ಅಜ್ಜಿ ಊರಿಗೆ ಹೋಗುವ ಸಂಭ್ರಮದಲ್ಲಿ ಶ್ರಾವಣಿ, ಸಾಲಿಗ್ರಾಮವನ್ನು ಸುಡುತ್ತಾ ವಿಜಯಾಂಬಿಕಾ ದ್ವೇಷದ ಕಿಚ್ಚು; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ-television news zee kannada shravani subramanya kannada serial today episode 120 august 30th shravani in happy mood rst ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಅಜ್ಜಿ ಊರಿಗೆ ಹೋಗುವ ಸಂಭ್ರಮದಲ್ಲಿ ಶ್ರಾವಣಿ, ಸಾಲಿಗ್ರಾಮವನ್ನು ಸುಡುತ್ತಾ ವಿಜಯಾಂಬಿಕಾ ದ್ವೇಷದ ಕಿಚ್ಚು; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

ಅಜ್ಜಿ ಊರಿಗೆ ಹೋಗುವ ಸಂಭ್ರಮದಲ್ಲಿ ಶ್ರಾವಣಿ, ಸಾಲಿಗ್ರಾಮವನ್ನು ಸುಡುತ್ತಾ ವಿಜಯಾಂಬಿಕಾ ದ್ವೇಷದ ಕಿಚ್ಚು; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

Shravani Subramanya Kannada Serial Today Episode August 30th: ಶ್ರಾವಣಿಗೆ ಸುಬ್ಬು ಮೇಲೆ ಪ್ರೀತಿಯಾಗಿದೆ ಎಂಬ ಸತ್ಯವನ್ನು ಸುರೇಂದ್ರನ ಮುಂದೆ ಬಿಚ್ಚಿಟ್ಟ ವಂದನಾ, ಮಲಗಿದ್ದಲ್ಲೇ ಎಲ್ಲವನ್ನೂ ಕದ್ದು ಕೇಳಿಸಿಕೊಂಡ್ಲು ಪಿಂಕಿ. ಮೊದಲ ಬಾರಿಗೆ ಸಿಕ್ತು ಶ್ರಾವಣಿಗೆ ಅಪ್ಪನ ಆಶೀರ್ವಾದ. ಸಾಲಿಗ್ರಾಮಕ್ಕೆ ಹೊರಡಲು ಸುಬ್ಬು–ಶ್ರಾವಣಿ ಮನೆಯವರು ಸಿದ್ಧ.

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಆಗಸ್ಟ್ 30ರ ಸಂಚಿಕೆ
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಆಗಸ್ಟ್ 30ರ ಸಂಚಿಕೆ

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ನಿನ್ನೆಯ (ಆಗಸ್ಟ್‌ 30ರ) ಸಂಚಿಕೆಯಲ್ಲಿ ಸುರೇಂದ್ರನ ಬಳಿ ತನ್ನ ಮನದಲ್ಲಿ ಮೂಡಿದ್ದ ಭಾವನೆಗಳು ಹಾಗೂ ಅದನ್ನು ಪರೀಕ್ಷೆ ಬಗ್ಗೆ ಹೇಳುತ್ತಾರೆ ವಂದನ. ಸುಬ್ಬಗೆ ಶ್ರಾವಣಿ ಮೇಲೆ ಇರುವುದು ಬರೀ ಗೌರವ. ಆದರೆ ಶ್ರಾವಣಿಗೆ ಸುಬ್ಬು ಮೇಲೆ ಇರುವುದು ಪ್ರೀತಿ. ಒಂದು ಹೆಣ್ಣು ಆಸ್ತಿ, ಅಂತಸ್ತು ಎಲ್ಲದಕ್ಕಿಂತ ತನ್ನನ್ನು ಕಾಳಜಿ ಮಾಡುವ ಹುಡುಗನಿಗೆ ಮನ ಸೋಲುತ್ತಾಳೆ. ಶ್ರಾವಣಿ ವಿಚಾರದಲ್ಲೂ ಆಗಿರುವುದು ಇದೇ. ಅವಳಿಗೆ ಗೊತ್ತಿಲ್ಲದೇ ಅವಳು ಸುಬ್ಬುವನ್ನು ಪ್ರೀತಿಸುತ್ತಿದ್ದಾಳೆ ಎಂದು ಗಂಡನ ಎದುರು ಎಲ್ಲಾ ಸತ್ಯವನ್ನು ಹೇಳುತ್ತಾರೆ. ಇದನ್ನೆಲ್ಲಾ ಕೇಳಿಸಿಕೊಳ್ಳುವ ಸುರೇಂದ್ರ ಗಾಬರಿಯಾಗುತ್ತಾರೆ. ಅಲ್ಲದೇ ಹೆಂಡತಿಯ ಬಳಿ ಸಾಲಿಗ್ರಾಮಕ್ಕೆ ಹೋಗಿ ಬರುವವರೆಗೂ ಈ ವಿಚಾರವನ್ನು ಯಾರ ಬಳಿಯೂ ಹೇಳಬೇಡ. ಅಲ್ಲಿಂದ ಬಂದ ಬಗ್ಗೆ ಈ ಬಗ್ಗೆ ಒಂದು ನಿರ್ಧಾರ ತೆಗೆದುಕೊಳ್ಳೊಣ, ಅಲ್ಲಿಯವರೆಗೆ ಇದು ನಮ್ಮಿಬ್ಬರಲ್ಲೇ ಇರಲಿ ಎಂದು ಹೇಳುತ್ತಾನೆ, ಆದರೆ ನಿದ್ರೆ ಮಾಡಿದ್ದಾಳೆ ಎಂದುಕೊಂಡಿದ್ದ ಪಿಂಕಿ ಮಲಗಿದ್ದಲ್ಲಿನಿಂದಲೇ ಎಲ್ಲವನ್ನೂ ಕೇಳಿಸಿಕೊಳ್ಳುತ್ತಾಳೆ.

ಶ್ರಾವಣಿಗೆ ಸಿಕ್ತ ಅಪ್ಪನ ಆಶೀರ್ವಾದ

ಬೆಳಗೆದ್ದು ಸಾಲಿಗ್ರಾಮಕ್ಕೆ ಹೋಗಲು ರೆಡಿ ಆಗುವ ಶ್ರಾವಣಿ ಎದುರಿಗೆ ಬರುವ ಅಪ್ಪನನ್ನ ಅಪ್ಪ ಎಂದು ಕೂಗುತ್ತಾಳೆ. ಅಪ್ಪ ನನಗೆ ಇವತ್ತು ಆಶೀರ್ವಾದ ಮಾಡ್ತೀರಾ, ಮೊದಲ ಬಾರಿಗೆ ಒಂದು ಒಳ್ಳೆ ಕೆಲಸಕ್ಕೆ ನಿಮ್ಮ ಜೊತೆ ಹೊರಗಡೆ ಹೋಗ್ತಾ ಇದೀನಿ. ನನಗಾಗಿ ಅಲ್ಲಿ ನನ್ನ ಅಜ್ಜಿ ಹಾಗೂ ಊರಿನವರೆಲ್ಲಾ ಕಾಯ್ತಾ ಇದಾರೆ. ದೇವರ ಕಾರ್ಯಕ್ಕೆ ಹೋಗುವಾಗ ಎಲ್ಲವೂ ಒಳಿತೇ ಆಗಲಿ ಎಂದು ದೇವರನ್ನು ಬೇಡಿಕೊಳ್ಳುತ್ತಾರೆ. ನನಗೆ ನೀವೇ ದೇವರು. ನನಗೆ ಆಶೀರ್ವಾದ ಮಾಡ್ತೀರಾ ಅಪ್ಪ ಎಂದು ಕೇಳಿ ಕಾಲಿಗೆ ಒರಗುತ್ತಾಳೆ. ಇದನ್ನು ಕೇಳಿಸಿಕೊಂಡ ವೀರೇಂದ್ರರ ಮನಸ್ಸು ಅಲ್ಲೋಲ ಕಲ್ಲೋಲ ಆದ್ರೂ ತೋರಿಸಿಕೊಳ್ಳದೇ ಶ್ರಾವಣಿ ಬಳಿ ಮಾತನಾಡುತ್ತಾರೆ. ಮಾತ್ರವಲ್ಲ ‘ನನಗೆ ನಿನ್ನ ಮೇಲೆ ಯಾವ ದ್ವೇಷವೂ ಇಲ್ಲ. ಆದರೆ ನಾನು ಯಾಕೆ ಹೀಗೆ ಇದ್ದೀನಿ ಎಂಬುದನ್ನು ನಾನು ಇವತ್ತಲ್ಲ ಯಾವತ್ತಿಗೂ ಹೇಳೋದಿಲ್ಲ. ಅದನ್ನ ನೀನು ಕೇಳಲು ಬೇಡ. ಆದರೂ ನಿನಗೆ ಒಳ್ಳೆದಾಗಲಿ ಎಂದು ನಾನು ಮನಸಾರೆ ಹಾರೈಸುತ್ತೇನೆ‘ ಎಂದು ತಲೆ ಮುಟ್ಟಿ ಆಶೀರ್ವಾದ ಮಾಡುತ್ತಾರೆ. ಅದರಿಂದ ಶ್ರಾವಣಿಗೆ ಕಣ್ತುಂಬಿ ಬರುತ್ತದೆ.

ಸಾಲಿಗ್ರಾಮಕ್ಕೆ ಹೊರಡಲು ಸುಬ್ಬು–ಶ್ರಾವಣಿ ಮನೆಯವರು ರೆಡಿ

ಸುಬ್ಬು ಹಾಗೂ ಪದ್ಮನಾಭ ಇಬ್ಬರೂ ಸಾಲಿಗ್ರಾಮಕ್ಕೆ ಹೋಗಲು ಸಿದ್ಧರಾಗುತ್ತಿದ್ದರೆ, ಶ್ರಾವಣಿ ಮನೆಯಲ್ಲೂ ಎಲ್ಲರೂ ರೆಡಿ ಆಗುತ್ತಾರೆ. ಹೊರಡುವ ಮುನ್ನ ವೀರೇಂದ್ರ ಕಾರುಗಳಿಗೆ ಪೂಜೆ ಮಾಡಿ ಹೊರಡಲು ಸಿದ್ಧರಾಗುತ್ತಾರೆ. ಆದರೆ ಅಕ್ಕ ಹಾಗೂ ಮದನ್ ಕಾಣದೇ ಇದ್ದಾಗ ಅವರೆಲ್ಲಿ ಎಂದು ಕೇಳುತ್ತಾರೆ. ಆಗ ವಂದನಾ ನಾನು ಹೋಗಿ ನೋಡಿಕೊಂಡು ಬರ್ತೀನಿ ಎಂದು ಹೊರಡುತ್ತಾಳೆ, ಅವಳ ಜೊತೆ ವೀರೇಂದ್ರ ಕೂಡ ಹೋಗುತ್ತಾರೆ. ಇತ್ತ ವಿಜಯಾಂಬಿಕಾ ಮಗನ ಬಳಿ ನಾನು ಅಲ್ಲಿಏನೇ ನಡೆದ್ರು ನಾನು ನಿನಗೆ ಕಾಲ್ ಮಾಡ್ತೀನಿ, ಇಲ್ಲಿ ಏನೇ ಆದ್ರೂ ನನಗೆ ಕಾಲ್ ಮಾಡು ಅಂತ ಹೇಳುತ್ತಾಳೆ. ಅದಕ್ಕೆ ಮದನ್ ಇಲ್ಲಿನ ಟೆನ್‌ಷನ್ ಬಿಡು ಮಾಮ್‌, ನೀನು ಸಾಲಿಗ್ರಾಮಕ್ಕೆ ಹಲವು ವರ್ಷಗಳ ಬಳಿಕ ಹೋಗ್ತಾ ಇದೀಯಾ, ನಿನ್ನ ಟೆನ್‌ಷನ್‌ಗೆ, ನಿನ್ನ ಪ್ರತಿಕಾರಕ್ಕೆ ಇದೇ ಒಳ್ಳೆ ಸಮಯ. ನಿನ್ನ ದ್ವೇಷದ ಕಿಚ್ಚು ಸಾಲಿಗ್ರಾಮವನ್ನ ಸುಡಬೇಕು ಹಾಗೆ ಮಾಡು ಮಾಮ್ ಎಂದು ಸಲಹೆ ನೀಡುತ್ತಾನೆ. ವಿಜಯಾಂಬಿಕಾ ಕೂಡ ಸಾಲಿಗ್ರಾಮವನ್ನ ನಾನು ನಾಶ ಮಾಡ್ತೀನಿ. ನನ್ನ ದ್ವೇಷದ ಉರಿಗೆ ಸಾಲಿಗ್ರಾಮ ಸುಟ್ಟು ಬೂದಿಯಾಗುತ್ತದೆ ಎಂದು ಕೋಪದಲ್ಲಿ ಹೇಳುತ್ತಾಳೆ.

ಸಾಲಿಗ್ರಾಮವನ್ನು ವಿಜಯಾಂಬಿಕಾ ಅಷ್ಟು ದ್ವೇಷ ಮಾಡಲು ಕಾರಣವೇನು, ಶ್ರಾವಣಿ ಅಂದುಕೊಂಡಂತೆ ಅಲ್ಲಿ ಅವಳಿಗೆ ಅದ್ಧೂರಿ ಸ್ವಾಗತ ಸಿಗುತ್ತಾ, ಪದ್ಮನಾಭ ಅವರಿಗೆ ಸಾಲಿಗ್ರಾಮದ ಮೇಲೆ ಅಷ್ಟೊಂದು ಗೌರವ ಏಕೆ ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.