ಮೊಮ್ಮಗಳನ್ನ ಅಪ್ಪಿ ಮುದ್ದಾಡಿದ ಲಲಿತಾದೇವಿ ಅಮ್ಮ ಎಲ್ಲಿ ಎನ್ನುವ ಶ್ರಾವಣಿಯ ಪ್ರಶ್ನೆಗೆ ಉತ್ತರ ಹೇಳ್ತಾರಾ? ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ಮೊಮ್ಮಗಳನ್ನ ಅಪ್ಪಿ ಮುದ್ದಾಡಿದ ಲಲಿತಾದೇವಿ ಅಮ್ಮ ಎಲ್ಲಿ ಎನ್ನುವ ಶ್ರಾವಣಿಯ ಪ್ರಶ್ನೆಗೆ ಉತ್ತರ ಹೇಳ್ತಾರಾ? ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

ಮೊಮ್ಮಗಳನ್ನ ಅಪ್ಪಿ ಮುದ್ದಾಡಿದ ಲಲಿತಾದೇವಿ ಅಮ್ಮ ಎಲ್ಲಿ ಎನ್ನುವ ಶ್ರಾವಣಿಯ ಪ್ರಶ್ನೆಗೆ ಉತ್ತರ ಹೇಳ್ತಾರಾ? ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

ಅಜ್ಜಿ ಪಂಚಾಯ್ತಿ ನಡುವೆ ಮಾತನಾಡಿದ ಶ್ರಾವಣಿ ಬಗ್ಗೆ ಮೊದಲು ಅಸಮಾಧಾನಗೊಳ್ಳುವ ವೀರೇಂದ್ರ ಅತ್ತೆಯ ಮುಖದಲ್ಲಿ ನಗು ನೋಡಿ ಅಚ್ಚರಿ ಪಡುತ್ತಾರೆ. ವೀರೇಂದ್ರನನ್ನು ಮುಗಿಸಲು ವಿಜಯಾಂಬಿಕಾ ಸಿದ್ಧಳಾದ್ರೆ, ಅಜ್ಜಿ ಮಡಿಲಲ್ಲಿ ಮಲಗಿ ಅಮ್ಮ ಎಲ್ಲಿ ಎನ್ನುತ್ತಿದ್ದಾಳೆ ಶ್ರಾವಣಿ. ಸೆಪ್ಟೆಂಬರ್ 25ರ ಸಂಚಿಕೆಯಲ್ಲಿ ಏನೇನಾಯ್ತು ನೋಡಿ.

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಸೆಪ್ಟೆಂಬರ್‌ 25ರ ಸಂಚಿಕೆ
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಸೆಪ್ಟೆಂಬರ್‌ 25ರ ಸಂಚಿಕೆ

ಪಂಚಾಯ್ತಿಗಾಗಿ ಬಂದ ಊರ ಜನರಿಗೆ ಲಲಿತಾದೇವಿಯವರು ಪ್ರಶ್ನೆ ಕೇಳುತ್ತಿರುವ ಹೊತ್ತಿಗೆ ತನಗೆ ಅರಿವಿಲ್ಲದಂತೆ ಮಧ್ಯೆ ಪ್ರವೇಶಿಸಿದ ಶ್ರಾವಣಿ ತನಗೆ ತೋಚಿದಂತೆ ಮಾತನಾಡುತ್ತಾಳೆ. ಇದರಿಂದ ಗಂಭೀರಳಾಗುವ ಲಲಿತಾದೇವಿ ಪಂಚಾಯ್ತಿಯನ್ನು ನಾಳೆಗೆ ಮುಂದೂಡಿ ಅರ್ಧದಲ್ಲೇ ಎದ್ದು ಹೋಗುತ್ತಾರೆ. ಮಗಳು ಪಂಚಾಯ್ತಿಯಲ್ಲಿ ಮಾತನಾಡಿದ್ದು, ಅತ್ತೆ ಕೋಪದಿಂದ ಎದ್ದು ಹೋಗಿದ್ದಾರೆ ಎಂದು ಭಾವಿಸಿದ ವೀರೇಂದ್ರ ಮಗಳ ಮೇಲೆ ಅಸಮಾಧಾನಗೊಳ್ಳುತ್ತಾರೆ. ನರಸಯ್ಯನವರ ಬಳಿ ಶ್ರಾವಣಿಯ ಪರವಾಗಿ ಕ್ಷಮೆ ಕೇಳುವ ವೀರೇಂದ್ರ ಅತ್ತೆಯನ್ನು ಸಮಾಧಾನ ಮಾಡಲು ಕೋಣೆಗೆ ಹೋಗುತ್ತಾರೆ. ನರಸಯ್ಯ, ಶ್ರಾವಣಿ, ಸುಬ್ಬು ಅವರನ್ನು ಹಿಂಬಾಲಿಸುತ್ತಾರೆ.

30 ವರ್ಷಗಳ ನಂತರ ನಕ್ಕ ಲಲಿತಾದೇವಿ

ಅತ್ತೆಯವರು ಕೋಪ ಮಾಡಿಕೊಂಡಿದ್ದಾರೆ ಎಂದು ಬೇಸರದಲ್ಲೇ ಕೋಣೆಯ ಬಳಿಗೆ ಹೋಗುವ ವೀರೇಂದ್ರ ದಿಗಿಲು ಪಡುತ್ತಾರೆ. ಎಲ್ಲರ ಮುಖದಲ್ಲೂ ಆತಂಕ ಇರುತ್ತದೆ. ಆದರೆ ಕೋಣೆಯೊಳಗಿಂದ ಲಲಿತಾದೇವಿ ಜೋರಾಗಿ ನಗುವುದು ಕಾಣಿಸುತ್ತದೆ. ಲಲಿತಾದೇವಿಯವರ ನಗು ಕಂಡು ನರಸಯ್ಯ ಹಾಗೂ ವೀರೇಂದ್ರ ಅಚ್ಚರಿಪಟ್ಟರೆ, ಶ್ರಾವಣಿ– ಸುಬ್ಬು ಅಬ್ಬಾ ಅವರು ಕೋಪ ಮಾಡಿಕೊಳ್ಳಲಿಲ್ಲ ಅಲ್ವಾ ಎನ್ನುವ ಸಾಮಾಧಾನಕ್ಕೆ ಒಳಗಾಗುತ್ತಾರೆ. ನರಸಯ್ಯನವರು ‘ಲಿಲತಾದೇವಿ ಅಮ್ಮನವರು 30 ವರ್ಷಗಳ ನಂತರ ಇದೇ ಮೊದಲ ಬಾರಿ ನಕ್ಕಿದ್ದು‘ ಎಂದು ಖುಷಿಯಲ್ಲಿ ಹೇಳುತ್ತಾರೆ. ಅವರ ಮಾತು ಕೇಳಿ ವೀರೇಂದ್ರನಿಗೆ ಅವರ ನಗುವಿಗೆ ಶ್ರಾವಣಿಯೇ ಕಾರಣ ಎಂಬ ವಿಚಾರ ಖುಷಿ ತರಿಸುತ್ತದೆ. ‘ಅಮ್ಮಾ ಶ್ರಾವಣಿ ಅವರು ಕೇವಲ ನನಗೆ ಅತ್ತೆಯಲ್ಲ, ನನ್ನ ಬದುಕಿನ ಸರ್ವಸ್ವವೇ ಅವರು. ಅವರು ಇಷ್ಟು ವರ್ಷಗಳ ಕಾಲ ಗಂಭೀರವಾಗಿದ್ದು ಇವತ್ತು ನಗುವಂತೆ ಆಗಿದ್ದು, ನಿನ್ನಿಂದ ತುಂಬಾ ಥ್ಯಾಂಕ್ಸ್‘ ಎಂದು ಮಗಳ ಕೆನ್ನೆ ಸವರಿ ಅಲ್ಲಿಂದ ಹೊರಟು ಹೋಗುತ್ತಾರೆ. ಇದರಿಂದ ಶ್ರಾವಣಿ ಸುಬ್ಬು ಇಬ್ಬರೂ ಸಂತಸ ಪಡುತ್ತಾರೆ.

ಅಜ್ಜಿಯನ್ನು ಮುದ್ದಾಡಿ, ಮಡಿಲಲ್ಲಿ ಮಲಗುವ ಶ್ರಾವಣಿ

ಶ್ರಾವಣಿಯನ್ನು ಕೋಣೆಗೆ ಕರೆಯುವ ಲಲಿತಾದೇವಿ ಅವಳನ್ನು ಮನಸಾರೆ ಹೊಗಳುತ್ತಾರೆ. ನೀನು ನನ್ನ ಮಗಳ ಪ್ರತಿರೂಪ. ನಿನ್ನ ನಡೆ, ನುಡಿ ಎಲ್ಲವೂ ಅವಳಂತೆಯೇ. ನೀನು ಅವಳಿಲ್ಲ ಎಂಬ ಕೊರತೆಯನ್ನ ನೀಗಿಸಿದೆ ಎಂದು ಸಂಭ್ರಮ, ದುಃಖದಲ್ಲಿ ಹೇಳುತ್ತಾರೆ, ಇಬ್ಬರೂ ಕಣ್ಣೀರು ಸುರಿಸುತ್ತಾರೆ. ಶ್ರಾವಣಿ ನಾನೊಮ್ಮೆ ನಿನ್ನನ್ನು ತಬ್ಬಿ ಮುದ್ದಾಡಬಹುದೇ ಎಂದು ಲಲಿತಾದೇವಿ ಕೇಳಿದಾಗ ಶ್ರಾವಣಿ ಕಣ್ಣೀರು ಸುರಿಸುತ್ತಾ ಅವರನ್ನು ಅಪ್ಪಿಕೊಳ್ಳುತ್ತಾಳೆ. ಮುತ್ತ ಕೊಡಲಾ ಅಂತ ಕೇಳಿ ಅಜ್ಜಿಗೆ ಮುತ್ತು ಕೊಟ್ಟು ಮಡಿಲಲ್ಲಿ ಮಲಗುವ ಆಸೆ ವ್ಯಕ್ತ ಪಡಿಸುತ್ತಾಳೆ.

ಅಮ್ಮ ಎಲ್ಲಿ? ಶ್ರಾವಣಿಯ ಪ್ರಶ್ನೆಗೆ ಲಲಿತಾದೇವಿ ಉತ್ತರ ಹೇಳ್ತಾರಾ

ಮೊಮ್ಮಗಳು ಮಡಿಲಲ್ಲಿ ಮಲಗಬೇಕು ಎಂದು ಹೇಳಿದ್ದೆ ತಡ ಮೊಮ್ಮಗಳನ್ನ ಮಡಿಲಲ್ಲಿ ಮಲಗಿಸಿಕೊಳ್ಳುವ ಲಲಿತಾದೇವಿ ಅಕ್ಕರೆಯಿಂದ ಮೈ ಸವರುತ್ತಾರೆ. ಶ್ರಾವಣಿ ಅಜ್ಜಿ ತನ್ನನ್ನ ಇಷ್ಟೆಲ್ಲಾ ಪ್ರೀತಿಸುತ್ತಾರೆ, ಅಂದ ಮೇಲೆ ನನ್ನ ಅಮ್ಮ ಎಲ್ಲಿ ಎಂದು ಹೇಳಬಹುದು ಎಂದು ಅಜ್ಜಿಯ ಬಳಿ ನಮ್ಮ ಎಲ್ಲಿ ಎಂದು ಕೇಳಿಯೇ ಬಿಡುತ್ತಾಳೆ.

ಅತ್ತ ವಿಜಯಾಂಬಿಕಾ ಮದನ್‌ ಶಾರ್ಪ್ ಶೂಟರ್ ಹಾರಿಸಿದ ಗುಂಡು ಅರ್ಧ ಕಿಲೋಮೀಟರ್ ದೂರದಲ್ಲಿ ಇರುವ ವೀರೇಂದ್ರನ ಫ್ಲೇಕ್‌ನಲ್ಲಿ ಹಣೆಗೆ ತಾಕಿದ್ದು ನೋಡಿ ಶಾಕ್ ಆಗುತ್ತಾರೆ, ಮಾತ್ರವಲ್ಲ ನಾಳೆ ಆ ಗುಂಡಿಗೆ ವೀರು ಬಲಿಯಾಗೇ ಆಗುತ್ತಾನೆ, ತಾನು ಅಧಿಕಾರಕ್ಕೆ ಬಂದೇ ಬರುತ್ತೇನೆ ಎಂದು ವಿಜಯಾಂಬಿಕಾ ಫಿಕ್ಸ್ ಆಗುತ್ತಾಳೆ.

ಅಮ್ಮನ ಬಗ್ಗೆ ಶ್ರಾವಣಿಗಿರುವ ಪ್ರಶ್ನೆಗಳಿಗೆ ಉತ್ತರ ಸಿಗುತ್ತಾ, ಮಗಳ ವಿಚಾರವನ್ನು ಮೊಮ್ಮಗಳ ಬಳಿ ಹೇಳ್ತಾರಾ ಲಲಿತಾದೇವಿ, ವೀರೇಂದ್ರನ ಪ್ರಾಣ ಕಾಪಾಡಲು ಯಾರು ಬರುತ್ತಾರೆ, ಸಾವಿತ್ರಿ ವೀರೇಂದ್ರನನ್ನು ಭೇಟಿ ಆಗ್ತಾಳಾ, ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.

Whats_app_banner