ಸದ್ಯದಲ್ಲೇ ನಿನ್ನ ಮದುವೆಯಾಗುತ್ತೆ ಶ್ರಾವಣಿ ಭವಿಷ್ಯ ನುಡಿದ ಜೋಗತಿ, ಸುಬ್ಬು ಕೈ ನೋಡಿ ದಂಗಾಗಿದ್ದೇಕೆ? ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ-television news zee kannada shravani subramanya kannada serial today episode 122 september 4th reveals shravani future ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಸದ್ಯದಲ್ಲೇ ನಿನ್ನ ಮದುವೆಯಾಗುತ್ತೆ ಶ್ರಾವಣಿ ಭವಿಷ್ಯ ನುಡಿದ ಜೋಗತಿ, ಸುಬ್ಬು ಕೈ ನೋಡಿ ದಂಗಾಗಿದ್ದೇಕೆ? ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

ಸದ್ಯದಲ್ಲೇ ನಿನ್ನ ಮದುವೆಯಾಗುತ್ತೆ ಶ್ರಾವಣಿ ಭವಿಷ್ಯ ನುಡಿದ ಜೋಗತಿ, ಸುಬ್ಬು ಕೈ ನೋಡಿ ದಂಗಾಗಿದ್ದೇಕೆ? ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

Shravani Subramanya Kannada Serial Today Episode September 4th: ಸುಬ್ಬು, ಶ್ರಾವಣಿ, ವಂದನಾ, ಕಾಂತಮ್ಮ ಎಲ್ಲರೂ ಜಾಲಿ ಮೂಡ್‌ನಲ್ಲಿದ್ರೆ, ವಿಜಯಾಂಬಿಕಾ ಮಾತ್ರ ಸಾಲಿಗ್ರಾಮದಲ್ಲಿ ತನ್ನ ಭವಿಷ್ಯದ ಬಗ್ಗೆ ಯೋಚಿಸುತ್ತಾಳೆ. ಗಾಡಿ ಪಂಕ್ಚರ್ ಆಗಿ ಸುಬ್ಬು ಜೊತೆ ಉಳಿದ ಶ್ರಾವಣಿ ಸಿಕ್ಕ ಜೋಗತಿ ಭವಿಷ್ಯ ನುಡಿವ ಜೋಗತಿ ಸುಬ್ಬು ಕೈ ನೋಡಿ ಸ್ತಬ್ಧಳಾಗುತ್ತಾಳೆ.

 ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಸೆಪ್ಟೆಂಬರ್ 4ರ ಸಂಚಿಕೆ
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಸೆಪ್ಟೆಂಬರ್ 4ರ ಸಂಚಿಕೆ

Shravani Subramanya Kannada Serial: ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ನಿನ್ನೆಯ (ಸೆಪ್ಟೆಂಬರ್‌ 4ರ) ಸಂಚಿಕೆಯಲ್ಲಿ ಕಾರಿನಲ್ಲಿ ಹೋಗುವಾಗ ಬೋರ್ ಆಗುತ್ತೆ ಅಂತ ಪಿಂಕಿ ಸರಿಗಮ ಆಡುವ ಎಂದು ಹೇಳುತ್ತಾಳೆ. ಅದಕ್ಕೆ ಕಾಂತಮ್ಮ–ಸುಂದರ ಖುಷಿಯಲ್ಲಿ ಒಕೆ ಹೇಳಿದ್ರೆ, ವಿಜಯಾಂಬಿಕಾ ಮುಖ ಸಿಂಡರಿಸುತ್ತಾಳೆ. ಸುಬ್ಬು ತನಗೆ ಹಾಡು ಹೇಳಲು ಬರೋಲ್ಲ ಎಂದು ನುಣುಚಿಕೊಳ್ಳಲು ಪ್ರಯತ್ನ ಮಾಡುತ್ತಾನೆ. ಆದರೆ ಬಿಡದ ಪಿಂಕಿ ಸುಬ್ಬುಯಿಂದ ಹಾಡು ಹೇಳಿಸುತ್ತಾಳೆ. ಶ್ರಾವಣಿ ಮಾತ್ರ ಮೋಸ, ವಂಚನೆಯಂತ ಹಾಡುಗಳನ್ನೇ ಹೇಳುತ್ತಾಳೆ. ಆದರೆ ಇದರ ಉದ್ದೇಶ ಏನು ಎಂಬುದು ವಂದನಾಗೆ ಬಿಟ್ಟರೆ ಯಾರಿಗೂ ಅರ್ಥವಾಗುವುದಿಲ್ಲ. ಇವರೆಲ್ಲ ಸರಿಗಮಪ ಹಾಡುತ್ತ ಜಾಲಿ ಮೂಡ್‌ನಲ್ಲಿದ್ರೆ ವಿಜಯಾಂಬಿಕಾ ಮಾತ್ರ, ನನಗೆ ಹೀಗೆಲ್ಲಾ ಯಾಕೆ ಆಗುತ್ತಿದೆ. ಸಾಲಿಗ್ರಾಮದಲ್ಲಿ ನನಗೆ ಏನಾದ್ರೂ ತೊಂದರೆ ಆಗಬಹುದಾ, ಸಾಲಿಗ್ರಾಮದಲ್ಲಿ ಶ್ರಾವಣಿಗೆ ತನ್ನ ತಾಯಿ ಯಾರು ಎಂಬುದು ತಿಳಿಯುತ್ತಾ, ನಾನು ಬಿಚ್ಚಿಟ್ಟ ರಹಸ್ಯ ಹೊರ ಬರುತ್ತಾ ಎಂದು ಯೋಚಿಸುತ್ತಾ ಕುಳಿತಿರುತ್ತಾಳೆ. ಅಷ್ಟೊತ್ತಿಗೆ ಕಾರಿನ ಟೈರ್ ಪಂಕ್ಚರ್ ಆಗಿ ಕಾರನ್ನು ಬದಿಗೆ ನಿಲ್ಲಿಸುತ್ತಾರೆ.

ಸುಬ್ಬು ಜೊತೆ ಉಳಿಯುವ ಕಾಂತಮ್ಮ– ಶ್ರಾವಣಿ

ಕಾರಿನ ಟೈರ್ ಪಂಕ್ಚರ್ ಆಗಿ ಕಾರು ಬದಿಗೆ ನಿಲ್ಲಿಸಿದ್ದು ನೋಡಿ ಉಳಿದ ಕಾರಿನವರು ಬಂದು ನಿಲ್ಲಿಸುತ್ತಾರೆ. ಕಾರು ಇಳಿದು ಬರುವ ವೀರೇಂದ್ರ ಏನಾಯ್ತು ಸುಬ್ಬು ಎಂದು ಕೇಳುತ್ತಾರೆ, ಆಗ ಸುಬ್ಬು ಟೈರ್ ಪಂಕ್ಚರ್ ಆಗಿದ್ದು ಹೇಳುತ್ತಾನೆ. ಅದಕ್ಕೆ ವೀರೇಂದ್ರ ಸರಿ ಹಾಗಾದ್ರೆ ನಾವೆಲ್ಲಾ ಇಲ್ಲೇ ನಿಲ್ಲುತ್ತೇವೆ. ಕಾರಿನ ಫಂಕ್ಚರ್ ಹಾಕಿಸಿಬಿಡು ಎಂದು ಸುಬ್ಬು ಬಳಿ ಹೇಳುತ್ತಾಳೆ ವೀರೇಂದ್ರ. ಅದಕ್ಕೆ ಸುಬ್ಬು ಅಯ್ಯೋ ಬೇಡ ಯಜಮಾನ್ರೆ ನೀವೆಲ್ಲಾ ಹೋಗಿರಿ ನಾನು ಪಂಕ್ಚರ್ ಸರಿ ಮಾಡಿಸಿಕೊಂಡು ಬರ್ತೀನಿ ಎಂದು ಹೇಳುತ್ತಾನೆ. ಆಗ ಶ್ರಾವಣಿ ನಾನು ಇಲ್ಲಿಂದ ಹೋದ್ರೆ ಈ ಸುಬ್ಬು ಶ್ರೀವಲ್ಲಿ ಜೊತೆ ಮಾತನಾಡುತ್ತಾ ಟೈಮ್ ಪಾಸ್ ಮಾಡ್ತಾನೆ, ನಾನು ಇವನ ಜೊತೆಗೆ ಇರ್ತೇನೆ ಎಂದು ಮನಸ್ಸಿನಲ್ಲೇ ಯೋಚಿಸಿ ನಾನು ಸುಬ್ಬು ಜೊತೆ ಇರ್ತೀನಿ ನೀವೆಲ್ಲಾ ಹೋಗಿರಿ ಎಂದು ಹೇಳುತ್ತಾಳೆ. ಅದಕ್ಕೆ ಸುಬ್ಬು, ವಂದನಾ ಬೇಡ ಅಂದ್ರು ಸುರೇಂದ್ರ ಬೇರೆ ದಾರಿ ಕಾಣದೇ ಆಯ್ತಮ್ಮಾ ಹಂಗೆ ಮಾಡು ಸುಬ್ಬು ಜೊತೆ ಇದ್ದು ಪಂಕ್ಚರ್ ಹಾಕಿಸಿಕೊಂಡು ಮಾತು ಎಂದು ಹೇಳಿ ಎಲ್ಲರೂ ಹೊರಡುತ್ತಾರೆ. ವಿಜಯಾಂಬಿಕಾ ವೀರೇಂದ್ರನ ಕಾರಿನಲ್ಲಿ ಹೊರಡುತ್ತಾಳೆ. ಅಷ್ಟೊತ್ತಿಗೆ ಪದ್ಮನಾಭ ಕಾಂತಮ್ಮನ ಜೊತೆ ಬೀಗತಿ ಅವರೇ ನೀವು ಮಕ್ಕಳ ಜೊತೆ ಇದ್ದು ಪಂಕ್ಚರ್ ಹಾಕಿಸಿಕೊಂಡು ಬನ್ನಿ ಎಂದು ಹೇಳಿ ಕಾಂತಮ್ಮನನ್ನು ಬಿಟ್ಟು ಹೊರಡುತ್ತಾರೆ.

ದಾರಿ ಮಧ್ಯೆ ಸುಬ್ಬು ಜೊತೆ ಶ್ರಾವಣಿ ಜಗಳ

ಸ್ಟ್ನೆಪಿ ಚೇಂಜ್ ಮಾಡಿ ಹೊರಟ್ರೆ ಆಯ್ತು ಎಂದುಕೊಳ್ಳುವಾಗಲೇ ಸ್ಟ್ನೆಪಿ ಕೂಡ ಪಂಕ್ಟರ್ ಆಗಿರುವ ವಿಚಾರ ಹೇಳುತ್ತಾರೆ ಡ್ರೈವರ್. ಆಗ ಸುಬ್ಬುಗೆ ಬೇರೆ ದಾರಿ ಕಾಣದೆ ಪಂಕ್ಚರ್ ಹಾಕಿಸಿಕೊಂಡು ಬರುತ್ತೇನೆ ಎಂದು ಹೊರಡುತ್ತಾನೆ, ಸುಬ್ಬು ಒಬ್ಬನೇ ಹೋದ್ರೆ ಶ್ರೀವಲ್ಲಿ ಜೊತೆ ಮಾತನಾಡುತ್ತಾನೆ ಎಂದು ಯೋಚಿಸುವ ಶ್ರಾವಣಿ ತಾನು ಅವನ ಜೊತೆ ಹೊರಡುತ್ತಾಳೆ. ಅವರ ಹಿಂದೆಯೇ ಕಾಂತಮ್ಮ ಕೂಡ ಓಡಲು ಶುರು ಮಾಡುತ್ತಾಳೆ. ದಾರಿ ಮಧ್ಯದಲ್ಲಿ ಶ್ರಾವಣಿ ನಿನಗೆ ಶ್ರೀವಲ್ಲಿ ಅಂದ್ರೆ ಇಷ್ಟ, ನಾನಂದ್ರೆ ಇಷ್ಟ ಇಲ್ಲ. ಶ್ರೀವಲ್ಲಿ ಮೇಲೆ ಕಾಳಜಿ ಇದೆ, ನನ್ನ ಮೇಲೆ ಇಲ್ಲ ಅಂತೆಲ್ಲಾ ಜೋರಾಗಿ ಜಗಳ ಶುರು ಮಾಡುತ್ತಾಳೆ. ಮೊದಲೇ ಅನುಮಾನದ ಕಿಡಿ ಹೊತ್ತಿದ್ದ ಕಾಂತಮ್ಮ ಮನಸ್ಸಿನಲ್ಲಿ ಏನೇನೋ ಯೋಚನೆಗಳು ಓಡಲು ಆರಂಭವಾಗುತ್ತವೆ. ಸುಬ್ಬು ಶ್ರೀವಲ್ಲಿ ಮೇಲೇನೂ ವಿಶೇಷ ಕಾಳಜಿ ಇಲ್ಲ ಮೇಡಂ, ಅವಳು ನಮ್ಮ ಮನೆಗಾಗಿ ಇಷ್ಟೆಲ್ಲಾ ಮಾಡಿದ್ದಾಳೆ. ಆ ಫೀಲ್ ಇದೆ ಅಷ್ಟೇ. ನಿಮ್ಮ ಮೇಲೆ ನನಗೆ ಗೌರವ ಇದೆ ಎಂದು ಹೇಳಿದರೂ ಕೇಳದ ಶ್ರಾವಣಿ ಸುಬ್ಬು ಮೇಲೆ ಕೋಪ ಮಾಡಿಕೊಂಡು ಹೋಗಿ ಬಿಡುತ್ತಾಳೆ. ಸುಬ್ಬು ಅವಳ ಹಿಂದೆಯೇ ಓಡುತ್ತಾನೆ. ಆಗ ಕಾಂತಮ್ಮ ಹಿಂದೆ ಉಳಿದು ಬಿಡುತ್ತಾರೆ.

ದಾರಿಯಲ್ಲಿ ಸಿಕ್ಕ ಜೋಗತಿ ನುಡಿದ್ಲು ಭವಿಷ್ಯ

ಶ್ರಾವಣಿಯನ್ನು ಹುಡುಕಿ ಬರುವ ಸುಬ್ಬುಗೆ ಶ್ರಾವಣಿ ಮರದ ಕೆಳಗೆ ಮಹಿಳೆಯೊಬ್ಬರ ಜೊತೆ ಕುಳಿತು ಮಾತನಾಡುವುದು ಕಾಣಿಸುತ್ತದೆ. ಅಲ್ಲಿ ಬಂದಾಗ ಒಬ್ಬಳು ಕಣಿ ಹೇಳುವ ಮಹಿಳೆ ಕಾಣಿಸುತ್ತಾರೆ. ಸುಬ್ಬು ಬೇಡ ಎಂದರೂ ಶ್ರಾವಣಿ ಅವಳಿಗೆ ತನ್ನ ಕೈ ನೀಡಿ ಭವಿಷ್ಯ ಹೇಳುವಂತೆ ಹೇಳುತ್ತಾಳೆ. ಆಕೆ ಶ್ರಾವಣಿ ನೋವಿನ ಕಥೆ ಹೇಳಿ ನಂತರ ಸದ್ಯದಲ್ಲೇ ನಿಮ್ಮ ಮನೆಯಲ್ಲಿ ಎರಡು ಶುಭಕಾರ್ಯ ನಡೆಯುತ್ತೆ, ಅದರಲ್ಲಿ ಒಂದು ನಿನ್ನ ಮದುವೆ ಎಂದು ಹೇಳುತ್ತಾಳೆ. ಅಲ್ಲದೇ ನಿನ್ನ ಕಾವಲಿನಂತೆ ಕಾಯುವ ಹುಡುಗ ಸಿಗುತ್ತಾನೆ. ಆತ ನಿನಗಾಗಿ ಯುದ್ಧವನ್ನೇ ಮಾಡುತ್ತಾನೆ ಎಂಬರ್ಥದಲ್ಲಿ ಹೇಳುತ್ತಾಳೆ. ಅಷ್ಟೊತ್ತಿಗೆ ಕಾಂತಮ್ಮ ಕೂಡ ಅಲ್ಲಿಗೆ ಬಂದಿರುತ್ತಾಳೆ. ಶ್ರಾವಣಿ ಭವಿಷ್ಯ ಹೇಳಿದ ನಂತರ ಸುಬ್ಬು ಕೈ ನೋಡುವಂತೆ ಹೇಳುತ್ತಾಳೆ ಶ್ರಾವಣಿ. ಸುಬ್ಬು ಬೇಡ ಎಂದರೂ ಕಾಂತಮ್ಮ–ಶ್ರಾವಣಿ ಒತ್ತಾಯದಿಂದ ಕೈ ನೋಡುವಂತೆ ಹೇಳುತ್ತಾರೆ. ಸುಬ್ಬು ಕೈ ನೋಡಿದ ಜೋಗತಿ ಸ್ತಬ್ಧಳಾಗುತ್ತಾಳೆ.

ಸುಬ್ಬು ಕೈ ನೋಡಿದ ಕಣಿ ಹೇಳುವಾಕೆಯ ಪ್ರತಿಕ್ರಿಯೆ ಏಕೆ ಹಾಗಿತ್ತು, ನಿಜಕ್ಕೂ ಸದ್ಯದಲ್ಲೇ ಶ್ರಾವಣಿ ಮದುವೆ ಆಗುತ್ತಾ, ಶ್ರಾವಣಿ ಬದುಕಿನಲ್ಲಿ ಬರುವ ಹುಡುಗ ಯಾರು, ಸಾಲಿಗ್ರಾಮದಲ್ಲಿ ಶ್ರಾವಣಿಗೆ ಅಮ್ಮನ ಸುಳಿವು ಸಿಗುತ್ತಾ ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.