ಕನ್ನಡ ಸುದ್ದಿ  /  ಮನರಂಜನೆ  /  ಅಜ್ಜಿ ಊರಿನಲ್ಲಿ ಅಪ್ಪ-ಮಗಳಂತೆ ಇರ್ಬೇಕು ಅಂದ್ರು ವೀರೇಂದ್ರ; ಶ್ರಾವಣಿ ಪಾಲಿಗೆ ಸಾಲಿಗ್ರಾಮವಾಗುತ್ತಾ ಸ್ವರ್ಗ; ಶ್ರಾವಣಿ ಸುಬ್ರಹ್ಮಣ್ಯ

ಅಜ್ಜಿ ಊರಿನಲ್ಲಿ ಅಪ್ಪ-ಮಗಳಂತೆ ಇರ್ಬೇಕು ಅಂದ್ರು ವೀರೇಂದ್ರ; ಶ್ರಾವಣಿ ಪಾಲಿಗೆ ಸಾಲಿಗ್ರಾಮವಾಗುತ್ತಾ ಸ್ವರ್ಗ; ಶ್ರಾವಣಿ ಸುಬ್ರಹ್ಮಣ್ಯ

Shravani Subramanya Kannada Serial Today Episode July 10th: ʼಶ್ರಾವಣಿ ಸುಬ್ರಹ್ಮಣ್ಯʼ ಧಾರಾವಾಹಿಯ ಬುಧವಾರದ ಎಪಿಸೋಡ್‌ನಲ್ಲಿ ಶ್ರಾವಣಿ ಜೊತೆ ಮಾತನಾಡಿ ಸಾಲಿಗ್ರಾಮದಲ್ಲಿ ಅಪ್ಪ ಮಗಳ ಥರ ಇರ್ಬೇಕು ಅಂದ್ರು ವೀರೇಂದ್ರ. ಶ್ರಾವಣಿಗೆ ಪೂಜಾ ಕ್ರಮ ಕಲಿಸಲು ಸಾಲಿಗ್ರಾಮದಿಂದ ಬರುತ್ತಾರೆ ದಂಪತಿಗಳು. ಸಾಲಿಗ್ರಾಮ ತನ್ನ ಪಾಲಿಗೆ ಸ್ವರ್ಗವಾಗುವ ಕನಸಲ್ಲಿ ಶ್ರಾವಣಿ.

ಅಜ್ಜಿ ಊರಿನಲ್ಲಿ ಅಪ್ಪ-ಮಗಳಂತೆ ಇರ್ಬೇಕು ಅಂದ್ರು ವೀರೇಂದ್ರ; ಶ್ರಾವಣಿ ಪಾಲಿಗೆ ಸಾಲಿಗ್ರಾಮವಾಗುತ್ತಾ ಸ್ವರ್ಗ; ಶ್ರಾವಣಿ ಸುಬ್ರಹ್ಮಣ್ಯ
ಅಜ್ಜಿ ಊರಿನಲ್ಲಿ ಅಪ್ಪ-ಮಗಳಂತೆ ಇರ್ಬೇಕು ಅಂದ್ರು ವೀರೇಂದ್ರ; ಶ್ರಾವಣಿ ಪಾಲಿಗೆ ಸಾಲಿಗ್ರಾಮವಾಗುತ್ತಾ ಸ್ವರ್ಗ; ಶ್ರಾವಣಿ ಸುಬ್ರಹ್ಮಣ್ಯ

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ನಿನ್ನೆಯ (ಜುಲೈ 10) ಸಂಚಿಕೆಯಲ್ಲಿ ಸುಬ್ಬು ಮನೆಯಲ್ಲಿ ಊಟ ಮಾಡಿ ಪದ್ಮನಾಭ ಜೊತೆ ಮಾತನಾಡುವ ವೀರೇಂದ್ರ ಶ್ರಾವಣಿಗೆ ಅವಳ ಜನ್ಮರಹಸ್ಯ ಎಂದಿಗೂ ತಿಳಿಯುವುದು ಬೇಡ ಎನ್ನುತ್ತಾರೆ. ಅಲ್ಲದೇ ಅವಳನ್ನು ನೋಡಿದಾಗ ಹೆಂಡತಿ ನಂದಿನಿ ಮಾಡಿದ ಮೋಸವೇ ಕಣ್ಣ ಮುಂದೆ ಬರುತ್ತದೆ ಎಂದು ರೋಷ ವ್ಯಕ್ತಪಡಿಸುತ್ತಾರೆ. ಆಗ ಪದ್ಮನಾಭ ʼಸತ್ಯ ನೀವು ಅಂದುಕೊಂಡಿರುವುದೇ ಅಲ್ಲ ಯಜಮಾನ್ರೆ, ಸತ್ಯ ಬೇರೇನೇ ಇದೆ. ಆ ಸತ್ಯ ಹೊರ ಬರುವ ಕಾಲವು ಖಂಡಿತ ಬರುತ್ತೆʼ ಎಂದು ಮನಸ್ಸಿನಲ್ಲೇ ಅಂದುಕೊಳ್ಳುತ್ತಾರೆ. ಮಾತು ಮುಗಿಸಿ ಇನ್ನೊಮ್ಮೆ ಎಲ್ಲರನ್ನೂ ಮನೆಗೆ ಸಾಲಿಗ್ರಾಮಕ್ಕೆ ಆಹ್ವಾನಿಸಿ ಹೊರಡಲು ಸಿದ್ಧರಾಗುತ್ತಾರೆ ವೀರೇಂದ್ರ ಕುಟುಂಬ. ಅಷ್ಟೊತ್ತಿಗೆ ಬಾಯ್‌ ಹೇಳಲು ಬರುವ ಶ್ರೀವಲ್ಲಿಯನ್ನೂ ಸಾಲಿಗ್ರಾಮಕ್ಕೆ ಆಹ್ವಾನಿಸುತ್ತಾರೆ ವೀರೇಂದ್ರ. ಇದರಿಂದ ಶ್ರೀವಲ್ಲಿ ಇನ್ನೊಂದು ಹೆಜ್ಜೆ ಎತ್ತರಕ್ಕೆ ಹಾರಿದ್ರೆ ಶ್ರಾವಣಿ ತನ್ನಪ್ಪಂತೆ ಶ್ರೀವಲ್ಲಿಯನ್ನು ಆದರದಿಂದ ನೋಡುತ್ತಿರುವುದು ನೋಡಿ ಉರಿದು ಬೀಳುತ್ತಾಳೆ. ತನ್ನ ಕೋಪವನ್ನು ಸುಬ್ಬು ಮೇಲೆ ತೀರಿಸಿಕೊಳ್ಳುತ್ತಾಳೆ.

ಮೊದಲ ಬಾರಿ ಶ್ರಾವಣಿಯನ್ನು ಹುಡುಕಿ ಬರುವ ವೀರೇಂದ್ರ

ಮನೆಯಲ್ಲಿ ರಾತ್ರಿ ಊಟದ ಸಂದರ್ಭ ಶ್ರಾವಣಿಯನ್ನು ಹುಡುಕಿ ಬರುತ್ತಾರೆ ವೀರೇಂದ್ರ. ಊಟಕ್ಕೆ ರೆಡಿ ಮಾಡುತ್ತಿದ್ದ ವಂದನಾ ಬಳಿ ʼಅವಳೆಲ್ಲಿʼ ಎಂದು ಪ್ರಶ್ನೆ ಮಾಡುತ್ತಾರೆ. ಎಂದಿಗೂ ಶ್ರಾವಣಿಯ ಬಗ್ಗೆ ಕೇಳದ ಬಾವ ಯಾರ ಬಗ್ಗೆ ಕೇಳುತ್ತಿದ್ದಾರೆ ಎಂದು ಅರಿಯದೇ ವಂದನಾ ʼಯಾರು ಬಾವ, ಪಿಂಕಿನಾʼ ಎಂದು ಪ್ರಶ್ನೆ ಮಾಡುತ್ತಾಳೆ. ಅದಕ್ಕೆ ವೀರೇಂದ್ರ ʼಅಲ್ಲ ಅವಳೆಲ್ಲಿʼ ಎಂದು ಮತ್ತೆ ಕೇಳುತ್ತಾರೆ. ಆಗ ವಂದನಾಗೆ ಅವರು ಕೇಳುತ್ತಿರುವುದು ಶ್ರಾವಣಿ ಬಗ್ಗೆ ಎಂಬುದು ಅರಿವಾಗುತ್ತದೆ. ʼಶ್ರಾವಣಿ ಹೊರಗಡೆ ಇದ್ದಾಳೆ ಬಾವ, ಇರಿ ನಾನು ಕರೆದು ಬರುತ್ತೇನೆʼ ಎಂದು ಹೊರಡುತ್ತಾಳೆ. ಆಗ ವೀರೇಂದ್ರ ಬೇಡ ನಾನೇ ಹೋಗಿ ಮಾತನಾಡುತ್ತೇನೆ ಎಂದು ಹೊರಗೆ ಹೋಗುತ್ತಾರೆ. ಬಾವ ಹೇಳಿದ ಮಾತು ಕೇಳಿ ವಂದನಾಗೆ ಹಾಲು ಕುಡಿದಷ್ಟು ಸಂತಸವಾಗುತ್ತದೆ. ಜೀವನದಲ್ಲಿ ಮೊದಲ ಬಾರಿ ಅಪ್ಪ ಮಗಳನ್ನು ಹುಡುಕಿ ಹೋಗುತ್ತಿರುವುದನ್ನು ನೋಡಿದ ವಂದನಾ ಖುಷಿಯಲ್ಲಿ ತೇಲಾಡುತ್ತಾಳೆ. ಅಲ್ಲದೇ ಬಾವನನ್ನು ಅವರಿಗೆ ತಿಳಿಯದಂತೆ ಹಿಂಬಾಲಿಸುತ್ತಾಳೆ.

ಟ್ರೆಂಡಿಂಗ್​ ಸುದ್ದಿ

ಅಪ್ಪ-ಮಗಳಂತೆ ಇರ್ಬೇಕು ಅಂದ್ರು ವೀರೇಂದ್ರ

ಹೊರಗಡೆ ಲಾನ್‌ನಲ್ಲಿ ಕಿವಿಗೆ ಇಯರ್‌ಫೋನ್‌ ಹಾಕಿಕೊಂಡು ಹಾಡು ಕೇಳುತ್ತಿರುವ ಶ್ರಾವಣಿ ಹಿಂದೆ ಹೋಗಿ ನಿಲ್ಲುತ್ತಾರೆ ವೀರೇಂದ್ರ. ಆದರೆ ಶ್ರಾವಣಿಗೆ ಅವರು ಬಂದಿರುವುದು ಅರಿವಾಗುವುದಿಲ್ಲ. ಅವಳನ್ನು ಭುಜ ಮುಟ್ಟಿ ಕರೆಯಬೇಕು ಎಂದುಕೊಳ್ಳುವ ವೀರೇಂದ್ರಗೆ ಅದು ಸಾಧ್ಯವಾಗುವುದಿಲ್ಲ. ದೂರದಲ್ಲಿ ನಿಂತು ನೋಡುತ್ತಿದ್ದ ವಂದನಾಗೆ ಇದ್ಯಾಕಪ್ಪ ಶ್ರಾವಣಿ ಹೀಗೆ ಮಾಡುತ್ತಿದ್ದಾಳೆ, ಅವಳ್ಯಾಕೆ ಅಪ್ಪ ಬಂದು ನಿಂತಿದ್ದನ್ನು ಗಮನಿಸಿಲ್ಲ ಎಂದು ಬೇಸರ ಮಾಡಿಕೊಳ್ಳುತ್ತಾಳೆ. ಆಗ ವೀರೇಂದ್ರ ಪಕ್ಕದಲ್ಲೇ ಇರುವ ಹೂಕುಂಡ ಎತ್ತಿ ನೆಲಕ್ಕೆ ಬಡಿಯುತ್ತಾರೆ. ಆ ಶಬ್ದಕ್ಕೆ ಶ್ರಾವಣಿ ಹಿಂದಿರುಗಿ ನೋಡುತ್ತಾಳೆ. ಅಲ್ಲಿ ಅಪ್ಪ ನಿಂತಿರುವುದು ನೋಡಿ ಶಾಕ್‌ ಆಗುವ ಶ್ರಾವಣಿ ʼಅಪ್ಪ ಸಾರಿ ಗೊತ್ತಾಗಿಲ್ಲʼ ಅಂತಾಳೆ. ಆಗ ವೀರೇಂದ್ರ ʼನಾನು ನಿನ್ನ ಬಳಿ ಮಾತನಾಡಬೇಕುʼ ಎಂದು ಶ್ರಾವಣಿಗೆ ಹೇಳುತ್ತಾರೆ. ಅದನ್ನು ಕೇಳಿದ ಶ್ರಾವಣಿ ಗಾಳಿಯಲ್ಲಿ ತೇಲುತ್ತಾಳೆ. 

ʼಅಪ್ಪಾ, ನೀವು ನನ್ನ ಜೊತೆ ಮಾತಾಡ್ತೀರಾ ಅಂದ್ರೆ ನಾನು ಇಡೀ ದಿನ ಕೂತು ಕೇಳ್ತೀನಿ, ಹೇಳಿ ಅಪ್ಪಾʼ ಎಂದು ಸಂಭ್ರಮದಲ್ಲಿ ಹೇಳುತ್ತಾಳೆ. ಆಗ ವೀರೇಂದ್ರ ʼನಿನಗೆ ಗೊತ್ತು, ಸಾಲಿಗ್ರಾಮದಿಂದ ನರಸಯ್ಯನವರು ಈ ಮನೆಗೆ ಬಂದು ಹೋದಾಗಿನಿಂದ ನಮ್ಮ ಮನೆಯಲ್ಲಿ ಕೆಲವೊಂದು ಬದಲಾವಣೆಗಳಾಗುತ್ತಿವೆ. ಹಾಗೆ ಇಲ್ಲಿ ನಮ್ಮ ಮನೆಯೇ ಒಂದು ಪ್ರಪಂಚ. ಇಲ್ಲಿ ನಾನು-ನೀನು ಹೇಗಿದ್ದೇವೆ ಎಂಬುದು ಎಲ್ಲರಿಗೂ ಗೊತ್ತು, ಆದರೆ ಸಾಲಿಗ್ರಾಮದಲ್ಲಿ ಹಾಗಲ್ಲ. ಅದು ಬೇರೆಯೇ ಪ್ರಪಂಚ. ಅಲ್ಲಿ ನಾವು ಹೀಗಿರಲಿ ಆಗುವುದಿಲ್ಲʼ ಎಂದು ಹೇಳುತ್ತಾರೆ. ಅವರ ಮಾತು ಕೇಳಿ ಶ್ರಾವಣಿ ʼಅಂದ್ರೆ ಅಪ್ಪ, ಸಾಲಿಗ್ರಾಮದಲ್ಲಿ ನಾನು ಅಪ್ಪ ಮಗಳ ಥರ ಇರ್ಬೇಕುʼ ಅಂತ ನೀವು ಹೇಳ್ತಾ ಇದೀರಾ? ಎಂದು ಪ್ರಶ್ನೆ ಮಾಡುತ್ತಾಳೆ. ಅದಕ್ಕೆ ಹೂಂಗುಟ್ಟುತ್ತಾರೆ ವೀರೇಂದ್ರ. ʼಅಂದ್ರೆ ಸಾಲಿಗ್ರಾಮದಲ್ಲಿ ನಾನು ನಿಮ್ಮ ಜೊತೆ ಮಾತನಾಡಬಹುದು, ನಿಮ್ಮ ಜೊತೆ ಇರಬಹುದು, ನಿಮ್ಮ ಮಡಲಲ್ಲಿ ಮಲಗಬಹುದು, ನಿಮ್ಮನ್ನ ತಬ್ಬಿಕೊಳ್ಳಬಹುದುʼ ಎಂದು ಪಟಪಟನೆ ಸಂಭ್ರಮದಿಂದ ಹೇಳುತ್ತಾಳೆ. 

ಆಗ ವೀರೇಂದ್ರ ಹಾಗೂ ವಂದನಾಗೆ ಅವಳ ಖುಷಿ ನೋಡಿ ಒಂದು ರೀತಿಯ ಖೇದ ಅವರಿಸುತ್ತದೆ. ಹೌದು ಎಂದು ಅಲ್ಲಿಂದ ಹೊರಟ ವೀರೇಂದ್ರ ಮತ್ತೆ ಹಿಂದಿರುಗಿ ಬಂದು ʼಆದರೆ ಒಂದು ವಿಚಾರ ನೆನಪಿರಲಿ, ಇದೆಲ್ಲಾ ಅಲ್ಲಿ ಇದ್ದಾಗ ಮಾತ್ರ, ಇಲ್ಲಿಗೆ ಬಂದ ಮೇಲೆ ಎಲ್ಲವೂ ಮೊದಲಿನಂತೆಯೇ ಇರುತ್ತೆʼ ಎಂದು ಕಡ್ಡಿ ತುಂಡು ಮಾಡಿದಂತೆ ಹೇಳಿ ಹೊರಟು ಬಿಡುತ್ತಾರೆ. ಶ್ರಾವಣಿ ಅಂತು ಕೆಲವು ದಿನಗಳಾದ್ರು ಅಪ್ಪ ತನ್ನೊಂದಿಗೆ ಅಪ್ಪನ ರೀತಿ ಇರುತ್ತಾರೆ ಎಂಬ ಖುಷಿಯಲ್ಲಿ ತೇಲುತ್ತಾಳೆ. ಸಾಲಿಗ್ರಾಮ ತನ್ನ ಪಾಲಿಗೆ ಸ್ವರ್ಗವಾಗಿರಲಿದೆ ಎಂದು ಭಾವಿಸುತ್ತಾ ಸಂತಸ ಪಡುತ್ತಾಳೆ. ಅವಳ ಖುಷಿ ಕಂಡು ವಂದನಾ ಕೂಡ ಖುಷಿ ಪಡುತ್ತಾಳೆ.

ಸಾಲಿಗ್ರಾಮದಿಂದ ಶ್ರಾವಣಿ ಮನೆಗೆ ಬಂದ್ರು ದಂಪತಿ

ಅಪ್ಪ ತನ್ನ ಬಳಿ ಮಾತನಾಡಿದ ಖುಷಿಯನ್ನು ಸುಬ್ಬುಗೆ ಕಾಲ್‌ ಮಾಡಿ ಜೊತೆ ಹಂಚಿಕೊಳ್ಳುತ್ತಾಳೆ ಶ್ರಾವಣಿ. ಇತ್ತ ಶ್ರಾವಣಿಗೆ ಪೂಜಾವಿಧಾನಗಳ ಬಗ್ಗೆ ಕಲಿಸಿಕೊಡಲು ಸಾಲಿಗ್ರಾಮದಿಂದ ದಂಪತಿಗಳು ಬರುತ್ತಾರೆ. ಬರುವಾಗ ಶ್ರಾವಣಿಗೆಂದು ಒಂದಿಷ್ಟು ಆಭರಣ ಎಲ್ಲವನ್ನೂ ತರುತ್ತಾರೆ. ಬಂದವರನ್ನು ಆಧರದಿಂದ ಮಾತನಾಡಿಸುತ್ತಾರೆ ಸುರೇಂದ್ರ ಹಾಗೂ ವಂದನಾ. ಮರುದಿನದಿಂದ ಶ್ರಾವಣಿಗೆ ಎಲ್ಲವನ್ನು ಕಲಿಸುತ್ತೇವೆ ಎನ್ನುವ ದಂಪತಿಗಳಿಗೆ ಉಳಿದುಕೊಳ್ಳುವ ವ್ಯವಸ್ಥೆ ಮಾಡುತ್ತಾರೆ ಸುರೇಂದ್ರ-ವಂದನಾ.

ಸಾಲಿಗ್ರಾಮ ನಿಜಕ್ಕೂ ಶ್ರಾವಣಿ ಪಾಲಿಗೆ ಸ್ವರ್ಗವಾಗುತ್ತಾ, ಶ್ರಾವಣಿಗೆ ಅಜ್ಜಿ ಊರಿನಲ್ಲಿ ತನ್ನ ಜನ್ಮ ರಹಸ್ಯ ತಿಳಿಯುತ್ತಾ, ಶ್ರಾವಣಿಗೆ ತನ್ನ ತಾಯಿ ಬಗ್ಗೆ ಸಾಲಿಗ್ರಾಮದಲ್ಲಿ ಸುಳಿವು ಸಿಗುತ್ತಾ ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.