ಫಾರ್ಮ್‌ಹೌಸ್‌ಗೆ ಬಂದ ಬೈಕ್ ಬಗ್ಗೆ ವಿಜಯಾಂಬಿಕಾಗೆ ಸಿಕ್ತು ಸುಳಿವು, ಸಿಕ್ಕಿ ಬೀಳ್ತಾನಾ ಸುಬ್ಬು; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ
Shravani Subramanya Kannada Serial Today Episode August 7th: ʼಶ್ರಾವಣಿ ಸುಬ್ರಹ್ಮಣ್ಯʼ ಧಾರಾವಾಹಿಯ ಬುಧವಾರದ ಎಪಿಸೋಡ್‌ನಲ್ಲಿ ಸುಬ್ಬು ಮೇಲೆ ಚೀಟಿ ಎಸೆದ ಶ್ರೀವಲ್ಲಿ, ಸಿಕ್ಕಿದ್ದು ಮಾತ್ರ ಸುಂದರನ ಕೈಗೆ, ಸುಬ್ಬು ಮನೆ ಮುಂದೆ ಮತ್ತೆ ಹೈ ಡ್ರಾಮಾ ಮಾಡಿದ ಇಂದ್ರಮ್ಮ. ವಿಜಯಾಂಬಿಕಾಗೆ ಫಾರ್ಮ್‌ಹೌಸ್‌ಗೆ ಬಂದವರ ಕ್ಲೂ ನೀಡಿದ ರೌಡಿಪಡೆ.
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ನಿನ್ನೆಯ (ಆಗಸ್ಟ್ 7ರ) ಸಂಚಿಕೆಯಲ್ಲಿ ಫಾರ್ಮ್‌ಹೌಸ್‌ಗೆ ಬಂದಿದ್ದು ಯಾರು ಎಂದು ತಿಳಿಯದೇ ತಲೆ ಕೆಡಿಸಿಕೊಂಡಿರುತ್ತಾಳೆ ವಿಜಯಾಂಬಿಕಾ. ರೌಡಿಗಳಿಗೆ ಕಾಲ್ ಮಾಡಿ ಅವರು ಯಾರು ಎಂದು ಕಂಡುಹಿಡಿಯಲೇಬೇಕು, ಅಲ್ಲಿಯವರೆಗೆ ತನಗೆ ನೆಮ್ಮದಿ ಇಲ್ಲ ಎಂದು ಖಡಾಖಂಡಿತವಾಗಿ ಹೇಳುತ್ತಾಳೆ. ಇತ್ತ ರೌಡಿ ಪಡೆ ಫಾರ್ಮ್‌ಹೌಸ್‌ಗೆ ಬಂದವರ ಬಗ್ಗೆ ಏನಾದ್ರೂ ಕ್ಲೂ ಸಿಗಬಹುದಾ ಎಂದು ಯೋಚಿಸುತ್ತಿರುತ್ತಾರೆ. ಅಷ್ಟೊತ್ತಿಗೆ ಸರಿಯಾಗಿ ಅವರಲ್ಲಿ ಒಬ್ಬನಿಗೆ ಸುಬ್ಬು ಗಾಡಿಯ ಮೇಲಿದ್ದ ಆಂಜನೇಯ ಚಿತ್ರ ನೆನಪಿಗೆ ಬರುತ್ತದೆ. ಅವನು ಅದನ್ನು ಇತರರ ಮುಂದೆ ಹೇಳುತ್ತಾನೆ. ಕೂಡಲೇ ಅವರ ತಂಡದ ನಾಯಕ ವಿಜಯಾಂಬಿಕಾಗೆ ಕಾಲ್ ಮಾಡುತ್ತಾನೆ.
ಸುಬ್ಬು ಬೈಕ್ ಅನ್ನೋದು ವಿಜಯಾಂಬಿಕಾಗೆ ತಿಳಿಯುತ್ತಾ?
ಕ್ಲೂ ಸಿಕ್ಕಿದ್ದೇ ತಡ ವಿಜಯಾಂಬಿಕಾಗೆ ಕಾಲ್ ಮಾಡುವ ರೌಡಿ ಬೈಕ್ ಮೇಲೆ ಹನುಮಂತನ ಚಿತ್ರ ಇರುವ ಬಗ್ಗೆ ಹೇಳುತ್ತಾನೆ. ಅಷ್ಟೊತ್ತಿಗೆ ಗೇಟ್ ತೆಗೆದು ಬೈಕ್‌ನಲ್ಲಿ ಮನೆಯೊಳಗೆ ಬರುತ್ತಾನೆ ಸುಬ್ಬು. ಬೈಕ್ ನಿಲ್ಲಿಸುವಾಗ ಎಕ್ಸ್‌ಲೇಟರ್ ಪ್ರಾಬ್ಲಂ ಆಗಿ ಜೋರಾಗಿ ಸದ್ದು ಬರುತ್ತದೆ. ಇದರಿಂದ ವಿಜಯಾಂಬಿಕಾಗೆ ಆ ಕಡೆಯಿಂದ ರೌಡಿ ಏನು ಹೇಳ್ತಾ ಇದಾನೆ ಅನ್ನುವುದು ಕೇಳಿಸುವುದಿಲ್ಲ. ಇತ್ತ ಸುಬ್ಬು ಎಕ್ಸ್‌ಲೇಟರ್ ಸರಿ ಮಾಡಲು ಪರದಾಡುತ್ತಾನೆ. ಏನೇ ಮಾಡಿದ್ರು ಎಕ್ಸ್‌ಲೇಟರ್ ಸರಿಯಾಗುವುದಿಲ್ಲ. ಅತ್ತ ವಿಜಯಾಂಬಿಕಾಗೆ ರೌಡಿ ಹೇಳುತ್ತಿರುವುದು ಕೂಡ ಏನೂ ಕೇಳಿಸುವುದಿಲ್ಲ. ಆಗ ಆ ಕಡೆ ರೌಡಿ ಮೇಡಂ ನಾನು ನಿಮಗೆ ಮೆಸೇಜ್ ಮಾಡ್ತೀನಿ ಅಂತ ಕಾಲ್ ಕಟ್ ಮಾಡ್ತಾನೆ, ಅಷ್ಟೊತ್ತಿಗೆ ಸುಬ್ಬು ಬೈಕ್ ಕೂಡ ಸರಿಯಾಗುತ್ತೆ. ವಿಜಯಾಂಬಿಕಾ ಬೈತಾಳೆ ಅನ್ನುವ ಭಯದಲ್ಲೇ ಒಳಹೋಗುತ್ತಾನೆ ಸುಬ್ಬು.
ಚೀಟಿ ಎಸೆದ ಶ್ರೀವಲ್ಲಿ, ಇಂದ್ರಮ್ಮ ಹೈಡ್ರಾಮಾ
ಸುಬ್ಬು ಮನೆಯಿಂದ ಯಜಮಾನರ ಮನೆಗೆ ಹೊರಡಬೇಕು ಎಂದು ಹೊರ ಬರುವ ಹೊತ್ತಿಗೆ ಶ್ರೀವಲ್ಲಿ ಮನೆ ಸಾಮಾನು ಹಿಡಿದು ಗೇಟ್ ಬಳಿ ಬಂದಿರುತ್ತಾಳೆ. ಸುಬ್ಬುವನ್ನು ಹೇಗಾದ್ರೂ ಮೀಟ್ ಮಾಡಬೇಕು ಎಂದುಕೊಳ್ಳುವ ಅವಳು ಚೀಟಿ ಬರೆದು ಎಸೆಯುತ್ತಾಳೆ. ಆದರೆ ಆ ಚೀಟಿ ಹೋಗಿ ಸುಂದರ ಮೇಲೆ ಬೀಳುತ್ತದೆ. ಸುಂದರ ಆ ಚೀಟಿ ಓದಬೇಕು ಎಂದುಕೊಳ್ಳುವಷ್ಟ್ರರಲ್ಲಿ ಇಲ್ಲಿಗೆ ಬರುವ ಕಾಂತಮ್ಮ ಚೀಟಿ ತೆಗೆದುಕೊಂಡು ಓದುತ್ತಾರೆ. ಆಗ ಆ ಕಡೆಯಿಂದ ಇಂದ್ರಮ್ಮ ಬರುತ್ತಾರೆ. ಇಂದ್ರಮ್ಮನೇ ಚೀಟಿ ಎಸೆದಿದ್ದು ಎಂದುಕೊಂಡು ಕಾಂತಮ್ಮ ಜೋರು ಮಾಡುತ್ತಾಳೆ, ಸುಂದರನೂ ಅವರ ಜೊತೆ ಸೇರಿಕೊಳ್ಳುತ್ತಾನೆ. ಇನ್ನೇನು ಗಲಾಟೆ ಜೋರಾಗುತ್ತೆ ಎಂದು ತಿಳಿದು ಸುಬ್ಬು ಇಬ್ಬರನ್ನೂ ಸಮಾಧಾನ ಮಾಡಿ ಕಳುಹಿಸುತ್ತಾನೆ, ಇದರಿಂದ ಸುಬ್ಬುಗೆ ಮತ್ತೆ ಬೇಸರವಾಗುತ್ತದೆ. ತನ್ನಿಂದಾದ ತಪ್ಪಿಗೆ ಶ್ರೀವಲ್ಲಿ ಸುಬ್ಬು ಬಳಿ ಕಣ್ಣಲ್ಲೇ ಕ್ಷಮೆ ಕೇಳುತ್ತಾಳೆ.
ಸುಬ್ಬು ಬರ್ತ್‌ಡೇ ಆಚರಿಸಲು ಅಪ್ಪ–ಮಗಳ ಪ್ಲಾನ್
ಶ್ರಾವಣಿ ಬಳಿಗೆ ಬರುವ ಸುಬ್ಬು ಫಾರ್ಮ್‌ಹೌಸ್ ಘಟನೆಯ ಬಗ್ಗೆ ಮಾತನಾಡುತ್ತಾನೆ, ವಿಜಯಾಂಬಿಕಾಗೂ ಫಾರ್ಮ್‌ಹೌಸ್‌ನಲ್ಲಿ ಕಟ್ಟಿ ಹಾಕಿರುವ ವ್ಯಕ್ತಿಗೂ ಏನು ಸಂಬಂಧ ಆ ವ್ಯಕ್ತಿ ಯಾರು ಎಂದು ಸುಬ್ಬು, ಶ್ರಾವಣಿ ತಲೆ ಕೆಡಿಸಿಕೊಳ್ಳುತ್ತಾರೆ. ಆದರೆ ಅವರಿಗೆ ಇದಕ್ಕೆ ಉತ್ತರ ಸಿಗುವುದಿಲ್ಲ. ಕೊನೆಗೆ ಅವರು ಆ ವಿಷಯ ಬಿಟ್ಟು ಗಾಡಿ ಎಫ್‌ಸಿ ಬಗ್ಗೆ ಮಾತನಾಡುತ್ತಾರೆ. ಇತ್ತ ವೀರೇಂದ್ರ ತಮ್ಮ ಸುರೇಂದ್ರನ ಬಳಿ ಸುಬ್ಬು ಬರ್ತಡೇಯನ್ನು ತಾವು ಆಚರಿಸಬೇಕು ಎಂದು ಮಾತನಾಡುತ್ತಿರುತ್ತಾರೆ. ಅತ್ತ ಸುಬ್ಬು ಆಧಾರ್ ಕಾರ್ಡ್ ನೋಡುವ ಶ್ರಾವಣಿ ಇನ್ನೇರಡು ದಿನದಲ್ಲಿ ಸುಬ್ಬು ಹುಟ್ಟುಹಬ್ಬ ಇರುವುದನ್ನ ನೋಡುತ್ತಾಳೆ. ಸುಬ್ಬು ಬರ್ತಡೇ ಆಚರಿಸಲು ಮನೆಯ ಹೊರಗೆ ಹೋಗಲು ಪರ್ಮಿಶನ್ ಕೇಳಲು ಬರುತ್ತಾಳೆ ಶ್ರಾವಣಿ.
ವಿಜಯಾಂಬಿಕಾಗೆ ತಿಳಿಯಿತು ಸತ್ಯ!
ರೌಡಿ ಪಡೆ ಕಾಲ್ ಮಾಡಿದ್ದು ಕೇಳಿಸಿದೇ ಇದ್ದಾಗ ಕಾಲ್ ಕಟ್ ಮಾಡುವ ಆತ ವಿಜಯಾಂಬಿಕಾಗೆ ಮೆಸೇಜ್ ಮಾಡಿರುತ್ತಾನೆ, ಮೇಡಂ ಫಾರ್ಮ್‌ಹೌಸ್‌ಗೆ ಬಂದಿದ್ದ ಬೈಕ್ ಮೇಲೆ ಹನುಮಂತನ ಚಿತ್ರವಿತ್ತು ಎಂದು ಮೆಸೇಜ್ ಮಾಡಿರುತ್ತಾರೆ ರೌಡಿ. ಆರಂಭದಲ್ಲಿ ಈ ವಿಷಯದ ಬಗ್ಗೆ ತಲೆ ಕೆಡಿಸಿಕೊಳ್ಳದ ವಿಜಯಾಂಬಿಕಾಗೆ ತಲೆಯಲ್ಲಿ ಏನೋ ಹೊಳೆಯುತ್ತದೆ. ಇದರಿಂದ ಆಕೆ ಗಾಬರಿಯಾಗುತ್ತಾಳೆ.
ಹಾಗಾದ್ರೆ ವಿಜಯಾಂಬಿಕಾಗೆ ಫಾರ್ಮ್‌ಹೌಸ್‌ಗೆ ಬಂದಿದ್ದು ಸುಬ್ಬು ಬೈಕ್ ಅನ್ನೋದು ತಿಳಿಯುತ್ತಾ, ಅಪ್ಪ–ಮಗಳು ಸೇರಿ ಸುಬ್ಬು ಬರ್ತ್‌ಡೇಯನ್ನು ಗ್ರ್ಯಾಂಡ್ ಆಗಿ ಆಚರಿಸ್ತಾರಾ ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.