ಬೈಕ್‌ಗಾಗಿ ಶ್ರೀವಲ್ಲಿ ಸೂಸೈಡ್ ಡ್ರಾಮಾ, ವಿಜಯಾಂಬಿಕಾ ಮೇಲೆ ಸುರೇಂದ್ರಗೆ ಶುರುವಾಯ್ತು ಅನುಮಾನ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ
Shravani Subramanya Kannada Serial Today Episode June 11th: ʼಶ್ರಾವಣಿ ಸುಬ್ರಹ್ಮಣ್ಯʼ ಧಾರಾವಾಹಿಯ ಮಂಗಳವಾರದ ಎಪಿಸೋಡ್‌ನಲ್ಲಿ ಸುಬ್ಬು ಮನೆಗೆ ಬರುವ ಶ್ರಾವಣಿ ಮುಂದೆ ದರ್ಪ ತೋರುವ ಕಾಂತಮ್ಮ. ಸುಬ್ಬುಗೆ ಬೈಕ್ ಕೊಡಿಸಲು ಮನೆಯವರ ಮುಂದೆ ಶ್ರೀವಲ್ಲಿ ಆತ್ಮಹತ್ಯೆ ನಾಟಕ. ಪ್ರೆಸ್ ಕಾನ್ಫರೆನ್ಸ್ ನಡೆಯಲೇಬೇಕೆಂದು ವೀರೇಂದ್ರ ಮೇಲೆ ಒತ್ತಡ ಹಾಕುವ ವಿಜಯಾಂಬಿಕ.
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ನಿನ್ನೆಯ (ಜೂನ್ 11) ಸಂಚಿಕೆಯಲ್ಲಿ ಸುಬ್ಬು ಅಪ್ಪ ಹೇಳಿದಂತೆ ಶ್ರಾವಣಿಯನ್ನ ನೆನಪಿಸಿಕೊಂಡು ಕಣ್ಮುಚ್ಚಿಕೊಳ್ಳುತ್ತಾನೆ. ಆಗ ಹೊತ್ತಿಗೆ ಸರಿಯಾಗಿ ಸುಬ್ಬು ಎಂದು ಕರೆಯುತ್ತಾರೆ ಮನೆ ಮುಂದೆ ಹಾಜರ್ ಆಗುತ್ತಾಳೆ ಶ್ರಾವಣಿ. ಶ್ರಾವಣಿ ಮನೆಗೆ ಬಂದಿರುವುದು ನೋಡಿ ಮನೆಯವರೆಲ್ಲಾ ಶಾಕ್ ಆಗುತ್ತಾರೆ. ಎಲ್ಲರೂ ಕಣ್ಣು ಬಾಯಿ ಬಿಟ್ಟು ನೋಡುತ್ತಿರುವಾಗ ಶ್ರಾವಣಿ ʼಸುಬ್ಬು ಯಾಕೋ ಹೀಗೆ ಎಲ್ಲರೂ ಆಶ್ಚರ್ಯದಿಂದ ನೋಡ್ತಾ ಇದೀರಾ, ಯಾಕೆ ನಾನು ಬರ್ಬಾದಿತ್ತಾ?ʼ ಅಂತ ಪ್ರಶ್ನೆ ಮಾಡ್ತಾಳೆ. ಆಗ ಸಾವರಿಸಿಕೊಂಡ ಸುಬ್ಬು ಹಾಗೇನಿಲ್ಲ ಮೇಡಂ ಸಡನ್ ಆಗಿ ಬಂದ್ರಲ್ಲ ಅದಕ್ಕೆ ಗಾಬರಿ ಆಯ್ತು. ಬನ್ನಿ ಬನ್ನಿ ಕುಳಿತುಕೊಳ್ಳಿʼ ಎಂದು ಆದರ ತೋರುತ್ತಾನೆ. ಕಾಂತಮ್ಮ ಯಾರು ಎಂಬುದು ಅರಿವಿಲ್ಲದ ಶ್ರಾವಣಿ ಇವರ್ಯಾರು ಎಂದು ಪ್ರಶ್ನೆ ಮಾಡುತ್ತಾಳೆ. ಆಗ ಪದ್ಮನಾಭ ʼನಮ್ಮ ಅಳಿಯಂದಿರ ಅಮ್ಮ, ಅವರು ಅಳಿಯಂದಿರ ಜೊತೆ ಇಲ್ಲೇ ಇರಲು ಬಂದಿದ್ದಾರೆʼ ಎಂದು ಹೇಳುತಾರೆ.
ಅದನ್ನ ಕೇಳಿ ಶ್ರಾವಣಿ ಕೋಪಗೊಳ್ಳುತ್ತಾಳೆ. ಕೋಪದಿಂದ ಸುಬ್ಬು ಭಾವನ ಕಡೆಗೆ ನೋಡುತ್ತಾಳೆ. ಆಗ ಅವನು ʼಹೇ ಇಲ್ಲಾ ಮೇಡಂ, ಇವರು ವೆಕೇಷನ್‌ಗೆ ಬಂದಿರೋದು. ಸ್ವಲ್ಪ ದಿನ ಇದ್ದು ಹೋಗ್ತಾರೆʼ ಅಂತ ತಡಬಡಾಯಿಸುತ್ತಾನೆ. ಆಗ ಕಾಂತಮ್ಮ ʼಹೇ ನಾನು ಇಲ್ಲೇ ಇರೋಕೇ ಬಂದೋಳು, ಇಲ್ಲೇ ಇರ್ತೀನಿ, ಅದನ್ನೆಲ್ಲಾ ಕೇಳೋಕೆ ನೀನ್ಯಾರುʼ ಎಂದು ಪ್ರಶ್ನೆ ಮಾಡುತ್ತಾಳೆ. ಇದರಿಂದ ಶ್ರಾವಣಿ ಕೋಪಗೊಳ್ಳುತ್ತಾಳೆ ಪರಿಸ್ಥಿತಿ ಹದಗೆಡುತ್ತೆ ಎಂದು ಅರಿತ ಸುಬ್ಬು ಅಪ್ಪ ಪದ್ಮನಾಭ ಶ್ರಾವಣಿಗೆ ನೀರು ಕೊಡುವಂತೆ ಸುಬ್ಬುಗೆ ಹೇಳುತ್ತಾರೆ. ಸುಬ್ಬು ಶ್ರಾವಣಿಯನ್ನು ಕರೆದುಕೊಂಡು ಅಡುಗೆಮನೆಗೆ ಹೋಗುತ್ತಾನೆ. ಆಗ ತನ್ನ ತಾಯಿಗೆ ಶ್ರಾವಣಿ ಮಿನಿಸ್ಟರ್ ಮಗಳು ಎಂಬ ಸತ್ಯವನ್ನು ಹೇಳುತ್ತಾನೆ ಸುಬ್ಬು ಭಾವ.
ಸುಬ್ಬುಗೆ ಬೈಕ್ ಕೊಡಿಸಲು ಶ್ರೀವಲ್ಲಿ ಆತ್ಮಹತ್ಯೆ ನಾಟಕ
ಸುಬ್ಬುಗೆ ಬೈಕ್ ಹೊಸ ಬೈಕ್ ಕೊಡಿಸಲು ನಿರ್ಧಾರ ಮಾಡುತ್ತಾಳೆ ಶ್ರೀವಲ್ಲಿ. ಆದರೆ ಕೇಳಿದ ತಕ್ಷಣ ಮನೆಯಲ್ಲಿ ಕೊಡಿಸುವುದಿಲ್ಲ ಎಂದು ಅರಿತಿದ್ದ ಅವಳು ಆತ್ಮಹತ್ಯೆ ನಾಟಕ ಮಾಡಬೇಕೆಂದು ನಿರ್ಧಾರ ಮಾಡುತ್ತಾಳೆ. ಅಮ್ಮ-ಅಪ್ಪನ ಮುಂದೆ ಬೈಕ್ ಬೇಕೇ ಬೇಕು ಎಂದು ಹಟ ಮಾಡುತ್ತಾಳೆ. ಆದರೆ ಘಟವಾಣಿ ಅಮ್ಮ ಹೆಣ್ಣುಮಕ್ಕಳಿಗೆ ಬೈಕ್ ಯಾಕೆ, ನೀನು ಬೈಕ್ ತಗೊಂಡು ಏನ್ ಮಾಡ್ತೀಯಾ ಎಂದು ಪ್ರಶ್ನೆ ಮಾಡುತ್ತಾರೆ. ಆಗ ಶ್ರೀವಲ್ಲಿ ಅದೆಲ್ಲಾ ನಿಂಗ್ಯಾಕೆ ನೀವು ಬೈಕ್ ಕೊಡಿಸಿಲ್ಲ ಅಂದ್ರೆ ನಾನು ಊಟ ತಿಂಡಿ ಏನು ಮಾಡೋಲ್ಲ ಅಂತ ಅಪ್ಪನ ಮುಂದೆ ಹೇಳುತ್ತಾರೆ. ಆಗ ಆಕೆಯ ಅಮ್ಮ ʼಅವಳು ತಿಂದಿಲ್ಲ ಅಂದ್ರೆ ಬಿಡ್ಲಿ, ಹಸಿವಾದಾಗ ತಾನಾಗಿಯೇ ತಿಂತಾಳೆ, ನೀವೇನು ಟೆನ್‌ಷನ್ ಮಾಡ್ಬೇಡಿʼ ಅಂತ ಗಂಡನಿಗೆ ಹೇಳುತ್ತಾಳೆ. ತಾನೆಷ್ಟು ಹಟ ಮಾಡಿದ್ರು ಅಮ್ಮ-ಅಮ್ಮ ಬಗ್ಗುವುದಿಲ್ಲ ಎಂದು ತಿಳಿದ ಶ್ರಾವಣಿ ಫಿನಾಯಿಲ್ ಕುಡಿಯುಲು ಮುಂದಾಗುತ್ತಾಳೆ. ಹೆದರುವ ಅಮ್ಮ-ಅಮ್ಮ ಆಯ್ತು ಬೈಕ್ ಕೊಡಿಸುತ್ತೇವೆ ಎಂದು ಭರವಸೆ ನೀಡುತ್ತಾರೆ. ಆಗ ಶ್ರೀವಲ್ಲಿ ನಾನು ಹೇಳಿದ ಬೈಕ್ ಅನ್ನೇ ನೀವು ಕೊಡಿಸಬೇಕು. ಆಮೇಲೆ ಬೈಕ್ ಎಲ್ಲಿ ಹೋಯ್ತು, ಏನು ಎಂದು ನೀವು ಕೇಳಬಾರದು ಅಂತ ಹೇಳ್ತಾಳೆ. ಅದಕ್ಕೂ ಒಪ್ಪುವ ಅಪ್ಪ-ಅಮ್ಮ ಬೈಕ್ ಕೊಡಿಸಲು ಸಿದ್ಧರಾಗುತ್ತಾರೆ.
ಪ್ರೆಸ್ ಕಾನ್ಫರೆನ್ಸ್ ನಡೆಯಲೇಬೇಕು ಎನ್ನುವ ವಿಜಯಾಂಬಿಕಾ ಮೇಲೆ ಸುರೇಂದ್ರಗೆ ಅನುಮಾನ
ನಾಡಿದ್ದು ನಡೆಯುವ ಪ್ರೆಸ್ ಕಾನ್ಫರೆನ್ಸ್ ಬಗ್ಗೆ ತಮ್ಮ ಸುರೇಂದ್ರನ ಬಳಿ ಮಾತನಾಡುತ್ತಾ, ಕಾನ್ಫರೆನ್ಸ್ ಎದುರಿಸಲು ಒಂದಿಷ್ಟು ಸಿದ್ಧತೆಗಳು ಬೇಕು, ಹಾಗಾಗಿ ಸದ್ಯ ಕಾನ್ಫರೆನ್ಸ್ ಮುಂದಕ್ಕೆ ಹಾಕೋಣ ಎನ್ನುತ್ತಿರುತ್ತಾನೆ. ಆ ಹೊತ್ತಿಗೆ ಅಲ್ಲಿಗೆ ಮುಂಗುಸಿಯಂತೆ ಬರುವ ವಿಜಯಾಂಬಿಕ ಹಾಗೂ ಮದನ್ ಪ್ರೆಸ್ ಕಾನ್ಫರೆನ್ಸ್ ನಡೆಯಲೇಬೇಕು ಎಂದು ವೀರೇಂದ್ರನ ತಲೆ ಕೆಡಿಸಲು ಸಿದ್ಧರಾಗುತ್ತಾರೆ. ಅಲ್ಲದೇ ವಿಜಯಾಂಬಿಕಾ ತಮ್ಮನ ಬಳಿ ನೀನು ಪ್ರೆಸ್ ಕಾನ್ಫರೆನ್ಸ್ ಮಾಡಿಲ್ಲ ಅಂದ್ರೆ ವಿರೋಧ ಪಕ್ಷದವರಿಗೆ ನಿನ್ನ ವಿರುದ್ಧ ಮಾತನಾಡಲು ಅವಕಾಶ ಮಾಡಿಕೊಟ್ಟಂತೆ ಆಗುತ್ತದೆ. ಹಾಗಾಗಿ ನೀನು ಈ ಕಾನ್ಫರೆನ್ಸ್ ಕ್ಯಾನ್ಸಲ್ ಮಾಡುವುದು ಮುಂದಕ್ಕೆ ಹಾಕುವುದು ಮಾಡಬೇಡ ಎಂದು ಸಲಹೆ ನೀಡುತ್ತಾಳೆ. ಅದನ್ನು ಕೇಳಿದ ವೀರೇಂದ್ರ ಅವರಿಗೆ ಅಕ್ಕನ ಮಾತು ಸರಿ ಅನ್ನಿಸುತ್ತದೆ. ಅಲ್ಲದೇ ಪ್ರೆಸ್ ಕಾನ್ಫರೆನ್ಸ್‌ಗೆ ಸಿದ್ಧತೆ ಮಾಡಿಕೊಳ್ಳುವಂತೆ ಸುರೇಂದ್ರಗೆ ಹೇಳುತ್ತಾರೆ. ಆದರೆ ಎಂದೂ ಇಂತಹ ವಿಚಾರಗಳಲ್ಲಿ ತಲೆ ಹಾಕದ ಅಕ್ಕ ಇವತ್ತು ತಲೆ ಹಾಕಿದ್ದು ನೋಡಿ ಸುರೇಂದ್ರನ ಮನಸ್ಸಿನಲ್ಲಿ ಅನುಮಾನ ಮೂಡುತ್ತದೆ.
ಶ್ರೀವಲ್ಲಿ ಸುಬ್ಬುಗೆ ಬೈಕ್ ಕೊಡಿಸ್ತಾಳಾ, ಕಾಂತಮನನ್ನು ಸುಬ್ಬು ಮನೆಯಿಂದ ಓಡಿಸ್ತಾಳಾ ಶ್ರಾವಣಿ, ಪ್ರೆಸ್ ಕಾನ್ಫರೆನ್ಸ್‌ನಲ್ಲಿ ವೀರೇಂದ್ರ ಅವರಿಗೆ ಅವಮಾನ ಆಗೋದನ್ನು ತಡಿತಾನಾ ಸುಬ್ಬು ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.