ಸುಬ್ಬು ಮೇಲೆ ಶ್ರಾವಣಿಗೆ ವಿಶೇಷ ಒಲವು, ನಿಜವಾಗುತ್ತಾ ಕಾಂತಮ್ಮ ನುಡಿದ ಶಕುನ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ಸುಬ್ಬು ಮೇಲೆ ಶ್ರಾವಣಿಗೆ ವಿಶೇಷ ಒಲವು, ನಿಜವಾಗುತ್ತಾ ಕಾಂತಮ್ಮ ನುಡಿದ ಶಕುನ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

ಸುಬ್ಬು ಮೇಲೆ ಶ್ರಾವಣಿಗೆ ವಿಶೇಷ ಒಲವು, ನಿಜವಾಗುತ್ತಾ ಕಾಂತಮ್ಮ ನುಡಿದ ಶಕುನ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

Shravani Subramanya Kannada Serial Today Episode August 20th: ಮಿನಿಸ್ಟರ್‌ ವೀರೇಂದ್ರ ಮನೆಯಲ್ಲಿ ಸುಬ್ಬು ಹುಟ್ಟುಹಬ್ಬದ ಸಂಭ್ರಮ. ಶ್ರೀವಲ್ಲಿ ಸುಬ್ಬುಗೆ ಹತ್ತಿರವಾದ್ರೆ ಶ್ರಾವಣಿಗೆ ಸಹಿಸಲು ಆಗುತ್ತಿಲ್ಲ. ಕಾಂತಮ್ಮ ನುಡಿದ ಶಕುನ ನಿಜವಾಗುವ ಸಾಧ್ಯತೆ ಇದ್ಯಾ? ಸುಬ್ಬು ಮೇಲೆ ಶ್ರಾವಣಿಗೆ ಲವ್‌ ಆಗಿದ್ಯಾ?

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಆಗಸ್ಟ್‌ 20ರ ಸಂಚಿಕೆ
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಆಗಸ್ಟ್‌ 20ರ ಸಂಚಿಕೆ

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ನಿನ್ನೆಯ (ಆಗಸ್ಟ್‌ 20ರ) ನಿಗೂಢವಾಗಿ ಕಾಣೆಯಾದ ಸುಬ್ಬು ಯಾವುದೇ ತೊಂದರೆ ಇಲ್ಲದೇ ಮನೆಗೆ ಬಂದ ಸಂಭ್ರಮದ ಜೊತೆಗೆ ಹುಟ್ಟುಹಬ್ಬದ ಸಂಭ್ರಮವೂ ಸೇರಿ ಮಿನಿಸ್ಟರ್‌ ವೀರೇಂದ್ರ ಮನೆಯಲ್ಲಿ ಹಬ್ಬದ ಕಳೆ ಇರುತ್ತದೆ. ಎಲ್ಲರೂ ಸುಬ್ಬು ಯೋಗಕ್ಷೇಮ ವಿಚಾರಿಸುತ್ತಾ ನಿಂತಿರುವಾಗ ಶ್ರಾವಣಿ ಕೇಕ್‌ ಕಟ್‌ ಮಾಡುವ ವಿಚಾರ ನೆನಪಿಸುತ್ತಾಳೆ. ಸುಬ್ಬು ಇನ್ನೇನು ಕೇಕ್‌ ಕಟ್‌ ಮಾಡಬೇಕು ಅಂದುಕೊಳ್ಳುತ್ತಿರುವಾಗ ವೀರೇಂದ್ರ ಸುಬ್ಬುಗೆ ʼನನ್ನ ಕೋಣೆಯಲ್ಲಿ ನಿಂಗೊಂದು ಸರ್ಪ್ರೈಸ್‌ ಇದೆ. ನಂಗೊತ್ತು ನಿಂಗೆ ಇದೆಲ್ಲಾ ಇಷ್ಟ ಆಗೊಲ್ಲ ಅಂತ, ಆದರೂ ನಾನು ನನ್ನ ಖುಷಿಗೆ ನಿನಗೆ ಅದನ್ನ ಕೊಡ್ತಾ ಇದೀನಿ, ಇವತ್ತು ನೀನು ನನಗೋಸ್ಕರ ನಾನು ಅಂದುಕೊಂಡ ಹಾಗೆ ಇರಬೇಕುʼ ಎಂದು ಹೇಳಿ ಸುಬ್ಬುಗೆ ಮರು ಮಾತನಾಡಲು ಬಿಡಿದೇ ಕೋಣೆಗೆ ಕಳುಹಿಸುತ್ತಾರೆ. ಕೋಣೆಗೆ ಹೋದ ಸುಬ್ಬುಗೆ ಆಶ್ಚರ್ಯ ಕಾದಿರುತ್ತದೆ. ಕೋಣೆಯಲ್ಲಿ ವೀರೇಂದ್ರ ಸುಬ್ಬುಗಾಗಿ ಬೆಲೆಬಾಳುವ ಶೇರ್ವಾನಿ ಡ್ರೆಸ್‌ ಇಟ್ಟಿರುತ್ತಾರೆ. ಅದನ್ನು ನೋಡಿ ಮುಜುಗರ ಪಟ್ಟುಕೊಂಡು ವಾಪಾಸ್‌ ಹೋಗುವ ಸುಬ್ಬುಗೆ ಯಜಮಾನರು ಹೇಳಿರುವ ಮಾತು ನೆನಪಾಗಿ ಮರಳಿ ಬಂದು ಅದನ್ನು ಧರಿಸಿ ಕೆಳಗೆ ಹೋಗುತ್ತಾನೆ. ಸುಬ್ಬುವನ್ನು ಶೇರ್ವಾನಿಯಲ್ಲಿ ನೋಡಿ ಎಲ್ಲರೂ ಖುಷಿ ಪಡುತ್ತಾರೆ.

ಹುಟ್ಟುಹಬ್ಬದ ಖುಷಿಯಲ್ಲಿ ಸುಬ್ಬು-ಶ್ರಾವಣಿ ಕುಟುಂಬ

ಹೊಸ ಬಟ್ಟೆ ಧರಿಸಿ ಬರುವ ಸುಬ್ಬುಗೆ ಕೇಕ್‌ ಕಟ್‌ ಮಾಡಲು ಎಲ್ಲಾ ಸಿದ್ಧತೆ ನಡೆಯುತ್ತದೆ. ಕೇಕ್‌ ಮಾಡಿಸಿ ಮೊದಲು ಯಜಮಾನರಿಗೆ ಕೇಕ್‌ ತಿನ್ನಿಸಿ, ಅಪ್ಪ-ಅಮ್ಮನಿಗೆ ಕೇಕ್‌ ತಿನ್ನಿಸಿ ಶ್ರಾವಣಿಗೂ ತಿನ್ನಿಸುತ್ತಾನೆ. ಆಗ ಶ್ರೀವಲ್ಲಿ ತಾನೇ ಬಂದು ಸುಬ್ಬು ಕೈಯಿಂದ ಕೇಕ್‌ ತಿನ್ನಿಸಿಕೊಳ್ಳುತ್ತಾಳೆ. ಎಲ್ಲರೂ ಸುಬ್ಬುವನ್ನು ಹೊಗಳಿ ಮಾತನಾಡುತ್ತಾರೆ. ಆಗ ಶ್ರೀವಲ್ಲಿ ಕೂಡ ಸುಬ್ಬು ಬಗ್ಗೆ ಅಭಿಮಾನದ ಮಾತುಗಳನ್ನ ಹೇಳುತ್ತಾಳೆ. ಅವಳ ಮಾತು ಕೇಳಿ ಶ್ರಾವಣಿಗೆ ಉರಿದು ಹೋಗುತ್ತದೆ. ತನ್ನ ಮನಸ್ಸಲ್ಲೂ ಈ ಮಾತುಗಳು ಇದ್ದವು ಆದರೆ ನಾನು ಹೇಳಿಲ್ಲ ಎಂದು ಶ್ರಾವಣಿ ಬೇಸರ ಮಾಡಿಕೊಳ್ಳುತ್ತಾಳೆ. ಶ್ರಾವಣಿಗೆ ಅರಿವಾಗದಂತೆ ಅವಳ ಮನಸ್ಸಿನಲ್ಲಿ ವಿಚಿತ್ರ ಆಸೆಯೊಂದು ಸುಬ್ಬು ಬಗ್ಗೆ ಹುಟ್ಟಿಕೊಂಡಿರುತ್ತದೆ.

ಶಕುನ ನುಡಿದ ಕಾಂತಮ್ಮ

ಸುಬ್ಬು ಮನೆಯವರನ್ನು ರಾತ್ರಿ ತಮ್ಮ ಮನೆಯಲ್ಲೇ ಉಳಿದು ಬೆಳಗೆದ್ದು ಹೋಗುವಂತೆ ಹೇಳುತ್ತಾರೆ ವೀರೇಂದ್ರ, ಆರಂಭದಲ್ಲಿ ಬೇಡ ಎನ್ನುವ ಸುಬ್ಬು, ಪದ್ಮನಾಭ ಕೊನೆಗೆ ಒಪ್ಪಿಕೊಳ್ಳುತ್ತಾರೆ. ಇತ್ತ ವಿಜಯಾಂಬಿಕ ಅಸಮಾಧಾನದಲ್ಲಿ ಕುದಿಯುತ್ತಿರುತ್ತಾಳೆ. ಅಲ್ಲದೇ ಸುಬ್ಬು ಮನೆಯವರಿಗೆ ಏನಾದ್ರೂ ಮಾಡಲೇಬೇಕು ಎಂದು ಯೋಚಿಸುತ್ತಿರುತ್ತಾಳೆ. ಅಷ್ಟೊತ್ತಿಗೆ ಬಾಗಿಲ ಬಳಿ ಪದ್ಮನಾಭ ನಿಂತಿರುವುದು ಕಾಣಿಸುತ್ತದೆ. ಇತ್ತ ಏಸಿ ಕೋಣೆಯಲ್ಲಿ ತಣ್ಣಗೆ ಹೊದು ಕುಳಿತುಕೊಳ್ಳುವ ಕಾಂತಮ್ಮ ಸುಂದರ ಇದೇ ಮನೆಯಲ್ಲಿ ಯಾವಾಗಲೂ ಇರುವ ಹಾಗಾದರೆ ಎಷ್ಟು ಚೆಂದ ಎಂದು ಕನಸು ಕಾಣುತ್ತಿರುತ್ತಾರೆ. ಅಲ್ಲದೇ ಕಾಂತಮ್ಮ ಸುಬ್ಬು-ಶ್ರಾವಣಿ ಮದುವೆ ಬಗ್ಗೆ ಶಕುನ ನುಡಿಯುತ್ತಾಳೆ. ಮಾತ್ರವಲ್ಲ ಶ್ರಾವಣಿ ಮನಸ್ಸಲ್ಲಿ ಸುಬ್ಬು ಬಗ್ಗೆ ಸಣ್ಣ ಆಸೆ ಹುಟ್ಟಿಕೊಂಡಿದೆ ಎಂದು ಕೂಡ ಮಗನ ಬಳಿ ಹೇಳುತ್ತಾಳೆ. ಇತ್ತ ವೀರೇಂದ್ರ ಶ್ರಾವಣಿ ಬಳಿ ನಾನು ಸುಬ್ಬು ಹುಟ್ಟುಹಬ್ಬದ ನೆಪದಲ್ಲಿ ನಿನಗೆ ಹತ್ತಿರವಾದೆ ವಿನಹಃ ನಾನು ಜೀವನಪೂರ್ತಿ ಹೀಗೆ ಇರುತ್ತೇನೆ ಅಂದುಕೊಳ್ಳಬೇಡ. ಸಾಲಿಗ್ರಾಮದಲ್ಲಿ ಮಾತ್ರ ನಾವು ಅಪ್ಪ-ಮಗಳ ಎಂದು ಖಡಾಖಂಡಿತವಾಗಿ ಹೇಳಿ ಹೋಗುತ್ತಾರೆ. ಇದರಿಂದ ಖುಷಿಯಲ್ಲಿ ಹಾರಾಡುತ್ತಿದ್ದ ಶ್ರಾವಣಿ ಮನಸ್ಸು ದುಃಖದಲ್ಲಿ ಮುಳುಗುತ್ತದೆ.

ವೀರೇಂದ್ರ-ಶ್ರಾವಣಿ ಹತ್ತಿರವಾಗೋದೇ ಇಲ್ವಾ, ಪದ್ಮನಾಭ ವಿಜಯಾಂಬಿಕಾ ಬಳಿ ಹೋಗಿದಾದ್ರು ಯಾಕೆ, ಕಾಂತಮ್ಮ ಶಕುನ ನಿಜ ಆಗುತ್ತಾ, ಶ್ರಾವಣಿಗೆ ಸುಬ್ಬು ಮೇಲೆ ಲವ್‌ ಆಗಿದ್ಯಾ? ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.

Whats_app_banner