ಕನ್ನಡ ಸುದ್ದಿ  /  ಮನರಂಜನೆ  /  ಅಪ್ಪ ಹೊಗಳಿದ ಖುಷಿಯಲ್ಲಿ ಶ್ರಾವಣಿ, ಸುಬ್ಬು ಮನದಲ್ಲಿ ನೆನೆದಾಕ್ಷಣ ಮನೆ ಮುಂದೆ ಬಂದು ನಿಂತ್ರು ಮೇಡಂ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ‌

ಅಪ್ಪ ಹೊಗಳಿದ ಖುಷಿಯಲ್ಲಿ ಶ್ರಾವಣಿ, ಸುಬ್ಬು ಮನದಲ್ಲಿ ನೆನೆದಾಕ್ಷಣ ಮನೆ ಮುಂದೆ ಬಂದು ನಿಂತ್ರು ಮೇಡಂ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ‌

Shravani Subramanya Kannada Serial Today Episode June 10th: ʼಶ್ರಾವಣಿ ಸುಬ್ರಹ್ಮಣ್ಯʼ ಧಾರಾವಾಹಿಯ ಸೋಮವಾರದ ಎಪಿಸೋಡ್‌ನಲ್ಲಿ ಮಗಳಿಗೆ ಥ್ಯಾಂಕ್ಸ್‌ ಹೇಳಿದ್ರು ವೀರೇಂದ್ರ. ವಿಜಯಾಂಬಿಕಾಗೆ ಶಾಕ್‌, ಸಂತೋಷದಿಂದ ಕುಣಿದಾಡಿದ ಶ್ರಾವಣಿ. ಅಪ್ಪ ಹೊಗಳಿದ ಖುಷಿಯನ್ನು ಹಂಚಿಕೊಂಡು ಶ್ರಾವಣಿ ಖುಷಿಪಟ್ರು ಸುಬ್ಬುಗೆ ಮಾತ್ರ ಬೇಸರವೇ ಕಾಡುತ್ತಿದೆ.

ಸುಬ್ಬು ಮನದಲ್ಲಿ ನೆನೆದಾಕ್ಷಣ ಮನೆ ಮುಂದೆ ಬಂದ ಶ್ರಾವಣಿ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ‌
ಸುಬ್ಬು ಮನದಲ್ಲಿ ನೆನೆದಾಕ್ಷಣ ಮನೆ ಮುಂದೆ ಬಂದ ಶ್ರಾವಣಿ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ‌

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ನಿನ್ನೆಯ (ಜೂನ್‌ 10) ಸಂಚಿಕೆಯಲ್ಲಿ ಮಗಳ ಮಾತು ಕೇಳಿ ವೀರೇಂದ್ರ ಕೆಲಸಗಾರರಿಗೆಲ್ಲಾ ಬೋನಸ್‌ ಕೊಡಲು ನಿರ್ಧಾರ ಮಾಡುತ್ತಾರೆ. ಅಂತೆಯೇ ಎಲ್ಲರಿಗೂ ಬೋನಸ್‌ ನೀಡುತ್ತಾರೆ. ಇದರಿಂದ ಎಷ್ಟೋ ಕೆಲಸಗಾರರಿಗೆ ತುಂಬಾ ಉಪಕಾರ ಆಗಿರುತ್ತದೆ. ಅವರು ಖುಷಿ ಹಂಚಿಕೊಂಡ ವಿಡಿಯೊವನ್ನು ಅಣ್ಣನಿಗೆ ತೋರಿಸುವ ತಮ್ಮಾ ಸುರೇಂದ್ರ ಸಂತಸ ವ್ಯಕ್ತಪಡಿಸುತ್ತಾರೆ. ಇದಕ್ಕೆಲ್ಲಾ ಕಾರಣಳಾದ ಮಗಳನ್ನು ಮನಸಾರೆ ಹೊಗಳಿ, ಮೊದಲ ಬಾರಿಗೆ ಥ್ಯಾಂಕ್ಸ್‌ ಹೇಳುತ್ತಾರೆ ವೀರೇಂದ್ರ. ಹುಟ್ಟಿದಾಗಿನಿಂದ ಮಗಳನ್ನು ಅಪ್ಪನ ಎದುರು ಬರಲು ಬಿಡದ ವಿಜಯಾಂಬಿಕಗೆ ವೀರೇಂದ್ರ ಮಗಳನ್ನು ಹೊಗಳಿದ್ದು ನೋಡಿ ಶಾಕ್‌ ಆಗಿರುತ್ತದೆ. ಆದರೆ ಶ್ರಾವಣಿ ಮಾತ್ರ ಆಕಾಶದಲ್ಲಿ ಹಾರಾಡುತ್ತಿರುತ್ತಾಳೆ.

ಟ್ರೆಂಡಿಂಗ್​ ಸುದ್ದಿ

ವಿಜಯಾಂಬಿಕಾಗೆ ಇನ್ನಷ್ಟು ಉರ್ಸಿದ್ಲು ಶ್ರಾವಣಿ

ಅಪ್ಪ-ಮಗಳನ್ನು ದೂರ ಮಾಡಲು ಏನೇನೋ ಪ್ಲಾನ್‌ ಮಾಡುವ ವಿಜಯಾಂಬಿಕಾ ಈ ಬಾರಿ ವೀರೇಂದ್ರ ಸ್ವತಃ ಮಗಳನ್ನು ಹೊಗಳಿದ್ದು ನೋಡಿ ಶಾಕ್‌ ಆಗಿ ನಿಂತಿರುತ್ತಾಳೆ. ಆಗ ಅಲ್ಲಿಗೆ ಬರುವ ಶ್ರಾವಣಿ ʼನನ್ನನ್ನು ಅಪ್ಪನ ಎದುರು ಹೋಗದೇ ಇರುವಂತೆ ತಡೆಯಲು ನೋಡಿದ್ರಿ ಅಲ್ವಾ, ಈಗ ಅಪ್ಪನೇ ನನ್ನನ್ನು ಎದುರು ಕರೆದು ಥ್ಯಾಂಕ್ಸ್‌ ಹೇಳಿದ್ರು. ಅಪ್ಪ ನನ್ನ ಜೊತೆ ಚೆನ್ನಾಗಿ ಮಾತನಾಡುವ ಕಾಲ ದೂರ ಇಲ್ಲ. ನೀವು ಎಷ್ಟೇ ಪ್ರಯತ್ನ ಮಾಡಿದ್ರೂ ನಮ್ಮನ್ನು ದೂರ ಮಾಡಲು ಸಾಧ್ಯವಿಲ್ಲʼ ಎಂದು ಮೊದಲೇ ಕೋಪಗೊಂಡಿದ್ದ ವಿಜಯಾಂಬಿಕಾಳನ್ನು ಇನ್ನಷ್ಟು ಉರಿಸುತ್ತಾರೆ ಶ್ರಾವಣಿ.

ಮತ್ತೆ ಕ್ರಿಮಿನಲ್‌ ಐಡಿಯಾ ಮಾಡುವ ಮದನ್‌

ಶ್ರಾವಣಿ ಹಾಗೂ ವೀರೇಂದ್ರ ಅವರನ್ನು ದೂರ ಮಾಡಲೇಬೇಕು ಎಂದು ನಿರ್ಧಾರ ಮಾಡಿರುವ ವಿಜಯಾಂಬಿಕಾ ಹಾಗೂ ಮದನ್‌ ಇನ್ನೊಂದು ಹೊಸ ಪ್ಲಾನ್‌ ಮಾಡುತ್ತಾರೆ. ವೀರೇಂದ್ರಗೆ ಒಂದು ದೊಡ್ಡ ಪ್ರೆಸ್‌ ಕಾನ್ಫರೆನ್ಸ್‌ ಆಯೋಜನೆ ಆಗಿರುತ್ತದೆ. ಆ ಕಾನ್ಫರೆನ್ಸ್‌ನಲ್ಲಿ ವೀರೇಂದ್ರ ಅವರಿಗೆ ಅವಮಾನ ಆಗುವಂತೆ ಮಾಡಬೇಕು ಎಂದುಕೊಂಡಿರುತ್ತಾನೆ. ತನ್ನ ಕ್ರಿಮಿನಲ್‌ ಐಡಿಯಾವನ್ನು ತಾಯಿಗೆ ವಿವರಿಸುತ್ತಾರೆ ಕುತಂತ್ರಿ ಮದನ್‌. ಅವನ ಐಡಿಯಾದ ಪ್ರಕಾರ ಅವನು ಒಬ್ಬ ಪ್ರೆಸ್‌ ರಿಪೋರ್ಟರ್‌ ಅನ್ನು ನೇಮಿಸಿರುತ್ತಾನೆ. ಪ್ರೆಸ್‌ ಕಾನ್ಫೆರನ್ಸ್‌ ದಿನ ಈ ರಿಪೋರ್ಟರ್‌ ಶ್ರಾವಣಿ ಫೇಲ್‌ ಆಗಿರುವ ವಿಚಾರದ ಬಗ್ಗೆ ಮಾತನಾಡಿ ಅಪ್ಪ-ಮಗಳ ಮಧ್ಯೆ ಇನ್ನಷ್ಟು ಬಿರುಕು ಮೂಡಿಸಬೇಕು ಎಂದು ಪ್ಲಾನ್‌ ಮಾಡಿರುತ್ತಾನೆ. ಆದ್ರೆ ಮದನ್‌ ಅಂದುಕೊಂಡಂತೆ ಆಗುತ್ತಾ, ಇಲ್ಲ ಈ ಬಾರಿ ಮದನ್‌ ಪ್ಲಾನ್‌ ಪ್ಲಾಪ್‌ ಆಗುತ್ತಾ ಕಾದು ನೋಡಬೇಕು.

ಸುಬ್ಬು ನೆನೆದ ತಕ್ಷಣ ಅವನೆದುರು ಶ್ರಾವಣಿ ಹಾಜರ್‌

ಅಪ್ಪ ತನ್ನನ್ನು ಹೊಗಳಿದ ಖುಷಿಯನ್ನೆಲ್ಲಾ ಸುಬ್ಬುಗೆ ಕಾಲ್‌ ಮಾಡಿ ಹಂಚಿಕೊಳ್ಳುವ ಶ್ರಾವಣಿ ಸುಬ್ಬು ಮಾತಿನಲ್ಲಿ ನೋವಿರುವುದು ಗುರುತಿಸುತ್ತಾಳೆ. ಆದರೆ ಅವನಿಗೆ ಏನಾಗಿದೆ ಎಂಬುದು ಅವಳಿಗೆ ಅರಿವಾಗುವುದಿಲ್ಲ. ಬೆಳಗೆದ್ದು ನೇರವಾಗಿ ಅವನ ಮನೆಗೆ ಹೋಗಿ ಮಾತನಾಡಿಸುತ್ತೇನೆ ಎಂದು ನಿರ್ಧಾರ ಮಾಡುತ್ತಾಳೆ ಶ್ರಾವಣಿ.

ಇತ್ತ ಬೆಳಗಾದ ಕೂಡಲೇ ಸುಬ್ಬು ಕೆಲಸಕ್ಕೆ ಹೋಗಲು ಹೊರಟು ನಿಲ್ಲುತ್ತಾನೆ. ಆಗ ಅಪ್ಪ ಪದ್ಮನಾಭ ನನ್ನ ಸ್ನೇಹಿತ ಜ್ಯೋತಿಷಿ ಹೇಳಿದ್ದಾನೆ, ನಿನ್ನ ಕಷ್ಟಗಳೆಲ್ಲಾ ಕಳೆದು ಆದಷ್ಟು ಬೇಗ ನಿನಗೆ ಒಳ್ಳೆಯ ದಿನಗಳು ಬರುತ್ತವೆ ಎಂದು ಹೇಳಿದ್ದಾರೆ ಎಂದು ತನ್ನ ಅಚಲ ನಂಬಿಕೆಯನ್ನು ಮಗ ಹಾಗೂ ಮನೆಯವರ ಮುಂದೆ ಹೇಳುತ್ತಾರೆ. ಆದರೆ ಇದನ್ನೆಲ್ಲಾ ನಂಬದ ಸುಬ್ಬು ತಾಯಿ ಗಂಡನಿಗೆ ಬಯ್ಯುತ್ತಾರೆ. ಆಗ ಪದ್ಮನಾಭ ಅವರು ಸುಬ್ಬುವಿಗೆ ʼಸುಬ್ಬು ನನ್ನ ಸ್ನೇಹಿತ ಅಸಾಮಾನ್ಯ ಜೋತಿಷಿ, ಅವರು ಹೇಳಿದ್ದೆಲ್ಲಾ ಸತ್ಯ ಆಗುತ್ತೆ. ನಿಂಗೆ ನಂಬಿಕೆ ಇಲ್ಲ ಅಂದ್ರೆ ಈಗ ನೀನು ಯಾರನ್ನಾದ್ರೂ ನಿನ್ನ ಮನಸ್ಸಲ್ಲೇ ನೆನಪು ಮಾಡ್ಕೋ ಅವರು ನಿನ್ನ ಎದುರು ಬಂದು ನಿಲ್ತಾರೆʼ ಎಂದು ಚಾಲೆಂಜ್‌ ಮಾಡುತ್ತಾನೆ. ಅಪ್ಪನ ಈ ಮೂಢನಂಬಿಕೆಯನ್ನು ಸುಳ್ಳು ಮಾಡಬೇಕು ಎಂದು ನಿರ್ಧಾರ ಮಾಡಿದ ಸುಬ್ಬು ಒಕೆ ಎನ್ನುತ್ತಾನೆ. ಅಲ್ಲದೇ ಕಣ್ಣು ಮುಚ್ಚಿದರೆ ಮನಸ್ಸಿನಲ್ಲಿ ಬರುವ ಶ್ರಾವಣಿ ಮೇಡಂ ಅನ್ನು ನೆನೆಸಿಕೊಂಡು ನಾನು ಶ್ರಾವಣಿ ಮೇಡಂ ಅನ್ನು ನೆನೆಸಿಕೊಂಡಿದ್ದೇನೆ ಎಂದು ಮನೆಯವರೆದು ಹೇಳಿ ಕಣ್ಣು ಮುಚ್ಚಿ ನಿಲ್ಲುತ್ತಾನೆ. ಇದಾಗಿ ಎರಡೇ ನಿಮಿಷಕ್ಕೆ ಸುಬ್ಬು ಎಂದು ಕರೆಯುತ್ತಾನೆ ಶ್ರಾವಣಿ ಅವರ ಮನೆ ಎದುರು ಬಂದು ನಿಲ್ಲುತ್ತಾಳೆ. ಮನೆಯವರೆಲ್ಲಾ ಶಾಕ್‌ ಆಗಿ ಬಾಯಿ ಬಿಟ್ಟುಕೊಂಡು ನೋಡುತ್ತಾ ನಿಲ್ಲುತ್ತಾರೆ.

ಸುಬ್ಬು ಅಪ್ಪನಿಗೆ ಸ್ನೇಹಿತ ಜ್ಯೋತಿಷಿ ಹೇಳಿದಂತೆ ಸುಬ್ಬು ದೊಡ್ಡ ವ್ಯಕ್ತಿ ಆಗ್ತಾನಾ, ಸುಬ್ಬು ಮನದಲ್ಲಿ ಶ್ರಾವಣಿಯೇ ಇರಲು ಕಾರಣವೇನು, ಸುಬ್ಬುಗೆ ಶ್ರಾವಣಿ ಮೇಲೆ ಪ್ರೀತಿ ಆಗಿದ್ಯಾ?, ಪ್ರೆಸ್‌ ಕಾನ್ಫೆರೆನ್ಸ್‌ನಲ್ಲಿ ವೀರೇಂದ್ರ ಅವರಿಗೆ ಅವಮಾನ ಮಾಡಿ ಶ್ರಾವಣಿಯನ್ನು ಇನ್ನಷ್ಟು ದೂರ ಮಾಡುವ ಮದನ್‌ ಪ್ಲಾನ್‌ ಸಕ್ಸಸ್‌ ಆಗುತ್ತಾ, ಈ ಎಲ್ಲವನ್ನೂ ಕಾದು ನೋಡಬೇಕಿದೆ.

ಟಿ20 ವರ್ಲ್ಡ್‌ಕಪ್ 2024