ಅಜ್ಜಿ ನೋಡುವ ತವಕದಲ್ಲಿ ಶ್ರಾವಣಿ, ಮನೆ ಬಾಗಿಲಲ್ಲೇ ಎಡವಿದ ವಿಜಯಾಂಬಿಕಾಗೆ ಕಾದಿದ್ಯಾ ಆಪತ್ತು; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ-television news zee kannada shravani subramanya kannada serial today episode 124 september 9th shravani awaiting for gra ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಅಜ್ಜಿ ನೋಡುವ ತವಕದಲ್ಲಿ ಶ್ರಾವಣಿ, ಮನೆ ಬಾಗಿಲಲ್ಲೇ ಎಡವಿದ ವಿಜಯಾಂಬಿಕಾಗೆ ಕಾದಿದ್ಯಾ ಆಪತ್ತು; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

ಅಜ್ಜಿ ನೋಡುವ ತವಕದಲ್ಲಿ ಶ್ರಾವಣಿ, ಮನೆ ಬಾಗಿಲಲ್ಲೇ ಎಡವಿದ ವಿಜಯಾಂಬಿಕಾಗೆ ಕಾದಿದ್ಯಾ ಆಪತ್ತು; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

Shravani Subramanya Kannada Serial Today Episode September 9th: ಸಾಲಿಗ್ರಾಮದ ಹೆಬ್ಬಾಗಿಲು ದಾಟಿ ಒಳ ಬಂದ್ರು ವೀರೇಂದ್ರ ಕುಟುಂಬ. ಶ್ರಾವಣಿ ಅಜ್ಜಿ ಮನೆಯ ಬಾಗಿಲಲ್ಲೇ ಎಡವಿದ್ಲು ವಿಜಯಾಂಬಿಕಾ. ಶ್ರಾವಣಿಗೆ ಅಜ್ಜಿ ನೋಡುವ ತವಕ, ವೀರುಗೆ ಯಜಮಾನರ ನೆನಪು. ವರದ–ವರಲಕ್ಷ್ಮೀ ಸೆಲ್ಫಿ ಪುರಾಣ, ಪ್ರೇಮ ‍ಪಯಣ.

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಸೆಪ್ಟೆಂಬರ್‌ 9ರ ಸಂಚಿಕೆ
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಸೆಪ್ಟೆಂಬರ್‌ 9ರ ಸಂಚಿಕೆ

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ನಿನ್ನೆಯ (ಸೆಪ್ಟೆಂಬರ್‌ 9ರ) ಸಂಚಿಕೆಯಲ್ಲಿ ಊರ ಬಾಗಿಲ್ಲಲ್ಲೇ ವೀರೇಂದ್ರ ಕುಟುಂಬಕ್ಕೆ ಅದ್ಧೂರಿ ಸ್ವಾಗತ ನೀಡಿದ ಊರಿನವರ ಜೊತೆ ತಾನು ನಡೆದು ಹೋಗುತ್ತೇನೆ ಎಂದರೂ ಊರಿನವರು ಕೇಳುವುದಿಲ್ಲ, ಕೊನೆಗೆ ಎಲ್ಲರೂ ಕಾರು ಹತ್ತಿ ಲಲಿತಾದೇವಿ ಅಂದರೆ ಶ್ರಾವಣಿ ಅಜ್ಜಿ ಮನೆಯಂಗಳ ತಲುಪುತ್ತಾರೆ. ಮನೆಯ ಎದುರು ಕಾರು ನಿಲ್ಲಿಸಿದ್ದಾಗ ವೀರೇಂದ್ರ, ಪದ್ಮನಾಭ, ಶ್ರಾವಣಿ ಭಾವುಕರಾಗುತ್ತಾರೆ. ಪದ್ಮನಾಭ ಕಾರಿನಿಂದ ಇಳಿದಿದ್ದೇ ಮನೆ ಮುಂದೆ ದೇವಸ್ಥಾನದಂತೆ ನಮಸ್ಕರಿಸುತ್ತಾರೆ. ಇದನ್ನ ನೋಡಿದ ಸುಬ್ಬು ಹಾಗೂ ವಂದನಾ, ಕಾಂತಮ್ಮ, ಸುಂದರ ಇವರೆಲ್ಲರಿಗೂ ಆಶ್ಚರ್ಯವಾಗುತ್ತದೆ. ವೀರೇಂದ್ರಗೆ ಹಳೆಯ ನೆನಪು ಕಾಡಲು ಆರಂಭವಾದರೆ, ಮೊದಲ ಬಾರಿ ತಾಯಿ ಹುಟ್ಟಿ ಬೆಳೆದ ಮನೆಗೆ ಕಾಲಿಡುತ್ತಿರುವ ಸಂಭ್ರಮದಲ್ಲಿ ಶ್ರಾವಣಿ ಕಣ್ಣೀರಾಗುತ್ತಾಳೆ.

ಮನೆ ಹೊಸ್ತಿಲಲ್ಲೇ ಎಡವಿದ ವಿಜಯಾಂಬಿಕಾ

ಎಲ್ಲರೂ ಕಾರಿನಿಂದ ಇಳಿದು ಬಂದಾಗ ಅವರನ್ನು ಮನೆಯೊಳಗೆ ಆಹ್ವಾನಿಸುತ್ತಾರೆ ಆಕಾಶ–ಅಂಬರ. ಆಕಾಶ ಅಂಬರಳ ಬಳಿ ‘ಅಂಬರ ಶ್ರಾವಣಿ ಅಮ್ಮ ಮೊದಲು ಬಾರಿ ಬರ್ತಾ ಇದಾರೆ, ನೀನು ಅವರನ್ನು ಆರತಿ ಮಾಡಿ ಒಳಗೆ ಕರೆದುಕೊಂಡು‘ ಎಂದು ಹೇಳಿ ಎಲ್ಲರಿಗೂ ಮನೆ ಬಾಗಿಲ ಬಳಿ ಬರುವಂತೆ ಹೇಳುತ್ತಾನೆ. ಮುಖ್ಯದ್ವಾರದ ಬಳಿ ಬಂದಾಗ ಶ್ರಾವಣಿಯನ್ನು ಆರತಿ ಮಾಡಿ ಕರೆದುಕೊಳ್ಳುತ್ತಾಳೆ ಅಂಬರ. ಎಲ್ಲರೂ ಮನೆಯೊಳಗೆ ಹೋ‌ದ್ರು ವಿಜಯಾಂಬಿಕಾ ಮಾತ್ರ ಭಯ, ಆತಂಕದಲ್ಲಿ ಹಿಂದೆ ಉಳಿಯುತ್ತಾಳೆ. ಅವಳು ಹೊರಗೆ ನಿಂತಿದ್ದು ನೋಡಿ ಅಂಬರ ‘ಅಲ್ಲೇ ಯಾಕೆ ನಿಂತ್ರಿ ಅಮ್ಮೋರೆ, ಬನ್ನಿ ಒಳಗೆ‘ ಎಂದು ಕರೆಯುತ್ತಾಳೆ. ವಿಜಯಾಂಬಿಕಾ ಇನ್ನೇನು ಮನೆಯೊಳಗೆ ಬರಬೇಕು ಎಂದುಕೊಂಡಾಗಲೇ ಮೆಟ್ಟಿಲಲ್ಲೇ ಎಡವಿ ಬಿಡುತ್ತಾಳೆ. ಇದರಿಂದ ಅವಳಿಗೆ ಮತ್ತಷ್ಟು ಭಯ ಕಾಡುತ್ತೆ, ಸಾಲಿಗ್ರಾಮಕ್ಕೆ ಬಂದಾಗಿನಿಂದ ನಂಗ್ಯಾಕೆ ಹೀಗೆಲ್ಲಾ ಅಪಶಕುನಗಳಾಗುತ್ತಿವೆ ಎಂದು ಅವಳು ಯೋಚಿಸಿ ಗಾಬರಿಯಾಗುತ್ತಾಳೆ. ಫೌರ್ಮ್‌ಹೌಸ್‌ನಲ್ಲಿ ಕೂಡಿ ಹಾಕಿದ್ದ ವ್ಯಕ್ತಿ ‘ನಿನ್ನ ಅಂತ್ಯಕ್ಕೆ ಸಾಲಿಗ್ರಾಮವೇ ಸರಿ‘ ಎಂದು ಹೇಳಿದ್ದು ನೆನಪಾಗುತ್ತದೆ. ಭಯ, ಆತಂಕದಿಂದಲೇ ಮನೆಯೊಳಗೆ ಹೆಜ್ಜೆ ಇಡುತ್ತಾಳೆ ವಿಜಯಾಂಬಿಕಾ.

ಮೊದಲ ಬಾರಿ ಮಗಳಿಗೆ ಕಂದಾ ಅಂದ್ರು ವೀರೇಂದ್ರ

ಎಲ್ಲರೂ ಮನೆಯೊಳಗೆ ಬಂದ ಮೇಲೆ ಶ್ರಾವಣಿ ಅಜ್ಜಿಗಾಗಿ ಹುಡುಕಾಡುತ್ತಾಳೆ. ಅವಳ ಅಜ್ಜಿ ಅಲ್ಲೆಲ್ಲೂ ಕಾಣಿಸುವುದಿಲ್ಲ. ಕೊನೆಗೆ ಆಕಾಶ್‌–ಅಂಬರ ಬಳಿ ಅಜ್ಜಿ ಎಲ್ಲಿ, ನಾನು ಅವರನ್ನು ನೋಡಬೇಕು. ನನಗಾಗಿ ಅವರು ಕಾಯ್ತಾ ಇದ್ರಿ ಅಂತ ಹೇಳಿದ್ರಿ, ಆದ್ರೆ ಈಗ ನಾನು ಬಂದ್ರು ಅವರು ನನ್ನ ಜೊತೆ ಮಾತಾಡೋಕೆ, ನನ್ನ ನೋಡೋಕೆ ಬಂದಿಲ್ಲ ಅಂತ ಪ್ರಶ್ನೆ ಮಾಡ್ತಾಳೆ. ಅದಕ್ಕೆ ಅಂಬರ ನೀವು ಮೊದಲು ಸುಧಾರಿಸಿಕೊಳ್ಳಿ. ನಂತರ ನಿಮ್ಮ ಅಜ್ಜಿ ಬರುತ್ತಾರೆ. ಅವರು ಯಾಕೋ ಸ್ವಲ್ಪ ದುಃಖದಲ್ಲಿದ್ರು, ಹಾಗಾಗಿ ಈಗಷ್ಟೇ ಕೋಣೆಯೊಳಗೆ ಹೋದ್ರು, ನಂತರ ಅವರೇ ಸಮಾಧಾನ ಮಾಡಿಕೊಂಡು ಬರುತ್ತಾರೆ ಎಂದು ಶ್ರಾವಣಿಯ ಮನವೊಲಿಸಲು ನೋಡುತ್ತಾರೆ. ಆದರೆ ಶ್ರಾವಣಿ ಈಗಲೇ ಅಜ್ಜಿಯನ್ನು ನೋಡಬೇಕು ಎಂದು ಹಟ ಮಾಡುತ್ತಾಳೆ. ಸುಬ್ಬು ಹೇಳಿದ್ರು ಕೇಳುವುದಿಲ್ಲ. ಆಗ ಒಳ ಬರುವ ವೀರೇಂದ್ರ ಶ್ರಾವಣಿಯ ತಲೆ ನೇವರಿಸಿ, ಅಜ್ಜಿಯವರನ್ನು ನೋಡುವ ಬಯಕೆ ನಮಗೂ ಇದೆ ಕಂದಾ, ಆದರೆ ಈಗ ನಾವು ಫ್ರೆಶ್ ಆಗಿ ಬರುವ ನಂತರ ಅವರು ನಮಗೆ ಸಿಗ್ತಾರೆ ಎಂದು ಪ್ರೀತಿಯಿಂದ ಹೇಳುತ್ತಾರೆ. ಶ್ರಾವಣಿಗೆ ಅಪ್ಪ ತನ್ನನ್ನು ಕಂದ ಎಂದು ಕರೆದಿದ್ದು ಆಶ್ಚರ್ಯ ಮೂಡಿಸುತ್ತದೆ. ವೀರೇಂದ್ರ ಮಾತು ಕೇಳಿ ಬೇರೆಯವರೆಲ್ಲಾ ಖುಷಿ ಆದ್ರೆ ವಿಜಯಾಂಬಿಕಾ ಶಾಕ್ ಆಗುತ್ತಾಳೆ. ಆದರೆ ಶ್ರಾವಣಿಗೆ ಮಾತ್ರ ಅಪ್ಪನ ಈ ರೀತಿ ಸಾಲಿಗ್ರಾಮಕ್ಕೆ ಮಾತ್ರ ಸೀಮಿತ ಎಂಬ ಮಾತು ನೆನಪಿಗೆ ಬರುತ್ತದೆ. ಆದರೂ ಶ್ರಾವಣಿಯಲ್ಲಿ ಅಜ್ಜಿ ನೋಡುವ ತವಕದ ಜೊತೆ ಅಪ್ಪ ತನ್ನನ್ನು ಕಂದಾ ಎಂದು ಕರೆದಿದ್ದು ಖುಷಿ ತಂದಿರುತ್ತದೆ. ಇತ್ತ ಮನೆಯೊಳಗೆ ಬಂದಾಗ ಅಲ್ಲಿದ್ದ ಖರ್ಚಿ ನೋಡಿ ಯಜಮಾನರು (ಶ್ರಾವಣಿ ಅಜ್ಜ) ನೆನಪಾಗುತ್ತದೆ. ಅವರ ದಿನಗಳನ್ನು ನೆನೆದು ಕಣ್ಣೀರಾಗುತ್ತಾರೆ ವೀರೇಂದ್ರ ಪದ್ಮನಾಭ.

ವರ–ವರದ ಸೆಲ್ಫಿ ಪುರಾಣ

ಅರ್ಜೆಂಟಾಗಿ ಸಿಗಲು ಹೇಳುವ ವರದನನ್ನು ಹುಡುಕಿ ಬರುತ್ತಾಳೆ ವರಲಕ್ಷ್ಮೀ. ಆಗ ವರದ ಅವಳ ಬಳಿ ಯಾಕೆ ಸಿಗಲು ಹೆದರುತ್ತೀಯಾ, ಈಗ ನಾವು ಲವರ್ಸ್ ಅಲ್ಲ, ನಾವಿಬ್ಬರೂ ಮದುವೆ ಆಗುವವರು ಎಂದು ಹೇಳಿ ವರಲಕ್ಷ್ಮೀಗೆ ಧೈರ್ಯ ತುಂಬಲು ನೋಡುತ್ತಾನೆ. ಮಾತ್ರವಲ್ಲ ನಾನು ನಮ್ಮ ಪ್ರೀತಿ ವಿಚಾರ ನನ್ನ ಫ್ರೆಂಡ್ಸ್ ಬಳಿ ಹೇಳಿದೆ. ಅವರು ನಿನ್ನ ಫೋಟೊ ಕೇಳ್ತಾ ಇದಾರೆ. ಒಂದು ಸೆಲ್ಫಿ ತೆಗೆದುಕೊಳ್ಳೋಣ ಎಂದು ವರಲಕ್ಷ್ಮೀ ಬಳಿ ಕೇಳುತ್ತಾನೆ ವರದ. ಆರಂಭದಲ್ಲಿ ಬೇಡ ಎನ್ನುವ ವರಲಕ್ಷ್ಮೀ ನಂತರ ಸೆಲ್ಫಿ ತೆಗೆದುಕೊಳ್ಳಲು ಒಪ್ಪುತ್ತಾಳೆ. ಸೆಲ್ಫಿ ತೆಗೆಯುವಾಗ ತನ್ನ ಕೈ ಹಿಡಿದ ವರದನಿಂದ ತಪ್ಪಿಸಿಕೊಳ್ಳುವ ವರಲಕ್ಷ್ಮೀ ನಾನು ಏನು ತಪ್ಪು ಮಾಡೊಲ್ಲ ಅಂತ ಅಣ್ಣನಿಗೆ ಮಾತು ಕೊಟ್ಟಿದ್ದೇನೆ, ಅಣ್ಣನಿಗೆ ಇಷ್ಟವಿಲ್ಲದ ಕೆಲಸ ನಾನು ಮಾಡುವುದಿಲ್ಲ. ಅಣ್ಣ ನನ್ನ ಮೇಲೆ ಜೀವವನ್ನೇ ಇಟ್ಟುಕೊಂಡಿದ್ದಾನೆ. ಅವನು ನನ್ನ ಜೀವವನ್ನೇ ನಿಂಗೆ ಕೊಡುತ್ತಿದ್ದಾನೆ ಎಂದೆಲ್ಲಾ ಹೇಳಿ ಅಣ್ಣ ಗುಣಗಾನ ಮಾಡುತ್ತಾಳೆ. ಅಂತೂ ಇಂತೂ ಸೆಲ್ಫಿ ತೆಗೆದುಕೊಂಡು ಮದುವೆ ಬಗ್ಗೆ ಮಾತನಾಡಿ ತಮ್ಮ ತಮ್ಮ ಮನೆ ಕಡೆಗೆ ಹೊರಡುತ್ತಾರೆ ವರ–ವರದ.

ಶ್ರಾವಣಿ ಮನೆಗೆ ಬಂದ್ರು ಅವಳನ್ನು ನೋಡೋಲು ಅಜ್ಜಿ ಬಾರದೇ ಇರುವುದೇಕೆ, ವಿಜಯಾಂಬಿಕಾಗೆ ನಿಜಕ್ಕೂ ಸಾಲಿಗ್ರಾಮದಲ್ಲಿ ಗ್ರಹಚಾರ ಕಾದಿದ್ಯಾ, ಶ್ರಾವಣಿಗೆ ತನ್ನ ಅಜ್ಜಿಯಿಂದ ಅಮ್ಮನ ವಿಚಾರ ತಿಳಿಯುತ್ತಾ ಈ ಎಲ್ಲವನ್ನು ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.

mysore-dasara_Entry_Point