ಕನ್ನಡ ಸುದ್ದಿ  /  ಮನರಂಜನೆ  /  ಸುಬ್ಬುಗಾಗಿ ಸೌಟು ಹಿಡಿದ ಶ್ರಾವಣಿ; ಪ್ರೆಸ್‌ ಕಾನ್ಫರೆನ್ಸ್‌ಗೆ ಎಂಟ್ರಿ ಕೊಟ್ಟ ರೌಡಿ ರಿಪೋರ್ಟರ್‌; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ‌

ಸುಬ್ಬುಗಾಗಿ ಸೌಟು ಹಿಡಿದ ಶ್ರಾವಣಿ; ಪ್ರೆಸ್‌ ಕಾನ್ಫರೆನ್ಸ್‌ಗೆ ಎಂಟ್ರಿ ಕೊಟ್ಟ ರೌಡಿ ರಿಪೋರ್ಟರ್‌; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ‌

Shravani Subramanya Kannada Serial Today Episode June 18th: ʼಶ್ರಾವಣಿ ಸುಬ್ರಹ್ಮಣ್ಯʼ ಧಾರಾವಾಹಿಯ ಮಂಗಳವಾರದ ಎಪಿಸೋಡ್‌ನಲ್ಲಿ ವೀರೇಂದ್ರ ಮಾನ ಕಳೆಯುವ ಸಲುವಾಗಿ ಪ್ರೆಸ್‌ಮೀಟ್‌ಗೆ ಎಂಟ್ರಿ ಕೊಟ್ಟ ಕೇಡಿ ರಿರ್ಪೋಟರ್‌. ತಮ್ಮನಿಗಾಗುವ ಅವಮಾನ ನೋಡುವ ತವಕದಲ್ಲಿ ವಿಜಯಾಂಬಿಕ. ಸುಬ್ಬುಗಾಗಿ ಶ್ರಾವಣಿ ಮಾಡಿದ್ಲು ಗುಲಾಬ್‌ ಜಾಮೂನ್‌, ವೆಜಿಟೇಬಲ್‌ ಪಲಾವ್‌.

ಸುಬ್ಬುಗಾಗಿ ಸೌಟು ಹಿಡಿದ ಶ್ರಾವಣಿ; ಪ್ರೆಸ್‌ ಕಾನ್ಫರೆನ್ಸ್‌ಗೆ ಎಂಟ್ರಿ ಕೊಟ್ಟ ರೌಡಿ ರಿಪೋರ್ಟರ್‌
ಸುಬ್ಬುಗಾಗಿ ಸೌಟು ಹಿಡಿದ ಶ್ರಾವಣಿ; ಪ್ರೆಸ್‌ ಕಾನ್ಫರೆನ್ಸ್‌ಗೆ ಎಂಟ್ರಿ ಕೊಟ್ಟ ರೌಡಿ ರಿಪೋರ್ಟರ್‌

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ನಿನ್ನೆಯ (ಜೂನ್‌ 18) ಸಂಚಿಕೆಯಲ್ಲಿ ಪ್ರಿಯತಮನೊಂದಿಗೆ ಅಣ್ಣನೆದುರು ಸಿಕ್ಕಿಬಿದ್ದ ವರಾಗೆ ಪಶ್ಚಾತ್ತಾಪ ಕಾಡುತ್ತಿದೆ. ಅಣ್ಣನ ಬಳಿ ಮನಸಾರೆ ಕ್ಷಮೆ ಕೇಳುವ ಆಕೆ ನೀನು ಹೇಳಿದ ಗೆರೆ ದಾಟುವುದಿಲ್ಲ ಎಂದು ಪ್ರಾಮಿಸ್‌ ಮಾಡುತ್ತಾಳೆ. ವರನ ಬಾಯ್‌ಫ್ರೆಂಡ್‌ ಕೂಡ ನಿಮ್ಮ ನಿರ್ಧಾರ ಏನೇ ಇದ್ದರೂ ನಾವು ಅದನ್ನು ಗೌರವಿಸುತ್ತೇವೆ ಸ್ವೀಕರಿಸುತ್ತೇವೆ ಎಂದು ಹೇಳಿ ಸುಬ್ಬುಗೆ ತನ್ನ ಬಳಿ ವಿಚಾರಿಸಿ ನಿರ್ಧಾರ ತೆಗೆದುಕೊಳ್ಳುವಂತೆ ಹೇಳುತ್ತಾನೆ. ಆದರೆ ಸುಬ್ಬು ಮಾತ್ರ ಯಾವುದೇ ನಿರ್ಧಾರ ಹೇಳದೇ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ವರ್ತಿಸಿ ಅವರನ್ನು ಮನೆಗೆ ಕಳುಹಿಸುತ್ತಾನೆ.

ಸುಬ್ಬುಗಾಗಿ ಸೌಟು ಹಿಡಿದ ಶ್ರಾವಣಿ

ಸುಬ್ಬು ಹೇಳಿಕೊಟ್ಟ ಐಡಿಯಾದಂತೆ ಅಪ್ಪನ ಹಣೆಗೆ ಕುಂಕುಮ ಇಡುವ ಶ್ರಾವಣಿ ಆ ಖುಷಿಯನ್ನು ಹಂಚಿಕೊಳ್ಳಲು ಚಿಕ್ಕಮ್ಮನಲ್ಲಿಗೆ ಓಡಿ ಬರುತ್ತಾಳೆ. ಚಿಕ್ಕಮ್ಮ, ಪಿಂಕಿ ಬಳಿ ಕುಂಕುಮ ಇಡಲು ಸುಬ್ಬು ಐಡಿಯಾ ಹೇಳಿ ಕೊಟ್ಟಿದ್ದು, ಕುಂಕುಮ ಇಟ್ಟುಕೊಂಡಿದ್ದು ಈ ಎಲ್ಲವನ್ನೂ ಹೇಳಿ ಸಂಭ್ರಮಿಸುತ್ತಾಳೆ. ಆಗ ಪಿಂಕಿ ಅಕ್ಕ ನೀನು ಸುಬ್ಬುಗೆ ಏನೂ ಗಿಫ್ಟ್‌ ಕೊಡಲ್ವಾ, ನಮಗೆ ಉಪಕಾರ ಮಾಡಿದವರಿಗೆ ಗಿಫ್ಟ್‌ ಕೊಡಬೇಕು ಅಂತ ನೀನೇ ಹೇಳ್ತಾ ಇದ್ದೆ ಎಂದು ಪ್ರಶ್ನೆ ಮಾಡ್ತಾಳೆ. ಆಗ ಶ್ರಾವಣಿಗೂ ಸುಬ್ಬುಗೆ ಗಿಫ್ಟ್‌ ಕೊಡಬೇಕು ಅನ್ನಿಸುತ್ತದೆ. ಗಿಫ್ಟ್‌ ಅಂತ ಕೊಟ್ರೆ ಸುಬ್ಬು ತಗೊಳೊಲ್ಲ ಎಂದು ಅರಿತ ಶ್ರಾವಣಿ ಅವನಿಗಾಗಿ ವಿಶೇಷ ಖಾದ್ಯಗಳನ್ನು ತಯಾರಿಸಬೇಕು ಎಂದು ನಿರ್ಧಾರ ಮಾಡ್ತಾರೆ. ಅಡುಗೆಮನೆಯಲ್ಲಿ ಚಿಕ್ಕಮ್ಮ ಹೇಳಿಕೊಟ್ಟಂತೆ ವೆಜಿಟೇಬಲ್‌ ಪಲಾವ್‌, ಗುಲಾಬ್‌ ಜಾಮೂನ್‌ ಮಾಡುತ್ತಾಳೆ. ಅವಳು ಮಾಡಿದ ಅಡುಗೆ ಸಖತ್‌ ಟೇಸ್ಟಿ ಆಗಿದೆ ಎಂದು ಚಿಕ್ಕಮ್ಮ, ಪಿಂಕಿ ಹೊಗಳುತ್ತಾರೆ. ಈಗ ಶ್ರಾವಣಿಗೆ ಈ ಅಡುಗೆಯನ್ನು ಸುಬ್ಬುಗೆ ಹೇಗೆ ಕೊಡುವುದು ಎಂದು ಯೋಚನೆ ಬರುತ್ತದೆ. ಆಗ ಶ್ರಾವಣಿ ತಾನೇ ಪ್ರೆಸ್‌ ಕಾನ್ಫರೆನ್ಸ್‌ ನಡೆಯುತ್ತಿರುವ ಜಾಗಕ್ಕೆ ಹೋಗಿ ಸುಬ್ಬು ತಾನು ಮಾಡಿರುವ ಅಡುಗೆ ತಿನ್ನಿಸುವ ನಿರ್ಧಾರಕ್ಕೆ ಬರುತ್ತಾರೆ.

ಟ್ರೆಂಡಿಂಗ್​ ಸುದ್ದಿ

ವರಗೆ ಮನೆಯವರ ಭಯ, ಕಾಂತಮ್ಮಂಗೆ ವರ ಮೇಲೆ ಕಣ್ಣು

ಅಣ್ಣನ ಕೈಯಲ್ಲಿ ಸಿಕ್ಕಿ ಬಿದ್ದ ವರಗೆ ಮನೆಗೆ ಬಂದ ಮೇಲೂ ನೆಮ್ಮದಿಯಿಲ್ಲ. ಎಲ್ಲಿ ಅಣ್ಣ ಮನೆಯವರ ಬಳಿ ತನ್ನ ವಿಚಾರ ಹೇಳಿದ್ದಾನೋ ಎಂಬ ಭಯ ಅವಳನ್ನು ಕಾಡುತ್ತಿರುತ್ತದೆ. ರೂಮ್‌ನಲ್ಲಿ ಟೆನ್‌ಷನ್‌ನಲ್ಲಿ ಕೂತ ವರಗೆ ಬಾಯ್‌ಫ್ರೆಂಡ್‌ ಕಾಲ್‌ ಬರುತ್ತದೆ. ಅವನಿಗೂ ವರ ಮನೆಯಲ್ಲಿ ಏನು ನಡೆದಿರಬಹುದು ಎಂಬ ಚಿಂತೆ ಇರುತ್ತದೆ. ಆದರೆ ವರ ಅವನೊಂದಿಗೆ ಸರಿಯಾಗಿ ಮಾತನಾಡದೇ ಕಾಲ್‌ ಕಟ್‌ ಮಾಡುತ್ತಾಳೆ. ಇತ್ತ ಕಾಂತಮ್ಮಂಗೆ ವರ ಮೇಲೆ ಅನುಮಾನ ಶುರುವಾಗುತ್ತದೆ. ವರ ಏನೋ ನಡೆಸುತ್ತಿದ್ದಾಳೆ, ಅದು ಏನು ಎಂಬುದನ್ನು ಕಂಡುಹಿಡಿಯಬೇಕು ಎಂದು ಕಾಂತಮ್ಮ ನಿರ್ಧಾರ ಮಾಡ್ತಾಳೆ.

ವೀರೇಂದ್ರಗೆ ಅವಮಾನ ಮಾಡಲು ಶತ್ರುಗಳು ಸಜ್ಜು

ವೀರೇಂದ್ರ ಪ್ರೆಸ್‌ ಕಾನ್ಫರೆನ್ಸ್‌ಗೆ ಮದನ್‌ ನೇಮಕ ಮಾಡಿದ ರಿಪೋರ್ಟರ್‌ ಬರುತ್ತಾನೆ. ಪ್ರೆಸ್‌ ಕಾನ್ಫರೆನ್ಸ್‌ಗೆ ಸ್ಯಾಟಲೈಟ್‌ ಚಾನೆಲ್‌ಗಳ ರಿಪೋರ್ಟರ್‌ಗಳಿಗಷ್ಟೇ ಎಂಟ್ರಿ ಎಂದು ಅವನನ್ನು ತಡೆಯುತ್ತಾರೆ ಪೊಲೀಸರು. ಆದರೆ ಮಿನಿಸ್ಟರ್‌ ಬರುವ ಹೊತ್ತಿಗೆ ಗಲಾಟೆ ಆಗುವುದು ಬೇಡ ಎಂದುಕೊಳ್ಳುವ ಸುಬ್ಬು ಹಿಂದೆ ಮುಂದೆ ವಿಚಾರಿಸದೇ ಅವನನ್ನು ಕಾನ್ಫರೆನ್ಸ್‌ ರೂಮ್‌ ಒಳಗೆ ಬಿಟ್ಟುಕೊಳ್ಳುತ್ತಾನೆ. ಇತ್ತ ರಿಪೋರ್ಟರ್‌ ದೆಸೆಯಿಂದ ವೀರೇಂದ್ರಗೆ ಆಗುವ ಅವಮಾನವನ್ನು ಟಿವಿಯಲ್ಲಿ ನೋಡಬೇಕು ಎಂದು ವಿಜಯಾಂಬಿಕ ಹಾಗೂ ಅವಳ ಮಗ ಮದನ್‌ ಸಜ್ಜಾಗುತ್ತಾರೆ. ಟಿವಿ ವ್ಯಾಲ್ಯೂಮ್‌ ಜಾಸ್ತಿ ಇಟ್ಟು ಶ್ರಾವಣಿಯೂ ಕೇಳಿಸಿಕೊಳ್ಳಬೇಕು, ತನ್ನಿಂದ ಅಪ್ಪನಿಗಾಗುವ ಅವಮಾನದಿಂದ ಅವಳು ಕುಗ್ಗಿ ಹೋಗಬೇಕು ಎಂದು ಪ್ಲಾನ್‌ ಮಾಡುತ್ತಾರೆ. ಆದರೆ ಶ್ರಾವಣಿ ಮಾತ್ರ ಚಿಕ್ಕಮ್ಮನಿಗೆ ಗೊತ್ತಾಗದಂತೆ ಮನೆಯಿಂದ ಹೊರ ಹೋಗಿ ಪ್ರೆಸ್‌ ಕಾನ್ಫರೆನ್ಸ್‌ ನಡೆಯುವ ಜಾಗಕ್ಕೆ ಹೋಗಬೇಕು ಎಂದು ನಿರ್ಧಾರ ಮಾಡ್ತಾರೆ.

ಪ್ರೆಸ್‌ ಕಾನ್ಫರೆನ್ಸ್‌ನಲ್ಲಿ ರಿಪೋರ್ಟರ್‌ ಕೇಳುವ ಪ್ರಶ್ನೆಗೆ ವೀರೇಂದ್ರ ಉತ್ತರ ಏನಿರಬಹುದು, ಶ್ರಾವಣಿಯ ಕುಂಕುಮ ನಿಜಕ್ಕೂ ವೀರೇಂದ್ರಗೆ ಜಯ ತಂದುಕೊಡುತ್ತಾ, ಪ್ರೆಸ್‌ ಕಾನ್ಫರೆನ್ಸ್‌ ನಡೆಯುವ ಜಾಗಕ್ಕೆ ಹೋಗ್ತಾಳಾ ಶ್ರಾವಣಿ, ಇದರಿಂದ ಒಳಿತಾಗುತ್ತಾ ಕೆಡುಗುತ್ತಾ, ಶತ್ರುಗಳಿಗೆ ಸೋಲಾಗುತ್ತಾ, ಗೆಲುವಾಗುತ್ತ ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.