ಸಾವಿತ್ರಿ ವೀರುವನ್ನು ಭೇಟಿಯಾಗದಂತೆ ತಡೆದ ಕಾಂತಮ್ಮ, ಮಾವನನ್ನು ಕೊಲಲ್ಲು ಶಾರ್ಪ್‌ ಶೂಟರ್‌ ಕರೆಸಿದ ಮದನ್‌; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ಸಾವಿತ್ರಿ ವೀರುವನ್ನು ಭೇಟಿಯಾಗದಂತೆ ತಡೆದ ಕಾಂತಮ್ಮ, ಮಾವನನ್ನು ಕೊಲಲ್ಲು ಶಾರ್ಪ್‌ ಶೂಟರ್‌ ಕರೆಸಿದ ಮದನ್‌; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

ಸಾವಿತ್ರಿ ವೀರುವನ್ನು ಭೇಟಿಯಾಗದಂತೆ ತಡೆದ ಕಾಂತಮ್ಮ, ಮಾವನನ್ನು ಕೊಲಲ್ಲು ಶಾರ್ಪ್‌ ಶೂಟರ್‌ ಕರೆಸಿದ ಮದನ್‌; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

ಸಾವಿತ್ರಿ ಸಹಾಯದೊಂದಿಗೆ ರಾತ್ರಿಯೆಲ್ಲಾ ಕೂತು ತಂಬಿಟ್ಟು, ಹೂವಿನ ಮಾಲೆ ಮಾಡಿದ ಶ್ರಾವಣಿ, ಸುಬ್ಬುವನ್ನ ಶ್ರಾವಣಿ ಗಂಡ ಎಂದ ಸಾವಿತ್ರಿಗೆ ಸಿಗಲಿಲ್ಲ, ಮಿನಿಸ್ಟರ್ ಅನ್ನು ಭೇಟಿ ಮಾಡುವ ಅವಕಾಶ. ವೀರೇಂದ್ರನನ್ನ ಕೊಲ್ಲಲ್ಲು ವಿಜಯಾಂಬಿಕಾ–ಮದನ್ ಸಂಚು, ಉತ್ಸವಕ್ಕೆ ನಡೆದಿದೆ ಸಕಲ ಸಿದ್ಧತೆ.

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಸೆಪ್ಟೆಂಬರ್‌ 17ರ ಸಂಚಿಕೆ
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಸೆಪ್ಟೆಂಬರ್‌ 17ರ ಸಂಚಿಕೆ

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ನಿನ್ನೆಯ (ಸೆಪ್ಟೆಂಬರ್‌ 17ರ) ಸಂಚಿಕೆಯಲ್ಲಿ ಶ್ರಾವಣಿಗೆ ಸಹಾಯ ಮಾಡಲು ಬಂದ ಸಾವಿತ್ರಿ ನೆರವಿನೊಂದಿಗೆ ತಂಬಿಟ್ಟು, ಹೂವಿನ ಮಾಲೆ ರೆಡಿ ಮಾಡಲು ಸಿದ್ಧಳಾಗುತ್ತಾಳೆ ಶ್ರಾವಣಿ. ಆ ಹೊತ್ತಿಗೆ ಅಲ್ಲಿಗೆ ಬರುವ ಸುಬ್ಬು ‘ಮೇಡಂ, ನೀವು ಇಲ್ಲಿದ್ದೀರಾ, ನಾನು ನಿಮ್ಮನ್ನ ಎಲ್ಲೆಲ್ಲಾ ಹುಡುಕಿದೆ. ಎಲ್ಲೋಗಿದ್ರಿ ನೀವು‘ ಎಂದು ಪ್ರಶ್ನೆ ಮಾಡುತ್ತಾನೆ. ಅದಕ್ಕೆ ಶ್ರಾವಣಿ ‘ನಾನು ಕಳೆದು ಹೋಗಿದ್ದೆ ಸುಬ್ಬು‘ ಎಂದು ಹೇಳುತ್ತಾಳೆ. ಆದರೆ ಅವಳು ತಮಾಷೆಗೆ ಹೇಳುತ್ತಿದ್ದಾಳೆ ಎಂದುಕೊಂಡು ‘ಅಯ್ಯೋ ಮೇಡಂ, ನೀವು ತಮಾಷೆ ಮಾಡಬೇಡಿ‘ ಎಲ್ಲೋಗಿದ್ರಿ ಹೇಳಿ‘ ಎಂದು ಮತ್ತೆ ಕೇಳುತ್ತಾನೆ. ಆಗಲೂ ಶ್ರಾವಣಿ ತಾನು ಕಳೆದು ಹೋಗಿದ್ದಾಗಿ ಹೇಳುತ್ತಾಳೆ. ಅದಕ್ಕೆ ಸುಬ್ಬು ‘ಅದೆಲ್ಲಾ ಬಿಡಿ ಮೇಡಂ, ನಾನು ನಿಮ್ಮ ಬಳಿ ಒಂದು ಮುಖ್ಯವಾದ ವಿಚಾರ ಮಾತನಾಡಬೇಕು, ಅದು ಯಜಮಾನ್ರು...‘ ಎಂದು ಹೇಳಲು ಹೊರಟ ಸುಬ್ಬುವನ್ನು ತಡೆಯುವ ಶ್ರಾವಣಿ ‘ಸುಬ್ಬು ನೋಡಿಲ್ಲಿ, ಹೂ ಮಾಲೆ ಇದನ್ನ ನಾನೇ ಮಾಡಿದ್ದು, ಇದನ್ನು ಮಾಡೋಕೆ ನಂಗೆ ಹೇಳಿ ಕೊಟ್ಟಿದ್ದು ಸಾವಿತ್ರಿ. ನೋಡು ಇವಳು ಸಾವಿತ್ರಿ ನನ್ನ ಹೊಸ ಫ್ರೆಂಡ್‌‘ ಎಂದು ಸುಬ್ಬುಗೆ ಸಾವಿತ್ರಿಯ ಪರಿಚಯ ಮಾಡಿಸುತ್ತಾಳೆ. ಸುಬ್ಬು ನಿನ್ನೆ ನಡೆದ ಘಟನೆಯ ಬಗ್ಗೆ ಶ್ರಾವಣಿಗೆ ಹೇಳಲು ಉತ್ಸುಕಳಾಗಿರುತ್ತಾನೆ. ಆದರೆ ಅವನನ್ನ ತಡೆಯುವ ಶ್ರಾವಣಿ ಅದೇನೇ ಇದ್ರೂ ನಾಳೆ ಮಾತನಾಡೋಣ ಎಂದು ಹೇಳಿ ಕಳಿಸುತ್ತಾಳೆ.

ಸುಬ್ಬು–ಶ್ರಾವಣಿ ಗಂಡ–ಹೆಂಡತಿ ಅಂದುಕೊಳ್ಳುವ ಸಾವಿತ್ರಿ

ಸುಬ್ಬು ಆ ಕಡೆ ಹೋಗಿದ್ದೆ ತಡ ನಗಲು ಶುರು ಮಾಡುತ್ತಾಳೆ ಸಾವಿತ್ರಿ. ಸಾವಿತ್ರಿಯ ನಗು ಶ್ರಾವಣಿಗೆ ವಿಚಿತ್ರವಾಗಿ ಕಾಣುತ್ತದೆ. ಯಾಕೆ ನಗ್ತಾ ಇದೀಯಾ ಎಂದು ಕೇಳಿದಾಗ ಸಾವಿತ್ರಿ ‘ನೀವು ಮಿನಿಸ್ಟರ್ ಪಿಎ, ಹಾಗಾಗಿ ಉಳಿದವರೆಲ್ಲಾ ನಿಮಗೆ ಮೇಡಂ ಅನ್ನೋದು ಒಕೆ, ಆದರೆ ನಿಮ್ಮ ಗಂಡ ಕೂಡ ನಿಮ್ಮನ್ನು ಮೇಡಂ ಅಂತಾರಲ್ಲ ಅಮ್ಮೋರೆ, ನಿಜಕ್ಕೂ ಅಂಥ ಗಂಡನನ್ನ ಪಡೆಯೋಕೆ ನೀವು ಪುಣ್ಯ ಮಾಡಿರಬೇಕು. ಅವರು ನಿಮ್ಮನ್ನು ಮಗು ಥರ ಪ್ರೀತಿ ಮಾಡ್ತಾರೆ, ಅಷ್ಟೇ ಗೌರವವನ್ನೂ ಕೊಡುತ್ತಾರೆ‘ ಎಂದು ಸುಬ್ಬುವನ್ನು ಹೊಗಳುತ್ತಾಳೆ. ಶ್ರಾವಣಿ ಅವರು ನನ್ನ ಗಂಡ ಅಲ್ಲ ಎಂದು ಹೇಳಲು ಹೊರಟರು ಅದನ್ನು ಕೇಳಿಸಿಕೊಳ್ಳದ ಸಾವಿತ್ರಿ ಸುಬ್ಬು–ಶ್ರಾವಣಿ ಗಂಡ–ಹೆಂಡತಿ ಎಂದೇ ಭಾವಿಸಿ ಅವರ ಬಗ್ಗೆ ಮಾತನಾಡುತ್ತಾಳೆ.

ವೀರೇಂದ್ರ ನೋಡುವ ಸಾವಿತ್ರಿ ಆಸೆಗೆ ಕಲ್ಲು ಹಾಕಿದ ಕಾಂತಮ್ಮ

ರಾತ್ರಿಯಿಂದ ಬೆಳಗಿನವರೆಗೆ ಕೂತು ಹೂಮಾಲೆ, ತಂಬಿಟ್ಟಿನ ಉಂಡೆ ಎಲ್ಲವನ್ನೂ ಮಾಡುವ ಶ್ರಾವಣಿ ತಾನು ಇಷ್ಟೆಲ್ಲಾ ಮಾಡ್ತೀನಾ ಎಂಬ ಅಚ್ಚರಿಯೊಂದಿಗೆ ನೋಡುತ್ತಾಳೆ. ಸಾವಿತ್ರಿಗೆ ಮನಸಾರೆ ಧನ್ಯವಾದ ಹೇಳುತ್ತಾಳೆ. ಆಗ ಸಾವಿತ್ರಿ ಮೇಡಂ ನಂಗೆ ಒಂದೇ ಒಂದು ಬಾರಿ ಯಜಮಾನರನ್ನು ಭೇಟಿ ಮಾಡಿಸ್ತೀರಾ ಎಂದು ಕೇಳಿಕೊಳ್ಳುತ್ತಾಳೆ. ಅದಕ್ಕೆ ಶ್ರಾವಣಿ ಅದಕ್ಕೇನು ಇವತ್ತೇ ಭೇಟಿ ಮಾಡಿಸುತ್ತೇನೆ, ನಾನು ಸ್ನಾನ ಮಾಡಿ ಬರುತ್ತೇನೆ, ಅಲ್ಲಿಯವರೆಗೆ ನೀನು ಇಲ್ಲೇ ಇರು ಎಂದು ಸ್ನಾನಕ್ಕೆ ಹೊರಡುತ್ತಾಳೆ. ವೀರೇಂದ್ರ ನೋಡುವ ತವಕದಲ್ಲಿದ್ದ ಸಾವಿತ್ರಿಗೆ ಅವನ ಧ್ವನಿ ಕೇಳಿಸುತ್ತದೆ. ಅವನನ್ನು ನೋಡುವ ಹಂಬಲದೊಂದಿಗೆ ಹುಡುಕಿ ಹೊರಟ ಅವಳಿಗೆ ದೂರದಲ್ಲಿ ಮಿನಿಸ್ಟರ್ ಕಾಣಿಸುತ್ತಾರೆ. ಇನ್ನೇನೂ ಅವನ ಬಳಿ ಹೋಗಬೇಕು ಎಂದುಕೊಳ್ಳುವಾಗ ಕಾಂತಮ್ಮ ಅಡ್ಡ ಬರುತ್ತಾಳೆ. ನೀನ್ಯಾರು, ಇಲ್ಲೇಕೆ ಇರುವೆ ಎಂದೆಲ್ಲಾ ನಾಟಕೀಯ ಶೈಲಿಯಲ್ಲಿ ಕೇಳುತ್ತಾಳೆ ಕಾಂತಮ್ಮ. ಅದಕ್ಕೆ ಸಾವಿತ್ರಿ ‘ನಾನು ಈ ಊರಿನವಳೇ, ನಾನು ನಿನ್ನೆ ರಾತ್ರಿಯೆಲ್ಲಾ ಯಜಮಾನರ ಪಿಎ ಜೊತೆ ಈ ಮನೆಯಲ್ಲೇ ಇದ್ದೆ, ಅವರು ನನ್ನನ್ನು ಯಜಮಾನರಿಗೆ ಪರಿಚಯ ಮಾಡಿಸುತ್ತೇನೆ ಎಂದು ಹೇಳಿದ್ದಾರೆ‘ ಎಂದು ಹೇಳುತ್ತಾಳೆ. ಅವಳ ಮಾತು ಕೇಳಿ ಕಾಂತಮ್ಮನ ತಲೆ ಗಿರ್ ಎನ್ನುತ್ತದೆ. ‘ಏನು ಯಜಮಾನರ ಪಿಎ ಜೊತೆ ಇದ್ಯಾ, ಅದು ಇಡೀ ರಾತ್ರಿ‘ ಎಂದು ಪ್ರಶ್ನೆ ಮಾಡುತ್ತಾಳೆ. ಅದಕ್ಕೆ ಕಾಂತಮ್ಮ ‘ಹೌದು. ನಾನ್ಯಾಕೆ ಸುಳ್ಳು ಹೇಳಲಿ, ಅವರು ಈಗ ಸ್ನಾನ ಮಾಡಿ ಬರ್ತೀನಿ ಅಂತ ಹೋದ್ರು, ಅದಕ್ಕೆ ಕಾಯ್ತಾ ಇದೀನಿ. ಒಂದೇ ಒಂದು ಬಾರಿ ಯಜಮಾನರನ್ನು ನೋಡಿ ಹೋಗ್ತೀನಿ‘ ಎಂದು ಕಾಂತಮ್ಮನ ಬಳಿ ವಿನಯದಿಂದ ಕೇಳಿಕೊಳ್ಳುತ್ತಾಳೆ. ಅಷ್ಟೊತ್ತಿಗೆ ಅಂಬರ ಕೂಡ ಅಲ್ಲಿಗೆ ಬರುತ್ತಾನೆ. ಆಗ ಸಾವಿತ್ರಿ ಮಾತು ಕೇಳಿ ಅವಳು ರಾತ್ರಿಯಿಡಿ ಇದಿದ್ದು ಸುಬ್ಬು ಜೊತೆಗಲ್ಲ ಎಂಬುದು ಕಾಂತಮ್ಮನಿಗೆ ಖಾತ್ರಿಯಾಗುತ್ತದೆ. ಅವಳು ಸಾವಿತ್ರಿಗೆ ಯಜಮಾನರನ್ನು ಹಾಗೆಲ್ಲ ನೋಡೋಕೆ ಆಗೊಲ್ಲ ನೀನು ಹೋಗು ಸುಮ್ಮನೆ, ಯಾರೋ ನಿನಗೆ ಯಜಮಾನದ ಪಿಎ ಅಂತ ಬರ್ಕಾ ಮಾಡಿದಾರೆ. ಯಾಕಂದ್ರೆ ಯಜಮಾನರ ಪಿಎ ಆಗಲೇ ರೆಡಿ ಆಗಿ ಹೊರಗಡೆ ಹೋಗಿ ಆಯ್ತು‘ ಎಂದು ಬೆದರಿಸುವ ದನಿಯಲ್ಲಿ ಹೇಳುತ್ತಾಳೆ. ಇದನ್ನು ಕೇಳಿ ಸಾವಿತ್ರಿಗೆ ಬೇಸರ ಆಗುತ್ತೆ, ಹಾಗಾದರೆ ನನ್ನ ಜೊತೆ ನಿನ್ನೆ ಇದಿದ್ದು ಯಾರು, ಅವರು ನನ್ನನ್ನು ಬರ್ಕಾ ಮಾಡಬೇಕು ಅಂತಲೇ ಹೀಗೆ ಮಾಡಿದ್ದಾ ಅಥವಾ ನನ್ನಿಂದ ಕೆಲಸ ಮಾಡಿಸಿಕೊಳ್ಳಬೇಕು ಅಂತ ಹೀಗೆ ಮಾಡಿದ್ದಾ ಎಂದು ಅರಿಯದೇ ಗೊಂದಲಕ್ಕೆ ಒಳಗಾಗುತ್ತಾಳೆ. ಅಂಬರನ ಬಳಿ ಒಮ್ಮೆ ಯಜಮಾನರನ್ನು ನೋಡಲು ಬಿಡಿ ಎಂದು ಕೇಳಿಕೊಳ್ಳುತ್ತಾಳೆ. ಆದರೆ ಮೊದಲೇ ಯಜಮಾನರು ಯಾರನ್ನೂ ನೋಡಲು ಬಿಡಬೇಡ ಎಂದು ಹೇಳಿದ್ದು ಹೇಳಿ ಸಾವಿತ್ರಿಯನ್ನು ಭೇಟಿ ಮಾಡಲು ಬಿಡುವುದಿಲ್ಲ. ಸಾವಿತ್ರಿ ಬೇಸರದಿಂದಲೇ ಅಲ್ಲಿಂದ ಹೊರಡುತ್ತಾಳೆ.

ಮಗಳನ್ನು ಲಕ್ಷ್ಮೀ ಎಂದ ವೀರೇಂದ್ರ, ಮಾವನನ್ನೇ ಕೊಲ್ಲಲ್ಲು ಮದನ್ ಸಂಚು

ಸೀರೆ, ಒಡವೆ ತೊಟ್ಟು ಲಕ್ಷ್ಮೀಯಂತೆ ಬಂದ ಶ್ರಾವಣಿಯನ್ನು ನೋಡಿ ಎಲ್ಲರೂ ಅಚ್ಚರಿ, ಸಂತೋಷ ವ್ಯಕ್ತಪಡಿಸುತ್ತಾರೆ. ಪದ್ಮನಾಭ ಶ್ರಾವಣಿ ತಾಯಿಯನ್ನು ನೆನಪು ಮಾಡಿಕೊಂಡು ಕಣ್ತುಂಬಿಕೊಳ್ಳುತ್ತಾರೆ. ಸುರೇಂದ್ರ ಶ್ರಾವಣಿಗೆ ತುಂಬಾ ಮುದ್ದಾಗಿ ಕಾಣ್ತಾ ಇದೀಯಾ ಕಂದಾ ಎಂದು ಹೊಗಳುತ್ತಾರೆ. ಸುಬ್ಬು ಕೂಡ ಶ್ರಾವಣಿಯನ್ನು ಹೊಗಳುತ್ತಾನೆ. ಆಗ ಸುರೇಂದ್ರ ಅಜ್ಜಿ ಆಶೀರ್ವಾದ ಪಡೆದು ಬಾ ಎಂದು ಶ್ರಾವಣಿಗೆ ಹೇಳುತ್ತಿರುವಾಗಲೇ ವೀರೇಂದ್ರ ಆ ಕಡೆಯಿಂದ ನರಸಯ್ಯನವರ ಜೊತೆ ಬರುತ್ತಾರೆ. ಮಗಳನ್ನು ನೋಡಿ ಹೆಂಡತಿಯ ನೆನಪಾಗಿ ಕ್ಷಣ ನಿಲ್ಲುವ ವೀರೇಂದ್ರ ಅಲ್ಲಿಂದ ಹೊರಟು ಹೋಗಲು ಪ್ರಯತ್ನಿಸುತ್ತಾರೆ. ಆದರೆ ನರಸಯ್ಯ ಮಗಳಿಗೆ ಆಶೀರ್ವಾದ ಮಾಡುವಂತೆ ಹೇಳುತ್ತಾರೆ. ಕಾಲಿಗೆ ಎರಗುವ ಶ್ರಾವಣಿಗೆ ಮನಸಾರೆ ಹರಸುವ ವೀರೇಂದ್ರ ಸಾಕ್ಷಾತ್ ಲಕ್ಷ್ಮೀ ಹಾಗೆ ಕಾಣುತ್ತಿದ್ದೀಯಾ ಎಂದು ಹೊಗಳುತ್ತಾರೆ. ಇತ್ತ ಮದನ್ ಹಾಗೂ ವಿಜಯಾಂಬಿಕಾ ತಮ್ಮ ಸಂಚಿನಂತೆ ವೀರೇಂದ್ರ ಕೊಲೆ ಆಗಬೇಕು ಎಂದು ಪಟ ತೊಟ್ಟಿರುತ್ತಾರೆ. ಮದನ್ ಉತ್ತರ ಭಾರತದಿಂದ ಶಾರ್ಪ್ ಶೂಟರ್‌ಗಳನ್ನು ಕರೆಸಿ ಇರುತ್ತಾನೆ. ಉತ್ಸವ ಕೆಡಿಸಬೇಕು ಎಂದು ವಿಜಯಾಂಬಿಕಾ, ಮದನ್ ಪಣ ತೊಟ್ಟಿರುತ್ತಾರೆ.

ಸಾಲಿಗ್ರಾಮದ ಪುಷ್ಕರಿಣಿ ಉತ್ಸವದಲ್ಲಿ ವೀರೇಂದ್ರನ ಕೊಲೆ ಆಗುತ್ತಾ, ಶ್ರಾವಣಿ ಉತ್ಸವ ಮಾಡದಂತೆ ತಡೆಯುತ್ತಾರಾ ವಿಜಯಾಂಬಿಕಾ–ಮದನ್, ಮಿನಿಸ್ಟರ್ ಭೇಟಿಯಾಗುವ ಸಾವಿತ್ರಿ ಕನಸು ನನಸಾಗುತ್ತಾ ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.

 

Whats_app_banner