ಕನ್ನಡ ಸುದ್ದಿ  /  ಮನರಂಜನೆ  /  ಅಪ್ಪನ ಪ್ರೀತಿ ಗಳಿಸುವ ಶ್ರಾವಣಿ ಕನಸು ನುಚ್ಚು ನೂರು; ವರನ ಪ್ರೀತಿಗೆ ಸಿಕ್ತು ಅಣ್ಣನ ಒಪ್ಪಿಗೆ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

ಅಪ್ಪನ ಪ್ರೀತಿ ಗಳಿಸುವ ಶ್ರಾವಣಿ ಕನಸು ನುಚ್ಚು ನೂರು; ವರನ ಪ್ರೀತಿಗೆ ಸಿಕ್ತು ಅಣ್ಣನ ಒಪ್ಪಿಗೆ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

Shravani Subramanya Kannada Serial Today Episode June 21st: ʼಶ್ರಾವಣಿ ಸುಬ್ರಹ್ಮಣ್ಯʼ ಧಾರಾವಾಹಿಯ ಶುಕ್ರವಾರದ ಎಪಿಸೋಡ್‌ನಲ್ಲಿ ಸುಬ್ಬು ಟಿವಿಯಲ್ಲಿ ಕಂಡ ಖುಷಿಗೆ ದೃಷ್ಟಿ ತೆಗೆಯುವ ಮನೆಯವರು. ಅಪ್ಪನ ಬದಲಾದ್ರೂ ಎಂಬ ಖುಷಿಯಲ್ಲಿ ಹಾರಾಡುವ ಶ್ರಾವಣಿಗೆ ಸತ್ಯದ ಅರಿವು. ವರನ ಪ್ರೀತಿಗೆ ಸುಬ್ಬು ನೀಡಿದ ಗ್ರೀನ್‌ ಸಿಗ್ನಲ್‌.

ಅಪ್ಪನ ಪ್ರೀತಿ ಗಳಿಸುವ ಶ್ರಾವಣಿ ಕನಸು ನುಚ್ಚು ನೂರು; ವರನ ಪ್ರೀತಿಗೆ ಸಿಕ್ತು ಅಣ್ಣನ ಒಪ್ಪಿಗೆ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ
ಅಪ್ಪನ ಪ್ರೀತಿ ಗಳಿಸುವ ಶ್ರಾವಣಿ ಕನಸು ನುಚ್ಚು ನೂರು; ವರನ ಪ್ರೀತಿಗೆ ಸಿಕ್ತು ಅಣ್ಣನ ಒಪ್ಪಿಗೆ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ನಿನ್ನೆಯ (ಜೂನ್‌ 21) ಸಂಚಿಕೆಯಲ್ಲಿ ಬೆಳಿಗ್ಗೆ ಎದ್ದು ಕಣ್ಣು ಬಿಟ್ಟಾಕ್ಷಣ ಸುಬ್ಬುಗೆ ಮಂಚದ ಸುತ್ತಲೂ ತನ್ನ ಮನೆಯವರು ಕುಳಿತಿರುವುದು ನೋಡಿ ಶಾಕ್‌ ಆಗುತ್ತದೆ. ಗಾಬರಿಯಿಂದ ಏಕೆ, ಏನಾಯ್ತು ಯಾಕೆಲ್ಲಾ ಇಲ್ಲಿ ಕೂತಿದ್ದೀರಿ? ಎಂದು ಕೇಳುವ ಮೊದಲೇ ಸುಬ್ಬು ತಂದೆ ಅನಂತಪದ್ಮನಾಭ ಮಡದಿ ವಿಶಾಲಾಕ್ಷಿ ಬಳಿ ʼವಿಶಾಲು ಆರತಿ ತಟ್ಟೆ ತೆಗೆದುಕೊಂಡು ಬಾʼ ಎಂದು ಗಡಿಬಿಡಿಯಲ್ಲಿ ಕಳುಹಿಸುತ್ತಾರೆ. ಆರತಿ ತಟ್ಟೆ ಹಿಡಿದು ಬರುವ ವಿಶಾಲಾಕ್ಷಿ ಸುಬ್ಬುಗೆ ಆರತಿ ಮಾಡಿ ದೃಷ್ಟಿ ತೆಗೆಯುತ್ತಾರೆ. ಕಾರಣ ಕೇಳಿದ್ರೆ ʼನೀನು ಟಿವಿಯಲ್ಲಿ ಕಾಣಿಸಿದ್ದು ಎಲ್ಲರ ದೃಷ್ಟಿಗೆ ಕಾರಣವಾಗಿರುತ್ತೆ, ಅದಕ್ಕೆ ದೃಷ್ಟಿ ತೆಗೆಯುತ್ತಿದ್ದೇನೆʼ ಎನ್ನುತ್ತಾರೆ. ತಂಗಿ ವರಲಕ್ಷ್ಮೀ, ಅಕ್ಕ ಧನಲಕ್ಷ್ಮೀ ಕೂಡ ದೃಷ್ಟಿ ತೆಗೆದು ಸುಬ್ಬು ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ಎಲ್ಲರೂ ಸುಬ್ಬು ಮೇಲೆ ಪ್ರೀತಿ, ಕಾಳಜಿ ತೋರುತ್ತಿದ್ದರೆ ಅನಂತಪದ್ಮನಾಭ ಮಾತ್ರ ಸುಬ್ಬು ಬಳಿ ʼನಿನ್ನೆ ಶ್ರಾವಣಿ ಅಮ್ಮೋರು ಅಷ್ಟೆಲ್ಲಾ ಖುಷಿಯಾಗಿರೋಕೆ ನೀನೇ ಕಾರಣ ಅಂತ ನಂಗೆ ಗೊತ್ತು. ಸಾವಿರಾರು ಹರಕೆ, ಹಾರೈಕೆಗಳಿಂದ ಹುಟ್ಟಿದ ಮಗು ಅದು. ಆ ಮಗು ಕೊನೆವರೆಗೂ ಚೆನ್ನಾಗಿರಬೇಕು, ನೀನು ಆ ಮಗುವನ್ನು ಚೆನ್ನಾಗಿ ನೋಡಿಕೊಳ್ಳಬೇಕುʼ ಎಂದು ಎಂದಿನಂತೆ ಸುಬ್ಬುಗೆ ಎಚ್ಚರಿಸುತ್ತಾರೆ.

ಸುಬ್ಬು ಬಗ್ಗೆ ಕೇವಲವಾಗಿ ಮಾತನಾಡುವ ಕಾಂತಮ್ಮ

ಸುಬ್ಬುವನ್ನು ಮನೆಯವರೆಲ್ಲಾ ಹೊಗಳಿ ಅಟ್ಟಕ್ಕೇರಿಸುವುದನ್ನು ಸಹಿಸದ ಕಾಂತಮ್ಮ ʼನಿಮ್ಮ ಸುಬ್ಬು ಮಿನಿಸ್ಟರ್‌ ಮನೆಯ ಕೆಲಸದಾಳು ಅಷ್ಟೇ, ಅವನೇನೂ ಅವರ ಮನೆ ಅಳಿಯ ಅಲ್ಲ. ಮಿನಿಸ್ಟರ್‌ ಅವನನ್ನು ಹತ್ತಿರಕ್ಕೂ ಸೇರಿಸುವುದಿಲ್ಲ. ಟಿವಿಯಲ್ಲಿ ಬಂದಾಕ್ಷಣ ಇವನೇನು ಹೀರೊ ಅಲ್ಲ, ಟಿವಿಯಲ್ಲಿ ಕೆಟ್ಟದ್ದು ಮಾಡಿದವರು ಬರ್ತಾರೆ. ಮಿನಿಸ್ಟರ್‌ ಮನೆಯಲ್ಲಿ ಚಾಕರಿ ಮಾಡುವ ಸುಬ್ಬುಗೆ ನೀವು ಮನೆಯವರೆಲ್ಲಾ ಹೀರೋ ರೀತಿ ನೋಡುತ್ತಿದ್ದೀರಿ ಎಂದು ವ್ಯಂಗ್ಯವಾಡುತ್ತಾಳೆ. ಅದಕ್ಕೆ ಸುಂದರನೂ ಧ್ವನಿಗೂಡಿಸುತ್ತಾನೆ. ಕಾಂತಮ್ಮ ವ್ಯಂಗ್ಯ ಪ್ರತಿಯಾಗಿ ಮಾತನಾಡಲು ಆಗದೇ ನಿಸ್ಸಾಹಯಕರಾಗುವ ಗಂಡನ ಮೇಲೆ ವಿಶಾಲಾಕ್ಷಿ ಕೋಪ ಮಾಡಿಕೊಳ್ಳುತ್ತಾಳೆ.

ಟ್ರೆಂಡಿಂಗ್​ ಸುದ್ದಿ

ಖುಷಿಯಲ್ಲಿ ತೇಲಾಡುವ ಶ್ರಾವಣಿ

ಅಪ್ಪನೊಂದಿಗೆ ನಿನ್ನೆ ಕಳೆದ ಕ್ಷಣಗಳನ್ನು ನೆನೆದು ಖುಷಿಯಲ್ಲಿ ತೇಲಾಡುವ ಶ್ರಾವಣಿ ತನ್ನ ಖುಷಿಯನ್ನು ಚಿಕ್ಕಮ್ಮ, ಚಿಕ್ಕಪ್ಪ ಹಾಗೂ ಪಿಂಕಿ ಮುಂದೆ ವ್ಯಕ್ತಪಡಿಸುತ್ತಿರುತ್ತಾಳೆ. ಅಪ್ಪ ಬದಲಾಗಿದ್ದಾರೆ, ಅವರು ನನ್ನನ್ನು ಪ್ರೀತಿಸಲು ಆರಂಭಿಸುತ್ತಾರೆ ಎಂದೆಲ್ಲಾ ಸಂಭ್ರಮದಿಂದ ಶ್ರಾವಣಿ ಮಾತನಾಡುತ್ತಿದ್ದರೂ ಚಿಕ್ಕಪ್ಪ ಸುರೇಂದ್ರ ಮಾತ್ರ ಯೋಚನೆಯಲ್ಲಿ ಮುಳುಗಿರುತ್ತಾರೆ. ಅವರಿಗೆ ತನ್ನ ಅಣ್ಣ ವೀರೇಂದ್ರ ರಾತ್ರಿ ನಡೆದುಕೊಂಡು ರೀತಿಯ ಬಗ್ಗೆ ಅನುಮಾನವಿರುತ್ತದೆ. ಆದರೂ ಶ್ರಾವಣಿ ಖುಷಿ ಹೀಗೆ ಇರಲಿ ಎಂದು ದೇವರ ಬಳಿ ಕೇಳಿಕೊಳ್ಳುತ್ತಾರೆ. ಶ್ರಾವಣಿ ಸಂಭ್ರಮಕ್ಕೆ ಜೊತೆಯಾಗುವ ಪಿಂಕಿ ಅಕ್ಕನ ಬಳಿ ನಿನ್ನೆಯ ದಿನವನ್ನು ಕ್ಯಾಲೆಂಡರ್‌ನಲ್ಲಿ ಮಾರ್ಕ್‌ ಮಾಡು ಎಂದು ನೆನಪಿಸುತ್ತಾಳೆ. ಕ್ಯಾಲೆಂಡರ್‌ನಲ್ಲಿ ಮಾರ್ಕ್‌ ಮಾಡುತ್ತಾ ಖುಷಿ ಹಂಚಿಕೊಳ್ಳುವ ಶ್ರಾವಣಿಗೆ ಮುಂದೆ ನಡೆಯುವ ಘಟನೆಗಳ ಊಹೆಯೂ ಇರುವುದಿಲ್ಲ.

ವರ-ವರದನ ಪ್ರೀತಿಗೆ ಸುಬ್ಬು ಒಪ್ಪಿಗೆ

ವರ ಹಾಗೂ ವರದನ ಪ್ರೀತಿ ವಿಚಾರವಾಗಿ ವರಲಕ್ಷ್ಮೀ ಬಳಿ ಮಾತನಾಡುವ ಸುಬ್ಬು ಅವಳಿಗೆ ಮದುವೆ, ಜೀವನ ಸಂಗಾತಿಯ ಜೊತೆಗೆ ಸ್ವಾಭಿಮಾನ ಎಷ್ಟು ಮುಖ್ಯ ಎಂಬುದನ್ನು ಹೇಳುತ್ತಾನೆ, ನೀನು ಓದಿ ನಿನ್ನ ಕಾಲ ಮೇಲೆ ನೀನು ನಿಲ್ಲುವುದು ಕೂಡ ಬಹಳ ಮುಖ್ಯ ಎಂದು ವರನಿಗೆ ಬುದ್ಧಿಮಾತು ಹೇಳುತ್ತಾನೆ. ಆಗ ವರ ಮಾತು ಎಂದಿಗೂ ಅಣ್ಣನ ಮಾತು ಮೀರುವುದಿಲ್ಲ ಎಂದು ಆಣೆ ಮಾಡುತ್ತಾಳೆ. ಆಗ ಸುಬ್ಬು ಮದುವೆ ಎನ್ನುವುದು ನಮ್ಮಿಬ್ಬರ ನಿರ್ಧಾರ ಮಾತ್ರವಲ್ಲ. ಮನೆಯವರೆಲ್ಲಾ ಒಪ್ಪಬೇಕು. ಸಮಯ ನೋಡಿ ಮನೆಯವರ ಜೊತೆ ಮಾತನಾಡುತ್ತೇನೆ, ಅಲ್ಲಿಯವರೆಗೆ ನೀನು ನಿನ್ನ ಓದು ಗುರಿಯ ಮೇಲೆ ಗಮನ ಹರಿಸು ಎಂದು ತಂಗಿ ಪ್ರೀತಿಗೆ ಒಪ್ಪಿಗೆ ಸೂಚಿಸುತ್ತಾನೆ.

ಅಪ್ಪನ ಪ್ರೀತಿ ಪಡೆಯುವ ಶ್ರಾವಣಿ ಕನಸು ನುಚ್ಚು ನೂರು

ಬೆಳಗೆದ್ದು ಮಂಕಾಗಿರುವ ವೀರೇಂದ್ರ ಅವರ ಬಳಿ ಯಾಕಣ್ಣ ಹೀಗಿದ್ದೀಯಾ ಎಂದು ವಿಚಾರಿಸುತ್ತಾರೆ ಸುರೇಂದ್ರ. ನನ್ನ ಮನಸ್ಸು ಒಡೆದು ಹೋಗಿದೆ. ನಂಗೆ ಯಾವ ಮೀಟಿಂಗ್‌, ಯಾರನ್ನೂ ಭೇಟಿ ಮಾಡೋಕೆ ಇಷ್ಟ ಇಲ್ಲ ಎಂದು ಹೇಳುತ್ತಾರೆ. ಅಕ್ಕನನ್ನು ಕರೆಯುವ ವೀರೇಂದ್ರ ʼನಾನು ಎಂದಿಗೂ ಅವಳ ನೆರಳು ನನ್ನ ಮೇಲೆ ಬೀಳಬಾರದು ಎಂದುಕೊಳ್ಳುತ್ತಿದ್ದೆ, ಆದರೆ ನಿನ್ನೆ ಅವಳು ಅಷ್ಟೆಲ್ಲಾ ಮಾತನಾಡುತ್ತಿದ್ದರೂ ಏನೂ ಮಾಡಲಾಗದೇ ಅಸಹಾಯಕ ಸ್ಥಿತಿಗೆ ತಲುಪಿದ್ದೆ. ಅವಳು ತಿನ್ನಿಸಿದ್ದ ಒಂದೊಂದು ತುತ್ತು ವಿಷ ತಿನ್ನಿಸಿದಂತಾಗಿತ್ತುʼ ಎಂದು ಹೇಳುವ ವೀರೇಂದ್ರ ಮಾತು ಕೇಳಿ ವಿಜಯಾಂಬಿಕ, ಮದನ್‌ ಮನದಲ್ಲೇ ಸಂತಸ ವ್ಯಕ್ತಪಡಿಸಿದ್ರೆ, ಸುರೇಂದ್ರ-ವಂದನಾ ಶ್ರಾವಣಿ ಬಗ್ಗೆ ಮರುಕ ವ್ಯಕ್ತಪಡಿಸುತ್ತಾರೆ. ಅಪ್ಪನ ಮಾತುಗಳನ್ನು ಕೇಳಿಸಿಕೊಳ್ಳುವ ಶ್ರಾವಣಿ ʼಇತ್ತೀಚಿನ ಬೆಳವಣಿಗೆಗಳನ್ನು ನೋಡಿ ನೀವು ನನ್ನ ವಿಚಾರದಲ್ಲಿ ಬದಲಾಗುತ್ತಿದ್ದೀರಿ ಎಂದುಕೊಳ್ಳುತ್ತಿದ್ದೆ, ಆದರೆ ಇವತ್ತು ನಿಮ್ಮ ಮಾತು ಕೇಳಿ ನನಗೆ ಎಲ್ಲಾ ಅರ್ಥ ಆಯ್ತು, ಇನ್ಯಾವತ್ತು ನಿಮಗೆ ನಾನು ತೊಂದರೆ ಕೊಡೊಲ್ಲ, ನನ್ನ ಕ್ಷಮಿಸಿಬಿಡಿʼ ಎಂದು ಅಳುತ್ತಾ ಕ್ಷಮೆ ಕೇಳುತ್ತಾಳೆ. ಶ್ರಾವಣಿ ಕಂಡ ಕನಸೆಲ್ಲಾ ನುಚ್ಚು ನೂರಾಗಿ ಬಿಡುತ್ತದೆ.

ಮಗಳ ವಿಚಾರದಲ್ಲಿ ವೀರೇಂದ್ರ ಬದಲಾಗುವುದೇ ಇಲ್ವಾ, ವಿಜಯಾಂಬಿಕ-ಮದನ್‌ ಕುತಂತ್ರಕ್ಕೆ ಅಂತ್ಯ ಯಾವಾಗಾ, ಕಾಂತಮ್ಮ ಹೇಳಿದಂತೆ ಸುಬ್ಬು ಆ ಮನೆಯ ಕೆಲಸದವನಾಗಿಯೇ ಉಳಿಯುತ್ತಾನಾ ಈ ಎಲ್ಲವನ್ನೂ ಕಾದು ನೋಡಬೇಕಿದೆ.