ಫಾರ್ಮ್ಹೌಸ್ ರಹಸ್ಯದ ಬೆನ್ನತ್ತಿದ ಶ್ರಾವಣಿ; ಸುಬ್ಬು ಮನೆಗೆ ಮತ್ತೆ ಬಂದ ಶ್ರೀವಲ್ಲಿ ಉದ್ದೇಶವೇನು? ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ
Shravani Subramanya Kannada Serial Today Episode July 29th: ʼಶ್ರಾವಣಿ ಸುಬ್ರಹ್ಮಣ್ಯʼ ಧಾರಾವಾಹಿಯ ಸೋಮವಾರದ ಎಪಿಸೋಡ್ನಲ್ಲಿ ಫಾರ್ಮ್ಹೌಸ್ ರಹಸ್ಯ ತಿಳಿಯಲು ಮುಂದಾಗುತ್ತಾಳೆ ಶ್ರಾವಣಿ. ಸುರೇಂದ್ರ ಫಾರ್ಮ್ಗೆ ಹೋಗುವುದನ್ನು ತಡೆಯುವ ವಿಜಯಾಂಬಿಕಾ. ಶ್ರೀವಲ್ಲಿ ಮತ್ತೆ ಸುಬ್ಬು ಮನೆಗೆ ಬರಲು ಕಾರಣವೇನು?
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ನಿನ್ನೆಯ (ಜುಲೈ 29ರ) ಸಂಚಿಕೆಯಲ್ಲಿ ವಿಜಯಾಂಬಿಕಾ ಫಾರ್ಮ್ಹೌಸ್ ಹೆಸರು ಕೇಳಿದಾಕ್ಷಣ ಅಷ್ಟು ಟೆನ್ಷನ್ ಆಗುವುದನ್ನು ಗಮನಿಸಿದ ಶ್ರಾವಣಿ ಅಲ್ಲೇನೋ ರಹಸ್ಯ ಇದೆ ಎಂಬುದನ್ನು ಅರಿತುಕೊಳ್ಳುತ್ತಾಳೆ. ಮಾತ್ರವಲ್ಲ ತಾನು ಫಾರ್ಮ್ಹೌಸ್ಗೆ ಹೋದ್ರೆ ತನಗೆ ಆ ರಹಸ್ಯ ತಿಳಿಯುತ್ತೆ, ಆದರೆ ಅಪ್ಪ ತನಗೆ ಮನೆಯಿಂದ ಹೊರಗಡೆ ಹೋಗಬೇಡ ಎಂದು ಹೇಳಿದ್ದಾರೆ, ಈಗೇನು ಮಾಡೋದು ಅಂತ ಚಿಂತೆ ಮಾಡ್ತಾಳೆ. ರಾತ್ರಿ ಮಲಗಿದ್ರು ನಿದ್ದೆ ಬಾರದೇ ಇದ್ದಾಗ ಸುಬ್ಬುಗೆ ಕಾಲ್ ಮಾಡಿ ಒಂದು ಪ್ರಶ್ನೆ ಕೇಳುತ್ತಾಳೆ.
ಸುಬ್ಬುಗೆ ಟಾಸ್ಕ್ ನೀಡಿದ ಶ್ರಾವಣಿ
ಸುಬ್ಬು ಸಹಾಯ ಪಡೆದು ಹೇಗಾದ್ರೂ ಮನೆಯಿಂದ ಹೊರ ಹೋಗಬೇಕು ಎಂದು ಶ್ರಾವಣಿ ಪ್ಲಾನ್ ಮಾಡುತ್ತಾಳೆ. ಸುಬ್ಬು ಬಳಿ ಒಳ್ಳೆಯ ಕಾರಣದಿಂದ ಹಿರಿಯರು ಹಾಕಿದ ಗೆರೆ ದಾಟಿದ್ರೆ ತಪ್ಪಾಗುತ್ತಾ ಎಂದು ಪ್ರಶ್ನೆ ಕೇಳುತ್ತಾಳೆ. ಆಗ ಸುಬ್ಬು ಸೀತಾಮಾತೆಯ ಉದಾಹರಣೆ ಹೇಳಿ ಒಮ್ಮೊಮ್ಮೆ ತಪ್ಪಾಗುತ್ತೆ, ಆದರೆ ಅದರ ಹಿಂದಿನ ಉದ್ದೇಶ ಒಳ್ಳೆಯದಾದ್ರೆ ಯಾವುದೂ ತಪ್ಪಲ್ಲ. ಯಾಕಂದ್ರೆ ಸೀತಾಮಾತೆ ಅಂದು ಲಕ್ಷಣ ಹಾಕಿದ ಗೆರೆ ದಾಟಿಲ್ಲ ಅಂದ್ರೆ ರಾಮಾಯಣ ನಡಿತಾ ಇರ್ಲಿಲ್ಲ, ದುಷ್ಟರ ಸಂಹಾರ ಆಗ್ತಾ ಇರ್ಲಿಲ್ಲಾ ಅಂತ ಹೇಳ್ತಾನೆ, ಅದನ್ನು ಕೇಳಿದ ಶ್ರಾವಣಿಗೆ ಬೆಟ್ಟದಷ್ಟು ಖುಷಿಯಾಗುತ್ತದೆ. ಅವಳ ಮನದಲ್ಲಿದ್ದ ಗೊಂದಲ ಪರಿಹಾರವಾಗುತ್ತದೆ. ಆ ಹೊತ್ತಿಗೆ ಶ್ರಾವಣಿ ಸುಬ್ಬುಗೆ ಒಂದು ಟಾಸ್ಕ್ ನೀಡುತ್ತಾಳೆ. ಆ ಟಾಸ್ಕ್ನಲ್ಲಿ ಸುಬ್ಬು ಸೋತರೆ ತಾನು ಹೇಳಿದಂತೆ ಕೇಳಬೇಕು ಎಂದು ಪ್ರಾಮಿಸ್ ಮಾಡಿಸಿಕೊಳ್ಳುತ್ತಾಳೆ. ಶ್ರಾವಣಿ ಸುಬ್ಬುಗೆ ನೀಡಿದ ಟಾಸ್ಕ್ ಏನಂದ್ರೆ ಗುಡ್ ಮಾರ್ನಿಂಗ್ ಮೇಡಂ ಅನ್ನುವ ಬದಲು ಗುಡ್ ಮಾರ್ನಿಂಗ್ ಶ್ರಾವಣಿ ಅನ್ನಬೇಕು ಅಂತ. ಹಾಗಾದ್ರೆ ಟಾಸ್ಕ್ನಲ್ಲಿ ಗೆಲ್ಲೋದು ಯಾರು?
ಸುರೇಂದ್ರ ಫಾರ್ಮ್ ಹೌಸ್ಗೆ ಹೋಗವುದನ್ನು ತಡೆದ ವಿಜಯಾಂಬಿಕಾ
ಫಾರ್ಮ್ ಹೌಸ್ ಹೆಸರು ಕೇಳಿದಾಗಿನಿಂದ ಭಯದಲ್ಲಿರುವ ವಿಜಯಾಂಬಿಕ ಬಳಿ ಬರುವ ಮದನ್ ತಾಯಿಯ ಬಳಿ ಫಾರ್ಮ್ ಹೌಸ್ನಲ್ಲಿ ಏನಿದೆ ಎಂದು ಕೇಳ್ತಾನೆ, ಅದಕ್ಕೆ ರೇಗಿ ಅವನನ್ನು ಕಳುಹಿಸುತ್ತಾಳೆ ವಿಜಯಾಂಬಿಕಾ. ಇದನ್ನೆಲ್ಲಾ ಮರೆಯಿಂದ ನೋಡುತ್ತಿರುವ ಶ್ರಾವಣಿಗೆ ಫಾರ್ಮ್ ಹೌಸ್ನಲ್ಲಿ ಏನೋ ಇರುವುದು ಪಕ್ಕಾ ಆಗುತ್ತದೆ. ಅಷ್ಟೊತ್ತಿಗೆ ವಿಜಯಾಂಬಿಕ ರೂಮ್ ಬಳಿ ಬರುವ ಸುರೇಂದ್ರನಿಗೆ ನೀನು ಫಾರ್ಮ್ ಹೌಸ್ಗೆ ಹೋಗೋದು ಬೇಡ, ನೀನು ನಿನಗಿರುವ ಬೇರೆ ಕೆಲಸ ನೋಡಿಕೋ. ನಾನೇ ಹೋಗಿ ಬರ್ತೀನಿ ಅಂತಾಳೆ. ಇದನ್ನೆಲ್ಲಾ ಕೇಳಿಸಿಕೊಳ್ಳುವ ಶ್ರಾವಣಿ ತಾನು ವಿಜಯಾಂಬಿಕ ಗುಟ್ಟು ಕಂಡುಹಿಡಿಯಲೇಬೇಕು ಎಂದು ನಿರ್ಧಾರ ಮಾಡುತ್ತಾಳೆ.
ಟಾಸ್ಕ್ನಲ್ಲಿ ಸೋತ ಸುಬ್ಬುಗೆ ಶ್ರಾವಣಿ ನೀಡಿದ್ಲು ಶಿಕ್ಷೆ
ಬೆಳಗೆದ್ದು ಯಜಮಾನರ ಮನೆಗೆ ಬರುವ ಸುಬ್ಬು ಶ್ರಾವಣಿ ರೂಮ್ಗೆ ಬಂದು ಗುಡ್ ಮಾರ್ನಿಂಗ್ ಮೇಡಂ ಎನ್ನುತ್ತಾರೆ. ಅವರು ಟಾಸ್ಕ್ನಲ್ಲಿ ಸೋತಿದ್ದು ನೋಡಿ ಶ್ರಾವಣಿ ಅವಳಿಗೆ ಶಿಕ್ಷೆ ನೀಡುತ್ತಾಳೆ. ಆ ಶಿಕ್ಷೆ ಏನೆಂದರೆ ಅವಳನ್ನು ಹೊರಗಡೆ ಕರೆದುಕೊಂಡು ಹೋಗುವುದು. ಆದರೆ ಯಜಮಾನರು ಹೇಳಿದ ಮಾತನ್ನು ಎಂದೂ ಧಿಕ್ಕರಿಸದ ಸುಬ್ಬು ಇದಕ್ಕೆ ಒಪ್ಪುದಿಲ್ಲ. ಆದರೆ ಶ್ರಾವಣಿ ಹಠದ ಮುಂದೆ ಅವನ ಮಾತು ನಡೆಯುವುದಿಲ್ಲ. ಮನೆಯಲ್ಲಿ ಯಾರಿಗೂ ಅನುಮಾನ ಬರದಂತೆ ವಾಯ್ಸ್ ರೆಕಾರ್ಡ್ ಮಾಡಿ ಪಿಂಕಿಗೆ ಅದನ್ನು ಆನ್ ಮಾಡುವಂತೆ ಹೇಳಿ ಹೊರಡಲು ಸಿದ್ಧಳಾಗುತ್ತಾಳೆ.
ಸುಬ್ಬು ಮನೆಗೆ ಮತ್ತೆ ಬಂದೇಬಿಟ್ಲು ಶ್ರೀವಲ್ಲಿ
ಇಂದ್ರಮ್ಮ ತಾಕೀತು ಮಾಡಿದಾಗಿನಿಂದ ಸುಬ್ಬು ಮನೆ ಕಡೆ ಬಾರದ ಶ್ರೀವಲ್ಲಿ ಇಂದು ಬರುತ್ತಾಳೆ. ಅವಳನ್ನು ನೋಡಿ ನಡುಗಿ ಹೋಗುತ್ತಾರೆ ವಿಶಾಲಾಕ್ಷಿ, ಪದ್ಮನಾಭ. ಮನೆಗೆ ಬರಬೇಡ ಎಂದು ಅವಳ ಬಳಿ ಕೇಳಿಕೊಳ್ಳುತ್ತಾರೆ. ಅವರಿಗೆ ಸಮಾಧಾನ ಮಾಡುವ ಶ್ರೀವಲ್ಲಿ ನೀವು ಹೆದರಬೇಡಿ, ಅಮ್ಮ ಮನೆಯಲ್ಲಿ ಇಲ್ಲ ಅದಕ್ಕೆ ಬಂದೆ ನಾನು ವರಳನ್ನು ನೋಡಬೇಕು ಅಂತ ಹೇಳ್ತಾಳೆ. ಅದರಿಂದ ಇನ್ನಷ್ಟು ಗಾಬರಿಯಾಗುವ ಪದ್ಮನಾಭ ವಿಶಾಲಾಕ್ಷಿ ದಯವಿಟ್ಟು ಬೇಡ, ಇದ್ರಿಂದ ನಮ್ಮ ಮನೆಗೆ ಇನ್ನಷ್ಟು ತೊಂದರೆ ಆಗುತ್ತೆ ಅಂತ ಅವಳ ಬಳಿ ಬೇಡಿಕೊಳ್ಳುತ್ತಾರೆ. ಆಗ ಅಲ್ಲಿಗೆ ಬರುವ ಸುಬ್ಬು ಅಕ್ಕ ಧನಲಕ್ಷ್ಮೀ ಈ ಮನೆಗೆ ಶ್ರೀವಲ್ಲಿಯಿಂದ ಯಾವುದೇ ತೊಂದರೆ ಆಗುವುದಿಲ್ಲ. ಅವಳು ಈ ಮನೆಯ ಶ್ರೀರಕ್ಷೆ, ನೀವು ಹೆದರಬೇಡಿ ಎಂದು ಹೇಳಿ ವರಲಕ್ಷ್ಮೀ ಇರುವಲ್ಲಿಗೆ ಶ್ರೀವಲ್ಲಿಯನ್ನು ಕರೆದುಕೊಂಡು ಹೋಗುತ್ತಾಳೆ.
ಸುಬ್ಬು ಶ್ರಾವಣಿಯನ್ನು ಹೊರಗಡೆ ಕರೆದುಕೊಂಡು ಹೋಗುತ್ತಾನಾ, ವಿಜಯಾಂಬಿಕಾ ಫಾರ್ಮ್ ಹೌಸ್ ರಹಸ್ಯ ಶ್ರಾವಣಿ–ಸುಬ್ಬುಗೆ ತಿಳಿಯುತ್ತಾ, ಶ್ರೀವಲ್ಲಿ ವರಲಕ್ಷ್ಮೀಯನ್ನು ಭೇಟಿ ಆಗಿದ್ದಾದ್ರೂ ಯಾಕೆ? ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.