ಮೊದಲ ಬಾರಿ ಶ್ರಾವಣಿ ಮಾತಿಗೆ ಅಪ್ಪನ ಮೆಚ್ಚುಗೆ, ಬೈಕ್‌ ಕಳೆದುಕೊಂಡ ದುಃಖದಲ್ಲಿ ಸುಬ್ಬು; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ಮೊದಲ ಬಾರಿ ಶ್ರಾವಣಿ ಮಾತಿಗೆ ಅಪ್ಪನ ಮೆಚ್ಚುಗೆ, ಬೈಕ್‌ ಕಳೆದುಕೊಂಡ ದುಃಖದಲ್ಲಿ ಸುಬ್ಬು; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

ಮೊದಲ ಬಾರಿ ಶ್ರಾವಣಿ ಮಾತಿಗೆ ಅಪ್ಪನ ಮೆಚ್ಚುಗೆ, ಬೈಕ್‌ ಕಳೆದುಕೊಂಡ ದುಃಖದಲ್ಲಿ ಸುಬ್ಬು; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

Shravani Subramanya Kannada Serial Today Episode May 31st: ʼಶ್ರಾವಣಿ ಸುಬ್ರಹ್ಮಣ್ಯʼ ಧಾರಾವಾಹಿಯ ಶುಕ್ರವಾರದ ಎಪಿಸೋಡ್‌ನಲ್ಲಿ ಆತ್ಮಹತ್ಯೆ ನಾಟಕವಾಡಿ ಸುಬ್ಬು ಮುಂದೆ ಬೈಕ್‌ ಕಳೆದು ಹೋಯ್ತು ಎಂದು ಸುಳ್ಳು ಹೇಳುವ ಬಾವ. ಮೊದಲ ಬಾರಿಗೆ ಮಗಳು ಶ್ರಾವಣಿ ಮಾತು ಕೇಳಿ ಸ್ಫೂರ್ತಿಗೊಂಡ ಅಪ್ಪ ವೀರೇಂದ್ರ, ಕೆಲಸಗಾರರಿಗೆ ಬೋನಸ್‌ ಕೊಡಲು ನಿರ್ಧಾರ.

ಮೊದಲ ಬಾರಿ ಶ್ರಾವಣಿ ಮಾತಿಗೆ ಅಪ್ಪನ ಮೆಚ್ಚುಗೆ, ಬೈಕ್‌ ಕಳೆದುಕೊಂಡ ದುಃಖದಲ್ಲಿ ಸುಬ್ಬು; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ
ಮೊದಲ ಬಾರಿ ಶ್ರಾವಣಿ ಮಾತಿಗೆ ಅಪ್ಪನ ಮೆಚ್ಚುಗೆ, ಬೈಕ್‌ ಕಳೆದುಕೊಂಡ ದುಃಖದಲ್ಲಿ ಸುಬ್ಬು; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ನಿನ್ನೆಯ (ಮೇ 31) ಸಂಚಿಕೆಯಲ್ಲಿ ಸುಬ್ಬುವಿನ ಬೈಕ್‌ಯೇರಿ ಹೊರಟ ಬಾವನಿಗೆ ದಾರಿಯಲ್ಲಿ ಇಬ್ಬರು ದಾಂಡಿಗರು ಅಡ್ಡ ಹಾಕುತ್ತಾರೆ. ಅವರು ಯಾರು ಎಂದು ತಿಳಿಯದೇ ಗಾಬರಿಯಾಗುವ ಬಾವ ʼನೀವು ಚಂದಾ ಕೇಳಲು ಬಂದವರಾ? ನನ್ನ ಬಳಿ ಬಿಡಿಗಾಸು ಇಲ್ಲʼ ಎನ್ನುತ್ತಾನೆ. ಆ ಹೊತ್ತಿಗೆ ಜೇಬಿನಿಂದ ಚಾಕು ತೆಗೆದು ಹೆದರಿಸುವ ಈ ವ್ಯಕ್ತಿಗಳು ಸಾಲ ವಸೂಲಿ ಮಾಡಲು ಬಂದಿರುವವರು ಎಂಬುದು ತಿಳಿಯುತ್ತದೆ. ನನ್ನ ಬಳಿ ಒಂದು ರೂಪಾಯಿಯು ಇಲ್ಲ ಎಂದು ಬಾವ ಹೇಳಿದಾಗ, ಆ ರೌಡಿಗಳು 30 ಸಾವಿರಕ್ಕಾಗುವಷ್ಟು ಈ ಬೈಕ್‌ ಇದೆ ಅಲ್ವಾ, ನಮಗೆ ಅದೇ ಸಾಕುʼ ಎಂದು ಬೈಕ್‌ ಕೀ ಕಿತ್ತುಕೊಳ್ಳುತ್ತಾರೆ. ಬೈಕ್‌ ನಂದಲ್ಲ, ನನ್ನ ಬಾಮೈದಂದು ಎಂದು ಎಷ್ಟು ಹೇಳಿದರೂ ಕೇಳದೇ ಬೈಕ್‌ ತೆಗೆದುಕೊಂಡು ಹೋಗೇ ಬಿಡುತ್ತಾರೆ.

ಪಿಂಕಿ ವಿಚಾರದಲ್ಲಿ ಶ್ರಾವಣಿ ಅನುಭವದ ಮಾತು

ಚಿಕ್ಕಪ್ಪನ ಮಗಳು ಪಿಂಕಿ ತಿಂಡಿ ತಿನ್ನಲು ಹಟ ಮಾಡುತ್ತಿರುತ್ತಾಳೆ. ಅವರ ಅಮ್ಮ ವಂದನ ಎಷ್ಟೇ ಹೇಳಿದ್ರು ಆಕೆ ಕೇಳುವುದಿಲ್ಲ. ತನಗೆ ಬಾರ್ಲಿ ಡಾಲ್‌ ಕೊಡಿಸುವವರೆಗೂ ತಿಂಡಿ ತಿನ್ನುವುದಿಲ್ಲ ಎಂದು ಹುಸಿ ಮುನಿಸು ತೋರುತ್ತಾಳೆ. ಆಗ ಅಲ್ಲಿಗೆ ಬರುವ ಶ್ರಾವಣಿ ಪಿಂಕಿ ಕೋಪಕ್ಕೆ ಕಾರಣ ತಿಳಿದು ʼಚಿಕ್ಕಮ್ಮ ಅವಳು ಕೇಳಿದ್ದು, ಅವಳಿಗೆ ಕೊಡಿಸಿ ಬಿಡಿ. ಯಾಕೆ ಇಲ್ಲ ಅಂತೀರಾ, ನಮ್ಮ ಕೈಯಲ್ಲಿ ಆಗುವಾಗ ನಮ್ಮಿಂದ ಏನಾಗುತ್ತದೆ ಅದನ್ನು ಮಾಡಬೇಕುʼ ಎಂದು ಚಿಕ್ಕಮ್ಮನಿಗೆ ಬುದ್ಧಿವಾದ ಹೇಳುತ್ತಾಳೆ. ಮಾತ್ರವಲ್ಲ ʼಚಿಕ್ಕಂದಿನಲ್ಲಿ ನನಗೂ ಹೀಗೆ ಹಟ ಮಾಡಬೇಕು ಅನ್ನಿಸುವುದು ಚಿಕ್ಕಮ್ಮಾ, ಆದರೆ ನಾನು ಹಟ ಮಾಡಿದ್ರೆ ಕೇಳುವವರೇ ಇಲ್ಲ, ಅದೆಲ್ಲಾ ಬಿಡಿ ಯಾವತ್ತು ನಮ್ಮ ಬಳಿ ಕೈಯಲ್ಲಿ ಆದಾಗ ಬೇರೆಯವರು ಕೇಳುವ ಮೊದಲೇ ನಮ್ಮ ಕೈಯಲ್ಲಿ ಆಗುವುದನ್ನು ಅವರಿಗೆ ಕೊಟ್ಟು ಬಿಡಬೇಕು. ಯಾಕಂದ್ರೆ ಕೆಲವೊಮ್ಮೆ ಇನ್ನು ಬಳಿ ಏನಾದ್ರೂ ಕೇಳಬೇಕು ಎಂದು ಏನೋ ಸಂಕೋಚ, ಮುಜುಗರ ಕಾಡುವುದು ಸಹಜ. ಅವರು ಕೇಳದೇ ನಾವು ಕೊಟ್ಟಾಗ, ಅವರ ಮುಖದಲ್ಲಿ ಮೂಡುವ ಖುಷಿ ಇದ್ಯಾಯಲ್ಲ ಅದನ್ನ ಬಿಡಿಸಿ ಹೇಳೋಕೆ ಆಗೊಲ್ಲʼ ಎಂದು ಅನುಭವಿಯಂತೆ ಮಾತನಾಡುತ್ತಾಳೆ. ಅವಳ ಮಾತು ಕೇಳಿ ಚಿಕ್ಕಮ್ಮ ಫುಲ್‌ ಖುಷಿ ಆಗುತ್ತಾರೆ, ಮಾತ್ರವಲ್ಲ ತಂಗಿ ಪಿಂಕಿಗೆ ತಾನೇ ಬಾರ್ಬಿ ಡಾಲ್‌ ಕೊಡಿಸುವುದಾಗಿ ಚಿಕ್ಕಮ್ಮ ಬಳಿ ಹೇಳಿ ಹೊರಡುತ್ತಾಳೆ. ಕೋಣೆಯಿಂದ ಹೊರಗೆ ಬಂದು ನೋಡಿದಾಗ ಅಲ್ಲಿ ಅಪ್ಪ ನಿಂತಿರುವುದು ನೋಡುತ್ತಾಳೆ. ತಕ್ಷಣಕ್ಕೆ ಏನು ಹೇಳಬೇಕು ಎಂದು ತಿಳಿಯದ ಶ್ರಾವಣಿ ಅಲ್ಲಿಂದ ಓಡಿ ಹೋಗುತ್ತಾಳೆ. ತಮ್ಮಾ ಸುರೇಂದ್ರನನ್ನ ಹುಡುಕಿಕೊಂಡು ಬಂದ ವೀರೇಂದ್ರ (ಶ್ರಾವಣಿ ತಂದೆ) ಮಗಳ ಮಾತುಗಳನ್ನು ಕೇಳಿಸಿಕೊಂಡಿರುತ್ತಾರೆ.

ಸುಬ್ಬು ಬಾವನ ಆತ್ಮಹತ್ಯೆ ನಾಟಕ

ಸಾಲಗಾರ ಕೈಗೆ ಬೈಕ್‌ ಕೊಟ್ಟ ಸುಬ್ಬು ಬಾವ ನೇರವಾಗಿ ಮನೆಗೆ ಬಂದು ಗಡಿಬಿಡಿಯಲ್ಲಿ ಫೆನಾಯಿಲ್‌ ಕೇಳುತ್ತಾನೆ. ಯಾಕೆ ಎಂದು ಅರಿಯದ ಹೆಂಡತಿ ಫೆನಾಯಿಲ್‌ ಕೊಡುತ್ತಾನೆ. ಇದರಿಂದ ಪೆಚ್ಚಾಗುವ ಸುಬ್ಬು ಬಾವ ತಾನು ಆತ್ಮಹತ್ಯೆಗೆ ಯತ್ನಿಸುತ್ತೇನೆ ಎಂಬ ವಿಚಾರಕ್ಕೆ ಇವರಿಗೆ ಗೊತ್ತಾಗಿಲ್ವಾ ಎಂದುಕೊಂಡು ಹಗ್ಗ ಕೇಳುತ್ತಾನೆ, ಆಗ ಮಾವ ಹಗ್ಗ ತಂದುಕೊಡುತ್ತಾರೆ. ಚಾಕು ಕೇಳಿದಾಗ ಅತ್ತೆ ಚಾಕು ತಂದು ಕೊಡುತ್ತಾರೆ. ಯಾರಿಗೂ ಇವರ ಆತ್ಮಹತ್ಯೆ ನಾಟಕ ಅರಿವಾಗುವುದಿಲ್ಲ. ಕೊನೆಗೆ ಫ್ಯಾನ್‌ಗೆ ನೇಣು ಹಾಕಿಕೊಳ್ಳುವಂತೆ ನಾಟಕ ಮಾಡುವಂತೆ, ಆಗ ಮನೆಯವರ ಬೊಬ್ಬೆ ಕೇಳಿ ಸುಬ್ಬು ಓಡಿ ಬಂದು ಬಾವನನ್ನ ಕೆಳಗೆ ಇಳಿಸಿ ಏನಾಯ್ತು ಎಂದು ಕೇಳಿದಾಗ ʼಸುಬ್ಬು ನಿನ್ನ ಬೈಕ್‌ ಕಳೆದು ಹೋಯ್ತು, ನನಗೆ ಆ ಬೇಸರ ತಡೆಯಲು ಆಗುತ್ತಿಲ್ಲ. ಅದಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆʼ ಎಂದು ನಾಟಕ ಮಾಡುತ್ತಾನೆ. ಆದರೆ ಸಾಲಗಾರರು ಬೈಕ್‌ ತೆಗೆದುಕೊಂಡು ಹೋದ ವಿಚಾರ ಹೇಳುವುದಿಲ್ಲ. ಇದನ್ನು ಕೇಳಿದ ಸುಬ್ಬವಿಗೆ ಭೂಮಿಯೇ ನಡುಗಿದಂತಾಗುತ್ತದೆ. ಅಲ್ಲದೇ ಮನೆಯವರಿಗೆಲ್ಲಾ ಇದರಿಂದ ಬಹಳ ಬೇಸರವಾಗುತ್ತದೆ. ಸೀದಾ ಕೋಣೆಯೊಳಗೆ ಹೋಗುವ ಸುಬ್ಬು ಬೈಕ್‌ ಫೋಟೊ ನೋಡುತ್ತಾ ಬೇಸರದಲ್ಲಿ ಕುಳಿತು ಬಿಡುತ್ತಾನೆ.

ಶ್ರಾವಣಿ ಮಾತನ್ನು ಕಾರ್ಯರೂಪಕ್ಕೆ ತರುವ ಅಪ್ಪ

ನಮ್ಮ ಬಳಿ ಇದ್ದಾಗ ನಮ್ಮ ಜೊತೆ ಇರುವವರಿಗೆ ನಾವು ಕೇಳದೇ ಏನನ್ನಾದರೂ ನೀಡಿದಾಗ ಆಗುವ ಖುಷಿಯನ್ನ ಹೇಳೋಕೆ ಸಾಧ್ಯವಿಲ್ಲ ಎಂದು ಶ್ರಾವಣಿ ಹೇಳಿದ ಮಾತನ್ನೇ ಮೆಲುಕು ಹಾಕುವ ಅಪ್ಪ ವೀರೇಂದ್ರ ಒಂದು ನಿರ್ಧಾರಕ್ಕೆ ಬರುತ್ತಾರೆ. ಕೂಡಲೇ ಅಕ್ಕ ವಿಜಯಾಂಬಿಕಳನ್ನು ಕರೆಯುವ ಅವರು ನಮ್ಮ ಮನೆಯಲ್ಲಿ ಕೆಲಸ ಮಾಡುವವರಿಗೆಲ್ಲಾ ಬೋನಸ್‌ ನೀಡುವ ನಿರ್ಧಾರಕ್ಕೆ ಬಂದಿದ್ದೇನೆ ಎನ್ನುತ್ತಾರೆ. ಇದನ್ನು ಕೇಳಿ ಶಾಕ್‌ ಆಗುವ ವಿಜಯಾಂಬಿಕ ಹಾಗೂ ಮದನ್‌ ಹೊಟ್ಟೆ ಉರಿದುಕೊಳ್ಳುತ್ತಾರೆ. ತಮ್ಮನ ತಲೆ ಕೆಡಿಸಲು ಯೋಚಿಸುವ ವಿಜಯಾಂಬಿಕ ʼಅಲ್ಲ ವೀರು ಈಗ್ಯಾಕೆ ಬೋನಸ, ಅವರೇನು ಕೇಳಿಲಿಲ್ವಾ, ಅವರಾಗೇ ಕೇಳದೇ ಬೋಸನ್‌ ಕೊಡೋದು ಸರಿನಾ, ನಿಂಗ್ಯಾಕೆ ಈ ಯೋಚನೆ ಬಂತುʼ ಎಂದು ಪ್ರಶ್ನೆ ಮಾಡುತ್ತಾರೆ. ಆಗ ವೀರೇಂದ್ರ ಮಗಳು ಹೇಳಿದ ಮಾತನ್ನೇ ರಿಪಿಟ್‌ ಮಾಡುತ್ತಾರೆ. ಇದನ್ನು ಕೇಳಿಸಿಕೊಂಡ ಚಿಕ್ಕಪ್ಪ ಕೂಡಲೇ ಶ್ರಾವಣಿಗೆ ಕಾಲ್‌ ಮಾಡಿ ಅವರ ಅಪ್ಪ ಹೇಳುತ್ತಿರುವ ಮಾತು ಕೇಳಿಸಿಕೊಳ್ಳುವಂತೆ ಮಾಡುತ್ತಾರೆ. ಅಪ್ಪ ಬಾಯಲ್ಲಿ ತಾನು ಹೇಳಿರುವ ಮಾತುಗಳೇ ಬರುತ್ತಿರುವುದು ನೋಡಿ ಶ್ರಾವಣಿ ಕಣ್ಣೀರು ತುಂಬಿ ಬರುತ್ತದೆ. ಮೊದಲ ಬಾರಿಗೆ ಅಪ್ಪ ತನ್ನ ಮಾತುಗಳಿಗೆ ಬೆಲೆ ಕೊಟ್ಟಿದ್ದು ನೋಡಿ ಶ್ರಾವಣಿ ಖುಷಿಯಿಂದ ಕುಣಿದಾಡುತ್ತಾಳೆ. ನಾಳೆ ಎಲ್ಲರಿಗೂ ಬೋನಸ್‌ ಕೊಡು, ಆದ್ರೆ ಸುಬ್ಬುವಿಗೆ ಮಾತ್ರ ಬೇಡ. ಯಾಕಂದ್ರೆ ಸುಬ್ಬು ಕೆಲಸದವನಲ್ಲ ಈ ಮನೆಯ ಮಗ, ಅವನಿಗೆ ನಾನೇ ಬೋನಸ್‌ ಕೊಡ್ತೀನಿ ಅಂತಾರೆ. ಮಾತ್ರವಲ್ಲ ಕೆಲವೊಮ್ಮೆ ನಮಗೆ ಇಷ್ಟವಾಗದವರ ವ್ಯಕ್ತಿತ್ವ ನಮಗೆ ಇಷ್ಟವಾಗುತ್ತದೆ ಎಂದು ಹೇಳಿ ಅಲ್ಲಿಂದ ಹೊರಡುತ್ತಾರೆ.

ಸುಬ್ಬುವಿನ ಬೋನಸ್‌ ವಿಚಾರದಲ್ಲಿ ಮೋಸ ಮಾಡಲು ಪ್ಲಾನ್‌ ಮಾಡುವ ಮದನ್‌-ವಿಜಯಾಂಬಿಕಾ, ಈಗಲಾದ್ರೂ ಎಚ್ಚೆತ್ತುಕೊಳ್ತಾರಾ ವೀರೇಂದ್ರ, ಮಗಳ ವಿಚಾರದಲ್ಲಿ ಇನ್ನಾದ್ರೂ ಬದಲಾಗ್ತಾರಾ, ಪ್ರತಿದಿನ ಪರೀಕ್ಷೆಯಲ್ಲಿ ಪಾಸ್‌ ಆಗುವ ಕನಸು ಕಾಣುವ ಶ್ರಾವಣಿ ಪಾಸ್‌ ಆಗ್ತಾಳಾ? ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.

Whats_app_banner