ಕನ್ನಡ ಸುದ್ದಿ  /  ಮನರಂಜನೆ  /  ಇನ್ನೆಂದೂ ಅಪ್ಪನ ಪ್ರೀತಿಗಾಗಿ ಹಂಬಲಿಸೊಲ್ಲ ಎಂದ ಶ್ರಾವಣಿ, ಸುಬ್ಬುವನ್ನ ಮನೆಯಿಂದ ಹೊರ ಹಾಕಿದ ಮದನ್‌; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

ಇನ್ನೆಂದೂ ಅಪ್ಪನ ಪ್ರೀತಿಗಾಗಿ ಹಂಬಲಿಸೊಲ್ಲ ಎಂದ ಶ್ರಾವಣಿ, ಸುಬ್ಬುವನ್ನ ಮನೆಯಿಂದ ಹೊರ ಹಾಕಿದ ಮದನ್‌; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

Shravani Subramanya Kannada Serial Today Episode June 24th: ʼಶ್ರಾವಣಿ ಸುಬ್ರಹ್ಮಣ್ಯʼ ಧಾರಾವಾಹಿಯ ಸೋಮವಾರದ ಎಪಿಸೋಡ್‌ನಲ್ಲಿ ಅಪ್ಪನ ಪ್ರೀತಿಗೆ ಹಂಬಲಿಸಿದ್ದ ಶ್ರಾವಣಿಗೆ ಸತ್ಯದ ಅರಿವು. ವೀರೇಂದ್ರ ಅವರ ಕುಟುಂಬದ ಬಗ್ಗೆ ಮಾತನಾಡಿದ್ದಕ್ಕೆ ಕಾಂತಮ್ಮ ಮೇಲೆ ರೇಗಿದ ಸುಬ್ಬ ತಂದೆ. ಸುಬ್ಬುವನ್ನು ಮನೆಯಿಂದ ಹೊರ ಹಾಕಿದ್ರು ಮದನ್‌, ವಿಜಯಾಂಬಿಕಾ.

ಇನ್ನೆಂದೂ ಅಪ್ಪನ ಪ್ರೀತಿಗಾಗಿ ಹಂಬಲಿಸೊಲ್ಲ ಎಂದ ಶ್ರಾವಣಿ, ಸುಬ್ಬುವನ್ನ ಮನೆಯಿಂದ ಹೊರ ಹಾಕಿದ ಮದನ್‌; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ
ಇನ್ನೆಂದೂ ಅಪ್ಪನ ಪ್ರೀತಿಗಾಗಿ ಹಂಬಲಿಸೊಲ್ಲ ಎಂದ ಶ್ರಾವಣಿ, ಸುಬ್ಬುವನ್ನ ಮನೆಯಿಂದ ಹೊರ ಹಾಕಿದ ಮದನ್‌; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ನಿನ್ನೆಯ (ಜೂನ್‌ 24) ಸಂಚಿಕೆಯಲ್ಲಿ ಬಾಲ್ಯದಿಂದಲೂ ಅಪ್ಪನ ಪ್ರೀತಿಗಾಗಿ ಹಂಬಲಿಸುತ್ತಿದ್ದ ಶ್ರಾವಣಿ ಇತ್ತೀಚಿನ ಘಟನೆಗಳನ್ನು ನೋಡಿ ಅಪ್ಪ ಬದಲಾಗಿದ್ದಾರೆ ಎಂದುಕೊಂಡಿದ್ದಳು. ಅಲ್ಲದೇ ಪ್ರೆಸ್‌ ಕಾನ್ಫರೆನ್ಸ್‌ನಲ್ಲಿ ತಾನು ಅಪ್ಪನ ಬಗ್ಗೆ ಅಷ್ಟೆಲ್ಲಾ ಮಾತನಾಡಿ, ಕೈತುತ್ತು ತಿನ್ನಿಸಿ, ಮುತ್ತು ನೀಡಿದಾಗಲೂ ಸುಮ್ಮನಿದ್ದ ಅಪ್ಪನನ್ನು ನೋಡಿ ಅವರು ನಿಜವಾಗಲೂ ಬದಲಾಗಿದ್ದಾರೆ ಎಂದು ಅಂದುಕೊಂಡಿದ್ದಳು. ಸುಬ್ಬು ಸೇರಿದಂತೆ ಪ್ರತಿಯೊಬ್ಬರಲ್ಲೂ ಅದೇ ಭಾವನೆ ಇತ್ತು. ಆದರೆ ಮರುದಿನ ವಿಜಯಾಂಬಿಕ ಮುಂದೆ ವೀರೇಂದ್ರ ಆಡಿದ ಮಾತುಗಳನ್ನು ಶ್ರಾವಣಿಯನ್ನು ಘಾಸಿಗೊಳಿಸುತ್ತವೆ. ತಾನು ಕೊಟ್ಟ ಕೈತುತ್ತು ವಿಷ ಎಂಬ ಅಪ್ಪನ ಮಾತು ಕೇಳಿ ಶ್ರಾವಣಿ ಕುಸಿದು ಹೋಗುತ್ತಾಳೆ. ಅಲ್ಲದೇ ಅಳುತ್ತಾ ಅಪ್ಪನ ಮುಂದೆ ಬಂದು ಇನ್ನೆಂದು ನಿಮ್ಮ ಎದುರು ಬರುವ, ನಿಮ್ಮ ಪ್ರೀತಿ ಪಡೆಯುವ ಪ್ರಯತ್ನ ಮಾಡುವುದಿಲ್ಲ ಎಂದು ಅಳುತ್ತಾ ರೂಮ್‌ಗೆ ಹೇಳುತ್ತಾಳೆ.

ಅಪ್ಪನ ಪ್ರೀತಿಗಾಗಿ ಕಾಯಲ್ಲ; ಶ್ರಾವಣಿ ಶಪಥ

ರೂಮ್‌ನಲ್ಲಿ ಕುಸಿದು ಕೂರುವ ಶ್ರಾವಣಿಯನ್ನು ನೋಡಿ ಚಿಕ್ಕಪ್ಪ-ಚಿಕ್ಕಮ್ಮ, ಪಿಂಕಿ ಕಂಗಾಲಾಗುತ್ತಾರೆ. ʼನಿಮ್ಮ ಅಪ್ಪ ಕೋಪದಲ್ಲಿ ಏನೋ ಹೇಳಿರಬೇಕುʼ ಎಂದು ಹೇಳಲು ಹೊರಟ ಚಿಕ್ಕಮ್ಮ ವಂದನಾ ಮಾತಿಗೆ ಅಡ್ಡ ಬರುವ ಶ್ರಾವಣಿ ʼಚಿಕ್ಕಮ್ಮ, ಅದು ಕೋಪದಿಂದ ಬಂದ ಮಾತಲ್ಲ. ಅವರ ಮನಸ್ಸಿನಿಂದ ಬಂದ ಮಾತು, ನಾನು ಚಿಕ್ಕಂದಿನಿಂದ ಬಯಸಿದ್ದು ಅಪ್ಪನ ಪ್ರೀತಿ ಮಾತ್ರ, ಅದು ಬಿಟ್ಟು ನಾನು ಯಾರ ಬಳಿಯೂ ಏನೂ ಕೇಳಿಲ್ಲ ಚಿಕ್ಕಮ್ಮ. ಆದರೆ ಅದು ಸಿಗುವುದಿಲ್ಲ ಎಂಬುದು ನನಗೆ ಇಂದು ಸ್ಪಷ್ಟವಾಯ್ತು. ಅಪ್ಪನಿಗೆ ನಾನು ತಿನ್ನಿಸಿದ ಕೈತುತ್ತು ವಿಷದಂತೆ ಭಾಸವಾಯ್ತು ಅಂದ್ರೆ ಅವರು ನನ್ನನ್ನು ಎಷ್ಟು ದ್ವೇಷಿಸಬಹುದು ಅರ್ಥ ಮಾಡಿಕೊಳ್ಳಿ ಚಿಕ್ಕಮ್ಮ, ನಾನು ಇಷ್ಟು ದಿನ ಅವರು ಬದಲಾಗ್ತಾರೆ ಅಂತ ಕಾದೆ, ಆದರೆ ಇನ್ನು ಮುಂದೆ ಅದು ಸಾಧ್ಯವಿಲ್ಲ. ಅವರು ನನ್ನ ವಿಚಾರದಲ್ಲಿ ಎಂದಿಗೂ ಬದಲಾಗುವುದಿಲ್ಲ. ಅದಕ್ಕಾಗಿ ನಾನೇ ಬದಲಾಗ್ತಿ. ಇನ್ನೆಂದೂ ಅವರ ಪ್ರೀತಿಗಾಗಿ ಕಾಯುವುದಿಲ್ಲ. ಅವರ ಮುಂದೆ ಹೋಗುವುದಿಲ್ಲ. ಅವರಿಗೆ ಇಷ್ಟವಿಲ್ಲದೇ ಯಾವುದೇ ಕೆಲಸ ಮಾಡುವುದಿಲ್ಲʼ ಎಂದು ಶಪಥ ಮಾಡಿದಂತೆ ಹೇಳುತ್ತಾರೆ. ಶ್ರಾವಣಿಯನ್ನು ಹೇಗೆ ಸಮಾಧಾನ ಮಾಡಬೇಕು ಎಂದು ತಿಳಿಯದ ಚಿಕ್ಕಮ್ಮ ಸುಬ್ಬುಗೆ ಕಾಲ್‌ ಮಾಡಿ ನಡೆದ ವಿಷಯವನ್ನೆಲ್ಲಾ ಹೇಳಿ ನೀನೇ ಮನೆಗೆ ಬಂದು ಶ್ರಾವಣಿಗೆ ಸಮಾಧಾನ ಮಾಡು ಎಂದು ರಿಕ್ವೆಸ್ಟ್‌ ಮಾಡಿಕೊಳ್ಳುತ್ತಾರೆ.

ಟ್ರೆಂಡಿಂಗ್​ ಸುದ್ದಿ

ಕಾಂತಮ್ಮನ ಮೇಲೆ ರೇಗಿದ ಅನಂತಪದ್ಮನಾಭ

ಸುಬ್ಬು ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿದ ಕಾಂತಮ್ಮ ಮೇಲೆ ಮನೆಯವರೆಲ್ಲರೂ ಕೋಪಗೊಂಡಿರುತ್ತಾರೆ. ಬೆಳಗೆದ್ದು ಕಾಫಿ ಕೂಡ ಕೊಡದೇ ಇದ್ದಾಗ ತಾವೇ ಹಾಲ್‌ಗೆ ಬಂದು ಕಾಫಿ ಕೇಳುತ್ತಾರೆ. ಎಲ್ಲರೂ ಮುಖ ಊದಿಸಿ ಕೊಂಡಿದ್ದನ್ನು ಕಂಡು ತಾನು ಹೇಳಿರುವ ವಿಚಾರಕ್ಕೆ ಎಲ್ಲರೂ ಕೋಪಗೊಂಡಿದ್ದಾರೆ ಎಂಬುದು ಕಾಂತಮ್ಮಗೆ ಅರ್ಥವಾಗುತ್ತೆ. ʼಅಲ್ಲಾ, ನಾನೇನು ತಪ್ಪು ಹೇಳಿದೆ ಎಂದು ನೀವೆಲ್ಲರೂ ಹೀಗೆ ಮುಖ ಊದಿಸಿಕೊಂಡಿದ್ದೀರಾ. ಈ ಮನೆಯಲ್ಲಿ ನನ್ನ ಮಗನೂ ಇದ್ದಾನೆ, ಸುಬ್ಬು ಮಾತ್ರ ಇರೋದಲ್ಲ. ಅಳಿಯನನ್ನು ಮನೆ ಮಗಳ ಥರವೇ ನೋಡಿಕೊಳ್ಳಬೇಕು. ಆದ್ರೆ ಈ ಮನೆಯಲ್ಲಿ ನನ್ನ ಮಗನಿಗೆ ಬೆಲೆಯೇ ಇಲ್ಲ. ಅವನಿಗೆ ಗೌರವ ಕೊಡುವವರೂ ಇಲ್ಲ ಎಂದೆಲ್ಲಾ ಮಗನ ಪರವಾಗಿ ಬ್ಯಾಟಿಂಗ್‌ ಮಾಡುತ್ತಾರೆ. ಅದಕ್ಕೆ ಸುಬ್ಬು ತಂದೆ ಅನಂತ ಪದ್ಮನಾಭ ಅವರು ಗೌರವ ಕೊಡುವ ಅಥವಾ ಹೊಗಳುವ ಕೆಲಸ ನಿಮ್ಮ ಮಗ ಏನೂ ಮಾಡಿಲ್ಲ ಎಂದು ನೇರವಾಗಿ ಹೇಳುತ್ತಾರೆ. ಆದರೂ ಅಷ್ಟಕ್ಕೆ ಸುಮ್ಮನಾಗದ ಕಾಂತಮ್ಮ ನಿಮ್ಮ ಮಗ ಯಾವತ್ತಿದ್ರೂ ಆ ಮನೆಯ ಆಳು. ನೀವು ಆ ಮನೆಯವರನ್ನು ತಲೆಯ ಮೇಲಿಟ್ಟು ಮೆರೆಸುತ್ತಿದ್ದೀರಾ ಅಷ್ಟೇ, ಇನ್ನು ಆ ಮಿನಿಸ್ಟರ್‌ ಮಗಳು ಈ ಮನೆಗೆ ಬಂದು ನನ್ನ ಮಗನಿಗೆ ಬೆದರಿಕೆ ಹಾಕುತ್ತಾಳೆ. ನನ್ನ ಮಗನ ಬಗ್ಗೆ ಮಾತನಾಡೋಕೆ ಅವಳ್ಯಾರು. ಇನ್ನೊಮ್ಮೆ ಅವಳು ನನ್ನ ಮಗನ ಬಗ್ಗೆ ಮಾತನಾಡಿದ್ರೆ ನಾನು ಸುಮ್ಮನಿರೊಲ್ಲ, ಅವರ ಮನೆಯ ವಿಚಾರ ಅಷ್ಟೇ ಅವರು ನೋಡಿಕೊಳ್ಳಿ. ಹೇಳೋಕೆ ದೊಡ್ಡ ಮಿನಿಸ್ಟರ್‌, ಮೊನ್ನೆ ಅವನ ಮಗಳು ಮೂರೇ ಮೂರು ನಿಮಿಷ ಲೇಟ್‌ ಆಗಿ ಬಂದಿದ್ರು ಆ ಮಿನಿಸ್ಟರ್‌ ಮರ್ಯಾದೆ ಹೋಗ್ತಾ ಇತ್ತು, ಆಮೇಲೆ ಆ ಮನೆ, ಮನೆಯವರ ಮರ್ಯಾದೆ ಬೀದಿಗೆ ಬರ್ತಾ ಇತ್ತು ಎಂದು ಏನೇನೋ ತಡಬಡಾಯಿಸುತ್ತಾರೆ. ಅಲ್ಲಿಯವರೆಗೆ ಕಾಂತಮ್ಮ ಮಾತಿಗೆ ಮನೆಯವರೆಲ್ಲರೂ ಅವಡುಗಚ್ಚಿ ಸುಮ್ಮನಿರುತ್ತಾರೆ. ಆದರೆ ಯಾವಾಗ ಕಾಂತಮ್ಮ ವೀರೇಂದ್ರ ಸರ್‌ದೇಸಾಯಿ ಕುಟುಂಬದ ಬಗ್ಗೆ ಮಾತನಾಡಲು ಆರಂಭಿಸುತ್ತಾರೋ ಆಗ ಒಮ್ಮೆಲೆ ರೋಷಗೊಳ್ಳುವ ಸುಬ್ಬು ತಂದೆ ಅನಂತ ಪದ್ಮನಾಭ, ʼಕಾಂತಮ್ಮ, ನಿನ್ನ ನಾಲಿಗೆ ಮೇಲೆ ಹಿಡಿತ ಇರಲಿ. ಇನ್ನೊಂದು ಮಾತು ಆ ಮನೆಯ ಬಗ್ಗೆ ಆಡಿದ್ರು ಚೆನ್ನಾಗಿರೊಲ್ಲ. ನಿಮಗೇನ್ರಿ ಗೊತ್ತು ಆ ಮನೆ ಬಗ್ಗೆ, ಮನೆಯವರ ಬಗ್ಗೆʼ ಎಂದು ಕೋಪದಲ್ಲಿ ರೇಗುತ್ತಾರೆ. ಗಂಡನ ಕೋಪ ಕಂಡ ವಿಶಾಲಾಕ್ಷಿಗೂ ಅಚ್ಚರಿಯಾಗುತ್ತದೆ. ಪದ್ಮನಾಭ ಅವರ ಉತ್ತರಕ್ಕೆ ಕಾಂತಮ್ಮ ನಡುಗಿ ಹೋಗುತ್ತಾರೆ.

ಸುಬ್ಬುಗೆ ಬರ್ಬೇಡ ಅಂದ ವೀರೇಂದ್ರ!

ವಂದನಾ ಮಾತು ಕೇಳಿ ಬೇಸರಗೊಳ್ಳುವ ಸುಬ್ಬು ಗಡಿಬಿಡಿಯಲ್ಲಿ ಶ್ರಾವಣಿ ಮನೆಗೆ ಹೊರಡುತ್ತಾನೆ. ನಡುವೆ ಶ್ರೀವಲ್ಲಿ ಸಿಕ್ಕ ಅಡ್ಡ ಹಾಕಿದ್ರು ಅವಳಿಂದ ತಪ್ಪಿಸಿಕೊಂಡು ಬರುವ ಸುಬ್ಬು ಮಿನಿಸ್ಟರ್‌ ಮನೆಗೆ ಬಂದು ಮಿನಿಸ್ಟರ್‌ ಹಿಂದೆ ನಿಲ್ಲುತ್ತಾನೆ. ಯಾರು ಏನೂ ಎಂದು ಪರೀಕ್ಷಿಸದ ವೀರೇಂದ್ರ ಬರಬೇಡ, ಇವತ್ತು ಯಾರೂ ಬರಬಾರ್ದು ಎಂದು ನಾನು ಹೇಳಿದ್ದೆ ಅಲ್ವಾ, ಮತ್ಯಾಕೆ ಬಂದೆ, ಹೋಗು ಹೊರಟು ಹೋಗು ಎಂದು ರೇಗುತ್ತಾನೆ. ಅದನ್ನೆ ಕಾಯುತ್ತಿದ್ದ ಮದನ್‌, ವಿಜಯಾಂಬಿಕ ಸುಬ್ಬುವನ್ನು ದರದರನೆ ಹೊರಗಡೆ ಎಳೆದುಕೊಂಡು ಹೋಗುತ್ತಾರೆ. ಮದನ್‌ ಸುಬ್ಬುವನ್ನು ಎಳೆದುಕೊಂಡು ಹೋಗಿ ಗೇಟ್‌ ಹೊರಗೆ ನಿಲ್ಲಿಸುತ್ತಾನೆ. ಸುಬ್ಬು ಮಾತ್ರವಲ್ಲ ಏನು ಮಾಡಬೇಕು ಎಂದು ಅರಿಯದೇ ದಿಕ್ಕು ತೋಚದವನಂತೆ ನಿಂತು ಬಿಡುತ್ತಾನೆ.

ಸುಬ್ಬುವನ್ನು ವೀರೇಂದ್ರ ನಿಜಕ್ಕೂ ಮನೆಗೆ ಬರ್ಬೇಡ ಅಂದ್ರಾ, ಮದನ್‌ಗೆ ವೀರೇಂದ್ರ ಕಡೆಯಿಂದ ಕಾದಿದ್ಯಾ ಹಬ್ಬ, ಶ್ರಾವಣಿಗೆ ಸುಬ್ಬು ಸಮಾಧಾನ ಮಾಡ್ತಾನಾ? ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಿಗೆ ನಿರೀಕ್ಷಿಸಿ.