ ಜೋಡಿ ರೌಡಿಗಳ ಕೈಯಿಂದ ತಪ್ಪಿಸಿಕೊಂಡಿದ್ದು ಕೇಳಿ ಇನ್ನಷ್ಟು ಕೋಪಗೊಳ್ಳುತ್ತಾಳೆ ವಿಜಯಾಂಬಿಕಾ.
ಸುಬ್ಬು ಶ್ರಾವಣಿ ಮನೆಯಿಂದ ಯಾರಿಗೂ ತಿಳಿಯದಂತೆ ಹೊರ ಹೋಗ್ತಾನಾ, ವರ-ವರದ ಮನೆ ಬಿಟ್ಟು ಹೋಗ್ತಾರಾ, ವಿಜಯಾಂಬಿಕಾಗೆ ಫಾರ್ಮ್‌ಹೌಸ್‌ಗೆ ಬಂದಿದ್ದು ಸುಬ್ಬು-ಶ್ರಾವಣಿ ಅನ್ನೋದು ತಿಳಿಯುತ್ತಾ ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.