ಕನ್ನಡ ಸುದ್ದಿ  /  ಮನರಂಜನೆ  /  ಸಾಲಿಗ್ರಾಮಕ್ಕೆ ಬರಲ್ಲ ಅಂದ ಶ್ರಾವಣಿ, ಮಗಳ ಬಳಿ ಮಾತನಾಡಿದ್ರು ವೀರೇಂದ್ರ, ಸುಬ್ಬು ಪ್ಲಾನ್‌ ಸಕ್ಸಸ್‌; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

ಸಾಲಿಗ್ರಾಮಕ್ಕೆ ಬರಲ್ಲ ಅಂದ ಶ್ರಾವಣಿ, ಮಗಳ ಬಳಿ ಮಾತನಾಡಿದ್ರು ವೀರೇಂದ್ರ, ಸುಬ್ಬು ಪ್ಲಾನ್‌ ಸಕ್ಸಸ್‌; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

Shravani Subramanya Kannada Serial Today Episode July 1st: ʼಶ್ರಾವಣಿ ಸುಬ್ರಹ್ಮಣ್ಯʼ ಧಾರಾವಾಹಿಯ ಸೋಮವಾರದ ಎಪಿಸೋಡ್‌ನಲ್ಲಿ ಯಜಮಾನರು ಶ್ರಾವಣಿ ಮೇಡಂ ಜೊತೆ ಹತ್ತಿರ ಆಗೋಕೆ ಸುಬ್ಬು ಕೊಟ್ಟ ಬೆಸ್ಟ್‌ ಪ್ಲಾನ್‌. ಸಾಲಿಗ್ರಾಮಕ್ಕೆ ಬರೊಲ್ಲ ಅಂದ್ಲು ಶ್ರಾವಣಿ. ಸುಬ್ಬು ಬಳಿ ಚಪ್ಪಲಿ ತೊಳೆಸಿದ್ಲು ವಿಜಯಾಂಬಿಕಾ. ಮಗಳ ಜೊತೆ ಮಾತನಾಡಿದ್ರು ವೀರೇಂದ್ರ.

ಸಾಲಿಗ್ರಾಮಕ್ಕೆ ಬರಲ್ಲ ಅಂದ ಶ್ರಾವಣಿ, ಮಗಳ ಬಳಿ ಮಾತನಾಡಿದ್ರು ವೀರೇಂದ್ರ, ಸುಬ್ಬು ಪ್ಲಾನ್‌ ಸಕ್ಸಸ್‌; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ
ಸಾಲಿಗ್ರಾಮಕ್ಕೆ ಬರಲ್ಲ ಅಂದ ಶ್ರಾವಣಿ, ಮಗಳ ಬಳಿ ಮಾತನಾಡಿದ್ರು ವೀರೇಂದ್ರ, ಸುಬ್ಬು ಪ್ಲಾನ್‌ ಸಕ್ಸಸ್‌; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ನಿನ್ನೆಯ (ಜುಲೈ 1) ಸಂಚಿಕೆಯಲ್ಲಿ ಸಾಲಿಗ್ರಾಮಕ್ಕೆ ಹೋಗುವ ವಿಚಾರದಲ್ಲಿ ನೀವು ಬರೊಲ್ಲ ಎಂದು ಹಠ ಹಿಡಿಯಿರಿ. ಯಾರು ಎಷ್ಟೇ ಹೇಳಿದ್ರು ಬರೋದಿಲ್ಲ ಎಂದು ಪಟ್ಟು ಹಿಡಿದು ಕುಳಿತುಕೊಳ್ಳಿ. ಕೊನೆಗೆ ಯಜಮಾನರೇ ನಿಮ್ಮನ್ನು ಕರೆದು ಮಾತನಾಡಿಸುತ್ತಾರೆ ಎಂದು ಸುಬ್ಬು ಶ್ರಾವಣಿ ಹಾಗೂ ವೀರೇಂದ್ರರನ್ನು ಹತ್ತಿರವಾಗಿಸುವ ಸಲುವಾಗಿ ಮಸ್ತ್‌ ಪ್ಲಾನ್‌ವೊಂದನ್ನು ಶ್ರಾವಣಿಗೆ ಹೇಳಿಕೊಡುತ್ತಾನೆ. ಮಾತ್ರವಲ್ಲ ಇದರಿಂದ ಸಾಲಿಗ್ರಾಮದ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಶ್ರಾವಣಿಗೆ ಹೇಳಿರುತ್ತಾನೆ.

ಸಾಲಿಗ್ರಾಮಕ್ಕೆ ಬರೋಲ್ಲ ಎಂದು ಪಟ್ಟು ಹಿಡಿವ ಶ್ರಾವಣಿ

ಸುಬ್ಬು ಮಾತಿನಂತೆ ಮನೆಯವರೆಲ್ಲರ ಎದುರು ಶ್ರಾವಣಿ ತಾನು ಸಾಲಿಗ್ರಾಮಕ್ಕೆ ಬರೊಲ್ಲ, ನಾನು ಇಲ್ಲಿ ಇದ್ರೆ ನಿಮಗೆ ಇಷ್ಟವಾಗುವುದಿಲ್ಲ, ನಾನು ಎದುರಿಗೆ ಬಂದ್ರೆ ನೀವು ಅಪಶಕುನ ಎಂದುಕೊಳ್ತೀರಿ, ನಾನು ಆರಾಧಿಸೋ ದೇವರೇ ನನ್ನ ಮುಖ ನೋಡೋಲ್ಲ ಅಂದ ಮೇಲೆ ನಾನು ಆ ಊರಿಗೆ ಬಂದು ಪೂಜೆಯಲ್ಲಿ ಭಾಗವಹಿಸೋದು ಸರಿ ಕಾಣ್ತಾ ಇಲ್ಲ ನಾನು ಬರೋಲ್ಲʼ ಎಂದು ಪಟ್ಟು ಹಿಡಿದವಳಂತೆ ಹೇಳುತ್ತಾಳೆ. ಎಲ್ಲಾ ಹೇಳಿದ ಮೇಲೆ ಅಪ್ಪನಿಗೆ ಬೇಜಾರಾಯ್ತ ಎಂದು ಕಾಲು ಹಿಡಿದು ಕ್ಷಮೆ ಕೇಳುತ್ತೇನೆ ಎಂದು ಹೇಳುವ ಶ್ರಾವಣಿಗೆ ಕಣ್ಣಲ್ಲೇ ಸನ್ನೆ ಮಾಡಿ ಹೋಗುವಂತೆ ಹೇಳುತ್ತಾನೆ ಸುಬ್ಬು. 

ಟ್ರೆಂಡಿಂಗ್​ ಸುದ್ದಿ

ವೀರೇಂದ್ರ ಮನಸ್ಸು ಕೆಡಿಸಲು ಬಂದ ವಿಜಯಾಂಬಿಕಾಗೆ ಸೋಲು

ಶ್ರಾವಣಿ ಸಾಲಿಗ್ರಾಮಕ್ಕೆ ಬರುವುದಿಲ್ಲ ಎಂದು ಹೇಳಿದ ಮಾತನ್ನೇ ಗಂಭೀರವಾಗಿ ತೆಗೆದುಕೊಂಡ ವೀರೇಂದ್ರ ಅದರ ಬಗ್ಗೆಯೇ ಚಿಂತಿಸುತ್ತಿರುತ್ತಾರೆ. ಶ್ರಾವಣಿಯನ್ನು ಹೇಗೆ ಸಾಲಿಗ್ರಾಮಕ್ಕೆ ಬರಲು ಒಪ್ಪಿಸುವುದು ಎಂದು ವೀರು ಯೋಚಿಸುತ್ತಿದ್ದರೆ ಇದೇ ನಮಗೆ ಒಳ್ಳೆಯ ಅವಕಾಶ ಹೇಗಾದ್ರೂ ಶ್ರಾವಣಿ ಹೋಗದಂತೆ ತಡೆದರೆ ಮಾತ್ರ ತನಗೆ ಉಳಿಗಾಲ ಎಂದುಕೊಂಡಿರುವ ವಿಜಯಾಂಬಿಕಾ ಶ್ರಾವಣಿ ಹೇಳಿದನ್ನೇ ಎನ್‌ಕ್ಯಾಶ್‌ ಮಾಡಿಕೊಳ್ಳಲು ನೋಡುತ್ತಾಳೆ. ಚಿಂತೆಯಲ್ಲಿ ಮುಳುಗಿರುವ ವಿರೇಂದ್ರ ಬಳಿ ಬರುವ ವಿಜಯಾಂಬಿಕಾ ʼವೀರು ನೀನ್ಯಾಕೆ ಇಷ್ಟೊಂದು ಚಿಂತೆ ಮಾಡ್ತೀಯಾ, ಹೇಗೋ ಅವಳು ಬರೊಲ್ಲ ಅಂತಾಳೆ. ಅವಳು ಬರದಿದ್ರೆ ಬೇಡ ಬಿಡು, ಅವಳಿಗೆ ಹುಡುಗು ಬುದ್ಧಿ. ಅಲ್ಲಿ ಬಂದು ಅವರ ಹುಡುಗು ತೋರಿಸಿದ್ರೆ, ನಮಗೆ ಅವಮಾನ ಆಗೋದು. ಅದಕ್ಕಿಂತ ಅದಕ್ಕಿಂತ ಅವಳನ್ನು ಇಲ್ಲಿಯೇ ಬಿಟ್ಟು ನಾವೆಲ್ಲಾ ಹೋಗಿ ಬರೋಣ ಅಂತಾಳೆ. ಸದಾ ಅಕ್ಕನ ಮಾತೇ ವೇದವಾಕ್ಯ ಎನ್ನುತ್ತಿದ್ದ ವೀರೇಂದ್ರ ಈ ಬಾರಿ ʼಇಲ್ಲ ಅಕ್ಕ, ಶ್ರಾವಣಿ ಬರಲೇಬೇಕು, ಅವಳು ಬರ್ತಾಳೆ ಅಂತ ಅವರ ಅಜ್ಜಿ ಕಾಯ್ತಾ ಇದಾರೆ, ನಾವು ಹೋಗೋದಕ್ಕಿಂತ ಅವಳು ಅಲ್ಲಿಗೆ ಹೋಗೋದೇ ಬಹಳ ಮುಖ್ಯ. ಇದಕ್ಕೆ ನಾನೇ ಏನೋ ಒಂದು ವ್ಯವಸ್ಥೆ ಮಾಡ್ತೀನಿʼ ಎಂದು ವಿಜಯಾಂಬಿಕಾ ಪ್ಲಾನ್‌ ತಲೆ ಕೆಳಗು ಮಾಡುತ್ತಾರೆ ಮಿನಿಸ್ಟರ್‌.

ಸುಬ್ಬು ಬಳಿ ಚಪ್ಪಲಿ ತೊಳೆಸಿದ ವಿಜಯಾಂಬಿಕಾ

ಬಾಗಿಲ ಬಳಿಯೇ ನಿಂತು ಮಾತನಾಡುತ್ತಿರುತ್ತಾರೆ ಮದನ್‌-ವಿಜಯಾಂಬಿಕಾ. ಶ್ರಾವಣಿ ಯಜಮಾನರ ಜೊತೆ ಮಾತನಾಡಿದ್ದು, ತನ್ನ ಪ್ಲಾನ್‌ ಸಕಸ್ಸ್‌ ಆಗುವುದರ ಬಗ್ಗೆ ಯೋಚಿಸುತ್ತಾ ಬರುತ್ತಿದ್ದ ಸುಬ್ಬು ತಿಳಿಯದೇ ಮದನ್‌ಗೆ ಡಿಕ್ಕಿ ಹೊಡೆಯುತ್ತಾನೆ. ಮದನ್‌ ಕೈಯಲ್ಲಿದ್ದ ಜ್ಯೂಸ್‌ ವಿಜಯಾಂಬಿಕ ಸೀರೆ, ಚಪ್ಪಲಿ ಮೇಲೆಲ್ಲಾ ಚೆಲ್ಲುತ್ತದೆ. ಇದರಿಂದ ಕೋಪಗೊಂಡ ವಿಜಯಾಂಬಿಕಾ ಬಾಯಿಗೆ ಬಂದಂತೆ ಸುಬ್ಬುಗೆ ಬಯ್ಯುತ್ತಾಳೆ. ಮಾತ್ರವಲ್ಲ ವೀರು ನನ್ನ ಬಗ್ಗೆ ನಾಲ್ಕು ಚೆನ್ನಾಗಿ ಮಾತನಾಡುತ್ತಾನೆ ಎಂದ ಮಾತ್ರಕ್ಕೆ ನೀನು ಈ ಮನೆಯ ಯಜಮಾನ ಆಗೋಲ್ಲ. ನಿನ್ನ ಸ್ಥಾನ ಏನು ಎಂದು ನಾನು ಇವತ್ತು ತೋರಿಸುತ್ತೇನೆ ಎಂದು ದರ್ಪ ತೋರುವುದು ಮಾತ್ರವಲ್ಲ, ಜ್ಯೂಸ್‌ ಚೆಲ್ಲಿದ ಚಪ್ಪಲಿಯನ್ನು ಸುಬ್ಬು ಕೈಯಿಂದ ತೊಳೆಸುತ್ತಾಳೆ. ನಿನ್ನ ಮನೆಗೆ ನಾನಲ್ಲ, ನನ್ನ ಚಪ್ಪಲಿ ಕೂಡ ಬರೋಲ್ಲ. ನಿನ್ನ ಸ್ಥಾನ ಏನಿದ್ರೂ ಇದೇ ಅರ್ಥ ಮಾಡ್ಕೋʼ ಎಂದು ಸುಬ್ಬುಗೆ ಅವಮಾನ ಆಗುವ ಹಾಗೆ ಮಾತನಾಡಿ ಸುಬ್ಬು ಕಣ್ಣಲ್ಲಿ ನೀರು ಹಾಕುವಂತೆ ಮಾಡುತ್ತಾಳೆ ವಿಜಯಾಂಬಿಕಾ.

ಮಗಳನ್ನು ಒಪ್ಪಿಸಲು ವೀರೇಂದ್ರ ಪ್ರಯತ್ನ

ಸಾಲಿಗ್ರಾಮಕ್ಕೆ ಶ್ರಾವಣಿ ಬರಲು ಅವಳನ್ನು ಒಪ್ಪಿಸುವ ಪ್ರಯತ್ನಕ್ಕೆ ತೊಡುಗುತ್ತಾರೆ ವೀರೇಂದ್ರ, ಶ್ರಾವಣಿಯನ್ನು ಹೆಸರಿಡು ಕರೆವ ವೀರೇಂದ್ರ ಅವಳ ಬಳಿ ಸಾಲಿಗ್ರಾಮಕ್ಕೆ ಯಾವ ಕಾರಣಕ್ಕೆ ಬರುವುದಿಲ್ಲ ಎನ್ನುತ್ತಾರೆ. ಅಪ್ಪ ನನ್ನ ಜೊತೆ ಚೆನ್ನಾಗಿಲ್ಲದೇ ಇರುವುದು ತಾನು ಸಾಲಿಗ್ರಾಮಕ್ಕೆ ಬರದೇ ಇರಲು ಕಾರಣ ಎನ್ನುವ ಶ್ರಾವಣಿಗೆ ಅವಳು ಸಾಲಿಗ್ರಾಮ ಬರುವುದು ಬಹಳ ಮುಖ್ಯ ಎಂದು ಅರ್ಥ ಮಾಡಿಸುವ ಪ್ರಯತ್ನ ಮಾಡುತ್ತಾರೆ. ಕೊನೆಗೆ ಶ್ರಾವಣಿ ಅಪ್ಪನ ಖುಷಿಗೆ ತಾನು ಏನು ಬೇಕಾದ್ರೂ ಮಾಡಲು ಸಿದ್ಧ ಎಂದು ಶ್ರಾವಣಿ ಹೇಳಿದ ಮಾತನ್ನು ಇನ್ನೊಮ್ಮೆ ಅಣ್ಣ ಕಿವಿಯಲ್ಲಿ ಉಸುರುತ್ತಾರೆ ತಮ್ಮಾ ಸುರೇಂದ್ರ. ಆಗ ವೀರೇಂದ್ರ ಶ್ರಾವಣಿ ಸಾಲಿಗ್ರಾಮಕ್ಕೆ ಬಂದರೆ ತನಗೆ ತುಂಬಾ ಖುಷಿ ಆಗುತ್ತೆ ಎಂದು ಹೇಳುತ್ತಾರೆ.

ಶ್ರಾವಣಿಯ ಬಳಿ ಅಪ್ಪ ಮಾತನಾಡಿದ್ರು, ಆದ್ರೆ ಸಾಲಿಗ್ರಾಮದ ಬಗ್ಗೆ ಶ್ರಾವಣಿಗೆ ಹೇಳ್ತಾರಾ, ಮತ್ತೆ ಮತ್ತೆ ಪದ್ಮನಾಭ ಕುಟುಂಬದ ಬಗ್ಗೆ ಹೇಳುವ ನರಸಯ್ಯ ಮಾತಿನ ಹಿಂದಿನ ಉದ್ದೇಶವೇನು, ಸುಬ್ಬು ಮನೆಗೂ ಸಾಲಿಗ್ರಾಮಕ್ಕೂ ಏನು ಸಂಬಂಧ ಈ ಎಲ್ಲವನ್ನೂ ತಿಳಿಬೇಕು ಅಂದ್ರೆ ಮುಂದಿನ ಸಂಚಿಕೆಗಳನ್ನು ನಿರೀಕ್ಷಿಸಿ.