ಶ್ರೀವಲ್ಲಿಗೆ ಸಿಕ್ತು ಮಿನಿಸ್ಟರ್ ಮನೆಯಲ್ಲಿ ಕೆಲಸ, ಸುಬ್ಬು ಮನೆಯವರನ್ನ ಬೀದಿಪಾಲು ಮಾಡಿದ್ಲು ಇಂದ್ರಮ್ಮ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ
Shravani Subramanya Kannada Serial Today Episode July 22nd: ʼಶ್ರಾವಣಿ ಸುಬ್ರಹ್ಮಣ್ಯʼ ಧಾರಾವಾಹಿಯ ಸೋಮವಾರದ ಎಪಿಸೋಡ್ನಲ್ಲಿ ವರದ-ವರಲಕ್ಷ್ಮೀ ಪ್ರೀತಿ ವಿಚಾರ ಮುಂದಿಟ್ಟುಕೊಂಡು ಸುಬ್ಬು ಸಂಸಾರವನ್ನ ಬೀದಿಪಾಲು ಮಾಡಿದ್ರು ಇಂದ್ರಮ್ಮ. ಸುಬ್ಬು ಸಂದರ್ಶನದಲ್ಲಿ ಫೇಲ್ ಆದ ಶ್ರೀವಲ್ಲಿಯನ್ನ ಡಾನ್ಸ್ ಟೀಚರ್ ಆಗಿ ನೇಮಿಸಿಕೊಂಡ ವಿಜಯಾಂಬಿಕಾ.
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ನಿನ್ನೆಯ (ಜುಲೈ 22ರ) ಸಂಚಿಕೆಯಲ್ಲಿ ತನ್ನ ತಾಯಿಯ ಮೋಸ ಅರಿಯದ ವರದ ತಾಯಿ ಬಳಿ ತಾನು ಪ್ರೀತಿಸುತ್ತಿರುವುದು ಕೆಳಗಿನ ಮನೆ ವರಲಕ್ಷ್ಮೀಯನ್ನೇ ಎಂದು ಹೇಳಿಬಿಡುತ್ತಾನೆ, ಆ ಹೊತ್ತಿಗೆ ಮೈ ಮೇಲೆ ಹಲ್ಲಿ ಬಿತ್ತು ಎಂದು ವರದನ ತಾಯಿ ಇಂದ್ರಮ್ಮ ಆಶೀರ್ವಾದ ಪಡೆಯಲು ಬರುತ್ತಾಳೆ ವರಲಕ್ಷ್ಮೀ. ಅವಳನ್ನು ನೋಡಿದ್ದೆ ಗಲಾಟೆ ಮಾಡುವ ಇಂದ್ರಮ್ಮ ಆಸ್ತಿಗಾಗಿ ಸುಬ್ಬು ತಂದೆ ತಾಯಿ ತನ್ನ ಮಕ್ಕಳ ಹಿಂದೆ ಅವರ ಮಕ್ಕಳನ್ನು ಬಿಟ್ಟಿದ್ದಾರೆ ಎಂದು ಗಲಾಟೆ ಮಾಡುತ್ತಾರೆ. ವರದ ಎಷ್ಟೇ ಹೇಳಿದ್ರು ಕೇಳದ ಇಂದ್ರಮ್ಮ ಸುಬ್ಬು ಮನೆಯ ಮುಂದೆ ಬಂದು ಗಲಾಟೆ ಮಾಡಲು ನಿರ್ಧಾರ ಮಾಡುತ್ತಾಳೆ.
ಸುಬ್ಬು ಇಂಟರ್ವ್ಯೂನಲ್ಲಿ ಶ್ರೀವಲ್ಲಿ ಫೇಲ್
ಶ್ರಾವಣಿ ಅಜ್ಞೆಯಂತೆ ಶ್ರೀವಲ್ಲಿಗೆ ಇಂಟರ್ವ್ಯೂ ಮಾಡುತ್ತಾನೆ ಸುಬ್ಬು. ಆದರೆ ಸುಬ್ಬು ಕೇಳಿದ ಮೂರು ಜನರಲ್ ನಾಲ್ಡೆಜ್ ಪ್ರಶ್ನೆಗಳಿಗೆ ತಪ್ಪು ಉತ್ತರ ಕೊಡುತ್ತಾಳೆ ಶ್ರೀವಲ್ಲಿ. ಇದರಿಂದ ಅವಳು ಇಂಟರ್ವ್ಯೂನಲ್ಲಿ ಫೇಲಾಗುತ್ತಾಳೆ. ಶ್ರೀವಲ್ಲಿ ಬಳಿ ನೀನು ಕೆಲಸಕ್ಕೆ ಸೇರಲು ಸಾಧ್ಯವಿಲ್ಲ. ನೀನು ಇಂಟರ್ವ್ಯೂನಲ್ಲಿ ಫೇಲ್ ಆಗಿದ್ದೀಯಾ ಎಂದು ಹೇಳಿದ್ದೆ ತಡ ಅಳುತ್ತಾ ಕೆಳಗಡೆ ಓಡಿ ಹೋಗುತ್ತಾಳೆ. ಆ ಹೊತ್ತಿಗೆ ಸರಿಯಾಗಿ ಎದುರಾಗುತ್ತಾಳೆ ವಿಜಯಾಂಬಿಕಾ.
ಶ್ರೀವಲ್ಲಿಗೆ ಕೆಲಸ ಕೊಟ್ಟ ವಿಜಯಾಂಬಿಕಾ
ಮೊದಲೇ ಶ್ರೀವಲ್ಲಿ ಮೇಲೆ ಕಣ್ಣು ಹಾಕಿಕೊಂಡಿದ್ದ ವಿಜಯಾಂಬಿಕಾ ಮೇಲಿಂದ ಅಳುತ್ತಾ ಬರುತ್ತಿರುವ ಶ್ರೀವಲ್ಲಿಯನ್ನು ನೋಡಿ ಯಾಕಮ್ಮಾ ಅಳುತ್ತಿದ್ದೀಯಾ ಎಂದು ನಾಟಕ ಮಾಡುತ್ತಾಳೆ. ಆಗ ಶ್ರೀವಲ್ಲಿ ಸುಬ್ಬು ನನಗೆ ಕೆಲಸ ಕೊಡುತ್ತಿಲ್ಲ ಎಂದು ವಿಚಾರವನ್ನು ಹೇಳುತ್ತಾಳೆ. ಅದಕ್ಕೆ ಈ ಮನೆಯಲ್ಲಿ ಕೆಲಸ ಕೊಡೋಕೆ ಸುಬ್ಬು ಯಾರು, ಇಲ್ಲಿ ಏನಿದ್ರೂ ನಂದೇ ನಡಿಬೇಕು. ನಾನು ನಿನಗೆ ಕೆಲಸ ಕೊಡುತ್ತೇನೆ ಎಂದು ಹೇಳುತ್ತಾಳೆ. ಆದರೆ ನಿಂಗೆ ಏನ್ ಕೆಲಸ ಕೊಡೋದು ಅಂತ ಗೊತ್ತಾಗುತ್ತಿಲ್ಲ ಎಂದು ಹೇಳಿದ್ದೆ ತಡ ಶ್ರೀವಲ್ಲಿ ಮೇಡಂ ನನ್ನನ್ನು ನಿಮ್ಮ ಪಿಎ ಆಗಿ ಮಾಡಿಕೊಳ್ಳಿ ಎಂದು ಹೇಳುತ್ತಾಳೆ. ಆಗ ವಿಜಯಾಂಬಿಕಾ ನಾನು ನಿನ್ನನ್ನು ಪಿಎ ಆಗಿ ಮಾಡಿಕೊಳ್ಳುವಷ್ಟು ದೊಡ್ಡವಳಲ್ಲ ಎನ್ನುತ್ತಿರುವಾಗಲೇ ಪಿಂಕಿ ಅವರ ಮಧ್ಯೆ ಓಡಿ ಹೋಗುತ್ತಾಳೆ. ಆಗ ವಿಜಯಾಂಬಿಕಾ ಕುತಂತ್ರಿ ತಲೆಗೆ ಐಡಿಯಾವೊಂದು ಹೊಳೆಯುತ್ತದೆ. ನಿಂಗೆ ಡಾನ್ಸ್ ಬರುತ್ತಾ ಎಂದು ಶ್ರೀವಲ್ಲಿ ಬಳಿ ಕೇಳ್ತಾರೆ, ಅದಕ್ಕೆ ಖುಷಿಯಿಂದ ಹೌದು ಮೇಡಂ ನಾನು ಚೆನ್ನಾಗಿ ಕುಣಿತೀನಿ ಎಂದು ಶ್ರೀವಲ್ಲಿ ಹೇಳ್ತಾಳೆ. ಆಗ ವಿಜಯಾಂಬಿಕಾ ಹಾಗಾದ್ರೆ ನೀನು ನಾಳೆಯಿಂದ ಪಿಂಕಿಗೆ ಡಾನ್ಸ್ ಟೀಚರ್ ಆಗಿ ಬಾ ಎಂದು ಫಿಕ್ಸ್ ಮಾಡುತ್ತಾಳೆ, ಇದರಿಂದ ಮದನ್ಗೆ ಒಳಗೊಳಗೆ ಖುಷಿ ಆಗುತ್ತದೆ. ಇತ್ತ ವಿಜಯಾಂಬಿಕಾ ಶ್ರೀವಲ್ಲಿಯನ್ನು ವೀರೇಂದ್ರಗೆ ಹತ್ತಿರ ಮಾಡುವ ಮೂಲಕ ಶ್ರಾವಣಿಯನ್ನು ಇನ್ನಷ್ಟು ದೂರ ಮಾಡುವ ಪ್ಲಾನ್ ಮಾಡಿಕೊಂಡಿರುತ್ತಾಳೆ.
ಸುಬ್ಬು ಸಂಸಾರವನ್ನು ಬೀದಿಗೆ ತಂದ ಇಂದ್ರಮ್ಮ
ವರಲಕ್ಷ್ಮೀಯನ್ನು ದರದರನೆ ಮನೆಗೆ ಎಳೆದುಕೊಂಡು ಬರುವ ಇಂದ್ರಮ್ಮ ಅನಂತಪದ್ಮನಾಭ ಹಾಗೂ ವಿಶಾಲಕ್ಷಿಯನ್ನು ಕರೆಯುತ್ತಾಳೆ, ಅವರ ಮೇಲೆ ಇಲ್ಲಸಲ್ಲದ ಅಪಾದನೆ ಮಾಡುವ ಆಕೆ ಆಸ್ತಿ ಪಟಾಯಿಸಲು ನಿಮ್ಮಿಬ್ಬರು ಮಕ್ಕಳನ್ನು ನನ್ನ ಮಕ್ಕಳ ಹಿಂದೆ ಬಿಟ್ಟಿದ್ದೀರಾ ಎಂದು ಗಲಾಟೆ ಮಾಡುತ್ತಾಳೆ. ಆದರೆ ಯಾವುದೇ ವಿಚಾರ ತಿಳಿದಿರದ ಸುಬ್ಬು ಮನೆಯವರು ಕಂಗಾಲಾಗುತ್ತಾರೆ. ಕೊನೆಗೆ ಇಂದ್ರಮ್ಮ ವರಲಕ್ಷ್ಮೀ-ವರದನ ಪ್ರೀತಿಯನ್ನು ಅವರ ಮುಂದೆ ಹೇಳುತ್ತಾರೆ. ಇದರಿಂದ ಮನೆಯವರೆಲ್ಲಾ ಶಾಕ್ ಆಗುತ್ತಾರೆ. ಆಗ ಬಾಗಿಲಲ್ಲಿ ನಿಂತಿರುವ ಕಾಂತಮ್ಮ ಇಂದ್ರಮ್ಮನಿಗೆ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಇದರಿಂದ ರೋಷಗೊಳ್ಳುವ ಇಂದ್ರಮ್ಮ ಸುಬ್ಬು ಮನೆಯವರನ್ನು ಹೊರ ಹಾಕುವ ನಿರ್ಧಾರ ಮಾಡುತ್ತಾರೆ. ಬೀದಿಯಲ್ಲಿ ನಿಂತು ರಂಪ ಮಾಡಿರುವುದು ಮಾತ್ರವಲ್ಲ, ಮನೆಯ ವಸ್ತಗಳನ್ನೆಲ್ಲಾ ಹೊರ ಹಾಕಿ ಈಗಲೇ ಮನೆಬಿಟ್ಟು ಹೋಗುವಂತೆ ತಾಕೀತು ಮಾಡುತ್ತಾಳೆ.
ಮನೆಯವರು ಬೀದಿಗೆ ಬಂದ ವಿಚಾರ ತಿಳಿದ ಸುಬ್ಬು ಏನಾಡ್ತಾನೆ, ವರನ ಪ್ರೀತಿಗೆ ಕಾವಲಾಗಿ ಇರುತ್ತೇನೆ ಎಂದವನ ಮುಂದಿನ ಆಯ್ಕೆ ಏನು, ಶ್ರೀವಲ್ಲಿ ಮಿನಿಸ್ಟರ್ ಮನೆಗೆ ಬರೋದು ಶ್ರಾವಣಿಗೆ ಉರುಳಾಗುತ್ತಾ ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.