ಸುಬ್ಬು ಪ್ರೀತಿಯಲ್ಲಿ ಕಳೆದು ಹೋದ ಶ್ರಾವಣಿ, ತಮ್ಮನನ್ನ ಕೊಲ್ಲಲೇಬೇಕು ಎನ್ನುವ ಹಟದಲ್ಲಿ ವಿಜಯಾಂಬಿಕಾ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ಸುಬ್ಬು ಪ್ರೀತಿಯಲ್ಲಿ ಕಳೆದು ಹೋದ ಶ್ರಾವಣಿ, ತಮ್ಮನನ್ನ ಕೊಲ್ಲಲೇಬೇಕು ಎನ್ನುವ ಹಟದಲ್ಲಿ ವಿಜಯಾಂಬಿಕಾ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

ಸುಬ್ಬು ಪ್ರೀತಿಯಲ್ಲಿ ಕಳೆದು ಹೋದ ಶ್ರಾವಣಿ, ತಮ್ಮನನ್ನ ಕೊಲ್ಲಲೇಬೇಕು ಎನ್ನುವ ಹಟದಲ್ಲಿ ವಿಜಯಾಂಬಿಕಾ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

ಪ್ರಾಣ ಉಳಿಸಿದ ಸುಬ್ಬು ಮೇಲೆ ಶ್ರಾವಣಿಗೆ ಪ್ರೀತಿ ಹೆಚ್ಚಾಗ್ತಿದ್ರೆ, ಸುಬ್ಬುಗೇಕೊ ಪಾಪ ಅನ್ನಿಸುತ್ತಿದ್ದಾಳೆ ಶ್ರೀವಲ್ಲಿ. ಯಜಮಾನರನ್ನು ನೋಡಲಾಗದೇ ಅಳುತ್ತಿರುವ ಸಾವಿತ್ರಿ ಒಂದೆಡೆಯಾದ್ರೆ, ವೀರೇಂದ್ರನನ್ನ ಕೊಲ್ಲಲ್ಲೇಬೇಕು ಎನ್ನುವ ಪ್ರಯತ್ನದಲ್ಲಿ ವಿಜಯಾಂಬಿಕಾ. ಸೆಪ್ಟೆಂಬರ್ 24ರ ಸಂಚಿಕೆಯಲ್ಲಿ ಏನೇನಾಯ್ತು ನೋಡಿ.

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಸೆಪ್ಟೆಂಬರ್‌ 24ರ ಸಂಚಿಕೆ
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಸೆಪ್ಟೆಂಬರ್‌ 24ರ ಸಂಚಿಕೆ

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ನಿನ್ನೆಯ (ಸೆಪ್ಟೆಂಬರ್‌ 24ರ) ಸಂಚಿಕೆಯಲ್ಲಿ ಸಾಲಿಗ್ರಾಮದಲ್ಲಿ ನಡೆದ ಬೆಂಕಿ ಅನಾಹುತದ ಬಗ್ಗೆ ವರುಯಿಂದ ತಿಳಿಯುವ ಶ್ರೀವಲ್ಲಿ ಸುಬ್ಬು ಕ್ಷೇಮ ಸಮಾಚಾರ ವಿಚಾರಿಸುವ ಸಲುವಾಗಿ ಮೆಸೇಜ್ ಮಾಡುತ್ತಾಳೆ. ಶ್ರಾವಣಿ ಮಲಗಿದ ರೂಮ್‌ನಲ್ಲಿ ಇದ್ದ ಸುಬ್ಬು ಶ್ರೀವಲ್ಲಿ ಮೆಸೇಜ್ ನೋಡಿ ‘ಪಾಪ ಶ್ರೀವಲ್ಲಿ, ಅವಳು ನಮ್ಮ ಕುಟುಂಬ ಎಷ್ಟು ಕಾಳಜಿ ಮಾಡುತ್ತಾಳೆ‘ ಎಂದುಕೊಂಡು ರಿಪ್ಲೇ ಮಾಡಲು ಹೋಗುತ್ತಾನೆ. ಆಗ ಶ್ರಾವಣಿಗೆ ಎಚ್ಚರವಾಗುತ್ತದೆ. ಶ್ರಾವಣಿ ಎದ್ದಿದ್ದು ನೋಡಿ ಮೊಬೈಲ್ ಹಿಡಿದು ಬರುವ ಸುಬ್ಬು ‘ಮೇಡಂ, ಇದ್ಯಾಕೆ ಎದ್ರಿ, ಇನ್ನೂ ಸ್ವಲ್ಪ ಹೊತ್ತು ಮಲಗೋದು ಅಲ್ವಾ ಅಂತ‘ ಕಾಳಜಿ ಮಾಡುತ್ತಾನೆ. ಆಗ ಶ್ರಾವಣಿಗೆ ತಾನು ಅಜ್ಜಿ ಕೋಣೆಯಲ್ಲಿ ಮಲಗಿದ್ದು ತಿಳಿಯುತ್ತದೆ. ಅದನ್ನ ಸುಬ್ಬು ಬಳಿ ಕೇಳಿದಾಗ ‘ಮೇಡಂ, ನಿಮ್ಮ ಅಜ್ಜಿಯೇ ನಿಮ್ಮನ್ನು ಇಲ್ಲಿ ಎತ್ತಿಕೊಂಡು ಬಂದು ಮಲಗಿಸಿದ್ದು‘ ಎಂದು ಹೇಳಿ ಡಾಕ್ಟರ್ ಬಂದು ಇಂಜೆಕ್ಷನ್ ನೀಡಿ, ಕಾಲಿಗೆ ಬ್ಯಾಂಡೆಜ್ ಮಾಡಿದ್ದು ಎಲ್ಲವನ್ನೂ ಹೇಳುತ್ತಾರೆ.

ಶ್ರಾವಣಿಗೆ ‘ನೀವು ನನ್ನ ಪ್ರಾಣ‘ ಎಂದ ಸುಬ್ಬು!

ಸುಬ್ಬು ನಡೆದ ಘಟನೆಯ ಬಗ್ಗೆಲ್ಲಾ ಹೇಳುತ್ತಿದ್ದರೆ ಶ್ರಾವಣಿ ಅವನ ಪ್ರೀತಿಯಲ್ಲಿ ಕಳೆದು ಹೋಗುತ್ತಿದ್ದಾಳೆ. ಆಗ ಶ್ರಾವಣಿ ಸುಬ್ಬು ನೀನು ಯಾವುದೇ ಗಲಾಟೆ, ಗೌಜು ಅಂತ ಹೋದವನಲ್ಲ. ಎಲ್ಲೇ ಏನೇ ಆದ್ರೂ ನಂಗೆನಾದ್ರೂ ಆದ್ರೆ ನನ್ನ ಮನೆಯವರಿಗೆ ಸಂಕಷ್ಟ ಅಂತ ಹೆದರಿಕೊಂಡು ದೂರದಲ್ಲಿ ನಿಲ್ಲುತ್ತೀಯಾ. ಅಂಥದ್ರರಲ್ಲಿ ನಾನು ಬೆಂಕಿಗೆ ಬಿದ್ದಾಗ ನಿನ್ನ ಜೀವವನ್ನು ಲೆಕ್ಕಿಸದೇ ನನ್ನನ್ನ ಯಾಕೆ ಕಾಪಾಡಿದೆ ಎಂದು ಪ್ರಶ್ನೆ ಮಾಡುತ್ತಾಳೆ. ಅದಕ್ಕೆ ಸುಬ್ಬು ‘ಮೇಡಂ ನೀವು ನನ್ನ ಪ್ರಾಣ ಮೇಡಂ‘ ಎಂದು ಹೇಳ್ತಾನೆ. ಅದನ್ನ ಕೇಳಿ ಶ್ರಾವಣಿಗೆ ಅಚ್ಚರಿ ಆಗುತ್ತೆ, ಏನ್ ಹೇಳ್ತಾ ಇದೀಯಾ ಸುಬ್ಬು ಎಂದು ಮರು ಪ್ರಶ್ನಿಸಿದಾಗ ಮೇಡಂ, ಹಾಗಂದ್ರೆ ನೀವು ಯಜಮಾನರ ಮಗಳು, ನಿಮಗೇನಾದ್ರೂ ಆದ್ರೆ ಯಜಮಾನರು ಸಹಿಸೊಲ್ಲ, ನಂಗೆ ಯಜಮಾನರೇ ಪ್ರಾಣ, ಅಂದು ಮೇಲೆ ನೀವು ನಂಗೆ ಪ್ರಾಣ ಇದ್ದಂಗೆ ಅಲ್ವಾ ಅಂತಾನೆ, ಅದಕ್ಕೆ ಶ್ರಾವಣಿ ಮನದಲ್ಲೇ ಅಯ್ಯೋ ಸುಬ್ಬು ಇದನ್ನೇ ಪ್ರೀತಿ ಅನ್ನೋದು. ಅದು ನಿಂಗಿನ್ನೂ ಅರ್ಥ ಆಗಿಲ್ಲ, ನಂಗೆ ನಿನ್ನೆಯಷ್ಟೇ ಅರ್ಥ ಆಗಿದ್ದು ಎಂದು ಸುಬ್ಬುಗೂ ತನ್ನ ಮೇಲೆ ಪ್ರೀತಿಯಾಗಿದೆ ಅಂದುಕೊಳ್ಳುತ್ತಾಳೆ. ಕಾಲಿನ ಬ್ಯಾಂಡೆಜ್ ತೆಗೆಯಲು ಬಂದ ಸುಬ್ಬುಗೂ ಕಾಲು ಮುಟ್ಟಲು ಬಿಡದ ಶ್ರಾವಣಿ ಅವನಿಗೆ ಮನದಲ್ಲೇ ಗಂಡನ ಸ್ಥಾನವನ್ನೂ ನೀಡಿರುತ್ತಾಳೆ. ಅವನೇ ತನ್ನ ಬಾಳ ಸಂಗಾತಿ ಎಂದು ಶ್ರಾವಣಿ ನಿರ್ಧಾರ ಮಾಡಿರುತ್ತಾಳೆ.

ಯಜಮಾನರನ್ನು ಕಾಣಲಾಗದೇ ಸಾವಿತ್ರಿ ಕಣ್ಣೀರು

ಯಜಮಾನರಾದ ವೀರೇಂದ್ರರನ್ನು ದೇವರ ಸ್ಥಾನದಲ್ಲಿ ನೋಡುತ್ತಿರುವ ಸಾವಿತ್ರಿ ಪಕ್ಕದಲ್ಲೇ ಯಜಮಾನರು ಹೋದ್ರು ನೋಡಲಾಗದೇ ಇರುವುದಕ್ಕೆ ಅವರ ಫೋಟೊದ ಮುಂದೆ ನಿಂತು ಕಣ್ಣೀರು ಹಾಕುತ್ತಿರುತ್ತಾಳೆ. ಆಗ ಅಲ್ಲಿಗೆ ಬರುವ ಅಜ್ಜ ಅವಳನ್ನ ಸಾಮಾಧಾನ ಮಾಡಿ ‘ಮಗಾ, ಯಜಮಾನರ ಮಗಳೇ ಅವರ ಪಿಎ ಎಂದು ಹೇಳಿಕೊಂಡು ನಮ್ಮ ಮನೆಗೆ ಬಂದು ನೀರು ಕುಡಿದು, ಬಾಳೆಹಣ್ಣು ತಿಂದು ಹೋಗಿದ್ದಾರೆ, ನೀನು ಅವರ ಗೆಳತಿ ಅಂದಿದ್ದು ಮಾತ್ರವಲ್ಲ, ಪೂಜೆಗೆ ನೀವು ಅವರಿಗೆ ಸಹಾಯ ಮಾಡಿದ್ದೀಯಾ. ಅವರು ನಿನಗೆ ಖಂಡಿತ ಯಜಮಾನರನ್ನ ಭೇಟಿ ಮಾಡಿಸಿಯೇ ಮಾಡಿಸುತ್ತಾರೆ. ಇಲ್ಲ ಅಂತಾದ್ರೆ ನಾಳೆ ಯಜಮಾನರು ಹತ್ತೂರಿನ ಜನರನ್ನು ನೋಡಲು ಬರುತ್ತಾರೆ. ಆಗ ನಾವು ಹೋಗೋಣ, ನಮಗೆ ಮಾತನಾಡಲು ಸಿಕ್ಕಿಲ್ಲ ಅಂದ್ರು, ದೂರದಲ್ಲಿ ಅವರನ್ನ ಕಣ್ತುಂಬಿಕೊಳ್ಳಬಹುದು ಎಂದು ಹೇಳಿ ಮೊಮ್ಮಗಳನ್ನು ಸಮಾಧಾನ ಮಾಡಲು ಯತ್ನಿಸುತ್ತಿದ್ದರೆ ಅತ್ತ ವಿಜಯಾಂಬಿಕಾ ವೀರು ಕೊಲ್ಲಲ್ಲು ಬಂದ ಶಾರ್ಪ್ ಶೂಟರ್‌ನನ್ನ ಭೇಟಿಯಾಗಲು ಬಂದಿದ್ದಾಳೆ.

ಶಾರ್ಪ್ ಶೂಟರ್ ವರ್ತನೆಗೆ ವಿಜಯಾಂಬಿಕಾ ಸಿಡಿಮಿಡಿ

ಮದನ್ ಹಾಗೂ ವಿಜಯಾಂಬಿಕಾ ತಾವು ನಿಯೋಜಿಸಿದ್ದ ರೌಡಿಗಳನ್ನು ಭೇಟಿ ಮಾಡಲು ಬರುತ್ತಾರೆ. ಅವರಿಗೆ ನಾಳೆ ನಡೆಯುವ ಕಾರ್ಯಕ್ರಮ, ಅವರು ಮಾಡಬೇಕಿರುವ ಕೆಲಸಗಳ ಬಗ್ಗೆ ಸಲಹೆ ನೀಡುತ್ತಾಳೆ. ಅಲ್ಲದೇ ಯಾವುದೇ ಕಾರಣಕ್ಕೂ ನಮ್ಮ ಹೆಸರು ಹೊರಬರಬಾರದು ಎಂದು ಆರ್ಡರ್‌ ಮಾಡುತ್ತಾಳೆ. ಮದನ್ ಕರೆದುಕೊಂಡು ಬಂದ ಶಾರ್ಪ್ ಶೂಟರ್ ಅಲ್ಲಿಗೆ ಬಂದಾಗ ಅವನನ್ನು ಪಿಟೀಲು ಬಾರಿಸುವವನು ಎನ್ನುತ್ತಾಳೆ. ಅವನು ಕೋವಿ ತೆಗೆದು ಇವಳೆಡೆಗೆ ಗುರಿ ಇಡುತ್ತಾನೆ. ಗುಂಡು ಎಲ್ಲಿ ಹಾರಿತು ಎಂಬುದು ತಿಳಿಯುವುದಿಲ್ಲ. ಅವನ ವರ್ತನೆ ಕಂಡು ಕೋಪಗೊಳ್ಳುವ ವಿಯಯಾಂಬಿಕಾ ಮ್ಯಾಡಿ ಇವನಿಂದ ಏನೂ ಮಾಡಲು ಸಾಧ್ಯವಿಲ್ಲ, ಈಗಲೇ ಬೇರೆಯವರನ್ನ ಕರೆಸು ಎಂದು ಮದನ್‌ಗೆ ಆರ್ಡರ್ ಮಾಡುತ್ತಾಳೆ, ಹೇಗಾದರೂ ವೀರೇಂದ್ರನನ್ನ ಕೊಲ್ಲಲೇಬೇಕು, ಅವನನ್ನು ಕೊಂದು ತಾನು ಅಧಿಕಾರಕ್ಕೆ ಬರಬೇಕು ಎಂದು ವಿಜಯಾಂಬಿಕಾ ನಿರ್ಧಾರ ಮಾಡಿರುತ್ತಾಳೆ.

ಇತ್ತ ಅಜ್ಜಿನ ಪಂಚಾಯ್ತಿ ಹೇಗಿರುತ್ತೆ ಎಂದು ನೋಡಲು ಬರುವ ಶ್ರಾವಣಿ ತಪ್ಪು ಮಾಡಿದವನಿಗೆ ಶಿಕ್ಷೆ ಆಗಬೇಕು ಎಂದು ಅವಳಿಗೆ ಅರಿವಿಲ್ಲದಂತೆ ಯಜಮಾನಿಯ ಥರ ಹೇಳಿ ಬಿಡುತ್ತಾಳೆ. ಪಂಚಾಯ್ತಿ ಮಧ್ಯೆ ಪ್ರವೇಶಿಸಿದ ಶ್ರಾವಣಿಯನ್ನು ಕಂಡು ನರಸಯ್ಯ, ವೀರೇಂದ್ರ, ಸುಬ್ಬು ಎಲ್ಲರೂ ಶಾಕ್ ಆಗಿ ನೋಡುತ್ತಾರೆ.

ವಿಜಯಾಂಬಿಕಾ ನಿಜಕ್ಕೂ ವೀರೇಂದ್ರನನ್ನು ಕೊಲ್ಲಲು ಸಾಧ್ಯವಾಗುತ್ತಾ, ಸಾವಿತ್ರಿ ಯಜಮಾನರನ್ನು ನೋಡುವ ಕನಸು ನನಸು ಮಾಡಿಕೊಳ್ತಾಳಾ, ಶ್ರಾವಣಿ ಅಂದುಕೊಂಡಂತೆ ಸುಬ್ಬು ಮನದಲ್ಲೂ ಶ್ರಾವಣಿ ಬಗ್ಗೆ ಅದೇ ಭಾವನೆ ಇದ್ಯಾ ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.

 

Whats_app_banner