ಶ್ರಾವಣಿ ಮೊಗದಲ್ಲಿ ನಗು ಮರಳಿಸಿದ ಸುಬ್ಬು, ಮತ್ತೆ ವೀರೇಂದ್ರ ಕೆಂಗಣ್ಣಿಗೆ ಗುರಿಯಾದ ಮದನ್; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ
Shravani Subramanya Kannada Serial Today Episode June 25th: ʼಶ್ರಾವಣಿ ಸುಬ್ರಹ್ಮಣ್ಯʼ ಧಾರಾವಾಹಿಯ ಮಂಗಳವಾರದ ಎಪಿಸೋಡ್‌ನಲ್ಲಿ ಸುಬ್ಬುವನ್ನ ಮನೆಯಿಂದ ಹೊರ ಹಾಕಿದ ಮದನ್‌ಗೆ ಸರಿಯಾಗಿ ಕ್ಲಾಸ್ ತಗೆದುಕೊಂಡ್ರು ವೀರೇಂದ್ರ. ಹಳೆಯ ನೆನಪುಗಳ ಸಂತೆಯಲ್ಲಿ ಮಿನಿಸ್ಟರ್ ಪಯಣ. ಕೊನೆಗೂ ಊಟ ಮಾಡಿದ್ಲು ಶ್ರಾವಣಿ.
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ನಿನ್ನೆಯ (ಜೂನ್ 25) ಸಂಚಿಕೆಯಲ್ಲಿ ಸುಬ್ಬುವಿನ ಮೇಲೆ ಸದಾ ದ್ವೇಷ ಕಾರುವ ಮದನ್ ಹಾಗೂ ವಿಜಯಾಂಬಿಕ ಸಿಕ್ಕಿದ್ದೆ ಚಾನ್ಸ್ ಎಂದುಕೊಂಡು ಅವನನ್ನು ಹೊರ ಹಾಕಲು ಕಾಲರ್ ಹಿಡಿದು ಮನೆಯಿಂದ ಹೊರಗೆ ಎಳೆದು ತರುತ್ತಾರೆ. 2 ನಿಮಿಷ ಯಜಮಾನರ ಜೊತೆ ಮಾತನಾಡಿಕೊಂಡು ಹೋಗುತ್ತೇನೆ ಅಂದ್ರು ಕೇಳದ ಅವರು ಅವನನ್ನು ಕೂಡಲೇ ಮನೆಯಿಂದ ಹೋಗು ಎಂದು ಬಾಯಿಗೆ ಬಂದಂತೆ ಮಾತನಾಡುತ್ತಾರೆ. ʼನಮ್ಮ ವೀರು ನಿನ್ನ ಬಗ್ಗೆ ಒಂದೆರಡು ಒಳ್ಳೆ ಮಾತನಾಡಿದ ಅಂದ ಮಾತ್ರಕ್ಕೆ ನೀನು ಈ ಮನೆಯವನಾಗೊಲ್ಲ. ನೀನೇನಿದ್ರೂ ಕಾಲಬುಡದಲ್ಲಿ ಇರುವ ನಾಯಿ. ಅಲ್ಲೇ ನಿನ್ನ ಸ್ಥಾನ ಎಂದೆಲ್ಲಾʼ ಹೇಳಿ ಅವಮಾನ ಮಾಡುತ್ತಾಳೆ ವಿಜಯಾಂಬಿಕಾ. ಯಜಮಾನರ ಬಳಿ ಒಂದೆರಡು ನಿಮಿಷ ಮಾತನಾಡಿಕೊಂಡು ಬರುತ್ತೇನೆ ಎಂದು ಸುಬ್ಬು ಮತ್ತೆ ಮತ್ತೆ ಹೇಳಿದಾಗ ಅವನನ್ನ ಎಳೆದುಕೊಂಡು ಹೋಗಿ ಗೇಟ್‌ನಿಂದ ಆಚೆ ಹಾಕುತ್ತಾನೆ ಮದನ್.
ಸುಬ್ಬು ಪರ ಮಾತಾಡಿ ಕೇಡಿಗಳಿಗೆ ಶಾಕ್ ನೀಡಿದ ವೀರೇಂದ್ರ
ಮನೆಯೊಳಗೆ ಕುಳಿತಿದ್ದ ವೀರೇಂದ್ರ ಅವರಿಗೆ ಬಂದಿರುವುದು ಸುಬ್ಬುನೇ ಎಂಬುದು ಅರಿವಿರುವುದಿಲ್ಲ. ಅವರಿಗೆ ಇದ್ದಕ್ಕಿದ್ದ ಹಾಗೆ ಸುಬ್ಬು ಬಳಿ ಮಾತನಾಡಬೇಕು ಅನ್ನಿಸುತ್ತದೆ. ಯಾಕೋ ಸುಬ್ಬು ಧ್ವನಿ ಕೇಳಿದ ಹಾಗಾಯ್ತಲ್ಲ ಅಂದುಕೊಳ್ಳುತ್ತಾರೆ, ಸುಬ್ಬು ಬಂದಿದ್ರೆ ಮನೆಯೊಳಗೆ ಬರ್ತಾ ಇದ್ದಾ, ಹೋಗ್ಲಿ ಸುಬ್ಬುಗೆ ಒಂದು ಕಾಲ್ ಮಾಡೋಣ ಎಂದುಕೊಂಡು ಕಾಲ್ ಮಾಡಿದಾಗ ಸುಬ್ಬು ತಾನು ಗೇಟ್ ಬಳಿ ಇರುವ ವಿಚಾರ ಹೇಳುತ್ತಾನೆ. ಕೂಡಲೇ ಹೊರಗೆ ಹೋಗುವ ವೀರೇಂದ್ರಗೆ ಮದನ್ ಸುಬ್ಬುವನ್ನು ಗೇಟ್‌ನಿಂದ ಹೊರ ಹಾಕಿದ್ದು ಅರಿವಾಗುತ್ತದೆ. ಅಕ್ಕನ ಬಳಿ ಸುಬ್ಬುವನ್ನು ಯಾಕೆ ಹೊರ ಹಾಕಿದ್ದು ಎಂದು ಪ್ರಶ್ನೆ ಮಾಡುತ್ತಾನೆ. ಅದಕ್ಕೆ ವಿಜಯಾಂಬಿಕಾ ʼಅಲ್ಲ ವೀರು, ನೀನೇ ಹೇಳಿದ್ದು ಅಲ್ವಾ ಹೊರಗಡೆಯವರು ಯಾರು ಬರೋದು ಬೇಡ ಅಂತʼ ಎಂದು ತಾವು ಮಾಡಿದ ತಪ್ಪನ್ನು ಸರ್ಮಥಿಸಿಕೊಳ್ಳಲು ಹೋಗುತ್ತಾಳೆ. ಅದಕ್ಕೆ ಧ್ವನಿಗೂಡಿಸಿದ ಮದನ್ ʼಮಾವ ನಿಮಗೆ ಇನ್ನು ಅವನ ಕಾಟ ಇಲ್ಲ. ನಾನು ಅವನನ್ನು ಮನೆಯಿಂದ ಹೊರ ಹಾಕಿದೆʼ ಎನ್ನುತ್ತಾನೆ. ಅವನ ಮಾತಿಗೆ ಕೋಪಗೊಳ್ಳುವ ವೀರೇಂದ್ರ ʼಹಾಗಾದ್ರೆ ನೀನು ಈ ಮನೆಯಿಂದ ಹೊರ ಹೋಗ್ತಿಯಾ, ಆಗ ನಿನ್ನಿಂದಲೂ ನನಗೆ ಯಾವುದೇ ತೊಂದರೆ ಇರುವುದಿಲ್ಲ. ನೀನು ಈ ಮನೆಯವನು ಅಂದ ಮೇಲೆ ಸುಬ್ಬು ಕೂಡ ಈ ಮನೆಯವನು, ಅವನು ಎಂದಿಗೂ ಹೊರಗಿನವನಾಗಲು ಸಾಧ್ಯವೇ ಇಲ್ಲʼ ಎಂದು ಸುಬ್ಬುವನ್ನು ಕರೆದು ನಿನ್ನ ಜೊತೆ ಮಾತನಾಡಬೇಕು ಬಾ ಎಂದು ಕರೆದುಕೊಂಡು ಹೋಗುತ್ತಾರೆ.̇
ಸುಬ್ಬು ಜೊತೆ ಮನದ ಮಾತು ಹಂಚಿಕೊಂಡ ವೀರೇಂದ್ರ
ಮದ್ಯಪಾನ ಮಾಡುತ್ತಾ ಸುಬ್ಬು ಜೊತೆ ಮನದ ಮಾತು ಹಂಚಿಕೊಳ್ಳುತ್ತಾರೆ ವೀರೇಂದ್ರ. ಆಗ ಸುಬ್ಬು ಶ್ರಾವಣಿ ಮೇಡಂ ಗೊತ್ತಿಲ್ಲದೇ ಏನೋ ಮಾಡಿದ್ದು ಎಂದು ಹೇಳುತ್ತಾನೆ. ಸುಬ್ಬು ವೀರೇಂದ್ರ ಅವರಿಗೆ ಹಳೆ ನೋವುಗಳು ಮರುಕಳಿಸಿತು ಎಂಬುದು ಅರಿವಾಗುತ್ತದೆ. ಅದಕ್ಕೆ ವೀರೇಂದ್ರ ಪ್ರೀತಿ ಮಾಡುವವರು, ಪ್ರೀತಿ ಕೊಡಲು ಬರುವವರು ತಮ್ಮೊಂದಿಗೆ ನೋವಿನ ವಿಷವನ್ನೂ ತಂದಿರುತ್ತಾರೆ. ಆ ನೋವು ನಮ್ಮನ್ನು ಸಾಯುವವರೆಗೂ ಚುಚ್ಚಿ ಚುಚ್ಚಿ ಕೊಲ್ಲುತ್ತದೆ. ಹಾಗಾಗಿ ಕೊನೆಯವರೆಗೂ ಏನೂ ಗೊತ್ತಾಗೋದೇ ಬೇಡ, ಎಲ್ಲವೂ ಹೀಗೆ ಇರಲಿ ಎನ್ನುತ್ತಾನೆ. ಸುಬ್ಬುಗೆ ವೀರೇಂದ್ರ ಬದುಕಿನ ಕಥೆ ತಿಳಿಯದಿದ್ದರೂ ಯಜಮಾನರಿಗೆ ಏನೋ ನೋವಿದೆ ಎಂಬುದು ಅರ್ಥ ಆಗುತ್ತದೆ. ಹಾಗೂ ಹೀಗೂ ಬುದ್ಧಿವಂತಿಕೆ ಉಪಯೋಗಿಸಿ ಯಜಮಾನರ ಮನದ ನೋವು ಕಡಿಮೆ ಮಾಡಲು ಪ್ರಯತ್ನ ಮಾಡುತ್ತಾನೆ ಸುಬ್ಬು.
ಶ್ರಾವಣಿಗೆ ರೇಗಿಸಿ ಊಟ ಮಾಡುವಂತೆ ಮಾಡಿದ ಸುಬ್ಬು
ಕೋಣೆಯಲ್ಲಿ ಲೈಟ್ ಆಫ್ ಮಾಡಿಕೊಂಡು ಕತ್ತಲೆಯಲ್ಲಿ ಕೂತಿದ್ದ ಶ್ರಾವಣಿ ಬಳಿ ಹೋಗುವ ಸುಬ್ಬು ಅವಳಿಗೆ ಮೊದಲು ರೇಗಿಸುತ್ತಾನೆ. ಕಷ್ಟ ಎಂದರೆ ಏನು ಎಂಬುದನ್ನು ಸೈನಿಕರು, ರೈತರು ಬಳಿ ಕೇಳಬೇಕು ಎಂದು ಹುರಿದುಂಬಿಸುತ್ತಾನೆ. ಮಾತಿನಲ್ಲೇ ರೇಗಿಸಿ ಅವಳು ಊಟ ಮಾಡುವಂತೆ ಮಾಡುತ್ತಾನೆ. ಅವಳಿಗೆ ಗುಡ್‌ನೈಟ್ ಹೇಳಿ ಅಲ್ಲಿಂದ ಹೊರಡುತ್ತಾನೆ. ಇತ್ತು ಸುಬ್ಬು ತಂಗಿ ವರಲಕ್ಷ್ಮೀ ಬಾಯ್‌ಫ್ರೆಂಡ್ ವರದನ ಜೊತೆ ನಾವಿಬ್ಬರೂ ಅಣ್ಣನ ಮೇಲೆ ಭರವಸೆ ಇಡೋಣ. ಅವನು ನಮ್ಮನ್ನು ಒಂದು ಮಾಡುತ್ತಾನೆ, ಆದರೆ ಇನ್ನು ಮುಂದೆ ಪದೇ ಪದೇ ಮೀಟ್ ಆಗುವುದು ಬೇಡ ಎಂದು ಹೇಳುತ್ತಾಳೆ. ಅದಕ್ಕೆ ಒಪ್ಪುವ ವರದ ಪ್ರೀತಿಯಾಗಿ ಕಾಯೋಣ ಎಂದು ಹೇಳಿ ವರಳನ್ನು ಕಳುಹಿಸುತ್ತಾನೆ.
ಸುಬ್ಬು ವಿಚಾರದಲ್ಲಿ ಅವಮಾನವಾದ ಮದನ್ ಸುಮ್ಮನಿರ್ತಾನಾ, ಶ್ರಾವಣಿ ಮೊದಲಿನಂತಾಗಾಳ್ತಾ, ವೀರೇಂದ್ರ ಮನದ ನೋವು ಏನು ಎಂಬುದು ಸುಬ್ಬುಗೆ ತಿಳಿಯುತ್ತಾ? ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.