ಸುಬ್ಬು ಮನೆಯವರಿಗೆ ಅವಮಾನ ಮಾಡುವ ವಿಜಯಾಂಬಿಕಾ, ಕಳ್ಳತನ ಮಾಡಿ ಸಿಕ್ಕಿ ಬೀಳ್ತಾರಾ ಕಾಂತಮ್ಮ-ಸುಂದರ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ-television news zee kannada shravani subramanya kannada serial today episode 109 august 16th subbu number switched off r ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಸುಬ್ಬು ಮನೆಯವರಿಗೆ ಅವಮಾನ ಮಾಡುವ ವಿಜಯಾಂಬಿಕಾ, ಕಳ್ಳತನ ಮಾಡಿ ಸಿಕ್ಕಿ ಬೀಳ್ತಾರಾ ಕಾಂತಮ್ಮ-ಸುಂದರ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

ಸುಬ್ಬು ಮನೆಯವರಿಗೆ ಅವಮಾನ ಮಾಡುವ ವಿಜಯಾಂಬಿಕಾ, ಕಳ್ಳತನ ಮಾಡಿ ಸಿಕ್ಕಿ ಬೀಳ್ತಾರಾ ಕಾಂತಮ್ಮ-ಸುಂದರ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

Shravani Subramanya Kannada Serial Today Episode August 16th: ಫೌರ್ಮ್‌ಹೌಸ್‌ಗೆ ಬಂದಿದ್ದ ವ್ಯಕ್ತಿ ರೌಡಿಗಳ ಕಣ್ಮುಂದೆ, ಅಲ್ಲೇ ಮುಗಿಸೋಕೆ ಹೇಳಿದ್ಲು ವಿಜಯಾಂಬಿಕಾ. ಹುಟ್ಟುಹಬ್ಬ ಆಚರಿಸಲು ಮಿನಿಸ್ಟರ್‌ ಮನೆಗೆ ಬಂದ ಸುಬ್ಬು ಮನೆಯವರಿಗೆ ಅವಮಾನ. ಎಷ್ಟೇ ಹೊತ್ತಾದ್ರೂ ಬರ್ಲಿಲ್ಲ ಸುಬ್ಬು, ನಂಬರ್‌ ಕೂಡ ಸ್ವಿಚ್ಡ್‌ ಆಫ್‌, ಏನಾಗಿದೆ ಸುಬ್ಬುಗೆ?

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಆಗಸ್ಟ್‌ 15ರ ಎಪಿಸೋಡ್‌
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಆಗಸ್ಟ್‌ 15ರ ಎಪಿಸೋಡ್‌

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ನಿನ್ನೆಯ (ಆಗಸ್ಟ್‌ 16ರ) ಸಂಚಿಕೆಯಲ್ಲಿ ಫಾರ್ಮ್‌ಹೌಸ್‌ಗೆ ಬಂದ ವ್ಯಕ್ತಿಯನ್ನು ಕಂಡ ರೌಡಿಗಳು ವಿಜಯಾಂಬಿಕಾಗೆ ಕಾಲ್‌ ಮಾಡುತ್ತಾರೆ. ʼಮೇಡಂ, ಫಾರ್ಮ್‌ಹೌಸ್‌ಗೆ ಬಂದಿದ್ದ ವ್ಯಕ್ತಿ ನಮ್ಮ ಕಣ್ಣ ಮುಂದೆ ಇದ್ದಾನೆ, ಸೇಮ್‌ ಬೈಕ್‌, ಸೇಮ್‌ ಹೆಲ್ಮೆಟ್‌, ಅವನನ್ನ ಏನ್‌ ಮಾಡೋದು ಮೇಡಂ, ಮುಗಿಸಿ ಬಿಡೋದಾ ಅಂತ ಪ್ರಶ್ನೆ ಮಾಡುತ್ತಾರೆ. ರೌಡಿಯ ಮಾತು ಕೇಳಿ ಉರಿದು ಬೀಳುವ ವಿಜಯಾಂಬಿಕಾ ʼಅದನ್ನು ನಂಗೆ ಕೇಳ್ತಿಯಲ್ಲ, ಮೊದಲು ಅವನನ್ನ ಮುಗಿಸಿ ಬಿಡಿʼ ಎಂದು ಆರ್ಡರ್‌ ಮಾಡುತ್ತಾಳೆ. ಆದರೆ ರೌಡಿಗಳು ಕಾಲ್‌ ಕಟ್‌ ಮಾಡುವಷ್ಟರಲ್ಲಿ ಆ ವ್ಯಕ್ತಿ ಅಲ್ಲಿಂದ ಹೋಗಿರುತ್ತಾನೆ. ಹಾಗಾದರೆ ರೌಡಿಗಳು ನೋಡಿದ್ದು ಸುಬ್ಬುವನ್ನ ಅಥವಾ ಬೇರೆಯವರನ್ನ ಎಂಬುದು ಅರ್ಥವಾಗುವುದಿಲ್ಲ.

ಸುಬ್ಬು ಮನೆಯವರಿಗೆ ಹಂಗಿಸಿ ಮಾತನಾಡಿದ ವಿಜಯಾಂಬಿಕಾ

ಸುಬ್ಬು ಹುಟ್ಟುಹಬ್ಬ ಆಚರಣೆಯ ಖುಷಿಯಲ್ಲಿ ಗಾಡಿ ಹತ್ತಿ ಬರುತ್ತಿರುವ ಸುಬ್ಬು ಮನೆಯವರಿಗೆ ಮುಂದಾಗುವ ಘಟನೆಗಳ ಬಗ್ಗೆ ಅರಿವಿರುವುದಿಲ್ಲ. ದಾರಿ ಮಧ್ಯೆ ಮಿನಿಸ್ಟರ್‌ಗೆ ಕಾಲ್‌ ಮಾಡುವ ಪದ್ಮನಾಭ ಸುಬ್ಬು ಮನೆಗೆ ಬಾರದಂತೆ ನೋಡಿಕೊಳ್ಳಿ ಎಂದು ಹೇಳಿ ಮುಂದೆ ಸಾಗುತ್ತಾರೆ. ಮಿನಿಸ್ಟರ್‌ ಮನೆಯ ಗೇಟ್‌ ಬಳಿ ಬಂದು ಇಳಿದಾಗ ಅವರನ್ನು ಸೆಕ್ಯೂರಿಟಿ ಒಳಗೆ ಬಿಡುವುದಿಲ್ಲ. ಸುಬ್ಬು ಮನೆಯವರು ಎಂದು ಹೇಳಿದರೂ ಕೇಳಿಸಿಕೊಳ್ಳದೇ ಗೇಟ್‌ ಒಳಗೂ ಬಿಡದೇ ಸತಾಯಿಸುತ್ತಾನೆ ಸೆಕ್ಯೂರಿಟಿ. ಸುಬ್ಬು ಮನೆಯವರನ್ನ ಗೇಟ್‌ನಲ್ಲೇ ತಡೆಯುತ್ತಿರುವ ಸೆಕ್ಯೂರಿಟಿಯನ್ನು ನೋಡಿದ ವಿಜಯಾಂಬಿಕಾ ಅವನಿಗೆ ಕಾಲ್‌ ಮಾಡಿ ಅವರನ್ನು ಯಾವುದೇ ಕಾರಣಕ್ಕೂ ಒಳಗೆ ಬಿಡಬೇಡ ಎಂದು ಆರ್ಡರ್‌ ಮಾಡುತ್ತಾಳೆ. ಕೊನೆಗೆ ಸುಬ್ಬು ಮನೆಯವರಿಗೆ ಇನ್ನಷ್ಟು ಅವಮಾನ ಮಾಡಬೇಕು ಎಂದುಕೊಂಡು ಗೇಟ್‌ ಬಳಿಗೆ ಬಂದು ʼನಮ್ಮ ಮನೆಗೆ ದೊಡ್ಡ ದೊಡ್ಡ ಕಾರುಗಳು ಬಂದು ಅಭ್ಯಾಸ, ಇಂತಹ ಗೂಡ್ಸ್‌ ಗಾಡಿ ಎಂದಿಗೂ ಬಂದಿಲ್ಲ. ಹಾಗಾಗಿ ಸೆಕ್ಯೂರಿಟಿಗೆ ಗೊಂದಲ ಆಯ್ತುʼ ಎಂದು ಹಂಗಿಸಿ ಮಾತನಾಡಿ ಅವರನ್ನು ಮನೆಯೊಳಗೆ ಕರೆದುಕೊಂಡು ಹೋಗುತ್ತಾಳೆ. ಸುಬ್ಬು ಮನೆಯವರನ್ನು ನೋಡಿ ಖುಷಿಯಾಗುವ ವೀರೇಂದ್ರ ಆತ್ಮೀಯತೆಯಿಂದ ಆಧರಿಸಿ, ಉಪಚರಿಸುತ್ತಾರೆ.

ಮಿನಿಸ್ಟರ್‌ ಮನೆಯಲ್ಲಿ ಕಳ್ಳತನ ಶುರುವಿಟ್ಟುಕೊಂಡ ಕಾಂತಮ್ಮ-ಸುಂದರ

ಮಿನಿಸ್ಟರ್‌ ಮನೆ ನೋಡುವ ನೆಪದಲ್ಲಿ ಹಾಲ್‌ನಿಂದ ಒಂದೊಂದೇ ರೂಮ್‌ ನೋಡುತ್ತಾ ಹೊರಟ ಕಾಂತಮ್ಮ-ಸುಂದರ ಮನೆಯ ಅಂದ, ವೈಭೋಗವನ್ನು ಕಂಡು ಬೆರವಾಗುತ್ತಾರೆ. ಆದರೆ ಹುಟ್ಟು ಬುದ್ಧಿ ಸತ್ರು ಹೋಗೊಲ್ಲ ಅನ್ನುವಂತೆ ಆ ಮನೆಯಲ್ಲಿ ಬೆಲೆ ಬಾಳುವ ವಸ್ತುಗಳನ್ನು ಕಂಡು ಮನಸ್ಸು ತಡೆಯದೇ ಇದೊಂದೇ ಕದಿಯಲು ಆರಂಭಿಸುತ್ತಾರೆ. ಇತ್ತ ಸುಬ್ಬುಗೆ ಕಾಲ್‌ ಮಾಡುವ ವೀರೇಂದ್ರ ಸ್ವಿಚ್ಡ್‌ ಆಫ್‌ ಬರೋದು ನೋಡಿ ಟೆನ್‌ಷನ್‌ ಆಗುತ್ತಾರೆ. ಆದರೆ ಶ್ರಾವಣಿ ಈ ಸುಬ್ಬು ಒಬ್ಬ ಯಾವಾಗ್ಲೂ ಎಮರ್ಜೆನ್ಸಿ ಇರುವಾಗಲೇ ಸ್ವಿಚ್ಡ್‌ ಆಫ್‌ ಮಾಡುತ್ತಾನೆ ಎಂದು ಸಮಾಧಾನ ಮಾಡುತ್ತಾಳೆ. ಒಂದೊಂದೇ ಕೋಣೆಯಾಗಿ ವಿಜಯಾಂಬಿಕಾ ರೂಮ್‌ಗೆ ಬರುವ ಸುಂದರನ ಕಾಲಿಗೆ ವಿಜಯಾಂಬಿಕಾ ಕೋಪದಲ್ಲಿ ಎಸೆದ ಜ್ಯುವೆಲರಿ ಬಾಕ್ಸ್‌ ಕಾಲಿಗೆ ತಡರುತ್ತದೆ. ನಿಧಾನಕ್ಕೆ ಅದನ್ನು ಎತ್ತಿ ನೋಡಿದಾಗ ಚಿನ್ನದ ಚೈನ್‌ ಇರುವುದು ಗೊತ್ತಾಗುತ್ತದೆ. ಅಷ್ಟೊತ್ತಿಗೆ ಸರಿಯಾಗಿ ಸುಂದರ ತಾಯಿ ಕಾಂತಮ್ಮ ಕೂಡ ವಿಜಯಾಂಬಿಕಾ ರೂಮ್‌ ಬಾಗಿಲ ಬಳಿ ಬಂದಿರುತ್ತಾಳೆ.

ಕಾಂತಮ್ಮ-ಸುಂದರ ಸುಬ್ಬುಗೆ ವೀರೇಂದ್ರ ಗಿಫ್ಟ್‌ ಮಾಡಲು ತಂದ ಚಿನ್ನದ ಸರ ಎಸಿತಾರಾ, ಮಾವ ತನ್ನ ಪಿಎ ಹುಟ್ಟುಹಬ್ಬ ಆಚರಿಸುತ್ತಿರುವ ಕೋಪದಲ್ಲಿ ಸುಬ್ಬುಗೆ ಏನಾದ್ರೂ ಮಾಡ್ತಾನಾ ಮದನ್‌, ರೌಡಿಗಳು ನೋಡಿದ್ದು ಸುಬ್ಬುವನ್ನ ಅಥವಾ ಬೇರೆಯವರನ್ನ ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.