ಕನ್ನಡ ಸುದ್ದಿ  /  ಮನರಂಜನೆ  /  ಚಾಲಾಕಿತನದಿಂದ ಸುಬ್ಬುವನ್ನು ಜೈಲಿಂದ ಬಿಡಿಸಿದ ಶ್ರೀವಲ್ಲಿ, ಮದನ್‌ಗೆ ಖಡಕ್‌ ವಾರ್ನಿಂಗ್‌ ಕೊಟ್ಟ ಶ್ರಾವಣಿ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

ಚಾಲಾಕಿತನದಿಂದ ಸುಬ್ಬುವನ್ನು ಜೈಲಿಂದ ಬಿಡಿಸಿದ ಶ್ರೀವಲ್ಲಿ, ಮದನ್‌ಗೆ ಖಡಕ್‌ ವಾರ್ನಿಂಗ್‌ ಕೊಟ್ಟ ಶ್ರಾವಣಿ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

Shravani Subramanya Kannada Serial Today Episode May 29th: ʼಶ್ರಾವಣಿ ಸುಬ್ರಹ್ಮಣ್ಯʼ ಧಾರಾವಾಹಿಯ ಬುಧವಾರದ ಎಪಿಸೋಡ್‌ ತನ್ನ ಚಾಲಾಕಿತನದಿಂದ ಆಕ್ಸಿಡೆಂಟ್‌ ನಾಟಕ ಮಾಡುತ್ತಿರುವ ಪೊಲೀಸ್‌ ಹಾಗೂ ಇತರರನ್ನು ಕಟ್ಟಿ ಹಾಕುವ ಶ್ರೀವಲ್ಲಿ ಸುಬ್ಬುವನ್ನು ಬಿಡಿಸುತ್ತಾಳೆ. ಇತ್ತ ಮದನ್‌ ನಾಟಕ ಅರಿತ ಶ್ರಾವಣಿ ಅವನಿಗೆ ತಕ್ಕ ಶಾಸ್ತಿ ಮಾಡುತ್ತಾಳೆ.

ಚಾಲಾಕಿತನದಿಂದ ಸುಬ್ಬವನ್ನು ಜೈಲಿಂದ ಬಿಡಿಸಿದ ಶ್ರೀವಲ್ಲಿ, ಮದನ್‌ಗೆ ಖಡಕ್‌ ವಾರ್ನಿಂಗ್‌ ಕೊಟ್ಟ ಶ್ರಾವಣಿ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ
ಚಾಲಾಕಿತನದಿಂದ ಸುಬ್ಬವನ್ನು ಜೈಲಿಂದ ಬಿಡಿಸಿದ ಶ್ರೀವಲ್ಲಿ, ಮದನ್‌ಗೆ ಖಡಕ್‌ ವಾರ್ನಿಂಗ್‌ ಕೊಟ್ಟ ಶ್ರಾವಣಿ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ನಿನ್ನೆಯ (ಮೇ 29) ಸಂಚಿಕೆಯಲ್ಲಿ ಪೊಲೀಸ್ ಸ್ಟೇಷನ್ ಮುಂದೆ ಸುಬ್ಬು ಬಿಡುಗಡೆಗಾಗಿ ಪ್ರತಿಭಟನೆ ಮಾಡುತ್ತಿರುವ ಶ್ರಾವಣಿ, ಶ್ರೀವಲ್ಲಿ ಹಾಗೂ ಇತರ ಮಹಿಳೆಯರ ಮುಂದೆ ವಿಜಯಾಂಬಿಕ ಪ್ಲಾನ್‌ನಂತೆ ʼಆಕ್ಸಿಡೆಂಟ್ ಆಗಿರುವ ವ್ಯಕ್ತಿ ಸತ್ತಿದ್ದಾನೆ, ಅವನ ಪೋಸ್ಟ್‌ಮಾರ್ಟಮ್ ಕೂಡ ಆಗಿ ಮನೆಯವರು ಹೆಣ ತೆಗೆದುಕೊಂಡು ಹೋಗಿದ್ದಾರೆ, ನಾವೀಗ ಸುಬ್ಬು ಮೇಲೆ ಎಫ್‌ಐಆರ್ ಫೈಲ್ ಮಾಡಿ ಕೋರ್ಟ್‌ಗೆ ಹಾಜರ್ ಮಾಡ್ತೀವಿ, ನೀವೆಲ್ಲಾ ಇಲ್ಲಿಂದ ಹೋಗಿʼ ಎಂದು ವಾರ್ನಿಂಗ್ ಮಾಡುತ್ತಾನೆ. ಆಗ ಶ್ರಾವಣಿ ಸೇರಿದಂತೆ ಅಲ್ಲಿದ್ದವರಿಗೆಲ್ಲಾ ಶಾಕ್ ಆಗುತ್ತೆ. ಶ್ರಾವಣಿ ಅವರ ಮನೆಯಲ್ಲಿ ಅಡ್ರೆಸ್ ಕೊಡಿ ಅಂತೆಲ್ಲಾ ಕೇಳಲು ಹೊರಟಾಗ ಅವಳಿಗೆ ದಬಾಯಿಸುವ ಇನ್ಸ್‌ಪೆಕ್ಟರ್ ಮಾತಾಡೋಕೆ ಅವಕಾಶನೇ ನೀಡೊಲ್ಲ. ಆಗ ಅವಳ ಕೈಹಿಡಿದು ಇಲ್ಲಿಂದ ಹೋಗೋಣ ಎನ್ನುವ ಶ್ರೀವಲ್ಲಿ ಅಲ್ಲಿದ್ದ ಹೆಂಗಸರನ್ನೆಲ್ಲಾ ಕರೆದುಕೊಂಡು ಪೊಲೀಸ್ ಸ್ಟೇಷನ್ ಕಂಪೌಂಡ್ ದಾಟಿ ಹೊರ ಬರುತ್ತಾಳೆ. ಸುಬ್ಬುವಿಗಾಗಿ ಪ್ರತಿಭಟನೆಗೆ ಬಂದ ಹೆಂಗಸರಿಗೆಲ್ಲ ಧನ್ಯವಾದ ಹೇಳುವ ಶ್ರೀವಲ್ಲಿ ಅವರನ್ನೆಲ್ಲಾ ವಾಪಾಸ್ ಕಳುಹಿಸುತ್ತಾಳೆ. ಬಳಿಕ ಶ್ರಾವಣಿ ಬಳಿ ಇನ್ಸ್‌ಪೆಕ್ಟರ್ ಫೋನ್‌ನಲ್ಲಿ ಮಾತನಾಡಿದ್ದು, ಆಕ್ಸಿಡೆಂಟ್ ಆಗಿದೆ ಎಂಬ ವ್ಯಕ್ತಿಯ ಜೊತೆ ಮಾತನಾಡಿ ಅವನಿಗೆ ಒಂದು ಕಡೆ ಹಣ ಇಡುತ್ತೇನೆ ಅದನ್ನ ತೆಗೆದುಕೊಂಡು ಎಲ್ಲಾದ್ರೂ ಓಡಿ ಹೋಗು ಎಂದಿದ್ದು, ಅದನ್ನೆಲ್ಲಾ ತಾನು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿದ್ದು ಎಲ್ಲವನ್ನೂ ಹೇಳುತ್ತಾಳೆ. ಅಲ್ಲದೇ ನಾವಿಬ್ಬರೂ ಈಗ ಆ ಆಕ್ಸಿಡೆಂಟ್ ನಾಟಕ ಮಾಡಿದ್ದ ವ್ಯಕ್ತಿಯ ಬಳಿ ಹಣ ತೆಗೆದುಕೊಂಡು ಹೋಗಲು ಇನ್ಸ್‌ಪೆಕ್ಟರ್ ಹೇಳಿದ್ದ ಜಾಗಕ್ಕೆ ಹೋಗಬೇಕು ಎಂದು ಶ್ರಾವಣಿಯನ್ನ‌ ಕರೆದುಕೊಂಡು‌ ಹೊರಡುತ್ತಾಳೆ.

ಟ್ರೆಂಡಿಂಗ್​ ಸುದ್ದಿ

ಆಕ್ಸಿಡೆಂಟ್‌ ಆಗಿದ್ದ ವ್ಯಕ್ತಿ ಪ್ರತ್ಯಕ್ಷ

ಇನ್ಸ್‌ಪೆಕ್ಟರ್ ಹೇಳಿದ್ದ ಜಾಗದಿಂದ ಸ್ವಲ್ಪ ದೂರದಲ್ಲಿ ನಿಂತು ಆಕ್ಸಿಡೆಂಟ್‌ ನಾಟಕವಾಡಿದ್ದ ವ್ಯಕ್ತಿಯ ಬರುವಿಕೆಗಾಗಿಯೇ ಕಾಯುತ್ತಾರೆ ಶ್ರಾವಣಿ, ಶ್ರೀವಲ್ಲಿ. ಸ್ವಲ್ಪ ಹೊತ್ತಿ‌ನ ನಂತರ ವ್ಯಕ್ತಿಯೊಬ್ಬ ಬಂದು ಅಲ್ಲೇ ದೂರದಲ್ಲಿದ್ದ ಡಸ್ಟ್‌ಬಿನ್‌ನಲ್ಲಿ ದುಡ್ಡಿನ ಕಟ್ಟು ಹಾಕಿದ್ದನ್ನ ಗಮನಿಸುತ್ತಾರೆ, ಇದನ್ನೆಲ್ಲಾ ಶ್ರೀವಲ್ಲಿ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಳ್ಳುತ್ತಿರುತ್ತಾಳೆ. ಆ ವ್ಯಕ್ತಿ ಡಸ್ಟ್‌ಬಿನ್‌ನಲ್ಲಿ ಹಣ ಹಾಕಿ ಹೋದ ಸ್ವಲ್ಪ ಹೊತ್ತಿಗೆ ಇನ್ನೊಬ್ಬ ವ್ಯಕ್ತಿ ಬರುತ್ತಾನೆ‌. ಅವನು ಅದರಲ್ಲಿರುವ ದುಡ್ಡಿನ ಕಟ್ಟು ಎತ್ತಿಕೊಂಡು ಕಳ್ಳನಂತೆ ವರ್ತಿಸುತ್ತಾನೆ. ಆಗ ಆಕ್ಸಿಡೆಂಟ್ ನಾಟಕ ಮಾಡಿದ್ಸ ವ್ಯಕ್ತಿ ಅವನೇ ಎಂಬುದು ಶ್ರಾವಣಿ-ಶ್ರೀವಲ್ಲಿಗೆ ಅರ್ಥ ಆಗುತ್ತೆ. ಕೂಡಲೇ ಅವನನ್ನು ಹಿಂಬಾಲಿಸಿ ಹಿಡಿಯುವ ಅವರು ಚೆನ್ನಾಗಿ ಹೊಡೆದು ಸ್ಟೇಷನ್‌ಗೆ ಕರೆದುಕೊಂಡು ಬರುತ್ತಾರೆ.

ಸತ್ಯ ಬಾಯಿ ಬಿಟ್ಟ ಇನ್ಸ್‌ಪೆಕ್ಟರ್‌

ಇನ್ಸ್‌ಪೆಕ್ಟರ್ ಮುಂದೆ ಅವನನ್ನು ತಂದು ನಿಲ್ಲಿಸಿದಾಗ ಶಾಕ್ ಆಗುವ ಆತ ನಂತರ ನಿಧಾನಕ್ಕೆ ಸಾವರಿಸಿಕೊಂಡು ಇವನು ಆಕ್ಸಿಡೆಂಟ್ ಅಗಿರುವ ವ್ಯಕ್ತಿ ಅಲ್ಲವೇ ಅಲ್ಲ ಎಂದು ವಾದ ಮಾಡೋಕೆ ಆರಂಭಿಸುತ್ತಾನೆ. ಅಗ ಶ್ರಾವಣಿ ಇವನು ಆಕ್ಸಿಡೆಂಟ್ ಆಗಿರುವ ವ್ಯಕ್ತಿ ಅಲ್ವಾ, ಸರಿ ಹಾಗಾದ್ರೆ ನೀನು‌ ಫೋನ್‌ನಲ್ಲಿ ಮಾತನಾಡಿದ್ಸು, ಹಣ ಹಾಕಿದ್ಸು ಎಲ್ಲ ಕೋರ್ಟ್ ಅಲ್ಲಿ ಪ್ರೊಡ್ಯೂಸ್ ಮಾಡ್ತಿವಿ ಅಂತಾಳೆ. ಶ್ರೀವಲ್ಲಿ ತಾನು ಮೊಬೈಲ್ ಅಲ್ಲಿ ರೆಕಾರ್ಡ್ ಮಾಡಿದ ಎಲ್ಲಾ ವಿಡಿಯೊಗಳನ್ನು ತೋರಿಸುತ್ತಾಳೆ. ಮೊದಲು ಆಕ್ಸಿಡೆಂಟ್ ಆಗಿರುವ ವ್ಯಕ್ತಿಗೂ ತಮಗೂ ಯಾವುದೇ ಸಂಬಂಧ ಇಲ್ಲ ಎನ್ನುತ್ತಿದ್ದ ಇನ್ಸ್‌ಪೆಕ್ಟರ್ ವಿಡಿಯೊ ನೋಡಿ ಬೆದರಿ ಬೆಂಡಾಗುತ್ತಾನೆ, ಅಲ್ಲದೇ ದುಡ್ಡಿನ ಆಸೆಗೆ ಹೀಗೆ ಮಾಡಿದೆ ಎಂದು ಬಾಯಿ ಬಿಡುತ್ತಾನೆ. ನಿಂಗೆ ದುಡ್ಡಿನ ಆಸೆ ತೋರಿಸಿ, ಆ ರೀತಿ ಮಾಡಲು ಹೇಳಿದ್ದು ಯಾರು ಎಂದು ಶ್ರೀವಲ್ಲಿ ದಬಾಯಿಸಿ ಕೇಳಿದಾಗ ಶ್ರಾವಣಿ ಕಡೆ ನೋಡಿ ʼನಿಮ್ಮ‌ ಅತ್ತೆ ಮಗ ಮದನ್ ಅವರೇ ಇದನ್ನೆಲ್ಲಾ ಮಾಡೋಕೆ ಹೇಳಿದ್ದುʼ ಎಂದು ಸತ್ಯ ಬಾಯಿ ಬಿಡುತ್ತಾನೆ.‌ ಅದನ್ನ ಕೇಳಿ ಕೋಪದಿಂದ ಉರಿದು ಬೀಳುತ್ತಾಳೆ ಶ್ರಾವಣಿ. ಮದನ್ ಈ ರೀತಿ ಮಾಡ್ಸಿದ್ದು ಎಂದು ತಿಳಿದು ಶ್ರಾವಣಿ ಮೇಲೆ ಕೋಪಗೊಳ್ಳುವ ಶ್ರೀವಲ್ಲಿ ಸುಬ್ಬುವನ್ನ ಲಾಕಪ್‌ನಿಂದ ಬಿಡಿಸಲು ಹೋಗುತ್ತಾಳೆ.

ಮದನ್‌ಗೆ ಹಿಗ್ಗಾಮುಗ್ಗಾ ಹೊಡೆದು ವಾರ್ನಿಂಗ್‌ ಕೊಡುವ ಶ್ರಾವಣಿ

ಇನ್ಸ್‌ಪೆಕ್ಟರ್ ಮಾತು ಕೇಳಿ ಕೋಪದಿಂದ ಉರಿದು ಹೋಗುವ ಶ್ರಾವಣಿ ರಣಚಂಡಿಯಂತೆ ಮನೆಗೆ ಬರುತ್ತಾರೆ. ಹಾಲ್‌ನಲ್ಲೇ ಇದ್ದ ಮದನ್‌ಗೆ ಹಿಗ್ಗಾಮುಗ್ಗ ಹೊಡೆದು ಅವನು ಮಾಡಿದ ನೀಚ ಕೃತ್ಯವನ್ನು ಎಲ್ಲರ ಮುಂದೆ ಬಯಲು ಮಾಡುತ್ತಾಳೆ‌. ʼನನ್ನ ಬಳಿ ಇರುವ ವಿಡಿಯೊ ಇಟ್ಟುಕೊಂಡು ಇವನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಬಹುದು, ಆದರೆ ನಾನು ಹಾಗೆ ಮಾಡೊಲ್ಲ ಯಾಕಂದ್ರೆ ನಮ್ಮ ಅಪ್ಪ ನಿಮ್ಮ ಮೇಲೆ ಇಟ್ಟಿರುವ ನಂಬಿಕೆಯ ಸೌಧ ಕುಸಿಯುತ್ತದೆ ಇದರಿಂದ ದೇವರಂಥ ಅವರ ಮನಸ್ಸಿಗೆ ನೋವಾಗುತ್ತದೆ ಎಂಬ ಕಾರಣಕ್ಕೆ, ಆದರೆ ಒಂದು ಮಾತು ನೆನಪು ಇಟ್ಕೊಳ್ಳಿ, ಕಾಲ ಹೀಗೆ ಇರೊಲ್ಲ ನಿಮ್ಮ ಅಟಗಳೆಲ್ಲಾ ಬಯಲಿಗೆ ಬರೋ ಸಮಯ ಬಂದೇ ಬರುತ್ತೆ, ಆ ದಿನ ನಾನು ಕೊಟ್ಟ ಎರಡಷ್ಟು ನಮ್ಮ‌ ಅಪ್ಪ ಕೊಡ್ತಾರೆʼ ಅಂತ ಖಡಕ್ ವಾರ್ನಿಂಗ್ ಕೊಡುತ್ತಾಳೆ‌. ಅವಳ ವರ್ತನೆ ಕಂಡು ವಿಜಯಾಂಬಿಕೆ, ಮದನ್ ಇಬ್ಬರೂ ಬೆಚ್ದಿ ಬೀಳುತ್ತಾರೆ.

ಇನ್ನಾದ್ರೂ ಬದಲಾಗ್ತಾರಾ ವಿಜಯಾಂಬಿಕಾ, ಮದನ್, ಸುಬ್ಬು-ಶ್ರಾವಣಿ ಮೇಲೆ‌ ಕಿಡಿ ಕಾರೋದು ನಿಲ್ಲಿಸ್ತಾರಾ ಕಿಡಿಗೇಡಿಗಳು, ಪರೀಕ್ಷೆಯಲ್ಲಿ ಪಾಸ್ ಆಗಿ ಅಪ್ಪನ‌ ಪ್ರೀತಿ ಗಳಿಸ್ತಾಳಾ ಶ್ರಾವಣಿ... ಈ ಎಲ್ಲವನ್ನೂ ಮುಂದಿನ‌ ಸಂಚಿಕೆಗಳಲ್ಲಿ ನಿರೀಕ್ಷಿಸಿ.

ಟಿ20 ವರ್ಲ್ಡ್‌ಕಪ್ 2024