ಕನ್ನಡ ಸುದ್ದಿ  /  ಮನರಂಜನೆ  /  ವಿಜಯಾಂಬಿಕ ಅಹಂಕಾರಕ್ಕೆ ಶ್ರಾವಣಿ ಎದುರೇಟು, ಬಾವನಿಂದಾಗಿ ಪ್ರಾಣದಂತಿರೋ ಬೈಕ್ ಕಳ್ಕೋತಾನಾ ಸುಬ್ಬು; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

ವಿಜಯಾಂಬಿಕ ಅಹಂಕಾರಕ್ಕೆ ಶ್ರಾವಣಿ ಎದುರೇಟು, ಬಾವನಿಂದಾಗಿ ಪ್ರಾಣದಂತಿರೋ ಬೈಕ್ ಕಳ್ಕೋತಾನಾ ಸುಬ್ಬು; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

Shravani Subramanya Kannada Serial Today Episode May 30th: ʼಶ್ರಾವಣಿ ಸುಬ್ರಹ್ಮಣ್ಯʼ ಧಾರಾವಾಹಿಯ ಗುರುವಾರದ ಎಪಿಸೋಡ್‌ನಲ್ಲಿ ಹೋದಲ್ಲಿ ಬಂದಲ್ಲಿ ಸುಬ್ಬವನ್ನು ಮದುವೆಯಾಗುವ ಕನಸು ಕಾಣುವ ಶ್ರೀವಲ್ಲಿ. ಅತ್ತೆ ವಿಜಯಾಂಬಿಕಾ ವ್ಯಂಗ್ಯಕ್ಕೆ ತಿರುಗೇಟು ಕೊಟ್ಟ ಶ್ರಾವಣಿ. ಬಾವನ ಕಳ್ಳಾಟಕ್ಕೆ ಪ್ರಾಣದಂತಿರೋ ಬೈಕ್‌ ಕಳೆದುಕೊಳ್ತನಾ ಸುಬ್ಬು?

ವಿಜಯಾಂಬಿಕ ಅಹಂಕಾರಕ್ಕೆ ಶ್ರಾವಣಿ ಎದುರೇಟು, ಭಾವನಿಂದಾಗಿ ಪ್ರಾಣದಂತಿರೋ ಬೈಕ್ ಕಳ್ಕೋತಾನಾ ಸುಬ್ಬು?
ವಿಜಯಾಂಬಿಕ ಅಹಂಕಾರಕ್ಕೆ ಶ್ರಾವಣಿ ಎದುರೇಟು, ಭಾವನಿಂದಾಗಿ ಪ್ರಾಣದಂತಿರೋ ಬೈಕ್ ಕಳ್ಕೋತಾನಾ ಸುಬ್ಬು?

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ನಿನ್ನೆಯ (ಮೇ 29) ಸಂಚಿಕೆಯಲ್ಲಿ ಶ್ರಾವಣಿಯನ್ನು ಜೋಪಾನ ಮಾಡುವಂತೆ ಮಗನಿಗೆ ಹೇಳುತ್ತಾರೆ ಅಪ್ಪ ಪದ್ಮನಾಭ. ಅಪ್ಪ-ಮಗನ ಮಾತನ್ನು ಕದ್ದು ಕೇಳಿಸಿಕೊಳ್ಳುವ ಶ್ರೀವಲ್ಲಿ ಮನಸ್ಸಿನಲ್ಲೇ ಉರಿದು ಬೀಳುತ್ತಾಳೆ, ಅಲ್ಲದೇ ತಾನು ಸುಬ್ಬು ಮದುವೆಯಾಗುವ ಕನಸು ಕಾಣುತ್ತಾಳೆ. ಇತ್ತ ಶ್ರಾವಣಿ ಕೊಟ್ಟ ಏಟು, ಮಾಡಿದ ಅನುಮಾನಕ್ಕೆ ಕುದ್ದು ಹೋಗುವ ಮದನ್ ಒಬ್ಬನೇ ರೂಮ್‌ನಲ್ಲಿ ಕತ್ತಲೆಯಲ್ಲಿ ಕುಳಿತು ಕುಡಿಯುತ್ತಿರುತ್ತಾನೆ. ಶ್ರಾವಣಿ ಹೊಡೆದಿದ್ದನ್ನೇ ನೆನಪಿಸಿಕೊಂಡು ಕೋಪದಲ್ಲಿ ಗ್ಲಾಸ್ ಎತ್ತಿ‌ ಎಸೆಯುತ್ತಾನೆ. ಕೂಡಲೇ ಮಗನ‌ ರೂಮಿಗೆ ಓಡಿ ಬರುವ ವಿಜಯಾಂಬಿಕಾ ಮಗನನ್ನು ಸಮಾಧಾನ‌‌ ಮಾಡುತ್ತಾಳೆ. ಶ್ರಾವಣಿ ಮೇಲೆ ದುಪ್ಪಟ್ಟು ದ್ವೇಷ ತೀರಿಸಿಕೊಂಡೇ ತೀರಿಸಿಕೊಳ್ಳುತ್ತೇನೆ ಎಂದು ಮಗನ‌ ಮುಂದೆ ಹೇಳಿ ಅವನಿಗೆ ಸಮಾಧಾನ ಮಾಡುತ್ತಾಳೆ.

ಟ್ರೆಂಡಿಂಗ್​ ಸುದ್ದಿ

ಶ್ರೀವಲ್ಲಿಗೆ ಸುಬ್ಬು ಜೊತೆ ಬೈಕ್‌ ರೈಡ್ ಹೋಗುವಾಸೆ

ಬೆಳಿಗ್ಗೆ ಸುಬ್ಬು ವಠಾರಕ್ಕೆ ಬಂದಾಗ ಅವನ ಬೈಕ್ ಎದುರು ಓಡೋಡಿ ಬಂದು ಬೈಕ್ ಎದುರು ನಿಲ್ಲುತ್ತಾಳೆ ಶ್ರೀವಲ್ಲಿ. ಆಗ ಗಾಬರಿಯಿಂದ ಗಾಡಿ ನಿಲ್ಲಿಸುವ ಸುಬ್ಬು ʼಏನೇ ಶ್ರೀವಲ್ಲಿ, ಈ ರೇಂಜಿಗೆ ಓಡಿ ಬಂದು ಗಾಡಿಗೆ ಡಿಕ್ಕಿ ಹೊಡಿತೀಯಲ್ಲ, ಏನಾದ್ರೂ ಹೆಚ್ಚು ಕಮ್ಮಿ ಆದ್ರೆ ಏನ್ ಮಾಡೋದು?ʼ ಎಂದು ಹುಸಿಕೋಪ ತೋರುತ್ತಾನೆ.‌ ಸುಬ್ಬು ತನ್ನ‌ ಮೇಲಿನ ಕಾಳಜಿಯಿಂದಲೇ ಹಾಗೆ‌ ಹೇಳಿರಬಹುದು ಎಂದು ನುಲಿಯುತ್ತಾ ʼಸುಬ್ಬು ನಿಂಗೆ ನನ್ನ ಮೇಲೆ ಅದೆಷ್ಟು ಕಾಳಜಿ, ಪ್ರೀತಿ ಅಲ್ವಾ?ʼ ಅನ್ನುತ್ತಾಳೆ. ಆಗ ಸುಬ್ಬು ʼನಂಗೆ ನಿನ್ ಮೇಲೆ‌ ಕಾಳಜಿ‌ ಅಲ್ಲ, ನನ್ನ ಬೈಕ್‌ಗೆ ಏನಾದ್ರೂ ಆದ್ರೆ ಅಂತ ಭಯ ಅಷ್ಟೇʼ ಅಂತ ಇರೋ‌ ವಿಷ್ಯಾ ಹೇಳುತ್ತಾನೆ. ಆಗ ಶ್ರೀವಲ್ಲಿ ನಿಂಗೆ ಈ ಬೈಕ್ ಮೇಲೆ ಯಾಕಿಷ್ಟು ಪ್ರೀತಿ ಎಂದು ಸುಬ್ಬು ಬಳಿ‌ ಕೇಳುತ್ತಾಳೆ. ಅದಕ್ಕೆ ಸುಬ್ಬು ʼನಂಗೆ ಈ ಬೈಕ್ ಮೇಲೆ ನನ್ನ ಅಪ್ಪ ‌ಮೇಲಿರುವಷ್ಟೇ ಪ್ರೀತಿ ಇದೆ. ಚಿಕ್ಕ ಇರುವಾಗ ಅಪ್ಪ ನಂಗೆ ನೆಲದ ಮೇಲೆ ನಡಿಯೋಕೆ ಬಿಡ್ತಾ ಇರ್ಲಿಲ್ಲಾ, ಈಗ ಈ ಬೈಕ್ ಕೂಡ ಹಾಗೆ, ನನ್ನ ಪ್ರಾಣ ಇರೋವರೆಗೂ ಈ ಬೈಕ್ ಅನ್ನ ಜೋಪಾನ ಮಾಡ್ತೀನಿʼ ಅಂತ ಬೈಕ್ ಮೇಲಿನ‌ ಬೆಟ್ಟದಷ್ಟು ಪ್ರೀತಿಯನ್ನು ಹೊರಹಾಕಿ ಮನೆಯೊಳಗೆ ಹೋಗುತ್ತಾನೆ. ಸುಬ್ಬು ಮಾತು ಕೇಳಿದ ಶ್ರೀವಲ್ಲಿ ಸುಬ್ಬು ಬೈಕ್ ಅನ್ನೇ ಇಷ್ಟು ಪ್ರೀತಿ ಮಾಡ್ತಾನೆ ಅಂದ್ರೆ ನಾಳೆ ಮದುವೆಯಾಗಿ ‌ನಾನು‌ ಅವನ‌ ಹೆಂಡತಿ ಆದ್ರೆ ನನ್ನನ್ನು‌ ಎಷ್ಟು ಚೆನ್ನಾಗಿ ನೋಡಿಕೊಳ್ಳಬಹುದು ಎಂದು ಯೋಚಿಸುತ್ತಾ ಕನಸಿನ ಲೋಕಕ್ಕೆ ಜಾರುತ್ತಾಳೆ. ಆ ಹೊತ್ತಿಗೆ ಸರಿಯಾಗಿ ಅವರ ಅಮ್ಮ‌ ಅವಳನ್ನ ಕರೆಯುತ್ತಾರೆ, ಕನಸಿನ ಲೋಕದಿಂದ ಎಚ್ಚೆತ್ತ ಶ್ರೀವಲ್ಲಿ‌ ಮನೆಗೆ ಓಡುತ್ತಾಳೆ.

ವಿಜಯಾಂಬಿಕಾಗೆ ಶ್ರಾವಣಿ ಸವಾಲ್

ಅಪ್ಪನ ಫೋಟೊ ಮುಂದೆ ನಿಂತು ತಾನು‌ ಪರೀಕ್ಷೆಯಲ್ಲಿ ಪಾಸ್ ಆದ್ರೆ ಅಪ್ಪನ‌ ಮುಂದೆ ಹೇಗೆ ಹೇಳೋದು ಅಂತ ಒಬ್ಬಳೇ ಮಾತನಾಡಿಕೊಳ್ಳುತ್ತಿರುತ್ತಾಳೆ ಶ್ರಾವಣಿ. ಆ ಹೊತ್ತಿಗೆ ಸರಿಯಾಗಿ ಅಲ್ಲಿಗೆ ಬರುವ ವಿಜಯಾಂಬಿಕಾ ಬಹಳ ಕನಸು ಕಾಣಬೇಡ, ನೀನು ಪರೀಕ್ಷೆಯಲ್ಲಿ ಪಾಸ್ ಆಗೊಲ್ಲ ಅದು ನಿನ್ನ‌ ಹಣೆಯಲ್ಲಿ ಬರೆದಿಲ್ಲ ಎಂದು ಕಿಚಾಯಿಸುತ್ತಾಳೆ. ಆಗ ಶ್ರಾವಣಿ ಧೈರ್ಯದಿಂದ ʼನಾನು ಪಾಸ್ ಆಗೇ ಆಗ್ತೀನಿ, ಅದನ್ನ ಅಪ್ಪ ಎಲ್ಲರ ಎದುರು ಹೆಮ್ಮೆಯಿಂದ ಹೇಳ್ತಾರೆ ಅದನ್ನ ಕೇಳೋಕೆ ನೀವು ಇರ್ತೀರಿ ನೋಡ್ತಾ ಇರಿʼ ಎಂದು ಚಾಲೆಂಜ್‌ ಮಾಡುತ್ತಾಳೆ.

ಸುಬ್ಬು ಬೈಕ್‌ನಲ್ಲಿ ಸಾಲ ತರಲು ಹೊರಟ ಬಾವ

ಬೆಟ್ಟಿಂಗ್ ಹುಚ್ಚು ಹಿಡಿಸಿಕೊಂಡಿರುವ ಸುಬ್ಬುವಿನ ಬಾವ ಸಾಲಗಾರರ ಫೋನ್ ಕರೆಯಿಂದ ಕಂಗಾಲಾಗುತ್ತಾನೆ. ಕೊನೆಗೆ ಇನ್ನೊಂದು ಮ್ಯಾಚ್‌ಗೆ ಬೆಟ್ಟಿಂಗ್ ಹಾಕಲು ಸ್ನೇಹಿತನೊಬ್ಬನ‌ ಬಳಿ‌ ಮತ್ತೆ ಸಾಲ ಕೇಳುತ್ತಾನೆ. ಅವನು ಬಾರ್ ಹತ್ತಿರ ಬಾ ಸಾಲ‌ ಕೊಡ್ತೀನಿ ಎಂದು ಕಾಲ್ ಕಟ್ ಮಾಡ್ತಾನೆ. ದುಡ್ಡು ತರೋಕೆ‌ ಹೋಗೋಕೆ ಕಾಸಿಲ್ಲದ ಪರದೇಸಿ ಭಾವ ಸುಬ್ಬು ಬೈಕ್ ಮೇಲೆ ಕಣ್ಣು ಹಾಕುತ್ತಾನೆ. ಫ್ರೆಂಡ್ ಒಬ್ಬ‌ನಿಗೆ‌ ಆಕ್ಸಿಡೆಂಟ್ ಆಗಿದೆ ಅರ್ಜೆಂಟಾಗಿ ಹೋಗಬೇಕಿದೆ‌ ಎಂದು ಸುಳ್ಳು ಹೇಳಿ ಸುಬ್ಬು ಬೈಕ್ ಪಡೆದು ಹೋಗುತ್ತಾನೆ. ಆದರೆ ದಾರಿಯಲ್ಲಿ ಹೋಗುವಾಗ ಕಿಡಿಗೇಡಿಗಳು ಅಡ್ಡ ಹಾಕುತ್ತಾರೆ.

ಬಾವನ‌ ಬೆಟ್ಟಿಂಗ್ ಹುಚ್ಚಿಗೆ ಸುಬ್ಬು ಬೈಕ್ ಬಲಿಯಾಗುತ್ತಾ, ಪ್ರಾಣದಂತಿರೋ ಬೈಕ್ ಕಳೆದುಕೊಳ್ತಾನಾ ಸುಬ್ಬು? ಶ್ರಾವಣಿ ಅಂದುಕೊಂಡಂತೆ ಪಾಸ್ ಆಗಿ ಅಪ್ಪನ ಹಿರಿಮೆ‌ ಹೆಚ್ಚಿಸ್ತಾಳಾ?, ವಿಜಯಾಂಬಿಕಾ vs ಶ್ರಾವಣಿ ಗೆಲುವು ಯಾರಿಗೆ ಇದನ್ನೆಲ್ಲಾ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.

ಪಾತ್ರ ಪರಿಚಯ

ಸುಬ್ಬು: ಅಮೋಘ್‌ ಆದಿತ್ಯ (ನಾಯಕ)

ಶ್ರಾವಣಿ: ಐಶ್ವರ್ಯಾ ಫಿರ್ಡೋಸ್‌ (ನಾಯಕಿ)

ಅನಂತ ಪದ್ಮನಾಭ: ಬಾಲರಾಜ್‌ (ಸುಬ್ಬು ತಂದೆ)

ವಿಜಯಾಂಬಿಕ: ಸ್ನೇಹ ಈಶ್ವರಪ್ಪ (ಶ್ರಾವಣಿ ಅತ್ತೆ)

ಟಿ20 ವರ್ಲ್ಡ್‌ಕಪ್ 2024