ಶ್ರಾವಣಿ-ಸುಬ್ಬು ಮುಂದೆ ವಿಜಯಾಂಬಿಕಾ ಕರಾಳ ಮುಖ; ಫಾರ್ಮ್‌ಹೌಸ್‌ನಲ್ಲಿ ಕೂಡಿದ ಹಾಕಿದ ವ್ಯಕ್ತಿ ಯಾರು? ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ಶ್ರಾವಣಿ-ಸುಬ್ಬು ಮುಂದೆ ವಿಜಯಾಂಬಿಕಾ ಕರಾಳ ಮುಖ; ಫಾರ್ಮ್‌ಹೌಸ್‌ನಲ್ಲಿ ಕೂಡಿದ ಹಾಕಿದ ವ್ಯಕ್ತಿ ಯಾರು? ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

ಶ್ರಾವಣಿ-ಸುಬ್ಬು ಮುಂದೆ ವಿಜಯಾಂಬಿಕಾ ಕರಾಳ ಮುಖ; ಫಾರ್ಮ್‌ಹೌಸ್‌ನಲ್ಲಿ ಕೂಡಿದ ಹಾಕಿದ ವ್ಯಕ್ತಿ ಯಾರು? ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

Shravani Subramanya Kannada Serial Today Episode July 30th: ʼಶ್ರಾವಣಿ ಸುಬ್ರಹ್ಮಣ್ಯʼ ಧಾರಾವಾಹಿಯ ಮಂಗಳವಾರದ ಎಪಿಸೋಡ್‌ನಲ್ಲಿ ವಿಜಯಾಂಬಿಕ ಬೆನ್ನು ಹತ್ತಿ ಫಾರ್ಮ್‌ಹೌಸ್‌ಗೆ ಹೋದ ಸುಬ್ಬು-ಶ್ರಾವಣಿಗೆ ಕಾದಿತ್ತು ಆಘಾತ. ಫಾರ್ಮ್‌ಹೌಸ್‌ನಲ್ಲಿ ಅವರಿಗೆ ಕಾಣಿಸಿದ ವ್ಯಕ್ತಿ ಯಾರು? ಇಂದ್ರಮ್ಮ ಕೈಯಲ್ಲಿ ಸಿಕ್ಕಿ ಹಾಕಿಕೊಳ್ತಾರಾ ವರದ-ವರಲಕ್ಷ್ಮೀ-ಶ್ರೀವಲ್ಲಿ.

ಫಾರ್ಮ್‌ಹೌಸ್‌ನಲ್ಲಿ ಬಯಲಾಯ್ತು ವಿಜಯಾಂಬಿಕಾ ಕರಾಳ ಮುಖ, ಶ್ರಾವಣಿ-ಸುಬ್ಬು ನೋಡಿದ ಆ ವ್ಯಕ್ತಿ ಯಾರು? ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ
ಫಾರ್ಮ್‌ಹೌಸ್‌ನಲ್ಲಿ ಬಯಲಾಯ್ತು ವಿಜಯಾಂಬಿಕಾ ಕರಾಳ ಮುಖ, ಶ್ರಾವಣಿ-ಸುಬ್ಬು ನೋಡಿದ ಆ ವ್ಯಕ್ತಿ ಯಾರು? ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ನಿನ್ನೆಯ (ಜುಲೈ 30ರ) ಸಂಚಿಕೆಯಲ್ಲಿ ಸುಬ್ಬು ಜೊತೆ ಫಾರ್ಮ್‌ ಹೌಸ್‌ಗೆ ಹೋಗಲು ಸಿದ್ಧಳಾಗುವ ಶ್ರಾವಣಿ ಅದಕ್ಕೆ ತಕ್ಕಂತೆ ಪಿಂಕಿಯನ್ನು ಸಿದ್ಧ ಮಾಡಿರುತ್ತಾರೆ. ವಾಟ್ಸ್‌ಆಪ್‌ನಲ್ಲಿ ವಾಯ್ಸ್‌ ರೆಕಾರ್ಡ್‌ ಮಾಡಿ ಪಿಂಕಿಗೆ ಕಳುಹಿಸುವ ಶ್ರಾವಣಿ ಅದರಂತೆ ಪ್ಲೇ ಮಾಡುವಂತೆ ಹೇಳಿಕೊಟ್ಟಿರುತ್ತಾಳೆ. ಸುಬ್ಬು ಇದೆಲ್ಲವನ್ನೂ ವಿವರಿಸಿದ, ನಂತರ ಸುಬ್ಬುವನ್ನು ಕರೆದುಕೊಂಡು ಹಿಂದಿನ ಬಾಗಿಲಿನಿಂದ ಮನೆಯಿಂದ ಹೊರ ಬರುತ್ತಾಳೆ. ವಿಜಯಾಂಬಿಕಾ ಕಾರು ಹೊರಡುವುದನ್ನೇ ಕಾಯುವ ಶ್ರಾವಣಿ ಸುಬ್ಬು ಬಳಿ ಈಗ ರಾಹುಕಾಲ ಸ್ವಲ್ಪ ಹೊತ್ತು ಕಾಯೋಣ ಎಂದು ಗೇಟ್‌ ಹೊರಗಡೆ ಯಾರಿಗೂ ಕಾಣದಂತೆ ನಿಲ್ಲಿಸಿಕೊಂಡಿರುತ್ತಾರೆ.

ವರಲಕ್ಷ್ಮೀ ವರದ ಭೇಟಿಯಾಗುವಂತೆ ಮಾಡುವ ಶ್ರೀವಲ್ಲಿ

ಸುಬ್ಬು ಮನೆಗೆ ಬಂದ ಶ್ರೀವಲ್ಲಿಯನ್ನು ಧನಲಕ್ಷ್ಮೀ ವರಲಕ್ಷ್ಮೀ ಕೋಣೆಗೆ ಕರೆದುಕೊಂಡು ಹೋಗುತ್ತಾಳೆ. ಅಲ್ಲಿ ಧನಲಕ್ಷ್ಮೀ ವರಲಕ್ಷ್ಮೀಗೆ ನಿನ್ನ ಪ್ರೀತಿಗೆ ನನ್ನ ಸಪೋರ್ಟ್‌ ಸದಾ ಇರುತ್ತದೆ ಎಂದು ಧೈರ್ಯ ತುಂಬುತ್ತಾಳೆ. ಇತ್ತ ಶ್ರೀವಲ್ಲಿ ಪ್ರೀತಿ ಮಾಡಿದ ಮೇಲೆ ಜಗಕ್ಕೆ, ಮನೆಯವರಿಗೆ ಹೆದರಬಾರದು ಎಂದು ಹೇಳುವುದು ಮಾತ್ರವಲ್ಲ, ನೀನು ಅಣ್ಣನನ್ನು ಭೇಟಿ ಮಾಡಲು ನಾನು ಕರೆದುಕೊಂಡು ಹೋಗುತ್ತೇನೆ ಎನ್ನುತ್ತಾಳೆ. ವರ ಎಷ್ಟೇ ಬೇಡ ಅಂದ್ರೂ ಕೇಳದ ಶ್ರೀವಲ್ಲಿ ಅವಳನ್ನು ಕರೆದುಕೊಂಡು ಮನೆಯಿಂದ ಹೊರ ಹೋಗುತ್ತಾಳೆ. ಅಲ್ಲಿ ವರಲಕ್ಷ್ಮೀಗಾಗಿ ಕಾಯುತ್ತಿರುವ ಅಣ್ಣನನ್ನು ಭೇಟಿ ಮಾಡಿಸುತ್ತಾಳೆ.

ಫಾರ್ಮ್‌ಹೌಸ್‌ನಲ್ಲಿ ಸುಬ್ಬು-ಶ್ರಾವಣಿ

ವಿಜಯಾಂಬಿಕಾ ಕಾರು ಹೊರಟಿದ್ದೇ ತಡ ಅವಳನ್ನು ಹಿಂಬಾಲಿಸುವಂತೆ ಸುಬ್ಬುಗೆ ಹೇಳುತ್ತಾಳೆ ಶ್ರಾವಣಿ. ಅದನ್ನು ಕೇಳಿ ಶಾಕ್‌ ಆಗುವ ಶ್ರಾವಣಿ ಅಲ್ಲಿಗ್ಯಾಕೆ ಎಂದು ಶ್ರಾವಣಿಗೆ ಪ್ರಶ್ನೆ ಮಾಡುತ್ತಾನೆ, ನೀನು ಹೋಗು ಅವರ ಹಿಂದೆ ಮುಂದೆ ನಿಂಗೆ ಎಲ್ಲಾ ಗೊತ್ತಾಯುತ್ತೆ ಅಂತ ಶ್ರಾವಣಿ ಸುಬ್ಬುಗೆ ಹೇಳಿ ವಿಜಯಾಂಬಿಕ ಹಿಂದೆ ಫಾಲೋ ಮಾಡಿಕೊಂಡು ಹೋಗುತ್ತಾರೆ. ಫಾರ್ಮ್‌ಹೌಸ್‌ಗೆ ಬರುವ ವಿಜಯಾಂಬಿಕಾ ಅಲ್ಲಿ ಒಬ್ಬ ವ್ಯಕ್ತಿಯನ್ನು ಭೇಟಿ ಮಾಡುತ್ತಾಳೆ. ಫಾರ್ಮ್‌ಹೌಸ್‌ನಿಂದ ಸ್ವಲ್ಪ ದೂರದಲ್ಲಿ ಬೈಕ್‌ ನಿಲ್ಲಿಸಲು ಹೇಳುವ ಶ್ರಾವಣಿ ಸುಬ್ಬುವನ್ನು ಕರೆದುಕೊಂಡು ಫಾರ್ಮ್‌ಹೌಸ್‌ ಒಳಗೆ ಬರುತ್ತಾಳೆ. ಆರಂಭದಲ್ಲಿ ಅವರಿಗೆ ಏನೂ ಕಾಣುವುದಿಲ್ಲ. ಸ್ವಲ್ಪ ಮುಂದೆ ಬಂದಾಗ ವಿಜಯಾಂಬಿಕಾ ಕುರ್ಚಿ ಮೇಲೆ ಕೂತಿರುವುದು ಕಾಣುತ್ತದೆ. ಅಲ್ಲೇ ಕೆಳಗೆ ನೋಡಿದಾಗ ಸುಬ್ಬು ಕಣ್ಣಿಗೆ ವ್ಯಕ್ತಿಯೊಬ್ಬರನ್ನು ಕಟ್ಟಿ ಹಾಕಿರುವುದು ಕಾಣಿಸುತ್ತದೆ. ಅದನ್ನು ಶ್ರಾವಣಿಗೆ ತೋರಿಸುತ್ತಾನೆ ಸುಬ್ಬು. ಇಬ್ಬರೂ ಕಟ್ಟಿ ಹಾಕಿದ ವ್ಯಕ್ತಿಯನ್ನು ನೋಡಿ ಗಾಬರಿಯಾಗುತ್ತಾರೆ. ಆ ಹೊತ್ತಿಗೆ ಅಲ್ಲಿ ಕೆಲಸಕ್ಕಿದ್ದ ಮಹಿಳೆಯನ್ನು ಕರೆದು ಆ ವ್ಯಕ್ತಿಯ ಬಗ್ಗೆ ವಿಚಾರಿಸುತ್ತಾಳೆ, ಮಾತ್ರವಲ್ಲ ನಾವೆಲ್ಲಾ ಒಂದಿಷ್ಟು ದಿನ ಇರುವುದಿಲ್ಲ. ಸಾಲಿಗ್ರಾಮಕ್ಕೆ ಹೋಗುತ್ತೇವೆ, ಇವನನ್ನು ಅಲ್ಲಿಯವರೆಗೆ ಬೇರೆ ಕಡೆಗೆ ಶಿಫ್ಟ್‌ ಮಾಡಬೇಕು ಎಂದು ಹೇಳುತ್ತಿರುತ್ತಾಳೆ. ಆ ವ್ಯಕ್ತಿ ಸಾಲಿಗ್ರಾಮ ಎಂಬ ಪದ ಕೇಳಿಸಿದ್ದೇ ತಡ ʼಸಾಲಿಗ್ರಾಮ, ಸಾಲಿಗ್ರಾಮಕ್ಕೆ ನೀನು ಹೋಗು ಟೈಮ್‌ ಬಂತು ಅಂದ್ರೆ ನಿನ್ನ ಸಾವಿನ ಟೈಮ್‌ ಹತ್ರ ಬಂತು ಅಂತ ಅರ್ಥ, ನಿನ್ನ ಸಾವು ಸಾಲಿಗ್ರಾಮದಲ್ಲೇʼ ಎಂದು ಬಡಬಡಾಯಿಸುತ್ತಾನೆ. ಇದರಿಂದ ಕೋಪಗೊಳ್ಳುವ ವಿಜಯಾಂಬಿಕ ಆ ವ್ಯಕ್ತಿಯ ತಲೆಯ ಮೇಲೆ ಹೂಕುಂಡದಿಂದ ಬಡಿಯುತ್ತಾಳೆ. ಇದನ್ನು ನೋಡಿದ ಸುಬ್ಬು-ಶ್ರಾವಣಿ ಭಯದಲ್ಲಿ ನಡಗುತ್ತಾರೆ. ಅಷ್ಟೊತ್ತಿಗೆ ಶ್ರಾವಣಿಗೆ ಮೊಬೈಲ್‌ ರಿಂಗ್‌ ಆಗುತ್ತೆ.

ಇಂದ್ರಮ್ಮನ ಎದುರಲ್ಲಿ ವರ-ವರದ

ವರದ-ವರಲಕ್ಷ್ಮೀಯನ್ನು ಭೇಟಿ ಮಾಡಿಸುವ ಶ್ರೀವಲ್ಲಿ ಅವರಿಗೆ ಮಾತನಾಡಲು ಅವಕಾಶ ಮಾಡಿ ಅಮ್ಮ ಬರುವುದನ್ನೇ ಎದುರು ನೋಡುತ್ತಿರುತ್ತಾಳೆ. ಇನ್ನೆನ್ನು ಅಮ್ಮ ಬರುವ ಹೊತ್ತಾಯ್ತು ಮಾತನಾಡಿದ್ದು ಸಾಕು ಎಂದು ವರಲಕ್ಷ್ಮೀಯನ್ನು ಕಳುಹಿಸುವ ಪ್ರಯತ್ನ ಮಾಡುತ್ತಾಳೆ ಶ್ರೀವಲ್ಲಿ. ಅಲ್ಲಿಂದ ಹೊರಟ ವರಲಕ್ಷ್ಮೀ ಬಳೆ ವರದನ ವಾಚ್‌ ಜೊತೆ ಸಿಕ್ಕಿ ಹಾಕಿಕೊಳ್ಳುತ್ತದೆ. ಅಷ್ಟೊತ್ತಿಗೆ ಗೇಟ್‌ ಮುಂದೆ ಆಟೊ ಇಳಿದು ಬರುತ್ತಾರೆ ಇಂದ್ರಮ್ಮ. ಇವರಿಬ್ಬರೂ ಕೈ ಬಿಡಿಸಿಕೊಳ್ಳಲು ಪರದಾಡುತ್ತಿರುವುದು ನೋಡಿ ತಾನು ಬಿಡಿಸಲು ಪ್ರಯತ್ನ ಮಾಡುತ್ತಾಳೆ ಶ್ರೀವಲ್ಲಿ. ಆದರೆ ಅವಳಿಗೂ ಆಗುವುದಿಲ್ಲ. ಅಷ್ಟೊತ್ತಿಗೆ ಮನೆ ಮುಂದೆ ಬಂದು ನಿಲ್ಲುವ ಇಂದ್ರಮ್ಮನಿಗೆ ಶ್ರೀವಲ್ಲಿ-ವರದ ನಿಂತಿರುವುದು ಕಾಣಿಸುತ್ತದೆ. ವರಲಕ್ಷ್ಮೀ ಅವರ ಹಿಂದೆ ಅಡಗಿರುತ್ತಾಳೆ. ಇಲ್ಯಾಕೆ ನಿಂತಿದ್ದೀರಾ ಎಂದು ಪ್ರಶ್ನಿಸುವ ಅಮ್ಮನ ಜೊತೆ ಅವರು ಏನೋ ಉತ್ತರ ಹೇಳಿ ಸಂಭಾಳಿಸುತ್ತಿರುವಾಗಲೇ ಅವರ ಹಿಂದೆ ಅಡಗಿದ್ದ ವರಲಕ್ಷ್ಮೀಗೆ ಕಾಲ್‌ ಬರುತ್ತದೆ.

ಫಾರ್ಮ್‌ಹೌಸ್‌ನಲ್ಲಿ ಮೊಬೈಲ್‌ ರಿಂಗ್‌ ಆಗಿರುವುದು ಸುಬ್ಬ-ಶ್ರಾವಣಿ ಸಿಕ್ಕಿ ಬೀಳಲು ಕಾರಣವಾಗುತ್ತಾ, ಫಾರ್ಮ್‌ಹೌಸ್‌ನಲ್ಲಿ ವಿಜಯಾಂಬಿಕಾ ಕೂಡಿಟ್ಟ ಆ ವ್ಯಕ್ತಿ ಯಾರು, ಇಂದ್ರಮ್ಮ ಕೈಗೆ ಸಿಕ್ಕಿ ಬೀಳ್ತಾರಾ ವರ-ವರದ-ಶ್ರೀವಲ್ಲಿ, ಶ್ರಾವಣಿ ಸುಬ್ರಹ್ಮಣ್ಯದಲ್ಲಿ ಮುಂದಿನ ದಿನಗಳಲ್ಲಿ ಏನೇನಾಗುತ್ತೆ ಎಂಬುದನ್ನು ತಿಳಿಯಲು ಮುಂದಿನ ಸಂಚಿಕೆಗಳನ್ನು ನಿರೀಕ್ಷಿಸಿ.

Whats_app_banner