ಸುಬ್ಬು ಅಂಗಿ ಧರಿಸಿದ ತಪ್ಪಿಗೆ ರೌಡಿಗಳಿಗೆ ಟಾರ್ಗೆಟ್ ಆದ ಸುಂದ್ರ, ಶ್ರಾವಣಿ ಮೇಲೆ ವಂದನಾಗೆ ಶುರುವಾಯ್ತು ಅನುಮಾನ; ಶ್ರಾವಣಿ ಸುಬ್ರಹ್ಮಣ್ಯ
Shravani Subramanya Kannada Serial Today Episode August 23rd: ವರನ ಮಾತು ಕೇಳಿಸಿಕೊಳ್ಳುತ್ತಿಲ್ಲ ಸುಬ್ಬು, ದುಡುಕಿನ ನಿರ್ಧಾರ ತೆಗೆದುಕೊಳ್ತಾಳಾ ವರಲಕ್ಷ್ಮೀ. ಸುಬ್ಬು ಡ್ರೆಸ್ ಧರಿಸಿದ ತಪ್ಪಿಗೆ ರೌಡಿಗಳಿಗೆ ಟಾರ್ಗೆಟ್ ಆದ ಶ್ಯಾಮಸುಂದರ. ಸುಬ್ಬು ಮೇಲೆ ಶ್ರಾವಣಿಗೆ ಮೂಡುತ್ತಿರುವ ಭಾವನೆಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾಳೆ ಭಾವನ.
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ನಿನ್ನೆಯ (ಆಗಸ್ಟ್ 23ರ) ಸಂಚಿಕೆಯಲ್ಲಿ ಸ್ನೇಹಿತೆ ಕಾಲ್ ಮಾಡಿ ವರ–ವರದನ ಪ್ರೀತಿ ಬಗ್ಗೆ ವಿಚಾರಿಸಿ ಮನೆಯವರ ಸಹಕಾರ ಸಿಗುತ್ತಿಲ್ಲ ಎಂದು ಹೇಳಿದಾಗಿನಿಂದ ವರಲಕ್ಷ್ಮೀಗೆ ನೆಮ್ಮದಿ ಇರುವುದಿಲ್ಲ. ಈ ವಿಚಾರವಾಗಿ ಇನ್ನೊಮ್ಮೆ ಅಣ್ಣನ ಬಳಿ ಮಾತನಾಡಬೇಕು ಎಂದು ನಿರ್ಧಾರ ಮಾಡುತ್ತಾಳೆ. ಬೆಳಿಗ್ಗೆ ಸುಬ್ಬು ಕೆಲಸಕ್ಕೆ ಹೊರಟಾಗ ಹಿಂದೆ ಬರುವ ವರ ಅಣ್ಣನ ಬಳಿ ನಿನ್ನ ಜೊತೆ ಒಂದೆರಡು ಮಾತನಾಡಬೇಕು ಎಂದು ರಿಕ್ವೆಸ್ಟ್ ಮಾಡಿಕೊಳ್ಳುತ್ತಾಳೆ. ಆದರೆ ಕೆಲಸದಲ್ಲಿ ಗಡಿಬಿಡಿಯಲ್ಲಿದ್ದ ಸುಬ್ಬು ಸಂಜೆ ಮಾತನಾಡುತ್ತೇನೆ ಎಂದು ಹೇಳಿ ಹೊರಟು ಬಿಡುತ್ತಾನೆ. ಆಗ ವರಲಕ್ಷ್ಮೀಗೆ ಬೇರೆ ದಾರಿ ತೋಚದೆ ತಾಯಿಯ ಬಳಿ ಮಾತನಾಡಬೇಕು ಎಂದು ನಿರ್ಧಾರ ಮಾಡುತ್ತಾಳೆ.
ಸುಬ್ಬು ಬದಲು ರೌಡಿಗಳಿಗೆ ಟಾರ್ಗೆಟ್ ಆದ ಸುಂದರ
ವಿಜಯಾಂಬಿಕಾ ದ್ವೇಷದ ದಳ್ಳುರಿಗೆ ಸುಬ್ಬುವನ್ನು ಬಲಿ ಕೊಡಬೇಕು ಎಂದು ನಿರ್ಧಾರ ಮಾಡಿರುತ್ತಾಳೆ. ಸುಬ್ಬು ಕೊಲ್ಲಲು ರೌಡಿಗಳನ್ನು ನೇಮಿಸಿರುತ್ತಾಳೆ ಶ್ರಾವಣಿ ಅತ್ತೆ. ರೌಡಿಗಳ ಬಳಿ ಸುಬ್ಬುವಿನ ಚಹರೆ, ಡ್ರೆಸ್, ಬೈಕ್ ಬಗ್ಗೆ ಎಲ್ಲಾ ಹೇಳಿ ಟಾರ್ಗೆಟ್ ನೀಡಿರುತ್ತಾಳೆ. ಇತ್ತ ಸುಬ್ಬು ಕೆಲಸಕ್ಕೆ ಹೊರಟ ಮೇಲೆ ಅತ್ತೆ ಜೊತೆ ಮಾರ್ಕೆಟ್‌ಗೆ ಹೋಗಲು ಸಿದ್ಧಳಾಗುತ್ತಾನೆ ಸುಂದರ. ಆಗ ಸುಬ್ಬು ಡ್ರೆಸ್ ಧರಿಸಿ ಬರುತ್ತಾನೆ. ಮಾರ್ಕೆಟ್‌ಗೆ ಹೋಗಲು ಹೊರ ಬಂದಾಗ ಅವನಿಗೆ ಸುಬ್ಬು ಬೈಕ್ ನಿಂತಿರುವುದು ಕಾಣಿಸುತ್ತದೆ. ಬೈಕ್ ಹಾಳಾಗಿತ್ತೆಂದು ಆಟೊದಲ್ಲಿ ಹೋಗಿರುತ್ತಾನೆ ಸುಬ್ಬು. ಸುಬ್ಬು ಬೈಕ್ ಹತ್ತಿ ಸ್ಟಾರ್ಟ್ ಮಾಡಲು ಯತ್ನಿಸುವ ಸುಂದರನನ್ನು ನೋಡಿ ಅವನೇ ಸುಬ್ಬು ಎಂದುಕೊಳ್ಳುತ್ತಾರೆ ರೌಡಿಗಳು. ಆದರೆ ಬೈಕ್ ಸ್ಟಾರ್ಟ್ ಆಗದೇ ಇದ್ದಾಗ ವಿಶಾಲಾಕ್ಷ್ಮೀ, ವರ ಹಾಗೂ ಸುಂದರ ಆಟೊದಲ್ಲಿ ಮಾರ್ಕೆಟ್‌ಗೆ ಹೋಗುತ್ತಾರೆ. ಸುಂದರನನ್ನೆ ಸುಬ್ಬು ಎಂದುಕೊಂಡ ಸುಂದರನನ್ನು ಮುಗಿಸಬೇಕು ಎಂದು ರೌಡಿಗಳು ಸಿದ್ಧರಾಗುತ್ತಾರೆ.
ಸುಬ್ಬು ಮೇಲೆ ಶ್ರಾವಣಿಗೆ ಬದಲಾಗುತ್ತಿದೆ ಒಲವು, ವಂದನಾಗೆ ದಿಗಿಲು
ಸುಬ್ಬು ಬಗ್ಗೆ ಯೋಚಿಸುತ್ತಾ ಕುಳಿತಿರುವ ಶ್ರಾವಣಿಗೆ ತನ್ನಲಾಗುತ್ತಿರುವ ಬದಲಾವಣೆಗಳು ಬಗ್ಗೆ ಅರಿವೇ ಇರುವುದಿಲ್ಲ. ಸುಬ್ಬು ಶ್ರೀವಲ್ಲಿ ಜೊತೆ ಕ್ಲೋಸ್ ಆಗುವುದನ್ನು ಸಹಿಸಲು ಸಾಧ್ಯವಾಗುತ್ತಿಲ್ಲ ಶ್ರಾವಣಿಗೆ. ತನ್ನಲ್ಲಿ ಹೀಗೇಕೆ ಪೊಸೆಸಿವ್‌ನೆಸ್ ಬೆಳೆಯುತ್ತಿದೆ, ಸುಬ್ಬು ಶ್ರೀವಲ್ಲಿ ಜೊತೆ ಕ್ಲೋಸ್ ಆದ್ರೆ ನನಗೇನು ಎಂದುಕೊಳ್ಳುವ ಶ್ರಾವಣಿ ತನ್ನಲ್ಲಾಗುತ್ತಿರುವ ಬದಲಾವಣೆಗೆ ಕಾರಣ ಏನು ಎಂದು ತಿಳಿಯದೇ ಗೊಂದಲಕ್ಕೆ ಒಳಗಾಗುತ್ತಾಳೆ. ಇತ್ತ ಶ್ರಾವಣಿಗೆ ಸುಬ್ಬು ಮೇಲೆ ಬದಲಾಗುತ್ತಿರುವ ಭಾವನೆಗಳನ್ನು ಗಮನಿಸಿದ ವಂದನಾಗೆ ದಿಗಿಲು ಆರಂಭವಾಗಿದೆ, ಈ ವಿಚಾರವಾಗಿ ತನ್ನ ಗಂಡ ಸುರೇಂದ್ರನ ಬಳಿ ಮಾತನಾಡಿದ್ರು ಈ ಬಗ್ಗೆ ನಕಾರಾತ್ಮಕವಾಗಿ ಮಾತನಾಡಿ ವಂದನಾಳನ್ನು ಸಮಾಧಾನ ಮಾಡುತ್ತಾರೆ ಸುರೇಂದ್ರ.
ಸುಬ್ಬು ಎಂದುಕೊಂಡು ಸುಂದರನನ್ನ ಫಾಲೋ ಮಾಡುತ್ತಿರುವ ರೌಡಿಗಳು ಅವನನ್ನ ಕೊಲ್ಲುತ್ತಾರಾ, ಶ್ರಾವಣಿಗೆ ನಿಜಕ್ಕೂ ಸುಬ್ಬು ಮೇಲೆ ಪ್ರೀತಿ ಆಗಿದ್ಯಾ, ತನ್ನ ಮದುವೆ ವಿಚಾರವಾಗಿ ಅಮ್ಮನ ಬಳಿ ಮಾತನಾಡ್ತಾಳಾ ವರಲಕ್ಷ್ಮೀ ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.