ಭ್ರಮೆಯಲ್ಲಿ ತೇಲಾಡುತ್ತಿದ್ದಾಳೆ ಶ್ರಾವಣಿ, ಮದುವೆ ಕಾಗದ ಪ್ರಿಂಟ್ ಆದ್ರೂ ಸುಬ್ಬು ಮುಖದಲ್ಲಿಲ್ಲ ಖುಷಿ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ಭ್ರಮೆಯಲ್ಲಿ ತೇಲಾಡುತ್ತಿದ್ದಾಳೆ ಶ್ರಾವಣಿ, ಮದುವೆ ಕಾಗದ ಪ್ರಿಂಟ್ ಆದ್ರೂ ಸುಬ್ಬು ಮುಖದಲ್ಲಿಲ್ಲ ಖುಷಿ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

ಭ್ರಮೆಯಲ್ಲಿ ತೇಲಾಡುತ್ತಿದ್ದಾಳೆ ಶ್ರಾವಣಿ, ಮದುವೆ ಕಾಗದ ಪ್ರಿಂಟ್ ಆದ್ರೂ ಸುಬ್ಬು ಮುಖದಲ್ಲಿಲ್ಲ ಖುಷಿ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

ಶ್ರಾವಣಿ ಕೈ ಹಿಡಿಯುವ ಹುಡುಗ ಯಾರು ಎಂಬ ಕುತೂಹಲದಲ್ಲಿ ಕಾಂತಮ್ಮ–ಸುಂದರ. ಮಗಳ ಸಂತೋಷ ಕಂಡು ಹರ್ಷಪಟ್ಟ ಇಂದ್ರಮ್ಮ. ಪ್ರಿಂಟ್ ಆಯ್ತು ಸುಬ್ಬು ಮದುವೆ ಕಾಗದ, ಸಂತಸದಲ್ಲಿ ಕುಣಿದಾಡುತ್ತಿದ್ದಾಳೆ ವರಲಕ್ಷ್ಮೀ. ಮದುವೆ ಶಾಸ್ತ್ರಗಳ ಬಗ್ಗೆ ಮೊಮ್ಮಗಳಿಗೆ ಹೇಳುತ್ತಿರುವ ಲಲಿತಾದೇವಿ. ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ಜನವರಿ 2ರ ಸಂಚಿಕೆಯಲ್ಲಿ ಏನೇನಾಯ್ತು ನೋಡಿ.

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಜನವರಿ 2ರ ಸಂಚಿಕೆ
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಜನವರಿ 2ರ ಸಂಚಿಕೆ

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಜನವರಿ 2ರ ಸಂಚಿಕೆಯಲ್ಲಿ ಸುಬ್ಬು ಮನೆಯವರೆಲ್ಲಾ ಒಂದೆಡೆ ಸೇರಿ ಮಾತನಾಡುತ್ತಿರುವಾಗ ಸುಂದರ ಇದ್ದಕ್ಕಿದ್ದಂತೆ ‘ಅದ್ ಸರಿ ಮಾವ, ಈ ಶ್ರಾವಣಿ ಮೇಡಂ ಕೈ ಹಿಡಿಯುತ್ತಿರುವ ಅದೃಷ್ಟವಂತ ಯಾರು‘ ಎಂದು ಕೇಳುತ್ತಾನೆ. ಅದಕ್ಕೆ ಪದ್ಮನಾಭ ‘ನೀವೇ ಹೇಳಿದ್ರಲ್ಲ ಅಳಿಯಂದ್ರೆ, ಅದೃಷ್ಟವಂತ ಅಂತ. ಶ್ರಾವಣಿ ಅಮ್ಮನ್ನನ್ನ ಮದುವೆಯಾಗುವ ಹುಡುಗ ಖಂಡಿತ ಅದೃಷ್ಟವಂತನೇ ಆಗಿರುತ್ತಾನೆ. ಯಜಮಾನರು ಅವರಿಗೆ ತಕ್ಕನಾದ ಹುಡುಗನನ್ನೇ ನೋಡಿರುತ್ತಾರೆ ಬಿಡಿ‘ ಎಂದು ಹೇಳಿ ಮನೆಯವರನ್ನೆಲ್ಲಾ ದೇವರ ಮನೆಗೆ ಪೂಜೆಗೆಂದು ಕರೆದುಕೊಂಡು ಹೋಗುತ್ತಾರೆ.

ಶ್ರೀವಲ್ಲಿ ಸಂತೋಷ ಕಂಡು ಇಂದ್ರಮ್ಮ ಕಣ್ಣೀರು

ಇತ್ತ ಶ್ರೀವಲ್ಲಿ ಸುಬ್ಬು ಜೊತೆ ತನ್ನ ಮದುವೆ ಫಿಕ್ಸ್ ಆಗಿರುವುದಕ್ಕೆ ಸ್ವರ್ಗದಲ್ಲೇ ತೇಲಿದಂತೆ ಕುಣಿದಾಡುತ್ತಿರುತ್ತಾಳೆ. ಅವಳು ಸಂತೋಷ ಕಂಡ ವರದ ಅವಳನ್ನು ಕಿಚಾಯಿಸುತ್ತಾನೆ. ‘ನಿನ್ನನ್ನು ಅರ್ಥ ಮಾಡಿಕೊಳ್ಳುವುದೇ ಕಷ್ಟ ಕಣೆ ಶ್ರೀವಲ್ಲಿ, ಖುಷಿಯಾದ್ರೆ ಸದಾ ಕುಣಿದಾಡಿಕೊಂಡು ನಿನ್ನನ್ನು ಹಿಡಿಯುವವರು ಇರುವುದಿಲ್ಲ, ಅದೇ ನೋವಾಯ್ತು ಅಂದ್ರೆ ಊಟ, ತಿಂಡಿ ಬಿಟ್ಟು ಕೊರಗ್ತೀಯಾ ನೀನು ಎರಡೂ ವಿಚಾರಗಳಲ್ಲಿ ಹೈಸ್ಪೀಡ್‘ ಎಂದು ಹೇಳ್ತಾನೆ. ಆಗ ಶ್ರೀವಲ್ಲಿ ‘ಹೌದು ನಾನೊಂಥರ ಡಿಫ್ರೆಂಟ್‌, ನಾನ್ ಇರೋದೇ ಹಾಗೆ. ಅದು ಬಿಡಣ್ಣ. ನೀನೀಗ ನನ್ನ ಗಂಡನ ತಂಗಿ ಗಂಡ‘ ಅಂತ ಹೇಳ್ತಾಳೆ. ಅದಕ್ಕೆ ವರದ ‘ನೀನು ತನ್ನ ಹೆಂಡತಿ ಅಣ್ಣನ ಹೆಂಡತಿ‘ ಅಂತಾನೆ. ಅದನ್ನ ಕೇಳಿ ಇಬ್ಬರೂ ನಗುತ್ತಾ ಖುಷಿಯಿಂದ ಒಳ ಹೋಗುತ್ತಾರೆ. ಆಗ ಇಂದ್ರಮ್ಮ ಇವರಿಬ್ಬರ ಖುಷಿ ನೋಡಿ ಕಣ್ಣೀರು ಹಾಕುತ್ತಾರೆ. ಮಗಳ ಖುಷಿ ನೋಡಿ ಅವರಿಗೆ ಸಮಾಧಾನ ಆಗಿರುತ್ತದೆ. ಆ ಹೊತ್ತಿಗೆ ಇಂದ್ರಮ್ಮನ ತಂಗಿ ‘ಅಕ್ಕಾ, ನೀನು ಸುಬ್ಬು ಜೊತೆ ಶ್ರೀವಲ್ಲಿ ಮದುವೆ ಮಾಡಿಸಿ ಒಳ್ಳೆ ಕೆಲಸ ಮಾಡ್ತಾ ಇದೀಯ. ಸುಬ್ಬು ಹೇಗೋ ಮಿನಿಸ್ಟರ್ ಪಿಎ. ಸುಬ್ಬು ಹೆಸರು ಹೇಳಿಕೊಂಡು ನಾವು ಸಾಕಷ್ಟು ದುಡ್ಡು ಮಾಡಬಹುದು‘ ಎಂದು ಆಸೆ ಹುಟ್ಟಿಸುತ್ತಾಳೆ. ಆದರೆ ಇಂದ್ರಮ್ಮ ಅವಳ ಮಾತಿಂದ ಕೋಪಗೊಳ್ಳುತ್ತಾರೆ. ‘ನಾನು ನನ್ನ ಮಗಳ ಖುಷಿಗಾಗಿ ಸುಬ್ಬು ಜೊತೆ ಮದುವೆ ಮಾಡಿಸಲು ಒಪ್ಪಿಕೊಂಡಿದ್ದು ಹೊರತು ದುಡ್ಡಿಗಾಗಿ ಅಲ್ಲ‘ ಎಂದು ತಂಗಿಗೆ ಜೋರು ಮಾಡುತ್ತಾರೆ. ಇದರಿಂದ ಇಂದ್ರಮ್ಮನ ತಂಗಿ ಮನಸ್ಸಿನಲ್ಲೇ ‘ನೀನು ದುಡ್ಡು ಮಾಡಿಲ್ಲ ಅಂದ್ರೆ ಬಿಡು, ನಾನು ಮಾಡ್ಕೋತೀನಿ‘ ಅಂತ ಸ್ವಾರ್ಥ ಬುದ್ಧಿ ತೋರುತ್ತಾಳೆ. ಆಗ ಶಂಕರ ‘ಅದೇನೇ ಇರಲಿ ಇಂದ್ರ, ಮೊನ್ನೆ ನೀನು ಮೊನ್ನೆ ಈ ಮನೆ ಮಗಳು ನಮ್ಮ ಮೊನೆ ಸೊಸೆ ಆಗೋಳು ನೆನಪಿರಲಿ ಅಂದಿದ್ದು ನಂಗ್ಯಾಕೋ ಇಷ್ಟ ಆಗಿಲ್ಲ‘ ಅಂತ ಹೆಂಡತಿ ಮಾಡಿದ್ದಕ್ಕೆ ಆಕ್ಷೇಪ ವ್ಯಕ್ತವಾಗುವಂತೆ ಮಾತನಾಡುತ್ತಾರೆ. ಆಗ ಇಂದ್ರಮ್ಮ ‘ನಾನು ಅದನ್ನ ಹೇಳಿದ್ದು ಸುಬ್ಬು ಒಪ್ಪಿಕೊಳ್ಳಲಿ ಎಂಬ ಕಾರಣಕ್ಕೆ ಹೊರತು, ಸೊಸೆಗೆ ಕಷ್ಟ ಕೊಡುವಷ್ಟು ಕೆಟ್ಟ ಮನಸ್ಸ ನನ್ನದಲ್ಲ. ನನ್ನ ಸೊಸೆಯಾಗಿ ಈ ಮನೆಗೆ ಬರುವವಳನ್ನು ಹೇಗೆ ನೋಡಿಕೊಳ್ಳಬೇಕು ಎಂಬುದು ನನಗೂ ಗೊತ್ತು‘ ಎಂದು ಹೇಳಿ ಶಂಕರ ಅವರಿಗೆ ಸುಬ್ಬು ಮನೆಯಲ್ಲಿ ತಾನ್ಯಾಕೆ ಅಷ್ಟು ಕಟುವಾಗಿ ಮಾತನಾಡಿದೆ ಎಂಬುದನ್ನು ವಿವರಿಸುತ್ತಾಳೆ.

ಕುಡಿದು ಬಿದ್ದಿರುವ ಮದನ್ ಕಂಡು ವಿಜಯಾಂಬಿಕಾ ಕೆಂಡಾಮಂಡಲ

ಇತ್ತ ಮದನ್ ಎಷ್ಟು ಹೊತ್ತಾದ್ರೂ ಎದ್ದೇಳದೇ ಇರುವುದು ಕಂಡು ಎಬ್ಬಿಸಲು ಬರುತ್ತಾಳೆ ವಿಜಯಾಂಬಿಕಾ. ಕೋಣೆಯ ಬಾಗಿಲು ತೆರೆದು ಒಳಗಡೆ ಬಂದಾಗ ಮದನ್‌ ಕುಡಿದ ನಶೆಯಲ್ಲಿ ಕೈಯಲ್ಲಿ ಗ್ಲಾಸ್ ಹಿಡಿದು ಮಲಗಿರುತ್ತಾನೆ. ಅದನ್ನು ಕಂಡು ಕೋಪಗೊಳ್ಳುವ ವಿಜಯಾಂಬಿಕಾ ಬಡಿದು ಎಬ್ಬಿಸುತ್ತಾಳೆ. ಅವನಿಗೆ ‘ನೀನು ಹೀಗೆ ಮಾಡ್ತಾ ಇದ್ರೆ ನಾವು ಖಂಡಿತ ಮನೆಯರ ಕೈಯಲ್ಲಿ ಸಿಕ್ಕಿ ಬೀಳ್ತೀವಿ. ಬುದ್ಧಿ ಇಲ್ವಾ ನಿನಗೆ‘ ಎಂದು ಬಯ್ಯುತ್ತಾಳೆ. ಆಗ ಮದನ್ ‘ಮಾಮ್, ಯಾಕ್ ಹೀಗ್ ಮಾಡ್ತೀಯಾ, ಹೇಗೂ ಮದುವೆ ಫಿಕ್ಸ್ ಆಗಿದೆ. ಆ ಮುದುಕಿ ಕೂಡ ಮದುವೆಗೆ ಒಪ್ಪಿ ಆಯ್ತು. ಇನ್ನೂ ಏನು ನಿನ್ನ ಪ್ರಾಬ್ಲಂ‘ ಎಂದು ಗೊಣಗಿ ಮತ್ತೆ ಮಲಗಲು ನೋಡುತ್ತಾನೆ. ಆಗ ವಿಜಯಾಂಬಿಕಾ ಕೋಪದಿಂದ ‘ಮ್ಯಾಡಿ, ನಿಂಗಿನ್ನೂ ಮದುವೆ ಆಗಿಲ್ಲ, ಮದುವೆ ಫಿಕ್ಸ್ ಆಗಿರೋದಷ್ಟೇ ನೆನಪಿರಲಿ. ತಾಳಿ ಕಟ್ಟುವವರೆಗೂ ನಾವು ಹುಷಾರಾಗಿ ಇರ್ಬೇಕು, ಇಲ್ಲ ಅಂದ್ರೆ ನಮ್ಮ ಪ್ಲಾನ್ ಎಲ್ಲಾ ಪ್ಲಾಪ್ ಆಗುತ್ತೆ‘ ಅಂತ ಮಗನಿಗೆ ಬುದ್ಧಿವಾದ ಹೇಳುತ್ತಾಳೆ. ಅಷ್ಟೊತ್ತಿಗೆ ಸುರೇಂದ್ರ ಬಂದು ಬಾಗಿಲು ಬಡಿಯುತ್ತಾನೆ. ಆಗ ಮದನ್, ವಿಜಯಾಂಬಿಕಾ ಇಬ್ಬರೂ ಗಾಬರಿಯಾಗುತ್ತಾರೆ. ಮದನ್ ಹೋಗಿ ಮರೆಯಲ್ಲಿ ಅಡಗುತ್ತಾನೆ. ವಿಜಯಾಂಬಿಕಾ ಬಾಗಿಲು ತೆಗೆದಾಗ ಸುರೇಂದ್ರ ‘ಅಕ್ಕಾ ಮದುವೆ ಕಾಗದ ಡಿಸೈನ್ಸ್‌ ಬಂದಿವೆ. ಯಾವುದು ಅಂತ ಫೈನಲ್ ಮಾಡೋಕೆ ನೀನು ಬರಬೇಕಂತೆ, ಬಾ ಅಣ್ಣಾ ಕರಿತಾ ಇದಾನೆ, ಅದ್ ಸರಿ ಮದನ್ ಎಲ್ಲಿ ಬೆಳಗಿಂದ ಕಾಣ್ತಿಲ್ಲ‘ ಅಂತ ಪ್ರಶ್ನೆ ಮಾಡ್ತಾನೆ. ಆಗ ವಿಜಯಾಂಬಿಕಾ ‘ಅವನು ಬೆಳಿಗ್ಗೆನೆ ಎದ್ದು ದೇವಸ್ಥಾನಕ್ಕೆ ಹೋಗಿದ್ದಾನೆ. ಮದುವೆ ಎಲ್ಲಾ ಚೆನ್ನಾಗಿ ಆಗಲಿ ಅಂತ ಉರುಳು ಸೇವೆ ಮಾಡಿದ್ದಾನೆ, ಈಗ ಮತ್ತೊಮ್ಮೆ ಸ್ನಾನಕ್ಕೆ ಹೋದ‘ ಎಂದು ಮಗನ ಪರ ವಕಾಲತ್ತು ವಹಿಸಿ ಮಾತನಾಡಿ ಸುಳ್ಳು ಹೇಳುತ್ತಾಳೆ. ‘ನೀನು ಹೋಗಿರು ನಾನು ಮದನ್‌ನನ್ನು ಕರೆದುಕೊಂಡು ಬರುತ್ತೇನೆ‘ ಎಂದು ಸುರೇಂದ್ರನನ್ನು ಕಳುಹಿಸುತ್ತಾಳೆ. ಮದನ್‌ಗೆ ಫ್ರೆಶ್ ಆಗಿ ಬಾ ಎಂದು ಜೋರು ಮಾಡುತ್ತಾಳೆ. 

ಪ್ರಿಂಟಾಯ್ತು ಮದುವೆ ಕಾಗದ, ಸುಬ್ಬು ಮುಖದಲ್ಲಿಲ್ಲ ನಗು

ಮದುವೆ ಕಾಗದ ಪ್ರಿಂಟ್ ಮಾಡಿ ಮನೆಗೆ ತರುವ ಪದ್ಮನಾಭ ಮನೆಯವರನ್ನೆಲ್ಲಾ ಕರೆದು ಈ ಖುಷಿಯ ವಿಚಾರ ತಿಳಿಸುತ್ತಾರೆ. ಮದುವೆ ಕಾಗದ ಪ್ರಿಂಟ್ ಆಗಿರುವುದು ನೋಡಿ ಖುಷಿಯಲ್ಲಿ ಕುಣಿದಾಡುತ್ತಾಳೆ ವರಲಕ್ಷ್ಮೀ. ವಿಶಾಲಾಕ್ಷಿ ಹಾಗೂ ಧನಲಕ್ಷ್ಮೀಗೂ ಹೇಳಲಾರದಷ್ಟು ಸಂತೋಷವಾಗುತ್ತದೆ. ಆದರೆ ಸುಬ್ಬು ಮಾತ್ರ ಬೇಸರದಲ್ಲೇ ಮುಖ ಮಾಡಿ ನಿಂತಿರುತ್ತಾನೆ. ಪದ್ಮನಾಭ ಮಗನ ಬಳಿ ‘ಸುಬ್ಬು ಮದುವೆ ಕಾಗದ ನೋಡು‘ ಅಂದ್ರು ಅವನು ನೋಡುವುದಿಲ್ಲ. ‘ನೀವೆಲ್ಲಾ ನೋಡ್ತಾ ಇದ್ದಿರಲ್ಲಾ ಸಾಕು. ನಾನೇನು ನೋಡೋದು ಬೇಡ‘ ಅಂತಾನೆ. ಸುಬ್ಬು ಬೇಸರ ನೋಡಿ ಧನಲಕ್ಷ್ಮೀ ‘ಸುಬ್ಬು, ಶ್ರೀವಲ್ಲಿ ಒಳ್ಳೆ ಹುಡುಗಿ ಕಣೋ. ನಿಂಗೆ ಈಗ ಇಷ್ಟ ಇಲ್ಲ ಅಂದ್ರು ಆಮೇಲೆ ಅವಳ ಜೊತೆ ಹೊಂದಿಕೊಂಡು ಹೋದ್ರೆ ಸಾಕು‘ ಅಂತ ತಮ್ಮನಿಗೆ ಬುದ್ಧಿವಾದ ಹೇಳುತ್ತಾಳೆ.

ಇತ್ತ ಶ್ರಾವಣಿ ಮನೆಯಲ್ಲಿ ಲಲಿತಾದೇವಿ ಮೊಮ್ಮಗಳಿಗೆ ಮದುವೆ ಶಾಸ್ತ್ರಗಳ ಬಗ್ಗೆ ವಿವರವಾಗಿ ಹೇಳುತ್ತಾರೆ. ಗಂಡನ ಮನೆಗೆ ಸೇರೊದ್ದು ಹೋಗಬೇಕು ಅಲ್ಲಿಯವರೆಗೆ ಹೇಳಿದಾಗ ಶ್ರಾವಣಿ ನಾಚಿಕೊಂಡು ‘ಮುಂದೇನು ಹೇಳಬೇಡ ಅಜ್ಜಿ, ನಂಗೆ ನಾಚಿಕೆ ಆಗುತ್ತೆ‘ ಅಂತ ಅಲ್ಲಿಂದ ಓಡಿ ಹೋಗುತ್ತಾಳೆ.

ಮದನ್‌ ಹಾಗೂ ವಿಜಯಾಂಬಿಕಾ ಆಸೆ ಪಟ್ಟಂತೆ ಯಾವುದೇ ಸಮಸ್ಯೆ ಇಲ್ಲದೇ ಮದುವೆ ನೆರವೇರುತ್ತಾ, ಇಷ್ಟವಿಲ್ಲದೇ ಸುಬ್ಬು ಶ್ರೀವಲ್ಲಿ ಕತ್ತಿಗೆ ತಾಳಿ ಕಟ್ಟುತ್ತಾನಾ ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಬಗ್ಗೆ

‘ಶ್ರಾವಣಿ ಸುಬ್ರಹ್ಮಣ್ಯ‘ ಇದು ಜೀ ಕನ್ನಡ ವಾಹಿನಿಯಲ್ಲಿ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಜನಮೆಚ್ಚಿದ ಧಾರಾವಾಹಿ. ತೆಲುಗಿನ ‘ಅಮ್ಮಾಯಿಗಾರು ಅಬ್ಬಾಯಿಗಾರು‘ ಧಾರಾವಾಹಿಯ ರಿಮೇಕ್‌. ಟೈಟಲ್‌ನಂತೆ ಇಲ್ಲಿ ಸುಬ್ಬು ಹಾಗೂ ಶ್ರಾವಣಿ ಕಥಾನಾಯಕ ಹಾಗೂ ನಾಯಕಿ.

ಪಾತ್ರ ಪರಿಚಯ

ವೀರೇಂದ್ರ– ಮೋಹನ್‌

ವಿಜಯಾಂಬಿಕಾ – ಸ್ನೇಹ ಈಶ್ವರ್

ಶ್ರಾವಣಿ – ಐಶ್ಚರ್ಯಾ ಫಿರ್ಡೋಸ್‌

ಸುಬ್ಬು – ಅಮೋಘ್‌

ಪದ್ಮನಾಭ – ಬಾಲರಾಜ್‌

ಪಿಂಕಿ – ಪ್ರತಿ ಶೆಟ್ಟಿ

ಮದನ್ – ಅರ್ಥವ

ಕಾಂತಮ್ಮ – ಭವಾನಿ ಪ್ರಕಾಶ್

ವಂದನಾ – ಜ್ಯೋತಿ

ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ

2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. kannada.hindustantimes.com/astrology/yearly-horoscope

Whats_app_banner