ಸಾಲಿಗ್ರಾಮದ ದಾರಿಯಲ್ಲಿ ಸುಬ್ಬು–ಶ್ರಾವಣಿ ಕುಟುಂಬ, ಕಡಿಮೆಯಾಗಿಲ್ಲ ವಿಜಯಾಂಬಿಕಾ ಜಂಭ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ-television news zee kannada shravani subramanya kannada serial today episode 121 september 2nd shravani in happy mood rs ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಸಾಲಿಗ್ರಾಮದ ದಾರಿಯಲ್ಲಿ ಸುಬ್ಬು–ಶ್ರಾವಣಿ ಕುಟುಂಬ, ಕಡಿಮೆಯಾಗಿಲ್ಲ ವಿಜಯಾಂಬಿಕಾ ಜಂಭ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

ಸಾಲಿಗ್ರಾಮದ ದಾರಿಯಲ್ಲಿ ಸುಬ್ಬು–ಶ್ರಾವಣಿ ಕುಟುಂಬ, ಕಡಿಮೆಯಾಗಿಲ್ಲ ವಿಜಯಾಂಬಿಕಾ ಜಂಭ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

Shravani Subramanya Kannada Serial Today Episode September 2nd: ವೀರೇಂದ್ರ–ಪದ್ಮನಾಭ ಕುಟುಂಬದಲ್ಲಿ ಸಾಲಿಗ್ರಾಮಕ್ಕೆ ಹೋಗುವ ಸಂಭ್ರಮ, ಸುಬ್ಬು ಮನೆಗೆ ಕಳುಹಿಸುವ ಕಾರಿನಲ್ಲಿ ವಿಜಯಾಂಬಿಕಾ. ಮದುವೆ ಮಾತುಕತೆ ಮಾಡಿ, ಆದಷ್ಟು ಬೇಗ ಮದುವೆ ಕಾರ್ಯಗಳು ಸುಸೂತ್ರವಾಗಿ ನಡೆಯಬೇಕು ಅಂದ್ರು ಇಂದ್ರಮ್ಮ.

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಸೆಪ್ಟೆಂಬರ್ 2ರ ಸಂಚಿಕೆ
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಸೆಪ್ಟೆಂಬರ್ 2ರ ಸಂಚಿಕೆ

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ನಿನ್ನೆಯ (ಸೆಪ್ಟೆಂಬರ್‌ 2ರ) ಸಂಚಿಕೆಯಲ್ಲಿ ವೀರೇಂದ್ರ ಕುಟುಂಬದವರೆಲ್ಲಾ ಸಾಲಿಗ್ರಾಮಕ್ಕೆ ಹೊರಡುತ್ತಾರೆ. ತಾಯಿಯೊಂದಿಗೆ ಕಾರಿನವರೆಗೆ ಬರುವ ಮದನ್ ಅಮ್ಮನನ್ನ ಒಂದು ಕಾರ್‌ಗೆ ಹತ್ತಿಸಿ, ನೀನು ಇದರಲ್ಲೇ ಹೋಗು ಮಾಮ್ ಎಂದು ಹೇಳಿರುತ್ತಾನೆ, ಅಷ್ಟೊತ್ತಿಗೆ ಅಲ್ಲಿಗೆ ಬರುವ ವೀರೇಂದ್ರ ‘ಮದನ್ ಎಲ್ಲಾ ರೆಡಿನಾ, ಲಗೇಜ್ ಇಟ್ಯಾ, ಹೊರಡೋಣ್ವಾ? ಅಂತ ಕೇಳ್ತಾನೆ. ಅದಕ್ಕೆ ಮದನ್ ‘ಇಲ್ಲ ಮಾವ, ನಾನು ಸಾಲಿಗ್ರಾಮಕ್ಕೆ ಬರ್ತಾ ಇಲ್ಲ. ಸುರೇಂದ್ರ ಮಾವ ಕಂಪನಿ ಪ್ರಾಜೆಕ್ಟ್‌ನಲ್ಲಿ ಕೆಲವನ್ನು ನೋಡಿಕೊಳ್ಳೋಕೆ ಹೇಳಿದ್ದಾರೆ. ಅದರಲ್ಲಿ ಒಂದು ಪ್ರಾಜೆಕ್ಟ್ ಮೇಲೆ ನಾನು ಔಟ್ ಆಫ್ ಸ್ಟೇಷನ್ ಹೋಗ್ತೀನಿ‘ ಎಂದು ಹೇಳುತ್ತಾನೆ. ಅವನ ಮಾತು ಕೇಳಿ ವೀರೇಂದ್ರ ಖುಷಿ ಪಡುತ್ತಾರೆ. ಈ ಜವಾಬ್ದಾರಿನೇ ನನಗೆ ಇಷ್ಟ ಆಗೋದು ಗುಡ್ ಎಂದು ಮದನ್‌ನನ್ನ ಹೊಗಳುತ್ತಾರೆ. ಅಷ್ಟೊತ್ತಿಗೆ ಸುರೇಂದ್ರನ ಬಳಿ ಸುಬ್ಬು ಮನೆಗೆ ಯಾವ ಗಾಡಿ ಕಳಿಸ್ತಾ ಇದೀಯಾ ಎಂದು ವೀರೇಂದ್ರ ಕೇಳುತ್ತಾರೆ. ಅದಕ್ಕೆ ಸುರೇಂದ್ರ ಇದೇ ಗಾಡಿ ಹೋಗ್ತಾ ಇದೆ ಅಣ್ಣಾ ಎಂದು ವಿಜಯಾಂಬಿಕಾ ಕೂತಿದ್ದ ಗಾಡಿಯನ್ನು ತೋರಿಸುತ್ತಾನೆ, ಇದನ್ನು ಕೇಳಿ ಮದನ್‌ ಹಾಗೂ ವಿಜಯಾಂಬಿಕಾ ದಿಕ್ಕೇ ತೋಚದರಂತೆ ಆಡುತ್ತಾರೆ. ಅಕ್ಕನನ್ನು ಆ ಗಾಡಿಯಲ್ಲಿ ನೋಡಿದ ವೀರೇಂದ್ರ ‘ಅರೇ ಏನಕ್ಕಾ, ಆಗಲೇ ಕೂತು ಬಿಟ್ಟಿದ್ದೀಯಾ, ಸುಬ್ಬು ಮನೆಯವರಿಗೆ ಮುಜುಗರ ಆಗಬಾರದು ಅಂತ ನೀನೆ ಕರ್ಕೊಂಡ್ ಬರೋಕೆ ಹೋಗ್ತಾ ಇದೀಯಾ, ವೆರಿಗುಡ್‘ ಎಂದು ಹೊಗಳುತ್ತಾರೆ.ಅದಕ್ಕೆ ವಿಜಯಾಂಬಿಕಾ ಹಾಗಲ್ಲ ವೀರು ನಾನೇ ಬೇಕಾದ್ರೆ ನಿನ್ ಕಾರಲ್ಲೇ ಬರ್ತೀನಿ ಅಂದ್ರು ಕೇಳದ ವೀರೇಂದ್ರ ಪರ್ವಾಗಿಲ್ಲ ಅಕ್ಕಾ ನೀನೇ ಹೋಗಿ ಕರ್ಕೊಂಡ್ ಬಾ. ನಿನ್ ಮನಸ್ಸು ಏನು ಅಂತ ನಂಗ್ ಗೊತ್ತು, ಕೆಲವು ವಿಷ್ಯದಲ್ಲಿ ನೀನು ನೇರವಾಗಿ ಕಡ್ಡಿ ಮುರಿದ ಹಾಗೆ ಮಾತನಾಡಿ ಬಿಡ್ತೀಯಾ, ಆದರೆ ಸ್ನೇಹ, ಪ್ರೀತಿ, ಬಾಂಧವ್ಯದ ವಿಚಾರಕ್ಕೆ ನಿನ್ನ ಹೃದಯ ಎಷ್ಟು ಮೃದು ಅಂತ ನಂಗೆ ಗೊತ್ತು, ಸುಬ್ಬು ಮನೆಯವರನ್ನು ನೀನೇ ಹೋಗಿ ಕರ್ಕೊಂಡು ಬಾ ಎನ್ನುತ್ತಾರೆ. ವಿಜಯಾಂಬಿಕಾ ವೀರು ಅದು ಹಾಗಲ್ಲ ಅಂದ್ರು ಕೇಳದ ವೀರೇಂದ್ರ ಪರ್ವಾಗಿಲ್ಲ ಅಕ್ಕ ನೀನೇ ಹೋಗು ಅಂತ ಹೇಳ್ತಾನೆ. ಶ್ರಾವಣಿ ಕೂಡ ಅಪ್ಪನ ಇದ್ದ ಕಾರಲ್ಲೇ ಕುಳಿತುಕೊಳ್ಳುತ್ತಾಳೆ. ಎಲ್ಲರೂ ಹೊರಡುತ್ತಾರೆ. ವಿಜಯಾಂಬಿಕಾ ಬೇರೆ ದಾರಿ ಕಾಣದಂತೆ ಕುಳಿತು ಬಿಡುತ್ತಾಳೆ.

ಅಮ್ಮನನ್ನು ಬಿಟ್ಟು ಹೋಗುವ ಸಂಕಟದಲ್ಲಿ ಸುಬ್ಬು  

ಇತ್ತ ಸುಬ್ಬು ಮನೆಯಲ್ಲಿ ರೆಡಿಯಾಗಿ ಕೂತು ಅಮ್ಮನಿಗೆ ತಿಂಡಿ ತಿನ್ನಿಸುತ್ತಿರುತ್ತಾರೆ. ಆರಾಮಿಲ್ಲದ ಅಮ್ಮನನ್ನು ಬಿಟ್ಟು ಹೋಗುವುದು ಸುಬ್ಬುಗೆ ತುಂಬಾ ನೋವಿನ ಸಂಗತಿಯಾಗಿರುತ್ತದೆ. ಆದರೆ ವಿಶಾಲಾಕ್ಷಿ ನೀನ್ಯಾಕಪ್ಪ ಸುಬ್ರಹ್ಮಣ್ಯ ತಲೆ ಕೆಡಿಸಿಕೊಳ್ಳುತ್ತೀಯಾ, ನನ್ನ ನೋಡಿಕೊಳ್ಳೊಕೇ ವರಲಕ್ಷ್ಮೀ, ಧನಲಕ್ಷ್ಮೀ ಇಲ್ವಾ ನೀನು ಯಜಮಾನರ ಮಾತು ಮೀರುವ ಹಾಗಿಲ್ಲ, ನೀವು ನೆಮ್ಮದಿಯಾಗಿ ಹೋಗಿಬಿಟ್ಟು ಬಾ ಎನ್ನುತ್ತಾರೆ. ಅಲ್ಲದೇ ಪದ್ಮನಾಭ ತನ್ನ ಹೆಣ್ಣುಮಕ್ಕಳನ್ನು ಕರೆದು ಅಮ್ಮನನ್ನ ಚೆನ್ನಾಗಿ ನೋಡಿಕೊಳ್ಳಿ ಅಂತ ಹೇಳಿ ಹೆಂಡತಿಯ ಜವಾಬ್ದಾರಿಯನ್ನ ಹೆಣ್ಣುಮಕ್ಕಳಿಗೆ ವಹಿಸುತ್ತಾರೆ. ಸ್ವಲ್ಪ ಹೊತ್ತು ವಿಶಾಲಾಕ್ಷಿಯ ಕಾಲೆಳೆಯುವ ಪದ್ಮನಾಭ ನಿನ್ ಮಗ ಒಂದಿಷ್ಟು ದಿನ ಇರೋದಿಲ್ಲ ಅಲ್ವಾ, ಅವನಿಲ್ಲದೇ ಹೇಗೆ ಇರ್ತಿಯಾ ಎಂದು ಪ್ರಶ್ನೆ ಮಾಡುತ್ತಾರೆ. ಅದಕ್ಕೆ ವಿಶಾಲಾಕ್ಷಿ ಭಾವುಕರಾಗುತ್ತಾರೆ. ಮಗನಿಲ್ಲದೇ ನನ್ನ ಬಿಟ್ಟು ಒಂದು ದಿನಾನು ಇರೋಕಾಗೊಲ್ಲ ಅಂತ ದುಃಖ ತೋಡಿಕೊಳ್ಳುತ್ತಾಳೆ. ಆದರೆ ವರಲಕ್ಷ್ಮೀ ಅಮ್ಮ ಅವರು ಹೊರಡುತ್ತಿರುವಾಗ ಈ ಥರ ಮಾತನಾಡಬೇಕಾ ಅಂತ ಕೇಳಿ ಮಾತು ಬದಲಿಸುತ್ತಾಳೆ. ಗಂಡ–ಅಮ್ಮ ಇಬ್ಬರಿಗೂ ಹುಷಾರಾಗಿ ಹೋಗಿ ಎಂದು ಹೇಳುವ ವಿಶಾಲಾಕ್ಷಿಗೆ ‘ನಾನು ಹೋಗ್ತಾ ಇರೋದು ಸಾಲಿಗ್ರಾಮಕ್ಕೆ, ಸಾಲಿಗ್ರಾಮ ನನಗೆ ಸ್ವರ್ಗ ಇದ್ದ ಹಾಗೆ, ಪುಣ್ಯ ಭೂಮಿ ಇದ್ದ ಹಾಗೆ. ಅಲ್ಲಿ ಹೋದ ಮೇಲೆ ಎಲ್ಲಾ ಒಳ್ಳೆದಾಗುತ್ತೆ, ನೀನೇನು ಯೋಚನೆ ಮಾಡಬೇಡ‘ ಎಂದು ಹೆಂಡತಿಗೆ ಧೈರ್ಯ ತುಂಬುತ್ತಾರೆ. ಅಷ್ಟೊತ್ತಿಗೆ ಸುಬ್ಬು ನಂಬರ್‌ಗೆ ವಿಜಯಾಂಬಿಕಾ ಕಾಲ್ ಮಾಡುತ್ತಾಳೆ, ನಿಮ್ಮನ್ನ ಪಿಕಪ್‌ ಮಾಡೋಕೆ ಕಾರು ಬರ್ತಾ ಇದೆ, ಕಾರಲ್ಲಿ ನಾನು ಇದೀನಿ. ನಿನ್ನ ಮನೆ ಹತ್ರ ಬರೋಕೆ ಆಗೊಲ್ಲ, ಎಲ್ರೂ ಮೈನ್‌ರೋಡ್‌ಗೆ ಬನ್ನಿ, ಬೇಗ ಹೊರಡಿ ಕಾರು ಇನ್ನೇನು ಮೈನ್ ರೋಡ್ ರೀಚ್ ಆಗುತ್ತೆ ಎಂದು ದರ್ಪದಲ್ಲಿ ಹೇಳುತ್ತಾಳೆ. ಸುಬ್ಬು ಆ ಗಡಿಬಿಡಿಯಲ್ಲೂ ಅಪ್ಪ ಇಂದ್ರಮ್ಮ ಅವರಿಗೂ ಒಂದು ಮಾತು ಹೇಳಿ ಬಾಡಿಗೆ ಕೊಟ್ಟು ಹೊರಡು ಬಿಡೋಣ ಎಂದು ಹೇಳುತ್ತಾನೆ.

ಇಂದ್ರಮ್ಮನ ಹೊಸ ವರಸೆ

ಸಾಲಿಗ್ರಾಮಕ್ಕೆ ಹೊರಟ ಸುಬ್ಬು–ಪದ್ಮನಾಭ ಅವರನ್ನು ಮಾತನಾಡಿಸಿ ಬರಲು ಹೊರಟ ವರದನನ್ನು ತಡೆಯುತ್ತಾಳೆ ಇಂದ್ರಮ್ಮ. ಮಾತ್ರವಲ್ಲ ಇಷ್ಟೆಲ್ಲಾ ಸಲಿಗೆ ಬೇಡ ವರದ ಎಂದು ಅವಾಜ್ ಹಾಕುತ್ತಾಳೆ. ಅದಕ್ಕೆ ಅವಳ ಗಂಡ ಹೋಗ್ ಬರ್ಲಿ ಬಿಡು ಇಂದ್ರ, ಹೇಗೂ ಅವರು ನಮ್ಮ ಸಂಬಂಧಿಕರಾಗುವವರು. ಸುಬ್ಬುನು ವರದನು ಭಾವ–ಭಾಮೈದ ಆಗೋರು ಅಂಥದ್ರಲ್ಲಿ ಹೋಗಿ ಕಳಿಸಿ ಬಿಟ್ಟು ಬಂದ್ರೆ ಏನಾಗುತ್ತೆ‘ ಎಂದು ಮಗನಿಗೆ ಪರವಾಗಿ ಮಾತನಾಡುತ್ತಾರೆ. ಅದಕ್ಕೆ ಇಂದ್ರಮ್ಮ ಈಗ್ಲೇ ಮದುವೆಗೆ ಮುಂಚೆಗೆ ಅವರ ಮನೆಗೆ ಹೋಗ್ತೀನಿ ಅಂತಾನೇ, ಅವರ ಹಿಂದೆನೇ ಹೋಗ್ತೀನಿ ಅಂತಾನೆ, ಮದುವೆಯಾದ ಮೇಲೆ ನಮ್ಮನ್ನೇ ಮರೆತು ಬೀದಿಗೆ ತಳ್ಳಿ ಬಿಟ್ರೆ ಏನ್ರಿ ಮಾಡೋದು ಅಂತ ದಿಗಿಲು ವ್ಯಕ್ತಪಡಿಸುತ್ತಾಳೆ. ಅದಕ್ಕೆ ವರದ ಅಮ್ಮಾ ಯಾಕೆ ಹೀಗೆಲ್ಲಾ ಮಾತಾಡ್ತೀಯಾ, ಒಂದು ವೇಳೆ ನಾನೇ ನಿಮ್ಮನ್ನು ದೂರ ಮಾಡ್ತೀನಿ ಅಂದ್ರು ವರ ಇದಕ್ಕೆಲ್ಲಾ ಒಪೊಲ್ಲ ತುಂಬು ಕುಟುಂಬದಲ್ಲಿ ಬೆಳೆದು ಬಂದ ಹುಡುಗಿ ಅವಳು. ಅವಳು ಯಾವತ್ತಿಗೂ ಈ ಮನೆ ಒಡೆಯೋದಿಲ್ಲ ಎಂದು ವರಲಕ್ಷ್ಮೀ ಪರ ಮಾತನಾಡುತ್ತಾನೆ. ಆದರೆ ಅದಕ್ಕೂ ಟಾಂಗ್ ಕೊಡುವ ಇಂದ್ರಮ್ಮ ನನಗೆ ನಿನ್ನ ಮೇಲೆ ನಂಬಿಕೆ ಇಲ್ಲ, ಈಗಲೇ ಅವರ ಮನೆಯವರು ಅಂದ್ರೆ ಅಷ್ಟೆಲ್ಲಾ ಮಾಡ್ತೀಯಾ, ಇನ್ನು ಮುಂದೆ ಹೇಗೆ ಅನ್ನುತ್ತಾಳೆ. ಅದಕ್ಕೆ ವರದ ಒಂದಿಷ್ಟು ಮದರ್ ಸೆಂಟಿಮೆಂಟ್ ಡೈಲಾಗ್ ಹೊಡೆದು ಇಂದ್ರಮ್ಮ ಕರಗುವಂತೆ ಮಾಡುತ್ತಾನೆ. ಪ್ರೀತಿ ಬಗ್ಗೆ ಏನೇನೋ ಪ್ರವಚನ ಕೊಟ್ಟು ಇನ್ನೇನು ಸುಬ್ಬು ಮನೆಗೆ ಹೊರಡಬೇಕು ಅಂದುಕೊಳ್ಳುವಾಗ ಸುಬ್ಬು, ಪದ್ಮನಾಭ ಅವರ ಮನೆ ಒಳಗೆ ಬರುತ್ತಾರೆ.

ಬದುಕು ಬದಲಾಗುವ ಖುಷಿಯಲ್ಲಿ ಶ್ರಾವಣಿ 

ಶ್ರಾವಣಿ ಅಪ್ಪನ ಜೊತೆ ಕಾರಿನಲ್ಲಿ ಹೋಗುವ ಸಂಭ್ರಮದಲ್ಲಿ ಮೈ ಮರೆತಿದ್ದರೆ ಇತ್ತ ಚಿಕ್ಕಮ್ಮ ವಂದನಾ ಶ್ರಾವಣಿ ಅಜ್ಜಿ ಊರಿಗೆ ಹೋಗೋದು ಅಂತ ತುಂಬಾ ಖುಷಿಯಾಗಿದೀಯಾ ಅನ್ಸುತ್ತೆ ಅಂತ ಕಾಲೆಳೆಯತ್ತಾಳೆ, ಅದಕ್ಕೆ ಶ್ರಾವಣಿ ಹೌದು ಚಿಕ್ಕಮ್ಮ ತುಂಬಾನೇ ಖುಷಿಯಾಗಿದೀನಿ. ಮೊದಲನೇ ಸಲ ನಮ್ಮ ಅಮ್ಮ ಆಡಿ ಬೆಳೆದ ಊರಿಗೆ ಹೋಗ್ತಾ ಇದೀನಿ. ನಮ್ಮ ಅಜ್ಜಿ ಊರು ಚಿಕ್ಕಮ್ಮ ಅಂದ್ರೆ ಅದು ನನ್ನೂರು ಎಂದು ಸಂಭ್ರಮದಿಂದ ಹೇಳುತ್ತಾಳೆ, ಮಾತ್ರವಲ್ಲ ಅಲ್ಲಿ ನನ್ನೋರು, ನನ್ನ ನೋಡಬೇಕು ಅಂತ ಇರೋರು ತುಂಬಾ ಜನ ಇದಾರೆ, ಅವರನ್ನೆಲ್ಲಾ ನೋಡೋಕೆ ಹೋಗ್ತಾ ಇದೀನಿ ಅನ್ನೋ ಖುಷಿ ತುಂಬಾನೇ ಇದೆ ಅಂತಾಳೆ, ಅದಕ್ಕೆ ವಂದನಾ ಅಷ್ಟೇ ಅಲ್ಲ ಶ್ರಾವಣಿ. ಆ ಊರಲ್ಲಿ ನೀವಿಬ್ಬರೂ ಅಪ್ಪ–ಮಗಳಾಗಿ ಇರಬಹುದು, ಅಪ್ಪ–ಮಗಳು ಹತ್ತಿರ ಆಗುವ ಸಮಯ ಇನ್ನೂ ದೂರ ಇಲ್ಲ ಅವಳಿಗೆ ಇನ್ನಷ್ಟು ಖುಷಿಯಾಗುವಂತೆ ಮಾಡುತ್ತಾಳೆ. ಅದಕ್ಕೆ ಶ್ರಾವಣಿ ಒಂದೊಂದು ಕಿಲೋಮೀಟರ್ ಕಳಿತಾ ಇದ್ದ ಹಾಗೂ ನಾನು ಸಾಲಿಗ್ರಾಮಕ್ಕೆ ಮತ್ತೆ ಅಪ್ಪಂಗೆ ಹತ್ರ ಆಗ್ತಾ ಇದೀನಿ ಅನ್ನಿಸ್ತಾ ಇದೆ ಚಿಕ್ಕಮ್ಮ ಎಂದು ಸಂಭ್ರಮಿಸುತ್ತಾಳೆ. ವಂದನಾ ಶ್ರಾವಣಿಗೆ ಮನಸಾರೆ ಹಾರೈಸಿ ಅಪ್ಪ ಮಗಳು ಒಂದಾಗ್ಲಿ ಎಂದು ಕೇಳಿಕೊಳ್ಳುತ್ತಾಳೆ. ಮತ್ತೆ ಪೂಜೆ ಎಲ್ಲಾ ಚೆನ್ನಾಗಿ ಆಗಿ ನಿನ್ನ ಆಸೆ ಎಲ್ಲಾ ಪೂರೈಸಲಿ ಎಂದು ಕೇಳಿಕೊಳ್ಳುತ್ತಾಳೆ.

ಸಾಲಿಗ್ರಾಮಕ್ಕೆ ಹೊರಟವರು ತಮ್ಮ ಮನೆಗೆ ಯಾಕೆ ಬಂದ್ರು ಅಂದುಕೊಳ್ಳುವ ಇಂದ್ರಮ್ಮಳಿಗೆ ಬಾಡಿಗೆ ನೀಡುವ ಮೂಲಕ ಬಾಡಿಗೆ ಕೊಡಲು ಬಂದಿದ್ದಾಗಿ ಹೇಳುತ್ತಾನೆ. ಆ ಹೊತ್ತಿಗೂ ವ್ಯಂಗ್ಯ ಮಾಡುವ ಇಂದ್ರಮ್ಮ ಮಾತಿಗೆ ಪದ್ಮನಾಭ ಸಂಬಂಧ ಬೇರೆ, ವ್ಯವಹಾರ ಬೇರೆ ಎಂದು ಸ್ವಷ್ಟವಾಗಿ ಹೇಳುತ್ತಾರೆ. ನಾವೀಗ ಸಾಲಿಗ್ರಾಮಕ್ಕೆ ಹೋಗುತ್ತೇವೆ ಎಂದು ಹೇಳಲು ಬಂದಿದ್ದಾಗಿ ಹೇಳುತ್ತಾರೆ. ಅಲ್ಲದೇ ಮನೆ ಕಡೆ ಸ್ವಲ್ಪ ನೋಡ್ಕೊಳ್ಳಿ ಎಂದು ಹೇಳುತ್ತಾರೆ. ಆ ಹೊತ್ತಿನಲ್ಲೂ ಇಂದ್ರಮ್ಮ ಆದಷ್ಟು ಬೇಗ ವರಲಕ್ಷ್ಮೀ–ವರದನಿಗೆ ಮದುವೆ ಮಾಡೋಣ, ಯಾವುದೇ ತೊಂದರೆಯಿಲ್ಲದೇ ನೀವು ಮದುವೆ ಮಾಡಿಕೊಡಬೇಕು ಷರತ್ತು ಹಾಕುತ್ತಾಳೆ.

ಕಾರಿನಲ್ಲಿ ವಿಜಯಾಂಬಿಕಾ ದರ್ಪ 

ಸುಬ್ಬು ಪದ್ಮನಾಭ ಜೊತೆ ಕಾಂತಮ್ಮ ಸುಂದರ ಕೂಡ ಸಾಲಿಗ್ರಾಮಕ್ಕೆ ಹೊರಡುತ್ತಾರೆ. ಮುಂದೆ ಕೂತಿದ್ದ ವಿಜಯಾಂಬಿಕಾ ತಾನು ಪಿಎ ಥರ ಮುಂದೆ ಕೂರೋದಾ ಅಂತ ದರ್ಪದಲ್ಲಿ ಹಿಂದೆ ಹೋದ್ರೆ ಪಕ್ಕದಲ್ಲಿ ಕಾಂತಮ್ಮ ಕುಳಿತಿರುತ್ತಾಳೆ. ಹಿಂದೆ ಹೋಗು ಅಂದ್ರು ಹೋಗದೇ ಅಲ್ಲೇ ಕೂತು ಬಿಡುತ್ತಾಳೆ ಕಾಂತಮ್ಮ. ವಿಜಯಾಂಬಿಕಾ ಅಸಹನೆಯಲ್ಲಿ ಕುದಿಯುತ್ತಿರುತ್ತಾಳೆ. ನಡುವೆ ದಾರಿಯಲ್ಲಿ ವಿಜಯಾಂಬಿಕಾಳನ್ನು ಕಾಂತಮ್ಮ ಹೊಗಳಿ ಅಟ್ಟಕ್ಕೇರಿಸಲು ನೋಡುತ್ತಾಳೆ. ಈ ನಡುವೆ ಸುಬ್ಬುಗೆ ವಿಜಯಾಂಬಿಕಾ ಫಾರ್ಮ್‌ಹೌಸ್‌ನಲ್ಲಿ ನಡೆದ ರೀತಿ ನೆನಪಿಗೆ ಬರುತ್ತದೆ, ಮಾತ್ರವಲ್ಲ ನಮ್ಮ ಮನೆಯವರು ಏನಾದ್ರೂ ಕಿತಾಪತಿ ಮಾಡಿ ಇವರ ಕೈಗೆ ಸಿಕ್ಕಿಕೊಂಡರೆ ಅಷ್ಟೇ ಗತಿ ಎಂದು ಭಯಪಡುತ್ತಾನೆ.

ವಂದನಾ ಹೇಳಿದಂತೆ ಶ್ರಾವಣಿಗೆ ಸಾಲಿಗ್ರಾಮದಲ್ಲಿ ಎಲ್ಲವೂ ಒಳ್ಳೆಯದೇ ಆಗುತ್ತಾ, ಪದ್ಮನಾಭ ಸಾಲಿಗ್ರಾಮಕ್ಕೆ ಹೋಗುವ ಖುಷಿಗೂ ವಿಜಯಾಂಬಿಕ ಸಾಲಿಗ್ರಾಮವನ್ನು ದ್ವೇಷಿಸುವುದಕ್ಕೂ ಕಾರಣ ಏನು ಎಂದು ಕಂಡುಕೊಳ್ಳುತ್ತಾರಾ ಸುಬ್ಬು ಶ್ರಾವಣಿ ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.