ಸುಬ್ಬು ಮುಂದೆ ಮನಬಿಚ್ಚಿ ಮಾತಾಡಿದ ಲಲಿತಾದೇವಿ, ಅಪ್ಪನ ಮೇಲೆ ಸಾವಿತ್ರಿಯ ಅಭಿಮಾನ ಕಂಡು ಶ್ರಾವಣಿಗೆ ಅಚ್ಚರಿ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ-television news zee kannada shravani subramanya kannada serial today episode 131 september 16th lalita devi witu subbu ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಸುಬ್ಬು ಮುಂದೆ ಮನಬಿಚ್ಚಿ ಮಾತಾಡಿದ ಲಲಿತಾದೇವಿ, ಅಪ್ಪನ ಮೇಲೆ ಸಾವಿತ್ರಿಯ ಅಭಿಮಾನ ಕಂಡು ಶ್ರಾವಣಿಗೆ ಅಚ್ಚರಿ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

ಸುಬ್ಬು ಮುಂದೆ ಮನಬಿಚ್ಚಿ ಮಾತಾಡಿದ ಲಲಿತಾದೇವಿ, ಅಪ್ಪನ ಮೇಲೆ ಸಾವಿತ್ರಿಯ ಅಭಿಮಾನ ಕಂಡು ಶ್ರಾವಣಿಗೆ ಅಚ್ಚರಿ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

ಸಾವಿತ್ರಿ ಮನೆಯಲ್ಲಿರುವ ಶ್ರಾವಣಿಗೆ ಅವಳಿಗೆ ಅಪ್ಪನ ಮೇಲಿರುವ ಅಭಿಮಾನ ಕಂಡು ಅಚ್ಚರಿ. ಯಾರಿಗೂ ಹತ್ತಿರವಾಗದ ಲಲಿತಾದೇವಿ ಸುಬ್ಬು ಮುಂದೆ ಮನಬಿಚ್ಚಿ ಮಾತಾಡಿದ್ರು. ಉತ್ಸವಕ್ಕೆ ತಯಾರು ಮಾಡಲು ಶ್ರಾವಣಿಗೆ ಸಾವಿತ್ರಿಯ ಸಹಾಯ. ಈ ಎಲ್ಲದರ ನಡುವೆಯೂ ಸಾವಿತ್ರಿಗೆ ಶ್ರಾವಣಿ ಮಿನಿಸ್ಟರ್ ಮಗಳು ಎಂಬುದು ತಿಳಿಯಲೇ ಇಲ್ಲ.

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಸೆಪ್ಟೆಂಬರ್‌ 16ರ ಸಂಚಿಕೆ
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಸೆಪ್ಟೆಂಬರ್‌ 16ರ ಸಂಚಿಕೆ

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ನಿನ್ನೆಯ (ಸೆಪ್ಟೆಂಬರ್‌ 16ರ) ಸಂಚಿಕೆಯಲ್ಲಿ ದಾರಿ ತಪ್ಪಿ ಸಾವಿತ್ರಿ ಮನೆ ಸೇರಿದ್ದ ಶ್ರಾವಣಿ ಅವರ ಮನೆಯಲ್ಲಿ ಅಪ್ಪನ ಫೋಟೊ ಕಂಡು ಅಚ್ಚರಿ ಪಡುತ್ತಾರೆ, ತಾನು ಅವರ ಪಿಎ ಎಂದು ಹೇಳಿಕೊಂಡ ಶ್ರಾವಣಿ ಅಲ್ಲಿಯೇ ಸ್ವಲ್ಪ ಹೊತ್ತು ಇರುತ್ತಾರೆ. ದೇವರ ಫೋಟೊ ಮಧ್ಯದಲ್ಲಿ ಅಪ್ಪನ ಫೋಟೊ ಇರುವುದು ಕಂಡ ಶ್ರಾವಣಿಗೆ ಕಣ್ತುಂಬಿ ಬರುತ್ತದೆ. ಆಗ ಸಾವಿತ್ರಿ ಅಜ್ಜ ನನ್ನ ಮೊಮ್ಮಗಳು ಮಿನಿಸ್ಟರ್ ವೀರೇಂದ್ರ ಅವರನ್ನು ದೇವರಂತೆ ಪೂಜಿಸುತ್ತಾಳೆ ಎಂದು ಹೇಳಿ ಮೊಮ್ಮಳಿಗೆ ವೀರೇಂದ್ರ ಮೇಲಿರುವ ಅಭಿಮಾನವನ್ನು ವ್ಯಕ್ತಪಡಿಸುತ್ತಾರೆ.

ಶ್ರಾವಣಿ ಹುಡುಕಿ ಹೊರಟ ಸುಬ್ಬು

ಇತ್ತ ತನ್ನ ಅಪ್ಪ, ಯಜಮಾನರು ಹಾಗೂ ನರಸಯ್ಯನವರು ಮಾತನಾಡಿಕೊಂಡಿರುವುದನ್ನು ಕೇಳಿಸಿಕೊಂಡ ಸುಬ್ಬು ಅದನ್ನು ಶ್ರಾವಣಿ ಬಳಿ ಹೇಳಬೇಕು ಎಂದುಕೊಂಡು ಅವಳನ್ನು ಹುಡುಕಿ ಹೊರಡುತ್ತಾನೆ. ಆದರೆ ಅವನಿಗೆ ಅಲ್ಲೆಲ್ಲೂ ಶ್ರಾವಣಿ ಕಾಣುತ್ತಿಲ್ಲ. ಒಂದೊಂದೆ ಕೋಣೆ ನೋಡುತ್ತಾ ಹೋದಾಗ ಒಂದು ಕೋಣೆ ತೆರೆದಿರುತ್ತದೆ. ಹೊಸ್ತಿಲು ದಾಟಿ ಒಳ ಹೋದ ಸುಬ್ಬುಗೆ ಅಲ್ಲಿರುವುದು ಲಲಿತಾದೇವಿ ಎಂದು ಗೊತ್ತಾಗಿ ತಕ್ಷಣಕ್ಕೆ ಹಿಂದಿರುಗಲು ನೋಡುತ್ತಾನೆ. ಆದರೆ ಅವನನ್ನು ನೋಡಿದ ಲಲಿತಾದೇವಿ ಕೋಣೆಯೊಳಗೆ ಬರುವಂತೆ ಕರೆಯುತ್ತಾರೆ.

ಸುಬ್ಬು ಬಳಿ ನಂದಿನಿಯ ಬಗ್ಗೆ ಹೇಳುವ ಲಲಿತಾದೇವಿ

ಲಲಿತಾದೇವಿ ಕರೆದಾಗ ಹೆದರಿ ಅವರ ಬಳಿ ಹೋಗಿ ಅಮ್ಮ ಅದು, ನಾನು ಶ್ರಾವಣಿ ಮೇಡಂನ ಹುಡುಕಿಕೊಂಡು ಬಂದೆ, ಅವರು ಎಲ್ಲೂ ಕಾಣ್ತಾ ಇರ್ಲಿಲ್ಲ. ಇದು ನಿಮ್ಮ ಕೋಣೆ ಎಂದು ಗೊತ್ತಿರಲಿಲ್ಲ, ತಪ್ಪಾಯ್ತು ನಾನು ಹೋಗ್ತೇನೆ‘ ಎಂದು ಹೇಳಿ ಗಾಬರಿಯಲ್ಲಿ ಹೇಳಿ ಹೊರಡಲು ಸಿದ್ಧನಾಗುವ ಸುಬ್ಬುವನ್ನು ಮತ್ತೆ ಕರೆಯುವ ಲಲಿತಾದೇವಿ ಕುಳಿತುಕೊಳ್ಳುವಂತೆ ಹೇಳುತ್ತಾರೆ. ಕಾಲ ಬಳಿ ಕುಳಿತ ಸುಬ್ಬು ಬಳಿ ಶ್ರಾವಣಿ ಖುಷಿಯಾಗಿದ್ದಾಳಾ ಎಂದು ಪ್ರಶ್ನೆ ಮಾಡುತ್ತಾರೆ. ಆ ಪ್ರಶ್ನೆ ಯಾಕೆ ಕೇಳಿದ್ರು ಎಂದು ತಿಳಿಯದ ಸುಬ್ಬು ಅಮ್ಮ ಈ ಪ್ರಶ್ನೆ ಯಾಕೆ ಕೇಳ್ತಾ ಇದೀರಾ ಎಂದು ಮರುಪ್ರಶ್ನೆ ಮಾಡುತ್ತಾನೆ. ಅದಕ್ಕೆ ಲಲಿತಾದೇವಿ ನನಗೆ ಪ್ರಶ್ನೆ ಮಾಡ್ತೀಯಾ ಎಂದು ಸುಬ್ಬುಗೆ ಕೇಳಿದಾಗ ಗಾಬರಿಯಾಗುತ್ತಾನೆ. ಆಗ ಲಲಿತಾದೇವಿ ನಾನು ನಿನ್ನನ್ನು ಇದೇ ಮೊದಲು ನೋಡಿದ್ರು ನನಗೆ ನಿನ್ನ ಮೇಲೆ ಏನೋ ಆತ್ಮೀಯತೆ ಮೂಡುತ್ತಿದೆ. ನನಗೆ ಹತ್ತಿರದವನು ಎನ್ನಿಸುತ್ತಿದೆ. ಪದ್ಮನಾಭನಂತೆ ನೀನು ಕೂಡ ಈ ಮನೆಗೆ ನಂಬಿಕಸ್ತ ಭಂಟನಂತೆ ಇರುತ್ತೀಯಾ ಎನ್ನಿಸುತ್ತಿದೆ ನಂಗೆ ಎಂದು ಹೇಳಿ ‘ನನ್ನ ಮಗಳು ನಂದಿನಿಯ ಎಲ್ಲಾ ಗುಣವೂ ಶ್ರಾವಣಿಯಲ್ಲಿದೆ. ನನ್ನ ಮಗಳ ಮೇಲೆ ನನಗೆ ವಿಪರೀತ ಪ್ರೀತಿ ಇತ್ತು. ಆದರೆ ಅಷ್ಟೇ ಕೋಪವು ಇತ್ತು. ಮಗಳನ್ನು ಒಪ್ಪಿಕೊಳ್ಳಲು ಸ್ವಾಭಿಮಾನ, ಆತ್ಮಾಭಿಮಾನ ಎಲ್ಲವೂ ಅಡ್ಡಿ ಬಂತು. ಈಗ ಶ್ರಾವಣಿಯನ್ನು ಮೊದಲ ಬಾರಿಗೆ ನೋಡಿದಾಗ ನಂದಿನಿಯ ಮೇಲಿನ ಕೋಪವೇ ಮೊದಲು ಬಂತು‘ ಎಂದು ಮಗಳು ನಂದಿನಿಯ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡುತ್ತಾರೆ. ಆಗ ಸುಬ್ಬುಗೆ ಲಲಿತಾದೇವಿಗೆ ಶ್ರಾವಣಿ ಮೇಲೆ ಬೇಜಾರಿಲ್ಲ, ಪ್ರೀತಿ ಇದೆ. ಆದರೆ ಅದನ್ನು ತೋರಿಸಲು ಸಮಯ ಬೇಕು ಎಂಬುದು ಅರ್ಥವಾಗುತ್ತದೆ.

ಸಾವಿತ್ರಿಯೊಂದಿಗೆ ಮನೆಗೆ ಬರುವ ಶ್ರಾವಣಿ

ಸಾವಿತ್ರಿಗೆ ಯಜಮಾನರ ಮಗಳು ಬರೀ ಸೋಂಬೇರಿ, ಅವಳಿಗೆ ಕೆಲಸ ಮಾಡಲು ಬರುವುದಿಲ್ಲ, ನಾನೀಗ ಹೋಗಿ ಪೂಜೆಗೆ ಮಾಲೆ, ತಂಬಿಟ್ಟು ಎಲ್ಲಾ ಮಾಡಬೇಕು. ಆದರೆ ನನಗೆ ಅದನ್ನು ಮಾಡಲು ಬರುವುದಿಲ್ಲ ಎಂದು ಹೇಳುತ್ತಾಳೆ. ಅದಕ್ಕೆ ಸಾವಿತ್ರಿ ಅಯ್ಯ, ಅದೆಲ್ಲಾ ಮಾಡಲು ನನಗೆ ಬರುತ್ತೆ, ನಾನು ನಿಮಗೆ ಅದನ್ನೆಲ್ಲಾ ಮಾಡಲು ಹೇಳಿಕೊಡ್ತೀನಿ ಎಂದು ಹೇಳಿದ್ದು ಕೇಳಿ ಶ್ರಾವಣಿಗೆ ಖುಷಿಯಾಗುತ್ತದೆ. ಶ್ರಾವಣಿ ಸಾವಿತ್ರಿಯನ್ನು ಕರೆದುಕೊಂಡು ತನ್ನ ಮನೆಗೆ ಅಂದರೆ ಲಲಿತಾದೇವಿ ಮನೆಗೆ ಹೋಗುತ್ತಾಳೆ, ಅಲ್ಲಿ ಸಾವಿತ್ರಿ ಶಾಲಿನಿಗೆ ಹೂ ಕಟ್ಟಲು ಹೇಳಿ ಕೊಡುತ್ತಾಳೆ. ಈ ನಡುವೆ ಆಕಾಶ್‌–ಅಂಬರ ಶ್ರಾವಣಿಗೆ ಅಮ್ಮೊರೇ ಅಮ್ಮೊರೇ ಅನ್ನೋದು ನೋಡಿ ಗೊಂದಲಕ್ಕೆ ಒಳಗಾಗುತ್ತಾಳೆ ಸಾವಿತ್ರಿ. ಅವಳ ಬಳಿ ಶ್ರಾವಣಿ ನಾನು ಯಜಮಾನರಿಗೆ ಹತ್ರ ಅಲ್ವಾ ಅದಕ್ಕೆ ಹಾಗೆ ಕರಿತಾರೆ ಅಷ್ಟೇ ಎಂದು ಹೇಳಿ ತಾನು ವೀರೇಂದ್ರ ಮಗಳು ಎಂಬುದನ್ನು ಗುಟ್ಟಾಗಿಯೇ ಇರಿಸುತ್ತಾಳೆ.

ಲಲಿತಾದೇವಿ ನಂದಿನಿಯ ಬಗ್ಗೆ ಎಲ್ಲಾ ವಿಚಾರವನ್ನೂ ಸುಬ್ಬುಗೆ ಹೇಳ್ತಾರಾ, ಫಾರ್ಮ್‌ಹೌಸ್‌ನಲ್ಲಿ ವಿಜಯಾಂಬಿಕಾ ಕೂಡಿ ಹಾಕಿದ ವ್ಯಕ್ತಿಯ ಬಗ್ಗೆ ಸಾಲಿಗ್ರಾಮದಲ್ಲಿ ಸುಳಿವು ಸಿಗುತ್ತಾ, ಸಾವಿತ್ರಿಗೆ ವೀರೇಂದ್ರನನ್ನು ಭೇಟಿಯಾಗುವ ಅವಕಾಶ ಸಿಗುತ್ತಾ ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.

 

mysore-dasara_Entry_Point