ನಿಗೂಢವಾಗಿ ಕಾಣೆಯಾಗಿದ್ದ ಸುಬ್ಬು ಕೊನೆಗೂ ಮನೆ ಸೇರಿದ, ರೌಡಿ‌ಗಳ ಕೈಗೆ ಸಿಕ್ಕ ಬಿದ್ದ ವ್ಯಕ್ತಿ ಯಾರು? ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ-television news zee kannada shravani subramanya kannada serial today episode 111 august 19th subbu came back to home rst ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ನಿಗೂಢವಾಗಿ ಕಾಣೆಯಾಗಿದ್ದ ಸುಬ್ಬು ಕೊನೆಗೂ ಮನೆ ಸೇರಿದ, ರೌಡಿ‌ಗಳ ಕೈಗೆ ಸಿಕ್ಕ ಬಿದ್ದ ವ್ಯಕ್ತಿ ಯಾರು? ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

ನಿಗೂಢವಾಗಿ ಕಾಣೆಯಾಗಿದ್ದ ಸುಬ್ಬು ಕೊನೆಗೂ ಮನೆ ಸೇರಿದ, ರೌಡಿ‌ಗಳ ಕೈಗೆ ಸಿಕ್ಕ ಬಿದ್ದ ವ್ಯಕ್ತಿ ಯಾರು? ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

Shravani Subramanya Kannada Serial Today Episode August 19th: ಸುಬ್ಬು ಕಾಣೆಯಾಗಿದ್ದಾನೆ ಎಂದು ತಿಳಿದು ವೀರೇಂದ್ರ ಹಾಗೂ ಪದ್ಮನಾಭ ಮನೆಯವರಿಗೆಲ್ಲಾ ಗಾಬರಿ, ವಿಜಯಾಂಬಿಕಾಗೆ ಮಗ ಜೈಲು ಸೇರಿ ತನ್ನೆಲ್ಲಾ ಬಂಡವಳಾ ಬಯಸಲಾಗುತ್ತೆ ಎಂಬ ಭಯ. ಅಂಬ್ಯುಲೆನ್ಸ್‌ ಸದ್ದಿನೊಂದಿಗೆ ಕೊನೆಗೂ ಮನೆ ಸೇರಿದ ಸುಬ್ಬು. ಸುಬ್ಬುಗೆ ಆಗಿದಾದ್ರು ಏನು, ಅವನು ಹೋಗಿದ್ದೆಲ್ಲಿಗೆ?

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಆಗಸ್ಟ್‌  19 ರ ಎಪಿಸೋಡ್‌
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಆಗಸ್ಟ್‌ 19 ರ ಎಪಿಸೋಡ್‌

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ನಿನ್ನೆಯ (ಆಗಸ್ಟ್‌ 19ರ) ಸಂಚಿಕೆಯಲ್ಲಿ ಸುಬ್ಬು ಹುಟ್ಟುಹಬ್ಬ ಆಚರಣೆಗೆಂದು ಮಿನಿಸ್ಟರ್‌ ಮನೆಗೆ ಬಂದ ಪದ್ಮನಾಭ ಕುಟುಂಬದ ಮೇಲೆ ಕಳ್ಳತನದ ಆರೋಪ ಹೊರಿಸಿರುತ್ತಾಳೆ ವಿಜಯಾಂಬಿಕಾ. ಸುಬ್ಬುಗೆಂದು ವೀರೇಂದ್ರ ತಂದ ಚೈನ್‌ ಅನ್ನು ಸುಬ್ಬು ಮನೆಯವರೇ ಕದ್ದಿದ್ದಾರೆ ಎಂದು ಹೇಳಿ ಅವರ ಬ್ಯಾಗ್‌ ಚೆಕ್‌ ಮಾಡಿಸಿ, ಅವಮಾನ ಮಾಡುತ್ತಾಳೆ. ಆದರೆ ಅಷ್ಟೊತ್ತಿಗೆ ಪಿಂಕಿ ಕೋಣೆಯಲ್ಲಿ ಬಿದ್ದಿರುವ ಚೈನ್‌ ಎತ್ತಿಕೊಂಡು ಬಂದು ಮನೆಯವರ ಮುಂದೆ ಹಿಡಿಯುತ್ತಾಳೆ. ಚೈನ್‌ ಕೋಣೆಯಲ್ಲಿ ಇತ್ತು ಎಂದು ಹೇಳಿ ಕೊಡುತ್ತಾಳೆ. ಇದನ್ನು ನೋಡಿ ಕೋಪಗೊಳ್ಳುವ ವೀರೇಂದ್ರ ವಿಜಯಾಂಬಿಕಾ ಮೇಲೆ ರೇಗುತ್ತಾನೆ. ಸುಮ್ಮ ಸುಮ್ಮನೆ ಇನ್ನೊಬ್ಬರ ಮೇಲೆ ಆರೋಪ ಮಾಡುವುದು ಸರಿಯಲ್ಲ ಎಂದು ಖಡಕ್‌ ವಾರ್ನಿಂಗ್‌ ಕೊಡುತ್ತಾನೆ. ಇತ್ತ ಸುಬ್ಬು ಬಾರದೇ ಮನೆಯವರಿಗೆ ಟೆನ್‌ಷನ್‌ ಆಗುತ್ತಿರುತ್ತದೆ.

ಸುಬ್ಬು ನಂಬರ್‌ ಟ್ರೇಸ್‌ ಮಾಡಿಸುವ ವೀರೇಂದ್ರ

ಮನೆಯವರೆಲ್ಲಾ ಸುಬ್ಬು ಹುಟ್ಟುಹಬ್ಬ ಆಚರಿಸಲು ಕಾಯುತ್ತಿದ್ದರೆ ಅವನು ಮಾತ್ರ ಎಷ್ಟು ಹೊತ್ತಾದ್ರು ಮನೆಗೆ ಬರುವುದಿಲ್ಲ. ಕೊನೆಗೆ ಶ್ರಾವಣಿ ಹೇಳಿದಂತೆ ಸ್ವಿಚ್ಡ್‌ ಆಫ್‌ ಆಗಿರುವ ಸುಬ್ಬು ನಂಬರ್‌ ಟ್ರೇಸ್‌ ಮಾಡುವುದೇ ಬೆಸ್ಟ್‌ ಎಂದು ಅಣ್ಣನ ಬಳಿ ಹೇಳುತ್ತಾರೆ ಸುರೇಂದ್ರ. ಕೊನೆಗೆ ಪೊಲೀಸರಿಗೆ ಫೋನ್‌ ಮಾಡಿ ಸುಬ್ಬು ನಂಬರ್‌ ಟ್ರೇಸ್‌ ಮಾಡುವಂತೆ ಹೇಳುತ್ತಾನೆ. ಅಷ್ಟೊತ್ತಿಗೆ ಮನೆಯವರೆಲ್ಲಾ ಸಿಕ್ಕಾಪಟ್ಟೆ ಗಾಬರಿಯಾಗಿರುತ್ತಾರೆ. ವರಲಕ್ಷ್ಮೀ ʼಅಣ್ಣ ಎಂದಿಗೂ ಹೀಗೆ ಮಾಡಿಲ್ಲ, ಅವನು ಎಲ್ಲಿಗೆ ಹೋಗೋದಿದ್ರು ಹೇಳಿ ಹೋಗ್ತಾನೆ. ಮೊಬೈಲ್‌ ಸ್ವಿಚ್ಡ್‌ ಆಫ್‌ ಆಗುವ ಹಾಗಿದ್ರೆ ಮುಂಚೆ ಮೆಸೇಜ್‌ ಮಾಡ್ತಾ ಇದ್ದʼ ಎಂದು ಅಂತ ಹೇಳಿ ಇನ್ನಷ್ಟು ಗಾಬರಿಯಾಗುವಂತೆ ಮಾಡುತ್ತಾಳೆ. ವೀರೇಂದ್ರ ಇವರನ್ನೆಲ್ಲಾ ಸಮಾಧಾನ ಮಾಡಿ ʼನೋಡೋಣ ಸುಬ್ಬು ನಂಬರ್‌ ಅಲ್ಲಿ ಟ್ರೇಸ್‌ ಆಗಿದ ಅಂದ ಮಾತ್ರಕ್ಕೆ ಅವನಿಗೆ ಏನೋ ಆಗಿದೆ ಎಂದು ಅರ್ಥ ಅಲ್ಲʼ ಎಂದು ಹೇಳುತ್ತಾನೆ. ಅಷ್ಟೊತ್ತಿಗೆ ಇನ್ಸ್‌ಪೆಕ್ಟರ್‌ ಕಡೆಯಿಂದ ಕಾಲ್‌ ಬರುತ್ತೆ.

ಟೋಲ್‌ ಬಳಿ ಕೊಲೆ ಯತ್ನ, ಸುಬ್ಬು ಬೈಕ್‌ ಕೂಡ ಪತ್ತೆ

ಸುರೇಂದ್ರಗೆ ಕಾಲ್‌ ಮಾಡುವ ಇನ್ಸ್‌ಪೆಕ್ಟರ್‌ ಟೋಲ್‌ ಬಳಿ ಒಂದು ಬೈಕ್‌ ಪತ್ತೆಯಾಗಿದೆ. ಮಾತ್ರವಲ್ಲ ಅಲ್ಲಿ ಒಬ್ಬ ವ್ಯಕ್ತಿಯ ಮೇಲೆ ಕೊಲೆ ಯತ್ನ ನಡೆದಿದೆ ಎಂದು ತಿಳಿಸುತ್ತಾರೆ. ಇದನ್ನ ಕೇಳಿ ಗಾಬರಿಗೊಳ್ಳುವ ಸುರೇಂದ್ರ ಅಣ್ಣನಿಗೆ ಈ ವಿಚಾರ ಹೇಳಬೇಕು ಎಂದುಕೊಂಡು ಪಕ್ಕಕ್ಕೆ ಕರೆಯುತ್ತಾನೆ. ಆದರೆ ಅವನು ಇಲ್ಲಿಯೇ ಹೇಳು ಎಂದಾಗ ಬೇರೆ ವಿಧಿ ಇಲ್ಲದೇ ಎಲ್ಲರ ಮುಂದೆ ಟೋಲ್‌ ಬಳಿ ರೌಡಿಗಳು ಅಟ್ಯಾಕ್‌ ಮಾಡಿದ್ದು, ಸುಬ್ಬು ಬೈಕ್‌ ಕೂಡ ಅಲ್ಲೇ ಇರುವುದು, ರೌಡಿಗಳು ಕೊಲೆ ಯತ್ನ ಮಾಡಿರುವ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಿದ್ದಾಗಿ ಹೇಳುತ್ತಾನೆ. ಇದನ್ನು ಕೇಳಿದ ಸುಬ್ಬು ತಾಯಿ ಬೊಬ್ಬೆ ಹೊಡೆಯಲು ಆರಂಭಿಸಿದರೆ, ವಿಜಯಾಂಬಿಕಾಗೆ ಇದು ತನ್ನ ಮಗ ಮದನ್‌ದೆ ಕೆಲಸ ಎಂದು ದಿಗಿಲು ಆರಂಭವಾಗುತ್ತದೆ. ಮದನ್‌ ಕೆಲಸದಿಂದ ಅವನು ಜೈಲಿಗೆ ಹೋಗುತ್ತಾನೆ ಎನ್ನುವ ಭಯ ಒಂದೆಡೆಯಾದ್ರೆ, ತನ್ನ ಬಂಡವಾಳ ಬಯಲಿಗೆ ಬರುತ್ತದೆ ಎನ್ನುವ ಭಯವು ಅವಳನ್ನು ಆವರಿಸುತ್ತದೆ.

ಕೊನೆಗೂ ಪ್ರತ್ಯಕ್ಷನಾದ ಸುಬ್ಬು

ಕೊಲೆ ಯತ್ನ ಮಾಡಿದ್ದು ಸುಬ್ಬುಗೆ ಎಂದು ತಿಳಿದು ತಾಯಿ ವಿಶಾಲಾಕ್ಷಿ ಕರುಳು ಬಿರಿಯುವಂತೆ ಅಳುತ್ತಾಳೆ. ಶ್ರಾವಣಿ ಕೂಡ ಸುಬ್ಬುಗೆ ಹೀಗಾಗಲು ತಾನೇ ಕಾರಣ ಎಂದು ಬೇಸರ ಮಾಡಿಕೊಂಡು ಅಳುತ್ತಾಳೆ. ಅಷ್ಟೊತ್ತಿಗೆ ಕಾಲ್‌ ಮಾಡುವ ಇನ್ಸ್‌ಪೆಕ್ಟರ್‌ ನಾವೀಗ ನಿಮ್ಮ ಮನೆಗೆ ಬರುತ್ತಿದ್ದೇವೆ ಎಂದು ಹೇಳುತ್ತಾರೆ. ಇದನ್ನು ಕೇಳಿಸಿಕೊಂಡು ಸುರೇಂದ್ರ ಅಣ್ಣಾ ವಿಷ್ಯಾ ಯಾಕೋ ಸೀರಿಯಸ್‌ ಇರಬಹುದು ಅನ್ನಿಸ್ತಾ ಇದೆ ಎಂದು ಹೇಳಿದಾಗ ಎಲ್ಲರೂ ದಿಕ್ಕೆ ತೋಚದಂತಾಗುತ್ತಾರೆ. ಅಷ್ಟೊತ್ತಿಗೆ ಮನೆಯ ಬಳಿ ಅಂಬ್ಯುಲೆನ್ಸ್‌ ಸದ್ದು ಕೇಳುತ್ತದೆ. ಅದನ್ನು ಕೇಳಿ ಎಲ್ಲರ ಗಾಬರಿ, ಅಳು ಹೆಚ್ಚಾಗುತ್ತದೆ. ಅಲ್ಲದೇ ಆಗ ಡೋರ್‌ಬೆಲ್‌ ರಿಂಗ್‌ ಆಗುತ್ತದೆ. ಇದನ್ನೆಲ್ಲಾ ಕೇಳಿ ಮನೆಯವರು ಅಳು ಹೆಚ್ಚಾದರೆ ಶ್ರೀವಲ್ಲಿ ಓಡಿ ಹೋಗಿ ದೇವರ ಕೋಣೆಯಲ್ಲಿ ದೇವರ ದೀಪ ಹಚ್ಚುತ್ತಾಳೆ. ಸುರೇಂದ್ರ ಕೂಡ ಬಾಗಿಲು ತೆರೆಯಲು ಹಿಂದೆ ಮುಂದೆ ನೋಡಿದಾಗ ಬಾಗಿಲ ಬಳಿ ಹೋಗುವ ಶ್ರಾವಣಿ ನಿಧಾನಕ್ಕೆ ಬಾಗಿಲು ತೆರೆಯುತ್ತಾಳೆ. ಅಲ್ಲಿ ಸುಬ್ಬು ನಿಂತಿರುವುದನ್ನು ನೋಡಿ ಗಟ್ಟಿಯಾಗಿ ಸುಬ್ಬು ಎಂದು ಕೂಗಿಕೊಂಡು ತಬ್ಬಿಕೊಂಡು ಅಳಲು ಶುರು ಮಾಡುತ್ತಾಳೆ. ಅದನ್ನು ನೋಡಿದ ಸುಬ್ಬು ಗಾಬರಿಯಾಗುತ್ತಾನೆ. ಕೂಡಲೇ ಮನೆಯ ಒಳಗೆ ಇರುವವರೆಲ್ಲಾ ಹೊರ ಬಂದು ನೋಡಿದಾಗ ಸುಬ್ಬು ಅಲ್ಲಿ ನಿಂತಿರುವುದು ಕಾಣಿಸುತ್ತದೆ. ಸುಬ್ಬುವನ್ನು ಕಂಡವರಿಗೆಲ್ಲಾ ಹೋದ ಜೀವ ಮರಳಿ ಬಂದಂತೆ ಆಗುತ್ತದೆ. ದುಃಖದ ಕೋಡಿಯಲ್ಲಿ ಮುಳುಗಿದ್ದ ಮನೆಯಲ್ಲಿ ಸಂತಸ ಮತ್ತೆ ಮರುಕಳಿಸುತ್ತದೆ. ಸುಬ್ಬು ಹುಟ್ಟುಹಬ್ಬಕ್ಕೆ ಕೇಕ್‌ ಕಟ್‌ ಮಾಡಲು ಎಲ್ಲರೂ ರೆಡಿ ಆಗುತ್ತಾರೆ.

ಇತ್ತ ಫಾರ್ಮ್‌ಹೌಸ್‌ಗೆ ಬಂದಿದ್ದ ವ್ಯಕ್ತಿಯನ್ನು ನೋಡಿರುತ್ತಾರೆ ರೌಡಿಗಳು. ಅದನ್ನು ವಿಜಯಾಂಬಿಕಾ ಬಳಿ ಹೇಳಿದ್ರೆ ಅವನನ್ನ ಸಾಯಿಸದೇ ಬಿಟ್ಟಿದ್ದಕ್ಕೆ ಕೋಪ ಮಾಡಿಕೊಳ್ಳುತ್ತಾಳೆ ಎಂದುಕೊಂಡು ಆ ವಿಚಾರ ಹೇಳದೇ ಇರಲು ನಿರ್ಧಾರ ಮಾಡುತ್ತಾರೆ. ಆದರೆ ಒಬ್ಬ ರೌಡಿ ಮಾತ್ರ ತಾನು ಅದನ್ನು ಹೇಳಿ, ವಿಜಯಾಂಬಿಕಾಗೆ ಹತ್ತಿರ ಆಗಬೇಕು ಎಂದು ನಿರ್ಧಾರ ಮಾಡುತ್ತಾನೆ.

ಸುಬ್ಬು ಮೇಲೆ ರೌಡಿಗಳು ಅಟ್ಯಾಕ್‌ ಮಾಡಿ ಇರ್ತಾರಾ, ರೌಡಿಗಳು ನೋಡಿದ್ದು ಸುಬ್ಬುವನ್ನ, ಸುಬ್ಬು ಅಷ್ಟೊತ್ತು ಹೋಗಿದಾದ್ರು ಎಲ್ಲಿಗೆ ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.