ವರದನಿಗೆ ಬೇರೆ ಮದುವೆ ಮಾಡುವ ಪ್ರಯತ್ನದಲ್ಲಿ ಪೋಷಕರು, ತಂಗಿ ಭವಿಷ್ಯ ಈಗ ಸುಬ್ಬು ಕೈಯಲ್ಲಿ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ವರದನಿಗೆ ಬೇರೆ ಮದುವೆ ಮಾಡುವ ಪ್ರಯತ್ನದಲ್ಲಿ ಪೋಷಕರು, ತಂಗಿ ಭವಿಷ್ಯ ಈಗ ಸುಬ್ಬು ಕೈಯಲ್ಲಿ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

ವರದನಿಗೆ ಬೇರೆ ಮದುವೆ ಮಾಡುವ ಪ್ರಯತ್ನದಲ್ಲಿ ಪೋಷಕರು, ತಂಗಿ ಭವಿಷ್ಯ ಈಗ ಸುಬ್ಬು ಕೈಯಲ್ಲಿ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

Shravani Subramanya Kannada Serial Today Episode July 17 th: ʼಶ್ರಾವಣಿ ಸುಬ್ರಹ್ಮಣ್ಯʼ ಧಾರಾವಾಹಿಯ ಬುಧವಾರದ ಎಪಿಸೋಡ್‌ನಲ್ಲಿ ಕಠಿಣ ವ್ರತಕ್ಕಾಗಿ ಶ್ರಾವಣಿಯನ್ನು ಸಿದ್ಧ ಮಾಡುವ ಸುಬ್ಬು, ಅಪ್ಪನಿಗೆ ಪೇನ್‌ ಬಾಮ್‌ ಹಚ್ಚಿ ಅತ್ತೆಗೆ ಕೋಕ್‌ ಕೊಟ್ಟ ಶ್ರಾವಣಿ. ವರದನಿಗೆ ಬೇರೆ ಮದುವೆ ಮಾಡುವ ಹುನ್ನಾರದಲ್ಲಿ ಅಪ್ಪ-ಅಮ್ಮ. ಬದಲಾಯ್ತು ಕಾಂತಮ್ಮನ ವರಸೆ.

ವರದನಿಗೆ ಬೇರೆ ಮದುವೆ ಮಾಡುವ ಪ್ರಯತ್ನದಲ್ಲಿ ಪೋಷಕರು, ತಂಗಿ ಭವಿಷ್ಯ ಈಗ ಸುಬ್ಬು ಕೈಯಲ್ಲಿ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ
ವರದನಿಗೆ ಬೇರೆ ಮದುವೆ ಮಾಡುವ ಪ್ರಯತ್ನದಲ್ಲಿ ಪೋಷಕರು, ತಂಗಿ ಭವಿಷ್ಯ ಈಗ ಸುಬ್ಬು ಕೈಯಲ್ಲಿ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ನಿನ್ನೆಯ (ಜುಲೈ 17) ಸಂಚಿಕೆಯಲ್ಲಿ ಶ್ರಾವಣಿಗೆ ಪುಷ್ಕರಿಣಿ ಉತ್ಸವದ ಬಗ್ಗೆ ಎಲ್ಲವನ್ನೂ ಕಲಿಸಿ ಸಾಲಿಗ್ರಾಮಕ್ಕೆ ಮರಳುತ್ತಾರೆ ಆಕಾಶ-ಅಂಬರ. ಇತ್ತ ಸುಬ್ಬು ಬಳಿ ಸಾಲಿಗ್ರಾಮದಲ್ಲಿ ಪಾಲಿಸಬೇಕಾದ ವ್ರತ, ಪೂಜೆಗಳನ್ನು ತನ್ನಿಂದ ಮಾಡಲು ಸಾಧ್ಯವೇ ಎಂದು ಅನುಮಾನ ವ್ಯಕ್ತಪಡಿಸುತ್ತಾಳೆ ಶ್ರಾವಣಿ. ಅವಳಿಗೆ ಧೈರ್ಯ ತುಂಬುವ ಸುಬ್ಬು ಅಜ್ಜಿಯನ್ನು ನೆನಪು ಮಾಡಿ ನೀವು ನಿಮ್ಮ ಅಜ್ಜಿಯನ್ನು ನೋಡಬೇಕು ಅಂದ್ರೆ ಇದನ್ನೆಲ್ಲಾ ಮಾಡಲೇಬೇಕು ಮಾಡ್ತೀರಾ ಮೇಡಂ ಎಂದು ಅವಳಲ್ಲಿ ಆತ್ಮವಿಶ್ವಾಸ ಮೂಡುವಂತೆ ಮಾಡುತ್ತಾನೆ. ಶ್ರಾವಣಿಗೆ ಅಜ್ಜಿಯನ್ನು ನೋಡುವ ತವಕ. ಅದಕ್ಕಾಗಿ ಸುಬ್ಬು ಬಳಿ ನಾವಿಬ್ಬರೂ ಮ್ಯಾಪ್‌ ಹಾಕಿಕೊಂಡು ಸಾಲಿಗ್ರಾಮಕ್ಕೆ ಹೋಗಿ ಅಜ್ಜಿಯನ್ನು ನೋಡಿ ಬರುವ ಎಂದು ತನ್ನ ಮನದ ಆಸೆ ಹೇಳಿಕೊಳ್ಳುತ್ತಾಳೆ. ಆಗ ಸುಬ್ಬು ಮೇಡಂ ಇಷ್ಟ ದಿನವೇ ಕಾದಿದ್ದೀರಂತೆ ಇನ್ನೊಂದು ಸ್ವಲ್ಪ ದಿನ ಕಾಯಿರಿ. ಅವಸರವೇ ಅಪಾಯಕ್ಕೆ ಕಾರಣ. ನಾವೆಲ್ಲರೂ ಹೇಗೂ ಸದ್ಯದಲ್ಲೇ ಸಾಲಿಗ್ರಾಮಕ್ಕೆ ಹೋಗುತ್ತೇವೆ ಆಗಲೇ ಅಜ್ಜಿಯನ್ನು ಭೇಟಿ ಮಾಡಿದ್ರೆ ಒಳ್ಳೇದು ಎಂದು ಸಲಹೆ ನೀಡುತ್ತಾನೆ. ಆ ಹೊತ್ತಿಗೆ ಶ್ರೀವಲ್ಲಿ ವಿಚಾರವಾಗಿ ಸುಬ್ಬುವನ್ನು ಕಿಚಾಯಿಸುತ್ತಾಳೆ ಶ್ರಾವಣಿ.

ಅಪ್ಪನಿಗೆ ಬಾಮ್‌ ಹಚ್ಚುವ ಶ್ರಾವಣಿ

ರಾತ್ರಿ ಊಟ ಮಾಡಿ ಸೋಫಾ ಮೇಲೆ ಕುಳಿತುಕೊಳ್ಳುವ ವೀರೇಂದ್ರ ತಲೆನೋವಿನಿಂದ ನರಳುತ್ತಿರುತ್ತಾರೆ. ಆ ಹೊತ್ತಿಗೆ ಅಲ್ಲಿಗೆ ಬರುವ ಸುರೇಂದ್ರ ನಾಳೆಯ ದಿನಚರಿಗಳ ಬಗ್ಗೆ ವಿವರಿಸುತ್ತಾರೆ. ಅಣ್ಣನಿಗೆ ತಲೆನೋವು ಇರುವುದು ಗಮನಿಸಿ ಪೇನ್‌ ಬಾಮ್‌ ತರಲು ಹೋಗುತ್ತಾರೆ. ಇತ್ತ ಹಾಲ್‌ಗೆ ಬರುವ ವಿಜಯಾಂಬಿಕಾ ತಮ್ಮ ತಲೆನೋವಿನಲ್ಲಿ ಇರುವುದನ್ನು ಗಮನಿಸಿ ನಾಟಕ ಮಾಡುತ್ತಾ ಏನಾಯ್ತಪ್ಪ ವೀರು ಎಂದು ಅವನ ಬಳಿ ಅಕ್ಕರೆಯ ಸೋಗು ತೋರುತ್ತಾಳೆ. ಆಗ ವೀರೇಂದ್ರ ಯಾಕೋ ತಲೆ ನೋಯ್ತಾ ಇದೆ, ಸುರೇಂದ್ರ ಪೇನ್‌ ಬಾಮ್‌ ತರಲು ಹೋಗಿದ್ದಾನೆ ಎಂದು ಹಣೆ ನೀವಿಕೊಳ್ಳುತ್ತಾನೆ. ಪೇನ್‌ ಬಾಮ್‌ ತಂದ ಸುರೇಂದ್ರ ಕೈಯಿಂದ ಬಾಮ್‌ ಕಿತ್ತುಕೊಳ್ಳುವ ವಿಜಯಾಂಬಿಕಾ ತಾನೇ ಹಚ್ಚುತ್ತೇನೆ ಎಂದು ನಾಟಕ ಮಾಡುತ್ತಾಳೆ. ಆದರೆ ಅಷ್ಟೊತ್ತಿಗಾಗಲೇ ಪಿಂಕಿ ಹೋಗಿ ಶ್ರಾವಣಿಯನ್ನು ಕರೆದುಕೊಂಡು ಬರುತ್ತಾಳೆ. ಶ್ರಾವಣಿ ಅತ್ತೆ ನೀವ್ಯಾಕೆ ತೊಂದರೆ ತಗೋತೀರಾ, ನಾನೇ ಪೇನ್‌ ಬಾಮ್‌ ಹಚ್ತೀನಿ ಅಪ್ಪಂಗೆ ಎನ್ನುತ್ತಾಳೆ. ಆಗ ವಿಜಯಾಂಬಿಕಾ ನೀನು ಬಾಮ್‌ ಹಚ್ಚಿದ್ರೆ ವೀರುಗೆ ತಲೆನೋವು ಹೆಚ್ಚಾಗುತ್ತೆ ಎಂದು ಎಂದಿನಂತೆ ತನ್ನ ಕೊಂಕು ಮಾತನಾಡುತ್ತಾಳೆ. ಇದನ್ನು ಕೇಳಿಸಿಕೊಂಡ ಶ್ರಾವಣಿ ʼಅಪ್ಪ ನಾನೇ ನಿಮಗೆ ಬಾಮ್‌ ಹಚ್ಲಾʼ ಎಂದು ಪ್ರಶ್ನೆ ಮಾಡುತ್ತಾಳೆ. ಅದಕ್ಕೆ ವೀರು ಒಪ್ಪಿಗೆ ಸೂಚಿಸುತ್ತಾನೆ. ಇದರಿಂದ ವಿಜಯಾಂಬಿಕಾ ಹಾಗೂ ಮದನ್‌ ಉರಿದು ಬೀಳುತ್ತಾರೆ.

ವರದನಿಗೆ ಹೆಣ್ಣು ನೋಡುವ ತಯಾರಿಯಲ್ಲಿ ಅಪ್ಪ-ಅಮ್ಮ

ವರದನ ಪ್ರೀತಿ ವಿಚಾರ ಗೊತ್ತಾದಾಗಿನಿಂದ ಅವನ ತಾಯಿ ಅವನಿಗೆ ಬೇರೆ ಮದುವೆ ಮಾಡಿಸಬೇಕು ಎಂದು ಹಠ ಹಿಡಿದಿರುತ್ತಾರೆ. ಅದಕ್ಕಾಗಿ ವರದನಿಗೆ ಎಲ್ಲೋ ಹೋಗಬೇಕು ರೆಡಿಯಾಗಿ ಬಾ ಎಂದು ಆಸೆ ಹುಟ್ಟಿಸುತ್ತಾರೆ. ವರದನಿಗೆ ಅಮ್ಮನಿಗೆ ತನ್ನ ಪ್ರೀತಿ ವಿಚಾರ ಗೊತ್ತಾಗಿದೆ, ಅದಕ್ಕೆ ವರಳ ಮನೆಗೆ ಹೆಣ್ಣು ನೋಡಲು ಕರೆದುಕೊಂಡು ಹೋಗಬಹುದು ಎಂದು ಭಾವಿಸಿ ಖುಷಿ ಪಡುತ್ತಾನೆ. ಆದರೆ ವರದನ ತಾಯಿ ಬ್ರೋಕರ್‌ ಅನ್ನು ಮನೆಗೆ ಕರೆಸಿ ವರದನಿಗೆ ಹೆಣ್ಣು ನೋಡುವ ಪ್ಲಾನ್‌ ಮಾಡುತ್ತಾಳೆ. ಚೆಂದದ ಹುಡುಗಿಯರು ಬೇಡ, ಅಂದಕ್ಕಿಂತ ಹಣ ಮುಖ್ಯ ಎಂದು ದುರಾಸೆ ತೋರುತ್ತಾಳೆ ವರದನ ತಾಯಿ ಭಾಗ್ಯಮ್ಮ. ಹಣಕಾಸಿನಲ್ಲಿ ಉತ್ತಮ ಸ್ಥಾನದಲ್ಲಿರುವ ಒಂದಿಷ್ಟು ಹುಡುಗಿಯರ ಫೋಟೊ ತೋರಿಸುವ ಬ್ರೋಕರ್‌ ಮದುವೆ ಬಗ್ಗೆ ತಾನು ನೇರವಾಗಿ ಹುಡುಗ ಜೊತೆ ಮಾತನಾಡಬೇಕು. ಯಾಕಂದ್ರೆ ಈಗಿನ ಕಾಲದಲ್ಲಿ ಇಷ್ಟವಿಲ್ಲದೇ ಮದುವೆಯಾಗಿ ಎರಡೇ ದಿನಕ್ಕೆ ಡೈವೋರ್ಸ್‌ ನೀಡುತ್ತಾರೆ. ಇದರಿಂದ ತನಗೆ ಕೆಟ್ಟ ಹೆಸರು ಎನ್ನುತ್ತಾರೆ. ಅದಕ್ಕೆ ಬಣ್ಣದ ಮಾತನಾಡುವ ಭಾಗ್ಯಮ್ಮ ನನ್ನ ಮಗ ವರದ ನಾವು ಹಾಕಿದೆ ಗೆರೆ ದಾಟುವುದಿಲ್ಲ ಎಂದೆಲ್ಲಾ ಬಿಲ್ಡಪ್‌ ಕೊಟ್ಟು ಅವನನ್ನು ಕರೆಯುತ್ತಾರೆ. ಆದರೆ ಬ್ರೋಕರ್‌ ಕರೆಸಿ ತನ್ನ ಮದುವೆಗೆ ಹೆಣ್ಣು ನೋಡುತ್ತಿದ್ದಾರೆ ಎಂದು ತಿಳಿದ ವರದ ತಾಯಿಯ ಮೇಲೆ ಕೋಪಗೊಳ್ಳುತ್ತಾನೆ. ಅಲ್ಲದೇ ಬ್ರೋಕರ್‌ ಬಳಿ ನೇರವಾಗಿ ತಾನೊಂದು ಹುಡುಗಿಯನ್ನು ಪ್ರೀತಿಸುತ್ತಿದ್ದೇನೆ, ಮದುವೆ ಅಂತ ಆದ್ರೆ ಅವಳನ್ನೇ ಆಗೋದು ಎಂದು ಮುಖದ ಮೇಲೆ ಹೊಡೆದ ಹಾಗೆ ಹೇಳಿ ಹೋಗುತ್ತಾನೆ. ಇದರಿಂದ ವರದ ಪೋಷಕರಿಗೆ ಅವಮಾನವಾಗುತ್ತದೆ. ಬ್ರೋಕರ್‌ ನಾನು ನಿಮ್ಮ ಮಗನಿಗೆ ಹೆಣ್ಣು ನೋಡುವುದಿಲ್ಲ ಎಂದು ಹೇಳಿ ಹೋಗುತ್ತಾರೆ.

ನಿಜವಾಗಿಯೂ ಬದಲಾದ್ಲ ಕಾಂತಮ್ಮ

ಮನೆಯವರಿಗೆಲ್ಲಾ ಊಟ ತಂದಿಟ್ಟು, ಊಟಕ್ಕೆ ಕರೆಯುತ್ತಾಳೆ ಕಾಂತಮ್ಮ, ಮಾತ್ರವಲ್ಲ ತಾವೇ ಊಟಕ್ಕೆ ಬಡಿಸಿ ಸುಬ್ಬು ಮನೆಯವರಿಗೆ ಶಾಕ್‌ ನೀಡುತ್ತಾಳೆ. ಬದಲಾದ ಕಾಂತಮ್ಮನ ವರಸೆ ಕಂಡು ಮನೆಯವರಿಗೆಲ್ಲಾ ಶಾಕ್‌ ಆದ್ರೆ ಪದ್ಮನಾಭ ಮಾತ್ರ ಈ ಬದಲಾವಣೆಗೆಲ್ಲಾ ಕಾರಣಳಾದ ಶ್ರಾವಣಿಗೆ ಮನಸಾರೆ ಧನ್ಯವಾದ ಅರ್ಪಿಸುತ್ತಾರೆ. 

ಇತ್ತ ವರದನಿಗೆ ಹೆಣ್ಣು ನೋಡುವ ವಿಚಾರ ತಿಳಿದ ವರಲಕ್ಷ್ಮೀಗೆ ಆತಂಕ ಹೆಚ್ಚುತ್ತದೆ. ಇದೇ ಬೇಸರದಲ್ಲಿರುವ ವರಲಕ್ಷ್ಮೀ ಊಟ ತಿಂಡಿಯನ್ನೂ ಸರಿಯಾಗಿ ಮಾಡುವುದಿಲ್ಲ. ಇದನ್ನು ಗಮನಿಸಿದ ಸುಬ್ಬು ತಂಗಿಯನ್ನು ಕರೆದು ಕಾರಣ ಕೇಳುತ್ತಾನೆ. ಆಗ ವರಲಕ್ಷ್ಮೀ ವರದನಿಗೆ ಮನೆಯವರು ಮದುವೆ ಫಿಕ್ಸ್‌ ಮಾಡುತ್ತಿರುವ ವಿಚಾರ ಹೇಳುತ್ತಾಳೆ. ಇದರಿಂದ ಸುಬ್ಬುಗೆ ಟೆನ್‌ಷನ್‌ ಆದ್ರೂ ಕೂಡ ಸಮಯ ಸಂದರ್ಭ ನೋಡಿ ಮನೆಯಲ್ಲಿ ಮಾತನಾಡುತ್ತೇನೆ, ನೀನು ಮೊದಲು ಓದಿನ ಕಡೆ ಗಮನ ಕೊಡು. ನಿನ್ನ ಓದು ಬಹಳ ಮುಖ್ಯ. ನಾನು ಖಂಡಿತ ವರದನ ಜೊತೆ ನಿನ್ನ ಮದುವೆ ಮಾಡುತ್ತೇನೆ ಎಂದು ಪ್ರಾಮಿಸ್‌ ಮಾಡುತ್ತಾನೆ. ಇದರಿಂದ ವರಲಕ್ಷ್ಮೀ ಖುಷಿಯಿಂದ ಉಬ್ಬಿ ಹೋಗುತ್ತಾಳೆ. ಇತ್ತ ಸುಬ್ಬು ಪಿಎ ಆಗಲು ಸಕಲ ಸಿದ್ಧತೆ ನಡೆಸಿರುವ ಶ್ರೀವಲ್ಲಿಗೆ ಸಿಗುತ್ತೆ ಧನಲಕ್ಷ್ಮೀ ಸಹಾಯ.

ವರದ-ವರಲಕ್ಷ್ಮೀ ಮದುವೆ ಮಾಡಿಸುತ್ತಾನಾ ಸುಬ್ಬು, ಸಾಲಿಗ್ರಾಮದಲ್ಲಿ ಯಾವುದೇ ಕಳಂಕ ಬಾರದಂತೆ ಪೂಜೆ, ವ್ರತ ನೆರವೇರಿಸುತ್ತಾಳಾ ಶ್ರಾವಣಿ, ವಿಜಯಾಂಬಿಕಾಗೆ ಸೋಲಾಗುತ್ತಾ ಗೆಲುವಾಗುತ್ತಾ? ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.

Whats_app_banner