ಸುಬ್ಬು ಹುಟ್ಟುಹಬ್ಬದ ನೆಪದಲ್ಲಿ ಒಂದಾಗಿದ್ದಾರೆ ಅಪ್ಪ-ಮಗಳು, ವಿಜಯಾಂಬಿಕಾಗೆ ತಪ್ಪಿದ್ದಲ್ಲ ಟೆನ್‌ಷನ್; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ
Shravani Subramanya Kannada Serial Today Episode August 10th: ʼಶ್ರಾವಣಿ ಸುಬ್ರಹ್ಮಣ್ಯʼ ಧಾರಾವಾಹಿಯ ಶುಕ್ರವಾರದ ಎಪಿಸೋಡ್‌ನಲ್ಲಿ ಸುಬ್ಬು ಗಾಡಿ ಮೇಲಿಲ್ಲ ಹನುಮಂತನ ಸ್ಟಿಕ್ಕರ್, ವಿಜಯಾಂಬಿಕಾಗೆ ಶುರುವಾಯ್ತು ಹೊಸ ಟೆನ್‌ಷನ್. ಹುಟ್ಟುಹಬ್ಬ ಆಚರಣೆ ನೆಪದಲ್ಲಿ ಒಂದಾಗ್ತಿದ್ದಾರೆ ಶ್ರಾವಣಿ-ವೀರೇಂದ್ರ. ಮಿನಿಸ್ಟರ್ ಮನೆಗೆ ಕೆಲಸಕ್ಕೆ ಬಂದ್ಲು ಶ್ರೀವಲ್ಲಿ.
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ನಿನ್ನೆಯ (ಆಗಸ್ಟ್ 9ರ) ಸಂಚಿಕೆಯಲ್ಲಿ ಫಾರ್ಮ್‌ಹೌಸ್‌ಗೆ ಬಂದ ಗಾಡಿಯಲ್ಲಿ ಹನುಮಂತನ ಸ್ಟಿಕ್ಕರ್ ಇತ್ತು ಎಂದು ರೌಡಿಪಡೆ ಹೇಳಿದಾಗಿಂದ ಸುಬ್ಬು ಬೈಕ್‌ಗಾಗಿ ಎದುರು ನೋಡುತ್ತಿದ್ದಾಳೆ ವಿಜಯಾಂಬಿಕಾ. ಮದನ್ ಕೂಡ ಸುಬ್ಬು ಮನೆಗೆ ಬರುವುದಂತೆ ಕಾಯುತ್ತಿರುತ್ತಾನೆ. ಸುಬ್ಬು ಬೈಕ್ ಸೌಂಡ್ ಕೇಳಿದ್ದೆ ತಡ ಓಡಿ ಬರುವ ವಿಜಯಾಂಬಿಕಾ ಸುಬ್ಬು ಗಾಡಿ ಮೇಲೆ ಹನುಮಂತನ ಸ್ಟಿಕ್ಕರ್ ಇಲ್ಲ ಎಂಬುದನ್ನು ನೋಡಿ ಖುಷಿಯಾಗುತ್ತಾಳೆ. ಆದರೂ ಫಾರ್ಮ್‌ಹೌಸ್‌ಗೆ ಬಂದಿದ್ದು ಇನ್ಯಾರು ಎಂಬುದು ತಿಳಿಯದೇ ಟೆನ್‌ಷನ್‌ನಲ್ಲಿ ಕಾಲ ಕಳೆಯುತ್ತಿರುತ್ತಾಳೆ. ಅಷ್ಟೊತ್ತಿಗೆ ಅವಳ ರೂಮ್‌ಗೆ ಬರುವ ಮದನ್ ತಾಯಿಯ ಬಳಿ ಅಮ್ಮ ಸುಬ್ಬು ಬಂದ್ರು ನೀನ್ಯಾಕೆ ಮಾತನಾಡಿಲ್ಲ ಅಂತ ಪ್ರಶ್ನೆ ಮಾಡ್ತಾನೆ. ಅದಕ್ಕೆ ಸುಬ್ಬು ಜೊತೆ ಮಾತನಾಡುವುದು ಏನೂ ಇರಲಿಲ್ಲ. ನೋಡಬೇಕಿತ್ತು, ನೋಡಿದೆ ಎಂದು ಹೇಳಿ ಮದನ್‌ಗೆ ಮತ್ತೆ ಅವಮಾನ ಆಗುವ ಹಾಗೆ ಮಾಡುತ್ತಾಳೆ.
ವರಲಕ್ಷ್ಮೀ-ವಿಶಾಲಾಕ್ಷಿಯ ಭಾವುಕ ಕ್ಷಣಗಳು
ಸುಬ್ಬು ತಂದೆ ಪದ್ಮನಾಭ ಹಾಗೂ ತಾಯಿ ವಿಶಾಲಾಕ್ಷಿ ಸುಬ್ಬು ಹುಟ್ಟುಹಬ್ಬದ ಬಗ್ಗೆ ಮಾತನಾಡುತ್ತಿರುತ್ತಾರೆ. ಸುಬ್ಬು ತಾಯಿಗೆ ಮಗನಿಗೆ ವಿಶೇಷ ಉಡುಗೊರೆ ಕೊಡಬೇಕು ಎನ್ನುವ ಆಸೆ. ಇದನ್ನು ಗಂಡನ ಮುಂದೆ ಹೇಳುತ್ತಾರೆ. ಆದರೆ ಮನೆಯ ಖರ್ಚಿಗೂ ಪರದಾಡುವ ದಂಪತಿ ಏನು ಉಡುಗೊರೆ ಕೊಡೋದು ಅಂತ ಚಿಂತಿಸುತ್ತಾರೆ. ಆಗ ವಿಶಾಲಾಕ್ಷಿ ತನಗೆ ತವರು ಮನೆಯಿಂದ ಮದುವೆ ಸಮಯದಲ್ಲಿ ಕೊಟ್ಟ ಓಲೆ ಕರಗಿಸಿ ಉಂಗುರ ಮಾಡಿಸುವ ಎಂದು ಹೇಳುತ್ತಾಳೆ. ಅಷ್ಟೊತ್ತಿಗೆ ಅಲ್ಲಿಗೆ ಬರುವ ವರ ಅದನ್ನು ಯಾಕೆ ಕೊಡ್ತೀರಿ ಎಂದು ಪ್ರಶ್ನೆ ಮಾಡುತ್ತಾಳೆ. ಇದರಿಂದ ಮಗಳ ಮೇಲೆ ಕೋಪಗೊಳ್ಳುವ ವಿಶಾಲಾಕ್ಷಿ ಯಾಕೆ ಇದರಿಂದ ನಿನ್ನ ಮದುವೆಗೆ ಚಿನ್ನ ಇರೊಲ್ಲ ಅಂತ ಚಿಂತೆನಾ ಅಂತ ವ್ಯಂಗ್ಯ ಮಾಡುತ್ತಾಳೆ. ಆದರೆ ವರಲಕ್ಷ್ಮೀಯ ಉದ್ದೇಶವೇ ಬೇರೆ ಇರುತ್ತದೆ. ವರಲಕ್ಷ್ಮೀ ಅಣ್ಣನಿಗೆ ಉಡುಗೊರೆ ನೀಡಲು ಅಣ್ಣ ಕೊಡಿಸಿದ ಚಿನ್ನದ ಸರವನ್ನೇ ನೀಡಲು ಬಂದಿರುತ್ತಾಳೆ. ಇದನ್ನು ತಿಳಿಯದೇ ವಿಶಾಲಾಕ್ಷಿ ಬಾಯಿಗೆ ಬಂದಂತೆ ಬೈದಿರುತ್ತಾರೆ. ಆದರೆ ಮಗಳು ತನ್ನ ಚೈನ್ ಕೊಡಲು ಬಂದಿದ್ದು ನೋಡಿ ಕಣ್ಣೀರು ಹಾಕುವ ವಿಶಾಲಾಕ್ಷಿ ಮಗಳ ಕೈ ಹಿಡಿದು ಕ್ಷಮೆ ಕೇಳುತ್ತಾರೆ. ಮಾತ್ರವಲ್ಲ ತಬ್ಬಿ ಅಳುತ್ತಾರೆ. ಅಲ್ಲದೇ ಮಗಳಿಗೆ ವರದನನ್ನು ಪ್ರೀತಿಸಿರುವ ವಿಚಾರಕ್ಕೆ ಆಕಾಶಕ್ಕೆ ಏಣಿ ಹಾಕೋದು ತಪ್ಪು ಎಂದು ಬುದ್ಧಿಮಾತು ಕೂಡ ಹೇಳುತ್ತಾರೆ.
ಸುಬ್ಬು ಹುಟ್ಟುಹಬ್ಬಕ್ಕೆ ಅಪ್ಪ-ಮಗಳ ತಯಾರಿ
ಶ್ರಾವಣಿ ಬಂದು ಸುಬ್ಬು ಹುಟ್ಟುಹಬ್ಬ ಇನ್ನೂ ಎರಡೇ ದಿನ ಇದೆ ಎಂದಾಗ ವೀರೇಂದ್ರ ಮನೆಯಲ್ಲೇ ಹುಟ್ಟುಹಬ್ಬ ಆಚರಿಸಲು ನಿರ್ಧಾರ ಮಾಡುತ್ತಾರೆ. ಈ ಬಗ್ಗೆ ಮಾತನಾಡಲು ಶ್ರಾವಣಿ ಕೋಣೆಗೆ ಬರುವ ವೀರೇಂದ್ರ ʼಸುಬ್ಬು ಹುಟ್ಟುಹಬ್ಬ ಹೇಗೆಲ್ಲಾ ಆಚರಿಸೋಣ ಎಂದು ಮಗಳಿಗೆ ಐಡಿಯಾ ಕೇಳುತ್ತಾರೆ. ಆಗ ಶ್ರಾವಣಿ ಈವೆಂಟ್ ಮ್ಯಾನೇಜ್‌ಮೆಂಟ್ ಅವರಿಗೆ ಕೊಡೋದು ಬೇಡ, ತಾನೇ ಮುಂದೆ ನಿಂತು ಎಲ್ಲವನ್ನೂ ಮಾಡುತ್ತೇನೆ ಎಂದು ಭರವಸೆ ನೀಡುತ್ತಾಳೆ. ಆ ಮೂಲಕ ಅಪ್ಪನಿಗೆ ಹತ್ತಿರವಾಗುವ ಆಸೆ ಪಡುತ್ತಾಳೆ ಶ್ರಾವಣಿ. ಅಪ್ಪ ತನಗೆ ಸುಬ್ಬು ಹುಟ್ಟುಹಬ್ಬ ಆಚರಿಸಲು ಅವಕಾಶ ನೀಡಿದ್ದಕ್ಕೆ ಥ್ಯಾಂಕ್ಸ್ ಹೇಳಿ ಹ್ಯಾಂಡ್ ಶೇಕ್ ನೀಡುತ್ತಾಳೆ. ಅದಕ್ಕೆ ವೀರೇಂದ್ರ ಕೂಡ ಪ್ರತಿಕ್ರಿಯಿಸುತ್ತಾರೆ. ಶ್ರಾವಣಿ-ವೀರೇಂದ್ರ ಶೇಕ್ ಹ್ಯಾಂಡ್ ಮಾಡುವ ಹೊತ್ತಿಗೆ ಶ್ರಾವಣಿ ಕೋಣೆಯ ಬಳಿ ಬರುವ ಸುಬ್ಬು, ಸುರೇಂದ್ರ, ವಂದನಾ ಈ ದ್ರಶ್ಯ ನೋಡಿ ಶಾಕ್ ಆಗುತ್ತಾರೆ.
ಮಿನಿಸ್ಟರ್ ಮನೆಗೆ ಮೊದಲ ದಿನದ ಕೆಲಸಕ್ಕೆ ಬಂದ ಶ್ರೀವಲ್ಲಿ
ಪಿಂಕಿಗೆ ಡಾನ್ಸ್ ಟೀಚರ್ ಆಗಿ ಮೊದಲ ದಿನ ಕೆಲಸ ಬರುತ್ತಾಳೆ ಶ್ರೀವಲ್ಲಿ. ಅವಳನ್ನು ಮನೆ ಬಳಿ ನೋಡುವ ಸುಬ್ಬು ಶಾಕ್ ಆದರೂ ಸಾವರಿಸಿಕೊಂಡು ಒಳಗೆ ಕರೆದುಕೊಂಡು ಹೋಗುತ್ತಾನೆ. ಅತ್ತ ಶ್ರೀವಲ್ಲಿ ವಿಜಯಾಂಬಿಕ ಹಾಗೂ ಮದನ್ ತಲೆ ತಿಂದಿಡುತ್ತಾಳೆ. ಫಾರಿನ್ ಕ್ಲೈಂಟ್‌ಗಳಿಂದ ಹೊಸ ಪ್ರಾಜೆಕ್ಟ್ ತಂದ ಮದನ್ ವಿಚಾರವನ್ನು ವೀರೇಂದ್ರನ ಬಳಿ ಹೇಳಲು ತವಕಿಸುತ್ತಿರುತ್ತಾಳೆ ವಿಜಯಾಂಬಿಕಾ. ಆದರೆ ಸುಬ್ಬು ಬರ್ತ್‌ಡೇ ಸಲುವಾಗಿ ರೂಮ್ ಒಳಗೆ ಶ್ರಾವಣಿ ಜೊತೆ ಪ್ಲಾನ್ ಮಾಡುತ್ತಾ ಕುಳಿತಿರುವ ವೀರೇಂದ್ರ ವಿಜಯಾಂಬಿಕಾ ಬಳಿ ಕಾಯುವಂತೆ ಹೇಳುತ್ತಾರೆ. ಇದರಿಂದ ವಿಜಯಾಂಬಿಕಾಗೆ ಶಾಕ್ ಹೊಡೆದಂತಾಗುತ್ತದೆ.
ಸುಬ್ಬು ಹುಟ್ಟುಹಬ್ಬದ ನೆಪದಲ್ಲಿ ಒಂದಾಗುತ್ತಾರಾ ಶ್ರಾವಣಿ- ವೀರೇಂದ್ರ, ಫಾರ್ಮ್‌ಹೌಸ್‌ಗೆ ಬಂದಿದ್ದು ಯಾರು ಎಂಬುದು ವಿಜಯಾಂಬಿಕಾಗೆ ತಿಳಿಯುತ್ತಾ, ಸುಬ್ಬ ಬರ್ತ್‌ಡೇ ಹೇಗೆಲ್ಲಾ ನಡೆಯುತ್ತೆ ಎಂಬುದನ್ನು ತಿಳಿಯಬೇಕು ಅಂದ್ರೆ ಮುಂದಿನ ಸಂಚಿಕೆಗಳನ್ನು ನಿರೀಕ್ಷಿಸಿ.