ಸುಬ್ಬು ಹುಟ್ಟುಹಬ್ಬಕ್ಕೆ ಭರ್ಜರಿ ತಯಾರಿ, ವಿಜಯಾಂಬಿಕಾ ಮೋಸ ಬಯಲಿಗೆಳೆಯುವ ಶಪಥ ಮಾಡಿದ್ಲು ಶ್ರಾವಣಿ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ
Shravani Subramanya Kannada Serial Today Episode August 14th: ಸುಬ್ಬು ಹುಟ್ಟುಹಬ್ಬಕ್ಕೆ ಅಪ್ಪ-ಮಗಳು ಸೇರಿ ಭರ್ಜರಿ ತಯಾರಿ, ಪದ್ಮನಾಭನ ಕುಟುಂಬದ ಜೊತೆ ಶ್ರೀವಲ್ಲಿಗೂ ಸಿಕ್ತು ಆಹ್ವಾನ. ವಿಜಯಾಂಬಿಕಾ ಖುಷಿಗೆ ಕಾರಣವೇ ಬೇರೆ. ಮನೆಯವರ ಜೊತೆ ದೇವಸ್ಥಾನಕ್ಕೆ ಹೋಗಲು ಸುಬ್ಬುಗೆ ಸಿಕ್ಕಿಲ್ಲ ರಜೆ. ಅತ್ತೆ ವಿಜಯಾಂಬಿಕಾ ಮೋಸ ಬಯಲಿಗೆಳೆಯುವ ಶಪಥ ಮಾಡಿದ ಶ್ರಾವಣಿ.
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ನಿನ್ನೆಯ (ಆಗಸ್ಟ್ 14ರ) ಸಂಚಿಕೆಯಲ್ಲಿ ಶ್ರಾವಣಿ ಮನೆಗೆ ಪಿಂಕಿಗೆ ಡಾನ್ಸ್ ಹೇಳಿ ಕೊಡಲು ಬಂದ ಶ್ರೀವಲ್ಲಿ ಸುಬ್ಬು ಜೊತೆ ಮನೆಗೆ ಹೋಗಲು ನಿರ್ಧರಿಸುತ್ತಾಳೆ. ಆದರೆ ಶ್ರಾವಣಿಗೆ ಏಕೋ ಸುಬ್ಬವನ್ನು ಶ್ರೀವಲ್ಲಿ ಜೊತೆಗೆ ಕಳುಹಿಸುವ ಮನಸ್ಸೇ ಇರುವುದಿಲ್ಲ. ಆದರೆ ವೀರೇಂದ್ರ ಅವರೇ ಸುಬ್ಬುಗೆ ಮನೆಗೆ ಹೋಗುವಂತೆ ಹೇಳಿದಾಗ ಶ್ರಾವಣಿ ಸುಮ್ಮನಾಗಬೇಕಾಗುತ್ತೆ, ಆದ್ರೆ ಸುಬ್ಬು ವಿಚಾರದಲ್ಲಿ ತಾನ್ಯಾಕೆ ಹೀಗಾಡುತ್ತಿದ್ದೇನೆ ಎಂಬುದು ಶ್ರಾವಣಿಗೂ ಅರಿವಾಗುವುದಿಲ್ಲ.
ದೇವಸ್ಥಾನಕ್ಕೆ ಹೋಗುತ್ತಿಲ್ಲ; ನಿರಾಸೆ ಮೂಡಿಸಿದ ಸುಬ್ಬು
ಸುಬ್ಬು ಹುಟ್ಟುಹಬ್ಬದ ಕಾರಣದಿಂದ ಮರುದಿನ ಎಲ್ಲರೂ ಮನೆ ದೇವರ ಬಳಿಗೆ ಹೋಗೋದು ಒಂದು ಮೊದಲೇ ಚರ್ಚೆಯಾಗಿತ್ತು. ಬೆಳಿಗ್ಗೆ ಹೊರಡಲು ಸಿದ್ಧತೆಯ ಬಗ್ಗೆ ಮಾತನಾಡುತ್ತಿರುವಾಗ ಅಲ್ಲಿಗೆ ಬರುವ ಸುಬ್ಬು ಮರುದಿನ ದೇವಸ್ಥಾನಕ್ಕೆ ಹೋಗಲು ಆಗುವುದಿಲ್ಲ ಎಂದು ಹೇಳುತ್ತಾನೆ. ಯಜಮಾನರು ರಜೆ ಕೊಟ್ಟಿಲ್ಲ ಅಂದ್ರೆ ಮನೆಯವರು ಯಜಮಾನರ ಮೇಲೆ ಬೇಸರ ಮಾಡಿಕೊಳ್ಳುತ್ತಾರೆ ಎಂದು ಯೋಚಿಸುವ ಸುಬ್ಬು ತನಗೆ ತಲೆನೋವು ಎಂದು ಮನೆಯವರ ಮುಂದೆ ಸುಳ್ಳು ಹೇಳುತ್ತಾನೆ. ಅಲ್ಲದೇ ಇನ್ನೊಮ್ಮೆ ದೇವರ ದರ್ಶನಕ್ಕೆ ಹೋಗೋಣ ಎಂದು ಮನೆಯವರಿಗೆ ಸಾಮಾಧಾನ ಮಾಡಿ ಮಲಗುತ್ತಾನೆ. ಆದರೆ ಮನೆಯವರಿಗೆ ಇವನ ವರ್ತನೆ ವಿಚಿತ್ರವಾಗಿ ಕಾಣುತ್ತದೆ. ಸ್ವಲ್ಪ ಹೊತ್ತಿಗೆ ಪದ್ಮನಾಭ ಅವರ ನಂಬರ್‌ಗೆ ಯಜಮಾನರಿಂದ ಕರೆ ಬರುತ್ತದೆ.
ಸುಬ್ಬು ಮನೆಯವರನ್ನು ಹುಟ್ಟುಹಬ್ಬಕ್ಕೆ ಆಹ್ವಾನಿಸಿದ ವೀರೇಂದ್ರ
ಯಜಮಾನರು ಕಾಲ್ ಮಾಡಿದ್ದು ನೋಡಿ ಗಾಬರಿಗೊಳ್ಳುತ್ತಾರೆ ಪದ್ಮನಾಭ. ಸುಬ್ಬು ಏನೋ ತಪ್ಪು ಮಾಡಿಬೇಕು ಎಂದು ಯೋಚಿಸಿ ಟೆನ್‌ಷನ್ ಮಾಡಿಕೊಳ್ಳುತ್ತಾರೆ. ಮನೆಯಿಂದ ಹೊರಗೆ ಬಂದು ಕಾಲ್ ಮಾಡಿ ಎಂದು ವೀರೇಂದ್ರ ಹೇಳಿದಾಗ ಇನ್ನಷ್ಟು ಗಾಬರಿಯಾಗುವ ಪದ್ಮನಾಭ ಆತುರದಲ್ಲೇ ಮನೆಯಿಂದ ಹೊರಬಂದು ಕಾಲ್ ಮಾಡುತ್ತಾರೆ. ಆಗ ವೀರೇಂದ್ರ ಸುಬ್ಬು ಹುಟ್ಟುಹಬ್ಬ ಆಚರಿಸುವ ಬಗ್ಗೆ ಪದ್ಮನಾಭ ಅವರಲ್ಲಿ ಹೇಳುತ್ತಾರೆ. ಅಲ್ಲದೇ ನಾವು ಅದಕ್ಕಾಗಿ ಸಿದ್ಧತೆ ಮಾಡಿಕೊಂಡಿದ್ದು ನಾಳೆ ನೀವೆಲ್ಲರೂ ಮನೆಗೆ ಬನ್ನಿ ಎನ್ನುತ್ತಾರೆ. ಬರುವಾಗ ಶ್ರೀವಲ್ಲಿಯನ್ನೂ ಕರೆದುಕೊಂಡು ಬನ್ನಿ ಎಂದು ವಿಶೇಷವಾಗಿ ಹೇಳುತ್ತಾರೆ. ಇದನ್ನು ಕೇಳಿಸಿಕೊಂಡ ಶ್ರೀವಲ್ಲಿ ಮನಸ್ಸು ಮತ್ತೆ ಮುದುಡುತ್ತದೆ. ಸುಬ್ಬು ಮನೆಯವರೆಲ್ಲಾ ಸುಬ್ಬು ಹುಟ್ಟುಹಬ್ಬವನ್ನು ಯಜಮಾನರ ಮನೆಯಲ್ಲಿ ಆಚರಿಸುವುದನ್ನು ಕೇಳಿ ಸಂತೋಷ ಪಡುತ್ತಾರೆ.
ಸುಬ್ಬು ಹುಟ್ಟುಹಬ್ಬಕ್ಕೆ ವಿಶೇಷ ಅಡುಗೆ ಮಾಡಿದ ಶ್ರಾವಣಿ
ಸುಬ್ಬು ಹುಟ್ಟುಹಬ್ಬಕ್ಕೆ ತನ್ನ ಕೈಯಾರೆ ಬಗೆ ಬಗೆಯ ಅಡುಗೆ ಮಾಡುತ್ತಾಳೆ ಶ್ರಾವಣಿ. ಆದರೆ ರುಚಿ ನೋಡಲು ಯಾರಿಗಾದ್ರೂ ಕೊಡಬೇಕು ಎಂದುಕೊಂಡಾಗ ಅಪ್ಪ ಕಾಣಿಸುತ್ತಾರೆ. ಅಪ್ಪನನ್ನು ಕರೆದು ಸುಬ್ಬು ಹುಟ್ಟುಹಬ್ಬಕ್ಕಾಗಿ ಒಂದಿಷ್ಟು ಡಿಶಶ್ ರೆಡಿ ಮಾಡಿದ್ದೇನೆ ಒಮ್ಮೆ ಹೇಗಾಯ್ತು ನೋಡಿ ಎಂದು ತಿನ್ನಲು ಕೊಡುತ್ತಾಳೆ. ಮಗಳ ಅಡುಗೆ ಮೆಚ್ಚಿಕೊಳ್ಳುವ ವೀರೇಂದ್ರ ಅಲ್ಲಿಗೆ ಬಂದ ಅಕ್ಕನಿಗೂ ತಿನ್ನಲು ಹೇಳುತ್ತಾರೆ. ಆದರೆ ವೀರೇಂದ್ರ ಶ್ರಾವಣಿ ಕೈ ಅಡುಗೆ ಬಗ್ಗೆ ಹೊಗಳಿದ್ದು ನೋಡಿ ಉರಿದು ಹೋಗುತ್ತಾಳೆ ವಿಜಯಾಂಬಿಕಾ. ಆಗ ಶ್ರಾವಣಿ ಅತ್ತೆ ಮುಖಭಾವ ನೋಡಿ ಇವರಿಗೆ ನಾನು ಅಪ್ಪನ ಜೊತೆ ಚೆನ್ನಾಗಿರೋದು ಯಾಕೆ ಇಷ್ಟ ಆಗೊಲ್ಲ, ಇವರ ಕರಾಳ ಮುಖ ಗೊತ್ತಾದ್ರೆ ಅಪ್ಪನೇ ಇವರನ್ನು ದೂರ ಮಾಡ್ತಾರೆ. ಇವರ ಮೋಸದಾಟ ಬಯಲಿಗೆ ಎಳೆದೇ ಎಳೆಯುತ್ತೇನೆʼ ಎಂದು ಶಪಥ ಮಾಡಿದಂತೆ ಮನಸ್ಸಿನಲ್ಲೇ ಅಂದುಕೊಳ್ಳುತ್ತಾಳೆ.
ವಿಜಯಾಂಬಿಕಾ ಮೋಸದಾಟ ಬಯಲಿಗೆಳೆಯಲು ಶ್ರಾವಣಿಯಿಂದ ಸಾಧ್ಯವಾಗುತ್ತಾ, ಸುಬ್ಬು ಹುಟ್ಟುಹಬ್ಬದ ಹೇಗೆ ನಡೆಯುತ್ತೆ, ವಿಜಯಾಂಬಿಕಾ ಖುಷಿ ಪಡುತ್ತಿರಲು ಕಾರಣವಾದ್ರೂ ಏನು ಎಂಬಿತ್ಯಾದಿ ವಿವರ ತಿಳಿಯಲು ಮುಂದಿನ ಸಂಚಿಕೆಗಳನ್ನು ನಿರೀಕ್ಷಿಸಿ.