ವರಲಕ್ಷ್ಮೀ ಪಾಲಿಗೆ ವರವಾಗಿ ಬಂದ ವರದ, ಆಗಿದ್ದಾಗಲಿ ಎಂದು ಸಾಲಿಗ್ರಾಮಕ್ಕೆ ಹೊರಟ ವಿಜಯಾಂಬಿಕಾ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ
Shravani Subramanya Kannada Serial Today Episode August 27th: ಸುಬ್ಬು ಮನೆಯವರ ಪಾಲಿಗೆ ವರವಾಗಿ ಬಂದು ವಿಶಾಲಾಕ್ಷಿ, ವರಲಕ್ಷ್ಮೀಯನ್ನು ಕಾಪಾಡಿದ ವರದ. ಆಗಿದ್ದಾಗಲಿ ಎಂದು ಸಾಲಿಗ್ರಾಮಕ್ಕೆ ಹೊರಡಲು ಸಿದ್ಧಳಾದ ವಿಜಯಾಂಬಿಕಾ. ಶ್ರಾವಣಿ ಮನದ ಮಾತು ಕೇಳಿಸಿಕೊಂಡ ವಂದನಾ.
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ನಿನ್ನೆಯ (ಆಗಸ್ಟ್ 27ರ) ಸಂಚಿಕೆಯಲ್ಲಿ ಸುಬ್ಬುಗೆಂದು ಟಾರ್ಗೆಟ್ ಕೊಟ್ಟು ರೌಡಿಗಳು ಬಿಟ್ಟ ವಿಜಯಾಂಬಿಕಾ ಆ ರೌಡಿಗಳು ಸುಬ್ಬು ಬಿಟ್ಟು ಇನ್ಯಾರನ್ನೋ ಫಾಲೋ ಮಾಡಿರುವ ವಿಚಾರ ತಿಳಿದು ಕೋಪದಲ್ಲಿ ಕುದಿಯುತ್ತಿದ್ದ ಹೊತ್ತಿಗೆ ಮದನ್ ತಾಯಿಯನ್ನು ಹಂಗಿಸುತ್ತಾನೆ. ‘ಮಾಮ್, ಯಾವಾಗಲೂ ನನ್ನ ಕೈಯಲ್ಲಿ ಏನೂ ಆಗೋದಿಲ್ಲ, ನಾನು ವೇಸ್ಟ್ ಅನ್ನೋ ರೀತಿ ಮಾತಾಡ್ತಿದ್ದೆ ಅಲ್ವಾ, ಈಗ ನೋಡು ನೀನು ಕಳುಹಿಸಿದ ರೌಡಿಗಳು ಏನ್ ಮಾಡಿದ್ರು. ನಂಗೂ ಆಗ್ತಾ ಇದ್ದಿದ್ದು ಇದೇನೇ. ನಾನು ಪ್ಲಾನ್ ಎಲ್ಲಾ ಕರೆಕ್ಟ್ ಆಗಿ ಎಕ್ಸಿಕ್ಯೂಟ್ ಮಾಡ್ತಾ ಇದ್ದೆ, ಆದ್ರೆ ಆ ರೌಡಿಗಳು ಎಲ್ಲಾ ಹಾಳ್ತಾ ಮಾಡ್ತಾ ಇದ್ರು. ಇವತ್ತು ನಿಂಗೆ ಆಗಿದ್ದು ಅದೇ ಎಂದು ತಾಯಿಗೆ ತನ್ನ ಪರಿಸ್ಥಿತಿ ವಿವರಿಸುತ್ತಾನೆ. ಇತ್ತ ವಿಜಯಾಂಬಿಕಾ ಮಗನ ಮಾತಿನಿಂದ ಇನ್ನಷ್ಟು ಕೋಪಗೊಳ್ಳುತ್ತಾಳೆ. ನಮಗಿರೋದು ಇಂದು ಒಂದೇ ದಿನ. ನಾನು ಏನಾದ್ರೂ ಮಾಡಿದ್ರೆ ಇವತ್ತೆ ಮಾಡಬೇಕು ಮ್ಯಾಡಿ, ಇಲ್ಲಾಂದ್ರೆ ಸಾಲಿಗ್ರಾಮಕ್ಕೆ ಹೋಗೋದು ತಪ್ಪಿಸೋಕೆ ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳುತ್ತಾಳೆ. ಅದಕ್ಕೆ ಮದನ್ ‘ಅಮ್ಮ ಏನಾದ್ರೂ ಆಗ್ಲಿ ಸಾಲಿಗ್ರಾಮ ಹೋಗು. ಅಲ್ಲಿ ಹೋಗಿ ಸಾಯೋದಾ ಬದುಕೋದಾ ನಿರ್ಧಾರ ಮಾಡಿದ್ರೆ ಆಯ್ತು‘ ಎಂದು ಆಡುಮಾತಿಗೆ ಹೇಳುತ್ತಾನೆ. ಆದರೆ ಆ ಮಾತು ವಿಜಯಾಂಬಿಕಾಗೆ ಸರಿ ಎನ್ನಿಸುತ್ತದೆ. ಅವಳು ಮದನ್ ಬಳಿ ‘ನಾನು ಸಾಲಿಗ್ರಾಮಕ್ಕೆ ಹೋಗಿಯೇ ಹೋಗುತ್ತೇನೆ. ಅಲ್ಲಿ ಏನಾದ್ರೂ ಎದುರಿಸ್ತೇನೆ, ಸಾಲಿಗ್ರಾಮದಿಂದ ಬಂದಾಗ ನಾನಿದ್ದ ಪರಿಸ್ಥಿತಿಯೇ ಬೇರೆ, ಈಗ ನಾನಿರುವ ಸ್ಥಿತಿಯೇ ಬೇರೆ. ಏನೇ ಆದ್ರೂ ಸಾಲಿಗ್ರಾಮದಲ್ಲಿ ನೋಡಿಕೊಳ್ಳುತ್ತೇನೆ ಎಂದು ಪಣತೊಟ್ಟವಳಂತೆ ಮಾತನಾಡುತ್ತಾಳೆ. ಅಲ್ಲದೇ ಮದನ್ ಬಳಿ ನೀನು ಇಲ್ಲಿಯೇ ಇರು. ಸಾಲಿಗ್ರಾಮಕ್ಕೆ ಬರೋದು ಬೇಡ. ಇಲ್ಲಿಯೇ ಇದ್ದು ನನಗೆ ಬೇಕಾದ ಸಹಾಯ ಮಾಡು, ನಾನು ಅಲ್ಲಿನ ಕ್ಷಣ ಕ್ಷಣದ ಮಾಹಿತಿಯನ್ನು ನಿನಗೆ ಅಪ್‌ಡೇಟ್ ಮಾಡ್ತೀನಿ‘ ಎಂದು ಸಾಲಿಗ್ರಾಮಕ್ಕೆ ಹೋಗಲು ಸಜ್ಜಾಗುತ್ತಾಳೆ.
ವರಲಕ್ಷ್ಮೀ ಪಾಲಿಗೆ ವರವಾಗಿ ಬಂದ ವರದ
ಇತ್ತ ಮಾರ್ಕೆಟ್‌ನಲ್ಲಿ ರೌಡಿಗಳು ವರಲಕ್ಷ್ಮೀ ಜೊತೆ ಅಸಭ್ಯವಾಗಿ ನಡೆದುಕೊಳ್ಳಲು ಪ್ರಯತ್ನಿಸುತ್ತಿರುವ ಹೊತ್ತಿಗೆ ಹೀರೊ ರೀತಿ ಎಂಟ್ರಿ ಕೊಡುತ್ತಾನೆ ವರದ. ರೌಡಿಗಳ ಜೊತೆ ಸಖತ್ ಫೈಟ್ ಮಾಡುವ ವರದ ವಿಶಾಲಾಕ್ಷಿ ಹಾಗೂ ವರಲಕ್ಷ್ಮೀಯನ್ನು ಕಾಪಾಡುತ್ತಾನೆ. ಮಾತ್ರವಲ್ಲ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಬರುತ್ತಾನೆ. ಅಮ್ಮನಿಗೆ ಆದ ಘಟನೆ ಕೇಳಿ ಆಸ್ಪತ್ರೆಗೆ ಓಡೋಡಿ ಬರುವ ಸುಬ್ಬು ಕಣ್ಣೀರು ಹಾಕುತ್ತಾನೆ. ದೇವರ ದಯೆಯಿಂದ ಪಾರಾದ ವಿಶಾಲಾಕ್ಷಿ ಯಾವುದೇ ಹೆಚ್ಚಿನ ತೊಂದರೆಯಾಗದೇ ಡಿಸ್ಚಾರ್ಜ್ ಆಗಲು ಸಿದ್ಧಳಾಗುತ್ತಾಳೆ. ಇತ್ತ ತನ್ನ ಕುಟುಂಬವನ್ನ ಕಾಪಾಡಿದ್ದು ವರದ ಎಂದು ತಿಳಿದ ಸುಬ್ಬು ಅವನ ಬಳಿಗೆ ಓಡಿಹೋಗುತ್ತಾನೆ.
ಶ್ರಾವಣಿ ಮನಸ್ಸಲ್ಲಿ ಸುಬ್ಬು ಮೇಲೆ ಪ್ರೀತಿ ಚಿಗುರೊಡಿತಾ ಇದ್ಯಾ?
ಶ್ರಾವಣಿ– ಸುಬ್ಬು ಪ್ರೀತಿಸಿದ್ರೆ ಗಂಡಾಂತರ ಆಗಬಹುದು ಎಂದು ಭಾವಿಸುವ ವಂದನಾ ಅವರ ನಡುವೆ ಪ್ರೀತಿ ಇದ್ಯಾ ತಿಳಿಯಲು ಸುಬ್ಬುವನ್ನು ಪರೀಕ್ಷೆ ಮಾಡುತ್ತಾಳೆ. ಆದರೆ ಸುಬ್ಬು ಮನಸ್ಸಲ್ಲಿ ಅಂಥ ಭಾವನೆ ಇಲ್ಲ ಎಂದು ತಿಳಿದು ನೆಮ್ಮದಿ ನಿಟ್ಟುಸಿರು ಬಿಡುತ್ತಾಳೆ. ಇತ್ತ ಶ್ರಾವಣಿ ಬಳಿ ಕೇಳಿದಾಗ ಶ್ರಾವಣಿಗೆ ಸುಬ್ಬ ಮೇಲೆ ನಿರೀಕ್ಷೆ ಹೆಚ್ಚಿರುತ್ತದೆ. ಇತ್ತೀಚೆಗೆ ಸುಬ್ಬು ತನ್ನನ್ನು ಅವಾಯ್ಡ್ ಮಾಡ್ತಾಇದಾನೆ, ನನ್ನ ಜೊತೆ ಮಾತನಾಡೋಲ್ಲ, ಬೇರೆಯವರ ಜೊತೆ ಫೋನ್‌ನಲ್ಲಿ ಮಾತನಾಡ್ತಾನೆ. ಅವನಿಗೆ ಈಗೀಗ ನನ್ನ ಜೊತೆ ಮೊದಲಿನ ಕಾಳಜಿ ಇಲ್ಲ ಅಂತೆಲ್ಲಾ ಮಾತನಾಡುತ್ತಾಳೆ. ಆಗ ವಂದನಾಗೆ ಶ್ರಾವಣಿಗೆ ಸುಬ್ಬು ಮೇಲೆ ಬೇರೆಯದೇ ಅಭಿಪ್ರಾಯ ಇದೆ. ಅವಳಿಗೆ ತಿಳಿಯದಂತೆ ಸುಬ್ಬು ಮೇಲೆ ಅವಳಿಗೆ ಪ್ರೀತಿ ಚಿಗುರುತ್ತಿದೆ ಎಂಬುದು ಅರಿವಿಗೆ ಬರುತ್ತದೆ. ಆದರೆ ಯಾವುದೂ ಸ್ಪಷ್ಟನೆ ಸಿಗದೆ ಗೊಂದಲಕ್ಕೆ ಒಳಗಾಗುತ್ತಾಳೆ ವಂದನಾ.
ಸುಬ್ಬು ಮುಂದೆ ನಿಂತು ವರ–ವರದ ಮದುವೆ ಮಾಡ್ತಾನಾ, ಸಾಲಿಗ್ರಾಮದಲ್ಲಿ ವಿಜಯಾಂಬಿಕಾಗೆ ಸವಾಲು ಕಾದಿದ್ಯಾ, ಸುಬ್ಬು ಮೇಲೆ ಶ್ರಾವಣಿಗೆ ನಿಜಕ್ಕೂ ಪ್ರೀತಿ ಆಗಿದ್ಯಾ ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.