ಸಾಲಿಗ್ರಾಮದ ರಹಸ್ಯ ತಿಳಿದುಕೊಳ್ಳುವ ಹಟದಲ್ಲಿ ಸುಬ್ಬು; ಶ್ರಾವಣಿ ಮನಸ್ಸಿನ ಗೊಂದಲಕ್ಕೆ ಉತ್ತರ ಸಿಗುತ್ತಾ? ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ
Shravani Subramanya Kannada Serial Today Episode August 7th: ʼಶ್ರಾವಣಿ ಸುಬ್ರಹ್ಮಣ್ಯʼ ಧಾರಾವಾಹಿಯ ಮಂಗಳವಾರದ ಎಪಿಸೋಡ್‌ನಲ್ಲಿ ಶ್ರೀವಲ್ಲಿ ಮೇಲೆ ಶ್ರಾವಣಿಗೆ ಶುರುವಾಗುತ್ತೆ ಅಸೂಯೆ, ಸುಬ್ಬು ಸೇವೆ ಮಾಡುವ ಅಪ್ಪ-ಅಮ್ಮ. ಸಾಲಿಗ್ರಾಮ ರಹಸ್ಯ ತಿಳಿಯುವ ಹಟದಲ್ಲಿ ಸುಬ್ಬು. ಅಣ್ಣನ ಮೇಲಿನ ವರಳ ಅಭಿಪ್ರಾಯ ಬದಲಾಗುತ್ತಾ?
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ನಿನ್ನೆಯ (ಆಗಸ್ಟ್ 7ರ) ಸಂಚಿಕೆಯಲ್ಲಿ ಸುಬ್ಬುವನ್ನು ತನ್ನ ಮನೆಯಲ್ಲೇ ಉಳಿದುಕೊಂಡು ಬೆಳಗೆದ್ದು ಹೋಗುವಂತೆ ಹೇಳುತ್ತಾಳೆ ಶ್ರಾವಣಿ. ಮೊದಲು ಅದಕ್ಕೆ ಒಪ್ಪುತ್ತಾನೆ ಸುಬ್ಬು. ಶ್ರಾವಣಿ ಕಾಲಿಗೆ ಚುಚ್ಚಿರುವ ಮುಳ್ಳನ್ನು ಪ್ರೀತಿಯಿಂದಲೇ ತೆಗೆಯುತ್ತಾನೆ ಸುಬ್ಬು. ನಂತರ ಅಪ್ಪ-ಅಮ್ಮನ ಭಯ ಅರ್ಥವಾಗಿ ಮನೆಗೆ ಹೋಗಬೇಕು ಎನ್ನುವ ಹಂಬಲ ವ್ಯಕ್ತಪಡಿಸುತ್ತಾರೆ. ಅಷ್ಟೊತ್ತಿಗೆ ಮನೆಯಿಂದ ಕಾಲ್ ಬರುತ್ತದೆ. ಶ್ರಾವಣಿ ಹಠಕ್ಕೆ ಮನೆಗೆ ಬರುವುದಿಲ್ಲ ಎಂದು ಹೇಳುವ ಸುಬ್ಬು ಶ್ರೀವಲ್ಲಿ ಕಾಲ್ ಮಾಡಿದ್ದೆ ತಡ ಮನೆಗೆ ಹೊರಡುತ್ತಾನೆ. ಶ್ರೀವಲ್ಲಿ ಸುಬ್ಬು ಜೊತೆ ಪ್ರೀತಿಯಿಂದ ಮಾತನಾಡುವುದನ್ನು ಕೇಳಿ ಶ್ರಾವಣಿ ಉರಿದು ಬೀಳುತ್ತಾಳೆ. ಕೊನೆಗೆ ಸುಬ್ಬವನ್ನು ಮನೆಗೆ ಕಳುಹಿಸಲು ಸಿದ್ಧರಾಗುತ್ತಾಳೆ.
ಕಳ್ಳ ಬೆಕ್ಕಿನಂತೆ ಶ್ರಾವಣಿ ಮನೆಯಿಂದ ಹೊರ ಬರುವ ಸುಬ್ಬು
ಮನೆಗೆ ಹೊರಟು ನಿಂತ ಸುಬ್ಬುವನ್ನು ಬಾಗಿಲ ತನಕ ಬಿಟ್ಟು ಬರಲು ರೆಡಿ ಆಗುತ್ತಾಳೆ ಶ್ರಾವಣಿ. ಮನೆಯಲ್ಲಿ ಎಲ್ಲರೂ ಮಲಗಿರುವುದು ನೋಡಿ ನಿಧಾನಕ್ಕೆ ಹೊರಗೆ ಕರೆದುಕೊಂಡು ಬರುತ್ತಾಳೆ. ಇಬ್ಬರೂ ಕಳ್ಳ ಬೆಕ್ಕಿನಂತೆ ಕೆಳಗಿಳಿದು ಬಂದು ಹೊರಗಡೆ ಇಣುಕುತ್ತಿರುತ್ತಾರೆ. ಅಷ್ಟೊತ್ತಿಗೆ ಶ್ರಾವಣಿ ಹಿಂದೆ ನಿಂತಿದ್ದ ಸುಬ್ಬುಗೆ ಅವಳ ಕೂದಲು ಮೂಗಿಗೆ ತಾಕಿ ಸೀನು ಬರುತ್ತದೆ. ಆದರೆ ಮೊದಲ ಬಾರಿ ನಿಯಂತ್ರಿಸುವ ಶ್ರಾವಣಿಗೆ ಎರಡನೇ ಬಾರಿ ನಿಯಂತ್ರಿಸಲು ಸಾಧ್ಯವಾಗುವುದಿಲ್ಲ. ಸುಬ್ಬು ಸೀನಿದ್ದು ನೋಡಿ ಮತ್ತೆ ಕೋಪಗೊಂಡು ಕಿರುಚಾಡುತ್ತಾಳೆ ಶ್ರಾವಣಿ. ಅಷ್ಟೊತ್ತಿಗೆ ಮೇಲಿಂದ ಚಿಕ್ಕಮ್ಮ ಶ್ರಾವಣಿ ಎಂದು ಕೂಗುವುದು ಕೇಳುತ್ತದೆ. ಹಾಗೂ ಹೀಗೂ ಬೆಕ್ಕಿನಂತೆ ನಾಟಕ ಮಾಡಿ ಸುಬ್ಬುವನ್ನು ಮನೆ ಬಾಗಿಲಿನಿಂದ ಹೊರ ಕಳುಹಿಸುವಲ್ಲಿ ಯಶಸ್ಸಿಯಾಗುತ್ತಾಳೆ ಶ್ರಾವಣಿ. ಆದರೂ ಅವನು ಶ್ರೀವಲ್ಲಿ ಜೊತೆ ಕ್ಲೋಸ್ ಆಗಿರುವುದು ಶ್ರಾವಣಿಗೆ ಸಹಿಸಲು ಸಾಧ್ಯವಾಗುವುದಿಲ್ಲ.
ಮನಸ್ಸಿನ ಮಾತು ಕೇಳು ಎಂದು ಶ್ರಾವಣಿಗೆ ಬುದ್ಧಿವಾದ ಹೇಳುವ ಚಿಕ್ಕಮ್ಮ
ಮರುದಿನ ಬೆಳಿಗ್ಗೆ ತಾನು ಸುಬ್ಬು ಬಗ್ಗೆ ಯಾಕಿಷ್ಟು ಯೋಚನೆ ಮಾಡ್ತಾ ಇದೀನಿ, ಸುಬ್ಬು ಶ್ರೀವಲ್ಲಿ ಜೊತೆ ಮಾತನಾಡಿದ್ರೆ ನನಗೇನು ತೊಂದರೆ ಎಂದು ಯೋಚಿಸುತ್ತಾ ಮನಸ್ಸು ಕೆಡಿಸಿಕೊಂಡಿರುತ್ತಾಳೆ. ಅಷ್ಟೊತ್ತಿಗೆ ಆಟವಾಡಲು ಬರುವಂತೆ ಕರೆಯಲು ಬರುವ ಪಿಂಕಿ ಮೇಲೆ ರೇಗುತ್ತಾಳೆ ಶ್ರಾವಣಿ. ಆಗ ಅಲ್ಲಿಗೆ ಬರುವ ಚಿಕ್ಕಮ್ಮ ವಂದನಾ, ಶ್ರಾವಣಿ ನಿನ್ನ ಮನಸ್ಸಿಗೆ ಏನೋ ಸಮಸ್ಯೆ ಆಗಿದೆ. ಇದು ಏನು ಎಂಬುದು ನಿನಗೆ ಅರ್ಥ ಆಗುತ್ತಿಲ್ಲ. ನಿನ್ನ ಮನಸ್ಸಿಗೆ ಇಷ್ಟವಾಗದೇ ಇರುವುದು ಯಾವುದೋ ನಡೆಯುತ್ತದೆ. ಅದು ಏನು, ನಿನ್ನ ಅಸಮಾಧಾನಕ್ಕೆ ಕಾರಣ ಏನು ಎಂಬುದನ್ನು ನಿನ್ನ ಮನಸ್ಸಿಗೆ ಕೇಳು. ನಿನ್ನ ಮನಸ್ಸಿನ ಮಾತನ್ನು ಆಲಿಸು ಎಂದು ಶ್ರಾವಣಿಗೆ ಸಲಹೆ ನೀಡುತ್ತಾರೆ.
ಸಾಲಿಗ್ರಾಮದ ರಹಸ್ಯ ತಿಳಿಯುವ ಹಟದಲ್ಲಿ ಸುಬ್ಬು
ಮನೆಯಲ್ಲಿ ಮಲಗಿ ಬೆಳಿಗ್ಗೆ ಎದ್ದಾಗ ಅಪ್ಪ ತನ್ನ ಕಾಲು ಒತ್ತುತ್ತಿರುವುದು ನೋಡಿ ಬೇಸರ ಮಾಡಿಕೊಳ್ಳುತ್ತಾನೆ ಸುಬ್ಬು, ಕಾಲು ಒತ್ತಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸುವ ಸುಬ್ಬು ʼಅಪ್ಪ, ನೀವ್ಯಾಕೆ ನನ್ನ ಕಾಲು ಒತ್ತುತ್ತಾ ಇದ್ದೀರಾ, ಬಿಡಿ ಅಪ್ಪ. ನೀವು ಹೀಗೆಲ್ಲಾ ಮಾಡಬೇಡಿʼ ಎಂದು ಬೇಸರ ಮಿಶ್ರಿತ ಕೋಪದಲ್ಲಿ ಹೇಳುತ್ತಾನೆ. ಆಗ ಅಲ್ಲಿಗೆ ಬರುವ ಸುಬ್ಬು ತಾಯಿ ನೀನು ಈ ಮನೆಗಾಗಿ ಹಗಲು, ರಾತ್ರಿ ದುಡಿತಾ ಇದೀಯಾ, ನಿನ್ನ ಕಾಲುಗಳು ಈ ಮನೆಗಾಗಿ ಓಡಾಡುತ್ತಿವೆ. ಹಾಗಿರುವಾಗ ನಾವು ಕಾಲು ಒತ್ತಿದ್ರೆ ತೊಂದರೆ ಏನು ಹೇಳುʼ ಎಂದು ಭಾವುಕರಾಗಿ ಮಾತನಾಡುತ್ತಾರೆ. ಮಾತ್ರವಲ್ಲ ನಿನ್ನೆ ಏನಾದ್ರೂ ಮುಖ್ಯವಾದ ಕೆಲಸ ಇತ್ತಾ ಎಂದು ಪ್ರಶ್ನೆ ಮಾಡುತ್ತಾರೆ. ಆಗ ಅದಕ್ಕೆ ಹೌದು ಎನ್ನುವ ಸುಬ್ಬು ʼತುಂಬಾ ಮುಖ್ಯವಾದ ಕೆಲಸವೊಂದಿತ್ತು ಅಮ್ಮ, ಅದಿನ್ನು ಆರಂಭ ಅಷ್ಟೇ. ಇದನ್ನು ಪೂರ್ತಿ ಮಾಡದೇ ನಾನು ಬಿಡುವುದಿಲ್ಲ. ಯಜಮಾನರಿಗೆ ಹಾಗೂ ಆ ಮನೆಗೆ ಏನು ಆಗಲು ನಾನು ಬಿಡುವುದಿಲ್ಲʼ ಎಂದು ಹೇಳಿ ಸಾಲಿಗ್ರಾಮದ ರಹಸ್ಯ ತಿಳಿದೇ ತಿಳಿಯುತ್ತೇನೆ ಎಂದು ಪಣ ತೊಟ್ಟಂತೆ ಮನಸ್ಸಿನಲ್ಲೇ ಅಂದುಕೊಳ್ಳುತ್ತಾನೆ. ಇತ್ತ ವಿಜಯಾಂಬಿಕಾ ಫಾರ್ಮ್‌ಹೌಸ್‌ಗೆ ಬಂದ ಜೋಡಿ ಯಾರು ಎಂದು ಪತ್ತೆ ಮಾಡುವಲ್ಲಿ ನಿರತಳಾಗಿರುತ್ತಾಳೆ.
ಸುಬ್ಬು ಸಾಲಿಗ್ರಾಮದ ರಹಸ್ಯದ ಬೆನ್ನು ಹುತ್ತುತ್ತಾನಾ, ವಿಜಯಾಂಬಿಕಾ ಗುಟ್ಟು ಬಯಲಾಗುತ್ತಾ, ಫಾರ್ಮ್‌ಹೌಸ್‌ಗೆ ಬಂದಿದ್ದು ಸುಬ್ಬು-ಶ್ರಾವಣಿ ಎಂಬುದು ವಿಜಯಾಂಬಿಕಾಗೆ ತಿಳಿಯುತ್ತಾ? ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.