ಕನ್ನಡ ಸುದ್ದಿ  /  ಮನರಂಜನೆ  /  ಸುಬ್ಬು ಪ್ಲಾನ್‌ನಂತೆ ಅಪ್ಪನ ಹಣೆಗೆ ಕುಂಕುಮ ಇಟ್ಟ ಶ್ರಾವಣಿ, ಬಾಯ್‌ಫ್ರೆಂಡ್‌ ಜೊತೆ ಸಿಕ್ಕಿಬಿದ್ಲು ವರ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ‌

ಸುಬ್ಬು ಪ್ಲಾನ್‌ನಂತೆ ಅಪ್ಪನ ಹಣೆಗೆ ಕುಂಕುಮ ಇಟ್ಟ ಶ್ರಾವಣಿ, ಬಾಯ್‌ಫ್ರೆಂಡ್‌ ಜೊತೆ ಸಿಕ್ಕಿಬಿದ್ಲು ವರ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ‌

Shravani Subramanya Kannada Serial Today Episode June 17th: ʼಶ್ರಾವಣಿ ಸುಬ್ರಹ್ಮಣ್ಯʼ ಧಾರಾವಾಹಿಯ ಸೋಮವಾರದ ಎಪಿಸೋಡ್‌ನಲ್ಲಿ ಸುಬ್ಬು ಪ್ಲಾನ್‌ನಂತೆ ಅಪ್ಪನ ಹಣೆಗೆ ಕುಂಕುಮ ಇಡುತ್ತಾಳೆ ಶ್ರಾವಣಿ. ಹೋಟೆಲ್‌ನಲ್ಲಿ ಬಾಯ್‌ಫ್ರೆಂಡ್‌ ಜೊತೆ ಅಣ್ಣನ ಮುಂದೆ ಸಿಕ್ಕಿ ಬೀಳುತ್ತಾಳೆ ವರಲಕ್ಷ್ಮಿ. ಇತ್ತ ಶ್ರೀವಲ್ಲಿಗೆ ಸುಬ್ಬು ಜೊತೆ ಮದುವೆ, ಸಂಸಾರದ ಕನಸು.

ಸುಬ್ಬು ಪ್ಲಾನ್‌ನಂತೆ ಅಪ್ಪನ ಹಣೆಗೆ ಕುಂಕುಮ ಇಟ್ಟ ಶ್ರಾವಣಿ, ಬಾಯ್‌ಫ್ರೆಂಡ್‌ ಜೊತೆ ಸಿಕ್ಕಿಬಿದ್ಲು ವರ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ‌
ಸುಬ್ಬು ಪ್ಲಾನ್‌ನಂತೆ ಅಪ್ಪನ ಹಣೆಗೆ ಕುಂಕುಮ ಇಟ್ಟ ಶ್ರಾವಣಿ, ಬಾಯ್‌ಫ್ರೆಂಡ್‌ ಜೊತೆ ಸಿಕ್ಕಿಬಿದ್ಲು ವರ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ‌

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ನಿನ್ನೆಯ (ಜೂನ್‌ 17) ಸಂಚಿಕೆಯಲ್ಲಿ ದೇವಸ್ಥಾನದಲ್ಲಿ ಅಪ್ಪನ ಹೆಸರಿನಲ್ಲಿ ಅರ್ಚನೆ ಮಾಡಿಸಿಕೊಂಡು ಬರುವ ಶ್ರಾವಣಿ ಅಪ್ಪನ ಹಣೆಗೆ ಕುಂಕುಮ ಇಡುವುದು ಹೇಗೆ ಎಂದು ಸುಬ್ಬು ಬಳಿ ಪ್ಲಾನ್‌ ಕೇಳುತ್ತಾಳೆ. ಆಗ ಸುಬ್ಬು ಶ್ರಾವಣಿಗೆ ಒಂದು ಸೂಪರ್‌ ಡೂಪರ್‌ ಐಡಿಯಾ ನೀಡುತ್ತಾನೆ. ಫೋನ್‌ನಲ್ಲಿ ಸುಬ್ಬು ಶ್ರಾವಣಿಗೆ ʼಮೇಡಂ, ಯಜಮಾನರ ಕನ್ನಡದ ಮಧ್ಯ ಭಾಗದಲ್ಲಿ ಕುಂಕುಮ ಇಡಿ. ಅವರಿಗೆ ಆಗಾಗ ಕನ್ನಡಕವನ್ನ ಮಧ್ಯಭಾಗದಲ್ಲಿ ಒತ್ತಿಕೊಳ್ಳುವ ಅಭ್ಯಾಸ ಇದೆ. ನೀವು ಅಲ್ಲಿ ಕುಂಕುಮ ಇಟ್ರೆ, ಖಂಡಿತ ಅವರ ಹಣೆಗೆ ಕುಂಕುಮ ತಾಕುತ್ತೆʼ ಅಂತ ಐಡಿಯಾ ಹೇಳುತ್ತಾನೆ. ಸುಬ್ಬು ಹೇಳಿದಂತೆ ಕುಂಕುಮಕ್ಕೆ ಕೊಂಚ ನೀರು ಬೆರೆಸಿ, ಅಪ್ಪನಿಗೆ ಗೊತ್ತಾಗದಂತೆ ಕನ್ನಡಕದ ಮಧ್ಯ ಭಾಗದಲ್ಲಿ ಕುಂಕುಮ ಹಚ್ಚಿಡುತ್ತಾಳೆ ಶ್ರಾವಣಿ. ಕುಂಕುಮ ಹಚ್ಚುವ ಸಂದರ್ಭದಲ್ಲಿ ಧೈರ್ಯಕ್ಕಾಗಿ ಸುಬ್ಬು ಜೊತೆ ಕಾಲ್‌ನಲ್ಲಿ ಇರುವಂತೆ ಕೇಳಿಕೊಳ್ಳುತ್ತಾಳೆ ಶ್ರಾವಣಿ. ಕುಂಕುಮ ಹಚ್ಚಿ ಬಂದ ಸಂಭ್ರಮವನ್ನು ಸುಬ್ಬು ಜೊತೆ ಹಂಚಿಕೊಳ್ಳಬೇಕು ಎಂದು ಹಲೋ ಎಂದು ಹೇಳುವಾಗಲೇ ಪ್ರೆಸ್‌ ಕಾನ್ಫರೆನ್ಸ್‌ ಉದ್ದೇಶದಿಂದ ಹೋಟೆಲ್‌ನಲ್ಲಿದ್ದ ಸುಬ್ಬುಗೆ ಹೋಟೆಲ್‌ ಮ್ಯಾನೇಜರ್‌ ಕರೆಯುತ್ತಾರೆ. ಅರ್ಧಕ್ಕೆ ಕಾಲ್‌ ಕಟ್‌ ಮಾಡುವ ಸುಬ್ಬು ಮ್ಯಾನೇಜರ್‌ ಜೊತೆ ಮೇಲ್ವಿಚಾರಣೆಗಾಗಿ ತೆರಳುತ್ತಾನೆ.

ಟ್ರೆಂಡಿಂಗ್​ ಸುದ್ದಿ

ಸುಬ್ಬು ಇರುವ ಹೋಟೆಲ್‌ಗೆ ಬಂದ ವರಲಕ್ಷ್ಮೀ

ಎಂದಿನಂತೆ ಬಾಯ್‌ಫ್ರೆಂಡ್‌ ಜೊತೆ ಹೋಟೆಲ್‌ನಲ್ಲಿ ಕುಳಿತು ಟೈಮ್‌ ಪಾಸ್‌ ಮಾಡುತ್ತಿರುತ್ತಾಳೆ ವರಲಕ್ಷ್ಮೀ. ಅವಳಿಗೆ ತನ್ನ ಅಣ್ಣನು ಅದೇ ಹೋಟೆಲ್‌ನಲ್ಲಿ ಇದ್ದಾನೆ ಎಂಬುದರ ಅರಿವು ಕೂಡ ಇರುವುದಿಲ್ಲ. ಬಾಯ್‌ಫ್ರೆಂಡ್‌ ಅತ್ತ ಹೋದಾಗ ಕಾಲೇಜ್‌ ಫ್ರೆಂಡ್‌ನಿಂದ ಆಕೆಗೊಂದು ಕಾಲ್‌ ಬರುತ್ತೆ, ಆ ಫ್ರೆಂಡ್‌ ಇವಳ ಬಳಿ ನೋಟ್ಸ್‌ ಕೇಳುತ್ತಾಳೆ. ಅದಕ್ಕೆ ವರ ಬ್ಯಾಗ್‌ನಲ್ಲಿರುವ ನೋಟ್ಸ್‌ ನೋಡಲು ಎದ್ದು ನಿಂತಾಗ ಕಿಂಡಿಯಲ್ಲಿ ಅಣ್ಣ ನಿಂತಿರುವುದು ಕಾಣಿಸುತ್ತದೆ. ಅಣ್ಣನನ್ನು ಹೋಟೆಲ್‌ನಲ್ಲಿ ನೋಡಿ ನಡುಗಿ ಹೋಗುತ್ತಾಳೆ ವರ. ತಕ್ಷಣಕ್ಕೆ ಏನು ಮಾಡಬೇಕು ಎಂದು ತಿಳಿಯದ ಆಕೆ ಅಲ್ಲಿಂದ ಹೊರಟು ನಿಲ್ಲುತ್ತಾಳೆ.

ವೀರೇಂದ್ರ ಹಣೆಯಲ್ಲಿ ಕುಂಕುಮ, ವಿಜಯಾಂಬಿಕಾ ಶಾಕ್‌

ಸುಬ್ಬು ಹೇಳಿದಂತೆ ಕನ್ನಡಕ ಹಾಕಿಕೊಂಡು ಹಣೆಯ ಭಾಗಕ್ಕೆ ಒತ್ತಿಕೊಳ್ಳುತ್ತಾರೆ ವೀರೇಂದ್ರ. ಇದನ್ನೆಲ್ಲಾ ದೂರದಿಂದ ನೋಡುತ್ತಿದ್ದ ಶ್ರಾವಣಿ ಸಿಕ್ಕಾಪಟ್ಟೆ ಖುಷಿಯಾಗುತ್ತಾಳೆ. ತಮ್ಮನಿಗೆ ಆರತಿ ನೀಡುವ ಸಲುವಾಗಿ ಹಾಲ್‌ಗೆ ಬರುವ ವಿಜಯಾಂಬಿಕ ಎಲ್ಲಾ ಒಳ್ಳೇದಾಗುತ್ತೆ ಎಂದು ಬಾಯಲ್ಲಿ ಹೇಳಿ ಮನಸ್ಸಿನಲ್ಲಿ ಕುತಂತ್ರಿಯಂತೆ ಯೋಚಿಸುತ್ತಾಳೆ. ಆ ವೇಳೆಗೆ ಪೇಪರ್‌ನಲ್ಲಿ ತನ್ನ ದಿನಭವಿಷ್ಯ ಓದುವ ವೀರೇಂದ್ರ ಆತ್ಮೀಯರಿಂದಲೇ ಮೋಸ ಎಂದಿರುವುದನ್ನ ಹಾಗೂ ಕಾಣದ ಕೈಯೊಂದು ನಿಮ್ಮನ್ನ ರಕ್ಷಿಸುತ್ತದೆ ಎಂದಿರುವುದನ್ನು ಓದುತ್ತಾರೆ. ಇದನ್ನು ಕೇಳಿ ಕ್ಷಣ ಗಾಬರಿಗೊಳ್ಳುವ ವಿಜಯಾಂಬಿಕಾಗೆ ವೀರೇಂದ್ರ ಕನ್ನಡಕ ತೆಗೆಯುತ್ತಿದ್ದಂತೆ ಬರಸಿಡಲು ಬಡಿದಂತಾಗುತ್ತದೆ. ಸುಬ್ಬು ಶ್ರಾವಣಿಗೆ ಕೊಟ್ಟ ಐಡಿಯಾದಂತೆ ವೀರೇಂದ್ರ ಹಣೆಯಲ್ಲಿ ಕುಂಕುಮ ಅಂಟಿರುತ್ತದೆ. ಇದನ್ನ ಕಂಡ ಶ್ರಾವಣಿ ಹಿಗ್ಗಿದರೆ, ವಿಜಯಾಂಬಿಕಾ ಶ್ರಾವಣಿ ದೇವಸ್ಥಾನಕ್ಕೆ ಹೋಗಿ ಬಂದು ಅಪ್ಪನಿಗೆ ಕುಂಕುಮ ಇಡಬೇಕು ಎಂದು ಹೇಳಿದ್ದನ್ನೇ ನೆನಪಿಸಿಕೊಳ್ಳುತ್ತಾಳೆ. ಆದರೆ ಶ್ರಾವಣಿಗೆ ವೀರೇಂದ್ರಗೆ ಹಣೆಗೆ ಕುಂಕುಮ ಹೇಗೆ ಇಟ್ಟಿದ್ದು ಎಂಬುದು ಮಾತ್ರ ಅವಳ ಅರಿವಿಗೆ ಬರುವುದಿಲ್ಲ.

ಬಾಯ್‌ಫ್ರೆಂಡ್‌ ಜೊತೆ ಸಿಕ್ಕಿ ಬೀಳುವ ವರ

ಅಣ್ಣನನ್ನು ತಾನಿರುವ ಹೋಟೆಲ್‌ನಲ್ಲೇ ನೋಡಿದ ವರ ತಪ್ಪಿಸಿಕೊಳ್ಳಲು ಗಡಿಬಿಡಿಯಲ್ಲಿ ಹೊರಟು ಬಿಡುತ್ತಾಳೆ. ಕದ್ದುಮುಚ್ಚಿ ಹೋಗುವ ಭರದಲ್ಲಿ ವೇಟರ್‌ಗೆ ಡಿಕ್ಕಿ ಹೊಡೆದು ಅವನ ಕೈಯಲ್ಲಿರುವುದೆಲ್ಲಾ ಕೆಳಗೆ ಬೀಳುತ್ತದೆ. ಆಗ ಸುಬ್ಬು ಸೇರಿದಂತೆ ಅಲ್ಲಿದ್ದವರೆಲ್ಲಾ ತಿರುಗಿ ನೋಡುತ್ತಾರೆ. ಸುಬ್ಬುಗೆ ವರಳನ್ನು ನೋಡಿ ಅನುಮಾನ ಬಂದು ಹತ್ತಿರ ಬರುತ್ತಾನೆ. ವೇಟರ್‌ಗೆ ಸಾರಿ ಕೇಳಿ ಎದ್ದು ನಿಲ್ಲುವ ವರ ತಿರುಗಿ ನೋಡಿದಾಗ ಅಣ್ಣ ಎಂದು ನಿಂತಿರುತ್ತಾನೆ. ಆ ಹೊತ್ತಿಗೆ ಸರಿಯಾಗಿ ಬಾಯ್‌ಫ್ರೆಂಡ್‌ ಕೂಡ ಬಂದು ʼವರ ಯಾಕೆ ಏನಾಯ್ತು, ಎಲ್ಲಿಗೆ ಹೋಗ್ತಾ ಇದೀಯಾ?ʼ ಎಂದು ಪ್ರಶ್ನೆ ಮಾಡುತ್ತಾನೆ. ಆಗ ಸುಬ್ಬುಗೆ ಪರಿಸ್ಥಿತಿ ಅರಿವಾಗುತ್ತದೆ. ತನ್ನ ತಂಗಿ ಪ್ರೀತಿಯಲ್ಲಿ ಬಿದ್ದಿರುವ ವಿಚಾರ ತಿಳಿಯುತ್ತದೆ.

ತಂಗಿಯ ಪ್ರೀತಿಯ ವಿಚಾರ ತಿಳಿದ ಸುಬ್ಬು ಮಂಕಾಗುತ್ತಾನೆ, ಅವರಿಬ್ಬರನ್ನು ಬದಿಗೆ ಕರೆದುಕೊಂಡು ಹೋಗಿ ಮಾತನಾಡಬೇಕು ಅನ್ನುವಷ್ಟರಲ್ಲಿ ಸುಬ್ಬು ತಾಯಿ ಕಾಲ್‌ ಮಾಡುತ್ತಾರೆ. ಅವರ ವರಲಕ್ಷ್ಮೀ ಕೋಚಿಂಗ್‌ ಹೋಗುವ ಗಡಿಬಿಡಿಯಲ್ಲಿ ಪುಸ್ತಕ ಮರೆತು ಹೋಗಿದ್ದಾಳೆ, ಓದುವ ಹುಡುಗಿಗೆ ತೊಂದರೆ ಆಗುವುದು ಬೇಡ. ನೀನು ಈ ಕಡೆ ಬಂದರೆ ಅವಳಿಗೆ ಪುಸ್ತಕ ತೆಗೆದುಕೊಂಡು ಹೋಗಿ ಕೊಡು ಎನ್ನುತ್ತಾರೆ. ಲೌಡ್‌ಸ್ಪೀಕರ್‌ನಲ್ಲಿ ಅಮ್ಮನ ಮಾತು ಕೇಳಿ ವರಲಕ್ಷ್ಮೀ ಕಣ್ಣೀರು ಹಾಕಿದರೆ ಅವರ ಬಾಯ್‌ಫ್ರೆಂಡ್‌ಗೆ ಪಶ್ಚಾತ್ತಾಪ ಭಾವ ಮೂಡುತ್ತದೆ.

ವರಳ ಪ್ರೀತಿ ವಿಚಾರದಲ್ಲಿ ಸುಬ್ಬು ನಿರ್ಧಾರವೇನು?

ವರಲಕ್ಷ್ಮೀ ಹಾಗೂ ಅವಳ ಬಾಯ್‌ಫ್ರೆಂಡ್‌ ಅನ್ನು ಹೋಟೆಲ್‌ನಿಂದ ಹೊರಗಡೆ ಕರೆದುಕೊಂಡು ಹೋಗುವ ಸುಬ್ಬು ವರಲಕ್ಷ್ಮೀ ಬಳಿ ʼವರ ನೀನ್ಯಾಕೆ ಹೀಗೆ ಮಾಡಿದೆ, ನನ್ನ ಬಳಿ ಇರುವ ವಿಚಾರ ಹೇಳಬಹುದಿತ್ತು. ಎಲ್ಲರೂ ಇದ್ದರೆ ವರಲಕ್ಷ್ಮೀ ಹಾಗೆ ಇರಬೇಕು ಅಂದುಕೊಳ್ಳುವ ಸ್ವಭಾವ ನಿಂದು, ಆದ್ರೂ ನೀನು ಹೀಗ್ಯಾಕಾದೆ ಎಂದು ಪ್ರಶ್ನೆ ಮಾಡುತ್ತಾನೆ ಸುಬ್ಬು. ಸುಬ್ಬುವಿನ ಎಲ್ಲಾ ಪ್ರಶ್ನೆಗೆ ವರಳದ್ದು ಕಣ್ಣೀರಿನ ಉತ್ತರವಾದ್ರೆ, ವರನ ಬಾಯ್‌ಫ್ರೆಂಡ್‌ ʼಸುಬ್ಬು ಅವರೇ, ಇದ್ರಲ್ಲಿ ವರಲಕ್ಷ್ಮೀದು ಯಾವುದೇ ತಪ್ಪಿಲ್ಲ. ಅವಳನ್ನ ಮೊದಲು ಇಷ್ಟಪಟ್ಟಿದ್ದು ನಾನು, ಮೊದಲು ಪ್ರೀತಿ ಹೇಳಿಕೊಂಡಿದ್ದು ನಾನು, ಈಗ ವರಗೆ ನನ್ನ ಪ್ರೀತಿನೂ ಬಿಡೋಕಾಗ್ದೆ, ಆಚೆ ಮನೆಯವರ ಬಳಿ ಹೇಳೋಕು ಆಗ್ದೆ ಒದ್ದಾಡ್ತಾ ಇದಾಳೆ. ಈಗ ನಿಮಗೆ ಹೇಗೋ ವಿಷ್ಯಾ ಗೊತ್ತಾಗಿದೆ. ಈಗ ನೀವೇ ಒಂದು ನಿರ್ಧಾರಕ್ಕೆ ಬರಬೇಕುʼ ಎಂದು ಮನವಿ ಮಾಡುತ್ತಾನೆ. ಆದರೆ ಸುಬ್ಬು ಮಾತ್ರ ಮಾತು ಹೊರಡವನಂತೆ ನಿಂತಿರುತ್ತಾನೆ.

ಇತ್ತ ವಿಜಯಾಂಬಿಕ ಹಾಗೂ ಮದನ್‌ ಪ್ರೆಸ್‌ ಕಾನ್ಫರೆನ್ಸ್‌ ಹಾಳು ಮಾಡಲು ಎಲ್ಲಾ ಪ್ಲಾನ್‌ ಮಾಡುತ್ತಿರುತ್ತಾರೆ.

ವೀರೇಂದ್ರ ಅವರ ರಾಜಕೀಯ ಭವಿಷ್ಯ ನಿರ್ಧರಿಸುವ ಪ್ರೆಸ್‌ ಕಾನ್ಫೆರನ್ಸ್‌ ಯಾವುದೇ ಅಡಚಣೆಯಾಗದೇ ಯಶಸ್ವಿಯಾಗುತ್ತಾ ಅಥವಾ ವಿಜಯಾಂಬಿಕಾ-ಮದನ್‌ ಪ್ಲಾನ್‌ ಫಲಿಸಿ ಗೆಲುವು ಅವರ ಪಾಲಿಗಾಗುತ್ತಾ, ತಂಗಿ ವರಲಕ್ಷ್ಮೀಯ ಪ್ರೀತಿ ವಿಚಾರ ತಿಳಿದ ಸುಬ್ಬುವಿನ ನಿರ್ಧಾರವೇನು, ಶ್ರೀವಲ್ಲಿ ಕಂಡಂತೆ ಸುಬ್ಬು ಮದುವೆಯಾಗುವ ಅವಳ ಕನಸು ನನಸಾಗುತ್ತಾ, ದಿನಭವಿಷ್ಯದಲ್ಲಿ ಇದ್ದಂತೆ ವೀರೇಂದ್ರ ಅವರನ್ನು ಕಾಯುವ ಕಾಣದ ಕೈ ಶ್ರಾವಣಿದ್ದೇ ಆಗಿರುತ್ತಾ ಈ ಎಲ್ಲಾವನ್ನೂ ಮುಂದಿನ ಸಂಚಿಕೆಯಲ್ಲಿ ನಿರೀಕ್ಷಿಸಿ.