ವರ್ಕೌಟ್ ಆಯ್ತು ಪಿಂಕ್ ಪ್ಲಾನ್‌, ಒಟ್ಟಿಗೆ ಕೂತ್ರು ವೀರು–ಶ್ರಾವಣಿ, ವಿಜಯಾಂಬಿಕಾ ಪಾಡು ಕೇಳೋರಿಲ್ಲ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ-television news zee kannada shravani subramanya kannada serial today episode 121 september 3rd shravani in happy mood rs ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ವರ್ಕೌಟ್ ಆಯ್ತು ಪಿಂಕ್ ಪ್ಲಾನ್‌, ಒಟ್ಟಿಗೆ ಕೂತ್ರು ವೀರು–ಶ್ರಾವಣಿ, ವಿಜಯಾಂಬಿಕಾ ಪಾಡು ಕೇಳೋರಿಲ್ಲ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

ವರ್ಕೌಟ್ ಆಯ್ತು ಪಿಂಕ್ ಪ್ಲಾನ್‌, ಒಟ್ಟಿಗೆ ಕೂತ್ರು ವೀರು–ಶ್ರಾವಣಿ, ವಿಜಯಾಂಬಿಕಾ ಪಾಡು ಕೇಳೋರಿಲ್ಲ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

Shravani Subramanya Kannada Serial Today Episode September 3rd: ಅಕ್ಕ–ದೊಡ್ಡಪ್ಪ ಒಟ್ಟಿಗೆ ಕುಳಿತುಕೊಳ್ಳಲಿ ಎಂದು ಪಿಂಕಿ ಮಾಡಿದ್ಲು ಮಾಸ್ಟರ್ ಪ್ಲಾನ್‌. ಕಾಂತಮ್ಮ– ಸುಂದರ ತಿಂಡಿ ಅವಾಂತರಕ್ಕೆ ವಿಜಯಾಂಬಿಕಾ ಸುಸ್ತೋ ಸುಸ್ತು. ಸಾಮಾನ್ಯರಂತೆ ನೆಲದಲ್ಲಿ ಕೂತು ಸುಬ್ಬು ಮನೆಯಿಂದ ತಂದ ಊಟ ತಿಂದ ಮಿನಿಸ್ಟರ್ ಕುಟುಂಬ. ಸಾಗುತ್ತಿದೆ ಸಾಲಿಗ್ರಾಮದತ್ತ ಪಯಣ.

ವರ್ಕೌಟ್ ಆಯ್ತು ಪಿಂಕ್ ಪ್ಲಾನ್‌, ಒಟ್ಟಿಗೆ ಕೂತ್ರ ವೀರು–ಶ್ರಾವಣಿ, ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಸೆಪ್ಟೆಂಬರ್ 3 ಸಂಚಿಕೆ
ವರ್ಕೌಟ್ ಆಯ್ತು ಪಿಂಕ್ ಪ್ಲಾನ್‌, ಒಟ್ಟಿಗೆ ಕೂತ್ರ ವೀರು–ಶ್ರಾವಣಿ, ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಸೆಪ್ಟೆಂಬರ್ 3 ಸಂಚಿಕೆ

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ನಿನ್ನೆಯ (ಸೆಪ್ಟೆಂಬರ್‌ 3ರ) ಸಂಚಿಕೆಯಲ್ಲಿ ಅಪ್ಪನ ಜೊತೆ ಕಾರಿನಲ್ಲಿ ಹೋಗುವ ಖುಷಿಯಲ್ಲಿ ತೇಲಾಡುತ್ತಿದ್ದ ಶ್ರಾವಣಿ ಇದ್ದಕ್ಕಿದ್ದಂತೆ ಮೌನವಾಗಿದ್ದು ನೋಡಿ ಪಿಂಕಿಗೆ ಏನಾಯಿತು ಎಂದು ತಿಳಿಯುವುದಿಲ್ಲ. ನಿಧಾನಕ್ಕೆ ಹತ್ತಿರ ಬಂದು ‘ಅಕ್ಕಾ ಏನಾಯ್ತಕ್ಕ, ಇಷ್ಟೊತ್ತು ಆರಾಮಾಗಿ ಖುಷಿಯಲ್ಲಿ ಇದ್ದೆ, ಈಗ್ಯಾಕೆ ಡಲ್ ಆದೆ‘ ಎಂದು ಕೇಳುತ್ತಾಳೆ. ಅದಕ್ಕೆ ಶ್ರಾವಣಿ ಅಪ್ಪನ ಜೊತೆ ಒಂದೇ ಕಾರಿನಲ್ಲಿ ಹೋಗ್ತಾ ಇದೀನಿ. ಆದರೆ ಅಪ್ಪನ ಪಕ್ಕ ಕೂತಿದ್ದರೆ ಎಷ್ಟು ಚೆನ್ನಾಗಿರ್ತಾ ಇತ್ತು ಅಲ್ವಾ? ಎಂದು ಮನದ ಆಸೆ ಹೇಳಿಕೊಳ್ಳುತ್ತಾಳೆ. ಅಷ್ಟಕ್ಕೆ ಅಕ್ಕ–ದೊಡ್ಡಪ್ಪ ಒಟ್ಟಿಗೆ ಕುಳಿತುಕೊಳ್ಳುವಂತೆ ಮಾಡಲು ಪಿಂಕಿ ಒಂದು ಮಾಸ್ಟರ್ ಪ್ಲಾನ್ ಮಾಡುತ್ತಾಳೆ.

ಪಿಂಕಿ ವಾಂತಿ ನಾಟಕ, ವೀರು–ಶ್ರಾವಣಿ ಅಕ್ಕಪಕ್ಕದ ಸೀಟ್‌ನಲ್ಲಿ

ಇದ್ದಕ್ಕಿದ್ದಂತೆ ಅಮ್ಮ, ಅಪ್ಪ ವಾಂತಿ ಎಂದು ನಾಟಕ ಶುರುವಿಟ್ಟುಕೊಳ್ಳುತ್ತಾಳೆ ಪಿಂಕಿ. ಅವಳ ನಾಟಕ ನೋಡಿ ಶ್ರಾವಣಿ, ವಂದನಾಗೆ ನಗು ಅಂದ್ರೆ ವೀರೇಂದ್ರ, ಸುರೇಂದ್ರ ಗಾಬರಿಯಾಗಿ ಕಾರಿನಿಂದ ಇಳಿಸುತ್ತಾರೆ. ಕಾರಿನಿಂದ ಇಳಿದು ವಾಂತಿ ಮಾಡುವಂತೆ ನಟಿಸುವ ಪಿಂಕಿ, ಈಗ ವಾಂತಿ ಹೋಯ್ತು, ದೊಡ್ಡಪ್ಪ ನೀವು ತಪ್ಪು ತಿಳಿಕೊಂಡಿಲ್ಲ ಅಂದ್ರೆ ನಾನು ಮುಂದೆ ಕುಳಿತುಕೊಳ್ಳೋದಾ, ನನಗೆ ಹಿಂದೆ ಕೂತರೇ ತಲೆ ನೋವು ಬರುತ್ತೆ. ವಾಂತಿ ಬರುತ್ತೆ ಅಂತ ಹೇಳ್ತಾಳೆ. ಅದಕ್ಕೆ ವೀರೇಂದ್ರ ಅದನ್ನು ಕೇಳ್ತಿಯಲ್ಲಮ್ಮಾ, ನೀನು ಮುಂದೆ ಕೂತ್ಕೋ ನಾನು ಹಿಂದೆ ಕೂತ್ಕೋತಿನಿ ಎಂದು ಪಿಂಕಿಯನ್ನು ಮುಂದೆ ಕೂರಿಸುತ್ತಾರೆ. ತಾನು ಹಿಂದೆ ಹೋಗಿ ಶ್ರಾವಣಿ ಪಕ್ಕ ಇರುವ ಸೀಟಿನಲ್ಲಿ ಕುಳಿತುಕೊಳ್ಳುತ್ತಾರೆ. ಸುರೇಂದ್ರ ವಂದನಾ ಹಿಂದೆ ಕುಳಿತುಕೊಳ್ಳುತ್ತಾರೆ. ಅಂತೂ ಇಂತು ಶ್ರಾವಣಿ ವೀರೇಂದ್ರ ಒಟ್ಟಾಗಿ ಕುಳಿತುಕೊಳ್ಳುವಂತೆ ಮಾಡುತ್ತಾಳೆ ಪಿಂಕಿ. ಈ ನಡುವೆ ಅಪ್ಪ–ತಾನು ಒಟ್ಟಿಗೆ ಕುಳಿತದ್ದನ್ನು ಸುಬ್ಬುಗೆ ತಿಳಿಸಬೇಕು ಎಂದು ಸೆಲ್ಫಿ ಕೂಡ ತೆಗೆದುಕೊಳ್ಳುತ್ತಾಳೆ. ಒಟ್ಟಾರೆ ಶ್ರಾವಣಿ ಸ್ವರ್ಗದಲ್ಲಿ ತೇಲಾಡುತ್ತಿರುತ್ತಾಳೆ.

ಕಾರಿನಲ್ಲಿ ಕಾಂತಮ್ಮನ ಅವಾಂತರ, ವಿಜಯಾಂಬಿಕಾ ತತ್ತರ

ವಿಜಯಾಂಬಿಕ ಸುಬ್ಬು ಕುಟುಂಬದವರು ಇದ್ದ ಕಾರು ಸ್ವಲ್ಪ ಮುಂದಕ್ಕೆ ಹೋಗುತ್ತಿದ್ದ ಹಾಗೆ ಮನೆಯಿಂದ ತಂದ ಕೋಡುಬಳೆ, ಮಂಡಕ್ಕಿ, ಚಿಪ್ಸ್ ಪ್ಯಾಕೆಟ್‌ನೆಲ್ಲಾ ಹೊರಗಡೆ ತೆಗೆಯುತ್ತಾರೆ ಕಾಂತಮ್ಮ–ಸುಂದರ. ಒಂದೊಂದೆ ಪ್ಯಾಕೆಟ್ ಒಡೆದು ತಿನ್ನಲು ಶುರು ಮಾಡುತ್ತಾರೆ. ಇದನ್ನು ನೋಡಿ ವಿಜಯಾಂಬಿಕಾಗೆ ಅಸಹನೆ ಶುರುವಾಗುತ್ತದೆ. ಸುಬ್ಬು–ಪದ್ಮನಾಭ ಏನು ಮಾಡಬೇಕು ಎಂದು ತೋಚದೆ ಕಂಗಾಲಾಗಿ ಕುಳಿತಿರುತ್ತಾಳೆ. ಅಷ್ಟಕ್ಕೆ ಸುಮ್ಮನಿರದ ಕಾಂತಮ್ಮ ಮಂಡಕ್ಕಿಯನ್ನು ಪ್ಲೇಟ್‌ನಲ್ಲಿ ಹಾಕಿ ವಿಜಯಾಂಬಿಕಾ ಕೊಡಲು ಬರುತ್ತಾಳೆ. ಆದರೆ ವಿಜಯಾಂಬಿಕಾ ದರ್ಪದಲ್ಲಿ ತನಗೆ ಬೇಡ ಎಂದು ಹೇಳುತ್ತಾಳೆ. ಆದರೆ ಇವರಿಬ್ಬರೂ ಮಾತ್ರ ಆರಾಮವಾಗಿ ಮಂಡಕ್ಕಿ ಚಿಪ್ಸ್ ತಿಂದುಕೊಂಡು ಖುಷಿಯಲ್ಲಿ ಇರುತ್ತಾರೆ. ಅಷ್ಟೊತ್ತಿಗೆ ಕಾರಿಗೆ ಸಡನ್ ಬ್ರೇಕ್ ಹಾಕುತ್ತಾನೆ ಡ್ರೈವರ್‌. ವಿಜಯಾಂಬಿಕಾ ಮೈಮೇಲೆಲ್ಲಾ ಮಂಡಕ್ಕಿ ಚೆಲ್ಲಿ ಬಿಡುತ್ತದೆ. ಕೋಪದಲ್ಲಿ ಕೊತ ಕೊತ ಕುದಿಯುವ ವಿಜಯಾಂಬಿಕಾ ಅಸಹನೆಯಲ್ಲಿ ಕುಳಿತಿರುತ್ತಾಳೆ.

ಸುಬ್ಬು ಮನೆಯಿಂದ ತಂದ ಬುತ್ತಿ ಊಟ ಮಾಡುವ ಮಿನಿಸ್ಟರ್ ಕುಟುಂಬ

ದಾರಿಯಲ್ಲಿ ಹೋಗುವಾಗ ಊಟಕ್ಕೆಂದು ಒಂದು ಕಡೆ ನಿಲ್ಲಿಸುತ್ತಾರೆ. ಸುಬ್ಬು ಅವರು ಬರುತ್ತಿದ್ದ ಕಾರಿಗಾಗಿ ಕಾದು ಅವರು ಬಂದ ಮೇಲೆ ಊಟ ಮಾಡೋಣ ಎಂದು ನಿರ್ಧಾರ ಮಾಡುತ್ತಾರೆ. ಅವರ ಕಾರು ಬಂದು ವಿಜಯಾಂಬಿಕಾ ಕಾರಿನಿಂದ ಇಳಿದು ಸೀರೆಯ ಮೇಲೆಲ್ಲಾ ಬಿದ್ದಿದ್ದ ಮಂಡಕ್ಕಿಯನ್ನು ಕೆಳಗೆ ಚೆಲ್ಲುತ್ತಾಳೆ. ಇದನ್ನು ನೋಡಿ ಶ್ರಾವಣಿ–ಪಿಂಕಿ ಮುಸಿ ಮುಸಿ ನಗುತ್ತಾರೆ. ಎಲ್ಲರೂ ಸೇರಿ ಹೋಟೆಲ್‌ಗೆ ಊಟಕ್ಕೆ ಹೋಗೋಣ ಎಂದುಕೊಂಡು ನಿರ್ಧಾರ ಮಾಡುತ್ತಿರುವಾಗ ಸುಬ್ಬು ‘ಯಜಮಾನ್ರೆ ನೀವೇನು ತಪ್ಪು ತಿಳಿದಿಲ್ಲ ಅಂದ್ರೆ, ಅಮ್ಮ ಅಕ್ಕ–ತಂಗಿ ಸೇರಿ ಮನೆಯಿಂದ ಪುಳಿಯೋಗರೆ ಚಿತ್ರಾನ್ನ ಎಲ್ಲಾ ಮಾಡಿಕೊಟ್ಟಿದ್ದಾರೆ. ನಾವೆಲ್ಲಾ ಸೇರಿ ಅದನ್ನೆ ತಿನ್ನೋಣ ಎನ್ನುತ್ತಾನೆ. ಆಗ ವಿಜಯಾಂಬಿಕಾ ಇನ್ನಷ್ಟು ಕೋಪ ಬರುತ್ತದೆ, ದಿಕ್ಕೇ ತೋಚದಂತಾಗುತ್ತದೆ. ಅಲ್ಲ ವೀರು ಅವರು ಎಲ್ಲರಿಗೂ ಮಾಡಿರೊಲ್ಲ ಅವರ ಮನೆಯವರಿಗಾಗಿ ಮಾಡಿರ್ತಾರೆ, ನಾವ್ಯಾಕೆ ಅದನ್ನು ತಿನ್ನಬೇಕು ಎಂದು ಹೇಳಿ ಸುಬ್ಬ ಮನೆಯ ಊಟ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತಾಳೆ. ಆದರೆ ಸುಬ್ಬು ಎಲ್ಲರಿಗೂ ಸಾಕಾಗುವಷ್ಟು ಇದೆ ಮೇಡಂ, ಎಲ್ಲರಿಗೂ ಸೇರಿ ಮಾಡಿದ್ದಾರೆ ಎನ್ನುತ್ತಾರೆ. ವೀರೇಂದ್ರ ಅಂತು ಖುಷಿಯಾಗಿ ಎಲ್ಲರೂ ಸೇರಿ ಊಟ ಮಾಡೋಣ. ಒಂದು ಖಾಲಿ ಜಾಗ ಹುಡುಕು ಎಂದು ತಮ್ಮನಿಗೆ ಹೇಳುತ್ತಾನೆ.

ಸುಬ್ಬು ಮೇಲಿನ ಶ್ರಾವಣಿ ಕೋಪಕ್ಕೆ ಸುಂದರ ಬಲಿ

ಇತ್ತ ಎಲ್ಲರೂ ಮರದ ನೆರಳಿನಲ್ಲಿ ಊಟಕ್ಕೆ ಕುಳಿತುಕೊಳ್ಳುತ್ತಾರೆ. ಎಲ್ಲರೂ ಖುಷಿಯಲ್ಲಿ ಊಟ ಮಾಡುತ್ತಿದ್ದರೆ ವಿಜಯಾಂಬಿಕಾ ಮಾತ್ರ ಅಸಮಾಧಾನದಲ್ಲಿ ತಿನ್ನುತ್ತಿರುತ್ತಾಳೆ. ಹೊತ್ತಿಗೆ ಸುಬ್ಬುಗೆ ಶ್ರೀವಲ್ಲಿಯಿಂದ ಕಾಲ್ ಬರುತ್ತದೆ. ಮೊದಲು ಶ್ರೀವಲ್ಲಿ ಕಾಲ್ ನೋಡಿ ಕೋಪಗೊಳ್ಳುವ ಶ್ರಾವಣಿ ಸುಬ್ಬು ಊಟ ಮಾಡುವ ಫೋನ್‌ನಲ್ಲಿ ಮಾತನಾಡಬೇಡ ಎಂದು ಹೇಳುತ್ತಾಳೆ. ಮತ್ತೆ ಶ್ರೀವಲ್ಲಿ ಕಾಲ್ ಮಾಡಿದಾಗ ಸುಬ್ಬು ರಿಸೀವ್ ಮಾಡುತ್ತಾನೆ. ಇದರಿಂದ ಶ್ರಾವಣಿ ಕೋಪ ನೆತ್ತಿಗೇರುತ್ತದೆ. ಸುಂದರ ಚಿತ್ರಾನ್ನ ಅಂದಿದ್ದೆ ತಡ ಮೊಗೆ ಮೊಗೆದು ಚಿತ್ರಾನ್ನ ಬಡಿಸುತ್ತಾಳೆ. ಆದರೂ ಸುಬ್ಬು ಕಾಲ್ ಇಡದೇ ಇದ್ದಿದ್ದು ನೋಡಿ ಮೊಸರನ್ನ ತೆಗೆದು ಸುಂದರನ ತಲೆ ಮೇಲೆ ಸುರಿಯುತ್ತಾಳೆ. ಶ್ರಾವಣಿಯ ಈ ವರ್ತನೆಯನ್ನು ವಂದನಾ–ಸುರೇಂದ್ರ ಗಮನಿಸುತ್ತಿರುತ್ತಾರೆ. ಸುರೇಂದ್ರಗೆ ವಂದನಾ ಹೇಳಿದ್ದ ಮಾತುಗಳು ನೆನಪಾಗುತ್ತವೆ. ಆಗ ವಂದನಾ ಪರಿಸ್ಥಿತಿ ಕೈ ಮೀರುವುದನ್ನು ತಪ್ಪಿಸಿ ಶ್ರಾವಣಿ ನೀನು ಊಟಕ್ಕೆ ಕೂತ್ಕೋ ನಾನು ಬಡಿಸುತ್ತೇನೆ ಎಂದು ಹೇಳುತ್ತಾಳೆ. ಶ್ರಾವಣಿಯ ವರ್ತನೆಯನ್ನು ಸುರೇಂದ್ರ– ವಂದನಾ ಅಲ್ಲದೇ ಇನ್ನೂ ಎರಡು ಕಣ್ಣುಗಳು ಅನುಮಾನದಿಂದ ನೋಡುತ್ತಿರುತ್ತವೆ. ಅದು ಕಾಂತಮ್ಮನ ಕಣ್ಣುಗಳು. ಶ್ರೀವಲ್ಲಿ ಫೋನ್ ಇಡದೇ ಶ್ರಾವಣಿ ಕೋಪ ಇನ್ನಷ್ಟು ಹೆಚ್ಚಾಗುತ್ತದೆ.

ಸುಬ್ಬು ಮೇಲೆ ಶ್ರಾವಣಿಗೆ ಲವ್ ಆಗಿರೋದು ಎಲ್ಲರಿಗೂ ತಿಳಿಯುತ್ತಾ, ವಿಜಯಾಂಬಿಕಾ ಅಂದುಕೊಂಡಂತೆ ಆಗಿಲ್ಲ ಅಂದ್ರೆ ಸಾಲಿಗ್ರಾಮ ನರಕವಾಗುತ್ತಾ, ಶ್ರಾವಣಿಗೆ ಸಾಲಿಗ್ರಾಮ ಸ್ವರ್ಗವಾಗುತ್ತಾ, ತಾಯಿಯ ರಹಸ್ಯ ತಿಳಿಯುತ್ತಾ ಈ ಎಲ್ಲವನ್ನೂ ಮುಂದಿನ ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.