ವಿಜಯಾಂಬಿಕಾ ಐಡಿಯಾ ಪ್ಲಾಪ್–ಸುಬ್ಬು ಸೇಪ್, ರೌಡಿಗಳ ಅಟ್ಟಹಾಸಕ್ಕೆ ಬಲಿಯಾಗ್ತಾಳಾ ವರಲಕ್ಷ್ಮೀ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ
Shravani Subramanya Kannada Serial Today Episode August 26th: ರೌಡಿಗಳಿಂದ ಸೇಫ್ ಆದ ಸುಬ್ಬು, ಪ್ಲಾಪ್ ಆಯ್ತು ವಿಜಯಾಂಬಿಕಾ ಪ್ಲಾನ್. ವಂದನಾಗೆ ಸುಬ್ಬು–ಶ್ರಾವಣಿ ಪ್ರೀತಿ ಮಾಡಿದ್ರೆ ಏನಾಗಬಹುದು ಎಂಬ ಭಯ. ಸುಂದರ ಮೇಲೆ ಅಟ್ಯಾಕ್ ಮಾಡಿದ ರೌಡಿಗಳು, ಸಂಕಷ್ಟಕ್ಕೆ ಸಿಲುಕಿದ ವರಲಕ್ಷ್ಮೀ.
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ನಿನ್ನೆಯ (ಆಗಸ್ಟ್ 26ರ) ಹುಟ್ಟುಹಬ್ಬದ ಸಂಭ್ರಮವೆಲ್ಲಾ ಮುಗಿದು ಎಂದಿನಂತೆ ಕೆಲಸಕ್ಕೆ ಬಂದ ಸುಬ್ಬು ನಿನ್ನೆಯ ಸಂಭ್ರಮವನ್ನೆಲ್ಲಾ ಮರೆತು ಕೆಲಸದಲ್ಲಿ ತಲ್ಲೀನನಾಗಿರುವುದನ್ನು ನೋಡಿ ಅಚ್ಚರಿ ಪಡುತ್ತಾರೆ ಮಿನಿಸ್ಟರ್ ವೀರೇಂದ್ರ. ಸುಬ್ಬುವನ್ನು ಹಾಡಿ ಹೊಗಳುವ ವೀರೇಂದ್ರ ನೀನು ಈ ಮನೆಗೆ ನನಗೆ ಮಗನಿದ್ದಂತೆ, ನಿನ್ನಷ್ಟು ನೀಯತ್ತು ಯಾರಿಗೂ ಇರಲು ಸಾಧ್ಯವಿಲ್ಲ ಎಂದು ಮನಸಾರೆ ಹೊಗಳುತ್ತಾರೆ. ಅವರ ಮಾತುಗಳನ್ನು ಕೇಳಿಸಿಕೊಳ್ಳುವ ವಂದನಾ ಭಾವ ಸುಬ್ಬು ಮೇಲೆ ಇಷ್ಟೆಲ್ಲಾ ನಂಬಿಕೆ ಇಟ್ಟಿದ್ದಾರೆ. ಆದರೆ ಸುಬ್ಬು–ಶ್ರಾವಣಿ ನಡುವೆ ಪ್ರೀತಿ ಹುಟ್ಟಿದ್ರೆ ಈ ಮನೆಯ ನೆಮ್ಮದಿ ಹಾಳಾಗುತ್ತೆ, ನಂಬಿಕೆ ಹಾಳಾಗುತ್ತೆ, ಆ ರೀತಿ ಎಂದು ಆಗದಿರಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತಾರೆ. ಇತ್ತ ಸುಬ್ಬುವನ್ನು ಮನೆಯಲ್ಲಿ ನೋಡಿ ಶಾಕ್ ಆಗುವ ಮದನ್ ತಾಯಿಗೆ ಬಳಿಗೆ ಓಡುತ್ತಾನೆ.
ಸುಬ್ಬು ಸೇಫ್, ವಿಜಯಾಂಬಿಕಾ ಪ್ಲಾಪ್
ಸುಬ್ಬುವನ್ನು ಕೊಲ್ಲಲ್ಲು ಟಾರ್ಗೆಟ್ ನೀಡಿದ್ದ ರೌಡಿಗಳು ಸುಬ್ಬುವನ್ನು ಹಿಂಬಾಲಿಸಿಕೊಂಡು ಹೋಗುತ್ತಿದ್ದೇವೆ ಎಂದು ಕಾಲ್ ಮಾಡಿ ಹೇಳಿದಾಗ ವಿಜಯಾಂಬಿಕಾ ಸಂಭ್ರಮ ಪಡುತ್ತಾಳೆ. ಇನ್ನೇನು ಸುಬ್ಬು ಕತೆ ಮುಗಿದಿರುತ್ತದೆ ಎಂದು ಯೋಚಿಸುತ್ತಿರುತ್ತಾಳೆ. ಆದರೆ ಆ ಹೊತ್ತಿಗೆ ತಾಯಿಯ ಬಳಿಗೆ ಗಾಬರಿಯಲ್ಲಿ ಓಡಿ ಬರುವ ಮದನ್ ಅಮ್ಮನ ಬಳಿ ಸುಬ್ಬು ಹಾಲ್‌ನಲ್ಲೇ ಇರುವ ವಿಚಾರ ಹೇಳುತ್ತಾನೆ. ಇದನ್ನು ಕೇಳಿ ಶಾಕ್ ಆಗುವ ವಿಜಯಾಂಬಿಕಾ ಹಾಗಾದ್ರೆ ರೌಡಿಗಳು ಫಾಲೋ ಮಾಡಿಕೊಂಡು ಹೋಗಿದ್ದು ಯಾರನ್ನ ಎಂದು ತಿಳಿಯದೇ ಗೊಂದಲಕ್ಕೆ ಸಿಲುಕುತ್ತಾಳೆ. ಕೂಡಲೇ ರೌಡಿಗಳಿಗೆ ಕರೆ ಮಾಡುತ್ತಾಳೆ. ಆದರೆ ಅವರ ನಂಬರ್ ನಾಟ್ ರಿಚೇಬಲ್ ಬರುತ್ತಿರುತ್ತದೆ.ಆಗ ಮದನ್‌ಗೆ ತಾಯಿಯೇ ರೌಡಿಗಳ ಬಳಿ ನಂಬರ್ ಸ್ವಿಚ್ ಆಫ್ ಮಾಡುವಂತೆ ಹೇಳಿದ್ದು ನೆನಪಾಗುತ್ತದೆ.
ಸುಬ್ಬು ಬಳಿ ಶ್ರಾವಣಿ ಬಗ್ಗೆ ಅಭಿಪ್ರಾಯ ಕೇಳುವ ವಂದನಾ
ಶ್ರಾವಣಿ ಸುಬ್ಬುವನ್ನು ಪ್ರೀತಿಸುತ್ತಿದ್ದಾಳೆ ಎಂದು ವಂದನಾಗೆ ಅನ್ನಿಸಿದ ದಿನದಿಂದ ಅವಳಿಗೆ ನೆಮ್ಮದಿಯೇ ಇರುವುದಿಲ್ಲ. ಈ ವಿಚಾರವನ್ನು ಹೇಗಾದರೂ ದೃಢಪಡಿಸಿಕೊಳ್ಳಬೇಕು ಎಂದುಕೊಂಡು ಸುಬ್ಬು ಬಳಿ ನೇರವಾಗಿ ಮಾತನಾಡುತ್ತಾಳೆ. ಸಹಜವಾಗಿಯೇ ಮಾತನಾಡುತ್ತಾ ನಿನಗೆ ಈ ಮನೆ ಬಗ್ಗೆ ಏನ್ನನ್ನಿಸುತ್ತೆ ಎಂದು ಕೇಳುತ್ತಾಳೆ. ಅದಕ್ಕೆ ಸುಬ್ಬು ಈ ಮನೆಗೆ ನನಗೆ ದೇವಸ್ಥಾನ ಇದ್ದ ಹಾಗೆ ಅನ್ನುತ್ತಾನೆ, ಭಾವನ (ವೀರೇಂದ್ರ) ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂದು ಕೇಳಿದಾಗ ಸುಬ್ಬು ಅವರು ನನಗೆ ದೇವರ ಸಮಾನ ಎಂದು ಹೇಳುತ್ತಾನೆ. ಅದೇ ಹೊತ್ತಿಗೆ ಶ್ರಾವಣಿ ಬಗ್ಗೆಯೂ ಅಭಿಪ್ರಾಯ ಕೇಳುತ್ತಾಳೆ. ಅದಕ್ಕೆ ಸುಬ್ಬು ‘ಅವರು ಒಂಥರಾ ಮಗು ಥರ, ಆದರೆ ಬುದ್ಧಿವಂತಿಕೆ ಇರುವ ಮಗು ಅವರು, ಅವರ ಬಗ್ಗೆ ನನಗೆ ಹೆಮ್ಮೆ ಗೌರವ ಇದೆ, ಮನಸ್ಸಿನಲ್ಲಿ ಎಷ್ಟೇ ನೋವಿದ್ರು ಬಚ್ಚಿಟ್ಟುಕೊಂಡು ನಗುತ್ತಾ ಬದುಕುತ್ತಾರೆ. ಇದು ಕೂಡ ನನಗೆ ದೇವತೆ ಸಮಾನ‘ ಎಂದು ಹೇಳಿ ಮಿನಿಸ್ಟರ್ ವೀರೇಂದ್ರ ಹಾಗೂ ಆ ಮನೆಯವರ ಮೇಲಿರುವ ಅಭಿಪ್ರಾಯ ತಿಳಿಸುತ್ತಾನೆ. ಇದನ್ನ ಕೇಳಿಸಿಕೊಂಡ ವಂದನಾಗೆ ನೆಮ್ಮದಿ ಎನ್ನಿಸುತ್ತದೆ. ಆದರೆ ಶ್ರಾವಣಿಗೆ ಸುಬ್ಬು ಮೇಲೆ ಯಾವ ಅಭಿಪ್ರಾಯ ಇದೆ ಎಂದು ಹೇಗೆ ತಿಳಿಯಬಹುದು ಎಂದು ಯೋಚನೆ ಮಾಡುತ್ತಾಳೆ. ಶ್ರಾವಣಿಗೆ ಸುಬ್ಬು ಮೇಲೆ ಬೇರೆ ಅಭಿಪ್ರಾಯ ಇದ್ದರೆ ಏನು ಕಥೆ ಎಂದು ವಂದನಾ ಚಿಂತಿಸುತ್ತಾಳೆ.
ರೌಡಿಗಳ ಕೈಯಲ್ಲಿ ವಿಶಾಲಾಕ್ಷಿ, ಸುಂದರ, ವರ
ಸುಂದರನನ್ನೇ ಸುಬ್ಬು ಎಂದುಕೊಂಡು ಫಾಲೋ ಮಾಡಿಕೊಂಡು ಬರುವ ರೌಡಿಗಳು ಮಾರುಕಟ್ಟೆಯಲ್ಲಿ ಬೇಕಂತಲೇ ವಿಶಾಲಾಕ್ಷಿಗೆ ಡಿಕ್ಕಿ ಹೊಡೆಯುತ್ತಾರೆ. ಆಗ ಸುಂದರ ತಾನು ದೊಡ್ಡ ರೌಡಿ ಎಂಬಂತೆ ಬಿಲ್ಡಪ್ ಕೊಡುತ್ತಾನೆ. ಆರಂಭದಲ್ಲಿ ಸುಮ್ಮನಿದ್ದ ರೌಡಿಗಳು ಸುಂದರನಿಗೆ ಚೆನ್ನಾಗಿ ತದುಕುತ್ತಾರೆ. ವರ, ವಿಶಾಲಾಕ್ಷಿ ಸುಂದರನನ್ನು ಬಿಡಿಸಲು ಪ್ರಯತ್ನ ಮಾಡುತ್ತಿರುತ್ತಾರೆ. ಆದರೆ ರೌಡಿಗಳು ಅವನಿಗೆ ಸರಿಯಾಗಿ ಹೊಡೆಯುತ್ತಾರೆ. ಅಷ್ಟೊತ್ತಿಗೆ ಅವರನ್ನು ತಡೆಯಲು ಬಂದ ವಿಶಾಲಾಕ್ಷಿಯನ್ನು ನೂಕುತ್ತಾರೆ ರೌಡಿಗಳು. ದೂರಕ್ಕೆ ಹೋಗಿ ಬೈಕ್ ಬಳಿ ಬೀಳುವ ವಿಶಾಲಾಕ್ಷಿ ಹಣೆಗೆ ದೊಡ್ಡ ಗಾಯವಾಗುತ್ತದೆ. ಅಮ್ಮನನ್ನ ಆ ಸ್ಥಿತಿಯಲ್ಲಿ ನೋಡಿ ಗಾಬರಿಯಾಗುವ ವರಲಕ್ಷ್ಮೀ ಆರಂಭದಲ್ಲಿ ಅಳಲು ಶುರು ಮಾಡುತ್ತಾರೆ. ಮಾರುಕಟ್ಟೆಯಲ್ಲಿರುವ ಯಾರು ಇವರ ಸಹಾಯಕ್ಕೆ ಬರುವುದಿಲ್ಲ.ಅಮ್ಮ ನರಳುವುದು ನೋಡಿ ರೌಡಿಗಳ ಮೇಲೆ ಕೋಪಗೊಳ್ಳುವ ವರ ಸೀದಾ ಹೋಗಿ ಒಬ್ಬ ರೌಡಿಯ ಕೆನ್ನೆ ಮೇಲೆ ಹೊಡೆಯುತ್ತಾಳೆ. ಆ ಹೊತ್ತಿಗೆ ರೌಡಿಗಳಿಂದ ತಪ್ಪಿಸಿಕೊಂಡು ಸುಂದರ ಓಡಿ ಹೋಗುತ್ತಾನೆ. ಇತ್ತ ರೌಡಿಗಳು ವರಳ ಜೊತೆ ಅಸಭ್ಯವಾಗಿ ವರ್ತಿಸಿ, ಅವಳಿಗೆ ತೊಂದರೆ ಕೊಡುತ್ತಾರೆ. ವಿಶಾಲಾಕ್ಷಿ ಸಹಾಯಕ್ಕಾಗಿ ಅಂಗಲಾಚುತ್ತಿರುತ್ತಾಳೆ. ಆದರೂ ಯಾರೂ ಸಹಾಯಕ್ಕೆ ಬರುವುದಿಲ್ಲ.
ನಿಜಕ್ಕೂ ವರಲಕ್ಷ್ಮೀಗೆ ರೌಡಿಗಳಿಂದ ಸಮಸ್ಯೆ ಆಗುತ್ತಾ, ವರಳನ್ನು ಕಾಪಾಡಲು ಯಾರಾದ್ರೂ ಬರ್ತಾರಾ, ರೌಡಿಗಳು ಸಿಕ್ಕಿಬಿದ್ದು ವಿಜಯಾಂಬಿಕಾ ಹೆಸರು ಹೊರ ಬರುತ್ತಾ, ಶ್ರಾವಣಿಗೆ ನಿಜಕ್ಕೂ ಸುಬ್ಬು ಮೇಲೆ ಲವ್ ಆಗಿದ್ಯಾ ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.