ಸಾಲಿಗ್ರಾಮಕ್ಕೆ ಹೋಗಲು ವೀರೇಂದ್ರ ದೃಢನಿರ್ಧಾರ, ವಿಜಯಾಂಬಿಕಾಗೆ ಶುರು ಆಯ್ತಾ ಬ್ಯಾಡ್ ಟೈಮ್; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ
Shravani Subramanya Kannada Serial Today Episode June 27th: ʼಶ್ರಾವಣಿ ಸುಬ್ರಹ್ಮಣ್ಯʼ ಧಾರಾವಾಹಿಯ ಗುರುವಾರದ ಎಪಿಸೋಡ್‌ನಲ್ಲಿ ಶ್ರಾವಣಿಯನ್ನು ತಾಯಿಯ ಪ್ರತಿರೂಪ ಅಂದ ನರಸಯ್ಯ. ಮಗನಿಗೆ ಅತ್ತೆಮನೆ ಯಜಮಾನಿಕೆ ಕೊಡಿಸಲು ಕಾಂತಮ್ಮ ಹೋರಾಟ. ಸಾಲಿಗ್ರಾಮಕ್ಕೆ ನಾವೆಲ್ಲರೂ ಹೋಗ್ತೀವಿ ಎಂದ ವೀರೇಂದ್ರ, ವಿಜಯಾಂಬಿಕಾಗೆ ಶುರು ಆಯ್ತು ನಡುಕ.
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ನಿನ್ನೆಯ (ಜೂನ್ 27) ಸಂಚಿಕೆಯಲ್ಲಿ ಶ್ರಾವಣಿ ಅಜ್ಜಿ ಊರು ಸಾಲಿಗ್ರಾಮದಿಂದ ಬಂದ ನರಸಯ್ಯ ಅವರು ಪುಷ್ಕರಣಿ ಉತ್ಸವಕ್ಕೆ ಮನೆಯವರೆಲ್ಲರನ್ನೂ ಆಹ್ವಾನಿಸಿ, ಸುಬ್ಬು ಮನೆಯವರನ್ನು ಬರಲು ಹೇಳುತ್ತಾರೆ. ಶ್ರಾವಣಿ ಯಾರೂ ಎಂದು ತಿಳಿಯದ ಅವರು ಶ್ರಾವಣಿ ಎಂದು ವೀರೇಂದ್ರರ ಮುಖ ನೋಡುತ್ತಾರೆ. ಮಗಳನ್ನು ದ್ವೇಷಿಸುವ ಅಪ್ಪ ಮಗಳನ್ನು ತೋರಿಸಲಾಗದೇ ಸುಮ್ಮನೆ ನಿಂತಾಗ ಚಿಕ್ಕಮ್ಮ ವೀರೇಂದ್ರ ಸನ್ನೆ ಮಾಡಿ ಶ್ರಾವಣಿಯನ್ನು ಮುಂದೆ ಬರುವಂತೆ ಹೇಳುತ್ತಾರೆ. ಶ್ರಾವಣಿ ನರಸಯ್ಯನವರ ಮನೆ ಮುಂದೆ ಬಂದು ನಿಂತು ನರಸಯ್ಯನವರಿಗೆ ನಮಸ್ಕಾರ ಮಾಡುತ್ತಾಳೆ. ಅವಳ ಸಂಸ್ಕಾರ ಕಂಡು ಖುಷಿ ಪಡುವ ನರಸಯ್ಯ ʼಲಲಿತಮ್ಮನವರು ಹೇಗೆ ಇರಬೇಕು ಎಂದು ಅಂದುಕೊಂಡಿದ್ದೇವೋ ಹಾಗೆಯೇ ಇದ್ದೀಯಾ, ಆ ದೇವರು ನಿನಗೆ ಒಳ್ಳೇದು ಮಾಡ್ಲಿʼ ಎಂದು ಮನಸಾರೆ ಹರಸುತ್ತಾರೆ. ಆ ಕೂಡಲೇ ಹೊರಟು ನಿಂತ ನರಸಯ್ಯನವರಿಗೆ ಊಟ ಮಾಡಿ ಹೋಗುವಂತೆ ಹೇಳುತ್ತಾರೆ ವೀರೇಂದ್ರ, ಆಗ ನರಸಯ್ಯ ʼಅಮ್ಮೋರು ನಿಮ್ಮನ್ನು ಕರೆದು ಬರಲು ಅಷ್ಟೇ ಹೇಳಿದ್ದು, ಅವರ ಮಾತನ್ನು ನಾವು ಮೀರುವುದಿಲ್ಲ. ನಾನು ಹೊರಡುತ್ತೇವೆʼ ಎಂದು ಹೊರಟು ನಿಲ್ಲುತ್ತಾರೆ. ಕಾರಿನವರೆಗೂ ಹಿಂದೆಯೇ ಬರುವ ಸುರೇಂದ್ರ, ವೀರೇಂದ್ರರ ಬಳಿ ಮತ್ತೊಮ್ಮೆ ಪದ್ದು ಕುಟುಂಬವನ್ನು ಮರೆಯದೇ ಸಾಲಿಗ್ರಾಮಕ್ಕೆ ಕರೆದುಕೊಂಡು ಬನ್ನಿ ಎಂದು ಹೇಳಿ ಹೋಗುತ್ತಾರೆ.
ಅತ್ತೆಮನೆಯಲ್ಲಿ ಮಗನಿಗೆ ಯಜಮಾನಿಕೆ ಕೊಡಿಸುವ ಹಟದಲ್ಲಿ ಕಾಂತಮ್ಮ
ಕಾಂತಮ್ಮ ಮಗ ಸುಂದರನಿಗೆ ಅತ್ತೆಮನೆಯಲ್ಲಿ ಯಜಮಾನಿಕೆ ಸಿಗಬೇಕು ಎಂದು ಹೇಳಿದ್ದು ಕೇಳಿ ಉರಿದು ಹೋಗುವ ವಿಶಾಲಾಕ್ಷಿ ಅವರಿಗೆ ಪಾಠ ಕಲಿಸಬೇಕು ಹೊರಡುತ್ತಾಳೆ. ಆದರೆ ಸುಬ್ಬು ಹಾಗೂ ಪದ್ಮನಾಭ ಅದನ್ನು ತಡೆಯುತ್ತಾರೆ. ಆಗ ಕಾಂತಮ್ಮ ಬಂದು ಏನು ನನ್ನ ಹೆಸರು ಹೇಳಿದ ಹಾಗಿತ್ತು ಎಂದು ಹೇಳಿದಾಗ ಸುಬ್ಬು ʼಅಯ್ಯೋ ಇಲ್ಲ ಕಾಂತಮ್ಮತ್ತೆ, ನಾನೇನೋ ಮಾತಾಡ್‌ಕೊಳ್ತಾ ಇದ್ವಿʼ ಎಂದು ಹೇಳಿ ಅವಳನ್ನು ಸಾಗ ಹಾಕುತ್ತಾನೆ ಸುಬ್ಬು. ಇತ್ತ ಕಾಂತಮ್ಮ ಮಗನ ಬಳಿ ʼಲೋ ಸುಂದರ ನೀನಂತೂ ದುಡಿಯೊಲ್ಲ, ನಾನು ನಿನಗಾಗಿ ಅಂತ ಏನೂ ಮಾಡಿಲ್ಲ. ಕೊನೆಪಕ್ಷ ಅತ್ತೆಮನೆಯಲ್ಲಿ ನಿನಗೆ ಯಜಮಾನಿಕೆ ಆದ್ರೂ ಸಿಗಲಿ ಎಂದು ಹೀಗೆಲ್ಲಾ ಮಾಡುತ್ತಿದ್ದೇನೆ. ಇಲ್ಲಾಂದ್ರೆ ನಾವು ಇವರ ಮನೆಯಲ್ಲಿ ಬಿಟ್ಟಿ ಇದ್ದೇವೆ ಎನ್ನುವ ಕಾರಣಕ್ಕೆ ನಮ್ಮನ್ನು ಕೀಳಾಗಿ ನೋಡುತ್ತಾರೆ. ಅದಕ್ಕೆ ನೀನು ಈ ಮನೆಯ ಯಜಮಾನ ಆಗಬೇಕು ಅಂತ ಇಷ್ಟೆಲ್ಲಾ ಮಾಡಿದೆ ಎನ್ನುತ್ತಾರೆ. ಸುಂದರನಿಗೆ ಶ್ರಾವಣಿ ಹೊಡೆದ ಏಟು, ಹೇಳಿದ ಮಾತು ನೆನಪಾಗುತ್ತದೆ. ಅವನು ಅಮ್ಮನ ಬಳಿ ಶ್ರಾವಣಿ ಬಗ್ಗೆ ಹೇಳಿದಾಗ ಅವಳು ಈ ಮನೆಗೆ ಪಾಠ ಹೇಳಿಸಿಕೊಳ್ಳೋಕೆ ಬರ್ತಾ ಇದ್ಲು, ಅವಳು ಬಂದ್ಲು ಅಂದ ಮಾತ್ರಕ್ಕೆ ಮಿನಿಸ್ಟರ್ ಏನು ಈ ಮನೆಗೆ ಬರೊಲ್ಲ. ಅಲ್ಲದೇ ಆ ಸುಬ್ಬು ಮಿನಿಸ್ಟರ್ ಮನೆಯಲ್ಲಿ ಪಾತ್ರೆ ತೊಳಿತಾನೋ, ಕಸ ಗುಡಿಸ್ತಾನೋ ಗೊತ್ತಿಲ್ಲ ಅಂದ ಮೇಲೆ ನಾವ್ಯಾಕೆ ತಲೆ ಕಡೆಸಿಕೊಳ್ಳಬೇಕು. ಅವನು ದುಡಿತಾನೆ ಅಂತ ನಿನ್ನ ಸ್ಥಾನ ಕಡಿಮೆ ಆಗಬಾರ್ದು ಅಂತ ಸುಂದರನಿಗೆ ಯಜಮಾನಿಕೆಯ ಗತ್ತು ಮೂಡುವಂತೆ ಮಾಡುತ್ತಾಳೆ.
ಸಾಲಿಗ್ರಾಮದ ವಿಚಾರ ಸುಬ್ಬುಗೆ ಹೇಳಿದ ಶ್ರಾವಣಿ, ವಿಜಯಾಂಬಿಕ ಕೈಯಿಂದ ಬಿತ್ತು ಲಕ್ಕಿ ವಾಚ್
ಮನೆಗೆ ಬಂದು ಸುಬ್ಬು ಮುಂದೆ ಸಾಲಿಗ್ರಾಮದಿಂದ ನರಸಯ್ಯನವರು ಬಂದಿದ್ದು, ಅವಳ ಅಜ್ಜಿಯ ಬಗ್ಗೆ ಹೇಳಿದ್ದು, ಊರಲ್ಲಿ ಪುಷ್ಕರಿಣಿ ಉತ್ಸವ ನಡೆಯುವುದು ಎಲ್ಲವನ್ನೂ ಸುಬ್ಬುಗೆ ಹೇಳುತ್ತಾಳೆ ಶ್ರಾವಣಿ. ಮಾತ್ರವಲ್ಲ ಬಂದವರು ಸುಬ್ಬ ತಂದೆ ಪದ್ಮನಾಭ ಅವರನ್ನು ಕರೆದುಕೊಂಡು ಬರುವಂತೆ ಒತ್ತಿ ಒತ್ತಿ ಹೇಳಿದ್ದನ್ನೂ ಸುಬ್ಬುಗೆ ಹೇಳುತ್ತಾಳೆ. ಇದನ್ನು ಕೇಳಿ ಸುಬ್ಬುಗೆ ತಲೆಯಲ್ಲಿ ಹುಳ ಬಿಟ್ಟಂತೆ ಆಗುತ್ತದೆ. ನಮ್ಮಪ್ಪನಿಗೆ ಶ್ರಾವಣಿ ಅಜ್ಜಿ ಊರು ಹೇಗೆ ಗೊತ್ತು ಎಂದು ತಿಳಿಯದೇ ಗೊಂದಲಕ್ಕೆ ಸಿಲುಕುವ ಸುಬ್ಬು ಅದೇ ಯೋಚನೆಯಲ್ಲಿ ಮುಳುಗುತ್ತಾನೆ. ಶ್ರಾವಣಿ ಮಾತ್ರವಲ್ಲ ಸಂಭ್ರಮದಲ್ಲಿ ಸುಬ್ಬು ನಾವೆಲ್ಲರೂ ಸಾಲಿಗ್ರಾಮ ಹೋಗುತ್ತಿದ್ದೇವೆ ಎಂದು ಖುಷಿಯಲ್ಲಿ ಹೇಳಿಕೊಳುತ್ತಾಳೆ. ಆ ಹೊತ್ತಿಗೆ ಮಗನ ಜೊತೆ ಲಕ್ಕಿ ವಾಚ್ ಬಗ್ಗೆ ಮಾತನಾಡುತ್ತಾ ಬರುತ್ತಿದ್ದ ವಿಜಯಾಂಬಿಕಾ ಶ್ರಾವಣಿ ಬಾಯಲ್ಲಿ ಸಾಲಿಗ್ರಾಮದ ಬಗ್ಗೆ ಕೇಳಿದ್ದೇ ತಡ ಗಾಬರಿಯಿಂದ ಆ ವಾಚ್ ಅನ್ನ ಕೆಳಗೆ ಬೀಳಿಸುತ್ತಾಳೆ. ಮಾತ್ರವಲ್ಲ, ನೋ ಹೀಗಾಗಬಾರ್ದು, ಶ್ರಾವಣಿ ಸಾಲಿಗ್ರಾಮಕ್ಕೆ ಹೋಗಬಾರ್ದು. ಹಾಗೇನಾದ್ರೂ ಆದ್ರೆ ಇಷ್ಟು ವರ್ಷ ನಾನು ಕಟ್ಟಿಕೊಂಡ ಬಂದ ದ್ವೇಷದ ಕೋಟೆ ಮುರಿದು ಬೀಳುತ್ತದೆ ಎಂದು ಬಡಬಡಾಯಿಸುತ್ತಾಳೆ. ಮದನ್ ಮಾತ್ರ ಏನೂ ಅರ್ಥವಾಗದೇ ತಲೆ ಕೆಡಿಸಿಕೊಳ್ಳುತ್ತಾನೆ.
ಸಾಲಿಗ್ರಾಮಕ್ಕೆ ಹೋಗೇ ಹೋಗುತ್ತೇವೆ ಎಂದು ವೀರೇಂದ್ರ
ಸಾಲಿಗ್ರಾಮ ಹೋಗುವುದನ್ನು ಹೇಗಾದ್ರೂ ತಡೆಯಬೇಕು ಎಂದು ಎಂದುಕೊಳ್ಳುತ್ತಾಳೆ ವಿಜಯಾಂಬಿಕಾ. ಆದರೆ ಆ ದಿನ ರಾತ್ರಿಯೇ ಅಕ್ಕನನ್ನು ಕರೆಯುವ ವೀರೇಂದ್ರ ʼಅಕ್ಕ ಸಾಲಿಗ್ರಾಮದಲ್ಲಿ ಪುಷ್ಕರಿಣಿ ಉತ್ಸವ ನಡೆಯುತ್ತಿದ್ದು, ನಾವೆಲ್ಲರೂ ಬರಬೇಕು ಎಂದು ಅತ್ತೆಯವರು ಹೇಳಿದ್ದಾರೆ. ನಾವೆಲ್ಲರೂ ಹೋಗೋಣ ಅಂತ ಹೇಳ್ತಾನೆ. ಆಗ ವಿಜಯಾಂಬಿಕ ಅವನನ್ನು ತಪ್ಪಿಸುವ ಸಲುವಾಗಿ ʼಅಲ್ಲ ನೀನು ಈಗ ಮಿನಿಸ್ಟರ್. ನಿಂಗೆ ಇಲ್ಲಿ ಇಷ್ಟೆಲ್ಲಾ ಕೆಲಸ ಇರುತ್ತೆ, ಆದ್ರೆ ನೀನು ಅದನ್ನೆಲ್ಲಾ ಬಿಟ್ಟು ಈಗ ಸಾಲಿಗ್ರಾಮ ಹೋದ್ರೆ ಅಷ್ಟು ದಿನ ರಜೆ ಹಾಕಿದ್ರೆ ಹೇಗೆʼ ಅಂತೆಲ್ಲಾ ಇಲ್ಲಸಲ್ಲದ ಮಾತು ಹೇಳಲು ಬರುತ್ತಾಳೆ. ಆಗ ವೀರೇಂದ್ರ ನನಗೆ ಅತ್ತೆಯವರ ಮಾತು ಅಂದ್ರೆ ಶಾಸನ, ನಾನು ಅವರ ಮಾತನ್ನು ತೆಗೆದು ಹಾಕುವುದಿಲ್ಲ. ಅಂತಹ ಸಂದರ್ಭ ನಾನು ಮಿನಿಸ್ಟರ್ ಸ್ಥಾನಕ್ಕೆ ರಾಜಿನಾಮೆ ಕೊಡ್ತೀನಿ, ಆದ್ರೆ ಸಾಲಿಗ್ರಾಮಕ್ಕೆ ಪುಷ್ಕರಿಣಿ ಉತ್ಸವಕ್ಕೆ ಹೋಗದೇ ಇರುವುದಿಲ್ಲ ಎಂದು ಶಪಥ ಮಾಡಿದಂತೆ ಹೇಳುತ್ತಾನೆ. ಇದನ್ನು ಕೇಳಿ ವಿಜಯಾಂಬಿಕ ಏನು ಮಾಡಬೇಕು ಎಂದು ತೋಚದೇ ನಿಂತು ಬಿಡುತ್ತಾರೆ.
ಸುಬ್ಬುಗೆ ತನ್ನ ಅಪ್ಪನಿಗೆ ಸಾಲಿಗ್ರಾಮದಿಂದ ಯಾವ ಕಾರಣಕ್ಕೆ ಕರೆ ಬಂತು ಎಂಬುದು ಅರಿವಿಗೆ ಬರುತ್ತಾ, ಸಾಲಿಗ್ರಾಮಕ್ಕೆ ಹೋದ್ರೆ ಶ್ರಾವಣಿಯ ಬದುಕು ಬದಲಾಗುತ್ತಾ, ವಿಜಯಾಂಬಿಕಾ ಮುಖವಾಡ ಕಳಚಿ ಬೀಳುತ್ತಾ ಈ ಎಲ್ಲವನ್ನೂ ಮುಂದಿನ ಸಂಚಿಕೆಯಲ್ಲಿ ನಿರೀಕ್ಷಿಸಿ.