ಅಜ್ಜಿ ಕಂಡು ಶ್ರಾವಣಿ ಕಣ್ಣಲ್ಲಿ ಆನಂದಬಾಷ್ಪ, ವಿಜಯಾಂಬಿಕಾಗೆ ಭೂತದ ಕಾಟ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ಅಜ್ಜಿ ಕಂಡು ಶ್ರಾವಣಿ ಕಣ್ಣಲ್ಲಿ ಆನಂದಬಾಷ್ಪ, ವಿಜಯಾಂಬಿಕಾಗೆ ಭೂತದ ಕಾಟ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

ಅಜ್ಜಿ ಕಂಡು ಶ್ರಾವಣಿ ಕಣ್ಣಲ್ಲಿ ಆನಂದಬಾಷ್ಪ, ವಿಜಯಾಂಬಿಕಾಗೆ ಭೂತದ ಕಾಟ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

Shravani Subramanya Kannada Serial Today Episode September 10th: ಅಜ್ಜಿ ನೋಡುವ ತವಕದಲ್ಲಿ ತುದಿಗಾಲಲ್ಲಿ ನಿಂತ ಶ್ರಾವಣಿಗೆ ಕೊನೆಗೂ ಸಿಕ್ತು ಅಜ್ಜಿಯನ್ನು ಭೇಟಿಯಾಗುವ ಅವಕಾಶ. ಲಲಿತಾದೇವಿಯ ಮುಂದೆ ಕೈ ಮುಗಿದು ಕ್ಷಮೆ ಕೇಳಿದ ವೀರೇಂದ್ರ. ವಿಜಯಾಂಬಿಕಾಗೆ ಯಜಮಾನರ ಕೋಣೆಯಲ್ಲಿ ಭೂತದ ಕಾಟ.

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಸೆಪ್ಟೆಂಬರ್‌ 10ರ ಸಂಚಿಕೆ
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಸೆಪ್ಟೆಂಬರ್‌ 10ರ ಸಂಚಿಕೆ

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ನಿನ್ನೆಯ (ಸೆಪ್ಟೆಂಬರ್‌ 10ರ) ಸಂಚಿಕೆಯಲ್ಲಿ ಶ್ರಾವಣಿ ಅಜ್ಜ ಇರುತ್ತಿದ್ದ ಕೋಣೆಯಲ್ಲಿ ಉಳಿದುಕೊಂಡ ವಿಜಯಾಂಬಿಕಾಗೆ ಇದ್ದಕ್ಕಿದ್ದಂತೆ ಯಾರೋ ಕುತ್ತಿಗೆ ಹಿಸುಕಿದ ಅನುಭವವಾಗುತ್ತದೆ. ಅಲ್ಲದೇ ಹಿಂದೆ ತಾನು ಮಾಡಿದ ಪಾಪ ಕೃತ್ಯಗಳೆಲ್ಲಾ ಕಣ್ಣು ಮುಂದೆ ಹಾದು ಹೋಗುತ್ತವೆ. ಭಯದಿಂದ ನಡುಗಿ ಹೋಗುವ ವಿಜಯಾಂಬಿಕಾ ಇದು ಕನಸೋ ನನಸೋ ಎಂಬುದು ತಿಳಿಯದೆ ಬೆವೆತು ಹೋಗುತ್ತಾಳೆ. ಅಷ್ಟೊತ್ತಿಗೆ ಮದನ್ ಕಾಲ್ ಮಾಡುತ್ತಾನೆ, ಕಾಲ್ ರಿಸೀವ್ ಮಾಡಿದ್ರೂ ಗಾಬರಿಯಾಗಿ ಮಾತನಾಡುವ ಅಮ್ಮನನ್ನು ಕಂಡು ಮದನ್‌ಗೂ ಶಾಕ್ ಆಗುತ್ತೆ, ಅವನು ಅವಳನ್ನು ಸಾಮಾಧಾನ ಮಾಡುತ್ತಾನೆ. ಗಟ್ಟಿಯಾಗಿ ಕಿರುಚುವ ವಿಜಯಾಂಬಿಕಾ ಕೂಗಿಗೆ ಕೋಣೆಗೆ ಓಡೋದಿ ಬರುತ್ತಾರೆ ಆಕಾಶ್ ಅಂಬರ. ಅವರ ಬಳಿ ತನಗೆ ಬೇರೆ ರೂಮ್ ಕೊಡಿ ಎಂದು ಕೇಳಿಕೊಳ್ಳುತ್ತಾಳೆ ವಿಜಯಾಂಬಿಕಾ. ಅದಕ್ಕೆ ಮೇಡಂ ಇರುವುದರಲ್ಲಿ ಚೆನ್ನಾಗಿರುವ ರೂಮ್ ಇದು, ಬೇರೆ ರೂಮ್‌ಗಳು ಸಾಧಾರಣವಾಗಿದೆ. ಇದು ಯಜಮಾನರು ಇರುತ್ತಿದ್ದ ಕೋಣೆ ಎಂದು ಹೇಳುತ್ತಾರೆ. ಇದನ್ನು ಕೇಳಿದಾಗ ವಿಜಯಾಂಬಿಕಾ ಭಯ ಇನ್ನಷ್ಟು ಹೆಚ್ಚಾಗುತ್ತದೆ. ಸಾಧಾರಣ ರೂಮ್ ಆದ್ರೂ ಪರ್ವಾಗಿಲ್ಲ ನಾನು ಅಲ್ಲೇ ಇರ್ತೀನಿ ಎಂದು ಗಾಬರಿಯಲ್ಲೇ ಹೇಳುತ್ತಾಳೆ. ಇವಳ ವರ್ತನೆ ಕಂಡು ಏನೂ ಅರ್ಥವಾಗದೇ ನಿಂತು ಬಿಡುತ್ತಾರೆ ಆಕಾಶ್–ಅಂಬರ.

ಕೊನೆಗೆ ಶ್ರಾವಣಿ–ಲಲಿತಾದೇವಿ ಮುಖಾಮುಖಿ

ಅಜ್ಜಿಯನ್ನು ನೋಡಲು ಹಂಬಲಿಸುತ್ತಿದ್ದ ಶ್ರಾವಣಿಗೆ ಮತ್ತೊಮ್ಮೆ ಕಂದಾ ಎಂದು ಕರೆಯುವ ವೀರೇಂದ್ರ ‘ಮಗಳೇ ಅಜ್ಜಿಯನ್ನು ಹಾಗೆಲ್ಲಾ ನೋಡಲು ಆಗುವುದಿಲ್ಲ. ಅವರು ಯಾರನ್ನು ಕರೆಯುತ್ತಾರೋ ಅವರೇ ಹೊಗಬೇಕು‘ ಎಂದು ಪ್ರೀತಿಯಿಂದ ಹೇಳುತ್ತಾರೆ. ಅಪ್ಪ ತನ್ನನ್ನು ಇಷ್ಟು ಪ್ರೀತಿಯಿಂದ ಮಾತನಾಡಿಸಿದ್ದು ಕಂಡು ಖುಷಿಯಾದ ಶ್ರಾವಣಿಗೆ ಕ್ಷಣ ಮಾತ್ರದಲ್ಲಿ ಇದು ಸಾಲಿಗ್ರಾಮಕ್ಕೆ ಮಾತ್ರ ಸೀಮಿತ ಎಂಬುದು ಅರ್ಥವಾಗಿ ಸುಮ್ಮನಾಗುತ್ತಾಳೆ. ಅಷ್ಟೊತ್ತಿಗೆ ಅಂಬರ ಬಂದು ಅಮ್ಮಾವ್ರು ಶ್ರಾವಣಿ ಅಮ್ಮನನ್ನು ಬರಲು ಹೇಳಿದ್ದಾರೆ ಎಂದು ಹೇಳುತ್ತಾಳೆ. ಅದನ್ನು ಕೇಳಿ ಕ್ಷಣವೂ ನಿಲ್ಲದೇ ಅಜ್ಜಿಯ ಕೋಣೆ ಕಡೆಗೆ ಓಡುತ್ತಾಳೆ ಶ್ರಾವಣಿ. ವೀರೇಂದ್ರಗೂ ಬರಲು ಹೇಳಿದ್ದಾಗಿ ಹೇಳುತ್ತಾಳೆ ಅಂಬರ. ಅಷ್ಟೊತ್ತಿಗೆ ಪದ್ಮನಾಭ ಅವರು ನಾನು ಅಮ್ಮವರನ್ನು ಭೇಟಿ ಮಾಡಬಹುದಾ ಎಂದು ಕೇಳುತ್ತಾರೆ. ಅದಕ್ಕೆ ಅಂಬರ, ಖಂಡಿತ ಭೇಟಿ ಮಾಡಬಹುದು, ಅವರು ನಿಮ್ಮ ಬಗ್ಗೆಯೂ ವಿಚಾರಿಸ್ತಾ ಇದ್ರು ಎಂದು ಹೇಳಿ ಪದ್ಮನಾಭರಿಗೂ ಲಲಿತಾದೇವಿಯನ್ನು ಭೇಟಿ ಮಾಡಿಸುತ್ತೇನೆ ಎನ್ನುತ್ತಾಳೆ, ಈ ಮಾತು ಕೇಳಿದ ವಿಜಯಾಂಬಿಕಾಳಲ್ಲಿ ಭಯ ಹೆಚ್ಚಾಗುತ್ತದೆ.

ಅಜ್ಜಿ ಎದುರು ಅಪ್ಪನನ್ನು ಬಿಟ್ಟು ಕೊಡದ ಶ್ರಾವಣಿ

ಅಜ್ಜಿ ಕೋಣೆ ಹೋಗುವ ಶ್ರಾವಣಿ ಕಣ್ಣಲ್ಲಿ ನೀರು ತುಂಬಿಕೊಳ್ಳುತ್ತಾಳೆ, ಅಜ್ಜಿಯ ಕಾಲಿಗೆ ಎರಗಿ ಆಶೀರ್ವಾದ ಪಡೆಯುತ್ತಾಳೆ. ಆದರೆ ಲಲಿತಾದೇವಿ ಮಾತ್ರ ಶ್ರಾವಣಿಯ ಮೇಲೆ ಕೋಪ ಮಾಡಿಕೊಂಡರಂತೆ ಮುಖ ಮಾಡಿರುತ್ತಾರೆ. ‘ನಾನು ಅಷ್ಟು ವರ್ಷಗಳ ನಂತರ ನಿಮ್ಮನ್ನು ನೋಡಲು ಬಂದ್ರು ನಿಮ್ಮ ಮುಖದಲ್ಲಿ ನನ್ನನ್ನು ನೋಡುವ ಖುಷಿ ಯಾಕಿಲ್ಲ‘ ಎಂದು ‌ಶ್ರಾವಣಿ ಅಜ್ಜಿಯ ಬಳಿ ಪ್ರಶ್ನೆ ಮಾಡುತ್ತಾಳೆ. ಅದಕ್ಕೆ ಲಲಿತಾದೇವಿ ‘ನನ್ನನ್ನು ನೋಡಲು ಇಷ್ಟು ವರ್ಷ ಬರಬೇಕು ಅನ್ನಿಸಲಿಲ್ವಾ ನಿಂಗೆ?‘ ಎಂದು ತಿರುಗಿ ಪ್ರಶ್ನೆ ಮಾಡುತ್ತಾರೆ. ಆಗ ಶ್ರಾವಣಿ ‘ತನಗೆ ಸಾಲಿಗ್ರಾಮ ಇರುವುದು, ಅಲ್ಲಿ ತನ್ನ ಅಜ್ಜಿ ಮನೆ ಇರುವುದು ಅದೆಲ್ಲಾ ನರಸಯ್ಯನವರು ಬಂದು ಹೋದ ಮೇಲೆ ಗೊತ್ತಾಗಿದ್ದು, ಅಲ್ಲಿಯವರೆಗೆ ನನಗೆ ಏನೂ ಗೊತ್ತಿರಲಿಲ್ಲ‘ ಎನ್ನುವ ಸತ್ಯವನ್ನು ಅಜ್ಜಿ ಮುಂದೆ ಬಿಚ್ಚಿಡುತ್ತಾಳೆ. ಅಷ್ಟೊತ್ತಿಗೆ ಅತ್ತೆಯನ್ನು ಕಾಣಲು ಬಾಗಿಲ ಬಳಿ ಬಂದು ನಿಂತಿರುತ್ತಾರೆ ವೀರೇಂದ್ರ. ಶ್ರಾವಣಿಯ ಬಳಿ ಅಜ್ಜಿ ‘ಅಂದರೆ ನಾನಿರುವ ವಿಚಾರವನ್ನು ನಿಮಗೆ ನಿನ್ನ ಅಪ್ಪ ಹೇಳಿಲ್ವಾ, ಅವನು ನಿನ್ನನ್ನು ಹೇಗೆ ನೋಡಿಕೊಳ್ಳುತ್ತಿದ್ದಾನೆ‘ ಎಂದು ಪ್ರಶ್ನೆ ಮಾಡುತ್ತಾರೆ. ಅದಕ್ಕೆ ಶ್ರಾವಣಿ ಅಪ್ಪ ನನ್ನನ್ನು ರಾಣಿಯಂತೆ ನೋಡಿಕೊಳ್ಳುತ್ತಿದ್ದಾರೆ, ನನಗೆ ಅಲ್ಲಿ ಯಾವುದೇ ಕೊರತೆ ಇಲ್ಲ‘ ಎಂದು ಸುಳ್ಳು ಹೇಳುತ್ತಾರೆ. ಬಾಗಿಲಲ್ಲಿ ನಿಂತಿದ್ದ ವೀರೇಂದ್ರನಿಗೆ ಶ್ರಾವಣಿಯ ಈ ಮಾತು ಕೇಳಿ ಮನಸ್ಸಿಗೆ ಖೇದವಾಗುತ್ತದೆ. ಶ್ರಾವಣಿಯ ಹತ್ತಿರ ಬಂದು ನಿಲ್ಲುವ ಅಜ್ಜಿ ‘ನಂದಿನಿಯ ಪ್ರತಿರೂಪದಂತಿರುವ ನಿನ್ನನ್ನು ನೋಡಿ ಮುದ್ದಾಡಬೇಕು ಅಥವಾ ಹೇಳದೇ ಕೇಳದೇ ನನ್ನನ್ನು ಬಿಟ್ಟು ಹೋಗಿದ್ದಕ್ಕೆ ಕೋಪ ಮಾಡಿಕೊಳ್ಳಬೇಕೋ ಎಂಬುದೆ ನನಗೆ ಅರ್ಥ ಆಗುತ್ತಿಲ್ಲ‘ ಎನ್ನುತ್ತಾರೆ ಲಲಿತಾದೇವಿ. ಆಗ ಶ್ರಾವಣಿ ಅಂದ್ರೆ ನನ್ನ ಅಮ್ಮನಿಗೆ ಏನಾಗಿರಬಹುದು ಎಂದು ಯೋಚಿಸುತ್ತಾಳೆ, ಅಜ್ಜಿ ಬಳಿ ಅಮ್ಮನ ಬಗ್ಗೆ ಕೇಳಲು ಮುಂದಾಗುತ್ತಾಳೆ. ಆದರೆ ಶ್ರಾವಣಿಯ ಮಾತಿಗೆ ಅವಕಾಶವೇ ಕೊಡದ ಲಲಿತಾದೇವಿ ಊಟಕ್ಕೆ ಹೊತ್ತಾಯ್ತು ಹೋಗೋಣ ಎಂದು ಕಡ್ಡಿ ಮುರಿದಂತೆ ಹೇಳುತ್ತಾರೆ.

ಅತ್ತೆಯ ಮುಂದೆ ಕೈ ಮುಗಿದು ನಿಂತ ಮಿನಿಸ್ಟರ್‌ ವೀರೇಂದ್ರ

ಕೋಣೆಯಿಂದ ಹೊರಟ ಶ್ರಾವಣಿಗೆ ಕಾಣಿಸಬಾರದು ಎಂದು ಮರೆಯಲ್ಲಿ ನಿಲ್ಲುತ್ತಾರೆ ವೀರೇಂದ್ರ. ಲಲಿತಾದೇವಿಯವರು ಹೊರ ಬಂದಾಗ ‘ನಿಮಗೆ ನಾನು ಅವಳನ್ನು ಹುಡುಕಿಸಿಲ್ಲ ಎಂಬ ಕಾರಣಕ್ಕೆ ಕೋಪ ಬಂದಿರಬಹುದು. ಆದರೆ ನಾನು ನನಗೆ ಸಾಧ್ಯವಾದಷ್ಟು ಎಲ್ಲಾ ಕಡೆ ಅವಳನ್ನು ಹುಡುಕಿಸಿದ್ದೆ, ಆದರೆ ಅವಳು ಸಿಗಲಿಲ್ಲ, ನಾನು ಇವತ್ತು ಏನಾಗಿದ್ದೇನೆ ಅದೆಲ್ಲವೂ ಈ ಮನೆ, ನೀವು ಕೊಟ್ಟ ಭಿಕ್ಷೆ. ನನ್ನಿಂದ ನಿಮಗೆ ಬೇಸರ ನೋವು ಆಗಿದೆ. ಇದಕ್ಕೆಲ್ಲಾ ನಾನು ಕೈ ಮುಗಿದು ಕ್ಷಮೆ ಕೇಳುತ್ತೇನೆ‘ ಎಂದು ಅಳುತ್ತಾ ಅತ್ತೆಯ ಮುಂದೆ ಕೈ ಮುಗಿದು ಬೇಡಿಕೊಳ್ಳುತ್ತಾರೆ.

ವೀರೇಂದ್ರಗೆ ಈ ಮನೆಯ ಮೇಲೆ ಯಾಕಿಷ್ಟು ಅಭಿಮಾನ, ಪದ್ಮನಾಭಗೂ ಸಾಲಿಗ್ರಾಮಕ್ಕೂ ಏನು ಸಂಬಂಧ, ಅಜ್ಜಿ ಊರಿನಲ್ಲಿ ಅಮ್ಮ ಯಾರು ಎಂಬುದು ಶ್ರಾವಣಿಗೆ ತಿಳಿಯುತ್ತಾ, ವಿಜಯಾಂಬಿಕಾಳನ್ನು ಕಾಡುತ್ತಿರುವ ಭಯ ಯಾವುದು, ವಿಜಯಾಂಬಿಕಾ ಹಿಂದಿದ್ಯಾ ಕರಾಳ ಮುಖ ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.

 

 

Whats_app_banner