ಶ್ರಾವಣಿ–ಸುಬ್ಬು ಜೊತೆ ದೇವಸ್ಥಾನಕ್ಕೆ ಹೊರಟ ಅಜ್ಜಿ; ಫಾರ್ಮ್‌ಹೌಸ್‌ನಲ್ಲಿದ್ದ ವ್ಯಕ್ತಿ ಮುಂದೆ ವಿಜಯಾಂಬಿಕಾ ದರ್ಪ; ಶ್ರಾವಣಿ ಸುಬ್ರಹ್ಮಣ್ಯ
ಕೆಲಸದ ನಿಮಿತ್ತ ಮನೆಯಿಂದ ಹೊರ ಹೊರಟ ಮಿನಿಸ್ಟರ್ ವೀರೇಂದ್ರ. ಸುಬ್ಬು ಹಾಗೂ ಶ್ರಾವಣಿಯನ್ನು ಹರಕೆ ತೀರಿಸಲು ದೇವಸ್ಥಾನಕ್ಕೆ ಕರೆ ತಂದ ಅಜ್ಜಿ. ಶ್ರಾವಣಿಗೆ ಮದುವೆಗೆ ಹೇಳದಂತೆ ಶ್ರೀವಲ್ಲಿಯನ್ನು ತಡೆದ ವಿಶಾಲಾಕ್ಷಿ. ಫಾರ್ಮ್‌ಹೌಸ್‌ನಲ್ಲಿ ಕೂಡಿ ಹಾಕಿದ್ದ ವ್ಯಕ್ತಿ ಮುಂದೆ ವಿಜಯಾಂಬಿಕಾ ದರ್ಪ. ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ಜನವರಿ 8ರ ಸಂಚಿಕೆಯ ವಿವರ.
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಜನವರಿ 3ರ ಸಂಚಿಕೆಯಲ್ಲಿ ವೀರೇಂದ್ರ ಕೆಲಸದ ನಿಮಿತ್ತ ಹೊರಗಡೆ ಹೋಗುತ್ತಾರೆ. ಲಲಿತಾದೇವಿ ಮೊಮ್ಮಗಳು ಹಾಗೂ ಅವಳನ್ನು ಮದುವೆಯಾಗುವ ಹುಡುಗನ ಜೊತೆ ದೇವಸ್ಥಾನಕ್ಕೆ ಹರಕೆ ತೀರಿಸಿ ಬರಬೇಕು ಎಂದು ಹೊರಡಲು ರೆಡಿ ಆಗುತ್ತಾರೆ. ಪಿಂಕಿ ಬಳಿ ಶ್ರಾವಣಿ ಮದುವೆಯಾಗುವ ಹುಡುಗನನ್ನು ಕರೆದುಕೊಂಡು ಬಾ ಎನ್ನುತ್ತಾರೆ. ಮದುವೆ ಕಾಗದದಲ್ಲಿ ಮದನ್ ಹೆಸರು ನೋಡಿದ್ದ ಪಿಂಕಿ ನಾನು ಯಾರನ್ನು ಕರೆ ತರಲಿ ಎಂಬ ಗೊಂದಲದಲ್ಲಿ ಇರುತ್ತಾಳೆ. ಆಗ ಹೊತ್ತಿಗೆ ಸುಬ್ಬು ಬಳಿ ವೀರೇಂದ್ರ ‘ಸುಬ್ಬು, ಅತ್ತೆ–ಶ್ರಾವಣಿ ದೇವಸ್ಥಾನಕ್ಕೆ ಹೊರಟಿದ್ದಾರೆ, ನೀನು ಅವರ ಜೊತೆ ಹೋಗು‘ ಎಂದು ಹೇಳಿದ್ದು ಕೇಳಿಸಿಕೊಂಡು ‘ಈಗ ಈ ಮದನ್‌ಗೆ ಹೇಳಿದ್ರೆ ಸಾಕು, ಸುಬ್ಬು ಹೇಗೂ ಹೋಗ್ತಾನೆ. ಇಬ್ಬರೂ ಹೋಗಲಿ‘ ಎಂದುಕೊಳ್ಳುತ್ತಾಳೆ ಪಿಂಕಿ.
ಮದನ್‌ಗೆ ಅವಮಾನ ಮಾಡುವ ಲಲಿತಾದೇವಿ
ಮದನ್ ತನ್ನ ತಾಯಿ ವಿಜಯಾಂಬಿಕಾ ಬಳಿ ಈ ಮದುವೆ ನಡೆಯುತ್ತದೋ ಇಲ್ಲವೋ ಎಂದು ಅನುಮಾನದಿಂದ ಮಾತನಾಡುತ್ತಾನೆ. ವಿಜಯಾಂಬಿಕಾ ಲಲಿತಾದೇವಿಯವರನ್ನು ಉದ್ದೇಶಿಸಿ, ‘ಆ ಮುದುಕಿಯೇ ಒಪ್ಪಿಯಾಯ್ತು, ಇನ್ನೂ ನಿನಗೆ ಯಾಕೆ ಗೊಂದಲ, ಆತಂಕ‘ ಎಂದು ಮಗನನ್ನು ಸಾಮಾಧಾನ ಮಾಡುತ್ತಿರುವಾಗ ಪಿಂಕಿ ಬಂದು ‘ಅಜ್ಜಿ ಮದನ್ ಅಣ್ಣನ್ನ ಕರಿತಾ ಇದಾರೆ, ಮದುವೆಯಾಗುವ ಹುಡುಗ–ಹುಡುಗಿ ದೇವಸ್ಥಾನಕ್ಕೆ ಹೋಗಬೇಕಂತೆ‘ ಅಂತ ಹೇಳಿ ಹೋಗುತ್ತಾಳೆ. ಆದರೆ ಅಜ್ಜಿ ಹೇಳಿರುವುದು ಸುಬ್ಬುಗೆ ಎಂದು ಪಿಂಕಿಗೂ ತಿಳಿದಿರುವುದಿಲ್ಲ. ರೆಡಿಯಾಗಿ ಹೋಗುವ ಮದನ್‌ಗೆ ಅವಮಾನ ಮಾಡಿ ವಾಪಾಸ್ ಕಳುಹಿಸುತ್ತಾಳೆ ಅಜ್ಜಿ. ಆದರೆ ವಿಜಯಾಂಬಿಕಾ ಮಾತ್ರ ಮಗನಿಗಾದ ಅವಮಾನದ ಸುದ್ದಿ ಕೇಳಿಸಿಕೊಳ್ಳುವುದಕ್ಕಿಂತ ಮುಖ್ಯವಾದ ವಿಚಾರ ಬೇರೆಯೇ ಇದೆ ಎಂದು ಹೇಳಿ ಹೊರಡುತ್ತಾಳೆ. ಮದನ್‌ಗೆ ತನ್ನ ತಾಯಿ ತನ್ನಿಂದ ಏನೋ ಮುಚ್ಚಿಡುತ್ತಿದ್ದಾಳೆ ಎನ್ನುವುದು ಅರಿವಾಗುತ್ತದೆ.
ಫಾರ್ಮ್‌ಹೌಸ್‌ನಲ್ಲಿ ಕೂಡಿ ಹಾಕಿದ್ದ ವ್ಯಕ್ತಿ ಮುಂದೆ ವಿಜಯಾಂಬಿಕಾ
ಅಂದು ಶ್ರಾವಣಿ ಹಾಗೂ ಸುಬ್ಬು ವಿಜಯಾಂಬಿಕಾ ಫಾರ್ಮ್‌ಹೌಸ್‌ನಲ್ಲಿ ವ್ಯಕ್ತಿಯೊಬ್ಬನನ್ನು ಕಟ್ಟಿ ಹಾಕಿ ಚಿತ್ರಹಿಂಸೆ ಕೊಡುತ್ತಿರುವುದನ್ನು ನೋಡಿರುತ್ತಾರೆ. ಈಗ ಅದೇ ವ್ಯಕ್ತಿಯ ಮುಂದೆ ವಿಜಯಾಂಬಿಕಾ ಪ್ರತ್ಯಕ್ಷಳಾಗುತ್ತಾಳೆ. ಆ ಸಾಲಿಗ್ರಾಮ, ಶ್ರಾವಣಿ, ಲಲಿತಾದೇವಿ ಹಾಗೂ ನೀನು ಎಲ್ಲರ ಅಂತ್ಯ ಮಾಡುತ್ತೇನೆ ಎಂದು ಹೇಳಿ ಅಟ್ಟಹಾಸ ಮೆರೆಯುತ್ತಾಳೆ. ಅಲ್ಲದೇ ಆ ನಂದಿನಿಯನ್ನು ಮುಗಿಸಿದಾಗಲೇ ನಿನ್ನನ್ನೂ ಮುಗಿಸಬೇಕು ಎಂದುಕೊಂಡಿದ್ದೇ, ಆದರೆ ಇದಕ್ಕೆ ಆಗ ಸಮಯ ಬಂದಿರಲಿಲ್ಲ. ನಿನಗೂ ಅದೇ ಗತಿಯಾಗುತ್ತದೆ ಎಂದು ದ್ವೇಷದಿಂದ ಮಾತನಾಡುತ್ತಾಳೆ. ಆ ವ್ಯಕ್ತಿ ಎಂದಿನಂತೆ ಕೈಕಾಲು ಕಟ್ಟಿ ಹಾಕಿದ್ರೂ ಕೋಪದಲ್ಲಿ ಕುದಿಯುತ್ತಿರುತ್ತಾನೆ.
ಶ್ರಾವಣಿಯನ್ನು ಮದುವೆಗೆ ಕರೆಯಲು ರೆಡಿ ಆದ ಶ್ರೀವಲ್ಲಿ
ಪದ್ಮನಾಭರ ಮನೆಯಲ್ಲಿ ಸುಬ್ಬುಗಾಗಿ ಅಡುಗೆ ಮಾಡುತ್ತಿದ್ದಾಳೆ ಶ್ರೀವಲ್ಲಿ. ಸುಬ್ಬು ಮೇಲೆ ಬೆಟ್ಟದಷ್ಟು ಪ್ರೀತಿ ಇಟ್ಟಿರುವ ಅವಳಿಗೆ ಸುಬ್ಬುಗಾಗಿ ಅಡುಗೆ ಮಾಡುವುದೇ ಸಂಭ್ರಮ. ಅಷ್ಟೊತ್ತಿಗೆ ಅವಳಿಗೆ ತನ್ನ ಪ್ರೀತಿಗಾಗಿ ಶ್ರಾವಣಿ ಮಾಡಿದ ಸಹಾಯ ನೆನಪಾಗುತ್ತದೆ. ಆಗ ತಾನು ಸುಬ್ಬುವನ್ನೇ ಪ್ರೀತಿಸಿದ್ದು, ಈಗ ಸುಬ್ಬವನ್ನೇ ಮದುವೆಯಾಗುತ್ತಿರುವುದು ಹೇಳಲಿಲ್ಲವಲ್ಲ ಎನ್ನುವುದು ನೆನಪಾಗಿ ಕೂಡಲೇ ಅವಳಿಗೊಂದು ಮಾತು ಹೇಳೋಣ ಎಂದು ವಿಶಾಲಾಕ್ಷಿ, ಧನಲಕ್ಷ್ಮೀ ಬಳಿ ನಾನು ಈಗಲೇ ಶ್ರೀವಲ್ಲಿಗೆ ಕಾಲ್ ಮಾಡಿ ಮದುವೆ ಗೊತ್ತಾಗಿರುವ ಬಗ್ಗೆ ಹೇಳುತ್ತೇನೆ ಎಂದು ಹೊರಡುತ್ತಾಳೆ. ಆದರೆ ದೇವಸ್ಥಾನಕ್ಕೆ ಹೋಗಿದ್ದ ಶ್ರಾವಣಿ ನೆಟ್‌ವರ್ಕ್ ಕವರೇಜ್ ಕ್ಷೇತ್ರದಿಂದ ಹೊರಗಿರುತ್ತಾಳೆ. ಸುಬ್ಬುಗೆ ಕಾಲ್ ಮಾಡುತ್ತೇನೆ ಎಂದು ಹೊರಟಾಗ ಬಂದು ತಡೆಯುವ ವಿಶಾಲಾಕ್ಷಿ ಗಂಡ ಪದ್ಮನಾಭರ ಮಾತಿನಂತೆ ಮದುವೆಗೂ ಮುನ್ನ ದೊಡ್ಡಮನೆಯವರಿಗೆ ಸುಬ್ಬು ಮದುವೆ ವಿಚಾರ ತಲುಪದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾಳೆ.
ಇತ್ತ ದೇವಸ್ಥಾನದ ಮೆಟ್ಟಿಲ ಬಳಿ ದೇವಸ್ಥಾನ ವೈಶಿಷ್ಟ್ಯಗಳ ಬಗ್ಗೆ ಹೇಳುವ ಲಲಿತಾದೇವಿ ‘ಈ ದೇವಸ್ಥಾನದಲ್ಲಿ ಪ್ರೀತಿಸಿದ ಹುಡುಗ ಹುಡುಗಿಯನ್ನು ಎತ್ತಿಕೊಂಡು ಮೆಟ್ಟಿಲು ಹತ್ತಬೇಕು. ಆಗ ಅವನಿಗೆ ಅವಳ ಮೇಲೆ ಎಷ್ಟು ಪ್ರೀತಿ ಇದೆ ಎಂಬುದು ಸಾಬೀತಾಗುತ್ತದೆ. ಇದು ಭಕ್ತಿ ಹಾಗೂ ಪ್ರೀತಿ ಎರಡನ್ನೂ ಸಾಬೀತು ಮಾಡುವ ಜಾಗ‘ ಎಂದು ಹೇಳುತ್ತಾರೆ. ಆದರೆ ಸುಬ್ಬು ಇದ್ಯಾವುದನ್ನೂ ತಲೆಗೆ ಹಾಕಿಕೊಳ್ಳದೇ ತನ್ನ ಪಾಡಿಗೆ ತಾನು ಮೆಟ್ಟಿಲು ಹತ್ತಿ ಮುಂದೆ ಹೋಗುತ್ತಿರುತ್ತಾನೆ.
ಸುಬ್ಬು ಶ್ರಾವಣಿಯನ್ನು ಎತ್ತಿಕೊಂಡು ದೇವಸ್ಥಾನಕ್ಕೆ ಹೋಗ್ತಾನಾ, ವಿಜಯಾಂಬಿಕಾ ಕೂಡಿಟ್ಟ ಆ ವ್ಯಕ್ತಿ ಯಾರು, ಸಾಲಿಗ್ರಾಮಕ್ಕೂ ಶ್ರಾವಣಿಗೂ ಆ ವ್ಯಕ್ತಿಗೂ ಏನು ಸಂಬಂಧ, ಶ್ರಾವಣಿಯ ತಾಯಿ ನಿಜಕ್ಕೂ ಸತ್ತಿದ್ದಾಳಾ, ಶ್ರೀವಲ್ಲಿ ಮದುವೆಯಾಗುವ ಹುಡುಗ ಸುಬ್ಬು ಎಂಬುದು ಶ್ರಾವಣಿಗೆ ಗೊತ್ತಾಗೋದೇ ಇಲ್ವಾ? ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಬಗ್ಗೆ
‘ಶ್ರಾವಣಿ ಸುಬ್ರಹ್ಮಣ್ಯ‘ ಇದು ಜೀ ಕನ್ನಡ ವಾಹಿನಿಯಲ್ಲಿ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಜನಮೆಚ್ಚಿದ ಧಾರಾವಾಹಿ. ತೆಲುಗಿನ ‘ಅಬ್ಬಾಯಿಗಾರು ಅಮ್ಮಾಯಿಗಾರು ‘ ಧಾರಾವಾಹಿಯ ರಿಮೇಕ್. ಟೈಟಲ್‌ನಂತೆ ಇಲ್ಲಿ ಸುಬ್ಬು ಹಾಗೂ ಶ್ರಾವಣಿ ಕಥಾನಾಯಕ ಹಾಗೂ ನಾಯಕಿ.
ಪಾತ್ರ ಪರಿಚಯ
ವೀರೇಂದ್ರ– ಮೋಹನ್
ವಿಜಯಾಂಬಿಕಾ – ಸ್ನೇಹ ಈಶ್ವರ್
ಶ್ರಾವಣಿ – ಐಶ್ಚರ್ಯಾ ಫಿರ್ಡೋಸ್
ಸುಬ್ಬು – ಅಮೋಘ್
ಪದ್ಮನಾಭ – ಬಾಲರಾಜ್
ಪಿಂಕಿ – ಪ್ರತಿ ಶೆಟ್ಟಿ
ಮದನ್ – ಅರ್ಥವ
ಕಾಂತಮ್ಮ – ಭವಾನಿ ಪ್ರಕಾಶ್
ವಂದನಾ – ಜ್ಯೋತಿ