ಬೆಂಕಿಗೆ ಹಾರಿ ಶ್ರಾವಣಿಯ ಪ್ರಾಣ ಕಾಪಾಡಿದ ಸುಬ್ಬು, ಮಿನಿಸ್ಟರ್ ಮಗಳ ಬದುಕಲ್ಲಿ ಶುರುವಾಯ್ತು ಪ್ರೇಮಕಹಾನಿ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ-television news zee kannada shravani subramanya kannada serial yesterday episode 134 september 23rd rst ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಬೆಂಕಿಗೆ ಹಾರಿ ಶ್ರಾವಣಿಯ ಪ್ರಾಣ ಕಾಪಾಡಿದ ಸುಬ್ಬು, ಮಿನಿಸ್ಟರ್ ಮಗಳ ಬದುಕಲ್ಲಿ ಶುರುವಾಯ್ತು ಪ್ರೇಮಕಹಾನಿ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

ಬೆಂಕಿಗೆ ಹಾರಿ ಶ್ರಾವಣಿಯ ಪ್ರಾಣ ಕಾಪಾಡಿದ ಸುಬ್ಬು, ಮಿನಿಸ್ಟರ್ ಮಗಳ ಬದುಕಲ್ಲಿ ಶುರುವಾಯ್ತು ಪ್ರೇಮಕಹಾನಿ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

ಶ್ರಾವಣಿಯ ಪ್ರಾಣಕ್ಕಾಗಿ ತನ್ನ ಪ್ರಾಣವನ್ನೂ ಲೆಕ್ಕಿಸದೇ ಬೆಂಕಿಗೆ ಹಾರಿ ಆಕೆಯ ಪ್ರಾಣ ಕಾಪಾಡಿದ ಸುಬ್ಬು. ತನ್ನ ಜೀವದ ಗೆಳೆಯ ಇವನೇ ಎಂದು ಅರಿತ ಶ್ರಾವಣಿ. ಸುಬ್ಬು ಬಗ್ಗೆ ಲಲಿತಾದೇವಿಯ ಮೆಚ್ಚುಗೆಯ ಮಾತು. ವಿಜಯಾಂಬಿಕಾ, ಮದನ್‌ಗೆ ವೀರೇಂದ್ರನ ಪ್ರಾಣ ತೆಗೆಯುವ ತವಕ, ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ಸೆಪ್ಟೆಂಬರ್ 23ರ ಸಂಚಿಕೆಯಲ್ಲಿ ಏನೇನಾಯ್ತು ನೋಡಿ.

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಸೆಪ್ಟೆಂಬರ್‌ 23ರ ಸಂಚಿಕೆ
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಸೆಪ್ಟೆಂಬರ್‌ 23ರ ಸಂಚಿಕೆ

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ನಿನ್ನೆಯ (ಸೆಪ್ಟೆಂಬರ್‌ 23ರ) ಸಂಚಿಕೆಯಲ್ಲಿ ದೇವಸ್ಥಾನದ ಹಿಂದಿರುವ ಮರಕ್ಕೆ ದಾರ ಕಟ್ಟಿ ಹಾಕಬೇಕು ಎಂಬ ಸ್ವಾಮೀಜಿಯ ಮಾತಿಗೆ ತಕ್ಕಂತೆ ದೇವಸ್ಥಾನದ ಹಿಂಭಾಗದಲ್ಲಿರುವ ಮರದ ಬಳಿ ಹೋಗುತ್ತಾರೆ ಸುಬ್ಬು–ಶ್ರಾವಣಿ. ಮೊದಲೇ ಪ್ಲಾನ್ ಮಾಡಿಕೊಂಡಂತೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಶ್ರಾವಣಿಯ ಪ್ರಾಣ ತೆಗೆಯಲು ಸಿದ್ಧನಾಗುತ್ತಾನೆ ಮದನ್‌. ಶ್ರಾವಣಿಯ ಸುತ್ತಲೂ ಬೆಂಕಿ ಹರಡಿದ್ದು ನೋಡಿ ಗಾಬರಿಗೊಳ್ಳುವ ಏನು ಮಾಡಬೇಕೆಂದು ದಿಕ್ಕೇ ತೋಚದಂತೆ ನಿಲ್ಲತ್ತಾನೆ.

ಬೆಂಕಿಗೆ ಹಾರಿ ಶ್ರಾವಣಿ ಪ್ರಾಣ ಕಾಪಾಡುವ ಸುಬ್ಬು

ಸುತ್ತಲೂ ಬೆಂಕಿ ಹರಡಿದ್ದರೂ ಅಜ್ಜಿ ಹೇಳಿದ ಮಾತು ನೆನಪಾಗಿ ಮರದ 7 ಸುತ್ತು ಹಾಕುವಲ್ಲಿ ನಿರತಳಾಗುತ್ತಾಳೆ. ಸುಬ್ಬು ಕೆಳಗಡೆ ಬನ್ನಿ ಮೇಡಂ ಎಂದು ಎಷ್ಟು ಕರೆದರೂ ಶ್ರಾವಣಿ ಬರುವುದಿಲ್ಲ. ಅವಳ ಮೈ ಮೇಲೆ ಬೆಂಕಿ ಅಂಟಿಕೊಂಡಿರುತ್ತದೆ. ಇತ್ತ ಜನರೆಲ್ಲಾ ಶ್ರಾವಣಿಯ ಕೂಗು ಕೇಳಿ ಓಡಿ ಹೋಗುತ್ತಿರುತ್ತಾರೆ. ಈ ನಡುವೆ ಸಾವಿತ್ರಿಯ ಅಜ್ಜನ ಕಾಲು ತುಳಿದುಕೊಂಡೇ ಓಡುತ್ತಾರೆ. ಇತ್ತ ಶ್ರಾವಣಿಯ ಸುತ್ತಲೂ ಬೆಂಕಿ ಹಿಡಿದಿರುವುದು ನೋಡಿದ ಸುಬ್ಬು ಬೇರೆ ಕಾಣದೇ ತಾನೇ ಮರದ ಕಟ್ಟೆ ಹತ್ತಿ ಅವಳ ಮೈ ಮೇಲೆ ಇರುವ ಶಾಲನ್ನು ಎಳೆದು ಬಿಸಾಕುತ್ತೇನೆ. ಆದರೆ ಸುತ್ತಲೂ ಬೆಂಕಿ ಇರುವ ಕಾರಣ ಹೊರಗಡೆ ಹೋಗುವುದು ಅಸಾಧ್ಯವಾಗಿರುತ್ತದೆ. ಕೊನೆಗೆ ತನ್ನ ಪ್ರಾಣವನ್ನೂ ಲೆಕ್ಕಿಸದ ಸುಬ್ಬು, ಶ್ರಾವಣಿಯನ್ನು ಹಿಡಿದು ಬೆಂಕಿಯಿಂದ ಹಾರಿ ಅವಳನ್ನು ಕಾಪಾಡಿ ತನ್ನ ಪ್ರಾಣವನ್ನೂ ಉಳಿಸಿಕೊಳ್ಳುತ್ತಾನೆ. ಕಟ್ಟೆಯಿಂದ ಹಾರುವ ಸುಬ್ಬು, ಶ್ರಾವಣಿ ಒಬ್ಬರನ್ನೊಬ್ಬರು ತಬ್ಬಿಕೊಂಡು ಉರುಳಿ ಬಿಡುತ್ತಾರೆ. ಆಗ ಶ್ರಾವಣಿ ಒಂದು ಸತ್ಯದ ಅರಿವಾಗುತ್ತದೆ.

ತನ್ನ ಜೀವದ ಗೆಳೆಯ ಸುಬ್ಬು ಎಂದು ಶ್ರಾವಣಿಗೆ ಅರ್ಥವಾಗುವ ಸಮಯ

ತನ್ನ ಪ್ರಾಣವನ್ನೂ ಲೆಕ್ಕಿಸದೇ ಬೆಂಕಿ ಹಾರಿ ತನ್ನನ್ನು ಕಾಪಾಡಿದ ಸುಬ್ಬುವನ್ನು ನೋಡಿ ಶ್ರಾವಣಿಗೆ ಜೋಗತಿ ಹೇಳಿದ ಮಾತುಗಳು ನೆನಪಾಗುತ್ತವೆ. ಬೆಂಕಿಯನ್ನು ದಾಟಿ ಬಂದು ನಿನ್ನನ್ನು ಕಾಪಾಡುವ, ಮಗುವಿನಂತೆ ಅಪ್ಪಿ ಆರೈಕೆ ಮಾಡುವ ಹುಡುಗ ಸಿಗುತ್ತಾನೆ ಎಂದು ಹೇಳಿದ್ದನ್ನು ನೆನೆಸಿಕೊಳ್ಳುತ್ತಾಳೆ. ಮಾತ್ರವಲ್ಲ ಫಾರ್ಮಹೌಸ್‌ನಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಹೊಕ್ಕಿದ ಹೋಮ್‌ಸ್ಟೇ ಓನರ್ ಕೂಡ ಇದನ್ನೇ ಹೇಳಿದ್ದು ನೆನಪಾಗುತ್ತದೆ. ಅಲ್ಲದೇ ಸಾವಿತ್ರಿ ಕೂಡ ಸುಬ್ಬವನ್ನು ಶ್ರಾವಣಿಯ ಗಂಡ ಎಂದು ತಿಳಿದು ಮಾತನಾಡಿದ್ದು ಅವಳಿಗೆ ನೆನಪಾಗುತ್ತದೆ. ಮಾತ್ರವಲ್ಲ ಸುಬ್ಬು ಕೇವಲ ತನ್ನ ಗೆಳೆಯ ಮಾತ್ರವಲ್ಲ, ಜೀವದ ಗೆಳೆಯ ಇಷ್ಟು ದಿನ ಇದು ನನಗೆ ಅರ್ಥವೇ ಆಗಿಲ್ಲ ಎಂದು ಯೋಚಿಸುತ್ತಾ ಪ್ರಜ್ಞೆ ತಪ್ಪುತ್ತಾಳೆ. ಕೊನೆಗೆ ಎಲ್ಲರೂ ಅವಳನ್ನು ಕೂಗಿ ಕರೆದರೂ ಎಚ್ಚರಗೊಳ್ಳದ ಶ್ರಾವಣಿ ಸುಬ್ಬು ಮೇಡಂ ಎಂದು ಕರೆದಾಗ ಬೆಚ್ಚಿ ಎದ್ದೇಳುತ್ತಾಳೆ. ಇದನ್ನ ಕಂಡ ವಂದನಾಗೆ ಅಚ್ಚರಿಯಾದ್ರೂ ಉಳಿದವರೆಲ್ಲಾ ಶ್ರಾವಣಿಗೆ ಎಚ್ಚರ ಆಯ್ತಲ್ಲ ಎನ್ನುವ ಖುಷಿಯಲ್ಲೇ ಇರುತ್ತಾರೆ.

ಸುಬ್ಬುವನ್ನು ಹೊಗಳುವ ಲಲಿತಾದೇವಿ

ಶ್ರಾವಣಿ ಮಲಗಿರುವ ಕೋಣೆಯಲ್ಲಿ ಇರುತ್ತಾರೆ ಸುಬ್ಬು–ಲಲಿತಾದೇವಿ. ಆಗ ಲಲಿತಾದೇವಿಗೆ ಸ್ವಾಮೀಜಿ ಸುಬ್ಬು ಬಗ್ಗೆ ಹೇಳಿದ ಮಾತುಗಳು ನೆನಪಾಗುತ್ತವೆ. ಸಾಮಾನ್ಯರಲ್ಲಿ ಅಸಮಾನ್ಯನಾಗಿರುವ ಸುಬ್ಬು ಪಾಂಡವರಿಗೆ ಸಾರಥಿಯಾಗಿದ್ದ ಕೃಷ್ಟನಂತೆ ಎಂದು ಹೇಳಿದ್ದನನ್ನು ನೆನೆಯಯತ್ತಾರೆ. ಮಾತ್ರವಲ್ಲ ಶ್ರಾವಣಿಯನ್ನು ಉಳಿಸಿದ್ದಕ್ಕಾಗಿ ಧನ್ಯವಾದ ಹೇಳುವ ಅವರು ‘ಸುಬ್ಬು ನೀನು ಕೇವಲ ಉಳಿಸಿದ್ದು ನನ್ನ ಮೊಮ್ಮಗಳನ್ನ ಮಾತ್ರವಲ್ಲ, ನಮ್ಮ ಮನೆಯ ನಂದಾದೀಪವನ್ನು‘ ಎಂದು ಸಂತೋಷದಲ್ಲಿ ಹೇಳುತ್ತಾರೆ. ನಿನ್ನ ಅಪ್ಪನಂತೆ ನೀನು ಕೂಡ ಈ ಮನೆಯ ನೆಚ್ಚಿನ ಭಂಟನಾಗುತ್ತೀಯಾ. ನನ್ನ ಯಜಮಾನರು ಇರುವವರೆಗೂ ನಿಮ್ಮ ಅಪ್ಪ ಈ ಮನೆಗೆ ನೆಚ್ಚಿನ ಭಂಟನಾಗಿದ್ದ ಎಂದು ಪದ್ಮನಾಭನಿಗೂ ಈ ಮನೆಗೂ ಅವಿನಾಭಾವ ಸಂಬಂಧ ಇದೆ ಎನ್ನುವುದನ್ನು ಹೇಳುತ್ತಾರೆ. ಇದನ್ನ ಕೇಳಿಸಿಕೊಂಡ ಸುಬ್ಬುಗೆ ತನ್ನ ಅಪ್ಪ ಈ ಮನೆಗೆ ಇಷ್ಟೊಂದು ಬೇಕಾದವರಾ ಎಂದು ಕೇಳಿ ಅಚ್ಚರಿಯಾಗುತ್ತದೆ, ಮಾತ್ರವಲ್ಲ ಅಪ್ಪನ ಬಳಿ ಈ ಊರಿನ ಬಗ್ಗೆ ಎಲ್ಲವನ್ನೂ ನಿಧಾನಕ್ಕೆ ಮಾತನಾಡಿ ತಿಳಿದುಕೊಳ್ಳಬೇಕು ಎಂದುಕೊಳ್ಳುತ್ತಾನೆ.

ಮದನ್‌–ವಿಜಯಾಂಬಿಕಾ ಸಂಚಿಗೆ ಬಲಿಯಾಗ್ತಾರಾ ವೀರೇಂದ್ರ

ಉತ್ಸವವನ್ನು ಕೆಡಿಸಲು ಹೊರಟ ವಿಜಯಾಂಬಿಕಾ, ಮದನ್‌ಗೆ ಅದು ಸಾಧ್ಯವಾಗದೇ ಇದ್ದಾಗ ಕೋಪದಲ್ಲಿ ಕುದ್ದು ಹೋಗುತ್ತಾರೆ. ಮಗನಿಗೆ ಕಾಲ್ ಮಾಡಿ ಮಾತನಾಡುವ ವಿಜಯಾಂಬಿಕಾ ‘ಹೀಗೆಲ್ಲಾ ಯಾಕೆ ಆಗ್ತಾ ಇದೆ ಮ್ಯಾಡಿ‘ ಎಂದು ಆತಂಕದೊಂದಿಗೆ ಸಿಡಿಮಿಡಿಯನ್ನೂ ವ್ಯಕ್ತಪಡಿಸುತ್ತಾರೆ. ಮೊದಲು ಇದಕ್ಕೆಲ್ಲಾ ಸುಬ್ಬು ಕಾರಣ ಎಂದು ಹೇಳುವ ಮದನ್ ನಂತರ ವೀರೇಂದ್ರನನ್ನು ಮುಗಿಸಿದರೆ ಎಲ್ಲವೂ ಸರಿಯಾಗುತ್ತದೆ ಎಂದು ಹೇಳುತ್ತಾನೆ, ಅಲ್ಲದೇ ಆಲ್‌ರೆಡಿ ನಮ್ಮ ಹುಡುಗರು ಹಳ್ಳಿಯಲ್ಲಿ ಬಂದು ಇದ್ದಾರೆ. ಯಾರಿಗೂ ಅನುಮಾನ ಬಂದಿಲ್ಲ ಎಂದು ಅಮ್ಮನಿಗೆ ಅಪ್‌ಡೇಟ್ ಮಾಡುತ್ತಾನೆ. ತಾನು ಶಾರ್ಪ್ ಶೂಟರ್ ಅನ್ನು ಭೇಟಿ ಆಗಬೇಕು ಎಂದು ಮಗನ ಬಳಿ ಹೇಳುತ್ತಾಳೆ ವಿಜಯಾಂಬಿಕಾ.

ಶ್ರಾವಣಿಗೆ ಸುಬ್ಬು ಮೇಲೆ ಪ್ರೀತಿ ಆದಂತೆ ಸುಬ್ಬುಗೂ ಆಗುತ್ತಾ, ಸುಬ್ಬು ಶ್ರಾವಣಿಯನ್ನು ಒಪ್ಪಿಕೊಳ್ತಾನಾ, ಮಿನಿಸ್ಟರ್ ವೀರೇಂದ್ರ ಶಾರ್ಪ್ ಶೂಟರ್ ಗುಂಡಿಗೆ ಬಲಿ ಆಗ್ತಾರಾ, ಯಜಮಾನರನ್ನ ಭೇಟಿ ಆಗುವ ಸಾವಿತ್ರಿ ಕನಸು ನನಸಾಗುತ್ತಾ, ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.

 

mysore-dasara_Entry_Point