ಶ್ರಾವಣಿ ತಾತನನ್ನ ಕೊಂದಿದ್ದು ವಿಜಯಾಂಬಿಕಾ, ಸಾಲಿಗ್ರಾಮದಲ್ಲಿ ಬಯಲಾಯ್ತು ಘೋರ ಸತ್ಯ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ಶ್ರಾವಣಿ ತಾತನನ್ನ ಕೊಂದಿದ್ದು ವಿಜಯಾಂಬಿಕಾ, ಸಾಲಿಗ್ರಾಮದಲ್ಲಿ ಬಯಲಾಯ್ತು ಘೋರ ಸತ್ಯ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

ಶ್ರಾವಣಿ ತಾತನನ್ನ ಕೊಂದಿದ್ದು ವಿಜಯಾಂಬಿಕಾ, ಸಾಲಿಗ್ರಾಮದಲ್ಲಿ ಬಯಲಾಯ್ತು ಘೋರ ಸತ್ಯ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

ಸಾಲಿಗ್ರಾಮದಲ್ಲಿ ಪುಷ್ಕರಿಣಿ ಉತ್ಸವಕ್ಕೆ ಸಕಲ ಸಿದ್ಧತೆ. ಅಜ್ಜಿ ಆಶೀರ್ವಾದ ಪಡೆಯಲು ಹೋದ ಶ್ರಾವಣಿಗೆ ಅಮ್ಮನ ಬಗ್ಗೆ ತಿಳಿಯುವ ಬಯಕೆ, ವಿಜಯಾಂಬಿಕಾಗೆ ತನ್ನ ಸತ್ಯ ಹೊರ ಬರುವ ಭಯ, ಭೂತಕಾಲದ ಘಟನೆಗಳನ್ನು ನೆನೆದ ವಿಜಯಾಂಬಿಕಾ ಹಿಂದಿದೆ ಯಾರೂ ಊಹಿಸದ ಘೋರ ಮುಖ. ಸೆಪ್ಟೆಂಬರ್ 18ರ ಸಂಚಿಕೆಯಲ್ಲಿ ಏನೇನಾಯ್ತು ನೋಡಿ.

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಸೆಪ್ಟೆಂಬರ್‌ 18ರ ಸಂಚಿಕೆ
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಸೆಪ್ಟೆಂಬರ್‌ 18ರ ಸಂಚಿಕೆ

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ನಿನ್ನೆಯ (ಸೆಪ್ಟೆಂಬರ್‌ 18ರ) ಸಂಚಿಕೆಯಲ್ಲಿ ದೇವಸ್ಥಾನಕ್ಕೆ ಹೊರಡಲು ಎಲ್ಲರೂ ಸಿದ್ಧತೆ ನಡೆಸುವಾಗ ಮತ್ತೊಮ್ಮೆ ಪುಷ್ಕರಿಣಿ ಉತ್ಸವದಲ್ಲಿ ನಡೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಶ್ರಾವಣಿಗೆ ನೆನಪಿಸುತ್ತಾರೆ ನರಸಯ್ಯ. ಅಲ್ಲದೇ ಹೊರಡುವ ಮುನ್ನ ಅಜ್ಜಿಯ ಆಶೀರ್ವಾದ ಪಡೆದು ದೇವರಿಗೆ ದೀಪ ಹಚ್ಚಬೇಕು ಎಂದು ಹೇಳುತ್ತಾರೆ. ಅದರಂತೆ ಅಜ್ಜಿಯ ಆಶೀರ್ವಾದ ಪಡೆಯಲು ಲಿಲಿತಾದೇವಿಯವರ ಕೋಣೆಯತ್ತ ಹೊರಡುತ್ತಾಳೆ ಶ್ರಾವಣಿ.

ಯಜಮಾನರ ಫೋಟೊ ಮುಂದೆ ಕಣ್ಣೀರು ಹಾಕುವ ಲಲಿತಾದೇವಿ

ಎಷ್ಟೋ ವರ್ಷಗಳ ಬಳಿಕ ಪುಷ್ಕರಿಣಿ ಉತ್ಸವ ನಡೆಯುತ್ತಿರುವುದಕ್ಕೆ ಲಲಿತಾದೇವಿ ಸಂಭ್ರಮ ಪಡುತ್ತಾರೆ. ತಮ್ಮ ಸಂಭ್ರಮವನ್ನು ಫೋಟೊದಲ್ಲಿರುವ ತನ್ನ ಗಂಡನ ಮುಂದೆ ಹಂಚಿಕೊಳ್ಳುತ್ತಾರೆ. ‘ಎಷ್ಟೋ ವರ್ಷಗಳ ನಂತರ ಪುಷ್ಕರಿಣಿ ಉತ್ಸವ ನಡೆಯುತ್ತಿದೆ, ನಮ್ಮ ಮಗಳು ನಂದಿನಿ ಹೋದ ಬಳಿಕ ಪುಷ್ಕರಿಣಿ ಉತ್ಸವ ನಡೆದಿಲ್ಲ. ಈಗ ಮತ್ತೆ ನಮ್ಮ ಮಗಳು ಶ್ರಾವಣಿ ಪುಷ್ಕರಿಣಿ ಉತ್ಸವ ಮಾಡಲು ಬಂದಿದ್ದಾಳೆ, ನೀವು ಈಗ ಇಲ್ಲಿ ಇರಬೇಕಿತ್ತು‘ ಎಂದು ಕಣ್ಣೀರು ಹಾಕುತ್ತಾರೆ. ಅಷ್ಟೊತ್ತಿಗೆ ಅವರ ಕೋಣೆಯ ಬಾಗಿಲ ಬಳಿ ವಿಜಯಾಂಬಿಕಾ ಬಂದು ನಿಂತಿರುತ್ತಾಳೆ. ‘ನೀವು ಇಲ್ಲೇ ಇದ್ದೀರಾ ಅನ್ನೋದು ನನಗೆ ಗೊತ್ತು, ನೀವು ಎಲ್ಲೂ ಹೋಗಿಲ್ಲ. ನೀವು ಕೂಡ ಈ ಸಂಭ್ರಮದಲ್ಲಿ ಭಾಗಿಯಾಗಬೇಕಿತ್ತು. ಸರಿಯಾಗಿ ಇದ್ದ ನೀವು ಇದ್ದಕ್ಕಿದ್ದಂತೆ ಸತ್ತು ಹೋಗ್ತೀರಾ, ಯಾಕೆ ಏನು ಅನ್ನೋದು ಕೂಡ ಅರ್ಥ ಆಗಿಲ್ಲ, ಎಲ್ಲವೂ ನಮ್ಮ ಕೈ ಮೀರಿ ನಡೆದುಹೋಯ್ತು. ಮಗಳು ನಂದಿನಿಯು ನನ್ನಿಂದ ದೂರ ಆದ್ಲು, ನಾನು ನನ್ನ ಅಹಂಕಾರ ಬಿಡಲಿಲ್ಲ‘ ಎಂದೆಲ್ಲಾ ಹಿಂದಿನ ಘಟನೆಗಳನ್ನು ನೆನೆದು ಕಣ್ಣೀರಾಗುತ್ತಾರೆ. ಅವರ ಮಾತುಗಳನ್ನ ಕದ್ದು ಕೇಳಿಸಿಕೊಳ್ಳುವ ವಿಜಯಾಂಬಿಕಾಗೆ ಹಿಂದಿನ ಘಟನೆಗಳು ಸ್ಮತಿಪಟಲದಲ್ಲಿ ಹಾದು ಹೋಗುತ್ತವೆ.

ಅಧಿಕಾರದ ಆಸೆಗೆ ಶ್ರಾವಣಿ ತಾತನನ್ನು ಕೊಂದ ವಿಜಯಾಂಬಿಕಾ

ವೀರೇಂದ್ರನನ್ನು ಲಿಲಿತಾದೇವಿಯ ಮಗಳು ನಂದಿನಿ ಪ್ರೀತಿಸಿ ಮದುವೆಯಾಗಿರುತ್ತಾಳೆ. ಒಮ್ಮೆ ಯಜಮಾನರಿಗೆ ಆರಾಮವಿಲ್ಲ ಎಂದು ಮನೆಗೆ ನೋಡಿಕೊಂಡು ಹೋಗುವ ಬರುವ ವೀರೇಂದ್ರನ ಮುಂದೆ ‘ವೀರು ನೀನು ಈಗ ನನ್ನ ಅಳಿಯ, ಈಗಲೂ ನೀನು ನನಗೆ ಯಜಮಾನ್ರು ಅನ್ನಬೇಡಪ್ಪ. ನನ್ನ ಮಗಳು ನಂದಿನಿ ನಿನ್ನನ್ನು ಮೆಚ್ಚಿ ಮದುವೆಯಾಗಿದ್ದಾಳೆ ಎಂದರೆ ನಿನ್ನ ಬಗ್ಗೆ ಅವಳಿಗೆ ಚೆನ್ನಾಗಿ ಗೊತ್ತಿರುತ್ತದೆ. ಆದರೆ ಲಲಿತಾ ಒಂದಿಷ್ಟು ದಿನ ಸಿಟ್ಟಲ್ಲಿ ಇರುತ್ತಾಳೆ, ಆಮೇಲೆ ಎಲ್ಲವೂ ಬದಲಾಗುತ್ತದೆ. ನಂದಿನಿ ಕೂಡ ಈ ಮನೆಗೆ ಬಂದು ಇರುತ್ತಾಳೆ. ನಾವೆಲ್ಲರೂ ಖುಷಿಯಿಂದ ಇರುತ್ತೇವೆ ಎಂದು ಭರವಸೆಯ ಮಾತನಾಡುತ್ತಾರೆ. ಅದಕ್ಕೆ ವೀರೇಂದ್ರ ಕೂಡ ಹೌದು ಯಜಮಾನ್ರೆ, ಇನ್ನೇನು ಕೆಲವೇ ದಿನಗಳಲ್ಲಿ ಎಲ್ಲವೂ ಸರಿ ಹೋಗುತ್ತದೆ. ಮೊದಲಿನ ಖುಷಿ ಮತ್ತೆ ಮರಳುತ್ತದೆ. ನೀವು ಆದಷ್ಟು ಬೇಗ ಆರಾಮಾಗ್ತೀರಿ‘ ಎಂದು ಹೇಳಿ ಅವರಿಗೆ ಧೈರ್ಯ ತುಂಬಿ ಹೊರಡುತ್ತಾನೆ. ಅವನು ಹೋದ ಬೆನ್ನಲ್ಲೇ ಕೋಣೆಯೊಳಗೆ ಬರುತ್ತಾಳೆ ವಿಜಯಾಂಬಿಕಾ. ಅವಳನ್ನು ನೋಡಿ ‘ವಿಜಯಾ ನೀನು ಬಂದಿದ್ದೀಯಾ‘ ಎಂದು ಪ್ರಶ್ನೆ ಮಾಡುತ್ತಾರೆ. ಆರಂಭದಲ್ಲಿ ಹೇಗಿದ್ದೀರಾ ಯಜಮಾನ್ರೆ ಎಂದು ನಾಟಕೀಯವಾಗಿ ಮಾತನಾಡುವ ವಿಜಯಾಂಬಿಕಾ, ನೀವು ಹೇಗಿದ್ದರೆ ನಂಗೆನೂ, ನಿಮಗೆ ಅಧಿಕಾರ ಕೊಡುವ ಬುದ್ಧಿವಂತಿಕೆ ಕಾಣಲಿಲ್ಲ. ನೀಯತ್ತು, ನಿಷ್ಠೆ ಕಾಣಿಸ್ತು, ನನ್ನ ಬುದ್ಧಿವಂತಿಕೆ ನಿಮಗೆ ಸಾಕಾಗಲಿಲ್ಲ ಅಲ್ವಾ, ನೀವು ನನ್ನ ತಮ್ಮ ವೀರುಗೆ ಅಧಿಕಾರ ಕೊಟ್ರಿ, ನನ್ನ ಕಣ್ಣಿಗೆ ನಾನ್ಯಾಕೆ ಕಾಣಿಸಿಲ್ಲ. ನನ್ನ ಬುದ್ಧಿವಂತಿಕೆ ಕಾಣದ ನಿಮ್ಮ ಕಣ್ಣು ಶಾಶ್ವತವಾಗಿ ಮುಚ್ಚಬೇಕು‘ ಎಂದೆಲ್ಲಾ ರೋಷವೇಷದಲ್ಲಿ ಮಾತನಾಡುತ್ತಾಳೆ. ಇದನ್ನೆಲ್ಲಾ ಕೇಳಿ ಗಾಬರಿಯಾಗುವ ಯಜಮಾನ್ರು ‘ವಿಜಯಾ ಹೀಗೇಕೆ ಹೇಳುತ್ತಿದ್ದೀಯಾ, ನೀನೇಕೆ ಹೀಗೆ ವರ್ತಿಸುತ್ತಿದ್ದೀಯಾ‘ ಎಂದು ಕೇಳುತ್ತಾರೆ. ಅದಕ್ಕೆ ವಿಜಯಾಂಬಿಕಾ ನನಗೆ ಅಧಿಕಾರ ಸಿಗಬೇಕಿತ್ತು. ನನ್ನಲ್ಲಿ ಬುದ್ಧಿವಂತಿಕೆ ಇತ್ತು, ಆದರೆ ನೀವು ಅದನ್ನು ಗುರುತಿಸಲೇ ಇಲ್ಲ, ಅದಕ್ಕಾಗಿ ನೀವು ಈ ಭೂಮಿ ಮೇಲೆ ಇರಬಾರದು‘ ಎಂದು ಇಂಜೆಕ್ಷನ್ ಕೊಡುತ್ತಾಳೆ. ನನ್ನ ದ್ವೇಷದ ಕಾಡಿ ಕಾರುವ ಅವಳು ಈ ಮನೆಯ ನೆಮ್ಮದಿ ಹಾಳು ಮಾಡಿ ಅಧಿಕಾರ ಪಡೆದೇ ತೀರುತ್ತೇನೆ ಎಂದು ಹೇಳುತ್ತಾನೆ. ಮಲಗಿದ್ದಲ್ಲೇ ನರಳುವ ಯಜಮಾನರು ಸತ್ತಿಲ್ಲ ಎಂದು ತಿಳಿದಾಗ ತಲೆದಿಂಬಿನಿಂದ ಉಸಿರುಗಟ್ಟಿ ಸಾಯಿಸುತ್ತಾಳೆ ವಿಜಯಾಂಬಿಕಾ. ಇದೀಗ ಯಜಮಾನರ ಫೋಟೊ ಮುಂದೆ ಲಲಿತಾದೇವಿ ಕಣ್ಣೀರು ಹಾಕೋದು ನೋಡಿ ಹಿಂದಿನ ಘಟನೆಗಳೆಲ್ಲಾ ನೆನಪಾಗಿ ಒಮ್ಮೆ ಬೆವೆತು ಹೋಗುತ್ತಾಳೆ.

ವಿಜಯಾಂಬಿಕಾ ಮೇಲೆ ಶ್ರಾವಣಿಗೆ ಶುರುವಾಯ್ತು ಅನುಮಾನ

ಅಜ್ಜಿ ಆಶೀರ್ವಾದ ಪಡೆಯಲು ಕೋಣೆಗೆ ಬರುವ ಶ್ರಾವಣಿ ಅಜ್ಜಿ ಆಶೀರ್ವಾದ ಮಾಡಿ ಎಂದು ಕಾಲಿಗೆ ಬೀಳುತ್ತಾಳೆ. ಮೊಮ್ಮಗಳನ್ನ ಮನಸಾರೆ ಹರಸುವ ಅಜ್ಜಿಯ ಮುಂದೆ ತನ್ನ ತಾಯಿಯ ಬಗ್ಗೆ ಕೇಳುತ್ತಾಳೆ ಶ್ರಾವಣಿ. ವಿಜಯಾಂಬಿಕಾ ಎಲ್ಲಿ ಲಲಿತಾದೇವಿ ಶ್ರಾವಣಿಗೆ ನಂದಿನಿ ಬಗ್ಗೆ ಹೇಳುತ್ತಾರೋ ಎನ್ನುವ ಭಯದಲ್ಲಿ ಬಾಗಿಲ ಬಳಿಯೇ ನಿಂತು ಕೇಳಿಸಿಕೊಳ್ಳುತ್ತಿರುತ್ತಾಳೆ. ಲಲಿತಾದೇವಿ ನಿಧಾನಕ್ಕೆ ಶ್ರಾವಣಿಗೆ ‘ನಿನ್ನ ಅಮ್ಮ ನಿನ್ನ ಹಾಗೇ ಇದ್ದಳು, ನಿನ್ನಲ್ಲಿ ಇರುವ ಎಲ್ಲಾ ಗುಣವೂ ಅವಳದ್ದೇ‘ ಎಂದು ಮಗಳು ನಂದಿನಿಯ ಬಗ್ಗೆ ಹೇಳಲು ಶುರು ಮಾಡಿದ್ದೇ ತಡ ಗಡಿಬಿಡಿಯಲ್ಲಿ ಒಳಬರುವ ವಿಜಯಾಂಬಿಕಾ ಶ್ರಾವಣಿ ಆಶೀರ್ವಾದ ತಗೊಂಡ್ಯಾ, ನೀನು ಬರ್ಬೇಕಂತೆ, ದೇವರ ಕೋಣೆಗೆ ಬಂದು ದೀಪ ಹಚ್ಚಬೇಕಂತೆ‘ ಎಂದು ಗಡಿಬಿಡಿ ಮಾಡುತ್ತಾಳೆ. ಇದ್ದಕ್ಕಿದ್ದಂತೆ ಬಂದ ವಿಜಯಾಂಬಿಕಾ ಕಂಡು ಶ್ರಾವಣಿ ಹಾಗೂ ಲಲಿತಾದೇವಿಗೆ ಅಚ್ಚರಿಯಾಗುತ್ತದೆ. ಶ್ರಾವಣಿಗೆ ಅತ್ತೆಯ ಮೇಲೆ ಅನುಮಾನ ಶುರುವಾಗುತ್ತದೆ. ಯಾವಾಗಲೂ ತಾನು ಅಮ್ಮನ ಬಗ್ಗೆ ಕೇಳಬೇಕು ಎಂದುಕೊಂಡಾಗಲೆಲ್ಲಾ ಅತ್ತೆ ಅಡ್ಡ ಬರ್ತಾರೆ, ಖಂಡಿತ ಇವರಿಗೂ ಅಮ್ಮನಿಗೂ ಏನೋ ಲಿಂಕ್ ಇದೆ. ಇವರಿಗೆ ಅಮ್ಮನ ವಿಚಾರ ತನಗೆ ತಿಳಿಯಬಾರದು ಎಂದಿದೆ. ಆದರೆ ಅದು ಯಾಕೆ, ಇವರಿಗೆ ನಾನು ಅಮ್ಮನ ಬಗ್ಗೆ ತಿಳಿಯುವುದು ಯಾಕೆ ಇಷ್ಟ ಅಲ್ಲ, ಎಂದು ಮನದಲ್ಲೇ ಪ್ರಶ್ನೆ ಮಾಡುವ ಅಲ್ಲಿಂದ ಹೊರಟು ಬಿಡುತ್ತಾಳೆ.

ಅತ್ತೆಯ ಮೇಲೆ ಅನುಮಾನ ಶುರುವಾದ ಶ್ರಾವಣಿ ಇನ್ನು ಸಮ್ಮನಿರ್ತಾಳಾ, ವಿಜಯಾಂಬಿಕಾನೇ ಯಜಮಾನರನ್ನು ಕೊಂದಿದ್ದು ಎನ್ನುವ ಸತ್ಯ ಹೊರ ಬರುತ್ತಾ, ಸಾಲಿಗ್ರಾಮದಲ್ಲಿ ಇನ್ನೂ ಏನೆಲ್ಲಾ ಆಗಲಿದೆ ಎಂಬುದನ್ನು ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.

 

Whats_app_banner