ಕನ್ನಡ ಸುದ್ದಿ  /  ಮನರಂಜನೆ  /  ಅಪ್ಪನಿಗೆ ಕೈ ತುತ್ತಿಟ್ಟು, ಮುತ್ತಿಟ್ಟ ಶ್ರಾವಣಿ; ಮಗಳ ವಿಚಾರದಲ್ಲಿ ಬದಲಾದ್ರಾ ವೀರೇಂದ್ರ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

ಅಪ್ಪನಿಗೆ ಕೈ ತುತ್ತಿಟ್ಟು, ಮುತ್ತಿಟ್ಟ ಶ್ರಾವಣಿ; ಮಗಳ ವಿಚಾರದಲ್ಲಿ ಬದಲಾದ್ರಾ ವೀರೇಂದ್ರ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

Shravani Subramanya Kannada Serial Today Episode June 20th: ʼಶ್ರಾವಣಿ ಸುಬ್ರಹ್ಮಣ್ಯʼ ಧಾರಾವಾಹಿಯ ಗುರುವಾರದ ಎಪಿಸೋಡ್‌ನಲ್ಲಿ ಮಿಡಿಯಾ ಮುಂದೆ ಅಪ್ಪನನ್ನ ಮನಸಾರೆ ಹೊಗಳುವ ಶ್ರಾವಣಿ ಮೊದಲ ಬಾರಿ ಅಪ್ಪನಿಗೆ ಕೈ ತುತ್ತು ತಿನ್ನಿಸಿ, ಮುತ್ತಿಡುತ್ತಾಳೆ, ಮಾತ್ರವಲ್ಲ ಅಪ್ಪಂದಿರ ದಿನಕ್ಕೆ ವಿಶ್‌ ಮಾಡುತ್ತಾಳೆ. ಮಗಳ ವಿಚಾರದಲ್ಲಿ ಬದಲಾದ್ರಾ ವೀರೇಂದ್ರ.

ಅಪ್ಪನಿಗೆ ಕೈ ತುತ್ತಿಟ್ಟು, ಮುತ್ತಿಟ್ಟ ಶ್ರಾವಣಿ; ಮಗಳ ವಿಚಾರದಲ್ಲಿ ಬದಲಾದ್ರಾ ವೀರೇಂದ್ರ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾ
ಅಪ್ಪನಿಗೆ ಕೈ ತುತ್ತಿಟ್ಟು, ಮುತ್ತಿಟ್ಟ ಶ್ರಾವಣಿ; ಮಗಳ ವಿಚಾರದಲ್ಲಿ ಬದಲಾದ್ರಾ ವೀರೇಂದ್ರ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾ

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ನಿನ್ನೆಯ (ಜೂನ್‌ 20) ಸಂಚಿಕೆಯಲ್ಲಿ ಪ್ರೆಸ್‌ಗೆ ಬಂದು ಅಪ್ಪನ ಪರವಾಗಿ ಮಾತನಾಡಿ ಅಪ್ಪನನ್ನು ರಿಪೋರ್ಟರ್‌ ಪ್ರಶ್ನೆಗಳಿಂದ ಬಚಾವ್‌ ಮಾಡುತ್ತಾಳೆ. ʼಅಪ್ಪ ಎಂದರೆ ನನಗೆ ಸ್ನೇಹಿತನಂತೆ, ಅಪ್ಪ ಎಂಬ ಆಲದ ಮರದ ಕೆಳಗೆ ನಾನು ನೆಮ್ಮದಿಯಾಗಿದೀನಿ, ನನಗೆ ಅಪ್ಪನೇ ಸರ್ವಸ್ವʼ ಎಂದೆಲ್ಲಾ ಮನಸಾರೆ ಅಪ್ಪನನ್ನು ಹೊಗಳುತ್ತಾಳೆ ಶ್ರಾವಣಿ. ಮನದಲ್ಲಿ ಅಷ್ಟು ನೋವಿದ್ದರೂ ಆಕೆಯ ಮಾತುಗಳನ್ನು ಕೇಳಿ ಚಿಕ್ಕಮ್ಮ ವಂದನಾ, ತಂಗಿ ಪಿಂಕಿ, ಸುಬ್ಬು ಮನೆಯವರು ಕಣ್ತುಂಬಿಕೊಳ್ಳುತ್ತಾರೆ. ಆದರೆ ವಿಜಯಾಂಬಿಕ ಮತ್ತು ಮದನ್‌ಗೆ ಬೆಂಕಿ ಮೇಲೆ ಕುಳಿತಂತೆ ಭಾಸವಾಗುತ್ತಿರುತ್ತದೆ. ಮಗಳು ಇಷ್ಟೆಲ್ಲಾ ಮಾತನಾಡುತ್ತಿದ್ದರೂ ಮೌನವಾಗಿ ಕೇಳಿಸಿಕೊಳ್ಳುತ್ತಾ ಕುಳಿತಿರುತ್ತಾರೆ ವೀರೇಂದ್ರ.

ತನ್ನನ್ನು ದ್ವೇಷಿಸುವ ಅಪ್ಪನನ್ನು ಬಿಟ್ಟು ಕೊಡದ ಶ್ರಾವಣಿ

ಪರೀಕ್ಷೆಯ ಫೇಲ್‌ ಆದ ವಿಚಾರದ ಬಗ್ಗೆ ರಿಪೋರ್ಟರ್‌ ಕೇಳುವ ಪ್ರಶ್ನೆಗೆ ಉತ್ತರಿಸುವ ಶ್ರಾವಣಿ ಪರೀಕ್ಷೆಯಲ್ಲಿ ಫೇಲ್‌ ಆಗುವುದು ಸಹಜ, ಎಲ್ಲರೂ ಜೀವನದಲ್ಲಿ ಫೇಲ್‌ ಆಗುತ್ತಾರೆ. ಆದರೆ ನಂತರ ಪಾಸ್‌ ಆಗುತ್ತಾರೆ, ನಾನು ಅಷ್ಟೇ ಪರೀಕ್ಷೆಯಲ್ಲಿ ಫೇಲ್‌ ಆದ ಮಾತ್ರಕ್ಕೆ ನನ್ನ ಅಪ್ಪನ ಸಂಬಂಧ ಸರಿಯಿಲ್ಲ ಎಂದಲ್ಲ ನಾನು ಪರೀಕ್ಷೆ ಬರೆದಿದ್ದೇನೆ, ಈ ಬಾರಿ ಪಾಸ್‌ ಆಗುತ್ತೇನೆ ಎಂದು ಭರವಸೆಯಲ್ಲಿ ಮಾತನಾಡುತ್ತಾಳೆ. ತನ್ನನ್ನು ಎಂದಿಗೂ ಕಡೆಗಣಿಸುವ ಅಪ್ಪನನ್ನು ಎಲ್ಲಿಯೂ ಬಿಟ್ಟು ಕೊಡದ ಶ್ರಾವಣಿ ಅಪ್ಪನ ಗೌರವ ಹೆಚ್ಚುವಂತೆ ಮಾತನಾಡುತ್ತಾಳೆ.

ಕೊನೆಗೆ ಮಾಧ್ಯಮದವರ ಮುಂದೆ ನಿಂತು ಕೈ ಮುಗಿದು ಕೇಳಿಕೊಳ್ಳುವ ಶ್ರಾವಣಿ ಇವತ್ತು ಅಪ್ಪಂದಿರ ದಿನ, ನಾನು ಅಪ್ಪನಿಗಾಗಿ ನನ್ನ ಕೈಯಾರೆ ಅಡುಗೆ ಮಾಡಿ ತಂದಿದ್ದೇನೆ, ಅದನ್ನು ನಾನು ಅಪ್ಪನಿಗೆ ತಿನ್ನಿಸಿ ಹೊರಟು ಬಿಡುತ್ತೇನೆ. ನನಗೆ ಒಂದೈದು ನಿಮಿಷ ಸಮಯ ಕೊಡಿ ಕೇಳಿಕೊಳ್ಳುತ್ತಾಳೆ.

ಟ್ರೆಂಡಿಂಗ್​ ಸುದ್ದಿ

ಅಪ್ಪನಿಗೆ ವಿಶ್‌ ಮಾಡಿ ಮುತ್ತಿಡುವ ಶ್ರಾವಣಿ

ಪ್ರೆಸ್‌ ಕಾನ್ಫರೆನ್ಸ್‌ ಅರ್ಧಕ್ಕೆ ಹೋಲ್ಡ್‌ ಮಾಡಿಸುವ ಶ್ರಾವಣಿ ಅಪ್ಪನನ್ನು ಪಕ್ಕಕ್ಕೆ ಕರೆದು ತನ್ನ ಕೈಯಾರೆ ಊಟ ಬಡಿಸಿ ತಿನ್ನಿಸುತ್ತಾಳೆ. ನಂತರ ಅಪ್ಪಂದಿರ ದಿನದ ವಿಶ್‌ ಮಾಡುವ ಆಕೆ ಅಪ್ಪನನ್ನು ತಬ್ಬಿಕೊಂಡು ಮುತ್ತಿಡುತ್ತಾಳೆ. ಆಗ ಆಕೆಯ ಕಣ್ಣಲ್ಲಿ ಜೀವನದ ಸಾರ್ಥಕ ಭಾವ ಕಾಣಿಸುತ್ತದೆ. ಆಕೆಯ ತಿನ್ನುವಾಗಲೂ ಮುತ್ತಿಡುವಾಗಲೂ ಸುಮ್ಮನೆ ಇರುತ್ತಾರೆ ವೀರೇಂದ್ರ. ಇದನ್ನು ನೋಡಿದಾಗ ಮಗಳ ವಿಚಾರದಲ್ಲಿ ವೀರೇಂದ್ರ ನಿಜಕ್ಕೂ ಬದಲಾಗಿದ್ದಾರೆ ಎಂದು ಸುರೇಂದ್ರ, ಸುಬ್ಬು ಹಾಗೂ ಈ ದ್ರಶ್ಯವನ್ನು ಟಿವಿಯಲ್ಲಿ ನೋಡುತ್ತಿದ್ದವರೆಲ್ಲರೂ ಅಂದುಕೊಳ್ಳುತ್ತಾರೆ.

ಅಪ್ಪನಿಗೆ ಊಟ ಬಡಿಸಿದ ಶ್ರಾವಣಿ ಹೊರಡಲು ಸಿದ್ಧಳಾಗುತ್ತಾಳೆ. ಅವಳನ್ನು ಹೊರಗಡೆ ಕರೆದುಕೊಂಡು ಬಂದು ನಿಂತಿರುತ್ತಾರೆ ಸುಬ್ಬು. ಆ ಹೊತ್ತಿಗೆ ಕಾನ್ಫರೆನ್ಸ್‌ ಮುಗಿಸಿ ಬರುವ ವೀರೇಂದ್ರ ಮಗಳಿಗೂ ತಮ್ಮೊಂದಿಗೆ ಬರುವಂತೆ ಕೈಸನ್ನೆ ಮಾಡಿ ಕರೆಯುತ್ತಾರೆ. ಇದರಿಂದ ಶ್ರಾವಣಿ ಮತ್ತಷ್ಟು ಸಂಭ್ರಮಗೊಳ್ಳುತ್ತಾಳೆ. ಇತ್ತ ಅಣ್ಣನ ಮಾನ ಉಳಿಸಿದ ಸುಬ್ಬುಗೆ ಮನಸಾರೆ ಧನ್ಯವಾದ ಹೇಳಿ ಮನೆಗೆ ಹೊರಡುತ್ತಾರೆ ಸುರೇಂದ್ರ.

ಒಂಟಿಯಾಗಿ ಇರಲು ಬಯಸುವ ವೀರೇಂದ್ರ

ಮನೆಗೆ ಬರುವ ವೀರೇಂದ್ರ ಒಬ್ಬರೇ ಕುಳಿತು ಮದ್ಯ ಸೇವಿಸುತ್ತಿರುತ್ತಾರೆ. ಮಗಳು ಕಾನ್ಫರೆನ್ಸ್‌ನಲ್ಲಿ ಮಾಡಿದ್ದೆಲ್ಲಾ ನೆನಪಿಗೆ ಬರುತ್ತದೆ. ಆ ಹೊತ್ತಿಗೆ ಅಣ್ಣನ ಬಳಿಗೆ ಬರುವ ಸುರೇಂದ್ರ ಅಣ್ಣನನ್ನು ಈ ಸ್ಥಿತಿಯಲ್ಲಿ ನೋಡಿ ಶಾಕ್‌ ಆಗುತ್ತಾರೆ. ಅಲ್ಲದೇ ಏನಾಯ್ತು ಅಣ್ಣಾ ಎಂದು ಕೇಳಲು ಹೊರಟಾಗ ನನಗೆ ಸದ್ಯ ಒಂಟಿಯಾಗಿ ಇರಬೇಕು ಯಾರೂ ಇಲ್ಲಿಗೆ ಬರಬೇಡಿ ಎಂದು ಕಿರುಚುತ್ತಾರೆ, ಮಾತ್ರವಲ್ಲ ನಾಳೆಯ ನನ್ನ ಎಲ್ಲಾ ಪ್ಲಾನ್‌ ಕ್ಯಾನ್ಸಲ್‌ ಮಾಡಿಸು ಎಂದು ಸುರೇಂದ್ರಗೆ ಆರ್ಡರ್‌ ಮಾಡುತ್ತಾರೆ. ಶ್ರಾವಣಿ ವಿಚಾರದಲ್ಲಿ ವೀರೇಂದ್ರ ಬದಲಾಗುತ್ತಾರೆ ಎಂದು ಭಾವಿಸಿದ್ದವರಿಗೆ ನಿರಾಸೆ ಕಾಡೋದು ಖಚಿತ ಎನ್ನಿಸುತ್ತದೆ. ವೀರೇಂದ್ರಗೆ ಅಕ್ಕ ವಿಜಯಾಂಬಿಕ ಮೋಸ ಅರ್ಥವಾಗಿ ಶ್ರಾವಣಿಯೇ ತನ್ನ ಮಗಳು ಎಂದು ತಿಳಿಯುವುದು ಯಾವಾಗ?

ವರನ ಬಾಯ್‌ಫ್ರೆಂಡ್‌ ಮೇಲೆ ಸುಬ್ಬುಗೆ ಬಂತು ನಂಬಿಕೆ

ವರಲಕ್ಷ್ಮೀ ಮನೆಗೆ ಹೋದಾಗಿನಿಂದ ಬಾಯ್‌ಫ್ರೆಂಡ್‌ ಕಾಲ್‌ ಕೂಡ ರಿಸೀವ್‌ ಮಾಡಿರುವುದಿಲ್ಲ. ಅವನು ಮನೆಯಲ್ಲೇ ಟೆನ್‌ಷನ್‌ನಲ್ಲಿ ಕುಳಿರುತ್ತಾನೆ. ಸಂಜೆ ಮನೆಗೆ ಬರುವ ಸುಬ್ಬು ಅವನನ್ನು ಮೀಟ್‌ ಮಾಡುತ್ತಾನೆ. ಅಲ್ಲದೇ ವರಳ ಬಗ್ಗೆ ಅವಳ ಓದಿನ ಬಗ್ಗೆ ತಮಗಿರುವ ಕನಸನ್ನು ಅವನ ಮುಂದೆ ಹೇಳಿಕೊಳ್ಳುತ್ತಾನೆ. ಆಗ ಅವನು ಅದಕ್ಕಾಗಿ ನಾನು ಹಾಗೂ ವರ ಎಷ್ಟು ವರ್ಷ ಬೇಕಾದ್ರೂ ಕಾಯುತ್ತೇನೆ ಎಂದು ಹೇಳಿ ಹೊರಡುತ್ತಾನೆ. ಆಗ ಸುಬ್ಬುಗೆ ಅವನ ಮೇಲೆ ನಂಬಿಕೆ ಹೆಚ್ಚಾಗುತ್ತದೆ, ಅಲ್ಲದೇ ಮೊದಲ ಭೇಟಿಯಲ್ಲಿ ತನ್ನ ಬಗ್ಗೆ ವಿಚಾರಿಸಿ ನಿರ್ಧಾರ ತೆಗೆದುಕೊಳ್ಳಿ ಎಂದು ಹೇಳಿರುವುದು ನೆನಪಾಗುತ್ತದೆ. ಒಟ್ಟಾರೆ ಸುಬ್ಬುಗೆ ವರನಿಗೆ ಅವನು ಒಳ್ಳೆಯ ಜೋಡಿ ಅನ್ನಿಸುತ್ತದೆ.

ಶ್ರಾವಣಿ ವಿಚಾರದಲ್ಲಿ ವೀರೇಂದ್ರ ಬದಲಾಗುತ್ತಾರಾ? ವಿಜಯಾಂಬಿಕ ಆಟಕ್ಕೆ ಕೊನೆ ಎಂದು? ಶ್ರಾವಣಿ ತಾಯಿ ಯಾರು? ಇದನ್ನೆಲ್ಲಾ ತಿಳಿಬೇಕು ಅಂದ್ರೆ ಮುಂದಿನ ಸಂಚಿಕೆಗಳನ್ನು ನಿರೀಕ್ಷಿಸಿ.